ಕೊಳ್ಳೇಗಾಲ. ಇಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಉಪವಿಭಾಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದ ಎಂ.ರಾಜು ಅವರು ಸನ್ಮಾನಿಸಿ ಬೀಳ್ಕೊಟ್ಟರು. ಪಟ್ಟಣದ ಸೆಸ್ಕ್ ಉಪವಿಭಾಗ ಕಚೇರಿಯಲ್ಲಿ ಎಇಇ ರಾಜುರವರಿಗೆ ಇಲಾಖಾ ವತಿಯಿಂದ ಹಾರ, ಶಾಲು ಹಾಕಿ ಉಡುಗೋರೆ ನೀಡುವ ಸನ್ಮಾನಿಸಿ ಬೀಳ್ಕೊಟ್ಟರು, ಬಳಿಕ ಸಿಬ್ಬಂದಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ರೈತ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ತಬ್ಬಸ್ಸುಮ್ ಅಪ್ಜಾ ಅವರು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜು ಅವರ ಜೊತೆಗೆ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ ಅವರಲ್ಲಿರುವ ತಾಳ್ಮೆ ಮತ್ತು ಸಹನೆ ನಿಜವಾಗಿಯೂ ಮೆಚ್ಚುವಂತಹದ್ದು ಎಂದರು. ಕೊಳ್ಳೇಗಾಲದಂತಹ ಸ್ಥಳದಲ್ಲಿ ರೈತ ವರ್ಗದವರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕರ್ತವ್ಯ ನಿರ್ವಹಿಸಿ ಇಲಾಖೆಗೂ ಒಳ್ಳೆಯ ಹೆಸರು ತಂದಿದ್ದಾರೆ ಇವರ ಅವಧಿಯಲ್ಲಿ ಎರಡು ನೂತನ ಪವರ್ ಸ್ಠಷನ್ ಆಗಿದ್ದು ಸಂತಸ. ಎಲ್ಲಾ ಕಾಲದಲ್ಲಿಯೂ ಇವರ ಹೆಸರು ಅಜರಾಮರವಾಗಿರುತ್ತದೆ ಎಂದರು. ಸನ್ಮಾನ ಸ್ವೀಕರಿಸಿದ ಎಇಇ ಎಂ ರಾಜು ಅವರು ಮಾತನಾಡಿ, ನನಗೆ ನಿಮ್ಮೆಲ್ಲರ ಈ ಪ್ರೀತಿ ಮತ್ತು ವಿಶ್ವಾಸ ಕಂಡು ಮಾತನಾಡಲೇ ಆಗುತ್ತಿಲ್ಲ ಎಂದು ಭಾವುಕರಾದರು. ಬಡತನದಲ್ಲಿ ಬೆಳೆದ ನಾನು ತಂದೆ ತಾಯಿಗಳ ಹಾದಿಯಲ್ಲಿ ನಡೆದೆ. ಕುಟುಂಬದ ಜೊತೆಗೆ ಕರ್ತವ್ಯದಲ್ಲೂ ಉತ್ತಮವಾಗಿ ಸೇವೆ ಸಲ್ಲಿಸಿದ ತೃಪ್ತಿ ನನಗೆ ಇದೆ ಎಂದರು. ನಿವೃತ್ತಿ ನಂತರವೂ ಇಲಾಖೆಗೆ ಗೌರವ ತರುವ ಕೆಲಸದಲ್ಲಿ ತೊಡಗಿಸಿ ಕೊಳ್ಳುತ್ತೇನೆ ಎಂದರು. ಈ ಸಂಧರ್ಭದಲ್ಲಿ ಯಳಂದೂರು ಸೆಸ್ಕ್ ಎಇಇ ಲಿಂಗರಾಜು, ಹನೂರು ಸೆಸ್ಕ್ ಎಇಇ ರಂಗಸ್ವಾಮಿ, ಸಂತೋಷ್ ಕುಮಾರ್, ಶ್ರೀನಿಧಿ, ಲೆಕ್ಕಾಧಿಕಾರಿ ವಿನೋದ್ ಕುಮಾರ್, ಆಂತರಿಕ ಲೆಕಾಧಿಕಾರಿ ಪ್ರಸನ್ನ, ನೌಕರರ ಸಂಘದ ಅಧ್ಯಕ್ಷ ರೇವಣ್ಣ, ಕಾರ್ಯಕಾರಿ ಸಮಿತಿ ಸದಸ್ಯ ಮಹದೇವಯ್ಯ, ಗುತ್ತಿಗೆದಾರ ಸಂಘದ ಅಧ್ಯಕ್ಷ ನಾಗರಾಜು ಹಾಗೂ ಎಇಇ ರಾಜು ಅವರ ತಂದೆ ಮಾದಯ್ಯ ಇನ್ನಿತರರು ಇದ್ದರು.
ಕೊಳ್ಳೇಗಾಲ. ಇಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಉಪವಿಭಾಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದ ಎಂ.ರಾಜು ಅವರು ಸನ್ಮಾನಿಸಿ ಬೀಳ್ಕೊಟ್ಟರು. ಪಟ್ಟಣದ ಸೆಸ್ಕ್ ಉಪವಿಭಾಗ ಕಚೇರಿಯಲ್ಲಿ ಎಇಇ ರಾಜುರವರಿಗೆ ಇಲಾಖಾ ವತಿಯಿಂದ ಹಾರ, ಶಾಲು ಹಾಕಿ ಉಡುಗೋರೆ ನೀಡುವ ಸನ್ಮಾನಿಸಿ ಬೀಳ್ಕೊಟ್ಟರು, ಬಳಿಕ ಸಿಬ್ಬಂದಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ರೈತ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ತಬ್ಬಸ್ಸುಮ್ ಅಪ್ಜಾ ಅವರು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜು ಅವರ ಜೊತೆಗೆ ಕಳೆದ ಒಂದೂವರೆ
ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ ಅವರಲ್ಲಿರುವ ತಾಳ್ಮೆ ಮತ್ತು ಸಹನೆ ನಿಜವಾಗಿಯೂ ಮೆಚ್ಚುವಂತಹದ್ದು ಎಂದರು. ಕೊಳ್ಳೇಗಾಲದಂತಹ ಸ್ಥಳದಲ್ಲಿ ರೈತ ವರ್ಗದವರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕರ್ತವ್ಯ ನಿರ್ವಹಿಸಿ ಇಲಾಖೆಗೂ ಒಳ್ಳೆಯ ಹೆಸರು ತಂದಿದ್ದಾರೆ ಇವರ ಅವಧಿಯಲ್ಲಿ ಎರಡು ನೂತನ ಪವರ್ ಸ್ಠಷನ್ ಆಗಿದ್ದು ಸಂತಸ. ಎಲ್ಲಾ ಕಾಲದಲ್ಲಿಯೂ ಇವರ ಹೆಸರು ಅಜರಾಮರವಾಗಿರುತ್ತದೆ ಎಂದರು. ಸನ್ಮಾನ ಸ್ವೀಕರಿಸಿದ ಎಇಇ ಎಂ ರಾಜು ಅವರು ಮಾತನಾಡಿ, ನನಗೆ ನಿಮ್ಮೆಲ್ಲರ ಈ ಪ್ರೀತಿ ಮತ್ತು ವಿಶ್ವಾಸ ಕಂಡು ಮಾತನಾಡಲೇ ಆಗುತ್ತಿಲ್ಲ ಎಂದು ಭಾವುಕರಾದರು. ಬಡತನದಲ್ಲಿ ಬೆಳೆದ ನಾನು ತಂದೆ
ತಾಯಿಗಳ ಹಾದಿಯಲ್ಲಿ ನಡೆದೆ. ಕುಟುಂಬದ ಜೊತೆಗೆ ಕರ್ತವ್ಯದಲ್ಲೂ ಉತ್ತಮವಾಗಿ ಸೇವೆ ಸಲ್ಲಿಸಿದ ತೃಪ್ತಿ ನನಗೆ ಇದೆ ಎಂದರು. ನಿವೃತ್ತಿ ನಂತರವೂ ಇಲಾಖೆಗೆ ಗೌರವ ತರುವ ಕೆಲಸದಲ್ಲಿ ತೊಡಗಿಸಿ ಕೊಳ್ಳುತ್ತೇನೆ ಎಂದರು. ಈ ಸಂಧರ್ಭದಲ್ಲಿ ಯಳಂದೂರು ಸೆಸ್ಕ್ ಎಇಇ ಲಿಂಗರಾಜು, ಹನೂರು ಸೆಸ್ಕ್ ಎಇಇ ರಂಗಸ್ವಾಮಿ, ಸಂತೋಷ್ ಕುಮಾರ್, ಶ್ರೀನಿಧಿ, ಲೆಕ್ಕಾಧಿಕಾರಿ ವಿನೋದ್ ಕುಮಾರ್, ಆಂತರಿಕ ಲೆಕಾಧಿಕಾರಿ ಪ್ರಸನ್ನ, ನೌಕರರ ಸಂಘದ ಅಧ್ಯಕ್ಷ ರೇವಣ್ಣ, ಕಾರ್ಯಕಾರಿ ಸಮಿತಿ ಸದಸ್ಯ ಮಹದೇವಯ್ಯ, ಗುತ್ತಿಗೆದಾರ ಸಂಘದ ಅಧ್ಯಕ್ಷ ನಾಗರಾಜು ಹಾಗೂ ಎಇಇ ರಾಜು ಅವರ ತಂದೆ ಮಾದಯ್ಯ ಇನ್ನಿತರರು ಇದ್ದರು.
- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಲವೆಡೆ ಮಳೆ ಉಂಟಾಗಿದ್ದು ಬಿರು ಬಿಸಿಲಿಗೆ ಮಳೆರಾಯ ತಂಪೆರೆದಿದ್ದಾನೆ. ನಗರದ ಕುವೆಂಪು ನಗರ, ವಿದ್ಯಾರಣ್ಯಪುರಂ, ಅಗ್ರಹಾರ, ಚಾಮುಂಡಿಪುರಂ ಸೇರಿದಂತೆ ಹಲವೆಡೆ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು ಪಾದಚಾರಿಗಳು ಪರದಾಟ ಅನುಭವಿಸಿದ್ದಾರೆ.1
- ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ: ಮಾಜಿ ಶಾಸಕರಿಗೆ ಕೆ. ಕೃಷ್ಣಮೂರ್ತಿ ಸವಾಲು ಮಾಗಡಿ: ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಜಿ ಶಾಸಕರು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಅಭಿವೃದ್ಧಿ ವಿಚಾರವಾಗಿ ಅವರು ಎಲ್ಲಿಗಾದರೂ ಬರಲಿ, ನಾವು ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಅವರು ಸವಾಲು ಹಾಕಿದ್ದಾರೆ. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆ.ಕೃಷ್ಣಮೂರ್ತಿ ಅವರ ಆರೋಪಗಳಿಗೆ ನಾನು ಉತ್ತರ ನೀಡುವ ಅಗತ್ಯವಿಲ್ಲ ಅವರು ಯಾರು ಗೊತ್ತಿಲ್ಲ ಎಂದಿದ್ದಾರೆ ಅವರನ್ನು ನಾನು ಗೆಲ್ಲಿಸಬೇಕಾದ ವೇಳೆ ನಾನು ಯಾರು ಎಂದು ಗೊತ್ತಿರಲಿಲ್ಲವೇ ಮಜಿ ಶಾಸಕರ ಆರೋಪಗಳಿಗೆ ನಮ್ಮ ಪಕ್ಷದ ಮುಖಂಡರು ಉತ್ತರ ನೀಡಲು ಸಿದ್ದರಿದ್ದೇವೆ, ಮಾಜಿ ಶಾಸಕರು ಕಾಂಗ್ರೆಸ್ ಮುಖಂಡರ ಮೇಲೆ ಅನಗತ್ಯವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮ ನಾಯಕರಾದ ಬಾಲಣ್ಣನವರ ವ್ಯಕ್ತಿತ್ವದ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ಆರೋಪಗಳಿಗೆ ದಾಖಲೆ ನೀಡಲಿ: ಮಾಜಿ ಶಾಸಕರು ಮಾಡುತ್ತಿರುವ 600 ಕೋಟಿ ಹಗರಣ ಅಥವಾ ಗೌರಮ್ಮನಕೆರೆಯ ಮಣ್ಣು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಮಣ್ಣು ಮಾರಾಟ ಮಾಡಿ ಜೀವನ ನಡೆಸುವ ಅಗತ್ಯ ಶಾಸಕರಿಗಿಲ್ಲ ಇಂಥಹ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಅವರ ಬಳಿ ದಾಖಲೆಗಳಿದ್ದರೆ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು. ಚರ್ಚೆಗೆ ದಿನಾಂಕ ನಿಗದಿಪಡಿಸಿ: "ಅಭಿವೃದ್ಧಿ ಬಗ್ಗೆ ಚರ್ಚಿಸಲು ನಾವಂತೂ ಸಿದ್ಧ. ಮಾಜಿ ಶಾಸಕರೇ ಅಥವಾ ಮಾಧ್ಯಮದವರೇ ಒಂದು ದಿನಾಂಕ ಮತ್ತು ಸ್ಥಳವನ್ನು ನಿಗದಿಪಡಿಸಲಿ. ನಾವು ನಮ್ಮ ನಾಯಕರೊಂದಿಗೆ ಬಂದು ಪ್ರತಿಯೊಂದಕ್ಕೂ ದಾಖಲೆ ಸಮೇತ ಉತ್ತರ ನೀಡುತ್ತೇವೆ ಎಂದು ಕೆ. ಕೃಷ್ಣಮೂರ್ತಿ ಹೇಳಿದರು. ಜನರೇ ತೀರ್ಪು ನೀಡುತ್ತಾರೆ: ನಾವು ಮಾಡಿದ ಕೆಲಸಗಳನ್ನು ನಾವೇ ಹೇಳಿಕೊಳ್ಳುವ ಅಗತ್ಯವಿಲ್ಲ, ಜನರು ಅದನ್ನು ಗಮನಿಸುತ್ತಿದ್ದಾರೆ. ಮಾಜಿ ಶಾಸಕರು ಕೇವಲ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ಕಾಂಗ್ರೆಸ್ ಮುಖಂಡರಾದ ಅಗ್ರೋ ಪುರುಷೋತ್ತಮ್, ಶಿವಕುಮಾರು, ಕಲ್ಕೆರೆ ಶಿವಣ್ಣ, ವೆಂಕಟೇಶ್ ಇತರರು ಇದ್ದರು. 1
- ಹುಬ್ಬಳ್ಳಿಯಲ್ಲಿ ಚರ್ಚೆಗೆ ಗ್ರಾಸವಾಗಿರುವ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸಮೀರ್ ಮತ್ತು ಯುವತಿ ಕಳೆದ ಮೂರು ವರ್ಷಗಳಿಂದ ಪರಸ್ಪರ ಸಂಬಂಧದಲ್ಲಿದ್ದರು ಎಂದು ಸಮೀರ್ ಸಹೋದರಿ ತೈಸಿಮ್ ಮುಲ್ಲಾ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿಯ ಕುಟುಂಬಸ್ಥರು ನಮ್ಮೊಂದಿಗೆ ಆತ್ಮೀಯವಾಗಿಯೇ ಇದ್ದರು, ಎಲ್ಲರೂ ಸೇರಿ ಪ್ರವಾಸ ಮತ್ತು ಶಾಪಿಂಗ್‌ಗೆ ಹೋಗುತ್ತಿದ್ದೆವು ಎಂದು ಹೇಳಿದ್ದಾರೆ. ಜೊತೆಗೆ, ಕೆಲವರು ಮನೆಗೆ ಬಂದು ತಮ್ಮನನ್ನು ಕಿಡ್ನಾಪ್ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸುತ್ತಿದ್ದಾರೆ.1
- ದೊಡ್ಡಬಳ್ಳಾಪುರ ಬಾಡಿಗೆ ಮನೆಯಲ್ಲಿ ವಾಸವಿರುವ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಕಳ್ಳತನ ಗೀತಂ ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಘಟನೆ ಒಂದೇ ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮೂರು ಲ್ಯಾಪ್ ಟಾಪ್ ಗಳ ಕಳ್ಳತನ ಲ್ಯಾಪ್‌ಟಾಪ್ ಕಳ್ಳತನ ಮಾಡಿಕೊಂಡು ಹೊರ ಹೋಗುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆ ಲ್ಯಾಪ್ ಟಾಪ್ ಕಳೆದಿರುವುದರಿಂದ ವೃತ್ತಿಪರ ಪ್ರಾಜೆಕ್ಟ್ ತಯಾರಿಸಲು ಮುಂದಾಗಿದ್ದ ವಿದ್ಯಾರ್ಥಿಗಳಿಗೆ ಸಂಕಷ್ಟ ಆಂದ್ರಮೂಲದ ಎಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಸಂಕಷ್ಟ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿ2
- KOLAR KI.AWAAZ KOUSAR NEWS1
- Dr ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ MLA ಕೂತ್ತೂರು ಮಂಜುನಾಥ್ mlc ಅನಿಲ್ ಕುಮಾರ್ ಭಾಗವಹಿಸಿದರು1
- ಮಾಗಡಿ ; ವಿಶ್ವ ವಿಖ್ಯಾತ ಬೆಂಗಳೂರು ನಿರ್ಮಾತೃ ಧರ್ಮಪ್ರಭು ಕೆಂಪೇಗೌಡರಿಗೆ ನಿಲ್ಲಲು ಮಾಗಡಿಯಲ್ಲಿ ನೆಲೆ ಇಲ್ಲದಂತಾಗಿದೆ. ಧರ್ಮದ ಹಾದಿಯಲ್ಲಿ ನಡೆದ ಕೆಂಪೇಗೌಡರಿಗೆ ಮಾಗಡಿಯಲ್ಲಿ ನೆಲೆ ಇಲ್ಲ ಎಂದರೆ ನಾಡಿಗೆ ಅವಮಾನ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಟಿ.ಎನ್.ಶ್ರೀನಿವಾಸ್ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಎಚ್.ಎಂ.ಕೃಷ್ಣಮೂರ್ತಿಯೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಯಿತು. ಕೆಂಪೇಗೌಡರ ಪ್ರತಿಮೆಯನ್ನು ಗೌರವಯುತವಾಗಿ ಸ್ಥಳಾಂತರಿಸಲು ಕೋರ್ಟ್ ಆದೇಶ ನೀಡಿದ್ದರಿಂದ ನಾವೂ ಕೂಡ ಕೋರ್ಟ್ ಆದೇಶಕ್ಕೆ ತಲೆಭಾಗಿ ಗೌರವ ಕೊಡುತ್ತೇವೆ. ಆದರೆ ಪುರಸಭೆ ಅಧಿಕಾರಿಗಳು ರಾತ್ರೊರಾತ್ರಿ ಪ್ರತಿಮೆಯ ಬಳಿಯ ಮೆಟ್ಟಿಲ್ಲನ್ನು ತೆರವುಗೊಳಿಸುವ ಅನಿವಾರ್ಯತೆ ಏನಿತ್ತು. ಅದರಲ್ಲೂ ಅಮಾವಾಸ್ಯೆ ದಿನವೇ ಮೆಟ್ಟಿಲು ಕಿತ್ತು ಹಾಕಿದ್ದು ಒಂದೆಡೆಯಾದರೆ ಅಂದಿನಿಂದ ಕೆಂಪೇಗೌಡ ಪ್ರತಿಮೆ ಗೌರವಕ್ಕಾದರೂ ಹೂವಿನ ಹಾರ ಹಾಕದೆ ಅವಮಾನಿಸಲಾಗಿದೆ. ಜತೆಗೆ ದಿಕ್ಕುದೆಸೆ ಇಲ್ಲದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಪ್ರತಿಮೆ ಸ್ಥಳಾಂತರಕ್ಕೆ ಯೋಜನೆ ರೂಪಿಸಿ ಕಾಮಗಾರಿಯೂ ನಡೆದಿದೆ. ಈಗ ಇದೊಂದು ವಿವಾಧಾತ್ಮಕ ಸ್ಥಳಾವಾಗಿದೆ. ಕೆಂಪೇಗೌಡರು ಸತ್ಯದ ಹಾದಿಯಲ್ಲಿ ನಡೆದಿದ್ದರು. ಅವರನ್ನು ಅವಮಾನಿಸುವವರು ಎಂದಿಗೂ ಉದ್ಧಾರವಾಗುವುದಿಲ್ಲ. ಅದರ ಫಲ ಅವರೇ ಉಣ್ಣಬೇಕಿದೆ. ಕಾದು ನೋಡುತ್ತೇನೆ ಎಂದು ಹೆಸರೇಳದೆ ಶಾಸಕರ ವಿರುದ್ಧ ಹರಿಹಾಯ್ದರು. ಈಗಾಗಲೇ ಅಡಿಗೆ 45 ರೂ ನಂತೆ ನಂತೆ 60/70 ವಿಸ್ತೀರ್ಣದ ಸ್ಥಳವನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ಪುರಸಭೆ ನೀಡಿದೆ. ನಮಗೂ ಕೆಂಪೇಗೌಡರ ಹೆಸರಿನಲ್ಲಿ 1 ಎಕರೆ ಜಮೀನು ಸರ್ಕಾರ ಮಂಜೂರು ಮಾಡಿಕೊಡಲಿ ಸರ್ಕಾರಕ್ಕೆ ಕಟ್ಟಬೇಕಾದ ಹಣವನ್ನು ಜಮಾ ಮಾಡುತ್ತೇನೆ. ಇಲ್ಲೊಂದು ಸುಂದರವಾದ ಪಾರ್ಕ್ ನಿರ್ಮಿಸಿ ಜನರ ಆರೋಗ್ಯಕ್ಕೆ ಮುಂದಾಗುವುದಾಗಿ ಮನವಿ ಮಾಡಿದ ಅವರು. ಈಗಿನ ಕೆಂಪೇಗೌಡರ ಪ್ರತಿಮೆಯ ಮೆಟ್ಟಿಲು ತೆರವುಗೊಳಿಸಿರುವುದರಿಂದ ಪ್ರತಿಮೆಗೆ ಹಾರ ಹಾಕಲಾಗದ ಪರಿಸ್ಥಿತಿ ತಂದೊಡ್ಡಿರುವ ಪುರಸಭೆ ಅಧಿಕಾರಿಗಳು ನಾಡಪ್ರಭು ಕೆಂಪೇಗೌಡ ಅವರಿಗೆ ಅಗೌರವ ತೋರಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು ನನ್ನ ಸ್ವಂತ ದುಡಿಮೆಯ ಹಣದಲ್ಲಿ ಸುಂದರವಾದ ಕಂಚಿನ ಕೆಂಪೇಗೌಡರ ಪ್ರತಿಮೆಯನ್ನು ಪುರಸಭಾ ಆವರಣದಲ್ಲಿ ಕಳೆದ 22 ವರ್ಷಗಳ ಹಿಂದೆ ಅನೇಕ ಮಠಮಾನ್ಯಗಳ ಶ್ರೀಗಳರು, ಸಚಿವರು, ಶಾಸಕರು, ಗಣ್ಯರು, ರೈತರು, ಅಭಿಮಾನಿಗಳ ನೇತೃತ್ವದಲ್ಲಿ ಪ್ರತಿಮೆಯನ್ನು ಪ್ರತಿμÁ್ಠಪಿಸಿ, ಆದ್ದೂರಿಯಾಗಿ ಕಾರ್ಯಕ್ರಮ ರೂಪಿಸುವ ಮೂಲಕ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಗಿತ್ತು. ಅನ್ನಸಂತರ್ಪಣೆ ಸಹ ಅವಿರತವಾಗಿ ನಡೆದಿತ್ತು. ಈ ಮೂಲಕ ಕೆಂಪೇಗೌಡರ ಇತಿಹಾಸವನ್ನು ಮರುಕಳಿಸುವಂತ ಕೆಲಸವನ್ನು ಮಾಡಿ ತೋರಿಸಿದ್ದೆ. ಹೀಗಾಗಿ ಆವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಆದರೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಸರ್ಕಾರ ಇದೆ ಎಂದು ದೆಹಲಿಯಿಂದ ಕಲ್ಕತ್ತಗೆ ಎಂಬಂತೆ ತೊಗಲಕ್ ದರ್ಬಾರ್ ನಡೆಸುತ್ತಿದ್ದಾರೆ. ಅವರ ತಾಳಕ್ಕೆ ಅಧಿಕಾರಿಗಳು ಕುಣಿಯುತ್ತಿದ್ದಾರೆ. ಹಿಂದೆ ಶಾಸಕರ ತಾಳಕ್ಕೆ ಕುಣಿದ ಕೆಲವು ಅಧಿಕಾರಿಗಳು ನೇಣಿನ ಕುಣಿಕೆಗೆ ತಲೆಯೊಡ್ಡಬೇಕಾಯಿತು. ಈಗ ಅವರ ಕುಟುಂಬಗಳು ಶೋಚನೀಯಸ್ಥಿತಿ ತಲುಪಿವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅವರ ನಡೆ ವಿರುದ್ಧ ಆಕ್ರೋಶ ಹೊರಹಾಕಿದರು. ಭಾರಿ ವಿವಾಧಕ್ಕೆ ಒಳಗಾದ ಧರ್ಮಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ; 2008 ರಲ್ಲಿ ಪುರಸಭೆ ಆಡಳಿತ ಮಂಡಲಿ ರೆಜ್ಯುಲೇಷನ್ ಮಾಡಿ ಪ್ರತಿಮೆ ಸ್ಥಾಪನೆಗೆ 50/50 ಸ್ಥಳ ಮಂಜೂರು ಮಾಡಿತ್ತು. ಈಗ ಕೆಂಪೇಗೌಡರ ಪ್ರತಿಮೆ ಸ್ಥಳವನ್ನು ಸೇರಿಸಿಕೊಂಡಂತೆ ಸುಮಾರು 2 ಎಕರೆ ಪ್ರದೇಶದಲ್ಲಿ100 ಬೆಡ್ಡಿನ ಹೈಟೆಕ್ ಆಸ್ಪತ್ರೆ ನಿರ್ಮಿಸಲು ಶಾಸಕರು ಮುಂದಾಗಿದ್ದಾರೆ. ಕೆಂಪೇಗೌಡರ ಪ್ರತಿಮೆಯನ್ನು ಉಳಿಸಿಕೊಂಡು ಆಸ್ಪತ್ರೆ ನಿರ್ಮಿಸಬಹುದಿತ್ತು. ಕೆಂಪೇಗೌಡರ ಕೋಟೆ ಕಂದಕ ಮುಚ್ಚದಂತೆ ನಾನು ಕೋರ್ಟ್ ಮೊರೆ ಹೋಗಿದ್ದರಿಂದ ನನ್ನ ವಿರುದ್ಧ ದ್ವೇಷದ ರಾಜಕೀಯ ಮಾಡುತ್ತಿರುವ ಶಾಸಕರು ಅಭಿವೃದ್ಧಿ ಹೆಸರಿನಲ್ಲಿ ಕ್ಷೇತ್ರದಲ್ಲಿ ಲೂಟಿಗೆ ಇಳಿದಿದ್ದಾರೆ. ಕೆಂಪೇಗೌಡರ ಪ್ರತಿಮೆ ಸ್ಥಳಾಂತರಕ್ಕೆ ಅಧಿಕಾರಿಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಎಚ್.ಎಂ.ಕೃಷ್ಣಮೂರ್ತಿ ಆರೋಪಿಸಿದರು. ತಾಪಂ ಮಾಜಿ ಸದಸ್ಯ ಸಿ.ಜಯರಾಮ್ ಮಾತನಾಡಿ, ಧರ್ಮಪ್ರಭು ಕೆಂಪೆಗೌಡರು ಸರ್ವಧರ್ಮಪ್ರಿಯರು, ಎಲ್ಲ ವರ್ಗದ ಜನರಿಗೂ ಒಂದೊಂದು ಪೇಟೆಯನ್ನು ಕಟ್ಟಿಕೊಟ್ಟ ಮಹಾನೀಯರ ಪ್ರತಿಮೆಗೆ ದಕ್ಕೆಯಾಗುತ್ತಿದೆ. ಶಾಸಕರ ಸರ್ವಾಧಿಕಾರ ಇಲ್ಲಿ ನಡೆಯುತ್ತಿದೆ. ನಾವೂ ಅವರ ಪ್ರತಿಮೆಗೆ ಅವಮಾನಿಸಿದರೆ ಅವರ ಹೃದಯಕ್ಕೆ ಅವಮಾನಿಸಿದಂತೆ. ಮುಂದಿನ ದಿನಗಳಲ್ಲಿ ಅದರ ಪರಿಣಾಮವನ್ನು ಅವರೇ ಉಣ್ಣಬೇಕಿದೆ ಎಂದು ಕಿಡಿಕಾರಿದರು. ನಿಸರ್ಗ ಪರಚರಣ ಟ್ರಸ್ಟ್ ಅಧ್ಯಕ್ಷ ಎಚ್.ಎನ್,ಶಿವಲಿಂಗಯ್ಯ ಮಾತನಾಡಿ, ಗೌರವಯುತವಾಗಿ ಕೆಂಪೇಗೌಡರ ಪ್ರತಿಮೆಯನ್ನು ಸ್ಥಳಾಂತರಿಸಲು ಕೋರ್ಟ್ ಆದೇಶ ನೀಡಿದೆ. ಇಲ್ಲಿರುವ ಮರಗಿಡಗಳನ್ನು ತೆರವುಗೊಳಿಸಬಾರದು. ತೆರವುಗೊಳಿಸಬೇಕಾದರೆ ಕಾನೂನಾತ್ಮಕವಾಗಿ ತೆರವುಗೊಳಿಸಬೇಕೆಂದು ತಾಕೀತು ಮಾಡಿದೆ. ಆದರೆ ಈಗಾಗಲೆ ಪುರಸಭೆ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳವನ್ನು ಆರೋಗ್ಯ ಇಲಾಖೆಗೆ ವರ್ಗಾಯಿಸಿದೆ. ಆರೋಗ್ಯ ಇಲಾಖೆಗೆ ವರ್ಗಾಯಿಸಿದ ಮೇಲೆ ಪ್ರತಿಮೆಯ ಮೆಟ್ಟಿಲು ಕಿತ್ತು ಹಾಕಲು ಇವರಿಗೇನು ಹಕ್ಕಿದೆ. ಇದೊಂದು ರಾಹಕೀಯ ಶಡ್ಯಂತರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಾಕ್ಸ್ ; ಸರ್ಕಾರದ ಮತ್ತು ಕೋರ್ಟ್ ಆದೇಶವನ್ನು ಪಾಲಿಸುವುದು ನಮ್ಮ ಕೆಲಸ. ನಾವು ಯಾರ ಒತ್ತಡಕ್ಕೂ ಮಣಿದಿಲ್ಲ, ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಗೆ ಜಮೀನು ವರ್ಗಾಯಿಸಲು ಅದೇಶ ನೀಡಿದ್ದರಿಂದ ವರ್ಗಾಯಿಸಿದ್ದೇವೆ. ಪ್ರತಿಮೆ ತೆರವುಗೊಳಿಸಲು ಕೋರ್ಟ್ ಆದೇಶವಿರುವುದರಿಂದ ಸಂಬಂಧಪಟ್ಟರು ಸ್ಥಳಾಂತರಿಸಲಿದ್ದಾರೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನೀವೇನಿದ್ದರೂ ಕೇಳುವುದಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದು. ನಮ್ಮದೇನು ಅಭ್ಯಂತರವಿಲ್ಲ. ನಾವು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೆವೆ. ಟಿ.ಎನ್.ಶ್ರೀನಿವಾಸ್ ಮುಖ್ಯಾಧಿಕಾರಿ ಪುರಸಭೆ ಮಾಗಡಿ. ಜೆಡಿಎಸ್ ಮುಖಂಡ ತಮ್ಮಣ್ಣಗೌಡ, ಮಾಡಬಾಳ್ ಕೆಂಪೇಗೌಡ, ಸಾಗರ್, ಎನ್‍ಇಎಸ್ ಆನಂದ್, ದೊಡ್ಡಿ ಗೋಪಿ, ನಾಗರಾಜು, ಶಿವಶಂಕರ್, ಮೂರ್ತಿ, ಮೋಹನ್, ರಾಜೇಶ್, ಶಿವಣ್ಣ, ಕುಮಾರ್, ಆರ್‍ಐ ರವಿ, ಎಂಜಿನಿಯರ್ ಪ್ರಶಾಂತ್ ಶೆಟ್ಟಿ ಇತರರು ಇದ್ದರು.1
- ಹುಬ್ಬಳ್ಳಿಯಲ್ಲಿ ಈ ಪ್ರಕರಣ ದೊಡ್ಡ ಚರ್ಚೆಗೆ ಕಾರಣ ಆಗಿದೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಯುವತಿಯೊಬ್ಬಳು ಗಂಭೀರ ದೂರು ದಾಖಲಿಸಿದ್ದಾಳೆ. ಕಾಲೇಜಿನಲ್ಲಿ ಸ್ನೇಹ ಬೆಳೆಸಿ, ಪ್ರೀತಿಯ ನಾಟಕವಾಡಿ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಮುಫೀಜ್ ಮಿಯಾನವರ ವಿರುದ್ಧ ಬ್ಲ್ಯಾಕ್‌ಮೇಲ್ ಹಾಗೂ ಅತ್ಯಾಚಾರದ ಆರೋಪ ಕೇಳಿಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.1
- KOLAR KI.AWAAZ KOUSAR NEWS1