logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದಲ್ಲಿ ಗ್ರಾಮದೇವತೆ ದ್ಯಾಮವ್ವಾದೇವಿ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ ಮತ್ತು ಭಕ್ತಿಭಾವದಿಂದ ನೆರವೇರುತ್ತಿದೆ. ಕಳೆದ ಜುಲೈ 7 ರಿಂದ ಆರಂಭವಾಗಿರುವ ಈ ಜಾತ್ರೆಯು ಐದು ದಿನಗಳ ಕಾಲ ನಡೆಯಲಿದ್ದು, ನಾಗನೂರದ ಮನೆ ಮನದಲ್ಲೂ ಸಡಗರ ಕಳೆಗಟ್ಟಿದೆ. ಹತ್ತು ವರ್ಷಗಳ ಸುದೀರ್ಘ ಅವಧಿಯ ನಂತರ ನಡೆಯುತ್ತಿರುವ ಈ ಐತಿಹಾಸಿಕ ಮತ್ತು ಅದ್ಧೂರಿ ಜಾತ್ರೆಗೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದು ಬರುತ್ತಿದೆ. ನೂತನವಾಗಿ ಅಲಂಕಾರಗೊಂಡು ಕಂಗೊಳಿಸುತ್ತಿರುವ ದ್ಯಾಮವ್ವಾ ದೇವಿ ದೇವಸ್ಥಾನದಲ್ಲಿ ದ್ಯಾಮವ್ವ ಹಾಗೂ ದುರ್ಗವ್ವ ದೇವಿಯರ ಆರಾಧನೆ ಭರದಿಂದ ಸಾಗಿದೆ. ಈ ಸಂಭ್ರಮದ ಅಂಗವಾಗಿ ದ್ಯಾಮವ್ವಾದೇವಿ ಮಂದಿರವನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳು ಹಾಗೂ ಹೂವುಗಳಿಂದ ಅತ್ಯಂತ ವೈಭವೋಪೇತವಾಗಿ ಸಿಂಗರಿಸಲಾಗಿದ್ದು, ನೋಡುಗರ ಕಣ್ಣುಗಳನ್ನು ಸೆಳೆಯುತ್ತಿದೆ. ಮುಖ್ಯವಾಗಿ ದೇವಿಯನ್ನು ಭವ್ಯ ತೇರಿನಲ್ಲಿ ಕೂರಿಸಿ ಗ್ರಾಮದ ಪ್ರಮುಖ ಓಣಿಗಳಲ್ಲಿ ರಥೋತ್ಸವವನ್ನು ಸಾಗಿಸಲಾಯಿತು. ಮುಗಿಲೆತ್ತರಕ್ಕೆ ಭಂಡಾರವನ್ನು ಚಿಮ್ಮಿಸುತ್ತಾ ಭಕ್ತರು ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದರು. ಈ ಅದ್ಭುತ ಮತ್ತು ವರ್ಣನಾತೀತ ದೃಶ್ಯಗಳಿಗೆ ನಾಗನೂರ ಗ್ರಾಮವು ಸಾಕ್ಷಿಯಾಗಿದೆ.

2 hrs ago
user_R News Kannada
R News Kannada
Local News Reporter ಬೆಳಗಾವಿ, ಬೆಳಗಾವಿ, ಕರ್ನಾಟಕ•
2 hrs ago
ffad204a-516c-46c9-b3e8-c64ec85f6eef

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದಲ್ಲಿ ಗ್ರಾಮದೇವತೆ ದ್ಯಾಮವ್ವಾದೇವಿ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ ಮತ್ತು ಭಕ್ತಿಭಾವದಿಂದ ನೆರವೇರುತ್ತಿದೆ. ಕಳೆದ ಜುಲೈ 7 ರಿಂದ ಆರಂಭವಾಗಿರುವ ಈ ಜಾತ್ರೆಯು ಐದು ದಿನಗಳ ಕಾಲ ನಡೆಯಲಿದ್ದು, ನಾಗನೂರದ ಮನೆ ಮನದಲ್ಲೂ ಸಡಗರ ಕಳೆಗಟ್ಟಿದೆ. ಹತ್ತು ವರ್ಷಗಳ ಸುದೀರ್ಘ ಅವಧಿಯ ನಂತರ ನಡೆಯುತ್ತಿರುವ ಈ ಐತಿಹಾಸಿಕ ಮತ್ತು ಅದ್ಧೂರಿ ಜಾತ್ರೆಗೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದು ಬರುತ್ತಿದೆ. ನೂತನವಾಗಿ ಅಲಂಕಾರಗೊಂಡು ಕಂಗೊಳಿಸುತ್ತಿರುವ ದ್ಯಾಮವ್ವಾ ದೇವಿ ದೇವಸ್ಥಾನದಲ್ಲಿ ದ್ಯಾಮವ್ವ ಹಾಗೂ ದುರ್ಗವ್ವ ದೇವಿಯರ ಆರಾಧನೆ ಭರದಿಂದ ಸಾಗಿದೆ. ಈ ಸಂಭ್ರಮದ ಅಂಗವಾಗಿ ದ್ಯಾಮವ್ವಾದೇವಿ ಮಂದಿರವನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳು ಹಾಗೂ ಹೂವುಗಳಿಂದ ಅತ್ಯಂತ ವೈಭವೋಪೇತವಾಗಿ ಸಿಂಗರಿಸಲಾಗಿದ್ದು, ನೋಡುಗರ ಕಣ್ಣುಗಳನ್ನು ಸೆಳೆಯುತ್ತಿದೆ. ಮುಖ್ಯವಾಗಿ ದೇವಿಯನ್ನು ಭವ್ಯ ತೇರಿನಲ್ಲಿ ಕೂರಿಸಿ ಗ್ರಾಮದ ಪ್ರಮುಖ ಓಣಿಗಳಲ್ಲಿ ರಥೋತ್ಸವವನ್ನು ಸಾಗಿಸಲಾಯಿತು. ಮುಗಿಲೆತ್ತರಕ್ಕೆ ಭಂಡಾರವನ್ನು ಚಿಮ್ಮಿಸುತ್ತಾ ಭಕ್ತರು ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದರು. ಈ ಅದ್ಭುತ ಮತ್ತು ವರ್ಣನಾತೀತ ದೃಶ್ಯಗಳಿಗೆ ನಾಗನೂರ ಗ್ರಾಮವು ಸಾಕ್ಷಿಯಾಗಿದೆ.

More news from ಕರ್ನಾಟಕ and nearby areas
  • ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಕಾಂಬಳೆ ಅವರ ಅಧ್ಯಕ್ಷತೆಯಲ್ಲಿ ನೂತನ ಕಾರ್ಯಕ್ರಮ ವೇದಿಕೆ ನಿರ್ಮಾಣದ ಗುದ್ದಲಿ ಪೂಜೆ, ಶಿಕ್ಷಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಪ್ರವೀಣ ನಾಯಿಕ ಅವರು ನೂತನ ವೇದಿಕೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗಣ್ಯರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರವೀಣ ನಾಯಿಕ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸರ್ವೋತ್ತಮ ಬೆಳವಣಿಗೆಯಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಪ್ರಮುಖವಾಗಿದೆ ಎಂದರು. ಮಕ್ಕಳ ಸಾಂಸ್ಕೃತಿಕ ಹಾಗೂ ಭೌತಿಕ ವಿಕಸನಕ್ಕೆ ಉತ್ತಮ ವೇದಿಕೆಯ ಅಗತ್ಯವಿದ್ದು, ಗ್ರಾಮ ಪಂಚಾಯತ್ ಅಡಿಯಲ್ಲಿ ಈ ವೇದಿಕೆ ನಿರ್ಮಾಣವಾಗುತ್ತಿರುವುದು ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಉತ್ತಮ ಅವಕಾಶ ಕಲ್ಪಿಸಲಿದೆ ಎಂದು ತಿಳಿಸಿದರು. ಅಲ್ಲದೆ, ಬಡ ಮಕ್ಕಳ ಹಿತದೃಷ್ಟಿಯಿಂದ ಇಲ್ಲಿಗೆ ಸರ್ಕಾರಿ ಪ್ರೌಢಶಾಲೆಯ ಅವಶ್ಯಕತೆ ಇರುವುದರಿಂದ ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಸುವ ಶಿಕ್ಷಕರ ಸೇವೆ ಅನನ್ಯವಾಗಿದ್ದು, ಶಾಲೆಯ ಶಿಸ್ತು ಮತ್ತು ಗುಣಮಟ್ಟ ಕಾಪಾಡಿಕೊಂಡಿರುವ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಯನ್ನು ಸನ್ಮಾನಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್ ಎ ಚೌಗಲಾ ಅವರು, ಎಸ್‌ಡಿಎಂಸಿ ಆಡಳಿತ ಮಂಡಳಿ, ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರ ಸಹಾಯ ಮತ್ತು ಸಹಕಾರದೊಂದಿಗೆ ಶಾಲೆ ಹಾಗೂ ಮಕ್ಕಳ ಅಭಿವೃದ್ಧಿ ಮಾಡುವುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು. ಇದೇ ವೇಳೆ ಶಾಲೆಯ ಶೈಕ್ಷಣಿಕ ಪ್ರಗತಿ ಮತ್ತು ಮೂಲಸೌಕರ್ಯಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ರೇಖಾ ಮಡಿವಾಳ, ಸದಸ್ಯರಾದ ಮಲ್ಲೇಶ ಖಟಾವಿ, ನಾಗರಾಜ ಹಡಪದ, ಸಂಗೀತ ಮಗದುಮ್ಮ, ರುಕ್ಷಾನ ಅಲಾಸ, ಅಶ್ವಿನಿ ಗಾರಿಮನಿ, ಶಾಂತ ಕಾಂಬಳೆ, ಸುನಿತಾ ನಾಯಕ, ಸುಮಿತ್ರ ಬೀಸೆ, ಸುವರ್ಣಾ ನಿರ್ಲೇಕರ ಹಾಗೂ ಶಿಕ್ಷಕರಾದ ಎಸ್ ಎನ್ ಮಾಕನವರ, ಕೆ ಎಸ್ ನಾಯ್ಕೋಡಿ, ಪಿ ಎಸ್ ಪಕೀರೆ, ವಿ ಬಿ ಪಾಟೀಲ, ಆರ್ ಬಿ ನಿಲಜಗಿ, ಎ ಎಸ್ ಚೌಗಲಾ, ವಿ ಎಂ ಪೂಜಾರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
    4
    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಕಾಂಬಳೆ ಅವರ ಅಧ್ಯಕ್ಷತೆಯಲ್ಲಿ ನೂತನ ಕಾರ್ಯಕ್ರಮ ವೇದಿಕೆ ನಿರ್ಮಾಣದ ಗುದ್ದಲಿ ಪೂಜೆ, ಶಿಕ್ಷಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಪ್ರವೀಣ ನಾಯಿಕ ಅವರು ನೂತನ ವೇದಿಕೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗಣ್ಯರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರವೀಣ ನಾಯಿಕ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸರ್ವೋತ್ತಮ ಬೆಳವಣಿಗೆಯಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಪ್ರಮುಖವಾಗಿದೆ ಎಂದರು. ಮಕ್ಕಳ ಸಾಂಸ್ಕೃತಿಕ ಹಾಗೂ ಭೌತಿಕ ವಿಕಸನಕ್ಕೆ ಉತ್ತಮ ವೇದಿಕೆಯ ಅಗತ್ಯವಿದ್ದು, ಗ್ರಾಮ ಪಂಚಾಯತ್ ಅಡಿಯಲ್ಲಿ ಈ ವೇದಿಕೆ ನಿರ್ಮಾಣವಾಗುತ್ತಿರುವುದು ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಉತ್ತಮ ಅವಕಾಶ ಕಲ್ಪಿಸಲಿದೆ ಎಂದು ತಿಳಿಸಿದರು. ಅಲ್ಲದೆ, ಬಡ ಮಕ್ಕಳ ಹಿತದೃಷ್ಟಿಯಿಂದ ಇಲ್ಲಿಗೆ ಸರ್ಕಾರಿ ಪ್ರೌಢಶಾಲೆಯ ಅವಶ್ಯಕತೆ ಇರುವುದರಿಂದ ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಸುವ ಶಿಕ್ಷಕರ ಸೇವೆ ಅನನ್ಯವಾಗಿದ್ದು, ಶಾಲೆಯ ಶಿಸ್ತು ಮತ್ತು ಗುಣಮಟ್ಟ ಕಾಪಾಡಿಕೊಂಡಿರುವ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಯನ್ನು ಸನ್ಮಾನಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್ ಎ ಚೌಗಲಾ ಅವರು, ಎಸ್‌ಡಿಎಂಸಿ ಆಡಳಿತ ಮಂಡಳಿ, ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರ ಸಹಾಯ ಮತ್ತು ಸಹಕಾರದೊಂದಿಗೆ ಶಾಲೆ ಹಾಗೂ ಮಕ್ಕಳ ಅಭಿವೃದ್ಧಿ ಮಾಡುವುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು. ಇದೇ ವೇಳೆ ಶಾಲೆಯ ಶೈಕ್ಷಣಿಕ ಪ್ರಗತಿ ಮತ್ತು ಮೂಲಸೌಕರ್ಯಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ರೇಖಾ ಮಡಿವಾಳ, ಸದಸ್ಯರಾದ ಮಲ್ಲೇಶ ಖಟಾವಿ, ನಾಗರಾಜ ಹಡಪದ, ಸಂಗೀತ ಮಗದುಮ್ಮ, ರುಕ್ಷಾನ ಅಲಾಸ, ಅಶ್ವಿನಿ ಗಾರಿಮನಿ, ಶಾಂತ ಕಾಂಬಳೆ, ಸುನಿತಾ ನಾಯಕ, ಸುಮಿತ್ರ ಬೀಸೆ, ಸುವರ್ಣಾ ನಿರ್ಲೇಕರ ಹಾಗೂ ಶಿಕ್ಷಕರಾದ ಎಸ್ ಎನ್ ಮಾಕನವರ, ಕೆ ಎಸ್ ನಾಯ್ಕೋಡಿ, ಪಿ ಎಸ್ ಪಕೀರೆ, ವಿ ಬಿ ಪಾಟೀಲ, ಆರ್ ಬಿ ನಿಲಜಗಿ, ಎ ಎಸ್ ಚೌಗಲಾ, ವಿ ಎಂ ಪೂಜಾರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
    user_Mahesh sharma
    Mahesh sharma
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    5 hrs ago
  • Post by ANUSHKA FOOTWEAR Nagarmunnoli
    1
    Post by ANUSHKA   FOOTWEAR   Nagarmunnoli
    user_ANUSHKA   FOOTWEAR   Nagarmunnoli
    ANUSHKA FOOTWEAR Nagarmunnoli
    Salesperson ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    30 min ago
  • ಧಾರವಾಡ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಸಿ.ಸಿ ಪಾಟೀಲ ಅವರು, ಜಿ.ಬಿ.ಎ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರವು ಕುಂಟು ನೆಪ ಹೇಳುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಚುನಾವಣೆ ನಡೆಸಲು ಚುನಾವಣಾ ಆಯೋಗವು ಸಿದ್ಧತೆ ಮಾಡಿಕೊಂಡಿದ್ದರೂ ಸಹ, ಸರ್ಕಾರವು ಚುನಾವಣೆಯನ್ನು ಮುಂದೂಡುವ ಉದ್ದೇಶದಿಂದ ಎಸ್.ಐ.ಆರ್ ಎಂಬ ಕುಂಟು ನೆಪವನ್ನು ಹೇಳಿ ಅರ್ಜಿ ಸಲ್ಲಿಸಿದೆ ಎಂದು ಅವರು ದೂರಿದ್ದಾರೆ. ಪ್ರತಿಯೊಂದಕ್ಕೂ ಎಸ್.ಐ.ಆರ್ ಎನ್ನುವುದು ಸೂಕ್ತವಲ್ಲ ಮತ್ತು ಬಹುತೇಕ ಕಾಂಗ್ರೆಸ್ ಮುಖಂಡರಿಗೆ ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವೇ ಇಲ್ಲ ಎಂದು ಅವರು ಟೀಕಿಸಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಜಿ.ಬಿ.ಎ ಚುನಾವಣೆ ನಡೆದಿಲ್ಲ ಎಂದಾಕ್ಷಣ ಈ ಸರ್ಕಾರವೂ ಅದನ್ನು ನಡೆಸಬಾರದೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದಿದ್ದು, ಇನ್ನು ಆರು ತಿಂಗಳು ಇರುವಾಗಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಹೇಳಿದರು. ನಮಗೆ ಇರುವುದೇ ನಾಲ್ಕೂವರೆ ವರ್ಷಗಳ ಅಧಿಕಾರ ಅವಧಿಯಾಗಿದ್ದು, ಈ ಅವಧಿಯಲ್ಲೇ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
    1
    ಧಾರವಾಡ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಸಿ.ಸಿ ಪಾಟೀಲ ಅವರು, ಜಿ.ಬಿ.ಎ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರವು ಕುಂಟು ನೆಪ ಹೇಳುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಚುನಾವಣೆ ನಡೆಸಲು ಚುನಾವಣಾ ಆಯೋಗವು ಸಿದ್ಧತೆ ಮಾಡಿಕೊಂಡಿದ್ದರೂ ಸಹ, ಸರ್ಕಾರವು ಚುನಾವಣೆಯನ್ನು ಮುಂದೂಡುವ ಉದ್ದೇಶದಿಂದ ಎಸ್.ಐ.ಆರ್ ಎಂಬ ಕುಂಟು ನೆಪವನ್ನು ಹೇಳಿ ಅರ್ಜಿ ಸಲ್ಲಿಸಿದೆ ಎಂದು ಅವರು ದೂರಿದ್ದಾರೆ.

ಪ್ರತಿಯೊಂದಕ್ಕೂ ಎಸ್.ಐ.ಆರ್ ಎನ್ನುವುದು ಸೂಕ್ತವಲ್ಲ ಮತ್ತು ಬಹುತೇಕ ಕಾಂಗ್ರೆಸ್ ಮುಖಂಡರಿಗೆ ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವೇ ಇಲ್ಲ ಎಂದು ಅವರು ಟೀಕಿಸಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಜಿ.ಬಿ.ಎ ಚುನಾವಣೆ ನಡೆದಿಲ್ಲ ಎಂದಾಕ್ಷಣ ಈ ಸರ್ಕಾರವೂ ಅದನ್ನು ನಡೆಸಬಾರದೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದಿದ್ದು, ಇನ್ನು ಆರು ತಿಂಗಳು ಇರುವಾಗಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಹೇಳಿದರು. ನಮಗೆ ಇರುವುದೇ ನಾಲ್ಕೂವರೆ ವರ್ಷಗಳ ಅಧಿಕಾರ ಅವಧಿಯಾಗಿದ್ದು, ಈ ಅವಧಿಯಲ್ಲೇ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    13 hrs ago
  • ಬೆಳಗಾವಿ ಜಿಲ್ಲೆಯ ರಾಯಭಾಗ ಕೆರೆಗಳಿಗೆ ಅಧಿಕಾರಿಗಳು ಯಶಸ್ವಿಯಾಗಿ ಜೀವ ತುಂಬಿದ್ದಾರೆ. ತಹಸೀಲ್ದಾರ್ ಹಾಗೂ ಮಹಾವೀರ ಮೋಹತೆ ಅವರ ಮುಂದಾಳತ್ವದಲ್ಲಿ ಈ ಕಾರ್ಯ ಯಶಸ್ವಿಯಾಗಿ ನಡೆದಿದೆ.
    1
    ಬೆಳಗಾವಿ ಜಿಲ್ಲೆಯ ರಾಯಭಾಗ ಕೆರೆಗಳಿಗೆ ಅಧಿಕಾರಿಗಳು ಯಶಸ್ವಿಯಾಗಿ ಜೀವ ತುಂಬಿದ್ದಾರೆ. ತಹಸೀಲ್ದಾರ್ ಹಾಗೂ ಮಹಾವೀರ ಮೋಹತೆ ಅವರ ಮುಂದಾಳತ್ವದಲ್ಲಿ ಈ ಕಾರ್ಯ ಯಶಸ್ವಿಯಾಗಿ ನಡೆದಿದೆ.
    user_ಅಮರ ವಾಹಿನಿ ಕನ್ನಡ news
    ಅಮರ ವಾಹಿನಿ ಕನ್ನಡ news
    ರಾಯಬಾಗ, ಬೆಳಗಾವಿ, ಕರ್ನಾಟಕ•
    18 hrs ago
  • ಹಿಪ್ಪರಗಿ-ಅಥಣಿ ರಸ್ತೆಯ ಅವ್ಯವಸ್ಥೆಯ ಕುರಿತು ಶ್ರೀನಿವಾಸ ಪೂಜಾರಿ ಎಂಬುವವರು ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಇದೀಗ ರಸ್ತೆಯ ಪ್ಯಾಚ್‌ವರ್ಕ್ ಕಾರ್ಯ ಪ್ರಾರಂಭವಾಗಿದೆ. ಈ ಬೆಳವಣಿಗೆಯಿಂದಾಗಿ ಸಾಮಾಜಿಕ ಜಾಲತಾಣದ ಶಕ್ತಿಯ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸರ್ಕಾರದ ಗಮನ ಸೆಳೆದು ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಮಾಡಿದ್ದಕ್ಕೆ ಜನರು ಸೋಷಿಯಲ್ ಮೀಡಿಯಾಗೆ ಬಹುಪರಾಕ್ ಹೇಳುತ್ತಿದ್ದಾರೆ.
    1
    ಹಿಪ್ಪರಗಿ-ಅಥಣಿ ರಸ್ತೆಯ ಅವ್ಯವಸ್ಥೆಯ ಕುರಿತು ಶ್ರೀನಿವಾಸ ಪೂಜಾರಿ ಎಂಬುವವರು ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಇದೀಗ ರಸ್ತೆಯ ಪ್ಯಾಚ್‌ವರ್ಕ್ ಕಾರ್ಯ ಪ್ರಾರಂಭವಾಗಿದೆ.

ಈ ಬೆಳವಣಿಗೆಯಿಂದಾಗಿ ಸಾಮಾಜಿಕ ಜಾಲತಾಣದ ಶಕ್ತಿಯ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸರ್ಕಾರದ ಗಮನ ಸೆಳೆದು ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಮಾಡಿದ್ದಕ್ಕೆ ಜನರು ಸೋಷಿಯಲ್ ಮೀಡಿಯಾಗೆ ಬಹುಪರಾಕ್ ಹೇಳುತ್ತಿದ್ದಾರೆ.
    user_Santosh Badakambi
    Santosh Badakambi
    Teacher ಅಥಣಿ, ಬೆಳಗಾವಿ, ಕರ್ನಾಟಕ•
    23 hrs ago
  • ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಕೆಲವು ಬೇಕರಿಗಳಲ್ಲಿ ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಆರೋಪಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ವ್ಯಕ್ತವಾಗಿದ್ದು, ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳು ಸಾರ್ವಜನಿಕರಿಂದ ಲಭ್ಯವಾಗಿರುವ ಮಾಹಿತಿ ಮತ್ತು ಸದ್ಯದ ವರದಿಗಳನ್ನು ಆಧರಿಸಿವೆ. ಹೀಗಾಗಿ, ಸಂಬಂಧಪಟ್ಟ ಇಲಾಖೆಯ ಅಂತಿಮ ತನಿಖೆ ಅಥವಾ ಅಧಿಕೃತ ವರದಿ ಹೊರಬರುವವರೆಗೆ ಈ ಆರೋಪಗಳನ್ನು ದೃಢಪಟ್ಟ ಸತ್ಯ ಎಂದು ಪರಿಗಣಿಸಬಾರದು ಎಂದು ಸ್ಪಷ್ಟಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಂಗಡಿ ಮಾಲೀಕರು ಮತ್ತು ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ಲಭ್ಯವಾದರೆ ಅದನ್ನು ಕೂಡ ಪ್ರಕಟಿಸಲಾಗುವುದು.
    1
    ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಕೆಲವು ಬೇಕರಿಗಳಲ್ಲಿ ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಆರೋಪಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ವ್ಯಕ್ತವಾಗಿದ್ದು, ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳು ಸಾರ್ವಜನಿಕರಿಂದ ಲಭ್ಯವಾಗಿರುವ ಮಾಹಿತಿ ಮತ್ತು ಸದ್ಯದ ವರದಿಗಳನ್ನು ಆಧರಿಸಿವೆ. ಹೀಗಾಗಿ, ಸಂಬಂಧಪಟ್ಟ ಇಲಾಖೆಯ ಅಂತಿಮ ತನಿಖೆ ಅಥವಾ ಅಧಿಕೃತ ವರದಿ ಹೊರಬರುವವರೆಗೆ ಈ ಆರೋಪಗಳನ್ನು ದೃಢಪಟ್ಟ ಸತ್ಯ ಎಂದು ಪರಿಗಣಿಸಬಾರದು ಎಂದು ಸ್ಪಷ್ಟಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಂಗಡಿ ಮಾಲೀಕರು ಮತ್ತು ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ಲಭ್ಯವಾದರೆ ಅದನ್ನು ಕೂಡ ಪ್ರಕಟಿಸಲಾಗುವುದು.
    user_Bhimahejje News
    Bhimahejje News
    Newspaper publisher ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    2 hrs ago
  • ರಾಜ್ಯದ ಧಾರವಾಡ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಅವರು, ಕಾಂಗ್ರೆಸ್‌ ಪಕ್ಷದವರು ಮೂಲತಃ ಆರ್‌ಎಸ್‌ಎಸ್ ವಿರೋಧಿಗಳಾಗಿದ್ದು, ಅವರಿಂದ ಒಳ್ಳೆಯದನ್ನು ಅಪೇಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆರ್‌ಎಸ್‌ಎಸ್‌ ನಿನ್ನೆ ಇತ್ತು, ಇಂದು ಇದೆ ಮತ್ತು ನಾಳೆಯೂ ಇರುತ್ತದೆ ಎಂದು ಹೇಳಿದ ಅವರು, ಇಂತಹ ವಿರೋಧಿಗಳನ್ನು ಎದುರಿಸಿಯೇ ಸಂಘಟನೆಯು ಗಟ್ಟಿಯಾಗಿ ಬೆಳೆದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ಹಿಂದೆ ಇಂದಿರಾ ಗಾಂಧಿ ಅವರಿಗೇ ಆರ್‌ಎಸ್‌ಎಸ್ ಅನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
    1
    ರಾಜ್ಯದ ಧಾರವಾಡ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಅವರು, ಕಾಂಗ್ರೆಸ್‌ ಪಕ್ಷದವರು ಮೂಲತಃ ಆರ್‌ಎಸ್‌ಎಸ್ ವಿರೋಧಿಗಳಾಗಿದ್ದು, ಅವರಿಂದ ಒಳ್ಳೆಯದನ್ನು ಅಪೇಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆರ್‌ಎಸ್‌ಎಸ್‌ ನಿನ್ನೆ ಇತ್ತು, ಇಂದು ಇದೆ ಮತ್ತು ನಾಳೆಯೂ ಇರುತ್ತದೆ ಎಂದು ಹೇಳಿದ ಅವರು, ಇಂತಹ ವಿರೋಧಿಗಳನ್ನು ಎದುರಿಸಿಯೇ ಸಂಘಟನೆಯು ಗಟ್ಟಿಯಾಗಿ ಬೆಳೆದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ಹಿಂದೆ ಇಂದಿರಾ ಗಾಂಧಿ ಅವರಿಗೇ ಆರ್‌ಎಸ್‌ಎಸ್ ಅನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    13 hrs ago
  • ದೇವದುರ್ಗ ಪೊಲೀಸ್ ಠಾಣೆಯಲ್ಲಿ ಲಂಚ ಪಡೆಯುತ್ತಿರುವ ದೃಶ್ಯದ ವಿಡಿಯೋವೊಂದು ತೀವ್ರ ವೈರಲ್ ಆಗಿದೆ. ಮರಳು ಸಾಗಾಣಿಕೆ ಗಾಡಿಗಳ ಮೇಲೆ ಎಫ್‌ಐಆರ್ (FIR) ದಾಖಲಾದಾಗ ಕೋರ್ಟಿಗೆ ಪಿ.ಎಫ್ ಹಾಕಲು ಟ್ರ್ಯಾಕ್ಟರ್‌ಗೆ ₹7,000 ಹಾಗೂ ಟಿಪ್ಪರ್‌ಗೆ ₹25,000 ನೀಡಬೇಕೆಂದು ಕಂಡಿಷನ್ ಹಾಕಿ ಹಣ ಪಡೆಯುತ್ತಿರುವ ದೃಶ್ಯ ಇದಾಗಿದೆ. ಈ ಲಂಚದ ಹಣವನ್ನು ಅಂಜಿನಯ್ಯ ಅಂಜಳಾ ಎಂಬುವವರು ನೀಡಿದ್ದು, ಪೊಲೀಸ್ ಇಲಾಖೆಯ ರೈಟರ್ ಸಿದ್ದಪ್ಪ ತಡಕಲ್ ಹಾಗೂ ಡ್ಯೂಟಿಯಲ್ಲಿದ್ದ ಹನುಮಂತ ಎಸ್.ಬಿ. ಅವರು ಪಡೆದುಕೊಂಡಿದ್ದಾರೆ.
    1
    ದೇವದುರ್ಗ ಪೊಲೀಸ್ ಠಾಣೆಯಲ್ಲಿ ಲಂಚ ಪಡೆಯುತ್ತಿರುವ ದೃಶ್ಯದ ವಿಡಿಯೋವೊಂದು ತೀವ್ರ ವೈರಲ್ ಆಗಿದೆ. ಮರಳು ಸಾಗಾಣಿಕೆ ಗಾಡಿಗಳ ಮೇಲೆ ಎಫ್‌ಐಆರ್ (FIR) ದಾಖಲಾದಾಗ ಕೋರ್ಟಿಗೆ ಪಿ.ಎಫ್ ಹಾಕಲು ಟ್ರ್ಯಾಕ್ಟರ್‌ಗೆ ₹7,000 ಹಾಗೂ ಟಿಪ್ಪರ್‌ಗೆ ₹25,000 ನೀಡಬೇಕೆಂದು ಕಂಡಿಷನ್ ಹಾಕಿ ಹಣ ಪಡೆಯುತ್ತಿರುವ ದೃಶ್ಯ ಇದಾಗಿದೆ. ಈ ಲಂಚದ ಹಣವನ್ನು ಅಂಜಿನಯ್ಯ ಅಂಜಳಾ ಎಂಬುವವರು ನೀಡಿದ್ದು, ಪೊಲೀಸ್ ಇಲಾಖೆಯ ರೈಟರ್ ಸಿದ್ದಪ್ಪ ತಡಕಲ್ ಹಾಗೂ ಡ್ಯೂಟಿಯಲ್ಲಿದ್ದ ಹನುಮಂತ ಎಸ್.ಬಿ. ಅವರು ಪಡೆದುಕೊಂಡಿದ್ದಾರೆ.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    35 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.