Shuru
Apke Nagar Ki App…
ಬಂಗಾರ–ಬೆಳ್ಳಿ ಆಭರಣ ಮಳಿಗೆಗಳಿಗೆ ಪೊಲೀಸ್ ಜಾಗೃತಿ ಪಟ್ಟಣದಲ್ಲಿನ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಜ್ಯೂವೆಲ್ಲರಿ ಅಂಗಡಿಗಳಿಗೆ ಮಾನ್ವಿ ಪೊಲೀಸ್ ಠಾಣೆಯ ಎಎಸ್‌ಐ ಶಿವಲಿಂಗಪ್ಪ ಅವರು ಭೇಟಿ ನೀಡಿ ಜಾಗೃತಿ ಮೂಡಿಸಿದರು. ಇತ್ತೀಚಿನ ದಿನಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ರಾಜಸ್ಥಾನ ಹಾಗೂ ಉತ್ತರಪ್ರದೇಶ ಮೂಲದ ಎರಡು ವಿಭಿನ್ನ ಕಳ್ಳರ ತಂಡಗಳು ಆಭರಣ ಮಳಿಗೆಗಳಲ್ಲಿ ಕಳ್ಳತನ ನಡೆಸುತ್ತಿರುವ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆ, ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಅಂಗಡಿ ಮಾಲಿಕರಿಗೆ ನೋಟಿಸ್ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋಟ್ಯಾಂತರ ಮೌಲ್ಯದ ಬಂಗಾರ, ಬೆಳ್ಳಿ ಹಾಗೂ ಅಮೂಲ್ಯ ಆಭರಣಗಳನ್ನು ಕಳ್ಳತನದಿಂದ ರಕ್ಷಿಸಲು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
K2 kannada News
ಬಂಗಾರ–ಬೆಳ್ಳಿ ಆಭರಣ ಮಳಿಗೆಗಳಿಗೆ ಪೊಲೀಸ್ ಜಾಗೃತಿ ಪಟ್ಟಣದಲ್ಲಿನ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಜ್ಯೂವೆಲ್ಲರಿ ಅಂಗಡಿಗಳಿಗೆ ಮಾನ್ವಿ ಪೊಲೀಸ್ ಠಾಣೆಯ ಎಎಸ್‌ಐ ಶಿವಲಿಂಗಪ್ಪ ಅವರು ಭೇಟಿ ನೀಡಿ ಜಾಗೃತಿ ಮೂಡಿಸಿದರು. ಇತ್ತೀಚಿನ ದಿನಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ರಾಜಸ್ಥಾನ ಹಾಗೂ ಉತ್ತರಪ್ರದೇಶ ಮೂಲದ ಎರಡು ವಿಭಿನ್ನ ಕಳ್ಳರ ತಂಡಗಳು ಆಭರಣ ಮಳಿಗೆಗಳಲ್ಲಿ ಕಳ್ಳತನ ನಡೆಸುತ್ತಿರುವ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆ, ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಅಂಗಡಿ ಮಾಲಿಕರಿಗೆ ನೋಟಿಸ್ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋಟ್ಯಾಂತರ ಮೌಲ್ಯದ ಬಂಗಾರ, ಬೆಳ್ಳಿ ಹಾಗೂ ಅಮೂಲ್ಯ ಆಭರಣಗಳನ್ನು ಕಳ್ಳತನದಿಂದ ರಕ್ಷಿಸಲು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
More news from ಕರ್ನಾಟಕ and nearby areas
- ರಾಯಚೂರು ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಉದ್ಯೋಗ ಮೇಳಕ್ಕೆ ಬೇಕಾಗುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಲ್ಲದೆ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳು ಭಾಗಿಯಾಗಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕರಾದ ಶರಣಬಸವರಾಜ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾ ಪಂಚಾಯತಿಯ ಜಲ ನಿರ್ಮಲ ಸಭಾಂಗಣದಲ್ಲಿ ಉದ್ಯೋಗ ಮೇಳದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಾ ಮೇಳದಲ್ಲಿ ಕನಿಷ್ಠ 1500 ಜನ ಅಭ್ಯರ್ಥಿಗಳಿಗೆ ಉದ್ಯೋಗವಕಾಶವನ್ನು ಕಡ್ಡಾಯವಾಗಿ ಕಲ್ಪಿಸುವ ಗುರಿಯನ್ನು ನಿಗಧಿಪಡಿಸಲಾಗಿದೆ ಎಂದರು.1
- ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ್ ಗ್ರಾಮದ ಹೊರವಲಯದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸಲಾಗುತ್ತಿದ್ದು ಸಾರ್ವಜನಿಕರು ಮುಖಂಡರು ಪಾಲ್ಗೊಳ್ಳುವಂತೆ ಪೂಜಾರಿ ಬೀರಪ್ಪ ಬಡ್ಡೇರ್ ಮನವಿ ಮಾಡಿದ್ದಾರೆ1
- Post by SRI RABINDRANATH TAGORE HIGH SCHOOL BIJAPUR1
- ಸಾಲೋಟಗಿ ಭಜಂತ್ರಿ ಯಾವುದೇ ಶುಭ ಕಾರ್ಯಕ್ರಮ ಸಂಪರ್ಕಿಸಿ 93803537101
- ಹೊಸ ವರ್ಷದ ಶುಭಾಶಯಗಳು1
- ಚಳ್ಳಕೆರೆ :ಕಾಡುಗೊಲ್ಲರ ಆರಾಧ್ಯ (ಕೇತೇದೇವರ ಜಾತ್ರೋತ್ಸವ) ಕ್ಯಾತಪ್ಪನ ದೈವ ಚನ್ನಮ್ಮನಾಗತಿಹಳ್ಳಿಯ ಕ್ಯಾತೇದೇವರ ಜಾತ್ರೆಯು ಡಿ.೧೮ ರಿಂದ ಜ.೯ರ ನಡೆಯುವ (ಕೇತೇದೇವರ ಜಾತ್ರೋತ್ಸವ) ಜಾತ್ರೆಯು ತನ್ನದೇ ಆದ ವಿಶಿಷ್ಟ ಪರಂಪರೆಯಿಂದ ನಡೆಯುವ ಅತಿದೊಡ್ಡ ಜಾತ್ರೆಯಾಗಿದೆ.ಈ ದೇವರ ಪರೀಷೆ ಈ ಭಾಗದ ಬುಡಕಟ್ಟು ಸಮುದಾಯಗಳಿಗೆ ಸಂಸ್ಕೃತಿ ಆಚರಣೆಯನ್ನು ಎತ್ತಿ ತೋರುವ ಜಾತ್ರೆಗಳಲ್ಲಿ ಒಂದಾಗಿದೆ. ಚಿತ್ರದುರ್ಗ ಜಿಲ್ಲೆಯ ತಾಲ್ಲೂಕಿನ ಪುರ‍್ಲೆಹಳ್ಳಿಯ ವಸಲು ದಿನ್ನೆಬ್ಬದಲ್ಲಿ ನಡೆಯುವ ಜಾತ್ರೆಯಲ್ಲಿ ಸುಮಾರು ಒಂದು ತಿಂಗಳ ಕಾಲ ಪಾರಂಪರಿಕವಾಗಿ ಆಚರಣೆಯಲ್ಲಿರುವ ಸಂಪ್ರದಾಯಗಳನ್ನು ಇಂದಿಗೂ ಚಾಚೂ ತಪ್ಪದೇ ಪಾಲಿಸಿಕೊಂಡು ಆಧುನಿಕತೆಯ ಭರಾಟೆಯಲ್ಲಿ ಬುಡಕಟ್ಟು ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ನಡೆಯುತ್ತದೆ... ಒಟ್ಟಾರೆಯಾಗಿ ಸಾಂಪ್ರದಾಯಿಕ ಆಚರಣೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುವ ಸಂದರ್ಭದಲ್ಲಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬುಡಕಟ್ಟು ಸಮುದಾಯದ ಕಾಡುಗೊಲ್ಲರು ವಿಶಿಷ್ಟ ಆಚರಣೆಯನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ ಎನ್ನಬಹುದಾಗಿದೆ... ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಇಂದಿಗೂ ಭಾವೈಕ್ಯ ಹಾಗೂ ಸಾಮಾಜಿಕ ಸಾಮರಸ್ಯದಿಂದ ಕೂಡಿದೆ. ಈ ದೇವರ ಜಾತ್ರೆಗೆ ನೆರೆ ಆಂಧ್ರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಜಾತ್ರೆಯಲ್ಲಿ ಭಾಗವಹಿಸುವುದು ಮತ್ತೊಂದು ವಿಶೇಷವಾಗಿದೆ... ಚನ್ನಮ್ಮನಾಗತಿಹಳ್ಳಿಯ ಕೇತೇ ದೇವಸ್ಥಾನದಿಂದ ಕಳಶ ಹೊತ್ತು ತಂದು ಎರದ(ಬಾರೆ),ಬಂದ್ರೆ, ಬ್ಯಾಟೆ,ತುಗ್ಗಲಿ ಇತ್ಯಾದಿ ಕಳ್ಳೆ ಮುಳ್ಳುಗಳಿಂದ ಸಿದ್ದ ಮಾಡಿದ ಕ್ಯಾತಪ್ಪನ ಗುಡಿಯ ಮೇಲೆ ಕೊಣನ ಗೊಲ್ಲ ಮತ್ತು ಬೊಮ್ಮನ ಗೊಲ್ಲರ ಅಣ್ಣತಮ್ಮಂದಿರ ಒಬ್ಬಬ್ಬರನ್ನು ಆಯ್ಕೆ ಮಾಡಿ ಕಳಶ ಇಡಲು ಅವಕಾಶ ನೀಡಲಾಗುತ್ತದೆ.ಇಲ್ಲಿ ದೇವರಿಗೆ ಸಂಬಂದಿಸಿದ ಹಲವಾರು ರೀತಿಯ ಪೂಜಾ ವಿಧಾನಗಳು ವಿಶೇಷವಾಗಿ ನಡೆಯುತ್ತವೆ .. ಇಂದು ಬಾರೆ ಕಳ್ಳೆ ಗುಡಿ ನಿರ್ಮಾಣ ಕಾರ್ಯ ಸಂಭ್ರಮದಿಂದ ಜರುಗಿತು...1
- ಜಾಮೀನು ಬಳಿಕ ಕೆ ಸಿ ವೀರೇಂದ್ರ ಪಪ್ಪಿ ಹೇಳಿದ್ದೇನು1
- ಹುಬ್ಬಳ್ಳಿ–ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರದಲ್ಲಿ ನಡೆದ ಅಮಾನವೀಯ ಮರ್ಯಾದೆ ಗೇಡು ಹತ್ಯೆಯನ್ನು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ಮಹಿಳಾ ವಿಭಾಗ, ರಾಯಚೂರು ತೀವ್ರವಾಗಿ ಖಂಡಿಸಿದೆ. ಪ್ರೀತಿಸಿ ಅಂತರಜಾತಿ ವಿವಾಹವಾಗಿದ್ದ ಪರಿಶಿಷ್ಟ ಜಾತಿಯ ಯುವಕ ವಿವೇಕಾನಂದ ದೊಡ್ಡಮನಿಯನ್ನು ಮದುವೆಯಾಗಿದ್ದ ಏಳು ತಿಂಗಳ ಗರ್ಭಿಣಿ ಮಾನ್ಯಾ ಪಾಟೀಲ್ ಅವರನ್ನು ಸ್ವತಃ ತಂದೆ ಹಾಗೂ ಕುಟುಂಬಸ್ಥರು ಬರ್ಬರವಾಗಿ ಹತ್ಯೆ ಮಾಡಿರುವುದು ನಾಗರೀಕ ಸಮಾಜಕ್ಕೆ ಭಾರೀ ಆಘಾತ ಉಂಟು ಮಾಡಿದೆ ಎಂದು ಸಂಘಟನೆಯವರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಬುಧವಾರ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಪ್ರಕರಣದಲ್ಲಿ ಬಂಧಿತ ಆರೋಪಿಗಳ ಜೊತೆಗೆ ಇನ್ನೂ ಬಂಧನಕ್ಕೊಳಗಾಗದ ಎಲ್ಲ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಲಾಯಿತು.1