Shuru
Apke Nagar Ki App…
*ನರೀಪುರ ಗ್ರಾಮದಲ್ಲಿ ಸಡಗರದ ಬಸವ ಜಯಂತಿ ಆಚರಣೆ: ಜನಧ್ವನಿ ವೆಂಕಟೇಶ್ ಭಾಗಿ* ಕೊಳ್ಳೇಗಾಲ : ತಾಲೂಕಿನ ಧನಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೀಪುರ ಗ್ರಾಮದಲ್ಲಿ ಬಸವ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ 'ಜನಧ್ವನಿ' ವೆಂಕಟೇಶ್ ಅವರು ಪಾಲ್ಗೊಂಡು ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಗಣ್ಯರು, ಬಸವಣ್ಣನವರ ತತ್ವ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಶ್ರಮಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ವೃಷಭೇಂದ್ರ ಸ್ವಾಮಿ, ಉಗನಿಯ ಮಹೇಶ್, ಲೋಕೇಶ್ ಜೆಟ್ಟಿ, ವಿಜಯೇಂದ್ರ ಕೂಡ್ಲೂರು, ಮಾದೇಶ್, ಲಿಂಗಾಚಾರಿ, ಚಿನ್ನರಾಜು ಹಾಗೂ ಗ್ರಾಮದ ಮುಖಂಡರುಗಳು, ಹಿರಿಯ ಯಜಮಾನರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ವರದಿ ಉಸ್ಮಾನ್ ಖಾನ್
ಉಸ್ಮಾನ್ ಖಾನ್

More news from Mysuru and nearby areas
- ಮೈಸೂರಿನ ರಾಜರಾಜೇಶ್ವರಿ ಕಾಲೋನಿಯಲ್ಲಿ 34ನೇ ವರ್ಷದ ಕರಗ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ದೇವಿಯರಿಗೆ ವಿಶೇಷ ಪೂಜೆ, ಅಲಂಕಾರ ಹಾಗೂ ರಾತ್ರಿಪೂರ್ತಿ ನಡೆದ ಕರಗ ಮೆರವಣಿಗೆ ಭಕ್ತರನ್ನು ಆಕರ್ಷಿಸಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಮತ್ತು ಸಾಂಸ್ಕೃತಿಕ ಕಲಾತಂಡಗಳು ಮೆರುಗು ನೀಡಿದ್ದು, ಬೆಳಿಗ್ಗೆ ಮಹಾಮಂಗಳಾರತಿಯೊಂದಿಗೆ ಉತ್ಸವ ಸಂಪನ್ನಗೊಂಡಿತು.1
- ವಕ್ಫ್ ಆಸ್ತಿಗಳ 10 ಎಕರೆ ಭೂಮಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳು ದೇಶಾದ್ಯಂತ ವೈರಲ್ ಆಗಿವೆ. ಅಧಿಕೃತ ದಾಖಲೆಗಳಲ್ಲಿನ ಈ ನಕಲಿ ನಮೂದುಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ, ವ್ಯಾಪಕ ತನಿಖೆಗೆ ಒತ್ತಾಯ ಕೇಳಿಬಂದಿದೆ.1
- Post by Ramuc2
- ಆನೇಕಲ್: ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಯುವಕರು; ವಿಡಿಯೋ ವೈರಲ್. ಆನೇಕಲ್‌ನ ಹೊಸೂರು ಮುಖ್ಯರಸ್ತೆಯ ಹೊಂಪಲಘಟ್ಟ ಕ್ರಾಸ್ ಬಳಿ ಹಣದ ವಿಚಾರವಾಗಿ ಇಬ್ಬರು ಯುವಕರು ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಘಟನೆ ನಡೆದಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ಕೈಕೈ ಮಿಲಾಯಿಸಿದ ಯುವಕರು, ಸಾರ್ವಜನಿಕರ ಎದುರೇ ಕಪಾಳಮೋಕ್ಷ ಮಾಡಿಕೊಂಡಿದ್ದಾರೆ. ಈ ದೃಶ್ಯಗಳನ್ನು ಹಾದಿಹೋಕರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನನಿಬಿಡ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿ, ಅಸಭ್ಯವಾಗಿ ವರ್ತಿಸಿದ ಯುವಕರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.1
- ತಮಿಳುನಾಡಿನ ಟಿವಿಕೆ ನಾಯಕ, ನಟ ವಿಜಯ್ ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಅವರು, ಇದೀಗ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ತಮಿಳುನಾಡಿನ ದ್ರಾವಿಡ ರಾಜಕೀಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ.1
- "ಸಾನ್ವಿ ಸುದೀಪ್ ಬೆನ್ನಲ್ಲಿ ವಿಘ್ನವಿನಾಯಕ; ಗಮನ ಸೆಳೆದ ಕಲಾತ್ಮಕ ಟ್ಯಾಟೂ." "ಸಾನ್ವಿ ಸುದೀಪ್ ಬೆನ್ನಲ್ಲಿ ವಿಘ್ನವಿನಾಯಕ; ಗಮನ ಸೆಳೆದ ಕಲಾತ್ಮಕ ಟ್ಯಾಟೂ."1
- ಭಾರತದಲ್ಲಿ ಉಲೆಮಾ ಮತ್ತು ವಿದ್ವಾಂಸರ ಕಾರ್ಯಕ್ಷಮತೆ ಹಾಗೂ ಸ್ಥಿತಿಗತಿ ಕುರಿತ ವಿಷಯ ವ್ಯಾಪಕವಾಗಿ ವೈರಲ್ ಆಗಿದೆ. ಇದು ರಾಷ್ಟ್ರವ್ಯಾಪಿ ಚರ್ಚೆ ಮತ್ತು ಸಂವಾದಕ್ಕೆ ಕಾರಣವಾಗಿದೆ.1
- *ಹೆಬ್ಬಾಳ ಕೆರೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಕೃಷ್ಣ ಬೈರೇಗೌಡರು.* *ಹೆಬ್ಬಾಳ ಕೆರೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಕೃಷ್ಣ ಬೈರೇಗೌಡರು.*1
- ಚೆಕ್‌ಔಟ್ ಬಳಿಕ ರೂಮ್ ನೋಡಿ ಶಾಕ್ ಆದ ಮಾಲೀಕ ಹೋಟೆಲ್ ಸ್ವಚ್ಛತೆ ಕುರಿತು ವೈರಲ್ ಚರ್ಚೆ ಚೆಕ್‌ಔಟ್ ಬಳಿಕ ರೂಮ್ ನೋಡಿ ಶಾಕ್ ಆದ ಮಾಲೀಕ ಹೋಟೆಲ್ ಸ್ವಚ್ಛತೆ ಕುರಿತು ವೈರಲ್ ಚರ್ಚೆ1