Shuru
Apke Nagar Ki App…
ಇಂದು ವಿಧಾನಸೌಧದಲ್ಲಿ, 'ನನ್ನ ನೇತೃತ್ವದಲ್ಲಿ' 30 ದೇಶಗಳನ್ನು ಪ್ರತಿನಿಧಿಸುವ ಅನಿವಾಸಿ ಕನ್ನಡಿಗರ ನಿಯೋಗವು ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿತು. ಈ ಭೇಟಿಯ ಸಂದರ್ಭದಲ್ಲಿ, ನಿಯೋಗದ ಸದಸ್ಯರು ಮುಖ್ಯಮಂತ್ರಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.
ಸುನೀಲ್ ಲ್ ಬೆಟಗೇರಿ
ಇಂದು ವಿಧಾನಸೌಧದಲ್ಲಿ, 'ನನ್ನ ನೇತೃತ್ವದಲ್ಲಿ' 30 ದೇಶಗಳನ್ನು ಪ್ರತಿನಿಧಿಸುವ ಅನಿವಾಸಿ ಕನ್ನಡಿಗರ ನಿಯೋಗವು ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿತು. ಈ ಭೇಟಿಯ ಸಂದರ್ಭದಲ್ಲಿ, ನಿಯೋಗದ ಸದಸ್ಯರು ಮುಖ್ಯಮಂತ್ರಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.
More news from ಕರ್ನಾಟಕ and nearby areas
- ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಅರಬಗೊಂಡ ಗ್ರಾಮದ ಹತ್ತಿರವಿರುವ ಹಾವೇರಿ ಜಿಲ್ಲಾ ಹಾಲು ಒಕ್ಕೂಟದ ಮೇಗಾ ಡೈರಿ ಘಟಕಕ್ಕೆ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಕೆ.ಎಂ.ಎಫ್. ಅಧ್ಯಕ್ಷರಾದ ಶ್ರೀ ಮಂಜನಗೌಡ ಪಾಟೀಲ್, ಉಪಾಧ್ಯಕ್ಷರಾದ ಶ್ರೀ ಉಜ್ಜನಗೌಡ ಮಾವೀನತೋಪ, ಎಂ.ಡಿ. ಶ್ರೀ ಪ್ರದೀಪ ಎಸ್.ಎಂ. ಸೇರಿದಂತೆ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು.4
- ಬಂಕಾಪುರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ 2025-26ನೇ ಸಾಲಿನ ಪಠ್ಯತರ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು. ದೇಶದ ಸಂಸ್ಕೃತಿ ಹಾಗೂ ಗುಣಮಟ್ಟದ ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಯಾಸೀರ್ ಖಾನ್ ಪಠಾಣ ಒತ್ತಿ ಹೇಳಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.1
- ಗದಗ್ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕೊಂಚಿಗೇರಿ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಅಳವಡಿಸಲಾಗಿರುವ ಹೈ ಮಾಸ್ಕ್ ದೀಪ ಇಂದಿಗೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಹೈ ಮಾಸ್ಕ್ ದೀಪ ಸರಿಯಾಗಿ ಆನ್ ಆಗದಿರುವುದು ಮುಖ್ಯ ಸಮಸ್ಯೆಯಾಗಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಅವರು 'ನೋಡೋಣ' ಎಂದು ಹೇಳಿ ನಿರ್ಲಕ್ಷ್ಯ ತೋರುತ್ತಿದ್ದಾರೆ.1
- ಕಲಘಟಗಿ ತಾಲ್ಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿ ಶುಕ್ರವಾರ ಮಳೆರಾಯನ ಆಗಮನಕ್ಕಾಗಿ ಗ್ರಾಮಸ್ಥರು ವಿಶೇಷವಾಗಿ ಕಪ್ಪೆಗಳ ಮದುವೆ ನೆರವೇರಿಸಿ ಪೂಜೆ ಸಲ್ಲಿಸಿದ್ದು, ಇಡೀ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮದುವೆಗಾಗಿ ಬೆಳಿಗ್ಗೆ ಅಂಬರೀಷ್ ಕಲಬಾವಿ ಅವರ ಮನೆಯಲ್ಲಿ ಹೆಣ್ಣು ಕಪ್ಪೆಗೆ ಹಣ್ಣು ಇಡಲಾಯಿತು. ನಂತರ ಮಹೇಶ ಹೊಸಮನಿ ಅವರ ಮನೆಯಲ್ಲಿ ಗಂಡು ಕಪ್ಪೆಗೆ ಊಟ ಮಾಡಿ ಬರುವಂತಹ ವಿಶಿಷ್ಟ ಕಾರ್ಯಕ್ರಮವನ್ನು ನಡೆಸಲಾಯಿತು. ಮದುವೆ ಶಾಸ್ತ್ರದ ಭಾಗವಾಗಿ, ಗ್ರಾಮದ ಪ್ರಮುಖ ಓಣಿಗಳಲ್ಲಿ ಹಾಲ ಕಂಬ ತಂದು, ಕರಡಿ ಮಜಲು ನಡೆಸಲಾಯಿತು. ಮಹಿಳೆಯರು ಆರತಿ ಹಿಡಿದು ಕಪ್ಪೆಗಳ ಮೆರವಣಿಗೆ ಮಾಡಿದರು. ನಂತರ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಅರಶಿಣ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಹಿಂದೂ ಸಮಾಜದ ಮದುವೆ ಸಂಪ್ರದಾಯದ ಪ್ರಕಾರ ಕಪ್ಪೆಗಳನ್ನು ವಧು-ವರರಂತೆ ಅಲಂಕರಿಸಲಾಗಿತ್ತು. ಮದುವೆ ಗಂಟು ಕಟ್ಟಿ, ಹೆಣ್ಣು ಹಾಗೂ ಗಂಡು ಕಪ್ಪೆಗಳನ್ನು ಜೊತೆಯಲ್ಲಿ ಇರಿಸಿ ಅರಶಿಣ, ಕುಂಕುಮ ಹಚ್ಚಲಾಯಿತು. ಮಹಿಳೆಯರು, ಮಕ್ಕಳು ಹಾಗೂ ಹಿರಿಯರು ಸೇರಿ ಒಬ್ಬರಿಗೊಬ್ಬರು ಅರಶಿಣ ಎರಚಾಡಿ ಸಂಭ್ರಮಿಸಿದರು. ಐದು ಗಿತ್ತಿಯರು ಆರತಿ ಬೆಳಗಿ ಸುರಿಗಿ ನೀರು ಸುರಿಸಿದರು. ತದನಂತರ ಹೆಣ್ಣು ಕಪ್ಪೆಗೆ ಪತ್ತಲು, ಗಂಡು ಕಪ್ಪೆಗೆ ಬಟ್ಟೆ ತೊಡಿಸಿ, ಬಾಶಿಂಗ್ ಹಾಕಿ ಹೂವು ಮೂಡಿಸಿ, ಬಳೆ ತೊಡಿಸಿ, ಅರಶಿಣ ಬೇರು ಹಾಗೂ ಎಲೆಯಿಂದ ಕಂಕಣ ಭಾಗ್ಯ ಕಟ್ಟಿ ಮದುವೆ ಕಾರ್ಯವನ್ನು ಪೂರ್ಣಗೊಳಿಸಲಾಯಿತು. ಆದಷ್ಟು ಬೇಗನೆ ಮಳೆರಾಯ ಭೂಮಿಗೆ ಆಗಮಿಸಲಿ ಎಂದು ಗ್ರಾಮದ ಎಲ್ಲರೂ ದೇವರಲ್ಲಿ ಪ್ರಾರ್ಥನೆ ಮಾಡಿದರು. ಈ ಕಪ್ಪೆ ಮದುವೆ ಅಂಗವಾಗಿ ಗ್ರಾಮಸ್ಥರು ಅನ್ನಪ್ರಸಾದವನ್ನೂ ಏರ್ಪಡಿಸಿದ್ದರು. ಬ್ರಹ್ಮಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಎಸ್. ಬೆಣ್ಣಿ ಅವರು, ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಹಿರಿಯರ ಕಾಲದ ಪದ್ಧತಿಯಂತೆ ಗಂಡು ಮತ್ತು ಹೆಣ್ಣು ಕಪ್ಪೆ ಜೋಡಿ ಲಗ್ನ ಕಾರ್ಯವನ್ನು ಭಕ್ತಿಯ ಜೊತೆಗೆ ವಿಜೃಂಭಣೆಯಿಂದ ನೆರವೇರಿಸಲಾಗಿದೆ ಎಂದು ತಿಳಿಸಿದರು.1
- ಭಾರತೀಯ ಜನತಾ ಯುವ ಮೋರ್ಚಾ ಶಿವಮೊಗ್ಗ ವತಿಯಿಂದ ಆಯೋಜಿಸಲಾಗಿದ್ದ ಅತ್ಯಂತ ವಿಶಿಷ್ಟವಾದ "ಮೋದಿ @12 ಯುವ ಸಂವಾದ" ಕಾರ್ಯಕ್ರಮವು ಶಿವಮೊಗ್ಗ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಂವಾದದಲ್ಲಿ ಜಿಲ್ಲೆಯ ನೂರಾರು ಉತ್ಸಾಹಿ ಯುವಜನತೆ ಸಕ್ರಿಯವಾಗಿ ಭಾಗವಹಿಸಿ, ಅರ್ಥಪೂರ್ಣ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತ, ದೇಶದ ಸರ್ವತೋಮುಖ ಪ್ರಗತಿಗಾಗಿ ಜಾರಿಗೆ ತಂದ ಕ್ರಾಂತಿಕಾರಿ ಯೋಜನೆಗಳು ಹಾಗೂ ವಿಕಸಿತ ಭಾರತದ ನಿರ್ಮಾಣದಲ್ಲಿ ಮಲೆನಾಡಿನ ಯುವಶಕ್ತಿಯ ಪಾತ್ರದ ಕುರಿತು ಮುಕ್ತವಾಗಿ ಚರ್ಚಿಸಲಾಯಿತು. ದೇಶದ ಪ್ರಗತಿಗೆ ಹೊಸ ವೇಗ ನೀಡುತ್ತಿರುವ ಯುವಕರ ಆಲೋಚನೆಗಳು, ನವೀನ ಕಲ್ಪನೆಗಳು ಮತ್ತು ಅಮೂಲ್ಯವಾದ ಸಲಹೆಗಳನ್ನು ಆಲಿಸಲು ಈ ವೇದಿಕೆ ಅತ್ಯಂತ ಯಶಸ್ವಿ ಮಾಧ್ಯಮವಾಗಿ ಮೂಡಿಬಂದಿದೆ. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಚೆನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಸ್. ಅರುಣ್ ಮತ್ತು ಡಾ. ಧನಂಜಯ್ ಸರ್ಜಿ, ಹಾಗೂ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಕುಕ್ಕೆ ಸೇರಿದಂತೆ ಪ್ರಮುಖ ಗಣ್ಯರಾದ ಶ್ರೀ ಟಿ.ಡಿ. ಮೇಘರಾಜ್ ಉಪಸ್ಥಿತರಿದ್ದರು. ಶಿವಮೊಗ್ಗ ಜಿಲ್ಲೆಯ ಯುವ ಸಬಲೀಕರಣಕ್ಕೆ ಮತ್ತು ದೇಶದ ವಿಕಸಿತ ಸಂಕಲ್ಪಕ್ಕೆ ಶಕ್ತಿ ತುಂಬಲು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬಂದು ಪಾಲ್ಗೊಂಡ ಪ್ರತಿಯೊಬ್ಬ ಯುವ ಮಿತ್ರರಿಗೂ ಹಾಗೂ ಯುವ ಮೋರ್ಚಾದ ಸಮಸ್ತ ಪದಾಧಿಕಾರಿಗಳಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸಲಾಯಿತು.1
- ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿನ ವಿಐಎಸ್‍ಎಲ್ ಹಾಗೂ ಎಂಪಿಎಂ ಅವಳಿ ಕಾರ್ಖಾನೆಗಳ ಅಭಿವೃದ್ಧಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎನ್. ರಾಜು ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯು ಕಾರ್ಮಿಕ ನಾಯಕ ಕಾಮ್ರೇಡ್ ಡಿಸಿ ಮಾಯಣ್ಣನವರ 92ನೇ ಜನ್ಮದಿನಾಚರಣೆಯ ಅಂಗವಾಗಿ, ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಲು ಆಯೋಜಿಸಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಐಎಸ್‍ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ ಯಾವುದೇ ಶ್ರಮ ವಹಿಸಿಲ್ಲ ಎಂದು ಪ್ರತಿಭಟನಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಎರಡೂ ಸರ್ಕಾರಗಳು ಅಭಿವೃದ್ಧಿ ಮಾಡುವುದಾಗಿ ಹೇಳಿ ಕಾರ್ಮಿಕರಿಗೆ ಅನ್ಯಾಯ ಮಾಡಿವೆ ಎಂದು ಆರೋಪಿಸಲಾಯಿತು. ಎಂಪಿಎಂ ಕಾರ್ಖಾನೆಯನ್ನು ಅಭಿವೃದ್ಧಿಪಡಿಸಬೇಕು, ಇಲ್ಲವೇ ಕಾರ್ಖಾನೆಗೆ ನೀಡಲಾದ 72 ಸಾವಿರ ಎಕರೆ ಜಮೀನನ್ನು ಕಾರ್ಮಿಕರಿಗೆ ಹಾಗೂ ಬಡಜನರಿಗೆ ನೀಡಬೇಕು ಎಂದು ಆಗ್ರಹಿಸಲಾಯಿತು. ರೈತರು ಮತ್ತು ಕಾರ್ಮಿಕರ ಸಮಸ್ಯೆಗಳೂ ಸೇರಿದಂತೆ ಸುಮಾರು 15 ಬೇಡಿಕೆಗಳನ್ನು ಈಡೇರಿಸುವಂತೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಗೆ ಮುನ್ನ ನಗರದ ಡಾ:ಬಿ ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಹೊರಟ ಮೆರವಣಿಗೆಯು ಮುಖ್ಯರಸ್ತೆಗಳಲ್ಲಿ ಸಂಚರಿಸಿ ತಾಲೂಕು ಕಚೇರಿ ತಲುಪಿ, ಅಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು. ಪದಾಧಿಕಾರಿಗಳಾದ ಬ್ರಹ್ಮಲಿಂಗಯ್ಯ, ಬಸವರಾಜಪ್ಪ, ಎಂ.ವಿ.ಚಂದ್ರಶೇಖರ್, ಶ್ರೀನಿವಾಸ್, ಏಕಾಂತ್, ಶೇಖರ್ ಮುಂತಾದವರು ಈ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.1
- ಕೂಡ್ಲಿಗಿ ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಕಾರಣ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆರಾಯನ ಆಗಮನಕ್ಕಾಗಿ ತಾಲ್ಲೂಕಿನಾದ್ಯಂತ ವಿವಿಧ ಆಚರಣೆಗಳು ಮತ್ತು ಪೂಜೆಗಳನ್ನು ನಡೆಸಲಾಗುತ್ತಿದ್ದು, ಅದರ ಭಾಗವಾಗಿ ಶನಿವಾರ ಅಮ್ಮನಕೆರಿ ಗ್ರಾಮದಲ್ಲಿ ವಿಶೇಷ ಗುರ್ಜಿ ಪೂಜೆ ಸಲ್ಲಿಸಲಾಯಿತು. ಈ ಆಚರಣೆಯಲ್ಲಿ, ಜೋಳದ ರೊಟ್ಟಿ ಬೇಯಿಸುವ ಹಂಚಿನ ಮೇಲೆ ಸೆಗಣಿಯಿಂದ ತಯಾರಿಸಿದ ಗುರ್ಜಿಯನ್ನು ಒಬ್ಬ ಯುವಕನ ತಲೆಯ ಮೇಲೆ ಇಟ್ಟುಕೊಂಡು ಮನೆ ಮನೆಗೆ ಹೋಗಲಾಯಿತು. ಈ ವೇಳೆ ಮಹಿಳೆಯರು "ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ. ಹಳ್ಳಕೊಳ್ಳ ಸುತ್ತಾಡಿ ಬಂದೆ. ಕಾರ ಮಳೆಯೋ ಕಪ್ಪತ್ತ ಮಳೆಯೋ.. ಸುರಿ ಸುರಿ ಸುರಿಯೋ ಮಳೆರಾಯ, ಬಣ್ಣ ಕೊಡ್ತೀನಿ ಬಾರಲೇ ಮಳೆಯೇ ಸುಣ್ಣ ಕೊಡ್ತೀನಿ ಸುರಿಯಲೇ ಮಳೆಯೇ" ಎಂದು ಹಾಡುತ್ತಾ ಮಳೆಗಾಗಿ ಪ್ರಾರ್ಥಿಸಿದರು. ಅಮ್ಮನಕೆರಿ ಗ್ರಾಮದಲ್ಲಿ ಬೇಗ ಮಳೆ ಬರುವಂತೆ ಕೋರಿ ಈ ಗುರ್ಜಿ ಪೂಜೆಯನ್ನು ಆಚರಿಸಲಾಯಿತು.1
- ಶಿಗ್ಗಾವಿ ತಾಲ್ಲೂಕಿನ ಕ್ಯಾಲಕೊಂಡ ಗ್ರಾಮದಲ್ಲಿ ಇಬ್ಬರು ಯುವ ಅಗ್ನಿವೀರರಿಗೆ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಹಾಗೂ ಗೆಳೆಯರ ಬಳಗದ ವತಿಯಿಂದ ಭವ್ಯ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಗ್ನಿವೀರರಾಗಿ ಆಯ್ಕೆಯಾದ ಕೃಷ್ಣಪ್ಪ ಮಂಜುನಾಥ ನಡುವಿನಮನಿ ಮತ್ತು ಪ್ರಶಾಂತ ನಾಗಪ್ಪ ಶಿಗ್ಗಾವಿ ಅವರು ಮಹಾರಾಷ್ಟ್ರದ ನಾಸಿಕ್ ಆರ್.ಟಿ. ತರಬೇತಿ ಕೇಂದ್ರದಲ್ಲಿ ತರಬೇತಿಗೆ ಹಾಜರಾಗಲು ಹೊರಡುತ್ತಿರುವ ಹಿನ್ನೆಲೆಯಲ್ಲಿ ಈ ಗೌರವ ಸಮಾರಂಭ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ರಾಜಶೇಖರಸ್ವಾಮಿ ಹಿರೇಮಠ ಅವರು ಅಗ್ನಿವೀರರಿಗೆ ಸಿಹಿ ತಿನ್ನಿಸುವ ಮೂಲಕ ಶುಭಾಶಯ ಕೋರಿದರು. ಇಂದಿನ ಯುವಕರು ಯಾವುದೇ ಚಟಗಳಿಗೆ ದಾಸರಾಗದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕು ಎಂದು ಕಿವಿಮಾತು ಹೇಳಿದರು. ಈ ಇಬ್ಬರು ಯುವಕರು ದೇಶಸೇವೆ ಮಾಡಲು ಆಯ್ಕೆಯಾಗಿರುವುದು ನಮ್ಮ ಕ್ಯಾಲಕೊಂಡ ಗ್ರಾಮಕ್ಕೆ ಹೆಮ್ಮೆಯ ವಿಷಯ ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಯುವ ಧುರೀಣ ಮನೋಹರ್ ಹಾದಿಮನಿ, ಈ ಇಬ್ಬರು ಯುವಕರು ಅಗ್ನಿವೀರರಾಗಿ ಆಯ್ಕೆಯಾಗಿ ನಮ್ಮೂರಿನ ಮುಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು. ಮುಂದಿನ ಯುವಕರು ಸಹ ಇದೇ ರೀತಿ ದೇಶಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ನಾಗರಿಕ ಸೇವಾ ಕೇಂದ್ರದ ನಿರ್ವಾಹಕ ಮುತ್ತಪ್ಪ ಎಸ್. ಮಾತನಾಡಿ, ಇಬ್ಬರು ಅಗ್ನಿವೀರರ ಶ್ರಮ ಸಾಕಷ್ಟಿದೆ ಹಾಗೂ ಬಡತನದಲ್ಲಿ ಬೆಳೆದು ನಿರಂತರ ಪರಿಶ್ರಮದ ಫಲವಾಗಿ ದೇಶಸೇವೆಗೆ ಹೊರಡುತ್ತಿರುವುದು ಗ್ರಾಮಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಶ್ಲಾಘಿಸಿದರು. ಈ ಸನ್ಮಾನ ಕಾರ್ಯಕ್ರಮದಲ್ಲಿ ಜಾಪರ ಬಾಗವಾನ, ಮಾಂತೇಶ ಮುಶಮ್ಮನವರ, ಮಂಜುನಾಥ ಹೊಸಮನಿ, ವೀರುಪಾಕ್ಷರೆಡ್ಡಿ ಅರಳಿಕಟ್ಟಿ, ಮನೋಜ ಹೂಗಾರ, ಬಾಬು ಗೊಣೆಪ್ಪನವರ, ರಿಯಾಜ ಮುಲ್ಲಾ, ಕಾರ್ತಿಕ ಚಿನ್ನಣ್ಣವರ, ಖಲಂದರ ಅಂಚಿ, ಹರೀಶ ಕಳ್ಳಮನಿ, ಹಾಗೂ ಗ್ರಾಮದ ಗುರು ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.1