logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

*ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ* *ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ* *ಬಸವ ತತ್ವ ಅಧ್ಯಯನ ಪೀಠ ಸ್ಥಾಪನೆ ಪ್ರಸ್ತಾಪ ಪರಿಶೀಲನೆ- ಕುಲಪತಿ ಪ್ರೊ.ರಮೇಶ್.ಬಿ.* ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ನಾಡಿನ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವಿಚಾರಧಾರೆಯ ಬಗ್ಗೆ ಯುವ ಪೀಳಿಗೆಯಲ್ಲಿ ಹೆಚ್ಚಿನ ಅರಿವು ಮೂಡಿಸಲು "ಬಸವ ತತ್ವ ಅಧ್ಯಯನ ಪೀಠ" ಸ್ಥಾಪಿಸುವ ಪ್ರಸ್ತಾಪ ಪರಿಶೀಲನೆಯಲ್ಲಿದೆ ಎಂದು ಕುಲಪತಿಗಳಾದ ಪ್ರೊ. ರಮೇಶ್.ಬಿ. ಪ್ರಕಟಿಸಿದ್ದಾರೆ. ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ರಾಜಾಜಿ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಸಮಸಮಾಜ ನಿರ್ಮಾಣದ ಗುರಿ ಸಾಧನೆಯ ನಿಟ್ಟಿನಲ್ಲಿ 12ನೇ ಶತಮಾನದ ಸಮಾಜ ಸುಧಾರಕ ಕಾಯಕಯೋಗಿ ಬಸವಣ್ಣನವರ ಕೊಡುಗೆ ಅನನ್ಯ ಎಂದು ಬಣ್ಣಿಸಿದರು. ಜಾತಿ ಪದ್ಧತಿ, ಕಂದಾಚಾರ ಮತ್ತು ಮೌಢ್ಯತೆಯ ಕೂಪದಲ್ಲಿ ಸಿಲುಕಿದ್ದ ಅಂದಿನ ವ್ಯವಸ್ಥೆಯಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಲಿಂಗ ಸಮಾನತೆಯ ಆಶಯಗಳನ್ನು ದಿಟ್ಟತನದಿಂದ ಎತ್ತಿಹಿಡಿಯುವ ಮೂಲಕ ಬಸವಣ್ಣನವರು ಕ್ರಾಂತಿಕಾರಿ ಪರಿಣಾಮ ಬೀರಿದರೆಂದು ಅವರು ವಿಶ್ಲೇಷಿಸಿದರು. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ ಬಸವಣ್ಣನವರು, ಕಾಯಕವೇ ಕೈಲಾಸ ಎಂಬ ಧ್ಯೇಯದ ಮೂಲಕ ಶ್ರಮ ಸಂಸ್ಕೃತಿಯ ಸಂದೇಶವನ್ನು ಪ್ರತಿಪಾದಿಸಿದರೆಂದು ಅವರು ವಿಶ್ಲೇಷಿಸಿದರು. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಬಸವಣ್ಣನವರ ವಿಚಾರಧಾರೆ ಚಲನಶೀಲತೆ ತತ್ವಾಧಾರಿತ ಸಾರ್ವಕಾಲಿಕ ವೈಜ್ಞಾನಿಕ ಸತ್ಯವೆಂದು ಪ್ರೊ. ರಮೇಶ್.ಬಿ. ವ್ಯಾಖ್ಯಾನಿಸಿದರು. ಶರಣ ಚಳವಳಿಯ ಉದಾತ್ತ ಆದರ್ಶಗಳು ಇಂದಿಗೂ ಅತ್ಯಂತ ಪ್ರಸ್ತುತ ಎಂದು ಅವರು ಅಭಿಪ್ರಾಯಪಟ್ಟರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಿಂಡಿಕೇಟ್ ಸದಸ್ಯರಾದ ಕೆ.ಪಿ.ಪಾಟೀಲ್ ರವರು ಅಂತರ್ಜಾತೀಯ ವಿವಾಹದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ ಬಸವಣ್ಣನವರು ಸಾಮಾಜಿಕ ಸಮಾನತೆಯ ಹರಿಕಾರರೆಂದು ಕೊಂಡಾಡಿದರು. ವೈದಿಕ ಧರ್ಮ ಮತ್ತು ಸಂಸ್ಕೃತಿಯನ್ನು ತಿರಸ್ಕರಿಸಿದ ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಮಹತ್ಕಾರ್ಯದಲ್ಲಿ ಮಹಿಳೆಯರೂ ಸೇರಿದಂತೆ ಶೋಷಿತ ಜನವರ್ಗವನ್ನು ತೊಡಗಿಸಿದರೆಂದು ಅವರು ವಿವರಿಸಿದರು. ಕುಲಸಚಿವ (ಮೌಲ್ಯಮಾಪನ) ಪ್ರೊ.ರಮೇಶ. ಬಿ.ಕುಡೇನಟ್ಟಿ, ಹಿರಿಯ ಪ್ರಾಧ್ಯಾಪಕರಾದ ಪ್ರೊ. ಪಿ.ಆರ್.ಚೇತನ, ಸಿಂಡಿಕೇಟ್ ಸದಸ್ಯರಾದ ಡಾ. ಕೃಷ್ಣರಾಮ್, ಶಿವಕುಮಾರ್, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾದ ಡಾ. ಅಬ್ದುಲ್ ಖಾದರ್ ಮತ್ತು ಧರ್ಮೇಂದ್ರ ಕುಮಾರ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ.ಗೋಪಿ. ಎಸ್.ಎಂ. ಕಾರ್ಯಕ್ರಮ ನಿರೂಪಿಸಿದರು. ಡಾ.ಮಂಜು.ಸಿ.ಎನ್. ಮತ್ತು ಡಾ ಪ್ರಭು ವಚನ ಗಾಯನ ಪ್ರಸ್ತುತಪಡಿಸಿದರು. ಡಾ. ತೇಜೇಶ್ವರ್ ಸ್ವಾಗತಿಸಿ ಡಾ ಅಖ್ತರ್ ವಂದಿಸಿದರು.

6 hrs ago
user_Vinod
Vinod
ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
6 hrs ago
7aee6890-ffd4-48c9-8fd2-fd101605969a

More news from ಕರ್ನಾಟಕ and nearby areas
  • ಬಸವನಗುಡಿಯಲ್ಲಿ ಅಗ್ನಿ ಅವಘಡ, ಆತಂಕ ಟೆಂಟ್‌ಗಳಿಗೆ ಬೆಂಕಿ, ದಟ್ಟ ಹೊಗೆ ವ್ಯಾಪ್ತಿ
    1
    ಬಸವನಗುಡಿಯಲ್ಲಿ ಅಗ್ನಿ ಅವಘಡ, ಆತಂಕ
ಟೆಂಟ್‌ಗಳಿಗೆ ಬೆಂಕಿ, ದಟ್ಟ ಹೊಗೆ ವ್ಯಾಪ್ತಿ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • ನಾರಿಶಕ್ತಿ ವಂದನಾ ಮಸೂದೆ ಮಂಡನೆ ವಿರುದ್ಧ ಮತ ಚಲಾಯಿಸಿದ ಕಾಂಗ್ರೇಸ್ ಮಿತ್ರ ಪಕ್ಷಗಳ ನಡೆ ಖಂಡಿಸಿ ಬೃಹತ್ ಪ್ರತಿಭಟನೆ
    1
    ನಾರಿಶಕ್ತಿ ವಂದನಾ ಮಸೂದೆ ಮಂಡನೆ ವಿರುದ್ಧ ಮತ ಚಲಾಯಿಸಿದ ಕಾಂಗ್ರೇಸ್ ಮಿತ್ರ ಪಕ್ಷಗಳ ನಡೆ ಖಂಡಿಸಿ
ಬೃಹತ್ ಪ್ರತಿಭಟನೆ
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    10 hrs ago
  • Post by Venu Gopal
    2
    Post by Venu Gopal
    user_Venu Gopal
    Venu Gopal
    Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    4 hrs ago
  • ಹನೂರು: ಉಡುತೊರೆಹಳ್ಳ ಜಲಾಶಯದ ಕೆಸರಿನಲ್ಲಿ ಸಿಲುಕಿಕೊಂಡು ಪಾರಾದ ಕಾಡಾನೆ ಅಸ್ವಸ್ಥಗೊಂಡು ಮೇಲಕ್ಕೆ ಏಳಲಾಗದೆ ಸಂಕಷ್ಟದಲ್ಲಿದೆ. ಮಲೆ ಮಹದೇಶ್ವರ ವನ್ಯಧಾಮದಿಂದ ನೀರಿಗಾಗಿ ಬಂದ ಮೂರು ಆನೆಗಳಲ್ಲಿ ಎರಡು ಸುರಕ್ಷಿತವಾಗಿ ಕಾಡು ಸೇರಿದ್ದರೆ, ಮತ್ತೊಂದು ಆನೆ ದಡ ಸೇರಿದ್ದರೂ ಮೆಲಕ್ಕೆ ಏಳಲಾಗದೆ ದುರ್ಬಲಗೊಂಡಿದೆ. ಪಶುವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಸಾಕಾನೆ ‘ಮಹೇಂದ್ರ’ ಸಹಾಯದಿಂದ ಮೇಲಕ್ಕೆತ್ತಲು ಅರಣ್ಯ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. .
    1
    ಹನೂರು: ಉಡುತೊರೆಹಳ್ಳ ಜಲಾಶಯದ ಕೆಸರಿನಲ್ಲಿ ಸಿಲುಕಿಕೊಂಡು ಪಾರಾದ ಕಾಡಾನೆ ಅಸ್ವಸ್ಥಗೊಂಡು ಮೇಲಕ್ಕೆ ಏಳಲಾಗದೆ ಸಂಕಷ್ಟದಲ್ಲಿದೆ.
ಮಲೆ ಮಹದೇಶ್ವರ ವನ್ಯಧಾಮದಿಂದ ನೀರಿಗಾಗಿ ಬಂದ ಮೂರು ಆನೆಗಳಲ್ಲಿ ಎರಡು ಸುರಕ್ಷಿತವಾಗಿ ಕಾಡು ಸೇರಿದ್ದರೆ, ಮತ್ತೊಂದು ಆನೆ ದಡ ಸೇರಿದ್ದರೂ ಮೆಲಕ್ಕೆ ಏಳಲಾಗದೆ ದುರ್ಬಲಗೊಂಡಿದೆ. ಪಶುವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಸಾಕಾನೆ ‘ಮಹೇಂದ್ರ’ ಸಹಾಯದಿಂದ ಮೇಲಕ್ಕೆತ್ತಲು ಅರಣ್ಯ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.
.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    6 hrs ago
  • ಹನೂರು: "12ನೇ ಶತಮಾನದಲ್ಲಿ ಜಗಜ್ಯೋತಿ ವಿಶ್ವಗುರು ಬಸವಣ್ಣನವರು ಅನುಭವ ಮಂಟಪದ ಮೂಲಕ ಜಗತ್ತಿಗೆ ಸಮಾನತೆ, ಸಹೋದರತೆ ಮತ್ತು ಕಾಯಕ ನಿಷ್ಠೆಯ ಆದರ್ಶಗಳನ್ನು ಸಾರಿದ್ದಾರೆ. ಅಂತಹ ಮಹಾನ್ ದಾರ್ಶನಿಕರ ತತ್ವಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಲು ಸಾಧ್ಯ," ಎಂದು ಶಾಸಕ ಎಂ.ಆರ್. ಮಂಜುನಾಥ್ ಅಭಿಪ್ರಾಯಪಟ್ಟರು. ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ ಆರ್ ಮಂಜುನಾಥ್ ಸ್ವಾರ್ಥ ಬಿಡಿ, ಕಾಯಕ ನಂಬಿ: ಬಸವಣ್ಣನವರ ಆದರ್ಶಗಳ ಬಗ್ಗೆ ಮಾತನಾಡುವ ನಾವು ನಂತರ ಅದನ್ನು ಮರೆಯುತ್ತಿದ್ದೇವೆ. ಸ್ವಾರ್ಥ ಮತ್ತು 'ನಾನು' ಎಂಬ ಅಹಂಭಾವವನ್ನು ಬಿಟ್ಟು, 'ಕಾಯಕವೇ ಕೈಲಾಸ' ಎಂಬ ತತ್ವದಡಿ ನಡೆದರೆ ಸಮಾಜ ಸುಧಾರಣೆ ಸಾಧ್ಯ. ಮುಂದಿನ ಪೀಳಿಗೆಗೆ ಮಾದರಿಯಾಗಿ: ಇಂದು ನಾವು ಮಾಡುವ ಕೆಲಸಗಳನ್ನು ನಮ್ಮ ಮಕ್ಕಳು ಅನುಸರಿಸುತ್ತಾರೆ. ಹಾಗಾಗಿ ಪೋಷಕರು ಮತ್ತು ಹಿರಿಯರು ಮಹನೀಯರ ತತ್ವಗಳನ್ನು ಪಾಲಿಸುವ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಪ್ರತಿಮೆ ನಿರ್ಮಾಣಕ್ಕೆ ಭರವಸೆ: ಪಟ್ಟಣದಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡುವ ಸಂಬಂಧ ಕಾಲಾವಕಾಶ ನೀಡುವಂತೆ ಕೋರಿದ ಶಾಸಕರು, ಸಮುದಾಯದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. "ಮಹನೀಯರ ಜಯಂತಿಗಳು ಒಂದು ದಿನದ ಆಚರಣೆಯಾಗಬಾರದು. ಅವರ ಸಿದ್ದಾಂತಗಳು ನಮ್ಮ ಬದುಕಿನ ಭಾಗವಾದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ." — ಎಂ.ಆರ್. ಮಂಜುನಾಥ್, ಶಾಸಕರು. ಗಣ್ಯರ ಉಪಸ್ಥಿತಿ:ಈ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚೈತ್ರಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ರೇಖಾ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷೆ ಪ್ರತಿಮ ಮಹದೇವ್ ಉಪಸ್ಥಿತರಿದ್ದರು. ಅಲ್ಲದೆ ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಜಿಲ್ಲಾ ನಿರ್ದೇಶಕ ಬಸವರಾಜು, ಮುಖಂಡರುಗಳಾದ ಮುರುಡೇಶ್ವರ ಸ್ವಾಮಿ, ಟಿ. ಸದಾಶಿವ ಮೂರ್ತಿ, ಡಿ.ಕೆ ರಾಜು, ಉದ್ದನೂರು ಗಿರೀಶ್, ಪ್ರಮೋದ್, ವಿನೋದ್, ಉಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು. ವರದಿ ಉಸ್ಮಾನ್ ಖಾನ್
    3
    ಹನೂರು: "12ನೇ ಶತಮಾನದಲ್ಲಿ ಜಗಜ್ಯೋತಿ ವಿಶ್ವಗುರು ಬಸವಣ್ಣನವರು ಅನುಭವ ಮಂಟಪದ ಮೂಲಕ ಜಗತ್ತಿಗೆ ಸಮಾನತೆ, ಸಹೋದರತೆ ಮತ್ತು ಕಾಯಕ ನಿಷ್ಠೆಯ ಆದರ್ಶಗಳನ್ನು ಸಾರಿದ್ದಾರೆ. ಅಂತಹ ಮಹಾನ್ ದಾರ್ಶನಿಕರ ತತ್ವಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಲು ಸಾಧ್ಯ," ಎಂದು ಶಾಸಕ ಎಂ.ಆರ್. ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ ಆರ್ ಮಂಜುನಾಥ್
ಸ್ವಾರ್ಥ ಬಿಡಿ, ಕಾಯಕ ನಂಬಿ: ಬಸವಣ್ಣನವರ ಆದರ್ಶಗಳ ಬಗ್ಗೆ ಮಾತನಾಡುವ ನಾವು ನಂತರ ಅದನ್ನು ಮರೆಯುತ್ತಿದ್ದೇವೆ. ಸ್ವಾರ್ಥ ಮತ್ತು 'ನಾನು' ಎಂಬ ಅಹಂಭಾವವನ್ನು ಬಿಟ್ಟು, 'ಕಾಯಕವೇ ಕೈಲಾಸ' ಎಂಬ ತತ್ವದಡಿ ನಡೆದರೆ ಸಮಾಜ ಸುಧಾರಣೆ ಸಾಧ್ಯ.
ಮುಂದಿನ ಪೀಳಿಗೆಗೆ ಮಾದರಿಯಾಗಿ: ಇಂದು ನಾವು ಮಾಡುವ ಕೆಲಸಗಳನ್ನು ನಮ್ಮ ಮಕ್ಕಳು ಅನುಸರಿಸುತ್ತಾರೆ. ಹಾಗಾಗಿ ಪೋಷಕರು ಮತ್ತು ಹಿರಿಯರು ಮಹನೀಯರ ತತ್ವಗಳನ್ನು ಪಾಲಿಸುವ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು.
ಪ್ರತಿಮೆ ನಿರ್ಮಾಣಕ್ಕೆ ಭರವಸೆ: ಪಟ್ಟಣದಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡುವ ಸಂಬಂಧ ಕಾಲಾವಕಾಶ ನೀಡುವಂತೆ ಕೋರಿದ ಶಾಸಕರು, ಸಮುದಾಯದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
"ಮಹನೀಯರ ಜಯಂತಿಗಳು ಒಂದು ದಿನದ ಆಚರಣೆಯಾಗಬಾರದು. ಅವರ ಸಿದ್ದಾಂತಗಳು ನಮ್ಮ ಬದುಕಿನ ಭಾಗವಾದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ."
— ಎಂ.ಆರ್. ಮಂಜುನಾಥ್, ಶಾಸಕರು.
ಗಣ್ಯರ ಉಪಸ್ಥಿತಿ:ಈ ಸಂಧರ್ಭದಲ್ಲಿ 
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚೈತ್ರಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ರೇಖಾ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷೆ ಪ್ರತಿಮ ಮಹದೇವ್ ಉಪಸ್ಥಿತರಿದ್ದರು.
ಅಲ್ಲದೆ ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಜಿಲ್ಲಾ ನಿರ್ದೇಶಕ ಬಸವರಾಜು, ಮುಖಂಡರುಗಳಾದ ಮುರುಡೇಶ್ವರ ಸ್ವಾಮಿ, ಟಿ. ಸದಾಶಿವ ಮೂರ್ತಿ, ಡಿ.ಕೆ ರಾಜು, ಉದ್ದನೂರು ಗಿರೀಶ್, ಪ್ರಮೋದ್, ವಿನೋದ್, ಉಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ ಉಸ್ಮಾನ್ ಖಾನ್
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    10 hrs ago
  • Post by Masood khan
    1
    Post by Masood khan
    user_Masood khan
    Masood khan
    ತುಮಕೂರು, ತುಮಕೂರು, ಕರ್ನಾಟಕ•
    17 hrs ago
  • Share your fantasy Avatar on socials with a caption on “Why Dark fantasy is the tastiest cookie?” and tag *@sunfeastdarkfantasy* with the hashtag *#millionfantasies* to stand a chance to *Party with SRK* along with a chance to win 1 million exciting prizes like *SUV, Bike, International Trip etc.*
    1
    Share your fantasy Avatar on socials with a caption on “Why Dark fantasy is the tastiest cookie?” and tag *@sunfeastdarkfantasy* with the hashtag *#millionfantasies* to stand a chance to *Party with SRK* along with a chance to win 1 million exciting prizes like *SUV, Bike, International Trip etc.*
    user_Chethana Muniswamygowda
    Chethana Muniswamygowda
    Press advisory Harohalli, Ramanagara•
    4 hrs ago
  • ಬಿರಿಯಾನಿ–ಸೀರೆಗೆ ಜನರ ನೂಕುನುಗ್ಗಲು ಟೇಕಲ್ ಕಾರ್ಯಕ್ರಮದಲ್ಲಿ ಗೊಂದಲ, ನಿಯಂತ್ರಣಕ್ಕೆ ಹರಸಾಹಸ
    1
    ಬಿರಿಯಾನಿ–ಸೀರೆಗೆ ಜನರ ನೂಕುನುಗ್ಗಲು
ಟೇಕಲ್ ಕಾರ್ಯಕ್ರಮದಲ್ಲಿ ಗೊಂದಲ, ನಿಯಂತ್ರಣಕ್ಕೆ ಹರಸಾಹಸ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    9 hrs ago
  • ಮಹಿಳಾ ಮೀಸಲಾತಿ ವಿರೋಧದ ಆರೋಪ: ಕಾಂಗ್ರೆಸ್‌ ವಿರುದ್ಧ ಕೋಲಾರ BJP ಬೃಹತ್‌ ಪ್ರತಿಭಟನೆ
    1
    ಮಹಿಳಾ ಮೀಸಲಾತಿ ವಿರೋಧದ ಆರೋಪ: ಕಾಂಗ್ರೆಸ್‌ ವಿರುದ್ಧ ಕೋಲಾರ BJP ಬೃಹತ್‌ ಪ್ರತಿಭಟನೆ
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.