ಅಳ್ನಾವರ ತಾಲ್ಲೂಕ ೫ ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರದಾನ ಕಾರ್ಯದರ್ಶಿ ಶಂಕರ ಹಲಗತ್ತಿ ಉದ್ಘಾಟಿಸಿದರು. ಅಳ್ನಾವರ ತಾಲ್ಲೂಕ ೫ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ಕಟ್ಟಿಗೆ ನಾಡಲ್ಲಿ ಕನ್ನಡದ ಕಂಪು ಪಸರಿಸಿದ ಅರ್ಥಪೂರ್ಣ ಸಮ್ಮೇಳನ ಭವ್ಯ ಇತಿಹಾಸ ಹೊಂದಿದ ಕನ್ನಡ ನಮ್ಮೆಲ್ಲರ ಹೃದಯ ಭಾಷೆಯಾಗಿ ವಿಜ್ರಂಬಿಸಬೇಕು ಅಳ್ಳಾವರ(ಧಾರವಾಡ):ಭವ್ಯ ಇತಿಹಾಸ, ಪರಂಪರೆ ಹೊಂದಿದ ಸಮೃದ್ಧವಾದ ಕನ್ನಡ ಭಾಷೆ ನಾಡಿನ ಜನರ ಹೃದಯದ ಭಾಷೆಯಾಗಿ ವಿಂಜ್ರಬಿಸಬೇಕು. ಕನ್ನಡದ ಪ್ರಜ್ಞೆ, ಅಭಿಮಾನ ಎಲ್ಲರ ಮನವನ್ನು ಸ್ಪೂರ್ತಿದಾಯಕವಾಗಿ ತಣಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು. ಇಲ್ಲಿನ ಉಮಾ ಭವನದಲ್ಲಿ ಬುಧವಾರ ನಡೆದ ತಾಲ್ಲೂಕ ೫ ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿ, ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಹೀಗೆ ಮೂರು ಹಂತದಲ್ಲಿ ಕನ್ನಡ ಭಾಷೆ ಬೆಳವಣಿಗೆ ಕಂಡಿದೆ.ಈ ಭಾಷೆ ಆಳವಾಗಿ ಜನರ ಮನಸ್ಸಲ್ಲಿ ಬೇರೂರಲು ಕನ್ನಡದ ಕಟ್ಟಾಳುಗಳು,ಸಾಹಿತಿಗಳು,ಚಿಂತಕರು ಶ್ರಮಿಸಬೇಕು ಎಂದರು. ಮರಾಠಿ, ಉರ್ದು, ತೆಲಗು ಬಹು ಭಾಷೆಯ ತಾಣವಾದ ಗಡಿ ಭಾಗದ ಅಳ್ನಾವರದಲ್ಲಿ ಕನ್ನಡ ಕಂಪು ಸದಾ ಹರಿಯಲು ಸಾಹಿತ್ಯ ಪರಿಷತ್ ಕಾರ್ಯ ಯೋಜನೆ ಹಾಕಿಕೊಳ್ಳಬೇಕು. ಕನ್ನಡದ ಅಸ್ಮಿತೆ ಹೆಚ್ಚಿಸುವ ಆಧ್ಯತೆ ನೀಡುವ ಮೂಲಕ ಈ ಭಾಗದ ಭಾಷಾ ಸವಾಲುಗಳನ್ನು ಮೆಟ್ಟಿ ನಿಂತು ಕನ್ನಡ ಕಟ್ಟಲು ಸಜ್ಜಾಗಬೇಕು. ಇಂದಿನ ಅರ್ಥಪೂರ್ಣ ಗೋಷ್ಟಿಗಳು ಕನ್ನಡ ಭಾಷೆಯ ಪ್ರಭುತ್ಸ ಎತ್ತಿ ಹಿಡಿಯಲಿ ಎಂದು ಆಶಿಸಿದರು. ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ದುಸ್ಥಿತಿ ಬಂದಿದ್ದು ಅತ್ಯಂತ ವಿಷಾದಕರ, ಸರ್ಕಾರ ಮೆಗ್ನೆಟ್ ಎಂಬ ಹೊಸ ಹೆಸರಿನ ಪಬ್ಲಿಕ್ ಶಾಲೆ ತೆರೆದು ಸನಿಹದ ಕನ್ನಡ ಶಾಲೆಗಳನ್ನು ಅದರಲ್ಲಿ ಮರ್ಜ ಮಾಡಲು ಹೊರಟಿದ್ದು ತೀರಾ ವಿಷಾಧನೀಯ. ಕನ್ನಡ ಶಾಲೆಗಳಿಗೆ ಮೂಲಭೂತ್ ಸೌಲಭ್ಯ ಒದಗಿಸಿ ಶಾಲೆಗಳ ಅಭ್ಯುದಯ ಕೈಗೊಳ್ಳಬೇಕು ಎಂದರು. ದಿವ್ಯ ಸಾನಿದ್ಯ ವಹಿಸಿದ್ದ ಬಿಳಕಿ- ಅವರೊಳ್ಳಿಯ ಚನ್ನಬಸವ ದೇವರು ಸ್ವಾಮೀಜಿ ಆಶೀವರ್ಚನ ನೀಡಿ, ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಲು ಎಲ್ಲರೂ ಶ್ರಮಿಸಬೇಕು. ನಿಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸಬೇಕು. ಹಳ್ಳಿಗಳಲ್ಲಿ ಕೂಡಾ ಕನ್ನಡದ ಭಾಷೆ ಮಾರ್ದನಿಸಬೇಕು. ಕನ್ನಡದ ತೇರು ಎಳೆಯಲು ಎಲ್ಲರೂ ಟೊಂಕ ಕಟ್ಟಿ ನಿಲ್ಲಬೇಕು ಎಂದರು. ನಾಡ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗಣ್ಯರ ಹಾಗೂ ನಿವೃತ್ತ ಶಿಕ್ಷಕರ, ಅಧಿಕಾರಿಗಳ ಸತ್ಕಾರ ನಡೆಯಿತು. ಬಿ.ಎಂ. ಕಾಪೋಲಕರ ಬರೆದ " ಮೆಚ್ಚಿ ಬರೆದೆನು" ಪುಸ್ತಕ ಬಿಡುಗಡೆಗೊಳಿಸಲಾಯಿತು. ಮುರಾರ್ಜಿ ದೇಸಾಯಿ ಶಾಲೆಗೆ ಆಯ್ಕೆಯಾದ ಪ್ರಣನ್ಯ ಬಾಗೇವಾಡಿ ವಿದ್ಯಾರ್ಥಿನಿಯನ್ನು ಸತ್ಕರಿಸಲಾಯಿತು. ಸಮ್ಮೇಳನಾಧ್ಯಕ್ಷ ಡಾ. ಬಸವರಾಜ ಮೂಡಬಾಗಿಲ್, ಅವರ ಧರ್ಮಪತ್ನಿ ಸರಸ್ವತಿ ಮೂಡಬಾಗಿಲ್, ಕಸಾಪ ತಾಲ್ಲೂಕ ಘಟಕದ ಅಧ್ಯಕ್ಷ ಗುರುರಾಜ ಸಬನೀಸ್, ತಾಲ್ಲೂಕ ಪಂಚಾಯಿತಿ ಇಓ ಪ್ರಶಾಂತ ತುರ್ಕಾಣಿ, ಎ.ಂಎ. ಮಂಗಳಗಟ್ಟಿ, ಅಜ್ಜಪ್ಪ ಕುರುಬರ, ಎಸ್.ಬಿ. ಪಾಟೀಲ, ವಿನಾಯಕ ಕುರುಬರ, ಬಸವರಾಜ ಯದ್ದಲಗುಡ್ಡ, ಪ್ರಕಾಶ ಮುಗದಮು, ನಿಂಗಪ್ಪ ಬೇಕ್ವಾಡಕರ, ಶ್ರೀಕಾಂತ ಗಾಯಕವಾಡ, ಐ.ಬಿ. ಶೀವಂತರಮಠ, ತಹಶೀಲ್ದಾರ್ ಡಾ. ಡಿ.ಎಚ್ ಹೂಗಾರ, ಎಚ್.ಎ. ಕೊಚ್ಚರಗಿ, ತೈಯಬ್ ಮೌಲಾನಾ, ಬಾಬಾಜಾನ ಮುಲ್ಲಾ, ಅಮೋಲ ಗುಂಜೀಕರ, ನದೀಮ ಕಾಂಟ್ರಾö್ಯಕ್ಟರ್, ಶಶಿಧರ ಇನಾಮದಾರ, ಶಿವಾನಂದ ಬಾವಿಕಟ್ಟಿ, ಜಯಶ್ರೀ ಉಡುಪಿ, ಸುಮಾ ಸೊಪ್ಪಿ, ವಿ.ಎಸ್. ಕೌಜಲಗಿ, ವೀರಣ್ಣ ವಡ್ಡಿನ್, ಪ್ರವೀಣ ಪವಾರ ಇದ್ದರು. ......................... ಸಮ್ಮೇಳನಾಧ್ಯಕ್ಷ ಡಾ ಬಸವರಾಜ ಮೂಡಬಾಗಿಲ್ ಅವರ ನುಡಿಗಳು ಭಾಷಾ ಸಂಸ್ಕೃತಿ ರಕ್ಷಣೆಗೆ ಒತ್ತು ನೀಡಲು ಸಾಹಿತ್ಯ ಸಮ್ಮೇಳನ ಒತ್ತು ನೀಡುವುದರ ಜೊತೆಗೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಯ ಅಗತ್ಯವನ್ನು ಒತ್ತಿಹೇಳಿದರು. ಗಡಿನಾಡ ಹಾಗೂ ಹೊರನಾಡ ಕನ್ನಡಿಗರ ಸಮಸ್ಯೆಗಳತ್ತ ಕರ್ನಾಟಕ ಸರ್ಕಾರ ವಿಶೇಷ ಗಮನ ಹರಿಸಬೇಕೆಂದು ಆಗ್ರಹಿಸಿದರು. ಅಳ್ನಾವರದ ಇತಿಹಾಸ, ಭೌಗೋಳಿಕ ವೈಶಿಷ್ಟ್ಯತೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಸ್ಮರಿಸಿದ ಅವರು, ಇಲ್ಲಿ ವಿವಿಧ ಭಾಷೆಗಳ ಜನರು ಸೌಹಾರ್ದದಿಂದ ಬದುಕುತ್ತಿರುವುದನ್ನು ಪ್ರಶಂಸಿದರು. ಕನ್ನಡ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಗೆ ಸ್ಥಳೀಯರ ಸಹಕಾರದ ಅಗತ್ಯವಿದೆ ಎಂದರು. ಯುವ ಕವಿಗಳು ಮತ್ತು ಸಾಹಿತ್ಯಿಕರು ನಾಡು-ನುಡಿ-ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸೃಜನಾತ್ಮಕ ಕೃತಿಗಳನ್ನು ರಚಿಸಬೇಕು. ಸಮಾಜದಲ್ಲಿ ಶಾಂತಿ, ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಸಾಹಿತ್ಯದ ಪಾತ್ರ ಅತ್ಯಂತ ಮಹತ್ವದ್ದೆಂದು ಅಭಿಪ್ರಾಯಪಟ್ಟರು. ............ ನಿರ್ಣಯಗಳು ೧: ಅಳ್ನಾವರ ಪಟ್ಟಣದಲ್ಲಿ ಸಾಹಿತ್ಯ ಭವನದ ನಿರ್ಮಾಣ ಆಗಬೇಕು. ೨: ಗಡಿಭಾಗದ ಕನ್ನಡ ಶಾಲೆಗಳಿಗೆ ಮೂಲಭೂತ್ ಸೌಲಭ್ಯ ಒದಗಿಸಬೇಕು. ೩: ಮರಾಠಿ ಮಾತನಾಡುವವರು ಕನ್ನಡ ಭಾಷೆ ಕಲಿಯಲು ಮುಂದಾಗುವAತೆ ಪ್ರರೇಪಿಸಲು ಕನ್ನಡ ಕಲಿಕಾ ಕೇಂದ್ರಗಳನ್ನು ತೆರೆಯಬೇಕು.

- ಕುಂದಗೋಳ: ಗ್ರಾಮೀಣ ಭಾಗದ ಜನರಿಗೆ ವಿಶೇಷವಾಗಿ ಮಳೆಗಾಲದಲ್ಲಿ ಎದುರಾಗುವ ಸಂಚಾರದ ಸಂಕಷ್ಟಗಳನ್ನು ತಪ್ಪಿಸಲು, ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣಕ್ಕೆ ನನ್ನ ಅಧಿಕಾರ ಅವಧಿಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎಂ.ಆರ್. ಪಾಟೀಲ್ ಅವರು ಪ್ರತಿಪಾದಿಸಿದರು. ಮಂಗಳವಾರದಂದು ತಾಲ್ಲೂಕಿನ ಕಳಸ-ಸಂಕ್ಲೀಪೂರ ರಸ್ತೆಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಮನವಿ ಸಲ್ಲಿಸಿದಾಗ ಉತ್ತಮ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ್ದೆ. ಅದರಂತೆ ಇಂದು ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಲೆಕ್ಕ ಶೀರ್ಷಿಕೆ 5054ರ ಅಡಿಯಲ್ಲಿ ಅಂದಾಜು 1 ಕೋಟಿ 50 ಲಕ್ಷ ರೂಪಾಯಿಗಳ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ರಸ್ತೆ ಬೇಡಿಕೆ ಈಗ ಈಡೇರುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಅಲಿ ಚಾಂದಖಾನವರ, ಮಲ್ಲಿಕಾರ್ಜುನ ಪ್ಯಾಟಿ, ಯಲ್ಲರೆಡ್ಡಿ ಯರಗುಪ್ಪಿ, ಅಖಂಡಪ್ಪ ಕಳಸೂರ, ಯಲ್ಲಪ್ಪ ಹೊಸಮನಿ, ಬಸವರಾಜ ಅಂಗಡಿ, ಅಶೋಕ ದೊಡ್ಡಮಲ್ಲಪ್ಪನವರ, ಸತೀಶ್ ಪಾಟೀಲ್ ಸೇರಿದಂತೆ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು1
- ಧಾರವಾಡ: ಎಲ್ಲ ಶಾಸಕರು ಸಚಿವರಾಗಲು ಅರ್ಹತೆ ಪಡೆದಿದ್ದಾರೆ. ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲ ಶಾಸಕರಿಗೂ ಸಚಿವರಾಗುವ ಅರ್ಹತೆ ಇದೆ. ಅದು ಹೊಸಬರಿರಲಿ, ಫಸ್ಟ್ ಟೈಮ್ ಶಾಸಕರಾದವರಿರಲಿ. ಅವರಿಗೆ ಸಚಿವರಾಗಬೇಕು ಎಂಬ ಆಸೆ ಇದೆ. ಡಿಕೆಶಿ ಅವರ ಹೇಳಿಕೆ ಕೂಡ ನಾನು ನೋಡಿದೆ. ಏನೇ ಮಾಡಿದರೂ ಒಂದು ಲಿಮಿಟ್ಸ್ ಹಾಗೂ ಪಾರ್ಟಿ ಚೌಕಟ್ಟಿನಲ್ಲೇ ಎಲ್ಲವನ್ನೂ ಮಾತನಾಡಬೇಕು ಎಂದಿದ್ದಾರೆ. ಪಾರ್ಟಿ ಚೌಕಟ್ಟು ಬಿಟ್ಟು ವಿಷಯಗಳು ಹೊರ ಹೋಗಬಾರದು ಎಂದು ಅವರು ಹೇಳಿದ್ದಾರೆ. ಹೈಕಮಾಂಡ್‌ಗೆ ನಮ್ಮನ್ನೂ ಸಚಿವರನ್ನಾಗಿ ಮಾಡಲಿ ಎಂದು ಶಾಸಕರು ಹೋಗಿದ್ದಾರೆ. ಕೇಳುವ ಅಧಿಕಾರ ಎಲ್ಲರಿಗೂ ಇದೆ. ಅದೇ ಕಾರಣಕ್ಕೆ ಶಾಸಕರು ಹೋಗಿದ್ದಾರೆ ಅದೇನು ತಪ್ಪಲ್ಲ ಎಂದು ತಿಳಿಸಿದರು.1
- ನಡೆಸಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಪ್ರಜಾಪ್ರಭುತ್ವದ ದಲ್ಲಿಪ್ರಶ್ನೆ ಕೇಳಿಕೊಂಡು ಪತ್ರ ಕೊಡಲು ಬಂದಿರುವ ಕೆಆರ್‌ಎಸ್ ಪಕ್ಷದ ಸೈನಿಕರು1
- Post by Onlinetv24x71
- ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ, ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ಅವಧಿಯನ್ನು ಹೊಸ ಸಮಯ: ಇನ್ಮುಂದೆ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಿಗದಿ ಮಾಡಿ ಯಂದು ಕೇಳಿಕೊಳ್ಳುತ್ತಿದ್ದಾರೆ ಮಧ್ಯಾಹ್ನದ ಸುಡುವ ಬಿಸಿಲಿನಿಂದ ನೌಕರರನ್ನು ಮತ್ತು ದೂರದ ಊರುಗಳಿಂದ ಬರುವ ಜನರನ್ನು ರಕ್ಷಿಸುವುದು ಈ ಬದಲಾವಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. "ಜನಸಾಮಾನ್ಯರ ಆರೋಗ್ಯ ಮತ್ತು ಕೆಲಸದ ದಕ್ಷತೆಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಲು ಕಡಿಮೆಯಾಗುವವರೆಗೆ ಈ ಹೊಸ ವೇಳಾಪಟ್ಟಿ ಜಾರಿಗೆ ತರಬಹುದು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಮತ್ತು ಅನಗತ್ಯವಾಗಿ ಮಧ್ಯಾಹ್ನ ಹೊರಬರಬಾರದು ಎಂದು ಆರೋಗ್ಯ ಇಲಾಖೆ ಕೂಡ ಸೂಚಿಸಿದೆ. ಈ ಸಮಯದ ಬದಲಾವಣೆಯನ್ನ ಮಾಡುವಂತೆ ಸರ್ಕಾರಕ್ಕೆ ಬಸವರಾಜ ಬಳ್ಳಾರಿ ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷೆರು ಸರ್ಕಾರ ಕ್ಕೆ ಮನವಿ ಮಾಡಿದ್ದಾರೆ ಸರ್ಕಾರ ಸಮಯ ಬದಲಾವಣೆ ಮಾಡುತ್ತಾ ಕಾದು ನೋಡಬೇಕಿದೆ ಮತ್ತು ಸರ್ಕಾರಿ ಕೆಲಸಗಳಿಗೆ ಬರುವ ಜನರಿಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.1
- "ಸಂಗೊಂದಿ ಡಾಕ್ಟರ್. ಬಿ .ಆರ್. ಅಂಬೇಡ್ಕರ್ ಅವರ 135 ನೇ ಜಯಂತಿಯ ಆಚರಣೆ" ಭೀಮ ಬಲ ನ್ಯೂಸ್ 24×7 ಕನ್ನಡ ಸುದ್ದಿ: ಬಾಗಲಕೋಟೆ : ಏಪ್ರಿಲ್ 14 ಬಾಗಲಕೋಟೆ ಜಿಲ್ಲೆಯ ಸಂಗೊಂದಿ ಗ್ರಾಮದಲ್ಲಿ ನಡೆದ ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಜೈ ಭೀಮ ಯುವ ಘರ್ಜನೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ.ಆರ್. ಮಾದರ ಅವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆಯ ಸಂಘಟನೆಯ ಎಲ್ಲ ಪದಾಧಿಕಾರಿಗಳು ಭಾಗಿಯಾಗಿದ್ದರು ಹಾಗೂ ಜಿಲ್ಲಾ ಅಧ್ಯಕ್ಷ ಮಂಜುನಾಥ್ .ಆರ್ .ಮಾದರ, ಮಲ್ಲು ಬಡಿಗೇರ, ಮಾತನಾಡಿ ಸಂಗೊಂದಿ ಗ್ರಾಮದಲ್ಲಿ ಬಿ .ಆರ್ .ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರಿಗೆ ಸಂಗೊಂದಿ ಗ್ರಾಮದ ಗುರು ಹಿರಿಯರು ಹಾಗೂ ಮಕ್ಕಳು ಪುಷ್ಪ ನಮನ ಸಲ್ಲಿಸಿದರು.ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟವನ್ನು ಸ್ಮರಿಸಿದರು. ಜಾತಿ ವ್ಯವಸ್ಥೆಯ ವಿರುದ್ಧ ಅವರು ನಡೆದ ಹೋರಾಟ ಮತ್ತು ಸಮಾನತೆಯ ಸಂದೇಶವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು "ಶಿಕ್ಷಣ ಸಂಘಟನೆ ಮತ್ತು ಹೋರಾಟ"ಎಂಬ ಅವರ ತತ್ವಗಳು ಇಂದಿಗೂ ಯುವಕರಿಗೆ ದಾರಿದೀಪವಾಗಿದೆ ಎಂದು ಹೇಳಿದರು. ದಲಿತ ಮುಖಂಡರು ಮಂಜುನಾಥ .ಆರ್.ಮಾದರ ,ಮಲ್ಲು ಬಡಿಗೇರ, ಆನಂದ ಮೂಗನೂರು, ಹರೀಶ್ ಮಾದರ, ದಾಳಪ್ಪ ಮಾದರ, ದುರ್ಗಪ್ಪ ಕೆರೂರು, ಮಹಾಂತೇಶ್ ಮಾದರ, ಚಂದ್ರು ಮಾದರ,ಯಮನಪ್ಪ ಮಾದರ, ಲಕ್ಷ್ಮಣ್ ಚಲವಾದಿ, ಬೆನ್ನಪ್ಪ ಮಾದರ, ಬೋಜು ಲಮಾಣಿ, ಹಾಗೂ ಯಲ್ಲಪ್ಪ ಮಾದರ ಹಾಗೂ ಗಣ್ಯರು ಪುಷ್ಪ ನಮನ ಸಲ್ಲಿಸಿದರು.1
- ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಹಂಪಿ ರಮಣ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಮಾತನಾಡಿದ ಹಂಪಿ ರಮಣ ಅವರು, ಈ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ, ಪಕ್ಷವನ್ನು ತಳಮಟ್ಟದಲ್ಲಿ ಸದೃಡಗೊಳಿಸುವುದಾಗಿ ತಿಳಿಸಿದ್ದಾರೆ. ಮುಂಬರುವ ಸವಾಲುಗಳನ್ನು ಎದುರಿಸಿ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಸತತವಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.1
- ಧಾರವಾಡ: ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಎರಡೂ ಬೈಕ್‌ಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಧಾರವಾಡದ ಮೆಹಬೂಬ್‌ನಗರದಲ್ಲಿ ನಡೆದಿದೆ. ಸಾದಿಕ್ ಶೆರೆವಾಡ ಎಂಬುವವರ ಮನೆ ಎದುರು ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಮೊದಲು ಮನೆ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳು ಆನಂತರ ಎರಡೂ ಬೈಕ್‌ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ತಡರಾತ್ರಿ ಏಳೆಂಟು ಜನರ ತಂಡದಿಂದ ಈ ಕೃತ್ಯ ನಡೆದಿದೆ. ಸದ್ಯ ಸ್ಥಳಕ್ಕೆ ಎಸಿಪಿ ಪ್ರಶಾಂತ ಸಿದ್ಧನಗೌಡರ, ಸಿಪಿಐ ಪ್ರಭು ಗಂಗೇನಳ್ಳಿ ಅವರು ಭೇಟಿ ನೀಡಿ ಸಿಸಿಟಿವಿ ದೃಶ್ಯ ಸೇರಿದಂತೆ ಇತರ ಸಾಕ್ಷ್ಯಗಳ ಪರಿಶೀಲನೆ ನಡೆಸಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.1