ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ : ಸೆ.30ರೊಳಗೆ ಈ ಕೆಲಸ ಮಾಡದಿದ್ದರೆ ಸಿಗಲ್ಲ ರೇಷನ್.! ರಾಜ್ಯದಲ್ಲಿ ಪಡಿತರ ಚೀಟಿ (Ration Card) ದುರ್ಬಳಕೆ ತಡೆಯಲು ಹಾಗೂ ಮಾಹಿತಿಯನ್ನು ನಿಖರಗೊಳಿಸಲು ರಾಜ್ಯ ಸರ್ಕಾರವು ಇ-ಕೆವೈಸಿ (E-KYC) ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಇದಕ್ಕೆ ಸೆಪ್ಟೆಂಬರ್ 30ರ ವರೆಗೆ ಗಡುವು ನೀಡಲಾಗಿದ್ದು, ಈ ನಿಗದಿತ ಅವಧಿಯೊಳಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಪಡಿತರ ಚೀಟಿ ರದ್ದಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ, ಪ್ರಸ್ತುತ ಉಚಿತವಾಗಿ ಸಿಗುತ್ತಿರುವ ಅಕ್ಕಿ ಸೇರಿದಂತೆ ಯಾವುದೇ ಆಹಾರ ಪದಾರ್ಥಗಳ ಪೂರೈಕೆ ಸಂಪೂರ್ಣ ಬಂದ್ ಆಗಲಿದೆ. ಇ-ಕೆವೈಸಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಮಹತ್ವದ ಸ್ಪಷ್ಟನೆ ನೀಡಿದ್ದು, ಇ-ಕೆವೈಸಿ ಮಾಡಿಸಲು ಎಲ್ಲರಿಗೂ ಜಾತಿ ಪ್ರಮಾಣ ಪತ್ರ ಕಡ್ಡಾಯವಲ್ಲ ಎಂದು ತಿಳಿಸಿದೆ. SC/ST ಸಮುದಾಯಕ್ಕೆ ಸೇರಿದವರು ಮಾತ್ರ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕಿದ್ದು, ಉಳಿದಂತೆ ಆಧಾರ್ ಕಾರ್ಡ್, ಆಧಾರ್‌ಗೆ ಲಿಂಕ್ ಆದ ಮೊಬೈಲ್ ಸಂಖ್ಯೆ ಹಾಗೂ LPG ಸಿಲಿಂಡರ್ ಗ್ರಾಹಕರ ಬುಕ್‌ಗಳನ್ನು ಕಡ್ಡಾಯವಾಗಿ ಒದಗಿಸಬೇಕಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಗ್ಗೆ 7 ರಿಂದ ರಾತ್ರಿ 10ರ ವರೆಗೆ ಉಚಿತವಾಗಿ ಇ-ಕೆವೈಸಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ನಿವಾಸಿಗಳು ಹತ್ತಿರದ GBA ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲೂ ಈ ಸೇವೆ ಪಡೆಯಬಹುದು. ಕೊನೆಯ ದಿನಗಳಲ್ಲಿ ಸರ್ವರ್ ಸಮಸ್ಯೆಯಿಂದ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಮುಂಚಿತವಾಗಿ ಪ್ರಕ್ರಿಯೆ ಮುಗಿಸಿಕೊಳ್ಳಲು ಅಧಿಕಾರಿಗಳು ಸೂಚಿಸಿದ್ದಾರೆ. ಒಂದು ವೇಳೆ ಬೆರಳಚ್ಚು (Fingerprint) ಹೊಂದಾಣಿಕೆಯಾಗದಿದ್ದರೆ, ಆಧಾರ್ ಕೇಂದ್ರದಲ್ಲಿ ಅಪ್‌ಡೇಟ್ ಮಾಡಿದ 15 ದಿನಗಳ ನಂತರ ಮತ್ತೆ ಇ-ಕೆವೈಸಿ ಮಾಡಿಕೊಳ್ಳಬಹುದು. ಮನೆಯಲ್ಲೇ ಕುಳಿತು ಇ-ಕೆವೈಸಿ ಹಾಗೂ ಸ್ಟೇಟಸ್ ಚೆಕ್ ಮಾಡುವ ಸರಳ ವಿಧಾನ: ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್‌ನಿಂದ 'Mera Ration' ಹಾಗೂ 'Aadhaar FaceRD' ಆಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಆನ್‌ಲೈನ್ ಮೂಲಕವೇ ಇ-ಕೆವೈಸಿ ಪೂರ್ಣಗೊಳಿಸಬಹುದು. ಇದಲ್ಲದೆ, ಇ-ಕೆವೈಸಿ ಆಗಿದೆಯೇ ಎಂದು ತಿಳಿಯಲು ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ (ahara.kar.) ಮೂಲಕ 'ಇ-ಸೇವೆಗಳು' ಆಯ್ಕೆಯಲ್ಲಿ ನಿಮ್ಮ 12 ಅಂಕಿಯ ರೇಷನ್ ಕಾರ್ಡ್ ನಂಬರ್ ನಮೂದಿಸಿ RC Status ಪರಿಶೀಲಿಸಬಹುದು. ಅಲ್ಲಿ ಹೆಸರುಗಳ ಮುಂದೆ 'Success' ಎಂದು ಹಸಿರು ಬಣ್ಣದಲ್ಲಿದ್ದರೆ ಇ-ಕೆವೈಸಿ ಪೂರ್ಣಗೊಂಡಿದೆ ಎಂದರ್ಥ.

- ಅಥಣಿ ಪಟ್ಟಣದಲ್ಲಿ ಗಣೇಶ ಉತ್ಸವದಲ್ಲಿ ಅಭಿಮಾನಿಗಳೊಂದಿಗೆ ಸಖತ್ ಸ್ಟೆಪ್ ಹಾಕಿದ ಸಚಿವ ಲಕ್ಷ್ಮಣ ಸವದಿ. ಅಥಣಿ : ಕರ್ನಾಟಕ ಸರ್ಕಾರದ ಸಹಕಾರ ಸಚಿವ ಗಣೇಶ ಆಗಮನದ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಖತ್ ಸ್ಟೆಪ್ ಹಾಕುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಸಂಭ್ರಮ ಮೂಡಿಸಿದರು. ಈ ವೇಳೆ ಅಭಿಮಾನಿಗಳು ಸೌದಿ ಅವರೊಂದಿಗೆ ಸ್ಟೆಪ್ ಹಾಕುವ ಮೂಲಕ ಸಂಭ್ರಮಿಸಿದರು.1
- ಬನಹಟ್ಟಿ ಸತ್ಯಾಗ್ರಹ ಸ್ಥಳಕ್ಕೆ ಪೊಲೀಸರ ಭೇಟಿ - ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನ ಪ್ರಜಾಸೌಧ ಕುರಿತು ಬನಹಟ್ಟಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದವರ ಆರೋಗ್ಯದಲ್ಲಿ ಏರುಪೇರಾಗಿದ್ದು ವೈದ್ಯಕೀಯ ಶಿಪಾರಸ್ಸು ಮೇರೆಗೆ ಅವರನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು1
- ಮುಧೋಳ ನಗರದಲ್ಲಿ ಗಣೇಶೋತ್ಸವ ಸಂಭ್ರಮದಲ್ಲಿ ಮಿಂದೆದ್ದ ಅಸಂಖ್ಯ ಭಕ್ತಗಣ ಮುಧೋಳ : ಗಣೇಶೋತ್ಸವ ಹಿನ್ನೆಲೆ ನಗರದಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಅಸಂಖ್ಯ ಭಕ್ತಗಣದ ಮಧ್ಯೆ ಅದ್ದೂರಿಯಾಗಿ ಜರುಗಿತು. ನಗರದ ಶಿವಾಜಿ ವೃತ್ತ, ಗಾಂಧಿ ವೃತ್ತ, ಜೈ ಭಾರತ ಸರ್ಕಲ್, ಜನತಾ ಪ್ಲಾಟ್ ಸೇರಿದಂತೆ ಹಲವಾರು ಭಾಗದಲ್ಲಿ ಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿಗಳ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಪಂಢರಪುರದ ದಿಂಡೆ ರೂಪಕ, ಮಹಾರಾಷ್ಟ್ರದ ಡೋಲ್ ತಾಷ್, ಡಿಜೆ, ಡಾಲ್ಬಿ ಸದ್ದಿಗೆ ಸಾವಿರಾರು ಯುವಕರು ಹೆಜ್ಜೆ ಹಾಕಿದರು. ಮಹಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜೈ ಭಾರತ ವೃತ್ತದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಜನರು ನೆರದಿದ್ದರು. ಭಕ್ತಿಭಾವದಿಂದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು.4
- ಗರಸು ತುಂಬಿದ ಟ್ರ್ಯಾಕ್ಟರ್‌ಗಳ ರೋಚಕ ಸ್ಪರ್ಧೆ, ಹಳ್ಳದ ಗೆಣ್ಣೂರಿನಲ್ಲಿ ಹಳ್ಳದ ಗೆಣ್ಣೂರಿನಲ್ಲಿ ಶ್ರೀ ಗಜಾನನ ಯುವಕ ಮಂಡಳಿಯಿಂದ ಆಯೋಜನೆ ಹಳ್ಳದ ಗೆಣ್ಣೂರು: ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರು ಗ್ರಾಮದ ವಾಟರ್ ಟ್ಯಾಂಕ್ ಸಮೀಪ ಶ್ರೀ ಗಜಾನನ ಯುವಕ ಮಂಡಳಿಯ ವತಿಯಿಂದ ನಾಲ್ಕು ಟೈಲರ್‌ಗಳ ಗರಸು ತುಂಬಿದ ಟ್ರ್ಯಾಕ್ಟರ್‌ಗಳ ಸ್ಪರ್ಧೆಯನ್ನು ಮಂಗಳವಾರ ಸಂಜೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಟ್ರ್ಯಾಕ್ಟರ್‌ಗಳ ಸಾಮರ್ಥ್ಯ ಹಾಗೂ ಚಾಲಕರ ಕೌಶಲ್ಯ ಗಮನ ಸೆಳೆಯಿತು. ರೋಚಕ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳ ಯುವಕರು ಹಾಗೂ ಟ್ರ್ಯಾಕ್ಟರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸ್ಪರ್ಧೆಯಲ್ಲಿ ಶಿವು ವಿ. ಬೆಳ್ಳುಬ್ಬಿ ಪ್ರಥಮ ಬಹುಮಾನ, ರೇವಣಸಿದ್ಧ ಪಡಸಲಗಿ ದ್ವಿತೀಯ ಬಹುಮಾನ ಹಾಗೂ ಅಬ್ದುಲ್ ನದಾಫ್ ತೃತೀಯ ಬಹುಮಾನ ಪಡೆದುಕೊಂಡರು ಎಂದು ಶ್ರೀ ಗಜಾನನ ಯುವಕ ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಸ್ಪರ್ಧೆಯು ಯುವಕರಲ್ಲಿ ಉತ್ಸಾಹ ಮೂಡಿಸುವುದರೊಂದಿಗೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸಿತು.1
- ಶಾಸಕ ಯತ್ನಾಳ ಸಿಎಂ ಆಗುವುದು ಹಗಲುಗನಸು: ಸಚಿವ ವಿಜಯಾನಂದ ಕಾಶಪ್ಪನವರ ಶಾಸಕ ಯತ್ನಾಳ ಸಿಎಂ ಆಗುವುದು ಹಗಲುಗನಸು: ಸಚಿವ ವಿಜಯಾನಂದ ಕಾಶಪ್ಪನವರ1
- *ಹಿಂದೂ ಮಹಾಗಣಪತಿ , ತಾಳಿಕೋಟೆ 🕉* *ಮೊದಲ ಭವ್ಯ ದರ್ಶನ ಸಂಜೆ 7 ಘಂಟೆಗೆ* 🌺 ಭಕ್ತಿಭಾವದಿಂದ ಪ್ರತಿಷ್ಠಾಪಿಸಲಾದ ಶ್ರೀ ಮಹಾಗಣಪತಿಯ ದಿವ್ಯ ದರ್ಶನ ಪಡೆಯಲು ತಾಳಿಕೋಟೆಯ ಸಮಸ್ತ ಭಕ್ತಾದಿಗಳಿಗೆ ಆತ್ಮೀಯ ಆಹ್ವಾನ. *🙏 ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ, ತಮ್ಮ ಬಂಧು-ಬಳಗ ಹಾಗೂ ಸ್ನೇಹಿತರನ್ನೂ ಕರೆತಂದು ಶ್ರೀ ಮಹಾಗಣಪತಿಯ ದಿವ್ಯ ದರ್ಶನ ಪಡೆದು ಕೃಪೆಗೆ ಪಾತ್ರರಾಗಿ.* ತಾಳಿಕೋಟಿ: ಪಟ್ಟಣದಲ್ಲಿ ಭಕ್ತಿಭಾವದಿಂದ ಪ್ರತಿಷ್ಠಾಪಿಸಲಾದ ಶ್ರೀ ಹಿಂದೂ ಮಹಾಗಣಪತಿಯ ಮೊದಲ ಭವ್ಯ ದರ್ಶನ ಸಂಜೆ 7 ಗಂಟೆಗೆ ನೆರವೇರಿತು. ಶ್ರೀ ಹಿಂದೂ ಮಹಾಗಣಪತಿಯ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ತಾಳಿಕೋಟೆಯ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಗಣಪತಿ ಬಪ್ಪನ ದಿವ್ಯ ದರ್ಶನ ಪಡೆದು ಕೃಪೆಗೆ ಪಾತ್ರರಾದರು. ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ನಡುವೆ ಮಹಾಗಣಪತಿಯ ದರ್ಶನಕ್ಕೆ ಭಕ್ತರಲ್ಲಿ ಅಪಾರ ಉತ್ಸಾಹ ಕಂಡುಬಂದಿತು. ಭಕ್ತರು ಶ್ರದ್ಧಾ–ಭಕ್ತಿಯಿಂದ ಪೂಜೆ ಸಲ್ಲಿಸಿ, ಶ್ರೀ ಹಿಂದೂ ಮಹಾಗಣಪತಿಯ ಆಶೀರ್ವಾದ ಪಡೆದು ತಮ್ಮ ಕುಟುಂಬಕ್ಕೆ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ತಾಳಿಕೋಟೆ ಪಟ್ಟಣದ ವಿವಿಧ ಭಾಗಗಳಿಂದ ಭಕ್ತರು ಭಾಗವಹಿಸಿ ಗಣಪತಿ ಬಪ್ಪನ ದರ್ಶನ ಪಡೆದರು. ಗಣಪತಿ ಬಪ್ಪಾ ಮೋರಯಾ… ಮಂಗಳಮೂರ್ತಿ ಮೋರಯಾ…! ವರದಿ: ಸಂಗನಗೌಡ ಗಬಸಾವಳಗಿ SCN TV NEWS – ತಾಳಿಕೋಟಿ1
- ಬಾಗಲಕೋಟೆ: ಸಾಲ ಸೌಲಭ್ಯಕ್ಕಾಗಿ ಕುರಿಗಳೊಂದಿಗೆ ಬ್ಯಾಂಕ್ ಎದುರು ಪ್ರತಿಭಟನೆ1
- ಅದ್ದೂರಿಯಾಗಿ ಜರುಗಿದ ಹಲ್ಯಾಳ ಶ್ರೀ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವ ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಹಲ್ಯಾಳ ಗ್ರಾಮದ ಆರಾಧ್ಯ ದೈವ ಶ್ರೀ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವವು ಅತ್ಯಂತ ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ಅದ್ದೂರಿಯಾಗಿ ಜರುಗಿತು. ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಪ್ರವಚನ ಕಾರ್ಯಕ್ರಮ: ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ದೇಶ್ವರ ಸ್ವಾಮೀಜಿ ಅವರಿಂದ ಘತರಗಿ ಭಾಗ್ಯವತಿ ದೇವಿಯ ಜೀವನ ಚರಿತ್ರೆ ಕುರಿತು ಪ್ರವಚನ ಜರುಗಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರವಚನ ಆಲಿಸಿದರು. ಕುಂಭಮೇಳ: ಜಾತ್ರೆಯ ಪೂರ್ವಭಾವಿಯಾಗಿ ಕೃಷ್ಣಾ ನದಿಯಿಂದ ಹಲ್ಯಾಳ ಗ್ರಾಮದವರೆಗೆ ಮುತ್ತೈದೆಯರಿಂದ ವಿಜೃಂಭಣೆಯ ಕುಂಭಮೇಳ ನಡೆಯಿತು. ಮಹಿಳೆಯರು ಕುಂಭ ಹೊತ್ತು ಭಕ್ತಿಭಾವದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿಶೇಷ ಪೂಜೆ ಮತ್ತು ಮಹಾಭಿಷೇಕ: ಜಾತ್ರೆಯ ದಿನ ಮುಂಜಾನೆ ಶ್ರೀ ಶಿವರಾಯ ಮುತ್ಯಾ ದೇವಸ್ಥಾನದ ಪೂಜಾರಿ ಸೋಮಣ್ಣ ಪೂಜಾರಿ ಅವರ ನೇತೃತ್ವದಲ್ಲಿ ದೇವಸ್ಥಾನದ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಮಹಾಭಿಷೇಕ ನೆರವೇರಿಸಲಾಯಿತು. ಪಲ್ಲಕ್ಕಿ ಉತ್ಸವ: ಶ್ರೀ ಶಿವರಾಯ ಮುತ್ಯಾ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಡೊಳ್ಳಿನ ಮೇಳದ ತಂಡಗಳು ಜಾತ್ರೆಗೆ ವಿಶೇಷ ಮೆರುಗು ನೀಡಿದವು. ಭಕ್ತರು ಭಕ್ತಿಗೀತೆ ಹಾಗೂ ಘೋಷಣೆಗಳೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು. ವಿಶೇಷ ಆಚರಣೆಗಳು ಮತ್ತು ಪ್ರಸಾದ ವಿನಿಯೋಗ ಗ್ರಾಮದ ಹೃದಯಭಾಗದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಪೂಜಾರಿಗಳಿಂದ ಅಲಗ ಹಾಯುವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಈ ವೇಳೆ ದೇವರಲ್ಲಿ ಹರಕೆ ಹೊತ್ತ ಭಕ್ತರು ಶಿವರಾಯ ಮುತ್ಯಾ ಮೂರ್ತಿಗೆ ಭಂಡಾರ ಅರ್ಪಿಸಿ ತಮ್ಮ ಹರಕೆ ತೀರಿಸಿದರು. ನಂತರ ಆಗಮಿಸಿದ್ದ ಸಮಸ್ತ ಭಕ್ತರು ವಿಶೇಷ ಪ್ರಸಾದ ಸ್ವೀಕರಿಸಿ ಶ್ರೀ ಶಿವರಾಯ ಮುತ್ಯಾ ಆಶೀರ್ವಾದಕ್ಕೆ ಪಾತ್ರರಾದರು. ಗಣ್ಯರ ಉಪಸ್ಥಿತಿ ಈ ಜಾತ್ರಾ ಮಹೋತ್ಸವದಲ್ಲಿ ಗುಂಡು ಹಿರೇಕುರುಬರ, ಮುತ್ತಣ್ಣ ಸನದಿ, ಮುದುಕಣ್ಣ ಶೇಗುಣಸಿ, ಕಾಕಾಸಾಹೇಬ್ ಪಾಟೀಲ, ಚಂದ್ರಕಾಂತ ಕಾಗವಾಡ, ಸಿದ್ದಪ್ಪ ಲೋಕರ, ಕಾಂತೇಶ ಬಾಗಿ, ರಾಯಪ್ಪ ಬಾಗಿ, ಅಣ್ಣಪ್ಪ ಬಾಗಿ, ಗುಳ್ಳಪ್ಪ ನಾಯಿಕ, ಸಿದ್ದು ಮಗದುಮ, ಆಕಾಶ ಬಾಗಿ, ಪರಶುರಾಮ ಡಂಗಿ ಹಾಗೂ ಸಚಿನ್ ಮೆಂಡಿಗೇರಿ ಸೇರಿದಂತೆ ಗ್ರಾಮದ ಗಣ್ಯರು, ಹಲ್ಯಾಳ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಿದರು.4