logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೇವೂರಿನ ಶ್ರೀ ಸಿದ್ಧರಾಮೇಶ್ವರ ವಿದ್ಯಾಸಂಸ್ಥೆಗೆ ಲ್ಯಾಪ್ ಟಾಪ್ ಕೊಡುಗೆ ಚನ್ನಪಟ್ಟಣ--ತಂತ್ರಜ್ಞಾನದ  ಯುಗದಲ್ಲಿ  ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಅವರಿಗೆ ಜಾಗತಿಕ ಮಟ್ಟದ ಶಿಕ್ಷಣ ತಲುಪಬೇಕು ಎಂಬ ಉದ್ದೇಶದಿಂದ, ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬೇವೂರಿನ  ಶ್ರೀ ಸಿದ್ಧರಾಮೇಶ್ವರ  ವಿದ್ಯಾಸಂಸ್ಥೆಯ ಮಕ್ಕಳಿಗಾಗಿ ಉಚಿತ ಕಂಪ್ಯೂಟರ್ ಶಿಕ್ಷಣ" ಕಾರ್ಯಕ್ರಮದ ಉದ್ಘಾಟನೆ ಹಾಗೂ ವಿಶೇಷ ಪೋಷಕರ ಸಭೆ ನಡೆಯಿತು. ಈ ಸಂದರ್ಭದಲ್ಲಿ 'ಮಾ ಕಾಮಾಖ್ಯ ಇನೋವೇಟಿವ್ ಫೌಂಡೇಶನ್' ಸಂಸ್ಥಾಪಕ ಅಧ್ಯಕ್ಷರಾದ  ದಿಲೀಪ್‌ಕುಮಾರ್ ಭಾರತಿ ಹಾಗೂ ಶ್ರೀಮತಿ ಅರ್ಚನ ದಿಲೀಪ್‌ಕುಮಾರ್ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಬಳಕೆಗೆ ಅಗತ್ಯವಾದ ಲ್ಯಾಪ್ಟಾಪ್‌ ಅನ್ನು ಸಂಸ್ಥೆಯ ಕಾರ್ಯ ದರ್ಶಿಗಳಾದ  ಬೇವೂರು ಯೋಗೀಶ್ ಗೌಡ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿ, ಉಚಿತ ಕಂಪ್ಯೂಟರ್ ಶಿಕ್ಷಣ  ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು.

1 hr ago
user_ರಮೇಶ್.ಆರ್
ರಮೇಶ್.ಆರ್
ಚನ್ನಪಟ್ಟಣ, ರಾಮನಗರ, ಕರ್ನಾಟಕ•
1 hr ago

ಬೇವೂರಿನ ಶ್ರೀ ಸಿದ್ಧರಾಮೇಶ್ವರ ವಿದ್ಯಾಸಂಸ್ಥೆಗೆ ಲ್ಯಾಪ್ ಟಾಪ್ ಕೊಡುಗೆ ಚನ್ನಪಟ್ಟಣ--ತಂತ್ರಜ್ಞಾನದ  ಯುಗದಲ್ಲಿ  ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಅವರಿಗೆ ಜಾಗತಿಕ ಮಟ್ಟದ ಶಿಕ್ಷಣ ತಲುಪಬೇಕು ಎಂಬ ಉದ್ದೇಶದಿಂದ, ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬೇವೂರಿನ  ಶ್ರೀ ಸಿದ್ಧರಾಮೇಶ್ವರ  ವಿದ್ಯಾಸಂಸ್ಥೆಯ ಮಕ್ಕಳಿಗಾಗಿ ಉಚಿತ ಕಂಪ್ಯೂಟರ್ ಶಿಕ್ಷಣ" ಕಾರ್ಯಕ್ರಮದ ಉದ್ಘಾಟನೆ ಹಾಗೂ ವಿಶೇಷ ಪೋಷಕರ ಸಭೆ ನಡೆಯಿತು. ಈ ಸಂದರ್ಭದಲ್ಲಿ 'ಮಾ ಕಾಮಾಖ್ಯ ಇನೋವೇಟಿವ್ ಫೌಂಡೇಶನ್' ಸಂಸ್ಥಾಪಕ ಅಧ್ಯಕ್ಷರಾದ  ದಿಲೀಪ್‌ಕುಮಾರ್ ಭಾರತಿ ಹಾಗೂ ಶ್ರೀಮತಿ ಅರ್ಚನ ದಿಲೀಪ್‌ಕುಮಾರ್ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಬಳಕೆಗೆ ಅಗತ್ಯವಾದ ಲ್ಯಾಪ್ಟಾಪ್‌ ಅನ್ನು ಸಂಸ್ಥೆಯ ಕಾರ್ಯ ದರ್ಶಿಗಳಾದ  ಬೇವೂರು ಯೋಗೀಶ್ ಗೌಡ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿ, ಉಚಿತ ಕಂಪ್ಯೂಟರ್ ಶಿಕ್ಷಣ  ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು.

More news from ಕರ್ನಾಟಕ and nearby areas
  • 33 ಎಕರೆಯ 896 ನಿವೇಶನವನ್ನು ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮ ಮಳವಳ್ಳಿ: 44 ವರ್ಷಗಳಿಂದ ನೆನೆಗುಂದಿ ಬಿದ್ದಿದ್ದ 33 ಎಕರೆಯ 896 ನಿವೇಶನವನ್ನು ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮ ಮಳವಳ್ಳಿ ಪಟ್ಟಣದ 33 ಎಕರೆ ನಿವೇಶನ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಕೃಷಿ ಸಚಿವ ನರೇಂದ್ರಸ್ವಾಮಿ ಉದ್ಘಾಟಿಸಿದರು. ಈ ವೇಳೆ 23 ವಾರ್ಡುನ 896 ನಿವೇಶನ ಫಲಾನುಭವಿಗಳಿಗೆ ತಮ್ಮ ತಮ್ಮ ನಿವೇಶನದ ಆಯ್ಕೆ ಮಾಡಲು ಫಲಾನುಭವಿಗಳು ಲಾಟರಿ ಮೂಲಕ ಅವಕಾಶ ಕಲ್ಪಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.
    1
    33  ಎಕರೆಯ 896 ನಿವೇಶನವನ್ನು  ಅರ್ಹ ಬಿಪಿಎಲ್  ಫಲಾನುಭವಿಗಳಿಗೆ  ನಿವೇಶನ ಹಂಚಿಕೆ ಕಾರ್ಯಕ್ರಮ 
ಮಳವಳ್ಳಿ: 44 ವರ್ಷಗಳಿಂದ ನೆನೆಗುಂದಿ ಬಿದ್ದಿದ್ದ  33  ಎಕರೆಯ 896 ನಿವೇಶನವನ್ನು  ಅರ್ಹ ಬಿಪಿಎಲ್  ಫಲಾನುಭವಿಗಳಿಗೆ  ನಿವೇಶನ ಹಂಚಿಕೆ ಕಾರ್ಯಕ್ರಮ  ಮಳವಳ್ಳಿ ಪಟ್ಟಣದ  33 ಎಕರೆ ನಿವೇಶನ ಆವರಣದಲ್ಲಿ  ನಡೆಸಲಾಯಿತು.
ಕಾರ್ಯಕ್ರಮವನ್ನು  ಕೃಷಿ ಸಚಿವ ನರೇಂದ್ರಸ್ವಾಮಿ  ಉದ್ಘಾಟಿಸಿದರು.
ಈ ವೇಳೆ  23 ವಾರ್ಡುನ   896 ನಿವೇಶನ ಫಲಾನುಭವಿಗಳಿಗೆ  ತಮ್ಮ ತಮ್ಮ ನಿವೇಶನದ ಆಯ್ಕೆ ಮಾಡಲು  ಫಲಾನುಭವಿಗಳು ಲಾಟರಿ ಮೂಲಕ   ಅವಕಾಶ ಕಲ್ಪಿಸಲಾಯಿತು. 
ಈ ವೇಳೆ  ಜಿಲ್ಲಾಧಿಕಾರಿ ಡಾ.ಕುಮಾರ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಚಂದ್ರಶೇಖರ್ ಸೇರಿದಂತೆ  ಹಲವರು ಇದ್ದರು.
    user_ಸುಮಿತ್ರ‌ ಹೆಚ್‌ ಪಿ
    ಸುಮಿತ್ರ‌ ಹೆಚ್‌ ಪಿ
    ವರದಿಗಾರರು ಮಳವಳ್ಳಿ, ಮಂಡ್ಯ, ಕರ್ನಾಟಕ•
    3 hrs ago
  • ಕಾವೇರಿ ಬಿಕ್ಕಟ್ಟಿಗೆ ಮೇಕೆದಾಟು ಒಂದೇ ಪರಿಹಾರ: ಸಚಿವ ಎನ್. ಚಲುವರಾಯಸ್ವಾಮಿ ಮಂಡ್ಯ- ಕೆಆರ್ ಎಸ್ ನೀಡರಿನ ಮಟ್ಟ ಕುಸಿತ ಕಂಡಿರುವ ಹಿನ್ನೆಲೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದ್ದು, ಹೇಮಾವತಿ ಜಲಾಶಯ ದಿಂದ ನೀರು ಹರಿಸಲಾಗುತ್ತಿದೆ. ಆದರೆ, ಕೆಲವೆಡೆ ರೈತರು ನೀರು ತಡೆಯುತ್ತಿರುವುದು ಗಮನಕ್ಕೆ ಬಂದಿದೆ. ಕೆ.ಆರ್. ಪೇಟೆ ಹಾಗೂ ಪಾಂಡವಪುರ ಭಾಗದ ರೈತರು ಸಹಕರಿಸಿ, ಮದ್ದೂರು ಹಾಗೂ ಮಳವಳ್ಳಿ ಭಾಗದ ಕೆರೆಗಳು ತುಂಬಲು ಅವಕಾಶ ಮಾಡಿಕೊಡಬೇಕು. ಅಗತ್ಯವಿದ್ದರೆ ಪೊಲೀಸ್ ಭದ್ರತೆ ಪಡೆದು ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತು ವಾರಿ ಸಚಿವ ಚಲುವ ರಾಯಸ್ವಾಮಿ ಹೇಳಿದ್ರು. ಮಂಡ್ಯದಲ್ಲಿಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆ‌ ಸಭೆಯಲ್ಲಿ ಬಾಗವಹಿಸಿ ಮಾತನಾಡಿದ ಅವರುಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪೀಠ ಮೂರು ದಿನ ಕಾರ್ಯನಿರ್ವಹಿಸದ ಕಾರಣ, ಕಾವೇರಿ ನೀರು ನಿಯಂತ್ರಣ ಸಮಿತಿಗೆ (CWRC) ಇಂದು ಮಧ್ಯಾಹ್ನವೇ ವಿಶೇಷ ಅರ್ಜಿ ಸಲ್ಲಿಸಿ ರಾಜ್ಯದ ನೀರಿನ ವಾಸ್ತವ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಡಲಾಗುವುದು. ಕಾವೇರಿ ಸಮಸ್ಯೆಗೆ ಮೇಕೆದಾಟು ಯೋಜನೆ ಜಾರಿ ಮಾತ್ರ ಶಾಶ್ವತ ಪರಿಹಾರ ಎಂದು ಅವರು ಪುನರುಚ್ಚರಿಸಿದರು.
    1
    ಕಾವೇರಿ ಬಿಕ್ಕಟ್ಟಿಗೆ ಮೇಕೆದಾಟು ಒಂದೇ ಪರಿಹಾರ: ಸಚಿವ ಎನ್. ಚಲುವರಾಯಸ್ವಾಮಿ
ಮಂಡ್ಯ- ಕೆಆರ್ ಎಸ್ ನೀಡರಿನ ಮಟ್ಟ ಕುಸಿತ ಕಂಡಿರುವ ಹಿನ್ನೆಲೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದ್ದು, ಹೇಮಾವತಿ ಜಲಾಶಯ ದಿಂದ ನೀರು ಹರಿಸಲಾಗುತ್ತಿದೆ. ಆದರೆ, ಕೆಲವೆಡೆ ರೈತರು ನೀರು ತಡೆಯುತ್ತಿರುವುದು ಗಮನಕ್ಕೆ ಬಂದಿದೆ. ಕೆ.ಆರ್. ಪೇಟೆ ಹಾಗೂ ಪಾಂಡವಪುರ ಭಾಗದ ರೈತರು ಸಹಕರಿಸಿ, ಮದ್ದೂರು ಹಾಗೂ ಮಳವಳ್ಳಿ ಭಾಗದ ಕೆರೆಗಳು ತುಂಬಲು ಅವಕಾಶ ಮಾಡಿಕೊಡಬೇಕು. ಅಗತ್ಯವಿದ್ದರೆ ಪೊಲೀಸ್ ಭದ್ರತೆ ಪಡೆದು ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತು ವಾರಿ ಸಚಿವ ಚಲುವ ರಾಯಸ್ವಾಮಿ ಹೇಳಿದ್ರು.
ಮಂಡ್ಯದಲ್ಲಿಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆ‌ ಸಭೆಯಲ್ಲಿ ಬಾಗವಹಿಸಿ ಮಾತನಾಡಿದ ಅವರುಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪೀಠ ಮೂರು ದಿನ ಕಾರ್ಯನಿರ್ವಹಿಸದ ಕಾರಣ, ಕಾವೇರಿ ನೀರು ನಿಯಂತ್ರಣ ಸಮಿತಿಗೆ (CWRC) ಇಂದು ಮಧ್ಯಾಹ್ನವೇ ವಿಶೇಷ ಅರ್ಜಿ ಸಲ್ಲಿಸಿ ರಾಜ್ಯದ ನೀರಿನ ವಾಸ್ತವ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಡಲಾಗುವುದು. ಕಾವೇರಿ ಸಮಸ್ಯೆಗೆ ಮೇಕೆದಾಟು ಯೋಜನೆ ಜಾರಿ ಮಾತ್ರ ಶಾಶ್ವತ ಪರಿಹಾರ ಎಂದು ಅವರು ಪುನರುಚ್ಚರಿಸಿದರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    6 hrs ago
  • ಮಳವಳ್ಳಿ ಗೌರಿ ಗಣೇಶ ಹಬ್ಬದ ಅಂಗವಾಗಿ ಹೆಬ್ಬಣಿ ಗ್ರಾಮದಲ್ಲಿ ಕ್ರೀಡಾಕೂಟ: ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಳವಳ್ಳಿ ಗೌರಿ ಗಣೇಶ ಹಬ್ಬದ ಅಂಗವಾಗಿ ಹೆಬ್ಬಣಿ ಗ್ರಾಮದಲ್ಲಿ ಕ್ರೀಡಾಕೂಟ: ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಳವಳ್ಳಿ:ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಗ್ರಾಮಸ್ಥರ ವತಿಯಿಂದ ಸೋಮವಾರ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಪ್ರಾರಂಭದಲ್ಲಿ ಮಣ್ಣಿನ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ಮಾಡಲಾಯಿತು. ಪರಿಸರ ಸ್ನೇಹಿ ಮಣ್ಣಿನ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಗ್ರಾಮಂತರ ವೃತ್ತ ನಿರೀಕ್ಷಕ ಬಸವರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕ್ರೀಡಾಕೂಟದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು . ಹಬ್ಬಗಳಲ್ಲಿ ಕೇವಲ ಪೂಜೆಗೆ ಸೀಮಿತವಾಗಬಾರದು. ಇಂತಹ ಕ್ರೀಡಾಕೂಟಗಳಿಂದ ಮಕ್ಕಳಲ್ಲಿ ಕ್ರೀಡಾ ಮನೋಭಾವ, ಒಗ್ಗಟ್ಟು ಬೆಳೆಯುತ್ತದೆ. ಮೊಬೈಲ್ ಬಿಟ್ಟು ಮೈದಾನಕ್ಕೆ ಬರಬೇಕು. ಮಾದಕ ವ್ಯಸನಗಳಿಂದ ದೂರವಿರಬೇಕು" ಎಂದು ಅವರು ಕಿವಿಮಾತು ಹೇಳಿದರು. *ಕಾರ್ಯಕ್ರಮದಲ್ಲಿ* ಗ್ರಾಮದ ಎಲ್ಲಾ ಜನಾಂಗದ ಮುಖಂಡರು, ಯುವಕ ಸಂಘದ ಪದಾಧಿಕಾರಿಗಳು, ಮಹಿಳೆಯರು ಮಕ್ಕಳು ಗ್ರಾಮಸ್ಥರು ಉಪಸ್ಥಿತರಿದ್ದರು.
    1
    ಮಳವಳ್ಳಿ ಗೌರಿ ಗಣೇಶ ಹಬ್ಬದ ಅಂಗವಾಗಿ ಹೆಬ್ಬಣಿ ಗ್ರಾಮದಲ್ಲಿ ಕ್ರೀಡಾಕೂಟ: ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ
ಮಳವಳ್ಳಿ ಗೌರಿ ಗಣೇಶ ಹಬ್ಬದ ಅಂಗವಾಗಿ ಹೆಬ್ಬಣಿ ಗ್ರಾಮದಲ್ಲಿ ಕ್ರೀಡಾಕೂಟ: ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ
ಮಳವಳ್ಳಿ:ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಗ್ರಾಮಸ್ಥರ ವತಿಯಿಂದ ಸೋಮವಾರ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮಣ್ಣಿನ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ಮಾಡಲಾಯಿತು. ಪರಿಸರ ಸ್ನೇಹಿ ಮಣ್ಣಿನ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಗ್ರಾಮಂತರ ವೃತ್ತ ನಿರೀಕ್ಷಕ ಬಸವರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕ್ರೀಡಾಕೂಟದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು .
ಹಬ್ಬಗಳಲ್ಲಿ ಕೇವಲ ಪೂಜೆಗೆ ಸೀಮಿತವಾಗಬಾರದು. ಇಂತಹ ಕ್ರೀಡಾಕೂಟಗಳಿಂದ ಮಕ್ಕಳಲ್ಲಿ ಕ್ರೀಡಾ ಮನೋಭಾವ, ಒಗ್ಗಟ್ಟು ಬೆಳೆಯುತ್ತದೆ. ಮೊಬೈಲ್ ಬಿಟ್ಟು ಮೈದಾನಕ್ಕೆ ಬರಬೇಕು. ಮಾದಕ ವ್ಯಸನಗಳಿಂದ ದೂರವಿರಬೇಕು" ಎಂದು ಅವರು ಕಿವಿಮಾತು ಹೇಳಿದರು.
*ಕಾರ್ಯಕ್ರಮದಲ್ಲಿ*  ಗ್ರಾಮದ ಎಲ್ಲಾ ಜನಾಂಗದ ಮುಖಂಡರು, ಯುವಕ ಸಂಘದ ಪದಾಧಿಕಾರಿಗಳು, ಮಹಿಳೆಯರು ಮಕ್ಕಳು ಗ್ರಾಮಸ್ಥರು ಉಪಸ್ಥಿತರಿದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    22 hrs ago
  • ಕೆಆರ್ ಪುರ : ಐಟಿಐ ಭೂಮಿ ಹರಾಜು ವಿರೋಧಿಸಿ ಸ್ಥಳೀಯರಿಂದ ಕಾಲ್ನಡಿಗೆ ಜಾಥಾ ಐಟಿಐ ಸಂಸ್ಥೆಗೆ ಸೇರಿದ 44 ಎಕರೆ ಭೂಮಿ ಹರಾಜಿಗೆ ಕೇಂದ್ರ ಸರ್ಕಾರದ ಪ್ರಕಟಣೆ . ಹರಾಜು ನಿರ್ಧಾರಕ್ಕೆ ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ . 44 ಎಕರೆ ಭೂಮಿಯನ್ನು ಹರಾಜು ಮಾಡದೆ ಸಾರ್ವಜನಿಕ ಬಳಕೆಗೆ ಉಳಿಸುವಂತೆ ಆಗ್ರಹ ಖಾಸಗೀಕರಣದಿಂದ ಪರಿಸರಕ್ಕೆ ಹಾನಿಯಾಗುವ ಆತಂಕ .ಐಟಿಐ ಕೈಗಾರಿಕೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಪುನಶ್ಚೇತನಗೊಳಿಸುವಂತೆ ಒತ್ತಾಯ.ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಅಗತ್ಯ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಉತ್ಪಾದಿಸಲು ಆಗ್ರಹ .ಐಟಿಐ ಪುನಶ್ಚೇತನದಿಂದ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಅವಕಾಶ ಎಂದು ಸ್ಥಳೀಯರ ಅಭಿಪ್ರಾಯ .ಸಾರ್ವಜನಿಕ ಆಸ್ತಿಯನ್ನು ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹ 44 ಎಕರೆ ಭೂಮಿ ಹರಾಜು ಪ್ರಕ್ರಿಯೆ ಕೂಡಲೇ ಕೈಬಿಡುವಂತೆ ಒತ್ತಾಯ .ಜಾಥಾ ಬಳಿಕ ಐಟಿಐ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲು ನಿರ್ಧಾರ
    1
    ಕೆಆರ್ ಪುರ : ಐಟಿಐ ಭೂಮಿ ಹರಾಜು ವಿರೋಧಿಸಿ ಸ್ಥಳೀಯರಿಂದ ಕಾಲ್ನಡಿಗೆ ಜಾಥಾ
ಐಟಿಐ ಸಂಸ್ಥೆಗೆ ಸೇರಿದ 44 ಎಕರೆ ಭೂಮಿ ಹರಾಜಿಗೆ ಕೇಂದ್ರ ಸರ್ಕಾರದ ಪ್ರಕಟಣೆ .
ಹರಾಜು ನಿರ್ಧಾರಕ್ಕೆ ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ .
44 ಎಕರೆ ಭೂಮಿಯನ್ನು ಹರಾಜು ಮಾಡದೆ ಸಾರ್ವಜನಿಕ ಬಳಕೆಗೆ ಉಳಿಸುವಂತೆ ಆಗ್ರಹ 
ಖಾಸಗೀಕರಣದಿಂದ ಪರಿಸರಕ್ಕೆ ಹಾನಿಯಾಗುವ ಆತಂಕ .ಐಟಿಐ ಕೈಗಾರಿಕೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಪುನಶ್ಚೇತನಗೊಳಿಸುವಂತೆ ಒತ್ತಾಯ.ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಅಗತ್ಯ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಉತ್ಪಾದಿಸಲು ಆಗ್ರಹ .ಐಟಿಐ ಪುನಶ್ಚೇತನದಿಂದ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಅವಕಾಶ ಎಂದು ಸ್ಥಳೀಯರ ಅಭಿಪ್ರಾಯ .ಸಾರ್ವಜನಿಕ ಆಸ್ತಿಯನ್ನು ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹ
44 ಎಕರೆ ಭೂಮಿ ಹರಾಜು ಪ್ರಕ್ರಿಯೆ ಕೂಡಲೇ ಕೈಬಿಡುವಂತೆ ಒತ್ತಾಯ .ಜಾಥಾ ಬಳಿಕ ಐಟಿಐ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲು ನಿರ್ಧಾರ
    user_Darshan
    Darshan
    Local News Reporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    1 hr ago
  • ಚಪ್ಪಲಿ ಧರಿಸಿಯೇ ಗಣೇಶ ಮೂರ್ತಿ ಹಿಡಿದು ಬಿಜೆಪಿ ಪ್ರತಿಭಟನೆ| Veega News Kannada ಚಪ್ಪಲಿ ಧರಿಸಿಯೇ ಗಣೇಶ ಮೂರ್ತಿ ಹಿಡಿದು ಬಿಜೆಪಿ ಪ್ರತಿಭಟನೆ
    1
    ಚಪ್ಪಲಿ ಧರಿಸಿಯೇ ಗಣೇಶ ಮೂರ್ತಿ ಹಿಡಿದು ಬಿಜೆಪಿ ಪ್ರತಿಭಟನೆ| Veega News Kannada 
ಚಪ್ಪಲಿ ಧರಿಸಿಯೇ ಗಣೇಶ ಮೂರ್ತಿ ಹಿಡಿದು ಬಿಜೆಪಿ ಪ್ರತಿಭಟನೆ
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ:ಒರ್ವ ಸಾವು ,ಮೂವರಿಗೆ ಗಾಯ ಬೆಂಗಳೂರು:ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ.ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ ಹೊಡೆದಿದೆ.ಬರ್ತಿದ್ದ ರಸ್ತೆಯಿಂದ ಡಿವೈಡರ್ ದಾಟಿ ಮತ್ತೊಂದು ರಸ್ತೆಯಲ್ಲಿ ಬರ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಒರ್ವ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ನಡೆದಿದೆ.ಶಿಡ್ಲಘಟ್ಟ ಮೂಲಕ ವೆಂಕಟೇಶಪ್ಪ ( 75 ) ಮೃತ ವ್ಯಕ್ತಿ.ಮುನಿಅಕ್ಕಯಮ್ಮ, ಮಾಲಾ ಮತ್ತು ಪವನ್ ಕುಮಾರ್ ಗೆ ಗಂಭೀರ ಗಾಯವಾಗಿದೆ.ಗಾಯಾಳುಗಳಿಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .
    1
    ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ:ಒರ್ವ ಸಾವು ,ಮೂವರಿಗೆ ಗಾಯ

ಬೆಂಗಳೂರು:ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ.ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ ಹೊಡೆದಿದೆ.ಬರ್ತಿದ್ದ ರಸ್ತೆಯಿಂದ ಡಿವೈಡರ್ ದಾಟಿ  ಮತ್ತೊಂದು ರಸ್ತೆಯಲ್ಲಿ ಬರ್ತಿದ್ದ ಕಾರಿಗೆ ಡಿಕ್ಕಿ ಹೊಡೆದ  ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಒರ್ವ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ನಡೆದಿದೆ.ಶಿಡ್ಲಘಟ್ಟ ಮೂಲಕ ವೆಂಕಟೇಶಪ್ಪ ( 75 ) ಮೃತ ವ್ಯಕ್ತಿ.ಮುನಿಅಕ್ಕಯಮ್ಮ, ಮಾಲಾ ಮತ್ತು ಪವನ್ ಕುಮಾರ್ ಗೆ ಗಂಭೀರ ಗಾಯವಾಗಿದೆ.ಗಾಯಾಳುಗಳಿಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    10 hrs ago
  • ಹೆಚ್ಡಿಕೆ ಕೇಂದ್ರ ಮಂತ್ರಿಯಂತೆ ವರ್ತಿಸಲಿ- ಹೆಚ್.ಸಿ.ಬಾಲಕೃಷ್ಣ ವ್ಯಂಗ್ಯ :ಹೆಚ್ಡಿಕೆ ಕೇಂದ್ರ ಮಂತ್ರಿಯಂತೆ ವರ್ತಿಸಲಿ, ಗ್ರಾಮ ಪಂಚಾಯತಿ ಸದಸ್ಯರಂತೆ ಅಲ್ಲ - ಪೌರಾಢಳಿತ ಸಚಿವ ಹೆಚ್.ಸಿ.ಬಾಲಕೃಷ್ಣ: ನೈಸ್, ಕೆಪಿಎಸ್ಸಿ ಹಗರಣ ಹಾಗೂ ಬಿಡದಿ ಟೌನ್ ಶಿಪ್ ವಿಚಾರವಾಗಿ ನಾವು ಧ್ವನಿ ಎತ್ತಿದ್ದಕ್ಕೆ ಪ್ರಜ್ವಲ್ ವಿಚಾರ ಮುನ್ನೆಲೆಗೆ ತಂದಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ ಕ್ಕೆ ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದ ಪೌರಾಢಳಿತ ಸಚಿವ ಹೆಚ್.ಸಿ.ಬಾಲಕೃಷ್ಣ .ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಆ ಪ್ರಕರಣಗಳಿಗೂ ಏನು ಸಂಬಂಧ.? ಹೀಗೆ ಮಾತನಾಡಿಯೇ ಪ್ರಜ್ವಲ್ ರನ್ನ ಜೈಲಿಗೆ ಕಳುಹಿಸಿದ್ರು. ಪ್ರಜ್ವಲ್ ರೇವಣ್ಣ ಜೈಲಲ್ಲೇ ಇರಬೇಕು ಅನ್ನೋದು ಕುಮಾರಸ್ವಾಮಿ ಅಭಿಲಾಷೆ. ಜವಾಬ್ದಾರಿಯುತ ಮಂತ್ರಿ ಸ್ವಲ್ಪ ಗೌರವಯುತವಾಗಿ ಮಾತನಾಡಿ. ಕೇಂದ್ರ ಮಂತ್ರಿ ಅನ್ನೋದನ್ನ ಮರೆತು ಪಂಚಾಯ್ತಿ ಮೆಂಬರ್ ರೀತಿ ಆಡ್ತಿದ್ದಾರೆ. ಪ್ರಜ್ವಲ್ ಮುಗಿಸುವ ತನಕ ಕುಮಾರಸ್ವಾಮಿ ಸುಮ್ಮನಿರಲ್ಲ. ಎಂದು ಸಚಿವ ಹೆಚ್.ಸಿ.ಬಾಲಕೃಷ್ಣ, ಕೇಂದ್ರ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು
    1
    ಹೆಚ್ಡಿಕೆ ಕೇಂದ್ರ ಮಂತ್ರಿಯಂತೆ ವರ್ತಿಸಲಿ- ಹೆಚ್.ಸಿ.ಬಾಲಕೃಷ್ಣ ವ್ಯಂಗ್ಯ
:ಹೆಚ್ಡಿಕೆ ಕೇಂದ್ರ ಮಂತ್ರಿಯಂತೆ ವರ್ತಿಸಲಿ, ಗ್ರಾಮ ಪಂಚಾಯತಿ ಸದಸ್ಯರಂತೆ ಅಲ್ಲ - ಪೌರಾಢಳಿತ ಸಚಿವ ಹೆಚ್.ಸಿ.ಬಾಲಕೃಷ್ಣ:
ನೈಸ್, ಕೆಪಿಎಸ್ಸಿ ಹಗರಣ ಹಾಗೂ ಬಿಡದಿ ಟೌನ್ ಶಿಪ್ ವಿಚಾರವಾಗಿ ನಾವು ಧ್ವನಿ ಎತ್ತಿದ್ದಕ್ಕೆ ಪ್ರಜ್ವಲ್ ವಿಚಾರ ಮುನ್ನೆಲೆಗೆ ತಂದಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ ಕ್ಕೆ ರಾಮನಗರದಲ್ಲಿ  ಪ್ರತಿಕ್ರಿಯೆ ನೀಡಿದ  ಪೌರಾಢಳಿತ ಸಚಿವ ಹೆಚ್.ಸಿ.ಬಾಲಕೃಷ್ಣ
.ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಆ ಪ್ರಕರಣಗಳಿಗೂ ಏನು ಸಂಬಂಧ.? ಹೀಗೆ ಮಾತನಾಡಿಯೇ ಪ್ರಜ್ವಲ್ ರನ್ನ ಜೈಲಿಗೆ ಕಳುಹಿಸಿದ್ರು. ಪ್ರಜ್ವಲ್ ರೇವಣ್ಣ ಜೈಲಲ್ಲೇ ಇರಬೇಕು ಅನ್ನೋದು ಕುಮಾರಸ್ವಾಮಿ ಅಭಿಲಾಷೆ. ಜವಾಬ್ದಾರಿಯುತ ಮಂತ್ರಿ ಸ್ವಲ್ಪ ಗೌರವಯುತವಾಗಿ ಮಾತನಾಡಿ. ಕೇಂದ್ರ ಮಂತ್ರಿ ಅನ್ನೋದನ್ನ ಮರೆತು ಪಂಚಾಯ್ತಿ ಮೆಂಬರ್ ರೀತಿ ಆಡ್ತಿದ್ದಾರೆ. ಪ್ರಜ್ವಲ್ ಮುಗಿಸುವ ತನಕ ಕುಮಾರಸ್ವಾಮಿ ಸುಮ್ಮನಿರಲ್ಲ. ಎಂದು ಸಚಿವ ಹೆಚ್.ಸಿ.ಬಾಲಕೃಷ್ಣ, ಕೇಂದ್ರ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು
    user_ರಮೇಶ್.ಆರ್
    ರಮೇಶ್.ಆರ್
    ಚನ್ನಪಟ್ಟಣ, ರಾಮನಗರ, ಕರ್ನಾಟಕ•
    4 hrs ago
  • ಪ್ರಜಾಪ್ರಭುತ್ವದ ಮೌಲ್ಯಗಳನ್ನು ಯುವಜನರು ಅರಿಯಬೇಕು- ಎನ್. ಚಲುವರಾಯಸ್ವಾಮ ಮಂಡ್ಯ- ಜಾತಿ, ಧರ್ಮ, ಮೇಲು-ಕೀಳು, ಅಂತಸ್ತು, ಅಧಿಕಾರ ಹಾಗೂ ಆರ್ಥಿಕ ಅಸಮಾನತೆಗಳನ್ನು ಮೀರಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು, ನ್ಯಾಯ, ಸ್ವಾತಂತ್ರ್ಯ ಹಾಗೂ ಅವಕಾಶಗಳನ್ನು ಒದಗಿಸುವ ವ್ಯವಸ್ಥೆಯೇ ಪ್ರಜಾಪ್ರಭುತ್ವವಾಗಿದ್ದು, ಇದರ ಮೌಲ್ಯಗಳನ್ನು ಯುವಜನರು ಆಳವಾಗಿ ಅರಿತುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವವು ಕೇವಲ ಆಡಳಿತ ವ್ಯವಸ್ಥೆಯಲ್ಲ. ಪ್ರತಿಯೊಬ್ಬ ನಾಗರಿಕನ ಹಕ್ಕು, ಸ್ವಾತಂತ್ರ್ಯ, ಸಮಾನತೆ ಮತ್ತು ಗೌರವವನ್ನು ಸಂರಕ್ಷಿಸುವ ವ್ಯವಸ್ಥೆಯಾಗಿದೆ. ಈ ಮೌಲ್ಯಗಳನ್ನು ನಮಗೆ ನೀಡಿರುವ ಸಂವಿಧಾನವನ್ನು ಗೌರವಿಸಿ, ಅದರ ಆಶಯಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಪ್ರತಿ ವರ್ಷ ಸೆಪ್ಟೆಂಬರ್ 15ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದ್ದು, ವಿಶ್ವದಾದ್ಯಂತ ಪ್ರಜಾಪ್ರಭುತ್ವದ ಮೌಲ್ಯಗಳು, ಜನರ ಹಕ್ಕುಗಳು ಹಾಗೂ ಜವಾಬ್ದಾರಿಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ದೇಶದಲ್ಲಿಯೂ ಕೇಂದ್ರ, ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಪ್ರಜಾಪ್ರಭುತ್ವದ ಮಹತ್ವವನ್ನು ಸಾರಲಾಗುತ್ತಿದೆ ಎಂದು ತಿಳಿಸಿದರು. *ಯುವಜನರಲ್ಲಿ ಸಂವಿಧಾನ ಪ್ರಜ್ಞೆ ಅಗತ್ಯ* ಇಂದಿನ ಯುವಜನರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಎಷ್ಟು ಆಳವಾಗಿ ಅರ್ಥಮಾಡಿಕೊಳ್ಳುತ್ತಾರೋ, ಅಷ್ಟು ಬಲಿಷ್ಠವಾಗಿ ಹಾಗೂ ಜವಾಬ್ದಾರಿಯುತವಾಗಿ ದೇಶವನ್ನು ಮುನ್ನಡೆಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಎಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಂವಿಧಾನ, ಪ್ರಜಾಪ್ರಭುತ್ವ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ತಿಳಿದುಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು. ದೇಶದ ಸಂವಿಧಾನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನಾ ಸಮಿತಿಯ ಸದಸ್ಯರನ್ನು ಗೌರವದಿಂದ ಸ್ಮರಿಸಬೇಕು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನಾಯಕತ್ವ ನೀಡಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಜನಸಾಮಾನ್ಯರು ಮಾಡಿದ ತ್ಯಾಗ ಮತ್ತು ಹೋರಾಟದ ಫಲವಾಗಿ ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪುಗೊಂಡಿದೆ ಎಂದರು. *ಶಿಕ್ಷಣ ಸಂಸ್ಥೆಗಳಲ್ಲಿ ಸಂವಿಧಾನ ಅರಿವು ಮೂಡಿಸಿ* ಶಾಲಾ-ಕಾಲೇಜುಗಳ ಶಿಕ್ಷಕರು, ಪ್ರಾಂಶುಪಾಲರು ಹಾಗೂ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಂವಿಧಾನವು ಕೇವಲ ಪಠ್ಯಪುಸ್ತಕದ ವಿಷಯವಾಗದೆ, ವಿದ್ಯಾರ್ಥಿಗಳ ಜೀವನದ ಭಾಗವಾಗಬೇಕು. ಇಂದಿನ ಮಕ್ಕಳು ನಾಳಿನ ದೇಶದ ನಾಯಕರು. ಅವರಲ್ಲಿ ಸಂವಿಧಾನ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಸಮಾನತೆಯ ಮನೋಭಾವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ರವರು ಕಾರ್ಯಕ್ರಮದಲ್ಲಿ ಭಾರತ ಸಂವಿಧಾನ ಪೀಠಿಕೆಯನ್ನು ಭೋದಿಸಿದರು* ಕಾರ್ಯಕ್ರಮದಲ್ಲಿ ಮಂಡ್ಯ ನಗರಾಭಿವೃದ್ಥಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಪಿ. ಪ್ರಕಾಶ್, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ವಿಜಯಲಕ್ಷ್ಮಿ ರಘುನಂದನ್, ಜಿಲ್ಲಾಧಿಕಾರಿಗಳಾದ ಡಾ. ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ. ಆರ್ ನಂದಿನಿ, ಅಪರ ಜಿಲ್ಲಾಧಿಕಾರಿಗಳಾದ ಬಿ.ಸಿ ಶಿವಾನಂದಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ್, ಡಿ.ವೈ.ಎಸ್.ಪಿ ಹೆಚ್. ಲಕ್ಷ್ಮೀನಾರಾಯಣ ಪ್ರಸಾದ್, ಪದವಿ ಪೂರ್ವ ಕಾಲೇಜಿನ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.
    1
    ಪ್ರಜಾಪ್ರಭುತ್ವದ ಮೌಲ್ಯಗಳನ್ನು ಯುವಜನರು ಅರಿಯಬೇಕು- ಎನ್. ಚಲುವರಾಯಸ್ವಾಮ
ಮಂಡ್ಯ-  ಜಾತಿ, ಧರ್ಮ, ಮೇಲು-ಕೀಳು, ಅಂತಸ್ತು, ಅಧಿಕಾರ ಹಾಗೂ ಆರ್ಥಿಕ ಅಸಮಾನತೆಗಳನ್ನು ಮೀರಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು, ನ್ಯಾಯ, ಸ್ವಾತಂತ್ರ್ಯ ಹಾಗೂ ಅವಕಾಶಗಳನ್ನು ಒದಗಿಸುವ ವ್ಯವಸ್ಥೆಯೇ ಪ್ರಜಾಪ್ರಭುತ್ವವಾಗಿದ್ದು, ಇದರ ಮೌಲ್ಯಗಳನ್ನು ಯುವಜನರು ಆಳವಾಗಿ ಅರಿತುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವವು ಕೇವಲ ಆಡಳಿತ ವ್ಯವಸ್ಥೆಯಲ್ಲ. ಪ್ರತಿಯೊಬ್ಬ ನಾಗರಿಕನ ಹಕ್ಕು, ಸ್ವಾತಂತ್ರ್ಯ, ಸಮಾನತೆ ಮತ್ತು ಗೌರವವನ್ನು ಸಂರಕ್ಷಿಸುವ ವ್ಯವಸ್ಥೆಯಾಗಿದೆ. ಈ ಮೌಲ್ಯಗಳನ್ನು ನಮಗೆ ನೀಡಿರುವ ಸಂವಿಧಾನವನ್ನು ಗೌರವಿಸಿ, ಅದರ ಆಶಯಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಪ್ರತಿ ವರ್ಷ ಸೆಪ್ಟೆಂಬರ್ 15ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದ್ದು, ವಿಶ್ವದಾದ್ಯಂತ ಪ್ರಜಾಪ್ರಭುತ್ವದ ಮೌಲ್ಯಗಳು, ಜನರ ಹಕ್ಕುಗಳು ಹಾಗೂ ಜವಾಬ್ದಾರಿಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ದೇಶದಲ್ಲಿಯೂ ಕೇಂದ್ರ, ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಪ್ರಜಾಪ್ರಭುತ್ವದ ಮಹತ್ವವನ್ನು ಸಾರಲಾಗುತ್ತಿದೆ ಎಂದು ತಿಳಿಸಿದರು.
*ಯುವಜನರಲ್ಲಿ ಸಂವಿಧಾನ ಪ್ರಜ್ಞೆ ಅಗತ್ಯ*
ಇಂದಿನ ಯುವಜನರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಎಷ್ಟು ಆಳವಾಗಿ ಅರ್ಥಮಾಡಿಕೊಳ್ಳುತ್ತಾರೋ, ಅಷ್ಟು ಬಲಿಷ್ಠವಾಗಿ ಹಾಗೂ ಜವಾಬ್ದಾರಿಯುತವಾಗಿ ದೇಶವನ್ನು ಮುನ್ನಡೆಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಎಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಂವಿಧಾನ, ಪ್ರಜಾಪ್ರಭುತ್ವ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ತಿಳಿದುಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.
ದೇಶದ ಸಂವಿಧಾನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನಾ ಸಮಿತಿಯ ಸದಸ್ಯರನ್ನು ಗೌರವದಿಂದ ಸ್ಮರಿಸಬೇಕು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನಾಯಕತ್ವ ನೀಡಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಜನಸಾಮಾನ್ಯರು ಮಾಡಿದ ತ್ಯಾಗ ಮತ್ತು ಹೋರಾಟದ ಫಲವಾಗಿ ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪುಗೊಂಡಿದೆ ಎಂದರು.
*ಶಿಕ್ಷಣ ಸಂಸ್ಥೆಗಳಲ್ಲಿ ಸಂವಿಧಾನ ಅರಿವು ಮೂಡಿಸಿ*
ಶಾಲಾ-ಕಾಲೇಜುಗಳ ಶಿಕ್ಷಕರು, ಪ್ರಾಂಶುಪಾಲರು ಹಾಗೂ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಂವಿಧಾನವು ಕೇವಲ ಪಠ್ಯಪುಸ್ತಕದ ವಿಷಯವಾಗದೆ, ವಿದ್ಯಾರ್ಥಿಗಳ ಜೀವನದ ಭಾಗವಾಗಬೇಕು.
ಇಂದಿನ ಮಕ್ಕಳು ನಾಳಿನ ದೇಶದ ನಾಯಕರು. ಅವರಲ್ಲಿ ಸಂವಿಧಾನ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಸಮಾನತೆಯ ಮನೋಭಾವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ರವರು ಕಾರ್ಯಕ್ರಮದಲ್ಲಿ ಭಾರತ ಸಂವಿಧಾನ ಪೀಠಿಕೆಯನ್ನು ಭೋದಿಸಿದರು*
ಕಾರ್ಯಕ್ರಮದಲ್ಲಿ ಮಂಡ್ಯ ನಗರಾಭಿವೃದ್ಥಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಪಿ. ಪ್ರಕಾಶ್, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ವಿಜಯಲಕ್ಷ್ಮಿ ರಘುನಂದನ್, ಜಿಲ್ಲಾಧಿಕಾರಿಗಳಾದ ಡಾ. ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ. ಆರ್ 
ನಂದಿನಿ, ಅಪರ ಜಿಲ್ಲಾಧಿಕಾರಿಗಳಾದ ಬಿ.ಸಿ  ಶಿವಾನಂದಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ್,  ಡಿ.ವೈ.ಎಸ್.ಪಿ ಹೆಚ್. ಲಕ್ಷ್ಮೀನಾರಾಯಣ ಪ್ರಸಾದ್, ಪದವಿ ಪೂರ್ವ ಕಾಲೇಜಿನ ಉಪ ನಿರ್ದೇಶಕರಾದ  ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    6 hrs ago
  • ಗೌರಿ ಗಣೇಶ ಹಬ್ಬದ ಬೆಳಗು ಎಂದರೆ ಅದೇ ಒಂದು ಚಂದ ಮಾಮರ ನ್ಯೂಸ್ ಹಾಗೆ ಸುಮ್ಮನೆ ಗೌರಿ ಗಣೇಶ ಹಬ್ಬದ ಬೆಳಗು ಎಂದರೆ ಅದೇ ಒಂದು ಚಂದ ಮಳವಳ್ಳಿ ಹಬ್ಬದ ಬೆಳಗು ಎಂದರೆ ಅದೇ ಒಂದು ಚಂದ. ಇಂದು ಗೌರಿ ಗಣೇಶ ಹಬ್ಬದ ದಿನ ಬೆಳಿಗ್ಗೆಯಿಂದಲೇ ವಾತಾವರಣ ತುಂಬಾ ಸುಂದರವಾಗಿ ಕಂಗೊಳಿಸುತ್ತಿದೆ. ಬೆಳಗ್ಗೆ 6 ಗಂಟೆಯಿಂದಲೇ ಮೋಡ ಕವಿದ ವಾತಾವರಣ, ತಂಪಾದ ಗಾಳಿ. ಎಲ್ಲೆಡೆ ಹಬ್ಬದ ಸಂಭ್ರಮ. ಮನೆ ಮನೆಗಳಲ್ಲಿ ಗೌರಿ ದೇವಿ ಮತ್ತು ಗಣಪತಿಯ ಅಲಂಕಾರ, ಮಾವಿನ ತೋರಣ, ಹೂವಿನ ಸುವಾಸನೆ. ಬೀದಿಗಳಲ್ಲಿ ಜನರ ಓಡಾಟ, ಹೊಸ ಬಟ್ಟೆ ತೊಟ್ಟ ಮಕ್ಕಳ ಖುಷಿ. ಮಧ್ಯಾಹ್ನದ ಹೊತ್ತಿಗೆ ಇದ್ದಕ್ಕಿದ್ದಂತೆ ಸಣ್ಣಗೆ ಮಳೆ ಆರಂಭವಾಯಿತು. ಬಿಸಿಲು ಮತ್ತು ಮಳೆಯ ಜುಗಲ್ ಬಂದಿ. ಹಬ್ಬಕ್ಕೆ ಮಳೆ ದೇವರ ಆಶೀರ್ವಾದದಂತೆ ಬಂದಂತಿತ್ತು. *ಮಳೆಯ ಅಂದ ಚಂದ:* - ತುಂತುರು ಮಳೆಯಲ್ಲಿ ಮಣ್ಣಿನ ಪರಿಮಳ ಘಮಿಸುತ್ತಿತ್ತು. - ರಸ್ತೆಗಳು ತೊಳೆದಂತೆ ಸ್ವಚ್ಛವಾದವು, ಮರ ಗಿಡಗಳು ಹಸಿರಾಗಿ ನಳನಳಿಸಿದವು. - ಮಕ್ಕಳು ಮಳೆಯಲ್ಲಿ ಕುಣಿದು ಕುಪ್ಪಳಿಸುತ್ತಾ ಗಣಪತಿಯನ್ನು ನೋಡಲು ಸಂಭ್ರಮಿಸಿದರು. - ಮಳೆಯೊಂದಿಗೆ ಬೀಸಿದ ತಂಗಾಳಿಗೆ ಗಣೇಶನ ಮಂಟಪಗಳಲ್ಲಿನ ದೀಪಗಳು ಮಿನುಗುತ್ತಾ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದವು. ಈ ಮಳೆ ಕೇವಲ ನೀರಲ್ಲ, ಹಬ್ಬದ ಖುಷಿಗೆ ಇನ್ನಷ್ಟು ಮೆರುಗು ನೀಡಿದ ಪ್ರಕೃತಿಯ ಉಡುಗೊರೆ. ಗೌರಿ ಗಣೇಶನ ಆಗಮನದೊಂದಿಗೆ ಮಳೆಯ ಆಗಮನ ನಾಡಿಗೆ ಸಮೃದ್ಧಿಯ ಸಂಕೇತ ಎಂಬ ನಂಬಿಕೆ ಜನರಲ್ಲಿ ಇದೆ. ಒಟ್ಟಾರೆ, ಭಕ್ತಿ, ಸಂಭ್ರಮ, ಸುಂದರ ವಾತಾವರಣ ಮತ್ತು ಸಂತಸದ ಮಳೆಯೊಂದಿಗೆ ಈ ಬಾರಿಯ ಗೌರಿ ಗಣೇಶ ಹಬ್ಬ ಅವಿಸ್ಮರಣೀಯವಾಗಿ ಮೂಡಿಬಂದಿದೆ.
    1
    ಗೌರಿ ಗಣೇಶ ಹಬ್ಬದ ಬೆಳಗು ಎಂದರೆ ಅದೇ ಒಂದು ಚಂದ
ಮಾಮರ ನ್ಯೂಸ್ ಹಾಗೆ ಸುಮ್ಮನೆ 
ಗೌರಿ ಗಣೇಶ ಹಬ್ಬದ ಬೆಳಗು ಎಂದರೆ ಅದೇ ಒಂದು ಚಂದ
ಮಳವಳ್ಳಿ ಹಬ್ಬದ ಬೆಳಗು ಎಂದರೆ ಅದೇ ಒಂದು ಚಂದ. ಇಂದು ಗೌರಿ ಗಣೇಶ ಹಬ್ಬದ ದಿನ ಬೆಳಿಗ್ಗೆಯಿಂದಲೇ ವಾತಾವರಣ ತುಂಬಾ ಸುಂದರವಾಗಿ ಕಂಗೊಳಿಸುತ್ತಿದೆ.
ಬೆಳಗ್ಗೆ 6 ಗಂಟೆಯಿಂದಲೇ ಮೋಡ ಕವಿದ ವಾತಾವರಣ, ತಂಪಾದ ಗಾಳಿ. ಎಲ್ಲೆಡೆ ಹಬ್ಬದ ಸಂಭ್ರಮ. ಮನೆ ಮನೆಗಳಲ್ಲಿ ಗೌರಿ ದೇವಿ ಮತ್ತು ಗಣಪತಿಯ ಅಲಂಕಾರ, ಮಾವಿನ ತೋರಣ, ಹೂವಿನ ಸುವಾಸನೆ. ಬೀದಿಗಳಲ್ಲಿ ಜನರ ಓಡಾಟ, ಹೊಸ ಬಟ್ಟೆ ತೊಟ್ಟ ಮಕ್ಕಳ ಖುಷಿ.
ಮಧ್ಯಾಹ್ನದ ಹೊತ್ತಿಗೆ ಇದ್ದಕ್ಕಿದ್ದಂತೆ ಸಣ್ಣಗೆ ಮಳೆ ಆರಂಭವಾಯಿತು. ಬಿಸಿಲು ಮತ್ತು ಮಳೆಯ ಜುಗಲ್ ಬಂದಿ. ಹಬ್ಬಕ್ಕೆ ಮಳೆ ದೇವರ ಆಶೀರ್ವಾದದಂತೆ ಬಂದಂತಿತ್ತು.
*ಮಳೆಯ ಅಂದ ಚಂದ:*
- ತುಂತುರು ಮಳೆಯಲ್ಲಿ ಮಣ್ಣಿನ ಪರಿಮಳ ಘಮಿಸುತ್ತಿತ್ತು.
- ರಸ್ತೆಗಳು ತೊಳೆದಂತೆ ಸ್ವಚ್ಛವಾದವು, ಮರ ಗಿಡಗಳು ಹಸಿರಾಗಿ ನಳನಳಿಸಿದವು.
- ಮಕ್ಕಳು ಮಳೆಯಲ್ಲಿ ಕುಣಿದು ಕುಪ್ಪಳಿಸುತ್ತಾ ಗಣಪತಿಯನ್ನು ನೋಡಲು ಸಂಭ್ರಮಿಸಿದರು.
- ಮಳೆಯೊಂದಿಗೆ ಬೀಸಿದ ತಂಗಾಳಿಗೆ ಗಣೇಶನ ಮಂಟಪಗಳಲ್ಲಿನ ದೀಪಗಳು ಮಿನುಗುತ್ತಾ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದವು.
ಈ ಮಳೆ ಕೇವಲ ನೀರಲ್ಲ, ಹಬ್ಬದ ಖುಷಿಗೆ ಇನ್ನಷ್ಟು ಮೆರುಗು ನೀಡಿದ ಪ್ರಕೃತಿಯ ಉಡುಗೊರೆ. ಗೌರಿ ಗಣೇಶನ ಆಗಮನದೊಂದಿಗೆ ಮಳೆಯ ಆಗಮನ ನಾಡಿಗೆ ಸಮೃದ್ಧಿಯ ಸಂಕೇತ ಎಂಬ ನಂಬಿಕೆ ಜನರಲ್ಲಿ ಇದೆ.
ಒಟ್ಟಾರೆ, ಭಕ್ತಿ, ಸಂಭ್ರಮ, ಸುಂದರ ವಾತಾವರಣ ಮತ್ತು ಸಂತಸದ ಮಳೆಯೊಂದಿಗೆ ಈ ಬಾರಿಯ ಗೌರಿ ಗಣೇಶ ಹಬ್ಬ ಅವಿಸ್ಮರಣೀಯವಾಗಿ ಮೂಡಿಬಂದಿದೆ.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    22 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.