ಸಂಪತ್ತಿಗಿಂತ ಸಂಸ್ಕಾರವೇ ದೊಡ್ಡದು: ಲಕ್ಷ್ಮಿಯಅನುಗ್ರಹ ಸಾಧ್ಯ: ಶ್ರೀ ಪೂರ್ಣಾನಂದ ಸ್ವಾಮೀಜಿ. ಶಿಡ್ಲಘಟ್ಟ: ಮನುಷ್ಯನ ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳು ಪ್ರಮುಖವಾಗಿವೆ. ಇದರಲ್ಲಿ ಧರ್ಮದ ಹಾದಿಯಲ್ಲಿ ಗಳಿಸಿದ ಸಂಪತ್ತು (ಅರ್ಥ) ಮಾತ್ರ ನಮಗೆ ನಿಜವಾದ ಸುಖ ಮತ್ತು ಶಾಂತಿಯನ್ನು ನೀಡಲು ಸಾಧ್ಯ ಎಂದು ಚಿಕ್ಕಬಳ್ಳಾಪುರದ ಶ್ರೀ ರಾಮಕೃಷ್ಣ ವಿವೇಕಾನಂದ ಮಠದ ಶ್ರೀ ಪೂರ್ಣಾನಂದ ಸ್ವಾಮೀಜಿ ಅವರು ಪ್ರತಿಪಾದಿಸಿದರು. ಬೆಳ್ಳೂಟಿಯ ಶ್ರೀ ಗುಟ್ಟಾಂಜನೇಯಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಾಮೂಹಿಕ ಶ್ರೀ ಲಕ್ಷ್ಮೀ ಪೂಜಾ ಸಮಿತಿ ಹಾಗೂ ಬೆಳ್ಳೂಟಿ ಪ್ರಗತಿ ಬಂಧು ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ 'ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ' ವಿಜೃಂಭಣೆಯಿಂದ ನೆರವೇರಿತು. ಶ್ರೀ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಶ್ರದ್ಧಾಭಕ್ತಿಯಿಂದ ಮಹಾಲಕ್ಷ್ಮಿಯ ಪೂಜೆಯನ್ನು ನೆರವೇರಿಸಿದರು. ಗ್ರಾಮದ ಸುಭಿಕ್ಷೆ ಮತ್ತು ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮೊದಲಿಗೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಚಿಕ್ಕಬಳ್ಳಾಪುರದ ಶ್ರೀ ರಾಮಕೃಷ್ಣ ವಿವೇಕಾನಂದ ಮಠದ ಶ್ರೀ ಪೂರ್ಣಾನಂದ ಸ್ವಾಮೀಜಿ ಅವರು, ಇಂದು ಸಮಾಜದಲ್ಲಿ ಸಾಕಷ್ಟು ಹಣವಿದ್ದರೂ ಜನರಲ್ಲಿ ನೆಮ್ಮದಿ ಇಲ್ಲದಿರುವುದಕ್ಕೆ ಧರ್ಮದ ತಳಹದಿಯ ಕೊರತೆಯೇ ಕಾರಣ. ಕೇವಲ ಹಣದಿಂದ ಆರೋಗ್ಯವನ್ನಾಗಲಿ ಅಥವಾ ಜ್ಞಾನವನ್ನಾಗಲಿ ಕೊಳ್ಳಲು ಸಾಧ್ಯವಿಲ್ಲ. ನಾವು ಮಾಡುವ ಲಕ್ಷ್ಮಿ ಪೂಜೆಯು ಸಾರ್ಥಕವಾಗಬೇಕಾದರೆ ನಮ್ಮ ಸಂಪತ್ತು ಧರ್ಮದ ಹಾದಿಯಲ್ಲಿ ಬಂದಿರಬೇಕು. ಭಗವಂತನ ಅನುಗ್ರಹವಿದ್ದರೆ ಮಾತ್ರ ಆರೋಗ್ಯ, ಶಾಂತಿ ಮತ್ತು ಸಮೃದ್ಧಿ ನೆಲೆಸಲು ಸಾಧ್ಯ. ಈ ನಿಟ್ಟಿನಲ್ಲಿ ಧರ್ಮಸ್ಥಳ ಕ್ಷೇತ್ರವು ದಾನ, ಆರೋಗ್ಯ ಮತ್ತು ವಿದ್ಯಾ ದಾನದ ಮೂಲಕ ಲೋಕಕಲ್ಯಾಣ ಮಾಡುತ್ತಿದೆ ಎಂದು ಶ್ಲಾಘಿಸಿದರು. ನಂತರ ಮಾತನಾಡಿದ ಯೋಜನಾಧಿಕಾರಿ ಪ್ರಸಾದ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕ್ ಮತ್ತು ಗ್ರಾಮೀಣ ಸಂಘಟನೆಗಳ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹಳ್ಳಿಯ ಜನರ ಆರ್ಥಿಕ ಮತ್ತು ಸಾಮಾಜಿಕ ಏಳಿಗೆಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು. ಯೋಜನೆಯಡಿ ಸ್ವ-ಸಹಾಯ ಸಂಘಗಳನ್ನು ರಚಿಸಿ, ಬ್ಯಾಂಕುಗಳ ಮೂಲಕ ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು. ನಂತರ ವೇದಿಕೆಯಲ್ಲಿರುವ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಾಮೂಹಿಕ ಶ್ರೀ ಲಕ್ಷ್ಮೀಪೂಜಾ ವ್ಯವಸ್ಥಾಪನಾ ಸಮಿತಿ ಬೆಳ್ಳೂಟಿ ಅಧ್ಯಕ್ಷರಾದ ಹೆಚ್. ಕೆ. ಸುರೇಶ್, ಮಾಜಿ ಕೆ.ಎಂ.ಎಫ್. ನಿರ್ದೇಶಕರಾದ ಶ್ರೀನಿವಾಸ್ ರಾಮಯ್ಯ, ರೈತ ಮುಖಂಡರಾದ ಮುನಿಕೆಂಪಣ್ಣ, ಸುಗಟೂರು ನಾಗೇಶ್, ಆನೂರಿನ ಯೋಗ ಶಿಕ್ಷಕರಾದ ಶ್ರೀನಿವಾಸ್,ಬೆಳ್ಳೂಟಿ ವಲಯದ ಮೇಲ್ವಿಚಾರಕಿ ಮೇಘನಾ,ರಾಮಚಂದ್ರ, ಹುಜುಗೂರು ಬಚ್ಚೇಗೌಡ ,ಲಕ್ಷ್ಮೀದೇವಮ್ಮ ದೇವರಾಜ್, ಕಲ್ಪನಾ ಮುನಿರಾಜು,ಹೆಚ್. ಕೆ. ನಾಗೇಶ್‌ಗೌಡ,ಚಿಕ್ಕಣ್ಣ ಹಾಗೂ ನೂರಕ್ಕೂ ಹೆಚ್ಚು ಮಹಿಳೆಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರದಿ ನಂದಿ ರಾಜೇಶ್ ಶಿಡ್ಲಘಟ್ಟ

- ಮಾಧ್ಯಮದವರ ಮೇಲೆ ಗೂಂಡಾ ವರ್ತನೆ ತೋರಿದ ರಾಮಮೂರ್ತಿನಗರ ಪೊಲೀಸ್ ಠಾಣಾ ಎಎಸ್ಐ ಶಿವಕುಮಾರ್1
- ತುಮಕೂರು : ರಾಷ್ಟ್ರೀಯ ಹೆದ್ದಾರಿ 4 ರ ಸಮೀಪ ವಿರುವ ಬಾಲಾಜಿ ಟ್ರಾನ್ಸ್ಪೋರ್ಟ್ ಅಲ್ಲಿ ಅಗ್ನಿ ಅವಘಡ ಸಂಭವಿಸಿದೆ ಟೈರ್ಗಳು ಸುಟ್ಟು ಕರಕಲಾಗಿ ದಟ್ಟ ಹೊಗೆ ಕಂಡು ಬಂದಿದೆ1
- ಮಾಗಡಿ : ಡಿಕೆ.ಶಿವಕುಮಾರು ಯಾಗಾಗ ಮುಖ್ಯಮಂತ್ರಿ ಆಲಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಅದನ್ನೆ ಕೇಳಲು ದೆಹಲಿಗೆ ಹೋಗುತ್ತಿದ್ದೇವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಉತ್ತರಿಸಿದರು. ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಈಗಾಗಲೇ ತೆರಳಿದ್ದಾರೆ ಅವರ ಜೊತೆಗೆ ನಾನು ತೆರಳಬೇಕಿತ್ತು ಕ್ಷೇತ್ರದಲ್ಲಿ ಅಂಬೇಡ್ಕರ್ ಜಯಂತಿ ಇರುವುದರಿಂದ ಮುಗಿಸಿದ ನಂತರ ಬರುವುದಾಗಿ ತಿರ್ಮಾನಿಸಲಾಗುವುದು ಎಂದು ಹೇಳಿದ್ದೆ ಅದೇ ರೀತಿ ಏಪ್ರಿಲ್ 15 ರಂದು ದೆಹಲಿಗೆ ತೆರಳುವ ಸಂದರ್ಭ ಬರಲಿದೆ. ಸಚಿವ ಸಂಪುಟದಲ್ಲಿ ಈಗಾಗಲೇ ಕೆಲವರಿಗೆ ಸಚಿವ ಸ್ಥಾನ ನೀಡಲಾಗಿದೆ, ಹಿರಿಯ ಶಾಸಕರಿಗೂ ಸಚಿವ ಸ್ಥಾನದ ಅವಕಾಶ ಕಲ್ಪಿಸಿಕೊಟ್ಟು ಕರ್ನಾಟಕದ ಸಿಎಂ ಬದಲಾವಣೆ ಬಗ್ಗೆ ಗೊಂದಲಕ್ಕೆ ಇತಿಶ್ರೀ ಹಾಡುವಂತೆ ಪಕ್ಷದ ಹೈಕಮಾಂಡ್‍ನಲ್ಲಿ ಕೇಳುತ್ತೇವೆ ಎಂದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ಆಹಮದ್ ಬೇಟಿಯಾಗಿರುವ ವಿಷಯ ನನಗೆ ಗೊತ್ತಿಲ್ಲ, ಈ ವಿಚಾರವಾಗಿ ತಿಳಿದು ಮಾತನಾಡುವುದಾಗಿ ಸ್ವಷ್ಟಪಡಿಸಿದರು. ಸಿಎಂ ಅಪ್ತ ಸಲಹೆಗಾರರ ತಲೆದಂಡ : ಕಾಂಗ್ರೆಸ್ ಪಕ್ಷವಾಗಲಿ ಯಾವುದೇ ರಾಷ್ಟ್ರೀಯ ಪಕ್ಷದಲ್ಲಿ ಪಕ್ಷ ವಿರೋಧಿ ಕೆಲಸಮಾಡಿದರೆ ಅದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರು ಆಗಲಿ ನಾನಾಗಲಿ ಪಕ್ಷ ವಿರೋಧಿ ಕೆಲಸ ಮಾಡಿದ್ರೆ ತಲೆದಂಡವಾಗಲಿದೆ ಎಂದರು. ಎರಡು ಕ್ಷೇತ್ರದ ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ಆತ್ಮವಿಶ್ವಾಸವಿದೆ, ಮುಸ್ಲಿಂನ ಎಲ್ಲಾ ನಾಯಕರು ಚುನಾವಣೆ ಮಾಡಿದ್ದಾರೆ 10 ಪರ್ಸೆಟ್ ಏರುಪೇರಾಗಲಿದೆ ಈ ಬಗ್ಗೆ ಮತ ಪೆಟ್ಟಿ ತೆರೆದಮೇಲೆ ಗೊತ್ತಾಗಲಿದೆ ಎಂದರು. ಕೇರಳ ಮತ್ತು ಕರ್ನಾಟಕ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ ಕೇರಳದಲ್ಲಿ ಬಡವರು, ನರ್ಸ್‍ಗಳು, ಪೌರಕಾರ್ಮಿಕರು ಚುನಾವಣೆಗೆ ಸ್ಪಂದಿಸುತ್ತಾರೆ ಆ ರೀತಿ ಕರ್ನಾಟಕದಲ್ಲಿ ಸಾಧ್ಯವೆ. ನಾನು ಪ್ರಚಾರಕ್ಕೆ ಹೋದ ವ್ಯಕ್ತಿಯನ್ನು 2 ಭಾರಿ ಗೆಲ್ಲಿಸಿದ್ದಾರೆ ಅವರು ಇಂದಿಗೂ ಚಿಕ್ಕಮನೆಯಲ್ಲಿ ಇದ್ದಾರೆ ಅಲ್ಲಿಯ ಚುನಾವಣೆ ವೆಚ್ಚ 2 ಕೋಟಿ ಇಲ್ಲಿನ ವೆಚ್ಚ ಹತ್ತು ಪಟ್ಟು ಎಂದರು. ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಅವರಿಂದ ಸಹಾಯ ಪಡೆದ ಜೆಡಿಎಸ್ ಮುಖಂಡರೆ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಈ ಬಗ್ಗೆ ಅವರ ಬಗ್ಗೆ ಏಕೆ ಮಾತನಾಡುತ್ತಾರ ಎಂದು ತಿಳಿಸಿದ್ದೇನೆ ಆದರೂ ಈ ಬಗ್ಗೆ ಚರ್ಚೆಗೆ ಆಹ್ವಾನಿಸಿದ್ದಾರೆ ಈ ವೇಳೆ ನನ್ನ ವಯಕ್ತಿಕವಾಗಿ ಮಾತನಾಡಿರುವ ಬಗ್ಗೆ ಚರ್ಚೆಮಾಡುತ್ತೇನೆ ದಾಖಲೆ ಪ್ರದರ್ಶಿಸಲಿ ಇಲ್ದಿದ್ದರೆ ತಪ್ಪನ್ನು ಒಪ್ಪಿಕೊಂಡು ಈ ರೀತಿ ಆರೋಪಿಸುವುದನ್ನು ಬಿಡಲಿ ಈ ವೇಳೆ ಗಲಭೆಯಾದರೆ ಚರ್ಚೆಗೆ ಮೂಲಭೂತವಾಗಿ ಕಾರಣವಾದವರ ವಿರುದ್ದ ಪೊಲೀಸರು ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದರು. ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು, ಬಿಎಂಆರ್‍ಡಿಎ ಅಧ್ಯಕ್ಷ ತಟವಾಳ್ ಪ್ರಕಾಶ್, ನಿರ್ದೆಶಕ ದೀಪು, ತಾ.ಪಂ. ಮಾಜಿ ಸದಸ್ಯೆ ರತ್ನಮ್ಮ ಶ್ರೀನಿವಾಸ್,ದೊಡ್ಡಿ ಲೋಕೇಶ್, ಚಿಕ್ಕರಾಜು, ಬೆಂಕಿ ಮಹದೇವ್, ಚಿಕ್ಕಮುದಿಗೆರೆ ಸುರೇಶ್, ರಾಜು, ಬೆಳ್ಳಿಯಪ್ಪ , ಕುದೂರು ಲೋಕೇಶ್, ಚಿಲಿಪಿಲಿ ರಾಜಣ್ಣ ಇತರರು ಇದ್ದರು.1
- ಕೊಳ್ಳೇಗಾಲ: ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಅದ್ದೂರಿ ಮೆರವಣಿಗೆ ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕ್ಷೇತ್ರಾಧ್ಯಕ್ಷರಾದ ಪುಟ್ಟಸ್ವಾಮಿ ಅಣ್ಣ ಅವರು ಭಾಗವಹಿಸಿ ಸಂಭ್ರಮಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಈ ಮೆರವಣಿಗೆಯಲ್ಲಿ ನೂರಾರು ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಪುಟ್ಟಸ್ವಾಮಿ ಅಣ್ಣ ಅವರು, ನಂತರ ಮಾತನಾಡಿ, "ಬಾಬಾ ಸಾಹೇಬರು ನೀಡಿದ ಸಂವಿಧಾನವು ಈ ದೇಶದ ಪ್ರತಿಯೊಬ್ಬರಿಗೂ ಹಕ್ಕು ಮತ್ತು ಘನತೆಯನ್ನು ನೀಡಿದೆ. ಅವರ 135ನೇ ಜನ್ಮದಿನದ ಈ ಸಂದರ್ಭದಲ್ಲಿ ಅವರ ತತ್ವಗಳನ್ನು ಮೈಗೂಡಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ," ಎಂದು ತಿಳಿಸಿದರು.1
- ಚಿತ್ರದುರ್ಗದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರ ಸಭೆ ಸಹಯೋಗದಲ್ಲಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಆಯೋಜಿಸಿದ್ದು ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದಾರೆ.1
- Post by Suresh Belagere1
- ಕೋಲಾರದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವು ಕೇಂದ್ರ ಸರ್ಕಾರದ ಟ್ರಾನ್ಸ್ ಜಂಡರ್ ತಿದ್ದುಪಡಿ ಕಾಯ್ದೆ 2026 ವಿರುದ್ಧ ಸೋಮವಾರ ಸುದ್ದಿಗೋಷ್ಠಿ ನಡೆಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಹೊಸ ಕಾಯ್ದೆಯು ಹಕ್ಕುಗಳನ್ನು ರಕ್ಷಿಸುವ ಬದಲು ನಿಯಂತ್ರಣ ಹೇರುವಂತಿದೆ ಎಂದು ಸಮುದಾಯದ ಮುಖಂಡರು ಆರೋಪಿಸಿದ್ದಾರೆ. ವೈದ್ಯಕೀಯ ಮಂಡಳಿಯ ಪರಿಶೀಲನೆ ಕಡ್ಡಾಯಗೊಳಿಸಿರುವುದು ಹಾಗೂ ವ್ಯಕ್ತಿಯ ಲಿಂಗತ್ವ ಗುರುತನ್ನು ರಾಜ್ಯವೇ ನಿರ್ಧರಿಸುವ ನಿಲುವು ಸ್ವಾಭಿಮಾನ ಮತ್ತು ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಏಪ್ರಿಲ್ 15ರಂದು ಕೋಲಾರದಲ್ಲಿ “ಕರ್ನಾಟಕ ಸ್ವಾಭಿಮಾನಿ ನಡಿಗೆ” ಹಮ್ಮಿಕೊಳ್ಳುವುದಾಗಿ ಘೋಷಿಸಿದ್ದು, ಸರ್ಕಾರಿ ಉದ್ಯೋಗಗಳಲ್ಲಿ 1% ಮೀಸಲಾತಿ ಹಾಗೂ ಗೌರವಯುತ ಜೀವನಕ್ಕೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಕಾಯ್ದೆ ವಿರುದ್ಧ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.1
- ಹನೂರು: ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಹನೂರು ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ಅವರು ನಂತರ ಮಾತನಾಡಿದರು. "ವಿಶ್ವಕ್ಕೆ ಮಾದರಿಯಾದ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ತತ್ವಗಳು ಪ್ರಸ್ತುತ ಸಮಾಜಕ್ಕೆ ಅತ್ಯಗತ್ಯ. ಅವರ ಹೋರಾಟ ಮತ್ತು ಜ್ಞಾನದ ಹಾದಿ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ," ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾದ ಬಿ. ಕೇಶವಮೂರ್ತಿ ಅವರು ಅಂಬೇಡ್ಕರ್ ಅವರ ಜೀವನದ ಹಾದಿ ಮತ್ತು ಸಾಮಾಜಿಕ ಕೊಡುಗೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ತಾಲ್ಲೂಕಿನ ಪ್ರಮುಖ ಅಧಿಕಾರಿಗಳು ಮತ್ತು ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಚೈತ್ರಾ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ರೇಖಾ, ಶಿಕ್ಷಣಾಧಿಕಾರಿ ಮಹೇಶ್, ತಾಲ್ಲೂಕು ವೈದ್ಯಾಧಿಕಾರಿ ಪ್ರಕಾಶ್, ಆರಕ್ಷಕ ನಿರೀಕ್ಷಕ ಆನಂದ್ ಮೂರ್ತಿ ಉಪಸ್ಥಿತರಿದ್ದರು. ಹಾಗೆಯೇ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಸುರೇಂದ್ರ, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಸಿದ್ದರಾಜು, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಚಪ್ಪ, ಮುಖಂಡರುಗಳಾದ ಮಹೇಶ್, ಲಿಂಗರಾಜು, ಗುರುಸ್ವಾಮಿ, ಮಹಾದೇವಯ್ಯ, ಮಾದೇಶ್, ಚಂದ್ರು, ಸಿದ್ದಣ್ಣ, ಅಂಕರಾಜು, ನಾಗಣ್ಣ, ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು. ವರದಿ ಉಸ್ಮಾನ್ ಖಾನ್4
- ಗ್ಯಾಸ್ ಕಳಸಂತೆಯಲ್ಲಿ ಮಾರಾಟ.ಸಾರ್ವಜನಿಕ ರಿಂದ ಜಿಲ್ಲಾ ಕಚೇರಿ ಮುಂದೆ ಪ್ರತಿಭಟನೆ.. ಹೊಳಲ್ಕೆರೆ ಪಟ್ಟಣದ ಗ್ಯಾಸ್ ಏಜೆನ್ಸಿಯೊಂದರ ಮಾಲೀಕರು ಹಾಗೂ ಡೆಲಿವರಿ ಬಾಯ್‌ಗಳು ಅಡುಗೆ ಅನಿಲ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಹೊಳಲ್ಕೆರೆ ಪಟ್ಟಣದ ನಾಗರಿಕರು ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಮುಖಂಡರು ಮಹಿಳೆಯರು ಸೇರಿದಂತೆ ನಗರದ ಪ್ರಮುಖ ರಸ್ತೆಯಲ್ಲಿ ಖಾಲಿ ಸಿಲಿಂಡರ್‌ಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು, ಏಜೆನ್ಸಿಯ ಅವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದರು ಆಕ್ರೋಶ ವ್ಯಕ್ತ ಪಡಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ತಮ್ಮ ಅಳಲು ತೋಡಿಕೊಂಡರು. ಸರ್ಕಾರ ನಿಗದಿಪಡಿಸಿದ ದರ 926 ರೂ. ಗಳಾಗಿದ್ದರೆ, ಏಜೆನ್ಸಿಯವರು ಕೃತಕ ಅಭಾವ ಸೃಷ್ಟಿಸಿ 1400 ರೂ.ನಿಂದ 1800 ರೂ. ವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ. ಒಂದು ತಿಂಗಳಿಂದ ಅಡುಗೆ ಅನಿಲ ಪೂರೈಕೆಯಾಗದೆ ಗ್ರಾಹಕರು ಹೈರಾಣಾಗಿದ್ದಾರೆ. ಗೋದಾಮಿಗೆ ಹೋದರೂ ಸಿಲಿಂಡರ್ ಇಲ್ಲ ಎಂಬ ಸಬೂಬು ನೀಡುತ್ತಿದ್ದಾರೆ ಎಂದು ನಾಗರಿಕರು ಅಕ್ರೋಶ ಹೊರ ಹಾಕಿದ್ದರು. ಇನ್ನು ಕಾಳಸಂತೆಯಲ್ಲಿ ತೊಡಗಿರುವವರ ವಿರುದ್ಧ ತಕ್ಷಣವೇ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು. ಸದ್ಯದ ಏಜೆನ್ಸಿಯಿಂದ ಗ್ರಾಹಕರನ್ನು ಬೇರೆ ಏಜೆನ್ಸಿಗೆ ವರ್ಗಾಯಿಸಿ ಸುಗಮ ಪೂರೈಕೆಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು..1