ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತರದ ಕಾರಣ, ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ. ಚಿಕ್ಕಬಳ್ಳಾಪುರ : ನದಿ ಮೂಲಗಳಿಲ್ಲದ ಬಯಲುಸೀಮೆಯಲ್ಲಿ ತೀವ್ರ ಬರಗಾಲ - ರೈತನ ಬದುಕು ಬೀದಿಗೆ ಬಯಲುಸೀಮೆಯ ವಿಶಾಲವಾದ ಬರಡು ನೆಲದಲ್ಲಿ ತೀವ್ರ ಬರಗಾಲ ಆವರಿಸಿದೆ. ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವಾಣಿಜ್ಯ ಬೆಳೆಗಳು ಒಣಗುತ್ತಿವೆ. ಮಾವಿನ ತೋಟಗಳು ಒಣಗುತ್ತಿವೆ. ಕೊಳವೆಬಾವಿಗಳು ಬತ್ತಿ ಹೋಗಿವೆ - ಸಾವಿರದ ಐನೂರ ಅಡಿ ಆಳ ಕೊರೆದರೂ ಹನಿ ನೀರಿನ ಸುಳಿವಿಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದ ರೈತರು ಕಂಗಾಲಾಗಿದ್ದಾರೆ. ಜಾನುವಾರುಗಳಿಗೆ ಕುಡಿಯುವ ನೀರೇ ಇಲ್ಲ ಮೇವಿನ ಅಭಾವ ಮತ್ತು ಜಾನುವಾರುಗಳ ವಲಸೆ, ಒಂದು ಹನಿ ನೀರಿಗಾಗಿ ರೈತ ಇಂದು ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದಾನೆ. ಒಣಗುತ್ತಿರುವ ಬೆಳೆಯನ್ನು ನೋಡಿ ಕಣ್ಣೀರು ಹಾಕುತ್ತಿದ್ದಾನೆ. ಎಲ್ಲಿ ನೋಡಿದರೂ ಹಸಿರು ಕಾಣಬೇಕಿದ್ದ ಹೊಲಗಳಲ್ಲಿ ಬಿರುಕು ಬಿಟ್ಟ ಒಣ ಭೂಮಿ ಮಾತ್ರ ಕಾಣುತ್ತಿದೆ. ಕಳೆದ ಮೂರು ತಿಂಗಳಿನಿಂದ ಮಳೆಯೇ ಇಲ್ಲದೆ ಬಯಲುಸೀಮೆಯಲ್ಲಿ ಬರಗಾಲ ತೀವ್ರವಾಗಿದೆ. ಸಂಪೂರ್ಣ ಮಳೆ ಕೊರತೆಯಿಂದ ಕೃಷಿಯೇ ಪ್ರಶ್ನಾರ್ಹವಾಗಿದೆ. ಉಳುಮೆ ಮಾಡಿ, ಬೀಜ ಬಿತ್ತಿ, ಗೊಬ್ಬರ ಹಾಕಿ, ಕೂಲಿ ಕಾರ್ಮಿಕರಿಗೆ ಹಣ ನೀಡಿ ಕೃಷಿ ಆರಂಭಿಸಿದ ರೈತರಿಗೆ ಮಾಡಿದ ಹೂಡಿಕೆಯೇ ಈಗ ದೊಡ್ಡ ಹೊರೆಯಾಗಿದೆ. ಮೊಳಕೆಯೊಡೆದ ಬೆಳೆಗಳು ಒಣಗುತ್ತಿವೆ. ಕೊಳವೆಬಾವಿ ನೀರಿನಡಿ ಬೆಳೆದ ಬೆಳೆಗಳೂ ಸಂಕಷ್ಟದಲ್ಲಿವೆ. ಸಾವಿರ ಅಡಿ ಕೊಳವೆಬಾವಿ, ಆದರೂ ಹನಿ ನೀರಿಲ್ಲ! ಇಲ್ಲಿಯವರೆಗೂ ಬಯಲುಸೀಮೆಯಲ್ಲಿ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತರದ ಕಾರಣ, ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ. ರೈತರು ನೀರಿಗಾಗಿ ಸಾವಿರ, ಸಾವಿರದ ಇನ್ನೂರು ಅಡಿ ಆಳದವರೆಗೂ ಕೊಳವೆಬಾವಿ ಕೊರೆಸಿದರೂ ನೀರಿನ ಸುಳಿವೇ ಇಲ್ಲ. ಇರುವ ಕೊಳವೆಬಾವಿಗಳೂ ಬತ್ತಿ ಹೋಗುತ್ತಿರುವುದರಿಂದ ಬೆಳೆಗಳನ್ನು ಉಳಿಸಿಕೊಳ್ಳುವುದು ಅಸಾಧ್ಯವಾಗಿದೆ. ಕೃಷಿಗೆ ನೀರಿಲ್ಲದ ಪರಿಸ್ಥಿತಿಯಲ್ಲಿ ಅನೇಕ ಕಡೆ ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ. ನಮ್ಮ ಕಣ್ಣೆದುರೇ ವರ್ಷಗಳಿಂದ ಅತ್ಯಂತ ಕಾಳಜಿಯಿಂದ ಬೆಳೆಸಿದ ಮಾವಿನ ತೋಟಗಳು ಒಣಗುತ್ತಿವೆ. ತೋಟಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದರೂ ನೀರಿಲ್ಲದೆ ಅವರ ಶ್ರಮ ವ್ಯರ್ಥವಾಗುತ್ತಿದೆ. ರೈತನ ಬೆವರಿನಿಂದ ಬೆಳೆದ ತೋಟ ಇಂದು ಒಂದು ಹನಿ ನೀರಿಗಾಗಿ ಕಾಯುತ್ತಿದೆ. ಸರ್ಕಾರ ತುರ್ತಾಗಿ ಸ್ಪಂದಿಸಿ ಮಾವು ಮತ್ತು ಇತರ ತೋಟಗಾರಿಕೆ ಬೆಳೆಗಳನ್ನು ಉಳಿಸಲು ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಮೇವಿನ ಬರ - ವನ್ಯಜೀವಿಗಳ ವಲಸೆ ಈ ಬರ ಮನುಷ್ಯರನ್ನು ಮಾತ್ರವಲ್ಲ, ಮೂಕ ಪ್ರಾಣಿಗಳನ್ನೂ ಬಿಡುತ್ತಿಲ್ಲ. ಹುಲ್ಲುಗಾವಲುಗಳು ಒಣಗಿ ಜಾನುವಾರುಗಳಿಗೆ ಮೇವಿಲ್ಲದಂತಾಗಿದೆ. ಗುಡ್ಡ-ಬೆಟ್ಟಗಳು ಬಂಜರು ಭೂಮಿಯಾಗಿವೆ, ಕುರಿ-ಮೇಕೆಗಳಿಗೆ ಮೇವು ಮತ್ತು ನೀರಿನ ತೀವ್ರ ಅಭಾವ ಉಂಟಾಗಿದೆ. ಸ್ಥಳೀಯವಾಗಿ ಮೇವು ಸಿಗದ ಕಾರಣ ಕುರಿಗಾಹಿಗಳು ತಮ್ಮ ಕುರಿಮೇಕೆಗಳ ಹಿಂಡುಗಳೊಂದಿಗೆ ದೂರದ ಪ್ರದೇಶಗಳಿಗೆ ವಲಸೆ ಹೋಗುವ ಅನಿವಾರ್ಯತೆ ಎದುರಾಗಿದೆ. ರಾಗಿ ಹುಲ್ಲಿನ ಬೆಲೆ ಗಗನಕ್ಕೇರಿರುವುದು ಪಶುಪಾಲಕರಿಗೆ ಮತ್ತಷ್ಟು ಆರ್ಥಿಕ ಹೊರೆ ತಂದಿದೆ. ಹೊಲದಲ್ಲಿ ಕೆಲಸವಿಲ್ಲ - ಕೃಷಿ ಕಾರ್ಮಿಕರಿಗೆ ಜೀವನೋಪಾಯವಿಲ್ಲ! ಬರಗಾಲದಿಂದಾಗಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಹೊಲಗಳಲ್ಲಿ ಕೆಲಸವಿಲ್ಲದೆ ಕೃಷಿ ಕಾರ್ಮಿಕ ಕುಟುಂಬಗಳ ದೈನಂದಿನ ಬದುಕು ದುಸ್ತರವಾಗಿದೆ. ನಿನ್ನೆವರೆಗೂ ಹೊಲದಲ್ಲಿ ನೇಗಿಲು ಹಿಡಿದು ದುಡಿಯುತ್ತಿದ್ದ ಕಾರ್ಮಿಕ ಇಂದು ಕೆಲಸ ಹುಡುಕಿಕೊಂಡು ಪಟ್ಟಣಕ್ಕೆ ಹೋಗಬೇಕಾದ ಸ್ಥಿತಿ ಬಂದಿದೆ. ಕೃಷಿ ಕೆಲಸವಿಲ್ಲದೆ ಕಾರ್ಮಿಕರು ಪಟ್ಟಣಗಳಿಗೆ ಬಂದು ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ಜೀವನೋಪಾಯ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಜಿಲ್ಲಾ ಕೇಂದ್ರ ಸ್ಥಳಾಂತರದ ನಂತರ ಪಟ್ಟಣದಲ್ಲಿದ್ದ ಕಟ್ಟಡ ಕೆಲಸಗಳೂ ಕಡಿಮೆಯಾಗಿವೆ ಎಂದು ಕಾರ್ಮಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಹಳ್ಳಿಯಲ್ಲಿ ಬರ - ಪಟ್ಟಣದಲ್ಲಿ ಉದ್ಯೋಗದ ಬರ! ಬಯಲುಸೀಮೆಯ ಇಂದಿನ ಪರಿಸ್ಥಿತಿ ಎರಡು ಮುಖದ ಬಿಕ್ಕಟ್ಟು - ಕೃಷಿಗೆ ಬರಗಾಲ, ಕಾರ್ಮಿಕರಿಗೆ ಉದ್ಯೋಗದ ಬರ. ಹೊಲದಲ್ಲಿ ಕೆಲಸವಿಲ್ಲ, ಪಟ್ಟಣದಲ್ಲಿ ಸಾಕಷ್ಟು ಕೆಲಸವಿಲ್ಲ. ಇದರಿಂದ ಕುಟುಂಬಗಳು ಬದುಕು ಸಾಗಿಸುವುದೇ ಕಷ್ಟವಾಗಿದೆ. ರೈತ ಬೆಳೆಯನ್ನು ಕಳೆದುಕೊಂಡರೆ, ಕಾರ್ಮಿಕ ಕೆಲಸವನ್ನು ಕಳೆದುಕೊಳ್ಳುತ್ತಾನೆ. ರೈತನ ಆದಾಯ ಕುಸಿದರೆ ಅದರ ನೇರ ಪರಿಣಾಮ ಕೃಷಿ ಕಾರ್ಮಿಕರಿಂದ ಹಿಡಿದು ಸಣ್ಣ ವ್ಯಾಪಾರಿಯವರೆಗೆ ಎಲ್ಲರ ಮೇಲೂ ಆಗುತ್ತದೆ. ಬರ ಕೇವಲ ಹೊಲಗಳಿಗೆ ಸೀಮಿತವಲ್ಲ, ಇಡೀ ಗ್ರಾಮೀಣ ಆರ್ಥಿಕತೆಯನ್ನೇ ಅಲುಗಾಡಿಸಿದೆ. ಬರಗಾಲದಲ್ಲಿ ಮರೆಯಾದ ಹಬ್ಬದ ಸಂಭ್ರಮ ಬೆಳೆಗಳು ಕಟಾವಿಗೆ ಬಂದಿಲ್ಲ, ಆದಾಯವಿಲ್ಲ. ಮಕ್ಕಳ ಶಾಲಾ ಶುಲ್ಕ ಕಟ್ಟಲಾಗದೆ ಪೋಷಕರು ಕಂಗಾಲಾಗಿದ್ದಾರೆ. ಒಂದೆಡೆ ಬೆಳೆ ಇಲ್ಲ, ಆದಾಯವಿಲ್ಲ ಎಂದು ಸರ್ಕಾರ ಶುಲ್ಕ ಮರುಪಾವತಿ ಹಣ ಬಿಡುಗಡೆಯನ್ನು ವಿಳಂಬ ಮಾಡುತ್ತಿದೆ. ಇದರಿಂದ ಪೋಷಕರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವುದರ ಜೊತೆಗೆ ತುರ್ತಾಗಿ ಬರ ತಡೆಗಟ್ಟುವ ಕ್ರಮಗಳು, ಪರಿಹಾರ ಹಣ ಬಿಡುಗಡೆ ಮತ್ತು ಉಚಿತ ಕೊಳವೆಬಾವಿ ಸೌಲಭ್ಯ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಬರಗಾಲದಿಂದಾಗಿ ರೈತರುಸೇರಿದಂತೆ ಎಲ್ಲ ವರ್ಗದ ಜನರಿಗೂ ಗಣೇಶನ ಹಬ್ಬದ ಸಂಭ್ರಮವೇ ಇಲ್ಲದಂತಾಗಿದೆ. ಬರಗಾಲ, ರೈತರ ಸಂಕಷ್ಟ ಮತ್ತು ಎಲ್ ನಿನೊ ಪರಿಣಾಮಗಳಿಂದ ಕಂಗಾಲಾಗಿರುವ ರೈತರ ಸಾಲಮನ್ನಾ ಭರವಸೆಯನ್ನು ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾಗಿದೆ. ಚುನಾವಣೆಯ ಸಮಯದಲ್ಲಿ ಆಶ್ವಾಸನೆ ನೀಡಿದಂತೆ ರೈತರಭರವಸೆಗಳ ಹಣವೂ ಸಿಗುತ್ತಿಲ್ಲ. ಹೈನುಗಾರ ರೈತರ ಪರಿಸ್ಥಿತಿಯೂ ಅತ್ಯಂತ ಶೋಚನೀಯವಾಗಿದೆ. ಪಕ್ಕದ ರಾಜ್ಯಗಳಲ್ಲಿ ಪ್ರತಿ ಲೀಟರ್ ಹಾಲಿಗೆ 40 ರಿಂದ 50 ರೂ. ಬೆಲೆ ಸಿಗಬಹುದಾದರೆ ನಮ್ಮಲ್ಲಿ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ ಎಂದು ರೈತರು ನೋವು ವ್ಯಕ್ತಪಡಿಸುತ್ತಿದ್ದಾರೆ. ರೈತರ ಪ್ರಮುಖ ಬೇಡಿಕೆಗಳು • ಪ್ರತಿ ರೈತನಿಗೆ ಪ್ರತಿ ಎಕರೆಗೆ 25,000 ರೂ. ತಕ್ಷಣದ ಆರ್ಥಿಕ ನೆರವು ನೀಡಬೇಕು. • ಮಾವು ಬೆಳೆಗಾರರಿಗೆ ವಿಶೇಷ ಬರ ಪರಿಹಾರ ಪ್ಯಾಕೇಜ್ ಘೋಷಿಸಿ ಬೆಂಬಲ ನೀಡಬೇಕು. • ಬರ ಪೀಡಿತ ಪ್ರದೇಶಗಳಲ್ಲಿ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. • ಬೆಳೆ ನಷ್ಟವನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಬೆಳೆ ವಿಮೆ, ಇನ್‌ಪುಟ್ ಸಬ್ಸಿಡಿ ಮತ್ತು ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು. • ಎತ್ತಿನಹೊಳೆ ಯೋಜನೆಯನ್ನು ನಂಬದೆ, ಬಯಲುಸೀಮೆಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಕೂಡಲೇ ಪೂರ್ಣಗೊಳಿಸಬೇಕು. • ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಳನ್ನು ಉಳಿಸಲು ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. • ಜಾನುವಾರುಗಳಿಗೆ ಕಡಿಮೆ ದರದಲ್ಲಿ ಮೇವು ಮತ್ತು ಫೀಡ್ ಪೂರೈಸಬೇಕು. • ಸರ್ಕಾರ ಕೇವಲ ಬರೀ ಭರವಸೆಗಳನ್ನು ನೀಡದೆ, ಕೂಡಲೇ ರೈತರ ನೆರವಿಗೆ ಧಾವಿಸಿ, ಕ್ಷೇತ್ರ ಮಟ್ಟದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸಬೇಕು. ನೀರಾವರಿ ಹೋರಾಟಗಾರರ ಸಮಿತಿ ಅಧ್ಯಕ್ಷರು ಆಂಜನೇಯ ರೆಡ್ಡಿ ಆರ್ ಅಧ್ಯಕ್ಷರು, ಶಾಶ್ವತ ನೀರಾವರಿ ಹೋರಾಟ ಸಮಿತಿ
ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತರದ ಕಾರಣ, ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ. ಚಿಕ್ಕಬಳ್ಳಾಪುರ : ನದಿ ಮೂಲಗಳಿಲ್ಲದ ಬಯಲುಸೀಮೆಯಲ್ಲಿ ತೀವ್ರ ಬರಗಾಲ - ರೈತನ ಬದುಕು ಬೀದಿಗೆ ಬಯಲುಸೀಮೆಯ ವಿಶಾಲವಾದ ಬರಡು ನೆಲದಲ್ಲಿ ತೀವ್ರ ಬರಗಾಲ ಆವರಿಸಿದೆ. ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವಾಣಿಜ್ಯ ಬೆಳೆಗಳು ಒಣಗುತ್ತಿವೆ. ಮಾವಿನ ತೋಟಗಳು ಒಣಗುತ್ತಿವೆ. ಕೊಳವೆಬಾವಿಗಳು ಬತ್ತಿ ಹೋಗಿವೆ - ಸಾವಿರದ ಐನೂರ ಅಡಿ ಆಳ ಕೊರೆದರೂ ಹನಿ ನೀರಿನ ಸುಳಿವಿಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದ ರೈತರು ಕಂಗಾಲಾಗಿದ್ದಾರೆ. ಜಾನುವಾರುಗಳಿಗೆ ಕುಡಿಯುವ ನೀರೇ ಇಲ್ಲ ಮೇವಿನ ಅಭಾವ ಮತ್ತು ಜಾನುವಾರುಗಳ ವಲಸೆ, ಒಂದು ಹನಿ ನೀರಿಗಾಗಿ ರೈತ ಇಂದು ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದಾನೆ. ಒಣಗುತ್ತಿರುವ ಬೆಳೆಯನ್ನು ನೋಡಿ ಕಣ್ಣೀರು ಹಾಕುತ್ತಿದ್ದಾನೆ. ಎಲ್ಲಿ ನೋಡಿದರೂ ಹಸಿರು ಕಾಣಬೇಕಿದ್ದ ಹೊಲಗಳಲ್ಲಿ ಬಿರುಕು ಬಿಟ್ಟ ಒಣ ಭೂಮಿ ಮಾತ್ರ ಕಾಣುತ್ತಿದೆ. ಕಳೆದ ಮೂರು ತಿಂಗಳಿನಿಂದ ಮಳೆಯೇ ಇಲ್ಲದೆ ಬಯಲುಸೀಮೆಯಲ್ಲಿ ಬರಗಾಲ ತೀವ್ರವಾಗಿದೆ. ಸಂಪೂರ್ಣ ಮಳೆ ಕೊರತೆಯಿಂದ ಕೃಷಿಯೇ ಪ್ರಶ್ನಾರ್ಹವಾಗಿದೆ. ಉಳುಮೆ ಮಾಡಿ, ಬೀಜ ಬಿತ್ತಿ, ಗೊಬ್ಬರ ಹಾಕಿ, ಕೂಲಿ ಕಾರ್ಮಿಕರಿಗೆ ಹಣ ನೀಡಿ ಕೃಷಿ ಆರಂಭಿಸಿದ ರೈತರಿಗೆ ಮಾಡಿದ ಹೂಡಿಕೆಯೇ ಈಗ ದೊಡ್ಡ ಹೊರೆಯಾಗಿದೆ. ಮೊಳಕೆಯೊಡೆದ ಬೆಳೆಗಳು ಒಣಗುತ್ತಿವೆ. ಕೊಳವೆಬಾವಿ ನೀರಿನಡಿ ಬೆಳೆದ ಬೆಳೆಗಳೂ ಸಂಕಷ್ಟದಲ್ಲಿವೆ. ಸಾವಿರ ಅಡಿ ಕೊಳವೆಬಾವಿ, ಆದರೂ ಹನಿ ನೀರಿಲ್ಲ! ಇಲ್ಲಿಯವರೆಗೂ ಬಯಲುಸೀಮೆಯಲ್ಲಿ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತರದ ಕಾರಣ, ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ. ರೈತರು ನೀರಿಗಾಗಿ ಸಾವಿರ, ಸಾವಿರದ ಇನ್ನೂರು ಅಡಿ ಆಳದವರೆಗೂ ಕೊಳವೆಬಾವಿ ಕೊರೆಸಿದರೂ ನೀರಿನ ಸುಳಿವೇ ಇಲ್ಲ. ಇರುವ ಕೊಳವೆಬಾವಿಗಳೂ ಬತ್ತಿ ಹೋಗುತ್ತಿರುವುದರಿಂದ ಬೆಳೆಗಳನ್ನು ಉಳಿಸಿಕೊಳ್ಳುವುದು ಅಸಾಧ್ಯವಾಗಿದೆ. ಕೃಷಿಗೆ ನೀರಿಲ್ಲದ ಪರಿಸ್ಥಿತಿಯಲ್ಲಿ ಅನೇಕ ಕಡೆ ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ. ನಮ್ಮ ಕಣ್ಣೆದುರೇ ವರ್ಷಗಳಿಂದ ಅತ್ಯಂತ ಕಾಳಜಿಯಿಂದ ಬೆಳೆಸಿದ ಮಾವಿನ ತೋಟಗಳು ಒಣಗುತ್ತಿವೆ. ತೋಟಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದರೂ
ನೀರಿಲ್ಲದೆ ಅವರ ಶ್ರಮ ವ್ಯರ್ಥವಾಗುತ್ತಿದೆ. ರೈತನ ಬೆವರಿನಿಂದ ಬೆಳೆದ ತೋಟ ಇಂದು ಒಂದು ಹನಿ ನೀರಿಗಾಗಿ ಕಾಯುತ್ತಿದೆ. ಸರ್ಕಾರ ತುರ್ತಾಗಿ ಸ್ಪಂದಿಸಿ ಮಾವು ಮತ್ತು ಇತರ ತೋಟಗಾರಿಕೆ ಬೆಳೆಗಳನ್ನು ಉಳಿಸಲು ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಮೇವಿನ ಬರ - ವನ್ಯಜೀವಿಗಳ ವಲಸೆ ಈ ಬರ ಮನುಷ್ಯರನ್ನು ಮಾತ್ರವಲ್ಲ, ಮೂಕ ಪ್ರಾಣಿಗಳನ್ನೂ ಬಿಡುತ್ತಿಲ್ಲ. ಹುಲ್ಲುಗಾವಲುಗಳು ಒಣಗಿ ಜಾನುವಾರುಗಳಿಗೆ ಮೇವಿಲ್ಲದಂತಾಗಿದೆ. ಗುಡ್ಡ-ಬೆಟ್ಟಗಳು ಬಂಜರು ಭೂಮಿಯಾಗಿವೆ, ಕುರಿ-ಮೇಕೆಗಳಿಗೆ ಮೇವು ಮತ್ತು ನೀರಿನ ತೀವ್ರ ಅಭಾವ ಉಂಟಾಗಿದೆ. ಸ್ಥಳೀಯವಾಗಿ ಮೇವು ಸಿಗದ ಕಾರಣ ಕುರಿಗಾಹಿಗಳು ತಮ್ಮ ಕುರಿಮೇಕೆಗಳ ಹಿಂಡುಗಳೊಂದಿಗೆ ದೂರದ ಪ್ರದೇಶಗಳಿಗೆ ವಲಸೆ ಹೋಗುವ ಅನಿವಾರ್ಯತೆ ಎದುರಾಗಿದೆ. ರಾಗಿ ಹುಲ್ಲಿನ ಬೆಲೆ ಗಗನಕ್ಕೇರಿರುವುದು ಪಶುಪಾಲಕರಿಗೆ ಮತ್ತಷ್ಟು ಆರ್ಥಿಕ ಹೊರೆ ತಂದಿದೆ. ಹೊಲದಲ್ಲಿ ಕೆಲಸವಿಲ್ಲ - ಕೃಷಿ ಕಾರ್ಮಿಕರಿಗೆ ಜೀವನೋಪಾಯವಿಲ್ಲ! ಬರಗಾಲದಿಂದಾಗಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಹೊಲಗಳಲ್ಲಿ ಕೆಲಸವಿಲ್ಲದೆ ಕೃಷಿ ಕಾರ್ಮಿಕ ಕುಟುಂಬಗಳ ದೈನಂದಿನ ಬದುಕು ದುಸ್ತರವಾಗಿದೆ. ನಿನ್ನೆವರೆಗೂ ಹೊಲದಲ್ಲಿ ನೇಗಿಲು ಹಿಡಿದು ದುಡಿಯುತ್ತಿದ್ದ ಕಾರ್ಮಿಕ ಇಂದು ಕೆಲಸ ಹುಡುಕಿಕೊಂಡು ಪಟ್ಟಣಕ್ಕೆ ಹೋಗಬೇಕಾದ ಸ್ಥಿತಿ ಬಂದಿದೆ. ಕೃಷಿ ಕೆಲಸವಿಲ್ಲದೆ ಕಾರ್ಮಿಕರು ಪಟ್ಟಣಗಳಿಗೆ ಬಂದು ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ಜೀವನೋಪಾಯ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಜಿಲ್ಲಾ ಕೇಂದ್ರ ಸ್ಥಳಾಂತರದ ನಂತರ ಪಟ್ಟಣದಲ್ಲಿದ್ದ ಕಟ್ಟಡ ಕೆಲಸಗಳೂ ಕಡಿಮೆಯಾಗಿವೆ ಎಂದು ಕಾರ್ಮಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಹಳ್ಳಿಯಲ್ಲಿ ಬರ - ಪಟ್ಟಣದಲ್ಲಿ ಉದ್ಯೋಗದ ಬರ! ಬಯಲುಸೀಮೆಯ ಇಂದಿನ ಪರಿಸ್ಥಿತಿ ಎರಡು ಮುಖದ ಬಿಕ್ಕಟ್ಟು - ಕೃಷಿಗೆ ಬರಗಾಲ, ಕಾರ್ಮಿಕರಿಗೆ ಉದ್ಯೋಗದ ಬರ. ಹೊಲದಲ್ಲಿ ಕೆಲಸವಿಲ್ಲ, ಪಟ್ಟಣದಲ್ಲಿ ಸಾಕಷ್ಟು ಕೆಲಸವಿಲ್ಲ. ಇದರಿಂದ ಕುಟುಂಬಗಳು ಬದುಕು ಸಾಗಿಸುವುದೇ ಕಷ್ಟವಾಗಿದೆ. ರೈತ ಬೆಳೆಯನ್ನು ಕಳೆದುಕೊಂಡರೆ, ಕಾರ್ಮಿಕ ಕೆಲಸವನ್ನು ಕಳೆದುಕೊಳ್ಳುತ್ತಾನೆ. ರೈತನ ಆದಾಯ ಕುಸಿದರೆ ಅದರ ನೇರ ಪರಿಣಾಮ ಕೃಷಿ ಕಾರ್ಮಿಕರಿಂದ ಹಿಡಿದು ಸಣ್ಣ ವ್ಯಾಪಾರಿಯವರೆಗೆ ಎಲ್ಲರ ಮೇಲೂ ಆಗುತ್ತದೆ. ಬರ ಕೇವಲ ಹೊಲಗಳಿಗೆ ಸೀಮಿತವಲ್ಲ, ಇಡೀ ಗ್ರಾಮೀಣ ಆರ್ಥಿಕತೆಯನ್ನೇ ಅಲುಗಾಡಿಸಿದೆ. ಬರಗಾಲದಲ್ಲಿ ಮರೆಯಾದ ಹಬ್ಬದ ಸಂಭ್ರಮ ಬೆಳೆಗಳು ಕಟಾವಿಗೆ ಬಂದಿಲ್ಲ, ಆದಾಯವಿಲ್ಲ. ಮಕ್ಕಳ ಶಾಲಾ ಶುಲ್ಕ ಕಟ್ಟಲಾಗದೆ ಪೋಷಕರು
ಕಂಗಾಲಾಗಿದ್ದಾರೆ. ಒಂದೆಡೆ ಬೆಳೆ ಇಲ್ಲ, ಆದಾಯವಿಲ್ಲ ಎಂದು ಸರ್ಕಾರ ಶುಲ್ಕ ಮರುಪಾವತಿ ಹಣ ಬಿಡುಗಡೆಯನ್ನು ವಿಳಂಬ ಮಾಡುತ್ತಿದೆ. ಇದರಿಂದ ಪೋಷಕರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವುದರ ಜೊತೆಗೆ ತುರ್ತಾಗಿ ಬರ ತಡೆಗಟ್ಟುವ ಕ್ರಮಗಳು, ಪರಿಹಾರ ಹಣ ಬಿಡುಗಡೆ ಮತ್ತು ಉಚಿತ ಕೊಳವೆಬಾವಿ ಸೌಲಭ್ಯ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಬರಗಾಲದಿಂದಾಗಿ ರೈತರುಸೇರಿದಂತೆ ಎಲ್ಲ ವರ್ಗದ ಜನರಿಗೂ ಗಣೇಶನ ಹಬ್ಬದ ಸಂಭ್ರಮವೇ ಇಲ್ಲದಂತಾಗಿದೆ. ಬರಗಾಲ, ರೈತರ ಸಂಕಷ್ಟ ಮತ್ತು ಎಲ್ ನಿನೊ ಪರಿಣಾಮಗಳಿಂದ ಕಂಗಾಲಾಗಿರುವ ರೈತರ ಸಾಲಮನ್ನಾ ಭರವಸೆಯನ್ನು ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾಗಿದೆ. ಚುನಾವಣೆಯ ಸಮಯದಲ್ಲಿ ಆಶ್ವಾಸನೆ ನೀಡಿದಂತೆ ರೈತರಭರವಸೆಗಳ ಹಣವೂ ಸಿಗುತ್ತಿಲ್ಲ. ಹೈನುಗಾರ ರೈತರ ಪರಿಸ್ಥಿತಿಯೂ ಅತ್ಯಂತ ಶೋಚನೀಯವಾಗಿದೆ. ಪಕ್ಕದ ರಾಜ್ಯಗಳಲ್ಲಿ ಪ್ರತಿ ಲೀಟರ್ ಹಾಲಿಗೆ 40 ರಿಂದ 50 ರೂ. ಬೆಲೆ ಸಿಗಬಹುದಾದರೆ ನಮ್ಮಲ್ಲಿ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ ಎಂದು ರೈತರು ನೋವು ವ್ಯಕ್ತಪಡಿಸುತ್ತಿದ್ದಾರೆ. ರೈತರ ಪ್ರಮುಖ ಬೇಡಿಕೆಗಳು • ಪ್ರತಿ ರೈತನಿಗೆ ಪ್ರತಿ ಎಕರೆಗೆ 25,000 ರೂ. ತಕ್ಷಣದ ಆರ್ಥಿಕ ನೆರವು ನೀಡಬೇಕು. • ಮಾವು ಬೆಳೆಗಾರರಿಗೆ ವಿಶೇಷ ಬರ ಪರಿಹಾರ ಪ್ಯಾಕೇಜ್ ಘೋಷಿಸಿ ಬೆಂಬಲ ನೀಡಬೇಕು. • ಬರ ಪೀಡಿತ ಪ್ರದೇಶಗಳಲ್ಲಿ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. • ಬೆಳೆ ನಷ್ಟವನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಬೆಳೆ ವಿಮೆ, ಇನ್‌ಪುಟ್ ಸಬ್ಸಿಡಿ ಮತ್ತು ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು. • ಎತ್ತಿನಹೊಳೆ ಯೋಜನೆಯನ್ನು ನಂಬದೆ, ಬಯಲುಸೀಮೆಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಕೂಡಲೇ ಪೂರ್ಣಗೊಳಿಸಬೇಕು. • ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಳನ್ನು ಉಳಿಸಲು ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. • ಜಾನುವಾರುಗಳಿಗೆ ಕಡಿಮೆ ದರದಲ್ಲಿ ಮೇವು ಮತ್ತು ಫೀಡ್ ಪೂರೈಸಬೇಕು. • ಸರ್ಕಾರ ಕೇವಲ ಬರೀ ಭರವಸೆಗಳನ್ನು ನೀಡದೆ, ಕೂಡಲೇ ರೈತರ ನೆರವಿಗೆ ಧಾವಿಸಿ, ಕ್ಷೇತ್ರ ಮಟ್ಟದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸಬೇಕು. ನೀರಾವರಿ ಹೋರಾಟಗಾರರ ಸಮಿತಿ ಅಧ್ಯಕ್ಷರು ಆಂಜನೇಯ ರೆಡ್ಡಿ ಆರ್ ಅಧ್ಯಕ್ಷರು, ಶಾಶ್ವತ ನೀರಾವರಿ ಹೋರಾಟ ಸಮಿತಿ
- ಗೌರಿ-ಗಣೇಶ ಹಬ್ಬ: ಸಮಾಜ ಸೇವಕ ಕೊತ್ತನೂರು ಪಂಚಾಕ್ಷರಿ ರೆಡ್ಡಿ ತೋಟದ ಮನೆಯಲ್ಲಿ ವಿಶೇಷ ಪೂಜೆ ಹಾಗೂ ಶುಭಾಶಯ ಸಲ್ಲಿಕೆ1
- ಹೆದ್ದಾರಿಯಲ್ಲಿ ಭೀಕರ ಅಪಘಾತ. ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ. ದೇವನಹಳ್ಳಿ ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ. ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ. ಬರ್ತಿದ್ದ ರಸ್ತೆಯಿಂದ ಡಿವೈಡರ್ ದಾಟಿ ಮತ್ತೊಂದು ರಸ್ತೆಯಲ್ಲಿ ಬರ್ತಿದ್ದ ಕಾರಿಗೆ ಡಿಕ್ಕಿ. ಡಿಕ್ಕಿಯ ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಒರ್ವ ಸಾವು ಮೂವರಿಗೆ ಗಂಭೀರ ಗಾಯ. ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ಘಟನೆ. ಹೊಸಕೋಟೆ ದಾಬಸ್ ಪೇಟೆ ರಾಷ್ಟ್ರಿಯ ಹೆದ್ದಾರಿ 648 ರಲ್ಲಿ ಘಟನೆ. ಶಿಡ್ಲಘಟ್ಟ ಮೂಲಕ ವೆಂಕಟೇಶಪ್ಪ ( 75 ) ಮೃತ ವ್ಯಕ್ತಿ. ಮುನಿಅಕ್ಕಯಮ್ಮ, ಮಾಲಾ ಮತ್ತು ಪವನ್ ಕುಮಾರ್ ಗೆ ಗಂಭೀರ ಗಾಯ. ಗಾಯಾಳುಗಳಿಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ. ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮ.2
- ಶ್ರದ್ಧಾ ಭಕ್ತಿಯಿಂದ ಶ್ರೀ ವಿಘ್ನೇ ವಿನಾಯಕನಿಗೆ ವಿಶೇಷವಾಗಿ ಪೂಜೆ ಸಲ್ಲಿಸಿದ ಚಿಂತಾಮಣಿ ಬೆಸ್ಕಾಂ ಉಪವಿಭಾಗದ ಸಿಬ್ಬಂದಿ *ಚಿಂತಾಮಣಿ ಬೆಸ್ಕಾಂ ಉಪ ವಿಭಾಗದಲ್ಲಿ ಶ್ರದ್ಧಾ-ಭಕ್ತಿಯಿಂದ ಗಣೇಶ ಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜೆ* *KRUTHI NEWS KANNADA 24×7* *ಸುದ್ದಿ ಮತ್ತು ಜಾಹೀರಾತುಗಾಗಿ ಸಂಪರ್ಕಿಸಿ:-8892502546*1
- ರಸ್ತೆ ಬದಿಯಲ್ಲೇ ಮದ್ಯಪಾನ; ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ ಕಾನೂನಿನ ಭಯವಿಲ್ಲವೇ? ಕ್ರಮಕ್ಕೆ ಸ್ಥಳೀಯರಿಂದ ಆಗ್ರಹ ರಸ್ತೆ ಬದಿಯಲ್ಲೇ ಮದ್ಯಪಾನ; ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ ಕಾನೂನಿನ ಭಯವಿಲ್ಲವೇ? ಕ್ರಮಕ್ಕೆ ಸ್ಥಳೀಯರಿಂದ ಆಗ್ರಹ1
- ಕೆಆರ್ ಪುರ : ಐಟಿಐ ಭೂಮಿ ಹರಾಜು ವಿರೋಧಿಸಿ ಸ್ಥಳೀಯರಿಂದ ಕಾಲ್ನಡಿಗೆ ಜಾಥಾ ಐಟಿಐ ಸಂಸ್ಥೆಗೆ ಸೇರಿದ 44 ಎಕರೆ ಭೂಮಿ ಹರಾಜಿಗೆ ಕೇಂದ್ರ ಸರ್ಕಾರದ ಪ್ರಕಟಣೆ . ಹರಾಜು ನಿರ್ಧಾರಕ್ಕೆ ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ . 44 ಎಕರೆ ಭೂಮಿಯನ್ನು ಹರಾಜು ಮಾಡದೆ ಸಾರ್ವಜನಿಕ ಬಳಕೆಗೆ ಉಳಿಸುವಂತೆ ಆಗ್ರಹ ಖಾಸಗೀಕರಣದಿಂದ ಪರಿಸರಕ್ಕೆ ಹಾನಿಯಾಗುವ ಆತಂಕ .ಐಟಿಐ ಕೈಗಾರಿಕೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಪುನಶ್ಚೇತನಗೊಳಿಸುವಂತೆ ಒತ್ತಾಯ.ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಅಗತ್ಯ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಉತ್ಪಾದಿಸಲು ಆಗ್ರಹ .ಐಟಿಐ ಪುನಶ್ಚೇತನದಿಂದ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಅವಕಾಶ ಎಂದು ಸ್ಥಳೀಯರ ಅಭಿಪ್ರಾಯ .ಸಾರ್ವಜನಿಕ ಆಸ್ತಿಯನ್ನು ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹ 44 ಎಕರೆ ಭೂಮಿ ಹರಾಜು ಪ್ರಕ್ರಿಯೆ ಕೂಡಲೇ ಕೈಬಿಡುವಂತೆ ಒತ್ತಾಯ .ಜಾಥಾ ಬಳಿಕ ಐಟಿಐ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲು ನಿರ್ಧಾರ1
- ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ:ಒರ್ವ ಸಾವು ,ಮೂವರಿಗೆ ಗಾಯ ಬೆಂಗಳೂರು:ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ.ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ ಹೊಡೆದಿದೆ.ಬರ್ತಿದ್ದ ರಸ್ತೆಯಿಂದ ಡಿವೈಡರ್ ದಾಟಿ ಮತ್ತೊಂದು ರಸ್ತೆಯಲ್ಲಿ ಬರ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಒರ್ವ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ನಡೆದಿದೆ.ಶಿಡ್ಲಘಟ್ಟ ಮೂಲಕ ವೆಂಕಟೇಶಪ್ಪ ( 75 ) ಮೃತ ವ್ಯಕ್ತಿ.ಮುನಿಅಕ್ಕಯಮ್ಮ, ಮಾಲಾ ಮತ್ತು ಪವನ್ ಕುಮಾರ್ ಗೆ ಗಂಭೀರ ಗಾಯವಾಗಿದೆ.ಗಾಯಾಳುಗಳಿಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .1
- * ಬಾಲಗಂಗಾಧರನಾಥ್ ತಿಲಕ್ ರವರ ಆಶಯದಂತೆ ಜನತೆಯನ್ನು ಒಗ್ಗೂಡಿಸಲು ಎಲ್ ಜಿ ಫೌಂಡೇಶನ್ ಆಶ್ರಯದಲ್ಲಿ ಅದ್ದೂರಿ ಗಣೇಶೋತ್ಸವ ಆಚರಣೆ: ಸಮಾಜ ಸೇವಕ ದೊಡ್ಡವಲ್ಲಬಿ ಲಕ್ಷ್ಮಣಗೌಡ* ಕೋಲಾರ : ಸಮಾಜ ಸೇವೆಯ ಮೂಲಕ ತನ್ನದೇ ಆದ ಹೆಸರು ಘನತೆ ಪಡೆದಿರುವ ಸಮಾಜ ಸೇವಕರು ಮತ್ತು ಎಲ್ ಜಿ ಫೌಂಡೇಶನ್ ಅಧ್ಯಕ್ಷರು ಹಾಗೂ ಆರ್ಯಭಟ ಪ್ರಶಸ್ತಿ ವಿಜೇತರಾದ ಕರುಣಾಮಯಿ ದೊಡ್ಡವಲ್ಲಬಿ ಲಕ್ಷ್ಮಣಗೌಡರ ನೇತೃತ್ವದಲ್ಲಿ ಅವರ ಹುಟ್ಟೂರಾದ ದೊಡ್ಡವಲ್ಲಬಿಯಲ್ಲಿ ಬಾಲಗಂಗಾಧರನಾಥ್ ತಿಲಕ್ ರವರ ಆಶಯದಂತೆ ಜನತೆಯನ್ನು ಒಗ್ಗೂಡಿಸಲು ಎಲ್ ಜಿ ಫೌಂಡೇಶನ್ ಆಶ್ರಯದಲ್ಲಿ ಅದ್ದೂರಿಯಾಗಿ ವೈಭವದಿಂದ ವಿಶೇಷ ಹಾಗೂ ವಿಶಿಷ್ಟವಾಗಿ ಗಣೇಶೋತ್ಸವ ಹಬ್ಬದವನ್ನು ಆಚರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಮಾತಾಡಿದ ಲಕ್ಷ್ಮಣಗೌಡರು ಒಂದು ಊರಿನಲ್ಲಿ ಏಕತೆ ಮೂಡಿಸಲು ಗಣೇಶ ಹಬ್ಬ ಉತ್ತಮ ವೇದಿಕೆಯಾಗಿದ್ದು, ಮಹಿಳೆಯರಿಗೆ ಬಾಗೀನ ಕೊಡುವುದರೊಂದಿಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಲ್ಯಾಪ್‌ಟಾಪ್‌ಗಳನ್ನು ವಿತರಣೆ ಮಾಡಿ, ಮಕ್ಕಳನ್ನು ಪ್ರೋತ್ಸಾಹಿಲು ಮೂಜಿಕಲ್ ಚೇರ್ ಆಡಿಸಿ ಅವರಿಗೆ ಸ್ಕೂಲ್ ಬ್ಯಾಗ್ ಹಾಗೂ ಫೈಲ್ ಗಳನ್ನು ನೀಡುವ ಮೂಲಕ ಹಾಗೂ ಯುವಕರನ್ನು ಉತ್ತೇಜಿಸಲು ಕ್ರಿಕೆಟ್ ಮತ್ತು ವಾಲಿಬಾಲ್ ಕಿಟ್ಟುಗಳನ್ನು ನೀಡುವದರೊಂದಿಗೆ ಮತ್ತು ಹಿರಿಯರಿಗೆ ಮಡಿಕೆ ಹೊಡೆಯುವ ಕಾರ್ಯಕ್ರಮ ನಡೆಸಿ ಅವರುಗಳಿಗೆ ರಾಮ್ ರಾಜ್ ರೇಷ್ಮೆ ಪಂಚೆ ಮತ್ತು ಶರ್ಟ್, ಶಲ್ಯ ವಿತರಿಸಿ , ಎಲ್ಲಾ ಜಾತಿ ವರ್ಗ ಹಾಗೂ ಎಲ್ಲಾ ಪಕ್ಷದ ವರನ್ನು ಒಗ್ಗೂಡಿಸಿ ಗ್ರಾಮದಲ್ಲಿ ಒಗ್ಗಟು ಪ್ರದರ್ಶಿಸು ಮೂಲಕ ಅದ್ದೂರಿಯಾಗಿ ಹಾಗೂ ವೈಭವದಿಂದ ಗೌರಿ ಗಣೇಶನ ಹಬ್ಬವನ್ನು ಎಲ್ ಜಿ ಫೌಂಡೇಶನ್ ನೇತೃತ್ವದಲ್ಲಿ ಆಚರಣೆ ಮಾಡಲಾಯಿತು ಎಂದು ತಿಳಿಸಿದರು. ಇದೇ ಅಲ್ಲದೆ ಊರಿನ ಹೈಮಾಸ್ಟ್ ದೀಪ ಮತ್ತು ದೇವಾಲಯದ ದೀಪಗಳ ದುರಸ್ತಿ ಮಾಡಿಸಿದ್ದು,ಸುಮಾರು 500 ಜನ ಹೆಣ್ಣು ಮಕ್ಕಳಿಗೆ ಹಬ್ಬದ ಪ್ರಯುಕ್ತ ಬಾಗೀನ ನೀಡಲಾಗಿದ್ದು,ಮಕ್ಕಳು, ಯುವಕರು ಹಾಗೂ ಹಿರಿಯರು ಸೇರಿ ಒಂದು ಸಾವಿರಕ್ಕೂ ಹೆಚ್ಚು ಜನ ಸೇರಿ ಊರಿನ ಅಭಿವೃದ್ಧಿಯ ಸಂಕೇತವನ್ನು ತೋರಿಸಲು ಹಾಗೂ ಬಾಲಗಂಗಾಧರ ನಾಥರ ಆಶಯವನ್ನು ಸಾಕಾರಗೊಳಿಸಲು ಹಿಂದೂಗಳು ಒಗ್ಗೂಡಿ ಹಬ್ಬವನ್ನು ಆಚರಣೆ ಮಾಡುವ ಮೂಲಕ ಸಂಭ್ರಮಿಸಲಾಯಿತು ಎಂದು ಲಕ್ಷ್ಮಣಗೌಡರು ತಿಳಿಸಿದರು. ಹಬ್ಬದ ಅಂಗವಾಗಿ ಆಟಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.4
- ನೂರ ಒಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆ ಎತ್ತಿನ ಗಾಡಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮೆರವಣಿಗೆ ಮಾಡಿ ವಿಸರ್ಜಿಸಿದ ಗ್ರಾಮಸ್ಥರು ದೇವನಹಳ್ಳಿ ನೂರ ಒಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆ ಎತ್ತಿನ ಗಾಡಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮೆರವಣಿಗೆ ಮಾಡಿ ವಿಸರ್ಜಿಸಿದ ಗ್ರಾಮಸ್ಥರು ದೇವನಹಳ್ಳಿಯ ಪ್ರಸನ್ನಹಳ್ಳಿಯ ಜಟಾಯು ಯುವಸೇನೆವತಿಯಿಂದ ಗಣೇಶೋತ್ಸವ ಆಯೋಜನೆ ಯಾವುದೆ ಡಿಜೆ ಬಳಕೆ ಮಾಡದೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಸಾಂಪ್ರದಾಯಿಕವಾಗಿ ಮೆರವಣಿಗೆ ಎತ್ತಿನಗಾಡಿ ಮತ್ತು ಮಹಿಳೆಯರಿಂದ ತಟ್ಟೆಗಳಲ್ಲಿ ಗಣಪತಿ ಮೂರ್ತಿಗಳ ಹೊತ್ತು ಮೆರವಣಿಗೆ ಪ್ರಸನ್ನಹಳ್ಳಿ ಇಂದ ಚಿಕ್ಕಕೆರೆವರೆಗೆ ಮೆರವಣಿಗೆ ಮಾಡಿ ಪರಿಸರ ಸ್ನೇಹಿ ಮೂರ್ತಿಗಳ ವಿಸರ್ಜನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಪ್ರಸನ್ನ ಹಳ್ಳಿ3