ಬಾಗಲಕೋಟೆ:ಬನಹಟ್ಟಿಯಲ್ಲಿ ಡಿಜೆ ‘ರಂಗ ಸಂಭ್ರಮ’ ರಷ್ಯಾದ ಬೆಡಗಿ ಆಗಮನ ಬನಹಟ್ಟಿಯ ಎನ್.ಆರ್.ಆರ್ ಮೈದಾನದಲ್ಲಿ ಮಹಿಳೆಯರಿಗಾಗಿ ಸಿದ್ದು ಕೊಣ್ಣೂರ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ 7 ಗಂಟೆಯಿಂದ ‘ರಂಗ ಸಂಭ್ರಮ’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಕವಿತಾ ಕೊಣ್ಣೂರ ತಿಳಿಸಿದರು. ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಡಿಜೆ ಆಪರೇಟರ್‌ಗಳಾದ ರಷ್ಯಾದ ಮೀನಾ ಹಾಗೂ ಭಾರತದ ಆರಿಯಾ ಮತ್ತು ಅಕ್ಷಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದ್ದಾರೆ ಎಂದರು. ರಾಜ್ಯದ ಖ್ಯಾತ ಕಲಾ ತಂಡಗಳಾದ ಸಾಧನಾ ಮತ್ತು ಸಮನ್ವಿ ನೇತೃತ್ವದ ತಂಡಗಳು ವಿಶೇಷ ಪ್ರದರ್ಶನ ನೀಡಲಿದ್ದು, ರಷ್ಯಾ ದೇಶದ ನರ್ತಕಿಯರು ಹಾಗೂ ರಾಜ್ಯದ ಪ್ರಸಿದ್ಧ ಬೆಳ್ಳಿ ಡ್ಯಾನ್ಸ್ ಕಲಾವಿದರ ತಂಡವೂ ಭಾಗವಹಿಸಲಿದೆ ಎಂದು ಮಾಹಿತಿ ನೀಡಿದರು. ರಬಕವಿ–ಬನಹಟ್ಟಿ, ಜಮಖಂಡಿ ಹಾಗೂ ಮುಧೋಳ ತಾಲೂಕು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಮಹಿಳೆಯರು ಭಾಗವಹಿಸುವ ನಿರೀಕ್ಷೆಯಿದ್ದು, ಬಣ್ಣದೋಕಳಿ ಅಂಗವಾಗಿ ನಡೆಯುವ ಈ ರಂಗ ಸಂಭ್ರಮಕ್ಕೆ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದರು. ಹೋಳಿ ಆಚರಣೆ ಕಾರ್ಯಕ್ರಮವು ಯಾವುದೇ ಪಕ್ಷಬೇಧವಿಲ್ಲದೆ, ಪುರುಷ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ವೇದಿಕೆಗಳಲ್ಲಿ ಜರುಗಲಿದೆ ಎಂದು ತಿಳಿಸಿದರು.

- ಮಹಾಲಿಂಗಪುರ ಪಟ್ಟಣದಿಂದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಮಲ್ಲಯ್ಯನ ಕಂಬಿ ಹೊತ್ತುಕೊಂಡು ಭಕ್ತರು ಮಂಗಳವಾರ ಬೆಳಿಗ್ಗೆ ಪಾದಯಾತ್ರೆ ಮೂಲಕ ಹೊರಟರು. ಶಿವನ ನಾಮಸ್ಮರಣೆಗಳೊಂದಿಗೆ, ಭಜನೆ–ಕೀರ್ತನೆಗಳ ಮಧ್ಯೆ ಭಕ್ತರು ಭಕ್ತಿಭಾವದಿಂದ ಯಾತ್ರೆ ಆರಂಭಿಸಿದರು. ಯುವಕರು, ಹಿರಿಯರು ಸೇರಿದಂತೆ ಅನೇಕರು ಕುಟುಂಬ ಸಮೇತವಾಗಿ ಭಾಗವಹಿಸಿದ್ದು, ಯಾತ್ರೆಯು ಭಕ್ತಿಯ ಉತ್ಸಾಹದಿಂದ ಕಂಗೊಳಿಸಿತು. ಮಾರ್ಗ ಮಧ್ಯೆ ವಿವಿಧ ಗ್ರಾಮಗಳಲ್ಲಿ ಭಕ್ತರಿಗೆ ನೀರು, ಪ್ರಸಾದ ಹಾಗೂ ವಿಶ್ರಾಂತಿ ವ್ಯವಸ್ಥೆ ಕಲ್ಪಿಸಲಾಯಿತು. ಶ್ರೀಶೈಲ ತಲುಪಿ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಸಂಕಲ್ಪದೊಂದಿಗೆ ಭಕ್ತರು ಪಾದಯಾತ್ರೆ ಮುಂದುವರಿಸಿದ್ದಾರೆ. ಈ ಪಾದಯಾತ್ರೆ ಶಿವಭಕ್ತರ ನಂಬಿಕೆ ಹಾಗೂ ಆಧ್ಯಾತ್ಮಿಕ ಶ್ರದ್ಧೆಯ ಪ್ರತೀಕವಾಗಿದೆ.1
- ಬಾಗಲಕೋಟೆ ನಗರದಲ್ಲಿ ಭೀಮ ಆರ್ಮಿ ಸಂಘಟನೆಯ ವತಿಯಿಂದ ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವು ಜಿಲ್ಲಾಧ್ಯಕ್ಷರಾದ ಬಸವರಾಜ ನೀಲನಾಯಕ್ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಪದಾಧಿಕಾರಿಗಳು, ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗೂ ಸಂಘಟನೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಾಯಕರವರು ಸಂಘಟನೆಯ ಉದ್ದೇಶಗಳು ಹಾಗೂ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಜಿಲ್ಲೆಯಾದ್ಯಂತ ಸಂಘಟನೆಯನ್ನು ವಿಸ್ತರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಕಾರ್ಯಕ್ರಮವು ಉತ್ಸಾಹಭರಿತವಾಗಿ ನಡೆಯಿತು.1
- Post by @april14news1
- ಬಾಗೇವಾಡಿ: ನರೇಗಾ ಉಳಿಸಿ ಕಾರ್ಯಕ್ರಮ ಉದ್ಘಾಟಿಸಿದ ಶಿವಾನಂದ ಪಾಟೀಲ್ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹಡಗಲಿ ಗ್ರಾಮದಲ್ಲಿ ಸೋಮವಾರ 'ನರೇಗಾ ಉಳಿಸಿ ಬಡವರ ಬದುಕು ರಕ್ಷಿಸಿ' ಕಾರ್ಯಕ್ರಮವನ್ನು ಜವಳಿ ಸಚಿವ ಶಿವಾನಂದ ಪಾಟೀಲ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಬಡವರು ಮತ್ತು ಕೂಲಿಕಾರರ ಆಶಾಕಿರಣವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (#MGNREGA) ಯೋಜನೆಯನ್ನು ಹಂತ ಹಂತವಾಗಿ ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದರು. ನರೇಗಾ ಕೇವಲ ಒಂದು ಯೋಜನೆಯಲ್ಲ, ಇದು ಗ್ರಾಮೀಣ ಭಾರತದ ಬಡವರಿಗೆ ಸಂವಿಧಾನಬದ್ಧವಾಗಿ ಸಿಕ್ಕಿರುವ 'ಕೆಲಸದ ಹಕ್ಕು' ಎಂದು ಹೇಳಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ ಈ ಯೋಜನೆಯು ಕೋಟ್ಯಂತರ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡಿದೆ ಎಂದರು.1
- ಗಜೆಂದ್ರಗಡ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಗ್ರಾಮಸ್ಥರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ1
- ಮಂಗಳೂರು ಬಸ್ ನಿಲ್ದಾಣ1
- *ಬೆಳಗಾವಿಯಲ್ಲಿ ನಾಗರಿಕ ಸಮಾಜವೇ ಬೆಚ್ಚಿಬೀಳಿಸುವ ಅಮಾನವೀಯ ಕೃತ್ಯ ಬೆಳಕಿಗೆ!ಮಕ್ಕಳ ಕಳ್ಳಿ ಎಂದು ಭಾವಿಸಿ ಭಿಕ್ಷುಕ ಮಹಿಳೆ* ಸಿಟಿ ನೆಷ್ಟ ನ್ಯೂಸ್ 24/7 ಕನ್ನಡವಾಗಿದೆ ಸುದ್ದಿ ವಾಹಿನಿ. ಕನ್ನಡ ಟೆಲಿವಿಷನ್ ನ್ಯೂಸ್‌ನಲ್ಲಿ ಹಿಂದೆಂದೂ ಕಾಣದ ಉತ್ತಮ ಗುಣಮಟ್ಟದ ಸುದ್ದಿ ವಿಷಯವನ್ನು ತಲುಪಿಸುವುದು. 'ಲೈವ್' ಕನ್ನಡ ಹಾಗೂ ಹಿಂದಿ ಸುದ್ದಿಯನ್ನು ಕರ್ನಾಟಕದ ಮನೆ ಬಾಗಿಲಿಗೆ ತಂದ ತಂಡದಿಂದ ಪ್ರಚಾರ. ಈ ಧೈರ್ಯಶಾಲಿ, ವಿಶ್ವಾಸಾರ್ಹ ಮತ್ತು ದೃಢನಿರ್ಧಾರದ ತಂಡವು ನಿಮಗೆ 'ಯಾವುದೇ ವೆಚ್ಚದಲ್ಲಿ' ವಿಶ್ವಾಸಾರ್ಹ ಸುದ್ದಿಯನ್ನು ತರುತ್ತದೆ ಪಡೆಯುವಲ್ಲಿ ಮೊದಲಿಗರಾಗಿರಿ: - ಸ್ಥಳೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳನ್ನು ಬ್ರೇಕಿಂಗ್ - ವ್ಯಾಪಕವಾದ ಹೈಪರ್ ಸ್ಥಳೀಯ ಸುದ್ದಿ - ಕರ್ನಾಟಕದ ರಾಜಕೀಯದ ಆಳವಾದ ಕವರೇಜ್ - ವಿವರವಾದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿ - ಇತ್ತೀಚಿನ ಕ್ರೀಡಾ ಪಂದ್ಯಗಳು, ಅಂಕಗಳು ಮತ್ತು ಇನ್ನಷ್ಟು - ವಿಶಾಲವಾದ ಸಿನಿಮಾ ವ್ಯಾಪ್ತಿ ಮತ್ತು ದೊಡ್ಡದು ಸ್ಟಾರ್ ಕಥೆಗಳು - ಪ್ರಪಂಚದಾದ್ಯಂತ ಆಸಕ್ತಿದಾಯಕ ಕಥೆಗಳು1
- ರಬಕವಿ: ಹನಗಂಡಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವರಿಗೆ ಪ್ರತಿಷ್ಠಾಪಿಸಲು 150 ಕೆಜಿ ಪಂಚಲೋಹ ಗಂಟೆ ತಯಾರಿಸಲಾಗಿದೆ. ನಾಳೆ ಬೆಳಿಗ್ಗೆ 11–12 ಗಂಟೆ ನಡುವೆ ಪಾದಯಾತ್ರೆಯ ಮೂಲಕ ಬಾಗಲಕೋಟೆ ಗದ್ದನಕೇರಿ ಕ್ರಾಸ್ ಪ್ರವೇಶಿಸಿ, ವಿದ್ಯಾಗಿರಿ ಮಾರ್ಗವಾಗಿ ತೆಗ್ಗಿ ಬಡಾವಣೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತರಲಾಗುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರತಿಯೊಂದಿಗೆ ಸ್ವಾಗತಿಸಬೇಕೆಂದು ಕೋರಲಾಗಿದೆ.1