logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

*ಗ್ರಾಮೀಣ ಜನರ ಸ್ವಾವಲಂಬಿ ಬದುಕಿಗೆ ವಿಬಿಜಿರಾಮ್‌ಜಿ ಆಸರೆ: ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ ಸರ್ವೇಶ್ ಹೇಳಿಕೆ* ಕೋಲಾರ:ಗ್ರಾಮೀಣ ಭಾಗದ ಶ್ರಮಿಕ ವರ್ಗದ ಜನರಿಗೆ ಉದ್ಯೋಗ ಭದ್ರತೆ ಒದಗಿಸುವ ಹಾಗೂ ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ, 'ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಅಜೀವಿಕಾ ಮಿಷನ್ ಗ್ರಾಮೀಣ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಶ್ರೀನಿವಾಸಪುರ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಕೆ. ಸರ್ವೇಶ್ ಅಭಿಪ್ರಾಯಟ್ಟರು. ತಾಲ್ಲೂಕಿನ ನಂಬಿಹಳ್ಳಿ ಹಾಗೂ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯತಿಗಳಲ್ಲಿ ವಿಬಿಜಿರಾಮ್‌ಜಿ ಯೋಜನೆಯಡಿ' ಜಾಬ್ ಕಾರ್ಡ್ ಮೇಳಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬದಲಿಗೆ 'ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಅಜೀವಿಕಾ ಮಿಷನ್ ಗ್ರಾಮೀಣ ಯೋಜನೆ ಜಾರಿಗೆ ಬಂದಿದೆ. ವಿಬಿಜಿರಾಮ್‌ಜಿ ಯೋಜನೆಯಡಿ ತಾಲ್ಲೂಕಿನಲ್ಲಿ ಜಾಬ್‌ಕಾರ್ಡ್ ಮೇಳ ಹಮ್ಮಿಕೊಳ್ಳಲಾಗಿದೆ. ಯೋಜನೆಯಡಿ ಸ್ವಗ್ರಾಮದಲ್ಲೇ ಉದ್ಯೋಗಾವಕಾಶಗಳನ್ನು ಕಲ್ಪಿಸಿ, ಜನರು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು. ವೈಯುಕ್ತಿಕ ಕಾಮಗಾರಿಗಳನ್ನು ನೀಡುವ ಮೂಲಕ ಗ್ರಾಮೀಣ ಜನರ ಜೀವನೋಪಾಯವನ್ನು ಒದಗಿಸುವುದು ಮೇಳದ ಮುಖ್ಯ ಉದ್ದೇಶವಾಗಿದೆ ಎಂದರು. ವಿಬಿಜಿರಾಮ್‌ಜಿ ಯೋಜನೆಯಡಿ ದಿನಕ್ಕೆ ಕುಲಿಧರವನ್ನು ರೂಪಾಯಿ 382/-ಕ್ಕೆ ಏರಿಸಲಾಗಿದ್ದು, ಕುಟುಂಬಕ್ಕೆ 125 ದಿನಗಳ ಉದ್ಯೋಗ ಖಾತ್ರಿ ನೀಡಿದೆ. ಕುಟುಂಬವೊಂದು ವರ್ಷದಲ್ಲಿ 47750/- ರೂಪಾಯಿ ಕೂಲಿ ಗಳಿಸಬಹುದು. ವೈಯುಕ್ತಿಕವಾಗಿ 5 ಲಕ್ಷದವರೆಗೂ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ದನದ ಶೆಡ್, ಕುರಿ/ಮೇಕೆ ಶೆಡ್. ಕೋಳಿ ಶೆಡ್, ಬಚ್ಚಲು ಗುಂಡಿ, ಕೊಳವೆ ಬಾವಿ ಮರು ಪೂರಣ ಘಟಕ, ಗೊಬ್ಬರ ಘಟಕ, ಕೃಷಿಹೊಂಡ ಸೇರಿದಂತೆ ತೋಟಗಾರಿಕೆ ಬೆಳೆ, ರೇಷ್ಮೆ ಬೆಳೆಗೆ ಸಹಾಯಧನ ದೊರೆಯಲಿದೆ. ಪ್ರತಿಯೊಬ್ಬ ಅರ್ಹ ಬಡ ಕುಟುಂಬವೂ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂದು ಕರೆ ನೀಡಿದರು. ಈ ಜಾಬ್ ಕಾರ್ಡ್ ಮೇಳದ ಅಂಗವಾಗಿ, ಪಂಚಾಯತಿ ವ್ಯಾಪ್ತಿಯ ಹೊಸದಾಗಿ ಅರ್ಜಿ ಸಲ್ಲಿಸಿದ್ದ 5 ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲೇ ನೂತನ ಜಾಬ್ ಕಾರ್ಡ್ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಸಹಾಯಕ ನಿರ್ದೇಶಕ ರಾಮಪ್ಪ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಲ್ಯಾಣಿ, ತಾಲ್ಲೂಕು ಐಇಸಿ ಸಂಯೋಜಕ ಚೇತನ್ ಡಿ.ವಿ, ಹಾಗೂ ಪಂಚಾಯತಿ ಸಿಬ್ಬಂದಿ ವರ್ಗ, ಸ್ಥಳೀಯ ಸ್ವಸಹಾಯ ಗುಂಪುಗಳ ಒಕ್ಕೂಟದ ಸದಸ್ಯರು ಹಾಗೂ ನಂಬಿಹಳ್ಳಿ ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

38 min ago
user_ಎಸ್.ಎನ್.ಪ್ರಕಾಶ್
ಎಸ್.ಎನ್.ಪ್ರಕಾಶ್
Grain Trader ಕೋಲಾರ, ಕೋಲಾರ, ಕರ್ನಾಟಕ•
38 min ago
f9539b7f-4201-4718-9e3f-e0f6cf9bf5ce

*ಗ್ರಾಮೀಣ ಜನರ ಸ್ವಾವಲಂಬಿ ಬದುಕಿಗೆ ವಿಬಿಜಿರಾಮ್‌ಜಿ ಆಸರೆ: ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ ಸರ್ವೇಶ್ ಹೇಳಿಕೆ* ಕೋಲಾರ:ಗ್ರಾಮೀಣ ಭಾಗದ ಶ್ರಮಿಕ ವರ್ಗದ ಜನರಿಗೆ ಉದ್ಯೋಗ ಭದ್ರತೆ ಒದಗಿಸುವ ಹಾಗೂ ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ, 'ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಅಜೀವಿಕಾ ಮಿಷನ್ ಗ್ರಾಮೀಣ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಶ್ರೀನಿವಾಸಪುರ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಕೆ. ಸರ್ವೇಶ್ ಅಭಿಪ್ರಾಯಟ್ಟರು. ತಾಲ್ಲೂಕಿನ ನಂಬಿಹಳ್ಳಿ ಹಾಗೂ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯತಿಗಳಲ್ಲಿ ವಿಬಿಜಿರಾಮ್‌ಜಿ ಯೋಜನೆಯಡಿ' ಜಾಬ್ ಕಾರ್ಡ್ ಮೇಳಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬದಲಿಗೆ 'ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಅಜೀವಿಕಾ ಮಿಷನ್ ಗ್ರಾಮೀಣ ಯೋಜನೆ ಜಾರಿಗೆ ಬಂದಿದೆ. ವಿಬಿಜಿರಾಮ್‌ಜಿ ಯೋಜನೆಯಡಿ ತಾಲ್ಲೂಕಿನಲ್ಲಿ ಜಾಬ್‌ಕಾರ್ಡ್ ಮೇಳ ಹಮ್ಮಿಕೊಳ್ಳಲಾಗಿದೆ. ಯೋಜನೆಯಡಿ ಸ್ವಗ್ರಾಮದಲ್ಲೇ ಉದ್ಯೋಗಾವಕಾಶಗಳನ್ನು ಕಲ್ಪಿಸಿ, ಜನರು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು. ವೈಯುಕ್ತಿಕ ಕಾಮಗಾರಿಗಳನ್ನು ನೀಡುವ ಮೂಲಕ ಗ್ರಾಮೀಣ ಜನರ ಜೀವನೋಪಾಯವನ್ನು ಒದಗಿಸುವುದು ಮೇಳದ ಮುಖ್ಯ ಉದ್ದೇಶವಾಗಿದೆ ಎಂದರು. ವಿಬಿಜಿರಾಮ್‌ಜಿ ಯೋಜನೆಯಡಿ ದಿನಕ್ಕೆ ಕುಲಿಧರವನ್ನು ರೂಪಾಯಿ 382/-ಕ್ಕೆ ಏರಿಸಲಾಗಿದ್ದು, ಕುಟುಂಬಕ್ಕೆ 125 ದಿನಗಳ ಉದ್ಯೋಗ ಖಾತ್ರಿ ನೀಡಿದೆ. ಕುಟುಂಬವೊಂದು ವರ್ಷದಲ್ಲಿ 47750/- ರೂಪಾಯಿ ಕೂಲಿ ಗಳಿಸಬಹುದು. ವೈಯುಕ್ತಿಕವಾಗಿ 5 ಲಕ್ಷದವರೆಗೂ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ದನದ ಶೆಡ್, ಕುರಿ/ಮೇಕೆ ಶೆಡ್. ಕೋಳಿ ಶೆಡ್, ಬಚ್ಚಲು ಗುಂಡಿ, ಕೊಳವೆ ಬಾವಿ ಮರು ಪೂರಣ ಘಟಕ, ಗೊಬ್ಬರ ಘಟಕ, ಕೃಷಿಹೊಂಡ ಸೇರಿದಂತೆ ತೋಟಗಾರಿಕೆ ಬೆಳೆ, ರೇಷ್ಮೆ ಬೆಳೆಗೆ ಸಹಾಯಧನ ದೊರೆಯಲಿದೆ. ಪ್ರತಿಯೊಬ್ಬ ಅರ್ಹ ಬಡ ಕುಟುಂಬವೂ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂದು ಕರೆ ನೀಡಿದರು. ಈ ಜಾಬ್ ಕಾರ್ಡ್ ಮೇಳದ ಅಂಗವಾಗಿ, ಪಂಚಾಯತಿ ವ್ಯಾಪ್ತಿಯ ಹೊಸದಾಗಿ ಅರ್ಜಿ ಸಲ್ಲಿಸಿದ್ದ 5 ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲೇ ನೂತನ ಜಾಬ್ ಕಾರ್ಡ್ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಸಹಾಯಕ ನಿರ್ದೇಶಕ ರಾಮಪ್ಪ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಲ್ಯಾಣಿ, ತಾಲ್ಲೂಕು ಐಇಸಿ ಸಂಯೋಜಕ ಚೇತನ್ ಡಿ.ವಿ, ಹಾಗೂ ಪಂಚಾಯತಿ ಸಿಬ್ಬಂದಿ ವರ್ಗ, ಸ್ಥಳೀಯ ಸ್ವಸಹಾಯ ಗುಂಪುಗಳ ಒಕ್ಕೂಟದ ಸದಸ್ಯರು ಹಾಗೂ ನಂಬಿಹಳ್ಳಿ ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

More news from ಕರ್ನಾಟಕ and nearby areas
  • *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ* *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ* *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ* *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ* *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ*
    2
    *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ*




*ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ*





*ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ*





*ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ*




*ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ*
    user_ಎಸ್.ಎನ್.ಪ್ರಕಾಶ್
    ಎಸ್.ಎನ್.ಪ್ರಕಾಶ್
    Grain Trader ಕೋಲಾರ, ಕೋಲಾರ, ಕರ್ನಾಟಕ•
    29 min ago
  • ಭಾರತ ಸರ್ಕಾರದ ಎನ್ಐ- ಎಂಎಸ್ಎಂಇ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ಡಾ.ಕೆ. ನಾಗರಾಜ್ ನೇಮಕ ಭಾರತ ಸರ್ಕಾರದ ಎನ್ಐ- ಎಂಎಸ್ಎಂಇ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ಡಾ.ಕೆ. ನಾಗರಾಜ್ ನೇಮಕ ಕೋಲಾರ: ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಅಧೀನದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಮೈಕ್ರೋ, ಸ್ಮಾಲ್ ಆ್ಯಂಡ್ ಮೀಡಿಯಂ ಎಂಟರ್‌ಪ್ರೈಸಸ್ (ಎನ್ಐ-ಎಂಎಸ್ಎಂಇ)ನ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ತಾಲೂಕಿನ ಕಲ್ಲಂಡೂರು ಗ್ರಾಮದ ಡಾ. ಕೆ. ನಾಗರಾಜ್ ಅವರನ್ನು ನೇಮಕ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಉದ್ಯಮಶೀಲತೆ ಹಾಗೂ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಾ. ಕೆ. ನಾಗರಾಜ್ ಅವರು ಕಲ್ಲಂಡೂರು ಗ್ರಾಮದಲ್ಲಿ ಪ್ಲಾಟರಿ ಕ್ಲಸ್ಟರ್ ಮೂಲಕ ಉದ್ಯಮಶೀಲರಾಗಿ ಗುರುತಿಸಿಕೊಂಡಿದ್ದಾರೆ. ಸ್ಥಳೀಯವಾಗಿ ಉದ್ಯಮ ಚಟುವಟಿಕೆಗಳನ್ನು ಬೆಳೆಸುವುದರ ಜೊತೆಗೆ ಯುವಕರು ಹಾಗೂ ಗ್ರಾಮೀಣ ಭಾಗದ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿಗೆ ಸಂಬಂಧಿಸಿದ ನೀತಿ ರೂಪಿಸುವಿಕೆ, ಉದ್ಯಮಿಗಳಿಗೆ ಅಗತ್ಯವಾದ ಮಾರ್ಗದರ್ಶನ ಹಾಗೂ ಗ್ರಾಮೀಣ ಭಾಗದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗವರ್ನಿಂಗ್ ಕೌನ್ಸಿಲ್‌ನಲ್ಲಿ ಡಾ. ನಾಗರಾಜ್ ಅವರ ಅನುಭವ ಸಹಕಾರಿಯಾಗಲಿದೆ ಕೇಂದ್ರ ಸರ್ಕಾರದ ಪ್ರಮುಖ ಸಂಸ್ಥೆಯ ಗವರ್ನಿಂಗ್ ಕೌನ್ಸಿಲ್‌ಗೆ ಕೋಲಾರ ತಾಲೂಕಿನ ಗ್ರಾಮೀಣ ಭಾಗದ ಉದ್ಯಮಿಯನ್ನು ಸದಸ್ಯರಾಗಿ ನೇಮಕ ಮಾಡಿರುವುದು ಜಿಲ್ಲೆಯ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.
    1
    ಭಾರತ ಸರ್ಕಾರದ ಎನ್ಐ- ಎಂಎಸ್ಎಂಇ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ಡಾ.ಕೆ. ನಾಗರಾಜ್ ನೇಮಕ
ಭಾರತ ಸರ್ಕಾರದ ಎನ್ಐ- ಎಂಎಸ್ಎಂಇ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ಡಾ.ಕೆ. ನಾಗರಾಜ್ ನೇಮಕ
ಕೋಲಾರ: ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಅಧೀನದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಮೈಕ್ರೋ, ಸ್ಮಾಲ್ ಆ್ಯಂಡ್ ಮೀಡಿಯಂ ಎಂಟರ್‌ಪ್ರೈಸಸ್ (ಎನ್ಐ-ಎಂಎಸ್ಎಂಇ)ನ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ತಾಲೂಕಿನ ಕಲ್ಲಂಡೂರು ಗ್ರಾಮದ ಡಾ. ಕೆ. ನಾಗರಾಜ್ ಅವರನ್ನು ನೇಮಕ ಮಾಡಲಾಗಿದೆ.
ಗ್ರಾಮೀಣ ಭಾಗದಲ್ಲಿ ಉದ್ಯಮಶೀಲತೆ ಹಾಗೂ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಾ. ಕೆ. ನಾಗರಾಜ್ ಅವರು ಕಲ್ಲಂಡೂರು ಗ್ರಾಮದಲ್ಲಿ ಪ್ಲಾಟರಿ ಕ್ಲಸ್ಟರ್ ಮೂಲಕ ಉದ್ಯಮಶೀಲರಾಗಿ ಗುರುತಿಸಿಕೊಂಡಿದ್ದಾರೆ. ಸ್ಥಳೀಯವಾಗಿ ಉದ್ಯಮ ಚಟುವಟಿಕೆಗಳನ್ನು ಬೆಳೆಸುವುದರ ಜೊತೆಗೆ ಯುವಕರು ಹಾಗೂ ಗ್ರಾಮೀಣ ಭಾಗದ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿಗೆ ಸಂಬಂಧಿಸಿದ ನೀತಿ ರೂಪಿಸುವಿಕೆ, ಉದ್ಯಮಿಗಳಿಗೆ ಅಗತ್ಯವಾದ ಮಾರ್ಗದರ್ಶನ ಹಾಗೂ ಗ್ರಾಮೀಣ ಭಾಗದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ  ಗವರ್ನಿಂಗ್ ಕೌನ್ಸಿಲ್‌ನಲ್ಲಿ ಡಾ. ನಾಗರಾಜ್ ಅವರ ಅನುಭವ ಸಹಕಾರಿಯಾಗಲಿದೆ
ಕೇಂದ್ರ ಸರ್ಕಾರದ ಪ್ರಮುಖ ಸಂಸ್ಥೆಯ ಗವರ್ನಿಂಗ್ ಕೌನ್ಸಿಲ್‌ಗೆ ಕೋಲಾರ ತಾಲೂಕಿನ ಗ್ರಾಮೀಣ ಭಾಗದ ಉದ್ಯಮಿಯನ್ನು ಸದಸ್ಯರಾಗಿ ನೇಮಕ ಮಾಡಿರುವುದು ಜಿಲ್ಲೆಯ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.
    user_Navachaithya KOLAR
    Navachaithya KOLAR
    Classified ads newspaper publisher ಕೋಲಾರ, ಕೋಲಾರ, ಕರ್ನಾಟಕ•
    12 hrs ago
  • ಬಂಗಾರಪೇಟೆ ಗೃಹಜ್ಯೋತಿ ಪರಿಶೀಲನೆಗೆ ನಿರ್ಲಕ್ಷ್ಯ: ಆಸಿಡ್ ಬಾಟಲಿ ಹಿಡಿದು ಹೈಡ್ರಾಮಾ!ಬೆಸ್ಕಾಂ ಕಚೇರಿ ಮುಂದೆ ಮೂವರು ಜಿವಿಪಿಗಳ ಆತ್ಮಹತ್ಯೆ ಬೆದರಿಕೆ; ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಮನೆ ಪರಿಶೀಲನೆಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಸ್ಕಾಂ ಇಲಾಖೆಯ ಮೂವರು ಜಿವಿಪಿಗಳು ಆಸಿಡ್ ಬಾಟಲಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಹೈಡ್ರಾಮಾ ನಡೆದ ಘಟನೆ ಬೆಸ್ಕಾಂ ಕಚೇರಿ ಮುಂದೆ ನಡೆದಿದೆ. ಜಿವಿಪಿಗಳಾದ ಅಶ್ವಥ್ ನಾರಾಯಣ, ಮಹೇಶ್ ಕುಮಾರ್ ಹಾಗೂ ನಿರಂಜನ್ ಅವರು ಬೆಳಗ್ಗೆ ಸುಮಾರು 9.30ರ ವೇಳೆಗೆ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಆಸಿಡ್ ಬಾಟಲಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಬೆಸ್ಕಾಂ ಇಲಾಖೆಯ ಸಿಬ್ಬಂದಿ ಮೂವರನ್ನು ಸಮಾಧಾನಪಡಿಸಿ, ಆಸಿಡ್ ಬಾಟಲಿಯನ್ನು ವಶಕ್ಕೆ ಪಡೆದರು. ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ನೈಜ ಸ್ಥಿತಿಗತಿ ಪರಿಶೀಲಿಸುವಂತೆ ಸರ್ಕಾರ ಬೆಸ್ಕಾಂಗೆ ಸೂಚಿಸಿದೆ. ಫಲಾನುಭವಿಗಳ ಪಟ್ಟಿಯೊಂದಿಗೆ ಮನೆಮನೆಗೆ ತೆರಳಿ ಪರಿಶೀಲನೆ ನಡೆಸಿ, ಅರ್ಹತೆ ಇಲ್ಲದಿರುವ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ರಾಜ್ಯ ಸರ್ಕಾರವು ಗೃಹಜ್ಯೋತಿ ಯೋಜನೆಯ ದುರುಪಯೋಗವಾಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಪರಿಶೀಲನೆಗೆ ಒತ್ತು ನೀಡಲಾಗಿದ್ದು, ಆಗಸ್ಟ್ 31ರೊಳಗೆ ಪರಿಶೀಲನೆ ಪೂರ್ಣಗೊಳಿಸುವ ಗುರಿ ನೀಡಲಾಗಿದೆ. ಘಟನೆ ಕುರಿತು ಬೆಸ್ಕಾಂ ಎಇಇ ಸುಕುಮಾರ್ ರಾಜು ಸ್ಪಷ್ಟನೆ ನೀಡಿ, ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನೆ ಕಾರ್ಯದಲ್ಲಿ ಈ ಮೂವರು ಜಿವಿಪಿಗಳು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂದು ಆರೋಪಿಸಿದರು. ಅಶ್ವಥ್ ನಾರಾಯಣ, ಮಹೇಶ್ ಕುಮಾರ್ ಹಾಗೂ ನಿರಂಜನ್ ಅವರಿಗೆ ತಲಾ 400ಕ್ಕೂ ಹೆಚ್ಚು ಗೃಹಜ್ಯೋತಿ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸುವ ಜವಾಬ್ದಾರಿ ನೀಡಲಾಗಿತ್ತು. ಆದರೆ, ಈ ಪಟ್ಟಿಯಲ್ಲಿನ ಫಲಾನುಭವಿಗಳ ಪರಿಶೀಲನೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಗಣನೀಯ ಸಂಖ್ಯೆಯ ಫಲಾನುಭವಿಗಳ ಪರಿಶೀಲನೆ ಬಾಕಿ ಉಳಿದಿದೆ ಎಂದು ತಿಳಿಸಿದರು. ಸರ್ಕಾರ ನಿಗದಿಪಡಿಸಿರುವ ಗಡುವಿನೊಳಗೆ ಪರಿಶೀಲನೆ ಪೂರ್ಣಗೊಳಿಸಬೇಕಿರುವ ಹಿನ್ನೆಲೆಯಲ್ಲಿ ಕಾರ್ಯದ ಪ್ರಗತಿ ಸಾಧಿಸುವಂತೆ ಜಿವಿಪಿಗಳಿಗೆ ಸೂಚಿಸಲಾಗಿತ್ತು. ಕರ್ತವ್ಯ ನಿರ್ವಹಣೆ ಕುರಿತು ಪ್ರಶ್ನಿಸಿದಾಗ ಈ ರೀತಿಯಾಗಿ ಆಸಿಡ್ ಬಾಟಲಿ ಹಿಡಿದು ಆತ್ಮಹತ್ಯೆ ಬೆದರಿಕೆ ಹಾಕಿರುವುದು ಸರಿಯಲ್ಲ ಎಂದು ಎಇಇ ಹೇಳಿದರು. ಇತ್ತ ಜಿವಿಪಿಗಳಾದ ಅಶ್ವಥ್ ನಾರಾಯಣ, ಮಹೇಶ್ ಕುಮಾರ್ ಹಾಗೂ ನಿರಂಜನ್ ಅವರು ಅಧಿಕಾರಿಗಳ ಆರೋಪವನ್ನು ತಳ್ಳಿಹಾಕಿದ್ದಾರೆ. ತಮಗೆ ನೀಡಲಾಗಿದ್ದ ಫಲಾನುಭವಿಗಳ ಪಟ್ಟಿಯಲ್ಲಿ ಸುಮಾರು ಶೇ.80ರಷ್ಟು ಮನೆಗಳ ಪರಿಶೀಲನೆ ಪೂರ್ಣಗೊಳಿಸಲಾಗಿದೆ. ಉಳಿದ ಫಲಾನುಭವಿಗಳ ಪೈಕಿ ಹಲವರು ಸ್ಥಳದಲ್ಲಿ ಸಿಗದಿರುವುದು, ಮನೆ ಬದಲಿಸಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಪರಿಶೀಲನೆ ಸಾಧ್ಯವಾಗುತ್ತಿಲ್ಲ. ಈ ಕುರಿತು ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ. ಐದು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣದ ವೆಚ್ಚ ಭರಿಸಲು ತೊಂದರೆಯಾಗಿದೆ. ಇಲಾಖೆಯಲ್ಲಿನ ಆಂತರಿಕ ಸಮಸ್ಯೆಯಿಂದ ತಮ್ಮ ಮೇಲೆ ಹೆಚ್ಚಿನ ಕೆಲಸದ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಜಿವಿಪಿಗಳು ಆಸಿಡ್ ಬಾಟಲಿ ಹಿಡಿದಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಅಧಿಕಾರಿಗಳು ಅವರನ್ನು ಸಮಾಧಾನಪಡಿಸಿದರು. ಬಳಿಕ ಎಇಇ ಸುಕುಮಾರ್ ರಾಜು ಹಾಗೂ ಮೂವರು ಜಿವಿಪಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಕರ್ತವ್ಯ ನಿರ್ವಹಿಸದೆ ವೇತನ ಪಡೆಯುವುದು ಹೇಗೆ? ಅಗತ್ಯ ದಾಖಲೆಗಳನ್ನು ನೀಡದೆ ವೇತನ ಪಾವತಿಸಲು ಸಾಧ್ಯವೇ? ಎಂದು ಬೆಸ್ಕಾಂ ಎಇಇ ಸುಕುಮಾರ್ ರಾಜು ಪ್ರಶ್ನಿಸಿದರೆ, ಕೆಲಸ ಮಾಡಿದ್ದರೂ ಐದು ತಿಂಗಳಿಂದ ವೇತನ ನೀಡಿಲ್ಲ ಎಂದು ಜಿವಿಪಿಗಳು ಪ್ರತಿಯಾಗಿ ವಾದಿಸಿದರು. ಈ ಘಟನೆ ಇದೀಗ ಬೆಸ್ಕಾಂ ಇಲಾಖೆಯಲ್ಲಿನ ಕೆಲಸದ ಪ್ರಗತಿ ಹಾಗೂ ವೇತನ ಪಾವತಿ ವಿಚಾರವನ್ನು ಮುನ್ನೆಲೆಗೆ ತಂದಿದೆ. ಜಿವಿಪಿಗಳು ಕರ್ತವ್ಯ ನಿರ್ವಹಿಸಿಲ್ಲ ಎಂಬ ಅಧಿಕಾರಿಗಳ ಆರೋಪ ಹಾಗೂ ತಾವು ಕೆಲಸ ಮಾಡಿದ್ದರೂ ವೇತನ ನೀಡಿಲ್ಲ ಎಂಬ ಜಿವಿಪಿಗಳ ಆರೋಪವಾಗಿದೆ.
    1
    ಬಂಗಾರಪೇಟೆ ಗೃಹಜ್ಯೋತಿ ಪರಿಶೀಲನೆಗೆ ನಿರ್ಲಕ್ಷ್ಯ: ಆಸಿಡ್ ಬಾಟಲಿ ಹಿಡಿದು ಹೈಡ್ರಾಮಾ!ಬೆಸ್ಕಾಂ ಕಚೇರಿ ಮುಂದೆ ಮೂವರು ಜಿವಿಪಿಗಳ ಆತ್ಮಹತ್ಯೆ ಬೆದರಿಕೆ; 

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಮನೆ ಪರಿಶೀಲನೆಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಸ್ಕಾಂ ಇಲಾಖೆಯ ಮೂವರು ಜಿವಿಪಿಗಳು ಆಸಿಡ್ ಬಾಟಲಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಹೈಡ್ರಾಮಾ ನಡೆದ ಘಟನೆ ಬೆಸ್ಕಾಂ ಕಚೇರಿ ಮುಂದೆ ನಡೆದಿದೆ.
ಜಿವಿಪಿಗಳಾದ ಅಶ್ವಥ್ ನಾರಾಯಣ, ಮಹೇಶ್ ಕುಮಾರ್ ಹಾಗೂ ನಿರಂಜನ್ ಅವರು ಬೆಳಗ್ಗೆ ಸುಮಾರು 9.30ರ ವೇಳೆಗೆ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಆಸಿಡ್ ಬಾಟಲಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಬೆಸ್ಕಾಂ ಇಲಾಖೆಯ ಸಿಬ್ಬಂದಿ ಮೂವರನ್ನು ಸಮಾಧಾನಪಡಿಸಿ, ಆಸಿಡ್ ಬಾಟಲಿಯನ್ನು ವಶಕ್ಕೆ ಪಡೆದರು.
ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ನೈಜ ಸ್ಥಿತಿಗತಿ ಪರಿಶೀಲಿಸುವಂತೆ ಸರ್ಕಾರ ಬೆಸ್ಕಾಂಗೆ ಸೂಚಿಸಿದೆ. ಫಲಾನುಭವಿಗಳ ಪಟ್ಟಿಯೊಂದಿಗೆ ಮನೆಮನೆಗೆ ತೆರಳಿ ಪರಿಶೀಲನೆ ನಡೆಸಿ, ಅರ್ಹತೆ ಇಲ್ಲದಿರುವ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.
ರಾಜ್ಯ ಸರ್ಕಾರವು ಗೃಹಜ್ಯೋತಿ ಯೋಜನೆಯ ದುರುಪಯೋಗವಾಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಪರಿಶೀಲನೆಗೆ ಒತ್ತು ನೀಡಲಾಗಿದ್ದು, ಆಗಸ್ಟ್ 31ರೊಳಗೆ ಪರಿಶೀಲನೆ ಪೂರ್ಣಗೊಳಿಸುವ ಗುರಿ ನೀಡಲಾಗಿದೆ.
ಘಟನೆ ಕುರಿತು ಬೆಸ್ಕಾಂ ಎಇಇ ಸುಕುಮಾರ್ ರಾಜು ಸ್ಪಷ್ಟನೆ ನೀಡಿ, ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನೆ ಕಾರ್ಯದಲ್ಲಿ ಈ ಮೂವರು ಜಿವಿಪಿಗಳು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂದು ಆರೋಪಿಸಿದರು.
ಅಶ್ವಥ್ ನಾರಾಯಣ, ಮಹೇಶ್ ಕುಮಾರ್ ಹಾಗೂ ನಿರಂಜನ್ ಅವರಿಗೆ ತಲಾ 400ಕ್ಕೂ ಹೆಚ್ಚು ಗೃಹಜ್ಯೋತಿ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸುವ ಜವಾಬ್ದಾರಿ ನೀಡಲಾಗಿತ್ತು. ಆದರೆ, ಈ ಪಟ್ಟಿಯಲ್ಲಿನ ಫಲಾನುಭವಿಗಳ ಪರಿಶೀಲನೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಗಣನೀಯ ಸಂಖ್ಯೆಯ ಫಲಾನುಭವಿಗಳ ಪರಿಶೀಲನೆ ಬಾಕಿ ಉಳಿದಿದೆ ಎಂದು ತಿಳಿಸಿದರು.
ಸರ್ಕಾರ ನಿಗದಿಪಡಿಸಿರುವ ಗಡುವಿನೊಳಗೆ ಪರಿಶೀಲನೆ ಪೂರ್ಣಗೊಳಿಸಬೇಕಿರುವ ಹಿನ್ನೆಲೆಯಲ್ಲಿ ಕಾರ್ಯದ ಪ್ರಗತಿ ಸಾಧಿಸುವಂತೆ ಜಿವಿಪಿಗಳಿಗೆ ಸೂಚಿಸಲಾಗಿತ್ತು. ಕರ್ತವ್ಯ ನಿರ್ವಹಣೆ ಕುರಿತು ಪ್ರಶ್ನಿಸಿದಾಗ ಈ ರೀತಿಯಾಗಿ ಆಸಿಡ್ ಬಾಟಲಿ ಹಿಡಿದು ಆತ್ಮಹತ್ಯೆ ಬೆದರಿಕೆ ಹಾಕಿರುವುದು ಸರಿಯಲ್ಲ ಎಂದು ಎಇಇ ಹೇಳಿದರು.
ಇತ್ತ ಜಿವಿಪಿಗಳಾದ ಅಶ್ವಥ್ ನಾರಾಯಣ, ಮಹೇಶ್ ಕುಮಾರ್ ಹಾಗೂ ನಿರಂಜನ್ ಅವರು ಅಧಿಕಾರಿಗಳ ಆರೋಪವನ್ನು ತಳ್ಳಿಹಾಕಿದ್ದಾರೆ.
ತಮಗೆ ನೀಡಲಾಗಿದ್ದ ಫಲಾನುಭವಿಗಳ ಪಟ್ಟಿಯಲ್ಲಿ ಸುಮಾರು ಶೇ.80ರಷ್ಟು ಮನೆಗಳ ಪರಿಶೀಲನೆ ಪೂರ್ಣಗೊಳಿಸಲಾಗಿದೆ. ಉಳಿದ ಫಲಾನುಭವಿಗಳ ಪೈಕಿ ಹಲವರು ಸ್ಥಳದಲ್ಲಿ ಸಿಗದಿರುವುದು, ಮನೆ ಬದಲಿಸಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಪರಿಶೀಲನೆ ಸಾಧ್ಯವಾಗುತ್ತಿಲ್ಲ. ಈ ಕುರಿತು ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ.
ಐದು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣದ ವೆಚ್ಚ ಭರಿಸಲು ತೊಂದರೆಯಾಗಿದೆ. ಇಲಾಖೆಯಲ್ಲಿನ ಆಂತರಿಕ ಸಮಸ್ಯೆಯಿಂದ ತಮ್ಮ ಮೇಲೆ ಹೆಚ್ಚಿನ ಕೆಲಸದ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಜಿವಿಪಿಗಳು ಆಸಿಡ್ ಬಾಟಲಿ ಹಿಡಿದಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಅಧಿಕಾರಿಗಳು ಅವರನ್ನು ಸಮಾಧಾನಪಡಿಸಿದರು. ಬಳಿಕ ಎಇಇ ಸುಕುಮಾರ್ ರಾಜು ಹಾಗೂ ಮೂವರು ಜಿವಿಪಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಕರ್ತವ್ಯ ನಿರ್ವಹಿಸದೆ ವೇತನ ಪಡೆಯುವುದು ಹೇಗೆ? ಅಗತ್ಯ ದಾಖಲೆಗಳನ್ನು ನೀಡದೆ ವೇತನ ಪಾವತಿಸಲು ಸಾಧ್ಯವೇ? ಎಂದು ಬೆಸ್ಕಾಂ ಎಇಇ ಸುಕುಮಾರ್ ರಾಜು ಪ್ರಶ್ನಿಸಿದರೆ, ಕೆಲಸ ಮಾಡಿದ್ದರೂ ಐದು ತಿಂಗಳಿಂದ ವೇತನ ನೀಡಿಲ್ಲ ಎಂದು ಜಿವಿಪಿಗಳು ಪ್ರತಿಯಾಗಿ ವಾದಿಸಿದರು.
ಈ ಘಟನೆ ಇದೀಗ ಬೆಸ್ಕಾಂ ಇಲಾಖೆಯಲ್ಲಿನ ಕೆಲಸದ ಪ್ರಗತಿ ಹಾಗೂ ವೇತನ ಪಾವತಿ ವಿಚಾರವನ್ನು ಮುನ್ನೆಲೆಗೆ ತಂದಿದೆ. ಜಿವಿಪಿಗಳು ಕರ್ತವ್ಯ ನಿರ್ವಹಿಸಿಲ್ಲ ಎಂಬ ಅಧಿಕಾರಿಗಳ ಆರೋಪ ಹಾಗೂ ತಾವು ಕೆಲಸ ಮಾಡಿದ್ದರೂ ವೇತನ ನೀಡಿಲ್ಲ ಎಂಬ ಜಿವಿಪಿಗಳ ಆರೋಪವಾಗಿದೆ.
    user_Vishnu Press
    Vishnu Press
    Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
    41 min ago
  • ಮುಳಬಾಗಿಲು: ಈದ್ ಮಿಲಾದ್ ಹಬ್ಬದ ಹಿನ್ನೆಲೆ ಎಸ್ಪಿ ಶ್ರೀಮತಿ ಕನ್ನಿಕಾ ಸಿಕ್ರಿವಾಲ್ ಅವರ ನೇತೃತ್ವದಲ್ಲಿ ಪೊಲೀಸರ ಪಥಸಂಚಲನ.!
    2
    ಮುಳಬಾಗಿಲು: ಈದ್ ಮಿಲಾದ್ ಹಬ್ಬದ ಹಿನ್ನೆಲೆ ಎಸ್ಪಿ ಶ್ರೀಮತಿ ಕನ್ನಿಕಾ ಸಿಕ್ರಿವಾಲ್ ಅವರ ನೇತೃತ್ವದಲ್ಲಿ ಪೊಲೀಸರ ಪಥಸಂಚಲನ.!
    user_Janasuddhi
    Janasuddhi
    ಮುಳಬಾಗಿಲು, ಕೋಲಾರ, ಕರ್ನಾಟಕ•
    11 hrs ago
  • ಭರದಿಂದ ಸಾಗಿದ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಹೊಸಕೋಟೆ ಪಟ್ಟಣದ ಮಾರುಕಟ್ಟೆ ಪ್ರದೇಶ ಪ್ರಮುಖ ಬೀದಿಗಳಲ್ಲಿ ತೆರವು ಕಾರ್ಯಾಚರಣೆ ಭರದಿಂದ ಸಾಗಿದ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಹೊಸಕೋಟೆ ಪಟ್ಟಣದ ಮಾರುಕಟ್ಟೆ ಪ್ರದೇಶ ಪ್ರಮುಖ ಬೀದಿಗಳಲ್ಲಿ ತೆರವು ಕಾರ್ಯಾಚರಣೆ ಪುಟ್ ಪಾತ್ ರಸ್ತೆಯನ್ನ ಒತ್ತುವರಿ ಮಾಡಿಕೊಂಡಿದ್ದ ಕೆಲ ಅಂಗಡಿಗಳ ಮಾಲೀಕರು ಸೀಮೆಂಟ್ ಮೂಲಕ ನಿರ್ಮಿಸಿ ಕೊಂಡಿದ್ದ ಮೆಟ್ಟಿಲುಗಳನ್ನು ಜೆಸಿಬಿಯಿಂದ ತೆರವು ಕಳೆದ ನಾಲ್ಕು ದಿನಗಳ ಹಿಂದೆಯೇ ಒತ್ತುವರಿ ತೆರವು ಮಾಡುವುದಾಗಿ ಸೂಚಿಸಿದ್ದ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣ
    2
    ಭರದಿಂದ ಸಾಗಿದ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ
ಹೊಸಕೋಟೆ ಪಟ್ಟಣದ ಮಾರುಕಟ್ಟೆ ಪ್ರದೇಶ ಪ್ರಮುಖ ಬೀದಿಗಳಲ್ಲಿ ತೆರವು ಕಾರ್ಯಾಚರಣೆ
ಭರದಿಂದ ಸಾಗಿದ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ
ಹೊಸಕೋಟೆ ಪಟ್ಟಣದ ಮಾರುಕಟ್ಟೆ ಪ್ರದೇಶ ಪ್ರಮುಖ ಬೀದಿಗಳಲ್ಲಿ ತೆರವು ಕಾರ್ಯಾಚರಣೆ
ಪುಟ್ ಪಾತ್ ರಸ್ತೆಯನ್ನ ಒತ್ತುವರಿ ಮಾಡಿಕೊಂಡಿದ್ದ ಕೆಲ ಅಂಗಡಿಗಳ ಮಾಲೀಕರು
ಸೀಮೆಂಟ್ ಮೂಲಕ ನಿರ್ಮಿಸಿ ಕೊಂಡಿದ್ದ ಮೆಟ್ಟಿಲುಗಳನ್ನು ಜೆಸಿಬಿಯಿಂದ ತೆರವು
ಕಳೆದ ನಾಲ್ಕು ದಿನಗಳ ಹಿಂದೆಯೇ ಒತ್ತುವರಿ ತೆರವು ಮಾಡುವುದಾಗಿ ಸೂಚಿಸಿದ್ದ ಅಧಿಕಾರಿಗಳು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    10 hrs ago
  • **ಶಿಡ್ಲಘಟ್ಟ: ದಿ ಕ್ರೆಸೆಂಟ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ | ಐಜಿಪಿ ಅರುಣ್ ಚಕ್ರವರ್ತಿ ಅವರಿಂದ ಸ್ಪೂರ್ತಿದಾಯಕ ನುಡಿ **ಶಿಡ್ಲಘಟ್ಟ: ದಿ ಕ್ರೆಸೆಂಟ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ | ಐಜಿಪಿ ಅರುಣ್ ಚಕ್ರವರ್ತಿ ಅವರಿಂದ ಸ್ಪೂರ್ತಿದಾಯಕ ನುಡಿ |* "*'ದಿ ಕ್ರೆಸೆಂಟ್ ಶಾಲೆಯ'** ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಈ ಸಮಾರಂಭದಲ್ಲಿ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು, ಪ್ರಗತಿಪರ ಚಿಂತಕರು ಹಾಗೂ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಉದ್ಯಮಿಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಿಕ ಸಂದೇಶ ನೀಡಿದರು.* --- "ಶಿಡ್ಲಘಟ್ಟದ ದಿ ಕ್ರೆಸೆಂಟ್ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ **ಬೆಂಗಳೂರಿನ ಜಯನಗರ ಕಾನೂನು ಮಹಾವಿದ್ಯಾಲಯದ ಪ್ರಗತಿಪರ ಚಿಂತಕರಾದ ರಾಜಣ್ಣ** ಹಾಗೂ ಅವರ ಶಿಷ್ಯರಾದ **ಪೊಲೀಸ್ ಮಹಾ ನಿರ್ದೇಶಕರು (DGP/IGP) ಅರುಣ್ ಚಕ್ರವರ್ತಿ** ಅವರು ಆಗಮಿಸಿ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ಮಹಾ ನಿರ್ದೇಶಕರಾದ ಅರುಣ್ ಚಕ್ರವರ್ತಿ ಅವರು, *'ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ಅವಧಿಯಲ್ಲಿ ಕಠಿಣ ಪರಿಶ್ರಮ ವಹಿಸಿ, ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ತಾವು ಕಲಿತ ಶಾಲೆಗೆ ಹಾಗೂ ಹೆತ್ತ ತಂದೆ-ತಾಯಿಗೆ ಕೀರ್ತಿ ತರಬೇಕು'* ಎಂದು ಸ್ಪೂರ್ತಿದಾಯಕ ಕರೆ ನೀಡಿದರು. ಇದೇ ವೇಳೆ ಮಾತನಾಡಿದ **ದಿ ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಮಹಮ್ಮದ್ ತಮೀಮ್ ಅನ್ಸಾರಿ** ಅವರು, *'ನಮ್ಮ ಶಾಲೆಯ ಉದ್ಘಾಟನೆಗೆ ಆಗಮಿಸಿರುವ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅರುಣ್ ಚಕ್ರವರ್ತಿಯವರಂತೆಯೇ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ಶ್ರೇಷ್ಠ ಹುದ್ದೆಗೇರಬೇಕು'* ಎಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು."* --- "ಈ ಕಾರ್ಯಕ್ರಮದಲ್ಲಿ ತಂತ್ರಜ್ಞಾನ ಹಾಗೂ ಸಾಮಾಜಿಕ ಕ್ಷೇತ್ರದ ಹಲವಾರು ಗಣ್ಯರು ಭಾಗವಹಿಸಿದ್ದರು: ಡಿಸಿ ಆರ್ ಎ ನಲ್ಲಿ ಡಿಸಿಪಿಯಾಗಿ ಕರ್ನಾಟಕ ರಾಜ್ಯದಲ್ಲಿ ದಲಿತರಿಗೆ ಏನು ತೊಂದರೆ ಆಗ್ತಾ ಇದೆ ಅವಳೆ ಎಲ್ಲವನ್ನೂ ಸರಿ ಮಾಡಿ ಉತ್ತಮವಾದ ಸೇವೆಯನ್ನು ಸಲ್ಲಿಸಿದ್ದಾರೆ ನಾಗರಿಕ ಹಕ್ಕು ಜಾರಿ ನಿರ್ದೇಶನಲಯದಲ್ಲಿ ಇದುವರೆಗೂ ಯಾರು ಸಹ ಮಾಡದೇ ಇರತಕ್ಕಂತಹ ಕೆಲಸವನ್ನು ಅರುಣ್ ಚಕ್ರವರ್ತಿ ಅವರು ಮಾಡಿದ್ದಾರೆಂದು ಸುರೇಶ್ ಅವರು ತಿಳಿಸಿದರು ನಂತರ ಅರುಣ್ ಚಕ್ರವರ್ತಿ ಅವರು ಆಶಾಕಿರಣ ಅಂಧ ಮಕ್ಕಳು ಶಾಲೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಕೆ ಕತ್ತರಿಸಿ ಮಕ್ಕಳಿಗೆ ಸಿಹಿ ಹಂಚಿದರು * **ರವಿಶಂಕರ್** - ಸ್ಥಾಪಕ ನಿರ್ದೇಶಕರು, ಆಪ್ಟಿ ಸಾಫ್ಟ್‌ವೇರ್ * **ಅಭಿರಾಮ್ ಸುರೇಶ್** - ಸಿಇಒ, ಎಗ್ನೋಮಿಷಿಯನ್ ರೋಬೋಟಿಕ್ಸ್ ಕಂಪನಿ ಲಿಯೋ ಕ್ಲಬ್ ನ ಅದ್ಯಕ್ಷರಾದ * **ಶ್ರೀಕಾಂತ್ ಲಿಯೋ ಲೋಕೇಶ್** - ಸೇರಿದಂತೆ ಹಲವು ಗಣ್ಯರು, ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು." --- "ಶಿಕ್ಷಣದ ಜೊತೆಗೆ ಉನ್ನತ ಗುರಿ ಮತ್ತು ಸಾಧನೆಯ ಹಾದಿ ತೋರಿಸಿದ ಈ ಉದ್ಘಾಟನಾ ಸಮಾರಂಭವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬಿದೆ. ವರದಿ:- ಅರಿಕೆರೆ ಮುನಿರಾಜು, ಪ್ರಧಾನ ವರದಿಗಾರರು, ಸಮತಾ ನ್ಯೂಸ್, ಶಿಡ್ಲಘಟ್ಟ.** *(ನಿರೂಪಕಿ)* ಇನ್ನಷ್ಟು ತಾಜಾ ಹಾಗೂ ವರದಿಗಳಿಗಾಗಿ 'ಸಮತಾ ನ್ಯೂಸ್' ಯೂಟ್ಯೂಬ್ ಚಾನೆಲ್ ಅನ್ನು ಲೈಕ್ ಮಾಡಿ, ಶೇರ್ ಮಾಡಿ ಮತ್ತು ಸಬ್‌ಸ್ಕ್ರೈಬ್ ಮಾಡಿ. ಧನ್ಯವಾದಗಳು!" --- *(Video Description / Description Box ಗಾಗಿ):** > #Sidlaghatta #ShidlaghattaNews #ArunChakravarthy #CrescentSchool #SantanaNews #KarnatakaNews #SidlaghattaEducation
    1
    **ಶಿಡ್ಲಘಟ್ಟ: ದಿ ಕ್ರೆಸೆಂಟ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ | ಐಜಿಪಿ ಅರುಣ್ ಚಕ್ರವರ್ತಿ ಅವರಿಂದ ಸ್ಪೂರ್ತಿದಾಯಕ ನುಡಿ 
**ಶಿಡ್ಲಘಟ್ಟ: ದಿ ಕ್ರೆಸೆಂಟ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ | ಐಜಿಪಿ ಅರುಣ್ ಚಕ್ರವರ್ತಿ ಅವರಿಂದ ಸ್ಪೂರ್ತಿದಾಯಕ ನುಡಿ |*
"*'ದಿ ಕ್ರೆಸೆಂಟ್ ಶಾಲೆಯ'** ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಈ ಸಮಾರಂಭದಲ್ಲಿ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು, ಪ್ರಗತಿಪರ ಚಿಂತಕರು ಹಾಗೂ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಉದ್ಯಮಿಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಿಕ ಸಂದೇಶ ನೀಡಿದರು.*
---
"ಶಿಡ್ಲಘಟ್ಟದ ದಿ ಕ್ರೆಸೆಂಟ್ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ **ಬೆಂಗಳೂರಿನ ಜಯನಗರ ಕಾನೂನು ಮಹಾವಿದ್ಯಾಲಯದ ಪ್ರಗತಿಪರ ಚಿಂತಕರಾದ ರಾಜಣ್ಣ** ಹಾಗೂ ಅವರ ಶಿಷ್ಯರಾದ **ಪೊಲೀಸ್ ಮಹಾ ನಿರ್ದೇಶಕರು (DGP/IGP) ಅರುಣ್ ಚಕ್ರವರ್ತಿ** ಅವರು ಆಗಮಿಸಿ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ಮಹಾ ನಿರ್ದೇಶಕರಾದ ಅರುಣ್ ಚಕ್ರವರ್ತಿ ಅವರು, *'ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ಅವಧಿಯಲ್ಲಿ ಕಠಿಣ ಪರಿಶ್ರಮ ವಹಿಸಿ, ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ತಾವು ಕಲಿತ ಶಾಲೆಗೆ ಹಾಗೂ ಹೆತ್ತ ತಂದೆ-ತಾಯಿಗೆ ಕೀರ್ತಿ ತರಬೇಕು'* ಎಂದು ಸ್ಪೂರ್ತಿದಾಯಕ ಕರೆ ನೀಡಿದರು.
ಇದೇ ವೇಳೆ ಮಾತನಾಡಿದ **ದಿ ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಮಹಮ್ಮದ್ ತಮೀಮ್ ಅನ್ಸಾರಿ** ಅವರು, *'ನಮ್ಮ ಶಾಲೆಯ ಉದ್ಘಾಟನೆಗೆ ಆಗಮಿಸಿರುವ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅರುಣ್ ಚಕ್ರವರ್ತಿಯವರಂತೆಯೇ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ಶ್ರೇಷ್ಠ ಹುದ್ದೆಗೇರಬೇಕು'* ಎಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು."*
---
"ಈ ಕಾರ್ಯಕ್ರಮದಲ್ಲಿ ತಂತ್ರಜ್ಞಾನ ಹಾಗೂ ಸಾಮಾಜಿಕ ಕ್ಷೇತ್ರದ ಹಲವಾರು ಗಣ್ಯರು ಭಾಗವಹಿಸಿದ್ದರು:
ಡಿಸಿ ಆರ್ ಎ ನಲ್ಲಿ ಡಿಸಿಪಿಯಾಗಿ ಕರ್ನಾಟಕ ರಾಜ್ಯದಲ್ಲಿ ದಲಿತರಿಗೆ ಏನು ತೊಂದರೆ ಆಗ್ತಾ ಇದೆ ಅವಳೆ ಎಲ್ಲವನ್ನೂ ಸರಿ ಮಾಡಿ ಉತ್ತಮವಾದ ಸೇವೆಯನ್ನು ಸಲ್ಲಿಸಿದ್ದಾರೆ ನಾಗರಿಕ ಹಕ್ಕು ಜಾರಿ ನಿರ್ದೇಶನಲಯದಲ್ಲಿ ಇದುವರೆಗೂ ಯಾರು ಸಹ ಮಾಡದೇ ಇರತಕ್ಕಂತಹ ಕೆಲಸವನ್ನು ಅರುಣ್ ಚಕ್ರವರ್ತಿ ಅವರು ಮಾಡಿದ್ದಾರೆಂದು ಸುರೇಶ್ ಅವರು ತಿಳಿಸಿದರು
ನಂತರ ಅರುಣ್ ಚಕ್ರವರ್ತಿ ಅವರು ಆಶಾಕಿರಣ ಅಂಧ ಮಕ್ಕಳು ಶಾಲೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಕೆ ಕತ್ತರಿಸಿ ಮಕ್ಕಳಿಗೆ ಸಿಹಿ ಹಂಚಿದರು
* **ರವಿಶಂಕರ್** - ಸ್ಥಾಪಕ ನಿರ್ದೇಶಕರು, ಆಪ್ಟಿ ಸಾಫ್ಟ್‌ವೇರ್ 
* **ಅಭಿರಾಮ್ ಸುರೇಶ್** - ಸಿಇಒ, ಎಗ್ನೋಮಿಷಿಯನ್ ರೋಬೋಟಿಕ್ಸ್ ಕಂಪನಿ ಲಿಯೋ ಕ್ಲಬ್ ನ ಅದ್ಯಕ್ಷರಾದ 
* **ಶ್ರೀಕಾಂತ್ ಲಿಯೋ ಲೋಕೇಶ್** -
ಸೇರಿದಂತೆ ಹಲವು ಗಣ್ಯರು, ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು."
---
"ಶಿಕ್ಷಣದ ಜೊತೆಗೆ ಉನ್ನತ ಗುರಿ ಮತ್ತು ಸಾಧನೆಯ ಹಾದಿ ತೋರಿಸಿದ ಈ ಉದ್ಘಾಟನಾ ಸಮಾರಂಭವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬಿದೆ.
ವರದಿ:- ಅರಿಕೆರೆ ಮುನಿರಾಜು, ಪ್ರಧಾನ ವರದಿಗಾರರು, ಸಮತಾ ನ್ಯೂಸ್, ಶಿಡ್ಲಘಟ್ಟ.**
*(ನಿರೂಪಕಿ)* ಇನ್ನಷ್ಟು ತಾಜಾ  ಹಾಗೂ ವರದಿಗಳಿಗಾಗಿ 'ಸಮತಾ ನ್ಯೂಸ್' ಯೂಟ್ಯೂಬ್ ಚಾನೆಲ್ ಅನ್ನು ಲೈಕ್ ಮಾಡಿ, ಶೇರ್ ಮಾಡಿ ಮತ್ತು ಸಬ್‌ಸ್ಕ್ರೈಬ್ ಮಾಡಿ. ಧನ್ಯವಾದಗಳು!"
---
*(Video Description / Description Box ಗಾಗಿ):**
> #Sidlaghatta #ShidlaghattaNews #ArunChakravarthy #CrescentSchool #SantanaNews #KarnatakaNews #SidlaghattaEducation
    user_ಅರಿಕೆರೆ ಮುನಿರಾಜು ಡಿ
    ಅರಿಕೆರೆ ಮುನಿರಾಜು ಡಿ
    ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    10 hrs ago
  • ಲೊಕೇಶನ್ ಒಂದು ಹತ್ತಿರ ಹಾಕಿ ಇನ್ನೊಂದು ಹತ್ತಿರ ಬಾ ಅಂತಾರೆ ಇದನ್ನ ಯಾರು ಕೇಳ್ತಾರೆ? ಲೊಕೇಶನ್ ಒಂದು ಹತ್ತಿರ ಹಾಕಿ ಇನ್ನೊಂದು ಹತ್ತಿರ ಬಾ ಅಂತಾರೆ ಇದನ್ನ ಯಾರು ಕೇಳ್ತಾರೆ?
    1
    ಲೊಕೇಶನ್ ಒಂದು ಹತ್ತಿರ ಹಾಕಿ ಇನ್ನೊಂದು 
ಹತ್ತಿರ ಬಾ ಅಂತಾರೆ ಇದನ್ನ ಯಾರು ಕೇಳ್ತಾರೆ?
ಲೊಕೇಶನ್ ಒಂದು ಹತ್ತಿರ ಹಾಕಿ ಇನ್ನೊಂದು 
ಹತ್ತಿರ ಬಾ ಅಂತಾರೆ ಇದನ್ನ ಯಾರು ಕೇಳ್ತಾರೆ?
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    9 hrs ago
  • ಬಂಗಾರಪೇಟೆ ಎಸ್ ಐ ಆರ್ ಅಂತಿಮ ಪಟ್ಟಿ 31,811 ಮತದಾರರು ಪಟ್ಟಿಯಿಂದ ಹೊರಕ್ಕೆ : ಮಲ್ಲಿಕಾರ್ಜುನ್ ಪ್ರಜಾಪ್ರಭುತ್ವ ವ್ಯವಸ್ಥೆಯ ಘನತೆ ಗೌರವವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಮತದಾರರ ಪಟ್ಟಿಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸುವ ಹಾಗೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಮಗ್ರ ಪರಿಷ್ಕರಣೆ ನಡೆಸಲಾಗಿದ್ದು ಇಂದು ಪೂರ್ಣಗೊಂಡಿದೆ ಹಾಗೂ ಅಂತಿಮ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಎಸ್ ಐ ಆರ್ ನೋಂದಣಾಧಿಕಾರಿ ಎಂ ಮಲ್ಲಿಕಾರ್ಜುನ್ ತಿಳಿಸಿದರು. ನಗರದ ತಾಲೂಕು ಹಿಂದುಳಿದ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಯಶಸ್ವಿಯಾಗಿ ಪೂರ್ಣಗೊಂಡಿದ್ದು,ಈ ಹಿಂದೆ ಕ್ಷೇತ್ರದಲ್ಲಿ 2,12,696 ಮತದಾರರಿದ್ದರು ಆದರೆ, ಮತದಾರರ ಪಟ್ಟಿಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸುವ ಹಾಗೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಮಗ್ರ ಪರಿಷ್ಕರಣೆ ನಡೆಸಲಾಗಿತ್ತು. ಪರಿಷ್ಕರಣೆಯ ನಂತರ ಪ್ರಸ್ತುತ ನಮ್ಮ ಕ್ಷೇತ್ರದಲ್ಲಿ 1,80,885 ಮತದಾರರನ್ನು ಉಳಿದುಕೊಂಡಿದ್ದಾರೆ, ಹಾಗೂ 31,811,ಮತದಾರರನ್ನು ಕೈಬಿಡಲಾಗಿದೆ ಎಂದರು. ಮತದಾರರಿಗೆ ನೋಟಿಸ್ , ಬದಲಾವಣೆಗೆ ಪೂರಕ ದಾಖಲೆ ಅಗತ್ಯ: ಮತದಾರರ ಹೆಸರುಗಳಲ್ಲಿ ಸಣ್ಣಪುಟ್ಟ ದೋಷಗಳನ್ನು ಹೊಂದಿರುವ ಒಟ್ಟು 33,192 ಮತದಾರರಿಗೆ ನೋಟಿಸ್ ನೀಡಲಾಗಿದೆ ಯಾವುದೇ ಬದಲಾವಣೆ ಇದ್ದಲ್ಲಿ ಪೂರಕ ದಾಖಲೆಗಳನ್ನು ಒದಗಿಸಿ ಅಕ್ಟೋಬರ್ 22ರ ಒಳಗೆ ಬದಲಾವಣೆಗೆ ಅವಕಾಶವನ್ನು ನೀಡಲಾಗಿದೆ ಈ ಪ್ರಕ್ರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಹೆಚ್ಚುವರಿಯಾಗಿ 20 ಎ,ಆರ್,ಓ, ಗಳನ್ನು ನೇಮಕ ಮಾಡಲಾಗಿದೆ ಎಂದರು. 5 ಹೊಸ ಪಿ,ಎಸ್ ,ಸ್ಥಾಪನೆ : ಕ್ಷೇತ್ರದಲ್ಲಿ ಈ ಹಿಂದೆ ಒಟ್ಟು 250 ಮತಗಟ್ಟೆಗಳಿದ್ದವು ಪ್ರಸ್ತುತ ಮತದಾರರ ಸಂಖ್ಯೆಗೆ ಅನುಗುಣವಾಗಿ ಬಂಗಾರಪೇಟೆ ನಗರ, ಕಾರಹಳ್ಳಿ, ಡಿ,ಕೆ,ಹಳ್ಳಿ ಪ್ಲಾಂಟೇಷನ್, ಮರಗಲ್, ಸಿಲಂಗೀರಿ, ಹಾಗೂ ವಿವೇಕಾನಂದನರದಲ್ಲಿ ಹೆಚ್ಚುವರಿಯಾಗಿ 6 ನೂತನ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು. ಮತದಾರ ಪಟ್ಟಿಯಲ್ಲಿ ಸೇರ್ಪಡೆಗೆ ಅವಕಾಶ: ಮತದಾರ ಪಟ್ಟಿಯಲ್ಲಿ ಕೈಬಿಟ್ಟಿರುವ 18 ವರ್ಷದ ಮೇಲ್ಪಟ್ಟ ವ್ಯಕ್ತಿಗಳು ಹಾಗೂ ನಾನಾ ಕಾರಣಗಳಿಂದ ಮತದಾರ ಪಟ್ಟಿಯಲ್ಲಿಂದ ಹೊರಗುಳಿದವರು ಫಾರಂ ನಂಬರ್ 6 ರ ಅನುಗುಣವಾಗಿ ದಾಖಲೆಗಳನ್ನು ಒದಗಿಸಿ ಮತದಾರ ಪಟ್ಟಿಯಲ್ಲಿ ಸೇರ್ಪಡೆಯಾಗಬಹುದು ಎಂದರು. ಅಂತಿಮ ಪಟ್ಟಿ ವಿವರ: ಒಟ್ಟು ಗಣತಿ ನಮೂನೆಗಳ ಡಿಜಿಟೈಸೇಷನ್ ಸಂಖ್ಯೆ: 1,80,885- 85.04% ಒಟ್ಟು ಆನ್‌ಲೈನ್ ಮೂಲಕ ಸಲ್ಲಿಕೆಯಾದ ಗಣತಿ ನಮೂನೆಗಳ ಸಂಖ್ಯೆ: 1298 ಒಟ್ಟು ಎಎಸ್‌ಡಿಡಿ ಎಂದು ಗುರುತಾದ ಮತದಾರರು: 31811 ಒಟ್ಟು ಗೈರು ಮತದಾರರು: 3593 ಒಟ್ಟು ಶಾಶ್ವತವಾಗಿ ವರ್ಗವಣೆಗೊಂಡ ಮತದಾರರು: 17934 ಒಟ್ಟು ಮರಣ ಹೊಂದಿರುವ ಮತದಾರರು : 5768 ಒಟ್ಟು ದ್ವಿಮುದ್ರಣಗೊಂಡ ಮತದಾರರು: 4368 ಇತರೆ148 ಕೋಟ್ 2 ( ಬಾಕ್ಸ್ ಸುದ್ದಿ) ರಾಜಕೀಯದಲ್ಲಿ ಪಕ್ಷಗಳು ಗೈರು: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷದ ಮುಖಂಡರಿಗೆ ಸಭೆಗೆ ಆಹ್ವಾನ ನೀಡಲಾಗಿತ್ತು ಹಾಗೂ ಪ್ರತ್ಯೇಕವಾಗಿ ದೂರವಾಣಿ ಕರೆಯನ್ನು ಸಹ ಮಾಡಲಾಗಿತ್ತು, ವಿಪರ್ಯಾಸ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಹೊರತುಪಡಿಸಿ ಇನ್ನಾ ಯಾವುದೇ ಪಕ್ಷದ ಮುಖಂಡರು ಸಭೆಗೆ ಆಗಮಿಸದೆ ಗೈರು ಹಾಜರಾಗಿದ್ದರು. ಈ ಸಂದರ್ಭದಲ್ಲಿ ತಹಸಿಲ್ದಾರ್ ಸುಜಾತ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯುವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ,ವಿ,ನಾಗರಾಜ್, ಇತರರು ಉಪಸ್ಥಿತರಿದ್ದರು .
    1
    ಬಂಗಾರಪೇಟೆ ಎಸ್ ಐ ಆರ್ ಅಂತಿಮ ಪಟ್ಟಿ 31,811 ಮತದಾರರು ಪಟ್ಟಿಯಿಂದ ಹೊರಕ್ಕೆ : ಮಲ್ಲಿಕಾರ್ಜುನ್ 

ಪ್ರಜಾಪ್ರಭುತ್ವ ವ್ಯವಸ್ಥೆಯ ಘನತೆ ಗೌರವವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಮತದಾರರ ಪಟ್ಟಿಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸುವ ಹಾಗೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಮಗ್ರ ಪರಿಷ್ಕರಣೆ ನಡೆಸಲಾಗಿದ್ದು ಇಂದು ಪೂರ್ಣಗೊಂಡಿದೆ ಹಾಗೂ ಅಂತಿಮ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಎಸ್ ಐ ಆರ್ ನೋಂದಣಾಧಿಕಾರಿ ಎಂ ಮಲ್ಲಿಕಾರ್ಜುನ್ ತಿಳಿಸಿದರು. 
ನಗರದ ತಾಲೂಕು ಹಿಂದುಳಿದ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಯಶಸ್ವಿಯಾಗಿ ಪೂರ್ಣಗೊಂಡಿದ್ದು,ಈ ಹಿಂದೆ ಕ್ಷೇತ್ರದಲ್ಲಿ 2,12,696 ಮತದಾರರಿದ್ದರು ಆದರೆ, ಮತದಾರರ ಪಟ್ಟಿಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸುವ ಹಾಗೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಮಗ್ರ ಪರಿಷ್ಕರಣೆ ನಡೆಸಲಾಗಿತ್ತು. ಪರಿಷ್ಕರಣೆಯ ನಂತರ ಪ್ರಸ್ತುತ ನಮ್ಮ ಕ್ಷೇತ್ರದಲ್ಲಿ 1,80,885 ಮತದಾರರನ್ನು ಉಳಿದುಕೊಂಡಿದ್ದಾರೆ, ಹಾಗೂ 31,811,ಮತದಾರರನ್ನು ಕೈಬಿಡಲಾಗಿದೆ ಎಂದರು.
ಮತದಾರರಿಗೆ ನೋಟಿಸ್ , ಬದಲಾವಣೆಗೆ ಪೂರಕ ದಾಖಲೆ ಅಗತ್ಯ:
ಮತದಾರರ ಹೆಸರುಗಳಲ್ಲಿ  ಸಣ್ಣಪುಟ್ಟ ದೋಷಗಳನ್ನು ಹೊಂದಿರುವ ಒಟ್ಟು 33,192 ಮತದಾರರಿಗೆ ನೋಟಿಸ್ ನೀಡಲಾಗಿದೆ ಯಾವುದೇ ಬದಲಾವಣೆ ಇದ್ದಲ್ಲಿ ಪೂರಕ ದಾಖಲೆಗಳನ್ನು ಒದಗಿಸಿ ಅಕ್ಟೋಬರ್ 22ರ ಒಳಗೆ ಬದಲಾವಣೆಗೆ ಅವಕಾಶವನ್ನು ನೀಡಲಾಗಿದೆ ಈ ಪ್ರಕ್ರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಹೆಚ್ಚುವರಿಯಾಗಿ 20 ಎ,ಆರ್,ಓ, ಗಳನ್ನು ನೇಮಕ ಮಾಡಲಾಗಿದೆ  ಎಂದರು.
5 ಹೊಸ ಪಿ,ಎಸ್ ,ಸ್ಥಾಪನೆ :
ಕ್ಷೇತ್ರದಲ್ಲಿ ಈ ಹಿಂದೆ ಒಟ್ಟು 250 ಮತಗಟ್ಟೆಗಳಿದ್ದವು ಪ್ರಸ್ತುತ ಮತದಾರರ ಸಂಖ್ಯೆಗೆ ಅನುಗುಣವಾಗಿ ಬಂಗಾರಪೇಟೆ ನಗರ, ಕಾರಹಳ್ಳಿ, ಡಿ,ಕೆ,ಹಳ್ಳಿ ಪ್ಲಾಂಟೇಷನ್, ಮರಗಲ್, ಸಿಲಂಗೀರಿ, ಹಾಗೂ ವಿವೇಕಾನಂದನರದಲ್ಲಿ ಹೆಚ್ಚುವರಿಯಾಗಿ 6 ನೂತನ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಮತದಾರ ಪಟ್ಟಿಯಲ್ಲಿ ಸೇರ್ಪಡೆಗೆ ಅವಕಾಶ:
ಮತದಾರ ಪಟ್ಟಿಯಲ್ಲಿ ಕೈಬಿಟ್ಟಿರುವ 18 ವರ್ಷದ ಮೇಲ್ಪಟ್ಟ ವ್ಯಕ್ತಿಗಳು ಹಾಗೂ ನಾನಾ ಕಾರಣಗಳಿಂದ ಮತದಾರ ಪಟ್ಟಿಯಲ್ಲಿಂದ ಹೊರಗುಳಿದವರು ಫಾರಂ ನಂಬರ್ 6 ರ ಅನುಗುಣವಾಗಿ ದಾಖಲೆಗಳನ್ನು ಒದಗಿಸಿ ಮತದಾರ ಪಟ್ಟಿಯಲ್ಲಿ ಸೇರ್ಪಡೆಯಾಗಬಹುದು ಎಂದರು.
ಅಂತಿಮ ಪಟ್ಟಿ ವಿವರ:
ಒಟ್ಟು ಗಣತಿ ನಮೂನೆಗಳ ಡಿಜಿಟೈಸೇಷನ್ ಸಂಖ್ಯೆ: 1,80,885- 85.04%
ಒಟ್ಟು ಆನ್‌ಲೈನ್ ಮೂಲಕ ಸಲ್ಲಿಕೆಯಾದ ಗಣತಿ ನಮೂನೆಗಳ ಸಂಖ್ಯೆ: 1298
ಒಟ್ಟು ಎಎಸ್‌ಡಿಡಿ ಎಂದು ಗುರುತಾದ ಮತದಾರರು: 31811
ಒಟ್ಟು ಗೈರು ಮತದಾರರು: 3593
ಒಟ್ಟು ಶಾಶ್ವತವಾಗಿ ವರ್ಗವಣೆಗೊಂಡ ಮತದಾರರು: 17934
ಒಟ್ಟು ಮರಣ ಹೊಂದಿರುವ ಮತದಾರರು : 5768
ಒಟ್ಟು ದ್ವಿಮುದ್ರಣಗೊಂಡ ಮತದಾರರು: 4368
ಇತರೆ148
ಕೋಟ್ 2 ( ಬಾಕ್ಸ್ ಸುದ್ದಿ)
ರಾಜಕೀಯದಲ್ಲಿ ಪಕ್ಷಗಳು ಗೈರು:
ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷದ ಮುಖಂಡರಿಗೆ ಸಭೆಗೆ ಆಹ್ವಾನ ನೀಡಲಾಗಿತ್ತು ಹಾಗೂ ಪ್ರತ್ಯೇಕವಾಗಿ ದೂರವಾಣಿ ಕರೆಯನ್ನು ಸಹ ಮಾಡಲಾಗಿತ್ತು, ವಿಪರ್ಯಾಸ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಹೊರತುಪಡಿಸಿ ಇನ್ನಾ ಯಾವುದೇ ಪಕ್ಷದ ಮುಖಂಡರು ಸಭೆಗೆ ಆಗಮಿಸದೆ ಗೈರು ಹಾಜರಾಗಿದ್ದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಸುಜಾತ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್  ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯುವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ,ವಿ,ನಾಗರಾಜ್, ಇತರರು ಉಪಸ್ಥಿತರಿದ್ದರು .
    user_Vishnu Press
    Vishnu Press
    Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.