ಕೋಲಾರ ಜಿಲ್ಲೆಯಲ್ಲಿ ತರಕಾರಿ ಬೆಳೆಗಳಿಂದ ಸಾಲದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ಹಾಲು ಉತ್ಪಾದನೆಯು ಕೇವಲ ಉಪಕಸುಬಾಗಿರದೆ, ಪ್ರತ್ಯೇಕವಾದ ಲಾಭದಾಯಕ ಉದ್ಯಮವಾಗಬೇಕಾಗಿದೆ ಎಂದು ಕೋಮುಲ್ ನಿರ್ದೇಶಕ ಚಂಜಿಮಲೆ ಬಿ. ರಮೇಶ್ ತಿಳಿಸಿದ್ದಾರೆ. ತಾಲೂಕಿನ ವೇಮಗಲ್ ಹೋಬಳಿಯ ಚನ್ನಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ 2022-26ನೇ ಸಾಲಿನ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ರೈತರು ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ಉತ್ತಮ ಆದಾಯ ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕೃಷಿ ಉತ್ಪನ್ನಗಳ ಬೆಲೆ ಏರಿಳಿತವಾಗುವ ಸಂದರ್ಭದಲ್ಲಿ ಹಾಲಿಗೆ ಮಾತ್ರ ನಿಗದಿತ ಬೆಲೆ ದೊರೆಯುವುದರಿಂದ ಹೈನುಗಾರಿಕೆಯು ರೈತರಿಗೆ ಸ್ಥಿರ ಆದಾಯದ ಮೂಲವಾಗಿದೆ ಎಂದು ಅವರು ವಿವರಿಸಿದರು. ಹಳ್ಳಿಗಳಲ್ಲಿ ಪ್ರತಿಯೊಬ್ಬ ರೈತರು ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳುವ ಜೊತೆಗೆ ತಮ್ಮ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು ಎಂದು ಅವರು ಸಲಹೆ ನೀಡಿದರು. ಕೋಮುಲ್ ಒಕ್ಕೂಟದಿಂದ ದೊರೆಯುವ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ರೈತರು ಆರ್ಥಿಕವಾಗಿ ಮತ್ತಷ್ಟು ಅಭಿವೃದ್ಧಿ ಹೊಂದಬೇಕು ಎಂದು ಅವರು ಕರೆ ನೀಡಿದರು. ಇದೇ ಸಭೆಯಲ್ಲಿ ಸಂಘದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ಸಂಘವು ₹20 ಲಕ್ಷ ಆದಾಯ ಗಳಿಸಿದ್ದು, ₹11 ಲಕ್ಷ ವೆಚ್ಚವನ್ನು ಕಳೆದು ₹9 ಲಕ್ಷ ನಿವ್ವಳ ಲಾಭ ದಾಖಲಿಸಿದೆ ಎಂದು ತಿಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೋಮುಲ್ ಉಪ ವ್ಯವಸ್ಥಾಪಕ ಡಾ. ಮಹೇಶ್, ವಿಸ್ತಾರಣಾಧಿಕಾರಿ ಡಾ. ಅಶ್ವಕ್ ಅಹಮದ್, ಗ್ರಾಮದ ಹಿರಿಯರಾದ ಸಿ.ಡಿ ರಾಮಚಂದ್ರೇಗೌಡ, ರಮೇಶ್, ಚನ್ನಸಂದ್ರ ಡೇರಿ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಲಕ್ಷ್ಮೀ, ಕಾರ್ಯದರ್ಶಿ ಶಿವಾನಂದ್ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಹಾಲು ಉತ್ಪಾದಕ ರೈತರು ಉಪಸ್ಥಿತರಿದ್ದರು.
ಕೋಲಾರ ಜಿಲ್ಲೆಯಲ್ಲಿ ತರಕಾರಿ ಬೆಳೆಗಳಿಂದ ಸಾಲದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ಹಾಲು ಉತ್ಪಾದನೆಯು ಕೇವಲ ಉಪಕಸುಬಾಗಿರದೆ, ಪ್ರತ್ಯೇಕವಾದ ಲಾಭದಾಯಕ ಉದ್ಯಮವಾಗಬೇಕಾಗಿದೆ ಎಂದು ಕೋಮುಲ್ ನಿರ್ದೇಶಕ ಚಂಜಿಮಲೆ ಬಿ. ರಮೇಶ್ ತಿಳಿಸಿದ್ದಾರೆ. ತಾಲೂಕಿನ ವೇಮಗಲ್ ಹೋಬಳಿಯ ಚನ್ನಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ 2022-26ನೇ ಸಾಲಿನ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ರೈತರು ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ಉತ್ತಮ ಆದಾಯ ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕೃಷಿ ಉತ್ಪನ್ನಗಳ ಬೆಲೆ ಏರಿಳಿತವಾಗುವ ಸಂದರ್ಭದಲ್ಲಿ ಹಾಲಿಗೆ ಮಾತ್ರ ನಿಗದಿತ ಬೆಲೆ ದೊರೆಯುವುದರಿಂದ ಹೈನುಗಾರಿಕೆಯು ರೈತರಿಗೆ ಸ್ಥಿರ ಆದಾಯದ ಮೂಲವಾಗಿದೆ ಎಂದು ಅವರು ವಿವರಿಸಿದರು. ಹಳ್ಳಿಗಳಲ್ಲಿ ಪ್ರತಿಯೊಬ್ಬ ರೈತರು ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳುವ ಜೊತೆಗೆ ತಮ್ಮ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು ಎಂದು ಅವರು ಸಲಹೆ ನೀಡಿದರು. ಕೋಮುಲ್ ಒಕ್ಕೂಟದಿಂದ ದೊರೆಯುವ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ರೈತರು ಆರ್ಥಿಕವಾಗಿ ಮತ್ತಷ್ಟು ಅಭಿವೃದ್ಧಿ ಹೊಂದಬೇಕು ಎಂದು ಅವರು ಕರೆ ನೀಡಿದರು. ಇದೇ ಸಭೆಯಲ್ಲಿ ಸಂಘದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ಸಂಘವು ₹20 ಲಕ್ಷ ಆದಾಯ ಗಳಿಸಿದ್ದು, ₹11 ಲಕ್ಷ ವೆಚ್ಚವನ್ನು ಕಳೆದು ₹9 ಲಕ್ಷ ನಿವ್ವಳ ಲಾಭ ದಾಖಲಿಸಿದೆ ಎಂದು ತಿಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೋಮುಲ್ ಉಪ ವ್ಯವಸ್ಥಾಪಕ ಡಾ. ಮಹೇಶ್, ವಿಸ್ತಾರಣಾಧಿಕಾರಿ ಡಾ. ಅಶ್ವಕ್ ಅಹಮದ್, ಗ್ರಾಮದ ಹಿರಿಯರಾದ ಸಿ.ಡಿ ರಾಮಚಂದ್ರೇಗೌಡ, ರಮೇಶ್, ಚನ್ನಸಂದ್ರ ಡೇರಿ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಲಕ್ಷ್ಮೀ, ಕಾರ್ಯದರ್ಶಿ ಶಿವಾನಂದ್ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಹಾಲು ಉತ್ಪಾದಕ ರೈತರು ಉಪಸ್ಥಿತರಿದ್ದರು.
- ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿಯ ಚಿನ್ನಾಪುರ ಗ್ರಾಮದಲ್ಲಿ ಶ್ರೀ ಶನೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ ಮತ್ತು 'ರಾಜಾ ಸತ್ಯವ್ರತ' ಅಥವಾ 'ಶನಿಪ್ರಭಾವ' ನಾಟಕ ಪ್ರದರ್ಶನವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಮುಖ್ಯ ರಸ್ತೆಯ ಮಾಗುಂದಿ ಕ್ರಾಸ್‌ನ ಗಾಟಗ ಗ್ರಾಮದ ಶ್ರೀ ಶ್ರೀ ಶಿವ ಶನೇಶ್ವರ ಸ್ವಾಮಿ ದೇವಾಲಯದ ಧರ್ಮಾಧಿಕಾರಿಗಳು ಹಾಗೂ ಪೀಠಾಧಿಪತಿಗಳಾದ ಶ್ರೀ ಮುನೇಶ್ವರ ಸ್ವಾಮಿಗಳಿಗೆ ಅದ್ದೂರಿ ಸ್ವಾಗತ ಕೋರಿ, ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಮುನೇಶ್ವರ ಸ್ವಾಮಿಗಳು, ಸರ್ವ ಜನರಿಗೂ ಶನೇಶ್ವರ ಸ್ವಾಮಿಯ ಆಶೀರ್ವಾದ ಹಾಗೂ ಸುಖ ಸಂತೋಷ ಸಿಗಲಿ ಮತ್ತು ನಾಟಕವು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ನಾಟಕ ನಿರ್ದೇಶಕ ಪಿಳ್ಳಪ್ಪನವರ ನೇತೃತ್ವದಲ್ಲಿ ಇದುವರೆಗೆ 18 ಶನೇಶ್ವರ ನಾಟಕಗಳನ್ನು ಯಶಸ್ವಿಯಾಗಿ ಆಡಿಸಿರುವುದು ಹೆಮ್ಮೆಯ ವಿಷಯ ಎಂದ ಅವರು, ತಾವೂ ಸಹ ಶ್ರಾವಣ ಮಾಸದಲ್ಲಿ ಶನಿಪ್ರಭಾವ ನಾಟಕ ಪ್ರದರ್ಶನ ಏರ್ಪಡಿಸುತ್ತಿದ್ದು, ಅದನ್ನೂ ಮೀರಿಸಿ ಚಿನ್ನಾಪುರ ಗ್ರಾಮದಲ್ಲಿ ಅತ್ಯಂತ ಅದ್ಭುತವಾಗಿ ಈ ಮಹಾತ್ಮನ ನಾಟಕ ನಡೆಯುತ್ತಿರುವುದು ಸಂತೋಷ ತಂದಿದೆ ಎಂದು ಶ್ಲಾಘಿಸಿದರು. ಇದೇ ವೇಳೆ, ತಾವು ಮಾಡುವ ದಾನ ಧರ್ಮಗಳು ಇನ್ನೊಂದು ಕೈಗೆ ತಿಳಿಯಬಾರದು ಎಂಬುದು ತಮ್ಮ ಭಾವನೆಯಾಗಿದ್ದು, ತಮಗೆ ಯಾವುದೇ ಹೊಗಳಿಕೆ ಸಲ್ಲದು ಹಾಗೂ ತಾವು ಏನೇ ಮಾಡಿದರೂ ಅದು ಭಕ್ತರಿಗೋಸ್ಕರ ಎಂದು ನುಡಿದರು. ಇದೇ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ಚಲನಚಿತ್ರ ನಟರಾದ ಪಾಕರಹಳ್ಳಿ ಬುಲೆಟ್ ನಾಗರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮದ ಮುಖಂಡರಾದ ಮುದವತ್ತಿ ಎಸ್.ಕೃಷ್ಣಪ್ಪ, ವಡಗೇರಿ ರಮೇಶ್, ಜಂಗಾಲಹಳ್ಳಿ ಶ್ರೀನಿವಾಸ್, ಶೆಟ್ಟಿಗಾನಹಳ್ಳಿ ಎಸ್ಎಂಎಸ್ ಸಂತೋಷ್, ನದೀಂ ಬೇಗ್, ಟೈಲರ್ ಶಿವಕುಮಾರ್, ವಕ್ಕಲೇರಿ ಚಿರು, ಚಿನ್ನಾಪುರ ನಾರಾಯಣಸ್ವಾಮಿ, ಉಮೇಶ್ ಹಾಗೂ ಪಿಳ್ಳಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.2
- ಕೋಲಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಓಂ ಶಕ್ತಿ ಚಲಪತಿ ಅವರು, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ದೇಶದೊಳಗೆ ಅಕ್ರಮವಾಗಿ ನುಸುಳಿರುವವರಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಕಾನೂನುಬಾಹಿರ ಕ್ರಮವನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಎಚ್ಚರಿಸಿರುವ ಅವರು, ರಾಜ್ಯದ ಜನರ ಹಿತಾಸಕ್ತಿ, ದೇಶದ ಆಂತರಿಕ ಭದ್ರತೆ ಹಾಗೂ ಕಾನೂನುಬದ್ಧ ವ್ಯವಸ್ಥೆಗೆ ಧಕ್ಕೆಯಾಗುವ ಯಾವುದೇ ನಿರ್ಧಾರವನ್ನು ತಾವಾಗಲಿ ಅಥವಾ ತಮ್ಮ ಪಕ್ಷವಾಗಲಿ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು. ದೇಶದ ಕಾನೂನಿನ ಪ್ರಕಾರ ಅರ್ಹರಾಗಿರುವ ಜನರಿಗೆ ಮಾತ್ರ ಅಗತ್ಯ ದಾಖಲೆಗಳನ್ನು ನೀಡಬೇಕು ಮತ್ತು ಅಕ್ರಮ ನುಸುಳುಕೋರರಿಗೆ ಯಾವುದೇ ರೀತಿಯ ಮಾನ್ಯತೆ ಅಥವಾ ರಾಜಾಶ್ರಯ ನೀಡಬಾರದು ಎಂಬುದು ನಮ್ಮ ಸ್ಪಷ್ಟ ನಿಲುವು ಎಂದು ಅವರು ಪ್ರತಿಪಾದಿಸಿದರು. ಈ ಸೂಕ್ಷ್ಮ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಮತ್ತು ಈ ಪ್ರಕ್ರಿಯೆಯ ಕುರಿತು ಸಾರ್ವಜನಿಕರಲ್ಲಿ ಮೂಡಿರುವ ಅನುಮಾನ ಹಾಗೂ ಆತಂಕಗಳಿಗೆ ತಕ್ಷಣವೇ ಸ್ಪಷ್ಟ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಮಾಜಿ ಸಂಸದರು ಮುನಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷರು ವಿಜಿ ಕುಮಾರ್, ಪ್ರಕೋಷ್ಟಗಳ ಸಂಚಾಲಕರು ಮಾಗೇರಿ ನಾರಾಯಣಸ್ವಾಮಿ, ನಗರ ಘಟಕ ಅಧ್ಯಕ್ಷರು ಸಾಮಾ ಅನಿಲ್ ಬಾಬು, ತಿಮ್ಮರಾಯಪ್ಪ, ಕೆಂಬೋಡಿ ನಾರಾಯಣಸ್ವಾಮಿ, ಗೋವಿಂದರಾಜ್, ಮೋರ್ಚಾ ಬಾಲಾಜಿ, ಸೂರಿ ಮತ್ತು ಮಂಜುನಾಥ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.2
- ದೇಶಾದ್ಯಂತ ನಡೆಯುತ್ತಿರುವ ಮೆಗಾ ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಕೋಲಾರ ಜಿಲ್ಲೆಯಲ್ಲಿ ಶನಿವಾರ ಲೋಕ ಅದಾಲತ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಅದಾಲತ್‌ನಲ್ಲಿ ಒಟ್ಟು 80,687 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಗೊಳಿಸಲಾಗಿದ್ದು, ನ್ಯಾಯಾಲಯದಲ್ಲಿ ವರ್ಷಾನುಗಟ್ಟಲೆ ಬಾಕಿ ಉಳಿದಿದ್ದ ಅನೇಕ ಸಿವಿಲ್, ಕ್ರಿಮಿನಲ್ ಹಾಗೂ ಕೌಟುಂಬಿಕ ಪ್ರಕರಣಗಳನ್ನು ಉಭಯ ಪಕ್ಷಕಾರರ ಸಮ್ಮತಿಯೊಂದಿಗೆ ರಾಜೀಸಂಧಾನದ ಮೂಲಕ ಸುಖಾಂತ್ಯಗೊಳಿಸಲಾಯಿತು. ಈ ಬಾರಿಯ ಲೋಕ ಅದಾಲತ್‌ನ ಪ್ರಮುಖ ಆಕರ್ಷಣೆಯೆಂದರೆ, ಸಣ್ಣಪುಟ್ಟ ಕಾರಣಗಳಿಗೆ ವಿಚ್ಛೇದನದ ಹಾದಿ ಹಿಡಿದಿದ್ದ ಆರು ದಂಪತಿಗಳು ತಮ್ಮ ಹಳೆಯ ಕಹಿ ಘಟನೆಗಳನ್ನು ಮರೆತು, ಪರಸ್ಪರ ಹೂವಿನ ಹಾರ ಬದಲಾಯಿಸಿಕೊಂಡು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದಾದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಅವರು ಲೋಕ ಅದಾಲತ್ ಪ್ರಕ್ರಿಯೆಯನ್ನು 'ರಾಷ್ಟ್ರೀಯ ಹಬ್ಬ' ಎಂದು ಬಣ್ಣಿಸಿದರು.1
- ನಂಜನಗೂಡಿನ ಮಾದೇವಪ್ಪ ಅಲಿಯಾಸ್ ಪ್ರೇಮಳ ನಡೆಸುತ್ತಿರುವ ಸೆಕ್ಸ್ ದಂಧೆಯ ಅಸಲಿ ಕಹಾನಿ ಮತ್ತು ಅದರ ಹಿಂದಿನ ಸಂಪೂರ್ಣ ಸತ್ಯದ ವಿವರಗಳು ಇಲ್ಲಿದೆ.1
- ಎಸ್. ಜಾನಕಿ ಅವರಿಗೆ ಕಣ್ಣೀರಿನ ವಿದಾಯ ಹೇಳಲಾಗಿದ್ದು, ಅವರ ಅಂತ್ಯಸಂಸ್ಕಾರದ ಕಾರ್ಯಗಳು ಅತ್ಯಂತ ವಿಧಿವತ್ತಾಗಿ ನೆರವೇರಿವೆ.1
- ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿ ರೆಡ್ಡಿಹಳ್ಳಿ ಗ್ರಾಮದ ಸರ್ವೆ ನಂಬರ್ 76 ಹಾಗೂ ಬೆಟ್ಟದ ಸುತ್ತಮುತ್ತಲಿನ ಸರ್ವೆ ನಂಬರ್‌ಗಳಲ್ಲಿ ಸ್ಪೋಟಕ ಸಾಮಗ್ರಿಗಳು ಹಾಗೂ ಜೆಸಿಪಿ, ಹಿಟಾಚಿ, ಕಂಪ್ರೆಸರ್, ಕ್ರೇನ್ ಬಳಸಿ ನಿರಂತರವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆ ನಡೆಸುವ ಸಮಯದಲ್ಲಿ ಬೃಹತಾಕಾರದ ಬಂಡೆಯೊಂದು ಜಾರಿ ಜೆಸಿಪಿ ಮೇಲೆ ಕುಸಿದಿದ್ದು, ಅದರಲ್ಲಿದ್ದ ಕಾರ್ಮಿಕರು ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲ್ಲಿನ ಸುತ್ತ ಮಣ್ಣು ತೆಗೆಯುವಾಗ ಈ ಬೃಹತ್ ಕಲ್ಲು ದಿಮ್ಮಿ ಕುಸಿದು ಬಿದ್ದಿದ್ದರಿಂದ ಜೆಸಿಪಿ ಯಂತ್ರ ತೀವ್ರವಾಗಿ ಜಖಂಗೊಂಡಿದೆ. ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಮೀನಿನಲ್ಲಿ ತಮಿಳುನಾಡು ಮೂಲದ ವ್ಯಕ್ತಿಗಳು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಈ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ತಮಿಳುನಾಡು ಮೂಲದವರಾದ ಶ್ರೀಧರ್, ಕುಮಾರ್, ಈಶ್ವರ್ ಮತ್ತು ಮಂಜ ಎಂಬುವರು ಈ ಅಕ್ರಮ ದಂಧೆಯ ಕಿಂಗ್‌ಪಿನ್‌ಗಳು ಎಂದು ಗ್ರಾಮಸ್ಥರಿಂದ ತಿಳಿದುಬಂದಿದೆ. ಇವರು ಯಂತ್ರೋಪಕರಣ ಹಾಗೂ ಸಿಡಿಮದ್ದುಗಳನ್ನು ಬಳಸಿ ದಿಮ್ಮಿ ಕಲ್ಲುಗಳನ್ನು ತೆಗೆದು, ಕ್ರೇನ್ ಮೂಲಕ ಲಾರಿಗಳಿಗೆ ಲೋಡ್ ಮಾಡಿ ತಮಿಳುನಾಡಿಗೆ ಸಾಗಿಸುತ್ತಿದ್ದಾರೆ. ಅಲ್ಲದೆ, ವೇಸ್ಟೇಜ್ ಕಲ್ಲುಗಳಲ್ಲಿ ಸೈಜ್ ಕಲ್ಲು ಹಾಗೂ ಕಂಬದ ಕಲ್ಲುಗಳನ್ನು ಮಾಡಿ ಸಾಗಾಣಿಕೆ ಮಾಡುತ್ತಿದ್ದಾರೆ. ಈ ಜಾಗದಲ್ಲಿ ನಿರಂತರವಾಗಿ ಅಕ್ರಮ ದಂಧೆ ನಡೆಯುತ್ತಿದ್ದರೂ ಕಂದಾಯ ಇಲಾಖೆಯ ಆರ್‌ಐ ಹಾಗೂ ವಿಎ ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ಯಾವುದೇ ಸರ್ಕಾರಿ ಇಲಾಖೆಗಳಿಂದ ಅನುಮತಿ ಪಡೆಯದೆ, ಕಾರ್ಮಿಕರ ಸುರಕ್ಷತೆಯನ್ನೂ ನಿರ್ಲಕ್ಷಿಸಿ ಅಕ್ರಮವಾಗಿ ಬ್ಲಾಸ್ಟಿಂಗ್ ನಡೆಸುತ್ತಿರುವ ಈ ಕಲ್ಲು ಕಳ್ಳರ ವಿರುದ್ಧ ಜಿಲ್ಲಾಧಿಕಾರಿಗಳು ಅಥವಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.1
- ಕೋಲಾರ ಜಿಲ್ಲೆಯ ವೇಮಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬೆಟ್ಟಹೊಸಪುರ ವಾರ್ಡ್ 2 ರ ಬಳಿ ಇರುವ ಆರ್.ಎಸ್. ರಾಕ್ ಸ್ಯಾಂಡ್ ಕ್ರಷರ್ ಘಟಕದಲ್ಲಿ ಭೀಕರ ಅವಘಡ ಸಂಭವಿಸಿದೆ. ಪಶ್ಚಿಮ ಬಂಗಾಳದಿಂದ ಹೊಟ್ಟೆಪಾಡಿಗಾಗಿ ವಲಸೆ ಬಂದಿದ್ದ ಟಿಪ್ಪರ್ ಚಾಲಕ ಸುಬೇದ್, ನೂರು ಅಡಿ ಆಳದ ಕಲ್ಲು ಕ್ವಾರಿಗೆ ಟಿಪ್ಪರ್ ಸಮೇತ ಉರುಳಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜುಲೈ 5 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕ್ರಷರ್ ನಿರ್ವಹಣೆಯ ಬೇಜವಾಬ್ದಾರಿ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳ ಕೊರತೆಯೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಈ ಭೀಕರ ದುರಂತವನ್ನು ಮುಚ್ಚಿಹಾಕಲು ಕ್ರಷರ್ ಮಾಲೀಕರು ತೀವ್ರ ಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾಧ್ಯಮಗಳು ಮತ್ತು ಸಂಘಟನೆಗಳಿಗೆ ವಿಷಯ ತಿಳಿಯದಂತೆ ಎರಡು ದಿನಗಳ ಕಾಲ ಕ್ರಷರ್ ಒಳಗೆ ಯಾರಿಗೂ ಪ್ರವೇಶ ನೀಡದೆ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೆ, ಮೃತ ಚಾಲಕನ ಬಡ ಕುಟುಂಬಕ್ಕೆ ಹಣದ ಆಮಿಷ ಒಡ್ಡಿ ಅವರಿಂದಲೇ ದೂರು ಕೊಡಿಸಲು ಮಾಲೀಕರು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ಬಹಿರಂಗವಾಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದ್ದು, ಕಾನೂನು ರಕ್ಷಕರೆನ್ನಿಸಿಕೊಂಡವರೇ ಭಕ್ಷಕರ ರಕ್ಷಣೆಗೆ ನಿಂತಿದ್ದಾರಾ ಎಂಬ ಗಂಭೀರ ಪ್ರಶ್ನೆಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ನೊಂದ ಕುಟುಂಬಕ್ಕೆ ನ್ಯಾಯ ಹಾಗೂ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಮೇಡಿಹಾಳ ಮುನಿಆಂಜಿನಪ್ಪ ಹಾಗೂ ಕಲ್ವಮಂಜಲಿ ರಾಮುಶಿವಣ್ಣ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳು ವೇಮಗಲ್ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿವೆ. ಕ್ರಷರ್ ಮಾಲೀಕನ ವಿರುದ್ಧ ದೂರು ದಾಖಲಿಸುವುದರ ಜೊತೆಗೆ, ಸರ್ಕಾರದ ನಿಯಮಗಳನ್ನು ಪಾಲಿಸದ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿ ಜಾಣ ಕುರುಡರಂತೆ ವರ್ತಿಸುತ್ತಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೋದಂಡರಾಮಯ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ನಾಗನಾಳ ಶಂಕರ್, ರಾಂಪುರ ಮುನಿರಾಜು, ಚನ್ನಪ್ಪನಹಳ್ಳಿ ನಾಗರಾಜ್, ಸುಳದೇನಹಳ್ಳಿ ವೆಂಕಟರಾಜು ಮತ್ತು ವೇಮಗಲ್ ಬಹದ್ದೂರ್ ಖಾನ್ ಉಪಸ್ಥಿತರಿದ್ದರು.3
- ತನ್ನ ಹೆಂಡತಿಗೆ ಅಶ್ಲೀಲ ಪದಗಳು ಮತ್ತು ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದ ಕಚಡ ವ್ಯಕ್ತಿಗೆ ಸಾರ್ವಜನಿಕರು ಹಿಡಿದು ಸರಿಯಾಗಿ ಗೂಸಾಗೌರವ ನೀಡಿದ್ದಾರೆ. ಹೆಂಡತಿಯ ಮೊಬೈಲ್‌ಗೆ ಅಸಭ್ಯವಾಗಿ ಸಂದೇಶ ಹಾಗೂ ವಿಡಿಯೋ ಕಳುಹಿಸುತ್ತಿದ್ದ ಈ ವ್ಯಕ್ತಿಯನ್ನು ಸಾರ್ವಜನಿಕರೇ ಸೇರಿ ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿದ್ದಾರೆ. ಈ ಕಚಡ ವ್ಯಕ್ತಿಯ ಮುಖವನ್ನು ನೋಡಿ ಎಂದು ತೀವ್ರ ಆಕ್ರೋಶ ಹೊರಹಾಕಲಾಗಿದ್ದು, ಸಾರ್ವಜನಿಕರಿಂದ ಆತನಿಗೆ ಹೊಸದಾಗಿ ಸರಿಯಾದ ಗೂಸಾಗೌರವ ಸಿಕ್ಕಿದೆ.1