logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಹಣ್ಣು ಹಂಪಲು, ಪುಸ್ತಕ ವಿತರಣೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ನೇತೃತ್ವ ಹಾಗೂ ಕೊರ್ಡೆಲ್ ಕ್ರಿಕೆಟರ್ಸ್ ಕುಲಶೇಖರ ಸಹಯೋಗದಲ್ಲಿ, ಇತ್ತೀಚಿಗೆ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಹಣ್ಣು ಹಂಪಲು, ಪುಸ್ತಕ ಹಾಗೂ ಇತರ ಅವಶ್ಯ ಪರಿಕರಗಳ ವಿತರಣಾ ಕಾರ್ಯಕ್ರಮವು ನಡೆಯಿತು. ಅಶಕ್ತ ಹಾಗೂ ಬಡ ಮಕ್ಕಳಿಗೆ ನೆರವಾಗುವುದು ಅತ್ಯಂತ ಪುಣ್ಯದ ಕಾರ್ಯವಾಗಿದ್ದು ಕಾರ್ಯಕ್ರಮದ ರೂವಾರಿಗಳಿಗೆ ತುಂಬು ಹೃದಯದ ಅಭಿನಂದನೆಗಳು. ಬೆಥನಿ ಕನ್ಯಾ ಮಠದ ಭಗಿನಿ ಶುಭಾ, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸ್ಥಾಪಕ ಸಂಚಾಲಕ ಫ್ರಾಂಕ್ಲಿನ್ ಮೊಂತೆರೊ, ಪ್ರೀತಿ ಮಿನೇಜಸ್, ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್, ಸೈಂಟ್ ತೆರೆಸಾ ಶಾಲೆಯ ಉಪ ಪ್ರಾಂಶುಪಾಲೆ ಸಿ.ವಿದ್ಯಾ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಮಾಜಿ ಕಾರ್ಪೊರೇಟರ್ ಪದ್ಮನಾಭ ಅಮೀನ್, ಉದ್ಯಮಿ ಸಿಂಥಿಯಾ ಮೊರಾಸ್, ಅರುಣ್ ಡಿಸೋಜ ಉರ್ವ, ಜೂಲಿಯೆಟ್ ಡಿಕುನ್ಹಾ ಉರ್ವಸ್ಟೋರ್, ಪ್ರೀಮಾ ಫೆರ್ನಾಂಡಿಸ್ ಎಕ್ಕೂರು, ಜೂಲಿಯನಾ ಮೊರಾಸ್, ಆಗ್ನೆಸ್ ರೆಬೆಲ್ಲೊ ಮುಂಬೈ, ರಿಯೊ ಮಿನೇಜಸ್, ಓಸ್ವಾಲ್ಡ್ ಡಿಕುನ್ಹ ಬಿಜೈ, ಮಧು ಬಿಜೈ, ಕೊರ್ಡೆಲ್ ಕ್ರಿಕೆಟರ್ಸ್‌ನ ನವೀನ್ ಫರ್ನಾಂಡಿಸ್, ಪ್ರವೀಣ್ ಫರ್ನಾಂಡಿಸ್, ಜೊನ್ಸಿ ರೇಗೊ, ಫಿಲಿಪ್ ಡಿಸೋಜ, ಸಂದೀಪ್ ಡಿಸೋಜ, ರೊನಾಲ್ಡ್ ಕೊರ್ಡೆಲ್ ಮತ್ತು ರಾಬರ್ಟ್ ಕೊರ್ಡೆಲ್ ಉಪಸ್ಥಿತರಿದ್ದರು.

1 day ago
user_Shamsheer Budoli
Shamsheer Budoli
Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
1 day ago

ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಹಣ್ಣು ಹಂಪಲು, ಪುಸ್ತಕ ವಿತರಣೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ನೇತೃತ್ವ ಹಾಗೂ ಕೊರ್ಡೆಲ್ ಕ್ರಿಕೆಟರ್ಸ್ ಕುಲಶೇಖರ ಸಹಯೋಗದಲ್ಲಿ, ಇತ್ತೀಚಿಗೆ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಹಣ್ಣು ಹಂಪಲು, ಪುಸ್ತಕ ಹಾಗೂ ಇತರ ಅವಶ್ಯ ಪರಿಕರಗಳ ವಿತರಣಾ ಕಾರ್ಯಕ್ರಮವು ನಡೆಯಿತು. ಅಶಕ್ತ ಹಾಗೂ ಬಡ ಮಕ್ಕಳಿಗೆ ನೆರವಾಗುವುದು ಅತ್ಯಂತ ಪುಣ್ಯದ ಕಾರ್ಯವಾಗಿದ್ದು ಕಾರ್ಯಕ್ರಮದ ರೂವಾರಿಗಳಿಗೆ ತುಂಬು ಹೃದಯದ ಅಭಿನಂದನೆಗಳು. ಬೆಥನಿ ಕನ್ಯಾ ಮಠದ ಭಗಿನಿ ಶುಭಾ, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸ್ಥಾಪಕ ಸಂಚಾಲಕ ಫ್ರಾಂಕ್ಲಿನ್ ಮೊಂತೆರೊ, ಪ್ರೀತಿ ಮಿನೇಜಸ್, ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್, ಸೈಂಟ್ ತೆರೆಸಾ ಶಾಲೆಯ ಉಪ ಪ್ರಾಂಶುಪಾಲೆ ಸಿ.ವಿದ್ಯಾ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಮಾಜಿ ಕಾರ್ಪೊರೇಟರ್ ಪದ್ಮನಾಭ ಅಮೀನ್, ಉದ್ಯಮಿ ಸಿಂಥಿಯಾ ಮೊರಾಸ್, ಅರುಣ್ ಡಿಸೋಜ ಉರ್ವ, ಜೂಲಿಯೆಟ್ ಡಿಕುನ್ಹಾ ಉರ್ವಸ್ಟೋರ್, ಪ್ರೀಮಾ ಫೆರ್ನಾಂಡಿಸ್ ಎಕ್ಕೂರು, ಜೂಲಿಯನಾ ಮೊರಾಸ್, ಆಗ್ನೆಸ್ ರೆಬೆಲ್ಲೊ ಮುಂಬೈ, ರಿಯೊ ಮಿನೇಜಸ್, ಓಸ್ವಾಲ್ಡ್ ಡಿಕುನ್ಹ ಬಿಜೈ, ಮಧು ಬಿಜೈ, ಕೊರ್ಡೆಲ್ ಕ್ರಿಕೆಟರ್ಸ್‌ನ ನವೀನ್ ಫರ್ನಾಂಡಿಸ್, ಪ್ರವೀಣ್ ಫರ್ನಾಂಡಿಸ್, ಜೊನ್ಸಿ ರೇಗೊ, ಫಿಲಿಪ್ ಡಿಸೋಜ, ಸಂದೀಪ್ ಡಿಸೋಜ, ರೊನಾಲ್ಡ್ ಕೊರ್ಡೆಲ್ ಮತ್ತು ರಾಬರ್ಟ್ ಕೊರ್ಡೆಲ್ ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಕಾರ್ಮಿಕ ದಿನಾಚರಣೆ ಅಂಗವಾಗಿ (ಮೇ-ಡೇ ) ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾರವರ ನೇತೃತ್ವದಲ್ಲಿ ಬೃಹತ್‌ ಕಣ್ಣಿನ ಶಿಬಿರ ಮತ್ತು ಹೃದಯರೋಗಕ್ಕೆ ಸಂಬಂಧಪಟ್ಟ  ತಪಾಸಣಾ ಶಿಬಿರ ನಡೆಸಲು ತೀರ್ಮಾನ. ದಿನಾಂಕ 01-05-2026ರಂದು ಬೃಹತ್‌ ಕಣ್ಣಿನ ಶಿಬಿರ ಮತ್ತು ಹೃದಯರೋಗಕ್ಕೆ ಸಂಬಂಧಪಟ್ಟ  ತಪಾಸಣಾ ಶಿಬಿರ ನಡೆಸಲು ಶಿಬಿರ ನಡೆಸಲು ತೀರ್ಮಾನಿಸಲಾಗಿದೆ. ಮಂಗಳೂರಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಮಿಕ ದಿನಾಚರಣೆಯ ಅಂಗವಾಗಿ ಸುಮಾರು 1,000 ಮಂದಿಗೆ ಉಚಿತ ಕಣ್ಣು ತಪಾಸಣೆ ಉಚಿತ ಕನ್ನಡಕ ವಿತರಣೆ ಮತ್ತು ಉಚಿತ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಮಾಹಿತಿಯನ್ನು ಶಾಸಕ ಐವನ್‌ ಡಿಸೋಜಾ ನೇತೃತ್ವದಲ್ಲಿ ಉರ್ವಾದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಒಂದು ಉಚಿತವಾದ ಶಿಬಿರಕ್ಕೆ ಬೃಹತ್‌ ಸಂಖ್ಯೆಯಲ್ಲಿ ಶಿಬಿರದ ಏರ್ಪಾಡನ್ನು ಮಾಡುವಲ್ಲಿ ಸಮಿತಿ ಸಭೆಯನ್ನು ಐವನ್‌ ಡಿʼಸೋಜಾರವರ ಗೃಹಕಛೇರಿಯಲ್ಲಿ ನಡೆಸಲಾಯಿತು. ಈ ಶಿಬಿರದ ಬಗ್ಗೆ ಪ್ರಚಾರವನ್ನು ನಡೆಸಲು ಕಣ್ಣಿನ ಪರಿಕ್ಷೇಯನ್ನು ಕಡ್ಡಾಯವಾಗಿ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೇ ಈ ಒಂದು ಶಿಬಿರದಲ್ಲಿ ಕಾರ್ಮಿಕರು ಹೆಚ್ಚು –ಹೆಚ್ಚು ಭಾಗವಹಿಸುವಂತೆ ಮಾಡಲು ತೀರ್ಮಾನಿಸಲಾಯಿತು.
    1
    ಕಾರ್ಮಿಕ ದಿನಾಚರಣೆ ಅಂಗವಾಗಿ (ಮೇ-ಡೇ ) ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾರವರ ನೇತೃತ್ವದಲ್ಲಿ ಬೃಹತ್‌ ಕಣ್ಣಿನ ಶಿಬಿರ ಮತ್ತು ಹೃದಯರೋಗಕ್ಕೆ ಸಂಬಂಧಪಟ್ಟ  ತಪಾಸಣಾ ಶಿಬಿರ ನಡೆಸಲು ತೀರ್ಮಾನ.
ದಿನಾಂಕ 01-05-2026ರಂದು ಬೃಹತ್‌ ಕಣ್ಣಿನ ಶಿಬಿರ ಮತ್ತು ಹೃದಯರೋಗಕ್ಕೆ ಸಂಬಂಧಪಟ್ಟ  ತಪಾಸಣಾ ಶಿಬಿರ ನಡೆಸಲು ಶಿಬಿರ ನಡೆಸಲು ತೀರ್ಮಾನಿಸಲಾಗಿದೆ. ಮಂಗಳೂರಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಮಿಕ ದಿನಾಚರಣೆಯ ಅಂಗವಾಗಿ ಸುಮಾರು 1,000 ಮಂದಿಗೆ ಉಚಿತ ಕಣ್ಣು ತಪಾಸಣೆ ಉಚಿತ ಕನ್ನಡಕ ವಿತರಣೆ ಮತ್ತು ಉಚಿತ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಮಾಹಿತಿಯನ್ನು ಶಾಸಕ ಐವನ್‌ ಡಿಸೋಜಾ ನೇತೃತ್ವದಲ್ಲಿ ಉರ್ವಾದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಒಂದು ಉಚಿತವಾದ ಶಿಬಿರಕ್ಕೆ ಬೃಹತ್‌ ಸಂಖ್ಯೆಯಲ್ಲಿ ಶಿಬಿರದ ಏರ್ಪಾಡನ್ನು ಮಾಡುವಲ್ಲಿ ಸಮಿತಿ ಸಭೆಯನ್ನು ಐವನ್‌ ಡಿʼಸೋಜಾರವರ ಗೃಹಕಛೇರಿಯಲ್ಲಿ ನಡೆಸಲಾಯಿತು. ಈ ಶಿಬಿರದ ಬಗ್ಗೆ ಪ್ರಚಾರವನ್ನು ನಡೆಸಲು ಕಣ್ಣಿನ ಪರಿಕ್ಷೇಯನ್ನು ಕಡ್ಡಾಯವಾಗಿ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೇ ಈ ಒಂದು ಶಿಬಿರದಲ್ಲಿ ಕಾರ್ಮಿಕರು ಹೆಚ್ಚು –ಹೆಚ್ಚು ಭಾಗವಹಿಸುವಂತೆ ಮಾಡಲು ತೀರ್ಮಾನಿಸಲಾಯಿತು.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    5 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    1 hr ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
  • ಚಿತ್ರದುರ್ಗದ ಜಿಲ್ಲಾ ಬಜೆಪಿ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ನಾರಿ ಶಕ್ತಿ ವಂದನ ಅಭಿಯಾನ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಶ್ಯಾಮಲ ಶಿವಪ್ರಕಾಶ್ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದು ನಾರಿ ಶಕ್ತಿ ವಂದನ ಕಾಯ್ದೆ, 2023, ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಒಂದು ಮಹತ್ವದ ಕ್ಷಣವನ್ನು ಗುರುತಿಸುತ್ತದೆ ಎಂದು ತಿಳಿಸಿದರು.
    1
    ಚಿತ್ರದುರ್ಗದ ಜಿಲ್ಲಾ ಬಜೆಪಿ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ನಾರಿ ಶಕ್ತಿ ವಂದನ ಅಭಿಯಾನ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಶ್ಯಾಮಲ ಶಿವಪ್ರಕಾಶ್ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದು ನಾರಿ ಶಕ್ತಿ ವಂದನ ಕಾಯ್ದೆ, 2023, ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಒಂದು ಮಹತ್ವದ ಕ್ಷಣವನ್ನು ಗುರುತಿಸುತ್ತದೆ ಎಂದು ತಿಳಿಸಿದರು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    20 hrs ago
  • ತುಮಕೂರಿನ ಅಮಾನಿಕೆರೆಯಲ್ಲಿ ಬಿ.ಆರ್‌.ಅಂಬೇಡ್ಕರ್‌, ಬಾಬು ಜಗಜೀವನ್‌ ರಾಮ್‌ ಜಯಂತಿ ಪ್ರಯುಕ್ತ ಬೋಟ್ ಪೆರೇಡ್‌ ಜನರ ಕಣ್ಣನ್ನು ತಂಪು ಗೊಳಿಸಿದೆ
    1
    ತುಮಕೂರಿನ ಅಮಾನಿಕೆರೆಯಲ್ಲಿ ಬಿ.ಆರ್‌.ಅಂಬೇಡ್ಕರ್‌, ಬಾಬು ಜಗಜೀವನ್‌ ರಾಮ್‌ ಜಯಂತಿ ಪ್ರಯುಕ್ತ ಬೋಟ್ ಪೆರೇಡ್‌ ಜನರ  ಕಣ್ಣನ್ನು ತಂಪು ಗೊಳಿಸಿದೆ
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    2 hrs ago
  • . ಹನೂರು :ತಾಲೂಕಿನ ಸುಳೇರಿಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಆದಿ ಜಾಂಬವರ ಬೀದಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ ಹಾಗೂ ಬಾಬು ಜಗಜೀವನ್ ರಾಮ್ ರವರ 118ನೇ ಜಯಂತಿಯನ್ನು ಆಚರಿಸಲಾಯಿತು. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾವ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ನಂತರ ಕೇಕ್ ಅನ್ನು ಕತ್ತರಿಸಿ ಸಿಹಿ ಹಂಚಿದರು. ನಂತರ ಸಮುದಾಯದ ಮುಖಂಡರಾದ ಮಹದೇವ ಮಾತನಾಡಿ ಜಗಜೀವನ್ ರಾಮ್ ಅವರು ಭಾರತದ ಪ್ರಮುಖ ರಾಜಕೀಯ ನಾಯಕರು ಮತ್ತು ಸಾಮಾಜಿಕ ನ್ಯಾಯದ ಹರಿಕಾರರು. ಅವರನ್ನು ಪ್ರೀತಿಯಿಂದ "ಬಾಬೂಜಿ" ಎಂದು ಕರೆಯಲಾಗುತ್ತಿತ್ತು. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ವಿದ್ಯಾಭ್ಯಾಸದ ಸಮಯದಲ್ಲಿ ಅವರು ಜಾತಿ ಆಧಾರಿತ ತಾರತಮ್ಯವನ್ನು ಎದುರಿಸಿದರು, ಇದು ಅವರ ಮುಂದಿನ ಹೋರಾಟಕ್ಕೆ ಪ್ರೇರಣೆಯಾಯಿತು. ಕೇಂದ್ರ ಸಚಿವರು ಕೂಡ ಆಗಿದ್ದರು. ಹಸಿರು ಕ್ರಾಂತಿ ಕ್ರಾಂತಿಯ ಹರಿಕಾರ.ಅವರು ದಲಿತರ ಮತ್ತು ಶೋಷಿತ ವರ್ಗಗಳ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ ಮಹಾತ್ಮರು ಎಂದು ತಿಳಿಸಿದರು. ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು (ಏಪ್ರಿಲ್ 14) ನಾವು ಅರ್ಥಪೂರ್ಣವಾಗಿ ಆಚರಿಸುತ್ತೇವೆ ಅಂಬೇಡ್ಕರ್ ಅವರ ಪ್ರಮುಖ ಘೋಷಣೆಗಳು ​"ಕಲಿಯಿರಿ, ಸಂಘಟಿತರಾಗಿ, ಹೋರಾಡಿ." ​"ನಾನು ಆರಾಧಿಸುವ ಮೂರು ದೈವಗಳೆಂದರೆ - ಜ್ಞಾನ, ಸ್ವಾಭಿಮಾನ ಮತ್ತು ಚಾರಿತ್ರ್ಯ." ​"ಮನಸ್ಸಿನ ಕೃಷಿಯೇ ಮಾನವನ ಅಂತಿಮ ಗುರಿಯಾಗಿರಬೇಕು ಎಂದು ತಿಳಿಸಿದರು. ಸಮುದಾಯದ ಬೀದಿಗಳಲ್ಲಿ ವಿದ್ಯುತ್ ದೀಪ ಅಲಂಕಾರ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಯಜಮಾನರ ತಿಮ್ಮಯ್ಯ, ಜಡೆ ಸ್ವಾಮಿ, ಯುವಕರಾದ ಶ್ರೀನಿವಾಸ್, ಮಾದೇಶ್, ನಂಜುಂಡ, ರವಿ,ನಾಗ, ಪ್ರವೀಣ್, ಪ್ರಜ್ವಲ್, ಸೇರಿದಂತೆ ಇನ್ನಿತರ ಯುವಕರು ಮಹಿಳೆಯರು ಹಾರಾಜರಿದ್ದರು.
    4
    . 
ಹನೂರು :ತಾಲೂಕಿನ ಸುಳೇರಿಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಆದಿ ಜಾಂಬವರ ಬೀದಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ ಹಾಗೂ ಬಾಬು ಜಗಜೀವನ್ ರಾಮ್ ರವರ 118ನೇ ಜಯಂತಿಯನ್ನು ಆಚರಿಸಲಾಯಿತು.
ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾವ್  ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ನಂತರ ಕೇಕ್ ಅನ್ನು ಕತ್ತರಿಸಿ ಸಿಹಿ ಹಂಚಿದರು.
ನಂತರ ಸಮುದಾಯದ ಮುಖಂಡರಾದ ಮಹದೇವ  ಮಾತನಾಡಿ ಜಗಜೀವನ್ ರಾಮ್  ಅವರು ಭಾರತದ ಪ್ರಮುಖ ರಾಜಕೀಯ ನಾಯಕರು ಮತ್ತು ಸಾಮಾಜಿಕ ನ್ಯಾಯದ ಹರಿಕಾರರು. ಅವರನ್ನು ಪ್ರೀತಿಯಿಂದ "ಬಾಬೂಜಿ" ಎಂದು ಕರೆಯಲಾಗುತ್ತಿತ್ತು.
ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ವಿದ್ಯಾಭ್ಯಾಸದ ಸಮಯದಲ್ಲಿ ಅವರು ಜಾತಿ ಆಧಾರಿತ ತಾರತಮ್ಯವನ್ನು ಎದುರಿಸಿದರು, ಇದು ಅವರ ಮುಂದಿನ ಹೋರಾಟಕ್ಕೆ ಪ್ರೇರಣೆಯಾಯಿತು.
ಕೇಂದ್ರ ಸಚಿವರು ಕೂಡ ಆಗಿದ್ದರು. ಹಸಿರು ಕ್ರಾಂತಿ ಕ್ರಾಂತಿಯ ಹರಿಕಾರ.ಅವರು ದಲಿತರ ಮತ್ತು ಶೋಷಿತ ವರ್ಗಗಳ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ ಮಹಾತ್ಮರು  ಎಂದು ತಿಳಿಸಿದರು.
ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು (ಏಪ್ರಿಲ್ 14) ನಾವು ಅರ್ಥಪೂರ್ಣವಾಗಿ ಆಚರಿಸುತ್ತೇವೆ
ಅಂಬೇಡ್ಕರ್ ಅವರ ಪ್ರಮುಖ ಘೋಷಣೆಗಳು
​"ಕಲಿಯಿರಿ, ಸಂಘಟಿತರಾಗಿ, ಹೋರಾಡಿ."
​"ನಾನು ಆರಾಧಿಸುವ ಮೂರು ದೈವಗಳೆಂದರೆ - ಜ್ಞಾನ, ಸ್ವಾಭಿಮಾನ ಮತ್ತು ಚಾರಿತ್ರ್ಯ."
​"ಮನಸ್ಸಿನ ಕೃಷಿಯೇ ಮಾನವನ ಅಂತಿಮ ಗುರಿಯಾಗಿರಬೇಕು ಎಂದು ತಿಳಿಸಿದರು.
ಸಮುದಾಯದ ಬೀದಿಗಳಲ್ಲಿ ವಿದ್ಯುತ್ ದೀಪ ಅಲಂಕಾರ ಮಾಡಲಾಗಿತ್ತು.
ಇದೇ ಸಂದರ್ಭದಲ್ಲಿ ಯಜಮಾನರ ತಿಮ್ಮಯ್ಯ, ಜಡೆ ಸ್ವಾಮಿ, ಯುವಕರಾದ ಶ್ರೀನಿವಾಸ್, ಮಾದೇಶ್, ನಂಜುಂಡ, ರವಿ,ನಾಗ, ಪ್ರವೀಣ್, ಪ್ರಜ್ವಲ್, ಸೇರಿದಂತೆ ಇನ್ನಿತರ ಯುವಕರು ಮಹಿಳೆಯರು ಹಾರಾಜರಿದ್ದರು.
    user_Vijay kumar
    Vijay kumar
    ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    2 hrs ago
  • Post by Nitin 9071795156 press reporte
    3
    Post by Nitin 9071795156 press reporte
    user_Nitin 9071795156 press reporte
    Nitin 9071795156 press reporte
    Press advisory ಕಳಘಟಗಿ, ಧಾರವಾಡ, ಕರ್ನಾಟಕ•
    4 hrs ago
  • ಬೆಂಗರೆಯ ಸ್ಯಾಂಡ್ಸ್‌ಪಿಟ್ ಪ್ರದೇಶದಲ್ಲಿರುವ ಶ್ರೀ ವೀರ ಭಾರತಿ ರಾಮಾಂಜನೇಯ ಮಂದಿರದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳು ಏಪ್ರಿಲ್ 17ರಿಂದ 20ರವರೆಗೆ ಭಕ್ತಿಭಾವದಿಂದ ಮೇಳೈಸಲಿದೆ ಎಂದು ಶ್ರೀ ವೀರ ಭಾರತಿ ರಾಮಾಂಜನೇಯ ಮಂದಿರ ಇದರ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಮೋಹನ್ ಬೆಂಗ್ರೆ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಸೀತಾ ರಾಮ ಲಕ್ಷ್ಮಣ ಹನುಮಾನ್ ಸಮೇತ ಪಟ್ಟಾಭಿರಾಮ ದೇವರ ಬಿಂಬ ಪ್ರತಿಷ್ಠೆ ಹಾಗೂ ವೀರ ಮಾರುತಿ ದೇವರ ಬಿಂಬ ಪುನಃ ಪ್ರತಿಷ್ಠೆ, ನಾಗಶಿಲಾ ಪುನಃ ಪ್ರತಿಷ್ಠೆ ಏಪ್ರಿಲ್ 18ರಂದು ಬೆಳಿಗ್ಗೆ 8ರಿಂದ 9ರ ವರೆಗೆ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಶ್ರೀ ಕುಡುಪು ಕೃಷ್ಣರಾಜ ತಂತ್ರಿಗಳ ಮಾರ್ಗದರ್ಶನದಲ್ಲಿ ನೆರವೇರಲಿದೆ. ಬೆಳಿಗ್ಗೆ 10.30 ಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳ ಅವರಿಂದ ಸ್ವಾಗತ ಗೋಪುರದ ಉದ್ಘಾಟನೆ ಕಾರ್ಯ ನಡೆಯಲಿದೆ .ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ನಾಡೋಜ ಜಿ ಶಂಕರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳನ್ನು ಭಾಗವಹಿಸಲಿದ್ದಾರೆ ಎಂದರು .
    1
    ಬೆಂಗರೆಯ ಸ್ಯಾಂಡ್ಸ್‌ಪಿಟ್ ಪ್ರದೇಶದಲ್ಲಿರುವ ಶ್ರೀ ವೀರ ಭಾರತಿ ರಾಮಾಂಜನೇಯ ಮಂದಿರದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ , ಸಾಂಸ್ಕೃತಿಕ  ಕಾರ್ಯಕ್ರಮಗಳು ಏಪ್ರಿಲ್ 17ರಿಂದ 20ರವರೆಗೆ ಭಕ್ತಿಭಾವದಿಂದ ಮೇಳೈಸಲಿದೆ ಎಂದು  ಶ್ರೀ  ವೀರ ಭಾರತಿ ರಾಮಾಂಜನೇಯ ಮಂದಿರ ಇದರ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಮೋಹನ್ ಬೆಂಗ್ರೆ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ,   ಸೀತಾ ರಾಮ ಲಕ್ಷ್ಮಣ ಹನುಮಾನ್ ಸಮೇತ ಪಟ್ಟಾಭಿರಾಮ ದೇವರ ಬಿಂಬ ಪ್ರತಿಷ್ಠೆ ಹಾಗೂ ವೀರ ಮಾರುತಿ ದೇವರ ಬಿಂಬ ಪುನಃ ಪ್ರತಿಷ್ಠೆ, ನಾಗಶಿಲಾ ಪುನಃ ಪ್ರತಿಷ್ಠೆ ಏಪ್ರಿಲ್ 18ರಂದು ಬೆಳಿಗ್ಗೆ 8ರಿಂದ 9ರ ವರೆಗೆ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಶ್ರೀ ಕುಡುಪು ಕೃಷ್ಣರಾಜ ತಂತ್ರಿಗಳ ಮಾರ್ಗದರ್ಶನದಲ್ಲಿ ನೆರವೇರಲಿದೆ.   ಬೆಳಿಗ್ಗೆ 10.30 ಕ್ಕೆ   ಪೇಜಾವರ ಮಠದ  ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳ ಅವರಿಂದ ಸ್ವಾಗತ ಗೋಪುರದ ಉದ್ಘಾಟನೆ ಕಾರ್ಯ ನಡೆಯಲಿದೆ .ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ  ನಾಡೋಜ ಜಿ ಶಂಕರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳನ್ನು ಭಾಗವಹಿಸಲಿದ್ದಾರೆ ಎಂದರು .
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.