ಸುರಪುರ ಸುದ್ದಿ: ಹುಣಸಗಿ ತಾಲೂಕಿನ ಕೆ.ತಳ್ಳಳ್ಳಿ ಗ್ರಾಮದ ರೈತರ ಜಮೀನಿನ ಸರ್ವೇ ನಂ.45ರಲ್ಲಿ 25 ಕೆ.ವಿ. ಸಾಮರ್ಥ್ಯದ ವಿದ್ಯುತ್ ಪರಿವರ್ತಕ (ಟಿಸಿ) ಸುಟ್ಟು ಸುಮಾರು 25 ದಿನಗಳಾದರೂ ಹೊಸ ಟಿಸಿ ಅಳವಡಿಸಿಲ್ಲ ಎಂದು ಆರೋಪಿಸಿ, ಹುಣಸಗಿ ಸೆಕ್ಷನ್ ಆಫೀಸರ್ ವೀರೇಶ ದಳವಾಯಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಅಮಾನತುಗೊಳಿಸುವಂತೆ ಜೆಸ್ಕಾಂ ವಿಭಾಗೀಯ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ ಬಿಳವಾರ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಬಂಧಪಟ್ಟ ರೈತರ ಜಮೀನಿನಲ್ಲಿ ಟಿಸಿ ಸುಟ್ಟಿರುವ ಕುರಿತು 06-08-2026ರಂದು ಜೆಸ್ಕಾಂ ಇಲಾಖೆಯ ಟೋಲ್‌ಫ್ರೀ ಸಂಖ್ಯೆ 1912ಕ್ಕೆ ದೂರು ನೀಡಲಾಗಿದ್ದು, F060826103365 ಡಾಕೆಟ್ ಸಂಖ್ಯೆ ಪಡೆಯಲಾಗಿದೆ ಎಂದು ಪತ್ರಕರ್ತ ರಾಘವೇಂದ್ರ ಮಾಸ್ತರ ತಿಳಿಸಿದ್ದಾರೆ. ದೂರು ನೀಡಿದ ಬಳಿಕ ಸುಮಾರು 20 ದಿನಗಳಿಂದ ಸಂಬಂಧಪಟ್ಟ ಅಧಿಕಾರಿಯನ್ನು ನಿರಂತರವಾಗಿ ಸಂಪರ್ಕಿಸಲಾಗಿದ್ದರೂ, ಟಿಸಿಗೆ ಆಯಿಲ್ ಲಭ್ಯವಿಲ್ಲ ಎಂಬ ಕಾರಣವನ್ನು ಹೇಳುತ್ತಾ ಸಮಸ್ಯೆ ಪರಿಹರಿಸಿಲ್ಲ ಎಂದು ಅವರು ಆರೋಪಿಸಿದರು. ಅಲ್ಲದೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೆ, ಹೊಸ ಟಿಸಿ ಅಳವಡಿಸದೇ ಇದ್ದರೂ ಟಿಸಿ ಅಳವಡಿಸಲಾಗಿದೆ ಎಂದು ನಮೂದಿಸಿ 21-08-2026ರಂದು ದೂರನ್ನು ಮುಕ್ತಾಯಗೊಳಿಸಲಾಗಿದೆ ಎಂದು ದೂರಿದರು. ಈ ಕುರಿತು ಮಾತನಾಡಿದ ಪತ್ರಕರ್ತ ರಾಘವೇಂದ್ರ ಮಾಸ್ತರ, “ಕಳೆದ 25 ದಿನಗಳಿಂದ ರೈತರು ವಿದ್ಯುತ್ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರಸ್ತುತ ಬರದ ಪರಿಸ್ಥಿತಿಯಲ್ಲಿ ಕೊಳವೆಬಾವಿಗಳನ್ನು ಅವಲಂಬಿಸಿ ಕೃಷಿ ಮಾಡುತ್ತಿರುವ ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಅತ್ಯಗತ್ಯ. ಟಿಸಿ ಸುಟ್ಟಿರುವ ಕುರಿತು ಸಮಯಕ್ಕೆ ಸರಿಯಾಗಿ ದೂರು ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಅಧಿಕಾರಿಗಳು ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಒತ್ತಾಯಿಸಿದರು. ಅಧಿಕಾರಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೆ, ಟಿಸಿ ಅಳವಡಿಸಲಾಗಿದೆ ಎಂದು ತಪ್ಪು ಮಾಹಿತಿ ನೀಡಿ ದೂರನ್ನು ಮುಕ್ತಾಯಗೊಳಿಸಿರುವುದು ಗಂಭೀರ ವಿಚಾರವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ಆರೋಪ ಸತ್ಯವೆಂದು ದೃಢಪಟ್ಟಲ್ಲಿ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕಾನೂನು ಹಾಗೂ ಇಲಾಖಾ ನಿಯಮಾನುಸಾರ ಕಠಿಣ ಕ್ರಮ ಕೈಗೊಂಡು ಅಮಾನತುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. “ಕಂಪ್ಲೆಂಟ್ ಕ್ಲೋಜ್ ಮಾಡುವ ಅಧಿಕಾರ ಸೆಕ್ಷನ್ ಆಫೀಸರ್‌ಗೆ ಇಲ್ಲ” ರಾಜಶೇಖರ ಬಿಳವಾರ, ಜೆಸ್ಕಾಂ ವಿಭಾಗೀಯ ಕಾರ್ಯನಿರ್ವಾಹಕ ಅಧಿಕಾರಿ, ಸುರಪುರ, ಮಾತನಾಡಿ, “ಜೆಸ್ಕಾಂ ಇಲಾಖೆಯಲ್ಲಿ ಆಯಿಲ್ ಪೂರೈಕೆಯ ಸಮಸ್ಯೆ ಇರುವುದು ನಿಜ. ಆದರೆ ಕಂಪ್ಲೆಂಟ್ ಕ್ಲೋಜ್ ಮಾಡುವ ಅಧಿಕಾರ ಸೆಕ್ಷನ್ ಆಫೀಸರ್‌ಗೆ ಇಲ್ಲ. ಯಾವ ಮೊಬೈಲ್ ಸಂಖ್ಯೆಯಿಂದ ದೂರು ನೀಡಲಾಗಿರುತ್ತದೆಯೋ, ಅದೇ ಸಂಖ್ಯೆಗೆ ಕರೆ ಮಾಡಿ ದೂರುದಾರರಿಗೆ ಮಾಹಿತಿ ನೀಡಬೇಕು. ಈ ಪ್ರಕರಣದಲ್ಲಿ ನಮ್ಮ ಅಧಿಕಾರಿಗಳಿಂದ ತಪ್ಪಾಗಿದ್ದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ. “ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು” ರೈತ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ ಮಾತನಾಡಿ, “ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಟಿಸಿಗಳನ್ನು ಖಾಸಗಿ ವ್ಯಕ್ತಿಗಳಿಗೆ ಹಣಕ್ಕಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು. ತಪ್ಪಿತಸ್ಥರು ಕಂಡುಬಂದರೆ ಕೂಡಲೇ ಅಮಾನತುಗೊಳಿಸಬೇಕು” ಎಂದು ಆಗ್ರಹಿಸಿದರು.

- *ಅಕ್ರಮ, ಗ್ಯಾಸ್ ಕಳ್ಳತನ ಹಾಗೂ ಗ್ರಾಹಕರಿಗೆ ವಂಚನೆ ಕುರಿತು ತನಿಖೆಗೆ ಜಿಲ್ಲಾಧಿಕಾರಿಗೆ ಮನವಿ* ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿರುವ ಇಂಡಿಯನ್ ಗ್ಯಾಸ್ ಸಿಲೆಂಡರ್ ವಿತರಣಾ ಕೇಂದ್ರದಲ್ಲಿ ನಡೆಯುತ್ತಿರುವ ಅಕ್ರಮ, ಗ್ಯಾಸ್ ಕಳ್ಳತನ ಹಾಗೂ ಗ್ರಾಹಕರಿಗೆ ವಂಚನೆ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು. ಮಾನ್ಯರೇ, ಈ ಮೇಲ್ಕಂಡ ವಿಷಯಕ್ಕೆ ಸಂಬAಧಿಸಿದAತೆ, ಜಯ ಕರ್ನಾಟಕ ಜನಪರ ವೇದಿಕೆ ತಮ್ಮಲ್ಲಿ ಈ ಮನವಿ ಮೂಲಕ ವಿನಂತಿಸಿಕೊಳ್ಳುವುದೇನೆAದರೆ, ಶಹಾಪುರ ತಾಲೂಕಿನ ಸಗರ.ಬಿ ಗ್ರಾಮದಲ್ಲಿರುವ ಇಂಡಿಯನ್ ಗ್ಯಾಸ್ ಸಿಲೆಂಡರ್ ವಿತರಣಾ ಕೇಂದ್ರದಲ್ಲಿ ಗ್ರಾಹಕರಿಗೆ ಗ್ಯಾಸ್ ಸಿಲೆಂಡರ್ ವಿತರಿಸುವ ಸಂದರ್ಭದಲ್ಲಿ ಹಲವು ಅಕ್ರಮಗಳು ನಡೆಯುತ್ತಿವೆ. ಕಂಪನಿಯಿAದ ಬಂದ ಗ್ಯಾಸ್ ಸಿಲೆಂಡರ್‌ನಲ್ಲಿರುವ ಸುಮಾರು ೧೫ ಕೆ.ಜಿ. ಗ್ಯಾಸ್‌ನಲ್ಲಿ ಸ್ವಲ್ಪ ಪ್ರಮಾಣವನ್ನು ಖಾಲಿ ಇರುವ ಗ್ಯಾಸ್‌ಗಳಿಗೆ ಡಂಪ್ ಮಾಡಿ ಅಕ್ರಮವಾಗಿ ತೆಗೆದು, ಗ್ರಾಹಕರಿಗೆ ಕಡಿಮೆ ಪ್ರಮಾಣದ ಗ್ಯಾಸ್ ಇರುವ ಸಿಲೆಂಡರ್‌ಗಳನ್ನು ವಿತರಿಸಲಾಗುತ್ತಿದೆ ಇದರಿಂದ ಗ್ರಾಹಕರು ಆರ್ಥಿಕವಾಗಿ ವಂಚನೆಗೊಳಗಾಗುತ್ತಿದ್ದಾರೆ. ಇದಲ್ಲದೇ, ಗ್ರಾಹಕರಿಂದ ಮುಂಗಡವಾಗಿ OPT ಪಡೆದುಕೊಂಡು, ಗ್ಯಾಸ್ ಸಿಲೆಂಡರ್ ವಿತರಣೆ ಮಾಡದೇ, ಅದೇ ಸಿಲೆಂಡರ್‌ಗಳನ್ನು ಇತರರಿಗೆ ಅಕ್ರಮವಾಗಿ ಹೆಚ್ಚಿನ ಮೊತ್ತಕ್ಕೆ ಬೇರೆಯವರಿಗೆ ಮಾರಾಟ ಮಾಡಲಾಗುತ್ತಿದೆ. ಈ ರೀತಿಯ ಕ್ರಮದಿಂದ ನೈಜ ಗ್ರಾಹಕರಿಗೆ ಗ್ಯಾಸ್ ಸಿಗದೆ ತೀವ್ರ ತೊಂದರೆ ಉಂಟಾಗುತ್ತಿದೆ. ಅಲ್ಲದೆ, ಸರ್ಕಾರಿ ರಜೆ ದಿನಗಳಲ್ಲಿಯೂ ಗ್ಯಾಸ್ ಏಜೆನ್ಸಿಯನ್ನು ತೆರೆದು ನಿಯಮಬಾಹಿರವಾಗಿ ವ್ಯವಹಾರ ನಡೆಸಲಾಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದು ಅಗತ್ಯವಾಗಿದೆ. ಆದ್ದರಿಂದ, ಸಗರ ಗ್ರಾಮದ ಇಂಡಿಯನ್ ಗ್ಯಾಸ್ ವಿತರಣಾ ಕೇಂದ್ರದ ವಿರುದ್ಧ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳ ಮೂಲಕ ಪರಿಶೀಲನೆ ಮತ್ತು ತನಿಖೆ ನಡೆಸಿ, ಗ್ಯಾಸ್‌ನ ತೂಕ, ವಿತರಣೆ ದಾಖಲೆಗಳು, OTP ದಾಖಲೆಗಳು, ಮಾರಾಟದ ವಿವರಗಳು ಹಾಗೂ ಗ್ರಾಹಕರಿಗೆ ನೀಡಿರುವ ಸಿಲೆಂಡರ್‌ಗಳ ಕುರಿತು ಪರಿಶೀಲನೆ ನಡೆಸಬೇಕು. ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಂಡು, ಗ್ರಾಹಕರಿಗೆ ನ್ಯಾಯ ಒದಗಿಸಬೇಕೆಂದು ವಿನಂತಿಸುತ್ತೇನೆ. ಈ ಸಂದರ್ಭದಲ್ಲಿ ಸೊಪಣ್ಣ ತಾಲೂಕ ಅಧ್ಯಕ್ಷರು, ಜಗದೇವಿ ಹಳಿಸಗರ, ಜಯ ಶಹಾಪುರ, ಜ್ಯೋತಿ ಶಹಾಪುರ, ಪ್ರದೀಪ್ ಅಣಬಿ, ಶರಣು ಖಾನಾಪುರ, ರೆಡ್ಡಿ ಖಾನಾಪುರ, ಅರುಣಾ ಸಾಹುಕಾರ ಖಾನಾಪುರ, ಭೀಮರಾಯ ಬೀದರಾಣಿ, ರಾಮು, ವೆಂಕಟೇಶ ನಾಯಕ ಆಲ್ದಾಳ,4
- ಲೋಕಕಲ್ಯಾಣಕ್ಕಾಗಿ ಸುರಪುರ ತಾಲೂಕಿನ ದೇವಪುರದಿಂದ ಶ್ರೀ ತಿಂಥಣಿ ಮೌನೇಶ್ವರ ದೇವಸ್ಥಾನದವರೆಗೆ ಸರ್ವಧರ್ಮ ಪಾದಯಾತ್ರೆ ಸುರಪುರ : ಹೌದು ಸುರಪುರ ತಾಲೂಕಿನ ದೇವಪುರ ಗ್ರಾಮದಿಂದ ಶ್ರೀ ತಿಂಥಣಿ ಮೌನೇಶ್ವರ ದೇವಸ್ಥಾನಕ್ಕೆ ಸರ್ವ ಧರ್ಮದ ವತಿಯಿಂದ ಭಕ್ತಿ ಪೂರ್ವಕ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತು. ಶ್ರೀ ರವಿ ಮುತ್ಯಾ ದೇವಪುರ ಹಾಗೂ ಶ್ರೀ ನಾಗರಾಜ ಮುತ್ಯಾ ದೇವಪುರ ಅವರ ದಿವ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು. ಈ ಪಾದಯಾತ್ರೆಯಲ್ಲಿ ವಿವಿಧ ಧರ್ಮಗಳ ಭಕ್ತರು ಪಾಲ್ಗೊಂಡು ಶ್ರೀ ಮೌನೇಶ್ವರ ದೇವರ ಕೃಪೆಗೆ ಪಾತ್ರರಾದರು1
- ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಗೋನಾಳ ಗ್ರಾಮೀಣವಾಗದ ಮಕ್ಕಳ ಪ್ರತಿಭೆ ಸಾರ್ವಜನಿಕರು ವಿಕಿಸಿ1
- ಯಾದಗಿರಿ ನಗರದ ಗಾಂಧಿ ಚೌಕಿನಲ್ಲಿ ರಾಖಿಯ ಅಂಗಡಿಗಳು ಎಲ್ಲಿ ಮಕ್ಕಳು ಮತ್ತು ಮಹಿಳೆಯರು ರಾಖಿಯನ್ನು ಕರಿಸಲು ದೃಶ್ಯ1
- ಮಾನ್ವಿಯಲ್ಲಿ ಸಂಭ್ರಮದ ಈದ್ ಮಿಲಾದುನ್ನಬಿ ಮೆರವಣಿಗೆ -ಸಹೋದರತೆಯ ಸಂದೇಶ ಸಾರಿದ ಶಾಸಕ ಹಂಪಯ್ಯ ನಾಯಕ ಮಾನ್ವಿಯಲ್ಲಿ ಸಂಭ್ರಮದ ಈದ್ ಮಿಲಾದುನ್ನಬಿ ಮೆರವಣಿಗೆ -ಸಹೋದರತೆಯ ಸಂದೇಶ ಸಾರಿದ ಶಾಸಕ ಹಂಪಯ್ಯ ನಾಯಕ2
- ನಾಡಿನ ಎಲ್ಲಾ ಅಕ್ಕ ತಂಗಿಯರಗೆ ಹಾಗು ಅಣ್ಣ ತಮಂದಿರಗೆ ರಕ್ಷಾ ಬಂಧನದ ಅಡ್ವನ್ಸ ರಾಕಿ ಹಬ್ಬದ ಸುಭಾಶಗಳು1
- ಈದ್-ಎ-ಮಿಲಾದ್-ಉನ್-ನಬಿ ಅಂಗವಾಗಿ ರಾಯಚೂರಿನಲ್ಲಿ ಮಕ್ಕಳ ವೈಭವದ ಪಾದಯಾತ್ರೆ ರಾಯಚೂರು: ಆಗಸ್ಟ್ 26 ಈದ್-ಎ-ಮಿಲಾದ್-ಉನ್-ನಬಿ ಅವರ ಪವಿತ್ರ ಸಂದರ್ಭದಲ್ಲಿ, ರಾಯಚೂರಿನ ಎಲ್‌ಬಿಎಸ್ ನಗರದ ಮಸೀದಿ-ಎ-ನೂರ್ ಕಮಿಟಿ ವತಿಯಿಂದ ಚಿಕ್ಕ ಮಕ್ಕಳ ವೈಭವದ ಹಾಗೂ ಶಿಸ್ತುಬದ್ಧ ಪಾದಯಾತ್ರೆ ಮೆರವಣಿಗೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಮೆರವಣಿಗೆಯಲ್ಲಿ ಮಕ್ಕಳು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಗೌರವದಿಂದ ನಾತ್-ಎ-ಪಾಕ್ ಹಾಗೂ ಸಲಾಮ್ಗಳನ್ನು ಪಠಿಸುವ ಮೂಲಕ ಪ್ರವಾದಿ ಹಜರತ್ ಮುಹಮ್ಮದ್ ಮುಸ್ತಫಾ ಅವರ ಮೇಲಿನ ತಮ್ಮ ಪ್ರೀತಿ ಮತ್ತು ಗೌರವದ ಪವಿತ್ರ ಸಂದೇಶವನ್ನು ಸಾರಿದರು. ಮೆರವಣಿಗೆಯು ಶಾಂತಿಯುತವಾಗಿ ಹಾಗೂ ಶಿಸ್ತುಬದ್ಧವಾಗಿ ನಡೆಯಲು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿ, ಉತ್ತಮ ಸಹಕಾರ ನೀಡಿದರು. ಪೊಲೀಸ್ ಇಲಾಖೆಯ ಈ ಅಮೂಲ್ಯ ಸಹಕಾರಕ್ಕಾಗಿ ಮಸೀದಿ-ಎ-ನೂರ್ ಕಮಿಟಿಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಗುತ್ತದೆ. ಈ ಶುಭ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಪೋಷಕರು, ಯುವಕರು, ಮಕ್ಕಳು ಹಾಗೂ ಎಲ್‌ಬಿಎಸ್ ನಗರದ ನಿವಾಸಿಗಳಿಗೆ ಮಸೀದಿ-ಎ-ನೂರ್ ಕಮಿಟಿಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಈದ್-ಎ-ಮಿಲಾದ್-ಉನ್-ನಬಿ ಹಬ್ಬದ ಶುಭಾಶಯಗಳನ್ನು ಸಲ್ಲಿಸಲಾಗುತ್ತದೆ. ಮಸೀದಿ-ಎ-ನೂರ್ ಕಮಿಟಿ ಎಲ್‌ಬಿಎಸ್ ನಗರ, ರಾಯಚೂರು2
- ಬಿಹಾರ್ ರಾಜ್ಯದಲ್ಲಿ ಪ್ರತಿ ಭಟನೆ ಮಾಡಿದ 6-ವರ್ಷದ ಬಾಲಕನಿಗೆ ಪೊಲೀಸ್ ಅರೆಸ್ಟ್ ಮಾಡಿದ್ದಾರೆ1