logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿಕಾರಿಪುರ ಪಟ್ಟಣದ ವಾರ್ಷಿಕೋತ್ಸವ ಹಾಗೂ ಪದವಿ ಪ್ರಧಾನ ಸಮಾರಂಭ ಉದ್ಘಾಟಿಸಿದ ತಹಶೀಲ್ದಾರ್ ಶ್ರೀಮತಿ ವಾಣಿ .ಯು ಶಿಕಾರಿಪುರ .ವಾರ್ಷಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭ "ಯುವ ಜನತೆಯೇ ದೇಶದ ಭವಿಷ್ಯದ ಪರಿವರ್ತನಾಕಾರರು, ಸೃಷ್ಟಿಕರ್ತರು, ನಿರ್ಮಾತೃಗಳು ಹಾಗೂ ನಾಯಕರು. ಆದರೆ ಅವರಿಗೆ ಸೂಕ್ತ ಶಿಕ್ಷಣ, ಕೌಶಲಗಳು ಮತ್ತು ಉತ್ತಮ ಆರೋಗ್ಯ ದಕ್ಕಿದಾಗ ಮಾತ್ರ ಅವರು ದೇಶದ ಭವಿಷ್ಯ ಬದಲಿಸಬಲ್ಲರು" ಎಂದು ಶಿಕಾರಿಪುರದ ಮಾನ್ಯ ತಹಶೀಲ್ದಾರ್ ಶ್ರೀಮತಿ ವಾಣಿ. ಯು ಹೇಳಿದರು. ಪಟ್ಟಣದ ಕುಮದ್ವತಿ ಪ್ರಥಮ ದರ್ಜೆ ಕಾಲೇಜು ಮತ್ತು ಕುಮದ್ವತಿ ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು "ಸವಾಲುಗಳ ನಡುವೆಯೂ ಯುವಕರು ಬದಲಾವಣೆಗಳಿಗೆ ಹೊಂದಿಕೊಳ್ಳುವುದಷ್ಟೇ ಅಲ್ಲ, ಹೊಸ ಮಾನದಂಡಗಳನ್ನು ಸ್ಥಾಪಿಸುವ ವಿಶ್ವಾಸವಿರಬೇಕು. ಸಕಾರಾತ್ಮಕ ಚಿಂತನೆಯುಳ್ಳ ಯುವ ಜನರೇ ದೇಶದ ನಿಜವಾದ ಶಕ್ತಿ. ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಇಂದಿನಿಂದಲೇ ಆರಂಭಿಸಿದರೆ ಉನ್ನತ ಸ್ಥಾನವನ್ನು ಅಲಂಕರಿಸಲು ಸಾಧ್ಯ" ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರತಿನಿಧಿಗಳು ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ಶಿವಕುಮಾರ್ ಜಿಎಸ್ ಮಾತನಾಡಿ "ಭಾರತದ ಯುವಜನತೆ ಅತ್ಯಂತ ಬೆಲೆ ಬಾಳುವ ಆಸ್ತಿಯಷ್ಟೇ ಅಲ್ಲ. ಅತ್ಯಂತ ಭರವಸೆದಾಯಕ ಭಾಗವೂ ಹೌದು. ಇದು ದೇಶಕ್ಕೆ ವಿಶಿಷ್ಟ ಜನಸಂಖ್ಯಾ ಅನುಕೂಲತೆ ಒದಗಿಸಿದೆ. ನಿಜವಾದ ನಾಯಕತ್ವವು ಧೈರ್ಯ, ಸಾಮರ್ಥ್ಯ ಮತ್ತು ಸ್ಪಷ್ಟ ದೃಷ್ಟಿಕೋನದ ಮೇಲೆ ನಿರ್ಮಾಣವಾಗಿರುತ್ತದೆ. ಯುವಜನತೆಗೆ ಹೆಚ್ಚು ಮಾರ್ಗದರ್ಶನ ಮತ್ತು ವೃತ್ತಿ ಸಮಾಲೋಚನೆಗಳ ಅವಶ್ಯಕತೆಯಿದ್ದು ಯುವಕರು ತಮ್ಮನ್ನು ತಾವು ಮೌಲ್ಯಮಾಪನಕ್ಕೆ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ" ಎಂದು ಹೇಳಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಪ್ರಾಚಾರ್ಯರಾದ ಡಾ ರವೀಂದ್ರ ಕೆಸಿ "ಹೊಸ ತಾಂತ್ರಿಕ ಕೌಶಲ್ಯಗಳನ್ನು ಕಲಿಯಲು ಯುವಜನತೆ ಸಿದ್ಧಗೊಳ್ಳಬೇಕು. ಸದ್ಯ ಇರುವ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯ ಅರಿವಿನೊಂದಿಗೆ ಯುವಜನತೆ ಹೆಜ್ಜೆ ಹಾಕಿದರೆ ಮಾತ್ರ ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ" ಎಂದರು. ಇದೇ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಕೋಟೋಜಿರಾವ್ ಆರ್ ಹಾಗೂ ಅಂತಿಮ ವರ್ಷದ ಬಿಕಾಂ, ಬಿಎಸ್ಸಿ ಹಾಗೂ ಎಂಕಾಂ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು ಮತ್ತು ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪದಕಗಳನ್ನು ವಿತರಿಸಲಾಯಿತು. ವಾರ್ಷಿಕ ವರದಿಯನ್ನು ಉಪನ್ಯಾಸಕಿ ಪೂರ್ಣಿಮಾ ಹೆಚ್ ಆರ್ ಓದಿದರು. ಪ್ರಕಾಶ್ ಉಪಾಧ್ಯಾಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿ ಕು. ಅಕ್ಷತಾ, ಉಪನ್ಯಾಸಕಿ ಅಶ್ವಿನಿ ಹೆಚ್ ವಿ. ಧಾನೇಶ್ವರಿ ರಮ್ಯಾ ಹೆಚ್ ಆರ್ ಉಪಸ್ಥಿತರಿದ್ದರು.

18 hrs ago
user_Press Narashimha swamy SN
Press Narashimha swamy SN
ಶಿಕಾರಿಪುರ, ಶಿವಮೊಗ್ಗ, ಕರ್ನಾಟಕ•
18 hrs ago
228fcd9d-4653-42f6-b4da-b3f09a7e1750

ಶಿಕಾರಿಪುರ ಪಟ್ಟಣದ ವಾರ್ಷಿಕೋತ್ಸವ ಹಾಗೂ ಪದವಿ ಪ್ರಧಾನ ಸಮಾರಂಭ ಉದ್ಘಾಟಿಸಿದ ತಹಶೀಲ್ದಾರ್ ಶ್ರೀಮತಿ ವಾಣಿ .ಯು ಶಿಕಾರಿಪುರ .ವಾರ್ಷಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭ "ಯುವ ಜನತೆಯೇ ದೇಶದ ಭವಿಷ್ಯದ ಪರಿವರ್ತನಾಕಾರರು, ಸೃಷ್ಟಿಕರ್ತರು, ನಿರ್ಮಾತೃಗಳು ಹಾಗೂ ನಾಯಕರು. ಆದರೆ ಅವರಿಗೆ ಸೂಕ್ತ ಶಿಕ್ಷಣ, ಕೌಶಲಗಳು ಮತ್ತು ಉತ್ತಮ ಆರೋಗ್ಯ ದಕ್ಕಿದಾಗ ಮಾತ್ರ ಅವರು ದೇಶದ ಭವಿಷ್ಯ ಬದಲಿಸಬಲ್ಲರು" ಎಂದು ಶಿಕಾರಿಪುರದ ಮಾನ್ಯ ತಹಶೀಲ್ದಾರ್ ಶ್ರೀಮತಿ ವಾಣಿ. ಯು ಹೇಳಿದರು. ಪಟ್ಟಣದ ಕುಮದ್ವತಿ ಪ್ರಥಮ ದರ್ಜೆ ಕಾಲೇಜು ಮತ್ತು ಕುಮದ್ವತಿ ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ

c171cbea-32f4-4116-87a3-430346d55034

ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು "ಸವಾಲುಗಳ ನಡುವೆಯೂ ಯುವಕರು ಬದಲಾವಣೆಗಳಿಗೆ ಹೊಂದಿಕೊಳ್ಳುವುದಷ್ಟೇ ಅಲ್ಲ, ಹೊಸ ಮಾನದಂಡಗಳನ್ನು ಸ್ಥಾಪಿಸುವ ವಿಶ್ವಾಸವಿರಬೇಕು. ಸಕಾರಾತ್ಮಕ ಚಿಂತನೆಯುಳ್ಳ ಯುವ ಜನರೇ ದೇಶದ ನಿಜವಾದ ಶಕ್ತಿ. ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಇಂದಿನಿಂದಲೇ ಆರಂಭಿಸಿದರೆ ಉನ್ನತ ಸ್ಥಾನವನ್ನು ಅಲಂಕರಿಸಲು ಸಾಧ್ಯ" ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರತಿನಿಧಿಗಳು ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ಶಿವಕುಮಾರ್ ಜಿಎಸ್ ಮಾತನಾಡಿ "ಭಾರತದ ಯುವಜನತೆ

431f30f7-a8ea-4694-a872-1da471d9b2b8

ಅತ್ಯಂತ ಬೆಲೆ ಬಾಳುವ ಆಸ್ತಿಯಷ್ಟೇ ಅಲ್ಲ. ಅತ್ಯಂತ ಭರವಸೆದಾಯಕ ಭಾಗವೂ ಹೌದು. ಇದು ದೇಶಕ್ಕೆ ವಿಶಿಷ್ಟ ಜನಸಂಖ್ಯಾ ಅನುಕೂಲತೆ ಒದಗಿಸಿದೆ. ನಿಜವಾದ ನಾಯಕತ್ವವು ಧೈರ್ಯ, ಸಾಮರ್ಥ್ಯ ಮತ್ತು ಸ್ಪಷ್ಟ ದೃಷ್ಟಿಕೋನದ ಮೇಲೆ ನಿರ್ಮಾಣವಾಗಿರುತ್ತದೆ. ಯುವಜನತೆಗೆ ಹೆಚ್ಚು ಮಾರ್ಗದರ್ಶನ ಮತ್ತು ವೃತ್ತಿ ಸಮಾಲೋಚನೆಗಳ ಅವಶ್ಯಕತೆಯಿದ್ದು ಯುವಕರು ತಮ್ಮನ್ನು ತಾವು ಮೌಲ್ಯಮಾಪನಕ್ಕೆ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ" ಎಂದು ಹೇಳಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಪ್ರಾಚಾರ್ಯರಾದ ಡಾ ರವೀಂದ್ರ ಕೆಸಿ "ಹೊಸ ತಾಂತ್ರಿಕ ಕೌಶಲ್ಯಗಳನ್ನು ಕಲಿಯಲು ಯುವಜನತೆ ಸಿದ್ಧಗೊಳ್ಳಬೇಕು. ಸದ್ಯ ಇರುವ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯ ಅರಿವಿನೊಂದಿಗೆ ಯುವಜನತೆ

3b844613-2b90-4c59-953c-6ab84fae409b

ಹೆಜ್ಜೆ ಹಾಕಿದರೆ ಮಾತ್ರ ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ" ಎಂದರು. ಇದೇ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಕೋಟೋಜಿರಾವ್ ಆರ್ ಹಾಗೂ ಅಂತಿಮ ವರ್ಷದ ಬಿಕಾಂ, ಬಿಎಸ್ಸಿ ಹಾಗೂ ಎಂಕಾಂ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು ಮತ್ತು ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪದಕಗಳನ್ನು ವಿತರಿಸಲಾಯಿತು. ವಾರ್ಷಿಕ ವರದಿಯನ್ನು ಉಪನ್ಯಾಸಕಿ ಪೂರ್ಣಿಮಾ ಹೆಚ್ ಆರ್ ಓದಿದರು. ಪ್ರಕಾಶ್ ಉಪಾಧ್ಯಾಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿ ಕು. ಅಕ್ಷತಾ, ಉಪನ್ಯಾಸಕಿ ಅಶ್ವಿನಿ ಹೆಚ್ ವಿ. ಧಾನೇಶ್ವರಿ ರಮ್ಯಾ ಹೆಚ್ ಆರ್ ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಹೊಳಲ್ಕೆರೆ ಪಟ್ಟಣದಲ್ಲಿ ಗ್ಯಾಸ್ ಸಿಲಿಂಡರ್ ನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರಾತ್ರಿಯಿಡೀ ನಿದ್ದೆಗೆಟ್ಟು ಕಾಯುವ ಪರಿಸ್ಥಿತಿ ಬಂದೊದದಗಿದೆ. ಹೊಳಲ್ಕೆರೆ ಪಟ್ಟಣದ ಕೊಟ್ರೆ ನಂಜಪ್ಪ ಕಾಲೇಜು ಆವರಣದಲ್ಲಿ ಈ ಒಂದು ದೃಶ್ಯಗಳು ಕಂಡು ಬಂದಿದ್ದು ಗ್ಯಾಸ್ ಏಜೆನ್ಸಿ ವಿರುದ್ಧ ಸಾರ್ವಜನಿಕರು ಹಿಡಿ ಶಾಪ ಹಾಕುವಂತಾಗಿದೆ.
    1
    ಹೊಳಲ್ಕೆರೆ ಪಟ್ಟಣದಲ್ಲಿ ಗ್ಯಾಸ್ ಸಿಲಿಂಡರ್ ನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರಾತ್ರಿಯಿಡೀ ನಿದ್ದೆಗೆಟ್ಟು ಕಾಯುವ ಪರಿಸ್ಥಿತಿ ಬಂದೊದದಗಿದೆ. ಹೊಳಲ್ಕೆರೆ ಪಟ್ಟಣದ ಕೊಟ್ರೆ ನಂಜಪ್ಪ ಕಾಲೇಜು ಆವರಣದಲ್ಲಿ ಈ ಒಂದು ದೃಶ್ಯಗಳು ಕಂಡು ಬಂದಿದ್ದು ಗ್ಯಾಸ್ ಏಜೆನ್ಸಿ ವಿರುದ್ಧ ಸಾರ್ವಜನಿಕರು ಹಿಡಿ ಶಾಪ ಹಾಕುವಂತಾಗಿದೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    22 hrs ago
  • ಏ. 20 : ಅರಸೀಕೆರೆ ತಾಲೂಕು ರಾಮಸಾಗರ ಗ್ರಾಮದ ಬಸವ ತತ್ವ ಪ್ರಸಾರ ಕೇಂದ್ರದಲ್ಲಿ ಶರಣ ಸಿದ್ದಪ್ಪ ಶರಣೆ ಮಲ್ಲಮ್ಮನವರು ಸ್ಥಾಪಿಸಿರುವ ಶ್ರೀ ಬಸವ ತತ್ವ ಪ್ರಸಾರ ಕೇಂದ್ರವನ್ನು 2013ರಲ್ಲಿ 12ನೇ ಶತಮಾನದ ಆಗಿಹೋದ ಶರಣರ ಆಚರಣೆ ಅನುಭಾವ, ಅನುಕರಣೆ, ಪ್ರಚಾರಕ್ಕೋಸ್ಕರ ಸ್ಥಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ಯಾರ ಸಹಾಯವಿಲ್ಲದೆ ತನು-ಮನ ಧನವನ್ನು ಬಸವ ತತ್ವ ಪ್ರಚಾರಕ್ಕೆ ಮುಡುಪಾಗಿಟ್ಟಂತಹ ದಂಪತಿಗಳಿವರು. ಈವರು ಸ್ಥಾಪಿಸಲ್ಪಟ್ಟ ಬಸವ ತತ್ವ ಪ್ರಸಾರ ಕೇಂದ್ರದಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆ ಮಾಡಲಾಯಿತು. ಪ್ರತಿ ತಿಂಗಳು ಒಂದರಂದು ಲಿಂಗ ಪೂಜೆ, ಅನುಭಾವ, ಪ್ರಸಾದ, ಪ್ರಚಾರ ಈತರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಅವರ ಈ ಕಾರ್ಯಕ್ರಮಗಳಿಗೆ ನಾವೆಲ್ಲರೂ ಅಭಿನಂದಿಸೋಣ. ಇಂದು ಈ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಶರಣ ಹಾಲಪ್ಪ ಹಿರಿಯೂರ್, ಶರಣ ಸಿದ್ದೇಶ, ಪುಟಾಣಿ ಮಕ್ಕಳು ಹಾಗೂ ಶರಣ ಶ್ರೀ ವಿನಯ್ ಪಾಟೀಲ್ ರವರು ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ರಾಮಸಾಗರ ಗ್ರಾಮಸ್ಥರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
    2
    ಏ. 20 : ಅರಸೀಕೆರೆ ತಾಲೂಕು ರಾಮಸಾಗರ ಗ್ರಾಮದ ಬಸವ ತತ್ವ ಪ್ರಸಾರ ಕೇಂದ್ರದಲ್ಲಿ ಶರಣ ಸಿದ್ದಪ್ಪ ಶರಣೆ ಮಲ್ಲಮ್ಮನವರು ಸ್ಥಾಪಿಸಿರುವ  ಶ್ರೀ ಬಸವ ತತ್ವ ಪ್ರಸಾರ ಕೇಂದ್ರವನ್ನು 2013ರಲ್ಲಿ 12ನೇ ಶತಮಾನದ ಆಗಿಹೋದ ಶರಣರ ಆಚರಣೆ ಅನುಭಾವ, ಅನುಕರಣೆ, ಪ್ರಚಾರಕ್ಕೋಸ್ಕರ ಸ್ಥಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ಯಾರ ಸಹಾಯವಿಲ್ಲದೆ ತನು-ಮನ ಧನವನ್ನು ಬಸವ ತತ್ವ ಪ್ರಚಾರಕ್ಕೆ ಮುಡುಪಾಗಿಟ್ಟಂತಹ ದಂಪತಿಗಳಿವರು. ಈವರು ಸ್ಥಾಪಿಸಲ್ಪಟ್ಟ ಬಸವ ತತ್ವ ಪ್ರಸಾರ ಕೇಂದ್ರದಲ್ಲಿ  ಅದ್ದೂರಿಯಾಗಿ ಬಸವ ಜಯಂತಿ ಆಚರಣೆ ಮಾಡಲಾಯಿತು. ಪ್ರತಿ ತಿಂಗಳು ಒಂದರಂದು ಲಿಂಗ ಪೂಜೆ, ಅನುಭಾವ, ಪ್ರಸಾದ, ಪ್ರಚಾರ ಈತರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಅವರ ಈ ಕಾರ್ಯಕ್ರಮಗಳಿಗೆ ನಾವೆಲ್ಲರೂ ಅಭಿನಂದಿಸೋಣ. ಇಂದು ಈ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಶರಣ ಹಾಲಪ್ಪ ಹಿರಿಯೂರ್, ಶರಣ ಸಿದ್ದೇಶ,  ಪುಟಾಣಿ ಮಕ್ಕಳು ಹಾಗೂ ಶರಣ ಶ್ರೀ ವಿನಯ್ ಪಾಟೀಲ್ ರವರು ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ರಾಮಸಾಗರ ಗ್ರಾಮಸ್ಥರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
    user_Top 1 Digital Marketing
    Top 1 Digital Marketing
    Graphic designer ಹಾಸನ, ಹಾಸನ, ಕರ್ನಾಟಕ•
    1 hr ago
  • Post by Onlinetv24x7
    1
    Post by Onlinetv24x7
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    2 hrs ago
  • Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    1
    Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    user_✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    Auto parts store ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    5 hrs ago
  • ಕುಂದಗೋಳ: ತಾಲ್ಲೂಕಿನ ಹಿರೇನರ್ತಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ತಲೆದೋರಿದ ಹಳೆಯ ದ್ವೇಷವೊಂದು ವಿಕೋಪಕ್ಕೆ ತಿರುಗಿದ್ದು, ಒಂದೇ ಮನೆತನದವರ ನಡುವಿನ ಜಗಳದಲ್ಲಿ ಮುಂದುವರೆದು ಹಲ್ಲೆಯಲ್ಲಿ ಅಂತ್ಯಗೊಂಡಿದೆ. ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಈ ಭೀಕರ ಗಲಾಟೆಯಲ್ಲಿ ಕರಿಯಪ್ಪಗೌಡ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನದ ವೇಳೆಗೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಜಾಗದ ವಿಷಯವಾಗಿ ಮಾತಿಗೆ ಮಾತು ಬೆಳೆದು, ಒಂದೇ ಮನೆತನದ ಅಣ್ಣತಮ್ಮಂದಿರಾದ ಪ್ರಜ್ವಲ್ ಗೌಡ , ಸಿದ್ದನಗೌಡ ಹಾಗೂ ಶಿವನಗೌಡ (ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳು) ನಡುವೆ ಸಂಘರ್ಷ ಏರ್ಪಟ್ಟಿದೆ. ಕರಿಯಪ್ಪಗೌಡ ಅವರು ಬಣವೆ ಒಟ್ಟುತ್ತಿದ್ದ ಸಮಯದಲ್ಲಿ ಸ್ಥಳಕ್ಕೆ ಬಂದ ಪ್ರಜ್ವಲ್ ಗೌಡ ಹಾಗೂ ಆತನ ಸಹಚರರು, ಕಲ್ಲು ಮತ್ತು ಬಡಿಗೆಗಳಿಂದ ಏಕಾಏಕಿ ಅಟ್ಟಹಾಸ ಮೆರೆದಿದ್ದಾರೆ ಎಂದು ಸ್ವತಃ ಹಲ್ಲೆಗೊಳಗಾದ ಕರಿಯಪ್ಪಗೌಡರು ತಮ್ಮ ನೋವಿನ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಆರೋಪಿಗಳು ಕರಿಯಪ್ಪಗೌಡರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ, ಅವರ ತಲೆ ಹಾಗೂ ಮೈಮೇಲೆ ರಕ್ತಸಿಕ್ತ ಗಾಯಗಳಾಗಿವೆ. ರಕ್ತದ ಘಾಯದಿಂದ ಬಿದ್ದಿದ್ದ ಅವರನ್ನು ಗ್ರಾಮಸ್ಥರು ಕೂಡಲೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಗಾಯಾಳು ಕರಿಯಪ್ಪಗೌಡರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಸದ್ಯ ಕುಂದಗೋಲ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಯತ್ತಿದ್ದು ಇದು ಎಪ್ ಆಯ್ ಆರ್ ಆಗುತ್ತಾ ರಾಜಿ ಸಂಧಾನದ ಮೂಲಕ ಇಥ್ಯರ್ಥ ಆಗುತ್ತದೆಯಾ ಎಂದುದನ್ನು ಕಾದು ನೋಡಬೇಕು. ಘಟನೆಯಿಂದಾಗಿ ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
    1
    ಕುಂದಗೋಳ: ತಾಲ್ಲೂಕಿನ ಹಿರೇನರ್ತಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ತಲೆದೋರಿದ ಹಳೆಯ ದ್ವೇಷವೊಂದು ವಿಕೋಪಕ್ಕೆ ತಿರುಗಿದ್ದು, ಒಂದೇ ಮನೆತನದವರ ನಡುವಿನ ಜಗಳದಲ್ಲಿ ಮುಂದುವರೆದು ಹಲ್ಲೆಯಲ್ಲಿ ಅಂತ್ಯಗೊಂಡಿದೆ. ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಈ ಭೀಕರ ಗಲಾಟೆಯಲ್ಲಿ ಕರಿಯಪ್ಪಗೌಡ  ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೋಮವಾರ ಮಧ್ಯಾಹ್ನದ ವೇಳೆಗೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಜಾಗದ ವಿಷಯವಾಗಿ ಮಾತಿಗೆ ಮಾತು ಬೆಳೆದು, ಒಂದೇ ಮನೆತನದ ಅಣ್ಣತಮ್ಮಂದಿರಾದ ಪ್ರಜ್ವಲ್ ಗೌಡ , ಸಿದ್ದನಗೌಡ  ಹಾಗೂ ಶಿವನಗೌಡ  (ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳು) ನಡುವೆ ಸಂಘರ್ಷ ಏರ್ಪಟ್ಟಿದೆ. ಕರಿಯಪ್ಪಗೌಡ ಅವರು ಬಣವೆ ಒಟ್ಟುತ್ತಿದ್ದ ಸಮಯದಲ್ಲಿ ಸ್ಥಳಕ್ಕೆ ಬಂದ ಪ್ರಜ್ವಲ್ ಗೌಡ ಹಾಗೂ ಆತನ ಸಹಚರರು, ಕಲ್ಲು ಮತ್ತು ಬಡಿಗೆಗಳಿಂದ ಏಕಾಏಕಿ ಅಟ್ಟಹಾಸ ಮೆರೆದಿದ್ದಾರೆ ಎಂದು ಸ್ವತಃ ಹಲ್ಲೆಗೊಳಗಾದ ಕರಿಯಪ್ಪಗೌಡರು ತಮ್ಮ ನೋವಿನ ಸಂಗತಿಯನ್ನು ಹೇಳಿಕೊಂಡಿದ್ದಾರೆ.
ಆರೋಪಿಗಳು ಕರಿಯಪ್ಪಗೌಡರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ, ಅವರ ತಲೆ ಹಾಗೂ ಮೈಮೇಲೆ ರಕ್ತಸಿಕ್ತ ಗಾಯಗಳಾಗಿವೆ. ರಕ್ತದ ಘಾಯದಿಂದ ಬಿದ್ದಿದ್ದ ಅವರನ್ನು ಗ್ರಾಮಸ್ಥರು ಕೂಡಲೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಗಾಯಾಳು ಕರಿಯಪ್ಪಗೌಡರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಸದ್ಯ ಕುಂದಗೋಲ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಯತ್ತಿದ್ದು ಇದು ಎಪ್ ಆಯ್ ಆರ್ ಆಗುತ್ತಾ ರಾಜಿ ಸಂಧಾನದ ಮೂಲಕ ಇಥ್ಯರ್ಥ ಆಗುತ್ತದೆಯಾ ಎಂದುದನ್ನು ಕಾದು ನೋಡಬೇಕು.  ಘಟನೆಯಿಂದಾಗಿ ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
    user_Girish Ghatage
    Girish Ghatage
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    1 hr ago
  • ಧಾರವಾಡ: ಧಾರವಾಡ ಆಕಾಶವಾಣಿ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಸ್ಥಳಾಂತರಿಸುವುದಾಗಿ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೆರೆ ಆಗ್ರಹಿಸಿದರು. ಧಾರವಾಡ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಪ್ರಾದೇಶಿಕ ಸುದ್ದಿ ವಿಭಾಗಕ್ಕೆ 45 ವರ್ಷಗಳ ಇತಿಹಾಸವಿದೆ. ಈ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿದರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಕಾಶವಾಣಿ ಸುದ್ದಿ ವಿಭಾಗವನ್ನು ಧಾರವಾಡದಲ್ಲಿ ಉಳಿಸಿಕೊಳ್ಳಲು ಕೇಂದ್ರ ಸಚಿವರಿಗೆ ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ಒತ್ತಡ ತರಲಾಗುವುದು. ಈ ಕುರಿತು ಕರ್ನಾಟಕ ವಿದ್ಯಾವರ್ಧಕ ಸಂಘವು ಶೀಘ್ರ ಸಭೆ ಕರೆದು ನಿರ್ಧಾರ ಕೈಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಹಿರೇಮಠ, ವೀರಣ್ಣ ಒಡ್ಡೀನ ಸೇರಿದಂತೆ ಇತರರಿದ್ದರು.
    1
    ಧಾರವಾಡ: ಧಾರವಾಡ ಆಕಾಶವಾಣಿ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಸ್ಥಳಾಂತರಿಸುವುದಾಗಿ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೆರೆ ಆಗ್ರಹಿಸಿದರು.
ಧಾರವಾಡ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಪ್ರಾದೇಶಿಕ ಸುದ್ದಿ ವಿಭಾಗಕ್ಕೆ 45 ವರ್ಷಗಳ ಇತಿಹಾಸವಿದೆ. ಈ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿದರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಆಕಾಶವಾಣಿ ಸುದ್ದಿ ವಿಭಾಗವನ್ನು ಧಾರವಾಡದಲ್ಲಿ ಉಳಿಸಿಕೊಳ್ಳಲು ಕೇಂದ್ರ ಸಚಿವರಿಗೆ ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ಒತ್ತಡ ತರಲಾಗುವುದು. ಈ ಕುರಿತು ಕರ್ನಾಟಕ ವಿದ್ಯಾವರ್ಧಕ ಸಂಘವು ಶೀಘ್ರ ಸಭೆ ಕರೆದು ನಿರ್ಧಾರ ಕೈಗೊಳ್ಳಲಿದೆ ಎಂದರು. 
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಹಿರೇಮಠ, ವೀರಣ್ಣ ಒಡ್ಡೀನ ಸೇರಿದಂತೆ ಇತರರಿದ್ದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    2 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    3 hrs ago
  • ಚಳ್ಳಕೆರೆ ನಗರದಲ್ಲಿ ಬಕ್ತಿ ಭಾವದಿಂದ ಬಸವೇಶ್ವರ ಜಯಂತಿ ಕಾರ್ಯಕ್ರಮ ನೆರವೇರಿದೆ. ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಜಯಂತಿ ಅಂಗವಾಗಿ ವೀರಶೈವ ಲಿಂಗಾಯತ ಸಮುದಾಯದ ವತಿಯಿಂದ ನೂತನ ಶ್ರೀ ಅಶ್ವರೂಢ ಬಸವೇಶ್ವರ ಪುತ್ತಳಿಯ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಭಕ್ತಿ ಭಾವದಿಂದ ನೆರವೇರಿತು.
    1
    ಚಳ್ಳಕೆರೆ ನಗರದಲ್ಲಿ ಬಕ್ತಿ ಭಾವದಿಂದ ಬಸವೇಶ್ವರ ಜಯಂತಿ ಕಾರ್ಯಕ್ರಮ ನೆರವೇರಿದೆ. ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಜಯಂತಿ ಅಂಗವಾಗಿ ವೀರಶೈವ ಲಿಂಗಾಯತ ಸಮುದಾಯದ ವತಿಯಿಂದ ನೂತನ ಶ್ರೀ ಅಶ್ವರೂಢ ಬಸವೇಶ್ವರ ಪುತ್ತಳಿಯ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಭಕ್ತಿ ಭಾವದಿಂದ ನೆರವೇರಿತು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    23 hrs ago
  • ಕಲಘಟಗಿ: ಮಧ್ಯಪಾನ ಸೇವಿಸಿ ವಿದ್ಯುತ್ ಕಂಬ ಏರಿ ಕುಳಿತ ಯುವಕನನ್ನು ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಯುವಕನ ಮನವೊಲಿಸಿ ಸುರಕ್ಷಿತವಾಗಿ ಕೆಳಗೆ ಇಳಿಸಿದ ಘಟನೆ ಶನಿವಾರ ರಾತ್ರಿ ಜರುಗಿದೆ. ತಾಲ್ಲೂಕಿನ ಕಾಡನಕೊಪ್ಪ ಗ್ರಾಮದ ಮಂಜುನಾಥ ಸಿದ್ದಪ್ಪ ಜಮ್ಮಿಹಾಳ (20) ಎಂಬ ಯುವಕನೇ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಹೈ ವೋಲ್ಟೇಜ್ ವಿದ್ಯುತ್ ಕಂಬದ 150 ಅಡಿ ಎತ್ತರದಲ್ಲಿ ಏರಿ ಕುಳಿತ್ತಿದ್ದನು. 2 ಘಂಟೆಗಳ ಕಾಲ ಅಗ್ನಿ ಶಾಮಕ ಅಧಿಕಾರಿಗಳು ಮನವೊಲಿಸಿದ ನಂತರ ಯುವಕನಿಗೆ ತೊಂದರೆಯಾಗದಂತೆ ಸುರಕ್ಷಿತವಾಗಿ ಕೆಳಗೆ ಇಳಿಸಿ ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಾಲ್ಲೂಕ ಅಗ್ನಿಶಾಮಕ ಠಾಣಾಧಿಕಾರಿ ಅರುಣ ಮಾಳುದೇ ತಿಳಿಸಿದರು. ಅಗ್ನಿಶಾಮಕ ಠಾಣೆ ಸಿಬ್ಬಂದಿಗಳಾದ ಥಾವರು ರಾಠೋಡ ಮಹೇಶ ವಡ್ಡರ,ಉಮೇಶ ತೆಂಬದ,ಸಂಜು ದೊಡಮನಿ, ಸಂತೋಷ ಉಗ್ನಿಕೇರಿ,ಈರಣ್ಣ ಮಠದ,ಅನಿಲ ಲೋಖಂಡೆ ಇದ್ದರು.
    1
    ಕಲಘಟಗಿ: ಮಧ್ಯಪಾನ ಸೇವಿಸಿ ವಿದ್ಯುತ್ ಕಂಬ ಏರಿ ಕುಳಿತ ಯುವಕನನ್ನು ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಯುವಕನ ಮನವೊಲಿಸಿ ಸುರಕ್ಷಿತವಾಗಿ ಕೆಳಗೆ ಇಳಿಸಿದ ಘಟನೆ ಶನಿವಾರ ರಾತ್ರಿ ಜರುಗಿದೆ.
ತಾಲ್ಲೂಕಿನ ಕಾಡನಕೊಪ್ಪ ಗ್ರಾಮದ  ಮಂಜುನಾಥ ಸಿದ್ದಪ್ಪ ಜಮ್ಮಿಹಾಳ (20) ಎಂಬ ಯುವಕನೇ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಹೈ ವೋಲ್ಟೇಜ್ ವಿದ್ಯುತ್ ಕಂಬದ 150 ಅಡಿ ಎತ್ತರದಲ್ಲಿ ಏರಿ ಕುಳಿತ್ತಿದ್ದನು.
2 ಘಂಟೆಗಳ ಕಾಲ ಅಗ್ನಿ ಶಾಮಕ ಅಧಿಕಾರಿಗಳು ಮನವೊಲಿಸಿದ ನಂತರ ಯುವಕನಿಗೆ ತೊಂದರೆಯಾಗದಂತೆ ಸುರಕ್ಷಿತವಾಗಿ ಕೆಳಗೆ ಇಳಿಸಿ ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಾಲ್ಲೂಕ ಅಗ್ನಿಶಾಮಕ ಠಾಣಾಧಿಕಾರಿ ಅರುಣ ಮಾಳುದೇ ತಿಳಿಸಿದರು.
ಅಗ್ನಿಶಾಮಕ ಠಾಣೆ ಸಿಬ್ಬಂದಿಗಳಾದ ಥಾವರು ರಾಠೋಡ ಮಹೇಶ ವಡ್ಡರ,ಉಮೇಶ ತೆಂಬದ,ಸಂಜು ದೊಡಮನಿ, ಸಂತೋಷ ಉಗ್ನಿಕೇರಿ,ಈರಣ್ಣ ಮಠದ,ಅನಿಲ ಲೋಖಂಡೆ ಇದ್ದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.