ಡಿಜಿಟಲ್ ಡಿವೈಸ್ ಬಳಸಿ ಇಸ್ಪೀಟ್ ಆಟದಲ್ಲಿ ಎದುರಾಳಿಗಳ ಸೋಲಿಸುತ್ತಿದ್ದ ಐನಾತಿಗಳು ಅಂದರ್ ಬೆಂಗಳೂರು: ಜೂಜಾಟವಾಡುವಾಗ ಡಿಜಿಟಲ್ ಇಸ್ಪೀಟ್ ಸ್ಕ್ಯಾನರ್ ಕಾರ್ಡ್ ಹಾಗೂ ಅತ್ಯಾಧುನಿಕ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಬಳಸಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಬ್ರೇಜ್, ಸೈಯ್ಯದ್ ಅಲಿ, ಅಬತ್ಹಲ್ಲಾ, ನಕೀಬ್ ಹಾಗೂ ಅಬ್ದುಲ್ ಬಂಧಿತರು. ಆರೋಪಿಗಳಿಂದ ಡಿಜಿಟಲ್ ಇಸ್ಪೀಟ್ ಸ್ಕ್ಯಾನರ್‌ಗಳು ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳು, 1 ಕಾರು, 1 ಆಟೋ, 3 ದ್ವಿಚಕ್ರ ವಾಹನಗಳು ಹಾಗೂ 7 ಮೊಬೈಲ್‌ಗಳು ಸೇರಿದಂತೆ ಒಟ್ಟು 50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಲಾಗಿದೆ. ತಂತ್ರಜ್ಞಾನ ಬಳಸಿ ವಂಚಿಸುತ್ತಿದ್ದ ಕಿಲಾಡಿ ಗ್ಯಾಂಗ್: ಇಸ್ಪೀಟ್ ಆಟದ ಅಡ್ಡೆಗಳನ್ನು ಫಿಕ್ಸ್ ಮಾಡುತ್ತಿದ್ದ ಆರೋಪಿಗಳು, ಹಣವಂತರನ್ನೇ ಟಾರ್ಗೆಟ್ ಮಾಡಿ ಆಟಕ್ಕೆ ಆಹ್ವಾನಿಸುತ್ತಿದ್ದರು. ಇಸ್ಪೀಟ್ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಲು ಮೊಬೈಲ್‌ನಂತೆ ಕಾಣುವ ವಿಶೇಷ ಡಿವೈಸ್ ಬಳಸುತ್ತಿದ್ದರು. ಈ ಡಿವೈಸ್‌ಗೆ ಕನೆಕ್ಟ್ ಆಗಲು ಸ್ಮಾರ್ಟ್ ವಾಚ್, ಕಣ್ಣಿಗೆ ಕಾಣಿಸದ ಸಣ್ಣ ಇಯರ್ ಬಡ್ಸ್, ಕಣ್ಣಿನ ಲೆನ್ಸ್ / ಕಾರಿನ ಕೀ ಮಾದರಿಯ ವಸ್ತುಗಳನ್ನು ಧರಿಸುತ್ತಿದ್ದರು. ಇವುಗಳ ಸಹಾಯದಿಂದ ಯಾವ ಕಾರ್ಡ್ ಅಂದರ್ ಆಗುತ್ತದೆ ಹಾಗೂ ಯಾವ ಕಾರ್ಡ್ ಬಾಹರ್ ಆಗುತ್ತದೆ ಎಂಬುದು ಎದುರಾಳಿಗೆ ತಿಳಿಯುವ ಮುನ್ನವೇ ಆರೋಪಿಗಳಿಗೆ ನಿಖರವಾಗಿ ತಿಳಿಯುತ್ತಿತ್ತು. ಆಟದ ಆರಂಭದಲ್ಲಿ ಎದುರಾಳಿಯ ನಂಬಿಕೆ ಗಳಿಸಲು ಉದ್ದೇಶಪೂರ್ವಕವಾಗಿ ಒಂದೆರಡು ಆಟಗಳಲ್ಲಿ ಸೋಲುತ್ತಿದ್ದ ಆರೋಪಿಗಳು ನಂತರ ಸತತವಾಗಿ ಹಣ ಗೆಲ್ಲುವ ಮೂಲಕ ಲಕ್ಷಾಂತರ ರೂಪಾಯಿ ಪಂಗನಾಮ ಹಾಕುತ್ತಿದ್ದರು. ಎದುರಿಗೇ ಕುಳಿತು ಆಡುವವರಿಗೆ ಈ ತಂತ್ರಜ್ಞಾನಾಧಾರಿತ ಮೋಸ ಸ್ವಲ್ಪವೂ ತಿಳಿಯುತ್ತಿರಲಿಲ್ಲ.ಇದೇ ಡಿವೈಸ್‌ಗಳನ್ನ ಇತರರಿಗೂ ಸಹ ಆರೋಪಿಗಳು ಮಾರಾಟ ಮಾಡಿದ್ದರು. ಪ್ರಸ್ತುತ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ.

- ಮೀಸಲಾತಿ ವಿರೋಧಿಗಳ ಷಡ್ಯಂತ್ರಕ್ಕೆ ನಾವುಗಳು ಮನೆಯೋದಿಲ್ಲ City next News 24 7 ಮೀಸಲಾತಿ ವಿರೋಧಿಗಳ ಷಡ್ಯಂತ್ರಕ್ಕೆ ನಾವುಗಳು ಮನೆಯೋದಿಲ್ಲ1
- ಪ್ರಿಯಕರನ ಕಾರಿಗೆ 3,400 ಲಿಪ್‌ಸ್ಟಿಕ್ ಕಿಸ್! ವೈರಲ್ ಟ್ರೆಂಡ್‌ಗೆ ₹5,500 ದಂಡ, ಗುರುತು ತೆರವು! ಪ್ರಿಯಕರನ ಕಾರಿಗೆ 3,400 ಲಿಪ್‌ಸ್ಟಿಕ್ ಕಿಸ್! ವೈರಲ್ ಟ್ರೆಂಡ್‌ಗೆ ₹5,500 ದಂಡ, ಗುರುತು ತೆರವು!1
- ಸಾರ್ವಜನಿಕ ಸ್ಥಳದಲ್ಲಿ ವೈದ್ಯಕೀಯ ತ್ಯಾಜ್ಯ ಸುರಿದ ಹೆಲ್ತ್ ಕೇರ್ ಸೆಂಟರ್‌ಗೆ 40 ಸಾವಿರ ರೂ. ದಂಡ ಬೆಂಗಳೂರು:ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗುರಪ್ಪನಪಾಳ್ಯ ಪ್ರದೇಶದಲ್ಲಿ ನಿಯಮಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ವೈದ್ಯಕೀಯ ತ್ಯಾಜ್ಯವನ್ನು ಸುರಿದ ಕ್ಲಿನಿಕ್‌ಗೆ ದಂಡ ವಿಧಿಸಲಾಗಿದೆ. ಇಂದು ಬೆಳಿಗ್ಗೆ ಬಿಟಿಎಂ ಲೇಔಟ್ 1ನೇ ಹಂತದ ಗುರಪ್ಪನಪಾಳ್ಯದ 9ನೇ ಮುಖ್ಯರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ವೈದ್ಯಕೀಯ ತ್ಯಾಜ್ಯಗಳಾದ ಸೂಜಿಗಳು, ಸಿರಿಂಜ್, ಪ್ಲಾಸ್ಟರ್ ಗಳು, ಮಾತ್ರೆ ಡಬ್ಬಗಳು ಹಾಗೂ ಇನ್ನಿತರ ಅಪಾಯಕಾರಿ ವೈದ್ಯಕೀಯ ತ್ಯಾಜ್ಯಗಳನ್ನು ಸುರಿದಿರುವುದನ್ನ ಗಮನಿಸಿದ ಪೌರಕಾರ್ಮಿಕರು ಮಾರ್ಷಲ್ ಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಮಾರ್ಷಲ್ ಗಳು ತ್ಯಾಜ್ಯಗಳನ್ನು ಪರಿಶೀಲಿಸಿದಾಗ ವೈದ್ಯಕೀಯ ತ್ಯಾಜ್ಯಗಳೊಡನೆ ಹೆಲ್ತ್ ಕೇರ್ ಸೆಂಟರ್ ಪ್ರಿಸ್ಕ್ರಿಪ್ಷನ್ ಪತ್ರಗಳು ಕಂಡುಬಂದಿದ್ದ ಮೇರೆಗೆ ವೈದ್ಯಕೀಯ ತ್ಯಾಜ್ಯ ಸುರಿದಿರುವವರ ಮಾಹಿತಿ ಪತ್ತೆಯಾಗಿರುತ್ತದೆ. ವೈದ್ಯಕೀಯ ತ್ಯಾಜ್ಯವನ್ನು ಬಿಸಾಡಿರುವುದು ಪಾಲಿಕೆಯ ಮಾರ್ಷಲ್‌ಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ಸ್ಥಳಕ್ಕೆ ಧಾವಿಸಿದ ಪಾಲಿಕೆಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್‌ಗಳು, ಸಾರ್ವಜನಿಕರ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುವ ರೀತಿಯಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಸುರಿದಿರುವ ಹೆಲ್ತ್ ಕೇರ್ ಸೆಂಟರ್‌ಗೆ ಸ್ಥಳದಲ್ಲೇ 40,000 ದಂಡ ವಿಧಿಸಿ, ಡಿಜಿಟಲ್ ಪಾವತಿ ಮೂಲಕ ವಸೂಲಿ ಮಾಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಾಲಿಕೆಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್ ಭಾಗವಹಿಸಿದ್ದರು.1
- ಭರದಿಂದ ಸಾಗಿದ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಹೊಸಕೋಟೆ ಪಟ್ಟಣದ ಮಾರುಕಟ್ಟೆ ಪ್ರದೇಶ ಪ್ರಮುಖ ಬೀದಿಗಳಲ್ಲಿ ತೆರವು ಕಾರ್ಯಾಚರಣೆ ಭರದಿಂದ ಸಾಗಿದ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಹೊಸಕೋಟೆ ಪಟ್ಟಣದ ಮಾರುಕಟ್ಟೆ ಪ್ರದೇಶ ಪ್ರಮುಖ ಬೀದಿಗಳಲ್ಲಿ ತೆರವು ಕಾರ್ಯಾಚರಣೆ ಪುಟ್ ಪಾತ್ ರಸ್ತೆಯನ್ನ ಒತ್ತುವರಿ ಮಾಡಿಕೊಂಡಿದ್ದ ಕೆಲ ಅಂಗಡಿಗಳ ಮಾಲೀಕರು ಸೀಮೆಂಟ್ ಮೂಲಕ ನಿರ್ಮಿಸಿ ಕೊಂಡಿದ್ದ ಮೆಟ್ಟಿಲುಗಳನ್ನು ಜೆಸಿಬಿಯಿಂದ ತೆರವು ಕಳೆದ ನಾಲ್ಕು ದಿನಗಳ ಹಿಂದೆಯೇ ಒತ್ತುವರಿ ತೆರವು ಮಾಡುವುದಾಗಿ ಸೂಚಿಸಿದ್ದ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣ2
- **ಶಿಡ್ಲಘಟ್ಟ: ದಿ ಕ್ರೆಸೆಂಟ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ | ಐಜಿಪಿ ಅರುಣ್ ಚಕ್ರವರ್ತಿ ಅವರಿಂದ ಸ್ಪೂರ್ತಿದಾಯಕ ನುಡಿ **ಶಿಡ್ಲಘಟ್ಟ: ದಿ ಕ್ರೆಸೆಂಟ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ | ಐಜಿಪಿ ಅರುಣ್ ಚಕ್ರವರ್ತಿ ಅವರಿಂದ ಸ್ಪೂರ್ತಿದಾಯಕ ನುಡಿ |* "*'ದಿ ಕ್ರೆಸೆಂಟ್ ಶಾಲೆಯ'** ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಈ ಸಮಾರಂಭದಲ್ಲಿ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು, ಪ್ರಗತಿಪರ ಚಿಂತಕರು ಹಾಗೂ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಉದ್ಯಮಿಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಿಕ ಸಂದೇಶ ನೀಡಿದರು.* --- "ಶಿಡ್ಲಘಟ್ಟದ ದಿ ಕ್ರೆಸೆಂಟ್ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ **ಬೆಂಗಳೂರಿನ ಜಯನಗರ ಕಾನೂನು ಮಹಾವಿದ್ಯಾಲಯದ ಪ್ರಗತಿಪರ ಚಿಂತಕರಾದ ರಾಜಣ್ಣ** ಹಾಗೂ ಅವರ ಶಿಷ್ಯರಾದ **ಪೊಲೀಸ್ ಮಹಾ ನಿರ್ದೇಶಕರು (DGP/IGP) ಅರುಣ್ ಚಕ್ರವರ್ತಿ** ಅವರು ಆಗಮಿಸಿ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ಮಹಾ ನಿರ್ದೇಶಕರಾದ ಅರುಣ್ ಚಕ್ರವರ್ತಿ ಅವರು, *'ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ಅವಧಿಯಲ್ಲಿ ಕಠಿಣ ಪರಿಶ್ರಮ ವಹಿಸಿ, ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ತಾವು ಕಲಿತ ಶಾಲೆಗೆ ಹಾಗೂ ಹೆತ್ತ ತಂದೆ-ತಾಯಿಗೆ ಕೀರ್ತಿ ತರಬೇಕು'* ಎಂದು ಸ್ಪೂರ್ತಿದಾಯಕ ಕರೆ ನೀಡಿದರು. ಇದೇ ವೇಳೆ ಮಾತನಾಡಿದ **ದಿ ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಮಹಮ್ಮದ್ ತಮೀಮ್ ಅನ್ಸಾರಿ** ಅವರು, *'ನಮ್ಮ ಶಾಲೆಯ ಉದ್ಘಾಟನೆಗೆ ಆಗಮಿಸಿರುವ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅರುಣ್ ಚಕ್ರವರ್ತಿಯವರಂತೆಯೇ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ಶ್ರೇಷ್ಠ ಹುದ್ದೆಗೇರಬೇಕು'* ಎಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು."* --- "ಈ ಕಾರ್ಯಕ್ರಮದಲ್ಲಿ ತಂತ್ರಜ್ಞಾನ ಹಾಗೂ ಸಾಮಾಜಿಕ ಕ್ಷೇತ್ರದ ಹಲವಾರು ಗಣ್ಯರು ಭಾಗವಹಿಸಿದ್ದರು: ಡಿಸಿ ಆರ್ ಎ ನಲ್ಲಿ ಡಿಸಿಪಿಯಾಗಿ ಕರ್ನಾಟಕ ರಾಜ್ಯದಲ್ಲಿ ದಲಿತರಿಗೆ ಏನು ತೊಂದರೆ ಆಗ್ತಾ ಇದೆ ಅವಳೆ ಎಲ್ಲವನ್ನೂ ಸರಿ ಮಾಡಿ ಉತ್ತಮವಾದ ಸೇವೆಯನ್ನು ಸಲ್ಲಿಸಿದ್ದಾರೆ ನಾಗರಿಕ ಹಕ್ಕು ಜಾರಿ ನಿರ್ದೇಶನಲಯದಲ್ಲಿ ಇದುವರೆಗೂ ಯಾರು ಸಹ ಮಾಡದೇ ಇರತಕ್ಕಂತಹ ಕೆಲಸವನ್ನು ಅರುಣ್ ಚಕ್ರವರ್ತಿ ಅವರು ಮಾಡಿದ್ದಾರೆಂದು ಸುರೇಶ್ ಅವರು ತಿಳಿಸಿದರು ನಂತರ ಅರುಣ್ ಚಕ್ರವರ್ತಿ ಅವರು ಆಶಾಕಿರಣ ಅಂಧ ಮಕ್ಕಳು ಶಾಲೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಕೆ ಕತ್ತರಿಸಿ ಮಕ್ಕಳಿಗೆ ಸಿಹಿ ಹಂಚಿದರು * **ರವಿಶಂಕರ್** - ಸ್ಥಾಪಕ ನಿರ್ದೇಶಕರು, ಆಪ್ಟಿ ಸಾಫ್ಟ್‌ವೇರ್ * **ಅಭಿರಾಮ್ ಸುರೇಶ್** - ಸಿಇಒ, ಎಗ್ನೋಮಿಷಿಯನ್ ರೋಬೋಟಿಕ್ಸ್ ಕಂಪನಿ ಲಿಯೋ ಕ್ಲಬ್ ನ ಅದ್ಯಕ್ಷರಾದ * **ಶ್ರೀಕಾಂತ್ ಲಿಯೋ ಲೋಕೇಶ್** - ಸೇರಿದಂತೆ ಹಲವು ಗಣ್ಯರು, ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು." --- "ಶಿಕ್ಷಣದ ಜೊತೆಗೆ ಉನ್ನತ ಗುರಿ ಮತ್ತು ಸಾಧನೆಯ ಹಾದಿ ತೋರಿಸಿದ ಈ ಉದ್ಘಾಟನಾ ಸಮಾರಂಭವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬಿದೆ. ವರದಿ:- ಅರಿಕೆರೆ ಮುನಿರಾಜು, ಪ್ರಧಾನ ವರದಿಗಾರರು, ಸಮತಾ ನ್ಯೂಸ್, ಶಿಡ್ಲಘಟ್ಟ.** *(ನಿರೂಪಕಿ)* ಇನ್ನಷ್ಟು ತಾಜಾ ಹಾಗೂ ವರದಿಗಳಿಗಾಗಿ 'ಸಮತಾ ನ್ಯೂಸ್' ಯೂಟ್ಯೂಬ್ ಚಾನೆಲ್ ಅನ್ನು ಲೈಕ್ ಮಾಡಿ, ಶೇರ್ ಮಾಡಿ ಮತ್ತು ಸಬ್‌ಸ್ಕ್ರೈಬ್ ಮಾಡಿ. ಧನ್ಯವಾದಗಳು!" --- *(Video Description / Description Box ಗಾಗಿ):** > #Sidlaghatta #ShidlaghattaNews #ArunChakravarthy #CrescentSchool #SantanaNews #KarnatakaNews #SidlaghattaEducation1
- MBBS students felicitation function1
- *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ* *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ* *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ* *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ* *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ*2
- Hazrat Syed Tajuddin Qadri sahab ka DJ Ban ke mamle mein bada byan Hazrat Syed Tajuddin Qadri sahab ka DJ Ban ke mamle mein bada byan1