Shuru
Apke Nagar Ki App…
KRS ಪಕ್ಷದ ವತಿಯಿಂದ ಹಮ್ಮಿಕೊಂಡಿರುವ "#ಮಹಿಳಾಸಮಾವೇಶ"ದಲ್ಲಿ... "ಅಂತಾರಾಷ್ಟ್ರೀಯ ಮಹಿಳಾ ದಿನ"ದ ಶುಭಾಶಯಗಳು. ಯಲಹಂಕ, ಬೆಂಗಳೂರು. 08-03-2026.
B Patil B Patil
KRS ಪಕ್ಷದ ವತಿಯಿಂದ ಹಮ್ಮಿಕೊಂಡಿರುವ "#ಮಹಿಳಾಸಮಾವೇಶ"ದಲ್ಲಿ... "ಅಂತಾರಾಷ್ಟ್ರೀಯ ಮಹಿಳಾ ದಿನ"ದ ಶುಭಾಶಯಗಳು. ಯಲಹಂಕ, ಬೆಂಗಳೂರು. 08-03-2026.
More news from Karnataka and nearby areas
- As of March 5, 2026, the Directorate General of Civil Aviation (DGCA) has declared an 8-kilometre radius around Belagavi's Sambra Airport a Red Zone, strictly banning all drone and Unmanned Aerial Vehicle (UAV) flights.1
- ತೇರದಾಳ: ಹೋಳಿ ಹಬ್ಬದ ವೇಳೆ ಉಂಟಾದ ಜಗಳವು ಸ್ನೇಹಿತನ ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ ತೇರದಾಳ ಪಟ್ಟಣದಲ್ಲಿ ನಡೆದಿದೆ. ರಾಹುಲ್ ಬಾಹುಬಲಿ ಹತ್ಯೆಗೀಡಾದ ಯುವಕನಾಗಿದ್ದು, ಹೋಳಿ ಹಬ್ಬದ ದಿನ ರಾಹುಲ್ ಮತ್ತು ಆತನ ಸ್ನೇಹಿತನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿತ್ತು. ಈ ವಿಚಾರವಾಗಿ ಮಾತುಕತೆ ನಡೆಸಲು ಸ್ನೇಹಿತರು ದೇವಸ್ಥಾನವೊಂದರ ಬಳಿ ಸೇರಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಆರೋಪಿಯು ರಾಹುಲ್ ಕತ್ತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.1
- Post by @april14news1
- ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ಶಿವಯೋಗಮಂದಿರದ ಗೋವು ಶಾಲೆಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಾಗಲವಾಡ ಗ್ರಾಮದ ಶ್ರೀಅಮರೇಗೌಡ್ರ ಬಿಳಿ ಜೋಳದ ಮೇವು ಪೆಂಡಿಗಳನ್ನು ಶಿವಯೋಗಮಂದಿರಕ್ಕೆ ನೀಡಿದ್ದಾರೆ. ಅಮರೇಗೌಡ್ರ ಅವರನ್ನು ಶಿವಯೋಗಮಂದಿರದ ಮ್ಯಾನೇಜರ್ ಅವರು ಸತ್ಕರಿಸಿ ಗೌರವಿಸಿದರು.1
- Post by ನಾಗರಾಜ3
- ವಿಜಯಪುರ: ಮಾರ್ಚ್ 15 ರಂದು ನಗರದಲ್ಲಿ ಪ್ರತಿಭಟನೆ ವಿಜಯಪುರದಲ್ಲಿ ಮಂಗಳವಾರ ಎಐಟಿಯು ಸಂಘಟನೆಯ ರಾಜ್ಯ ಖಜಾಂಚಿ ವೀರೇಶ ಅವರು ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟರೆ ರಾಜ್ಯ ವ್ಯಾಪ್ತಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದಿದ್ದಾರೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಗೆ ತಂದು ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ, ಮಾರ್ಚ್ 15 ರಂದು ವಿಜಯಪುರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.1
- ಬಾಗಲಕೋಟೆ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಕೆ ಫೌಂಡೇಶನ್ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸ್ತ್ರೀ ಸಂಭ್ರಮ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ವಿಜಯಾನಂದ ಕಾಶಪ್ಪನವರ್ ಅವರು “ನಾ ಡ್ರೈವರ” ಹಾಡಿಗೆ ಸಕ್ಕತ್ ಹೆಜ್ಜೆ ಹಾಕಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರ ಜೊತೆ ಉತ್ಸಾಹದಿಂದ ನೃತ್ಯ ಮಾಡಿದ ಅವರು, ವೇದಿಕೆಯಲ್ಲಿ ಹರ್ಷಭರಿತ ವಾತಾವರಣ ನಿರ್ಮಿಸಿದರು. ಅವರ ನೃತ್ಯವನ್ನು ಕಂಡು ಮಹಿಳೆಯರು ಕೈತಟ್ಟಿ ಪ್ರೋತ್ಸಾಹ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದರು.1
- Post by @april14news1
- ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದಲ್ಲಿ ಗ್ರಾಮ ಪಂಚಾಯತ ಹಾಗೂ ಶ್ರೀ ನಿಧಿ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯತ ಒಕ್ಕೂಟ ಇವರ ಆಶ್ರಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಮಾಚ೯ 09 ಸೋಮವಾರ ನಡೆಯಿತು. ಮುಖ್ಯ ಅತಿಥಿಗಳಾಗಿ ತಾಲೂಕಾ ಪಂಚಾಯತ್ ಕಾಯ೯ನಿವಾ೯ಹಕ ಅಧಿಕಾರಿ ಮುರಳಿಧರ ದೇಶಪಾಂಡೆ, ಇಳಕಲ್ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐ ಎಸ್ ಆರ್ ನಾಯಕ್ ಆಗಮಿಸಿ ಮಹಿಳಾ ದಿನಾಚರಣೆ ಕುರಿತು ಮಾತನಾಡಿದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಸರಸ್ವತಿ ಈಟಿ ವಹಿಸಿದ್ದರು. ಕಾಯ೯ಕ್ರಮದಲ್ಲಿ ಶ್ರೀ ನಿಧಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರು ಇದ್ದರು. ವರದಿ: ಭೀಮಣ್ಣ ಗಾಣಿಗೇರ ಇಳಕಲ್ಲ4