ತಾಲೂಕಿನಲ್ಲಿ ಸುಮಾರು 20 ಸಾವಿರ ಕುಟುಂಬದ ಸದಸ್ಯರಿಗೆ ಹಕ್ಕು ಪತ್ರ ಕೊಡುವ ಸಂಕಲ್ಪವಿದೆ ಶಾಸಕ ಪಠಾಣ ಶಿಗ್ಗಾವಿ : ತಾಲೂಕಿನಲ್ಲಿ ಸುಮಾರು 20 ಸಾವಿರ ಕುಟುಂಬದ ಸದಸ್ಯರಿಗೆ ಹಕ್ಕು ಪತ್ರ ಕೊಡುವ ಸಂಕಲ್ಪವಿದೆ ಇಲ್ಲಿಯವರೆಗೂ 8 ಸಾವಿರ ಹಕ್ಕು ಪತ್ರ ನೀಡಿದ್ದೇನೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ಪಟ್ಟಣದ ಮೌಲಾಲಿ ನಗರದಲ್ಲಿ ನಡೆದ 16, 17, 18 ವಾರ್ಡಿನ ನಿವಾಸಿಗಳಿಗೆ ಹಕ್ಕು ಪತ್ರ, ಇ ಆಸ್ತಿ ಹಾಗೂ ಹೈ ಮಾಸ್ಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪಟ್ಟಣ ಮತ್ತು ಗ್ರಾಮಗಳಲ್ಲಿ ಹಕ್ಕು ಪತ್ರ ನೀಡುವ ವಿಷಯವಾಗಿ ಹಣ ವಸೂಲಿ ಮಾಡುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಬಗ್ಗೆ ನನ್ನ ಗಮನಕ್ಕೆ ಬಂದರೆ ನಾನು ನಿದ್ರಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ. ಮುಖ್ಯಮಂತ್ರಿ ವಿಶೇಷ ಅನುಧಾನ ಅಡಿಯಲ್ಲಿ 1400 ಕೋಟಿ ಅನುಧಾನ ಕ್ಷೇತ್ರಕ್ಕೆ ತಂದಿದ್ದೇನೆ. ಕುಡಿಯುವ ನೀರಿನ ಯೋಜನೆಗಾಗಿ ಒಟ್ಟು 350 ಕೋಟಿ ಹಣ ಮಂಜೂರಾಗಿದ್ದು ಅದರಲ್ಲಿ ಸತತವಾಗಿ 24 ಗಂಟೆ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆಗಾಗಿ 109 ಕೋಟಿ ಹಣ ಮೀಸಲಿಡಲಾಗಿದೆ. 5 ಗ್ಯಾರಂಟಿಗಳನ್ನು ಉಚಿತವಾಗಿ ನೀಡಿದ್ದೇವೆ ಬಿಜೆಪಿಯವರಿಗೆ ಏಕೆ ಉಚಿತವಾಗಿ ನೀಡಲು ಆಗುವುದಿಲ್ಲ? ಕ್ಷೇತ್ರದ ಒಂದರಲ್ಲಿ ಕೋಟಿ ಹಣ ಪ್ರತಿ ತಿಂಗಳು ಗೃಹ ಲಕ್ಮೀ ಹಣ ಖರ್ಚಾಗುತ್ತದೆ , 6 ಸಾವಿರ ಕಡು ಬಡುವರಿಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಲು ಯೋಜನೆ ರೂಪಿಸಿದ್ದೇನೆ , ಬರುವ ಪುರಸಭೆ ಚುನಾವಣೆಯಲ್ಲಿ 23 ವಾರ್ಡಿನಲ್ಲಿ 23 ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದರು. ಮಾಜಿ ಪುರಸಭೆ ಅಧ್ಯಕ್ಷ ಅಬ್ದುಲ್ ಕರೀಂ ಮೊಗಲಲ್ಲಿ ಮಾತನಾಡಿ 1986 ರಿಂದ ಇಲ್ಲಿಯವರೆಗೂ ವಾಸಿಸುತ್ತಿರುವ ಎಲ್ಲ ಜನಾಂಗದ ಕಡು ಬಡವರಿಗೆ ಇಲ್ಲಿಯವರೆಗೂ ಹೋರಾಟ ಮಾಡಿದರು ಮನೆಯ ಹಕ್ಕು ಪತ್ರ ಕೊಡಲು ಆಗಿರಲಿಲ್ಲ ಅಲ್ಲದೇ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಆಗದೆ ಇದ್ದ ಕಾರ್ಯವನ್ನು ಇಂದು ಶಾಸಕ ಪಠಾಣ ಅವರಿಂದ ನನಸ್ಸಾಗಿದೆ ಎಂದರು. ಈ ಸಂದರ್ಭದಲ್ಲಿ ಗುಡ್ಡಪ್ಪ ಜಲದಿ, ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ಮುಸ್ತಾಕ ಅಹ್ಮದ ತಹಶಿಲ್ದಾರ, ವಸಂತಾ ಬಾಗೂರ, ನಾಗರಾಜ ಹಾವೇರಿ, ಮಲ್ಲಮ್ಮ ಸೋಮನಕಟ್ಟಿ, ಚಂದ್ರು ಕೊಡ್ಲಿವಾಡ, ಖಾಜಾಮೊಹಿದ್ದೀನ ಚೂಡಿಗಾರ, ಮಂಜುನಾಥ ತಿಮ್ಮಾಪೂರ,ಅಬ್ದುಲ್ ರೆಹಮಾನಸಾಬ ತೌಕಲ್ಲಿ, ಅಣ್ಣಪ್ಪ ಲಮಾಣಿ, ಮಹ್ಮದಸಾಬ ಗೋಟಗೋಡಿ, ರಾಮು ಪೂಜಾರ, ಲಕ್ಮೀ ಕಟ್ಟಿಮನಿ, ಮಹ್ಮದಲಿ ಬೀಜಾನವರ, ಯುವ ಮುಖಂಡ ಹಜರತಲಿ ಚೂಡಿಗಾರ ಸೇರಿದಂತೆ 3 ವಾರ್ಡಿನ ಫಲಾನುಭವಿಗಳು ಉಪಸ್ಥಿತರಿದ್ದರು.

- ಈಗಲಾದರೂ ನಮ್ಮ ಜನ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ ನಮ್ಮ ಜಾತಿಯ ನಾಯಕ ನಮ್ಮ ಸಮಾಜದ ನಾಯಕ ಅನ್ನೋದನ್ನ ಬಿಟ್ಟು ಅಭಿವೃದ್ಧಿ ಕಡೆ ಗಮನಕೊಟ್ಟರೆ ರಾಜ್ಯ ಅಭಿವೃದ್ಧಿ ಆಗಲಿಕ್ಕೆ ಮಾತ್ರ ಸಾಧ್ಯ1
- Post by Onlinetv24x71
- ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮ ಇಂದು ಜನಸಾಗರದಿಂದ ತುಂಬಿ ತುಳುಕುತ್ತಿದೆ. ದಶಕದ ಹತ್ತಿರದ ಅವಧಿಯ ನಂತರ ನಡೆಯುತ್ತಿರುವ ಈ ಜಾತ್ರೆಯು ಗ್ರಾಮಸ್ಥರಲ್ಲಿ ಹೊಸ ಚೈತನ್ಯ ತುಂಬಿದೆ.1
- (Weather News) "ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ."3
- ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಹೊರವಲಯದಲ್ಲಿ ಇಂದು ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಚರಂಡಿಯಲ್ಲಿ ಬಿದ್ದಿದ್ದ ಅನಾಮಧೇಯ ವ್ಯಕ್ತಿಯೊಬ್ಬನ ಶವ ಇಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆನಚನಮರಡಿ ಕ್ರಾಸ್ ಬಳಿ ಇರುವ RJ ಪೆಟ್ರೋಲ್ ಬಂಕ್ ಹತ್ತಿರದ ಮುಖ್ಯ ರಸ್ತೆಯ ಚರಂಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಚರಂಡಿಯೊಳಗೆ ವ್ಯಕ್ತಿಯೊಬ್ಬ ಮೃತಪಟ್ಟು ಹಲವು ದಿನಗಳೇ ಕಳೆದಿರುವ ಶಂಕೆ ವ್ಯಕ್ತವಾಗಿದೆ. ಇಂದು ಅತಿಯಾದ ದುರ್ವಾಸನೆ ಬರುತ್ತಿದ್ದ ಕಾರಣ ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಗೋಕಾಕ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಸದ್ಯ ಶವದ ಸುತ್ತ ಬಿಗಿ ಕಾವಲು ಹಾಕಲಾಗಿದೆ. ಮೃತ ವ್ಯಕ್ತಿ ಯಾರು? ಎಲ್ಲಿಯವನು? ಎಂಬ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಾವು ಕೊಲೆಯೋ ಅಥವಾ ಆಕಸ್ಮಿಕವಾಗಿ ಚರಂಡಿಗೆ ಬಿದ್ದು ಸಂಭವಿಸಿದ ಅಪಘಾತವೋ ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ1
- ಅಭಿಮಾನಿಗಳ ಮೇಲೆ ಕೆಂಡಾಮಂಡಲವಾದ ದಳಪತಿ ವಿಜಯ್: ಪ್ರಚಾರದ ವೇಳೆ ನಡೆದಿದ್ದೇನು? ಅಭಿಮಾನಿಗಳ ಮೇಲೆ ವಿಜಯ್ ಕೋಪ (VIDEO) ಟಿವಿಕೆ ಮುಖ್ಯಸ್ಥ ವಿಜಯ್ ತಮ್ಮ ಅಭಿಮಾನಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ತಮಿಳುನಾಡು ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಅವರ ವಾಹನವನ್ನು ನೂರಾರು ಜನರು ಸುತ್ತುವರಿದರು. ಮುಂದೆ ಸಾಗಲು ಸಾಧ್ಯವಾಗದೆ ಪರಿಸ್ಥಿತಿ ಅಪಾಯಕಾರಿ ಎಂದು ಗ್ರಹಿಸಿದ ಅವರು, ಜನಸಮೂಹ ಪಕ್ಕಕ್ಕೆ ಸರಿಯುವಂತೆ ಕೋಪದಿಂದ ಒತ್ತಾಯಿಸಿದರು. ವಿಜಯ್ ಅವರ ಇತ್ತೀಚಿನ ಕ್ಯಾಲಿಗಳಲ್ಲಿ ಅಭಿಮಾನಿಗಳ ಅತಿಯಾದ ಉತ್ಸಾಹ ಸಮಸ್ಯೆ ಉಂಟುಮಾಡುತ್ತಿರುವುದು ಗೊತ್ತೇ1
- ಶಿವಮೊಗ್ಗ: ನಮ್ಮೂರ ಬಳಗ ವತಿಯಿಂದ ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಮತ್ತು ವಾಸನ್ ಕಣ್ಣಿನ ಆಸ್ಪತ್ರೆ ಸಹ ಯೋಗದೊಂದಿಗೆ ವಿಶ್ವಗುರು ಸಾಂಸ್ಕೃತಿಕ ನಾಯಕ "ಬಸವ ಜಯಂತಿಯ" ಅಂಗವಾಗಿ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳ ಲಾಗಿತ್ತು. ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಳಗದ ಸಂಚಾಲಕ ಹೆಚ್ ಪಿ ಗಿರೀಶ್, 12ನೇ ಶತಮಾನದಲ್ಲಿಯೇ ಸಮ ಸಮಾಜದ ನಿರ್ಮಾಣಕ್ಕೆ ಅನು ಭವ ಮಂಟಪದ ಮೂಲಕ ಸಂವಿಧಾನದ ಪರಿಕಲ್ಪನೆ , ಶಿಕ್ಷಣ, ದಾಸೋಹ ಸೇವೆ ಇಂದಿಗೂ ನಮಗೆಲ್ಲರಿಗೂ ಸ್ಪೂರ್ತಿದಾಯಕ ವಚನ ಬಂಡಾರದ ಮುಖಾಂತರ ವಿಶ್ವ ಗುರು ಬಸವಣ್ಣನವರು ಮೂಡಿಸಿದ ವಚನ ಕ್ರಾಂತಿಯು ಇಡೀ ಪ್ರಪಂಚಕ್ಕೆ ಅತ್ಯವಶ್ಯ ವಾಗಿದೆ ಎಂದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿ.ವಿ.ಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ನಾಗರಾಜ್ ರಾವ್ ಅವರು ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಯನ್ನೇ ಮಾಡಿದ, ಮೇಲು-ಕೀಳು ಎಂಬ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಅವಿರತವಾಗಿ ಶ್ರಮಿಸಿದ ಕಾಯಕ ಯೋಗಿ, ಬಸವಣ್ಣನವರ ಕಾರ್ಯ ಹಾಗೂ ಆದರ್ಶಗಳು ನಮಗೆ ಸದಾ ಸ್ಪೂರ್ತಿ. ಅದರಂತೆ ನಮ್ಮೂರ ಬಳಗದಿಂದ ಬಸವೇಶ್ವರ ಜಯಂತಿ ಅಂಗವಾಗಿ ಆರೋಗ್ಯ ಶಿಬಿರ ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ ರಂಗನಾಥ್, ಗೌರವ ಸಂಚಾಲಕ ರುಗಳಾದ ನಾಗರಾಜ್ ಕಂಕಾರಿ, ಸಿ ರವಿ, ಸಂಚಾಲಕರುಗಳಾದ ಕೆ ಆರ್ ಸುರೇಶ್, ರಾಜೇಶ್ ಮಂದಾರ, ಟಿ ಗುರುಪ್ರಸಾದ್, ಆರ್ ಕಿರಣ್, ಎಂ ರಾಕೇಶ್, ಕೇಬಲ್ ಲೋಕೇಶ್, ರಾಘವೇಂದ್ರ ರಾವ್, ಸುಬ್ರಮಣಿ, ಎಸ್ ಬಸವರಾಜ್,ಮನ್ವಿಕ್ ಜೈನ್, ಎಮ್ ಸುಹಾಸ್, ಜಯಪ್ರಕಾಶ್, ಮುರಳಿ ಸಣ್ಣಕ್ಕಿ, ಕೇಶವಮೂರ್ತಿ, ಶಿ ವಿ ಯೋಗೀಶ್,ಭವಾನಿರಾವ್, ನಂದನ್, ಕೇಶವ ಸೀಗೆಹಟ್ಟಿ, ಸಂದೇಶ್ ಇತರರು ಇದ್ದರು.1
- ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣ ಮನೆಮಾಡಿದೆ. ಬರೋಬ್ಬರಿ 9 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಗ್ರಾಮದ ಆರಾಧ್ಯ ದೈವ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ಅತ್ಯಂತ ವೈಭವದಿಂದ ಜರುಗುತ್ತಿದೆ. ಭಕ್ತಿಯ ಪರಾಕಾಷ್ಠೆ, ಜಾನಪದ ಕಲೆಗಳ ರಂಗು ಮತ್ತು ಸಡಗರದ ನಡುವೆ ದೇವಿಯ ಭವ್ಯ ಮೆರವಣಿಗೆಗೆ ಇಡೀ ಗ್ರಾಮ ಸಾಕ್ಷಿಯಾಗಿದೆ. ಗ್ರಾಮದ ಎಲ್ಲಾ ಜನಾಂಗದವರು ಸೇರಿ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಿದರು1