ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜಂಟಿ ಪತ್ರ: ಖರ್ಗೆ ,ರಾಗಾ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ದತ್ತಾಂಶ ಸಂಗ್ರಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರೂಪಿಸಿರುವ ಪ್ರಶ್ನಾವಳಿಯ ವಿಧಾನವು ಅತ್ಯಂತ ದಾರಿತಪ್ಪಿಸುವಂತಿದೆ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜಂಟಿ ಪತ್ರ ಬರೆದಿದ್ದಾರೆ. ಪ್ರಸ್ತುತ ಸೂಚಿಸಲಾಗಿರುವ ಪ್ರಶ್ನಾವಳಿಯನ್ನು ತಕ್ಷಣವೇ ರದ್ದುಗೊಳಿಸಿ, ಎಲ್ಲಾ ರಾಜಕೀಯ ಪಕ್ಷಗಳು, ತಜ್ಞರು ಹಾಗೂ ಸಾರ್ವಜನಿಕರೊಂದಿಗೆ ಸಮಗ್ರ ಸಮಾಲೋಚನೆ ನಡೆಸಿ ಹೊಸ ಹಾಗೂ ವೈಜ್ಞಾನಿಕವಾದ ಪ್ರಶ್ನಾವಳಿಯನ್ನು ಸಿದ್ಧಪಡಿಸಬೇಕೆಂದು ಅವರು ಪ್ರಧಾನಿಯವರನ್ನು ಒತ್ತಾಯಿಸಿದ್ದಾರೆ. ಆಗಸ್ಟ್ 20 ರಂದು ಪ್ರಧಾನಿಯವರಿಗೆ ಕಳುಹಿಸಲಾದ ಈ ಎರಡು ಪುಟಗಳ ಸುದೀರ್ಘ ಪತ್ರವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. ಕೇಂದ್ರ ಸರ್ಕಾರದ ಈಗಿನ ಜಾತಿ ಜನಗಣತಿ ನೀತಿಯು ಕೇವಲ ಒಂದು “ಕಣ್ಣೊರೆಸುವ ತಂತ್ರ” ಎಂದು ಖಾರವಾಗಿ ಟೀಕಿಸಿದ ಅವರು, 2024 ರ ಏಪ್ರಿಲ್ ಚುನಾವಣಾ ಪ್ರಚಾರದ ವೇಳೆಯಲ್ಲಿ ಪ್ರಧಾನಿ ಮೋದಿಯವರು ಜಾತಿ ಜನಗಣತಿಯ ಬೇಡಿಕೆಯನ್ನು “ನಗರ ನಕ್ಸಲ್” ಮನಸ್ಥಿತಿ ಎಂದು ಲೇವಡಿ ಮಾಡಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿದರು.   Homeಮುಖಪುಟ‘ಕೇಂದ್ರ ಸರ್ಕಾರ ಜಾತಿ ಗಣತಿಗೆ ರೂಪಿಸಿರುವ ಪ್ರಶ್ನಾವಳಿ ವಿಧಾನ ದಾರಿತಪ್ಪಿಸುವಂತಿವೆ’: ಹೊಸ ಪ್ರಶ್ನಾವಳಿ ರಚಿಸಲು ಪ್ರಧಾನಿ... ಮುಖಪುಟರಾಜಕೀಯರಾಷ್ಟ್ರರಾಷ್ಟ್ರೀಯ ‘ಕೇಂದ್ರ ಸರ್ಕಾರ ಜಾತಿ ಗಣತಿಗೆ ರೂಪಿಸಿರುವ ಪ್ರಶ್ನಾವಳಿ ವಿಧಾನ ದಾರಿತಪ್ಪಿಸುವಂತಿವೆ’: ಹೊಸ ಪ್ರಶ್ನಾವಳಿ ರಚಿಸಲು ಪ್ರಧಾನಿ ಮೋದಿಗೆ ಖರ್ಗೆ-ರಾಹುಲ್ ಪತ್ರ By :Manjula 25 August 2026, 4:38 PM Facebook WhatsApp X  - Advertisement - - Advertisement - ಬೆಂಗಳೂರು: ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ದತ್ತಾಂಶ ಸಂಗ್ರಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರೂಪಿಸಿರುವ ಪ್ರಶ್ನಾವಳಿಯ ವಿಧಾನವು ಅತ್ಯಂತ ದಾರಿತಪ್ಪಿಸುವಂತಿದೆ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜಂಟಿ ಪತ್ರ ಬರೆದಿದ್ದಾರೆ. ಪ್ರಸ್ತುತ ಸೂಚಿಸಲಾಗಿರುವ ಪ್ರಶ್ನಾವಳಿಯನ್ನು ತಕ್ಷಣವೇ ರದ್ದುಗೊಳಿಸಿ, ಎಲ್ಲಾ ರಾಜಕೀಯ ಪಕ್ಷಗಳು, ತಜ್ಞರು ಹಾಗೂ ಸಾರ್ವಜನಿಕರೊಂದಿಗೆ ಸಮಗ್ರ ಸಮಾಲೋಚನೆ ನಡೆಸಿ ಹೊಸ ಹಾಗೂ ವೈಜ್ಞಾನಿಕವಾದ ಪ್ರಶ್ನಾವಳಿಯನ್ನು ಸಿದ್ಧಪಡಿಸಬೇಕೆಂದು ಅವರು ಪ್ರಧಾನಿಯವರನ್ನು ಒತ್ತಾಯಿಸಿದ್ದಾರೆ. ಆಗಸ್ಟ್ 20 ರಂದು ಪ್ರಧಾನಿಯವರಿಗೆ ಕಳುಹಿಸಲಾದ ಈ ಎರಡು ಪುಟಗಳ ಸುದೀರ್ಘ ಪತ್ರವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. ಕೇಂದ್ರ ಸರ್ಕಾರದ ಈಗಿನ ಜಾತಿ ಜನಗಣತಿ ನೀತಿಯು ಕೇವಲ ಒಂದು “ಕಣ್ಣೊರೆಸುವ ತಂತ್ರ” ಎಂದು ಖಾರವಾಗಿ ಟೀಕಿಸಿದ ಅವರು, 2024 ರ ಏಪ್ರಿಲ್ ಚುನಾವಣಾ ಪ್ರಚಾರದ ವೇಳೆಯಲ್ಲಿ ಪ್ರಧಾನಿ ಮೋದಿಯವರು ಜಾತಿ ಜನಗಣತಿಯ ಬೇಡಿಕೆಯನ್ನು “ನಗರ ನಕ್ಸಲ್” ಮನಸ್ಥಿತಿ ಎಂದು ಲೇವಡಿ ಮಾಡಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿದರು. ಜಾತಿ ಜನಗಣತಿಯು ಕೇವಲ ಹೆಸರಿಗಷ್ಟೇ ನಡೆಯಬಾರದು, ಬದಲಿಗೆ ಅದು ಅತ್ಯಂತ ನಿಖರ, ಅರ್ಥಪೂರ್ಣ ಮತ್ತು ದೇಶದ ಅಭಿವೃದ್ಧಿಗೆ ಪ್ರಯೋಜನಕಾರಿಯಾಗುವ ರೀತಿಯಲ್ಲಿ ನೆರವೇರಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಸಾಮಾಜಿಕ ಜಾಲತಾಣದಲ್ಲೂ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರವು ಆಗಸ್ಟ್ 14 ರಂದು ಸೂಚಿಸಿದ ಪ್ರಶ್ನಾವಳಿಯಲ್ಲಿ, ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ವರ್ಗಗಳಿಗೆ ನೀಡಿರುವಂತೆ ನಿರ್ದಿಷ್ಟ ‘ಡ್ರಾಪ್-ಡೌನ್’ ಆಯ್ಕೆಗಳನ್ನು ನೀಡಲಾಗಿಲ್ಲ. ಬದಲಿಗೆ, ಸಾರ್ವಜನಿಕರು ನೀಡುವ ಪ್ರತಿಕ್ರಿಯೆಯನ್ನು ಹಾಗೆಯೇ ಮುಕ್ತವಾಗಿ ದಾಖಲಿಸಿಕೊಳ್ಳುವ (ಓಪನ್-ಎಂಡೆಡ್) ಹಳೆಯ ವಿಧಾನವನ್ನೇ ಅನುಸರಿಸಲಾಗುತ್ತಿದೆ. ಈ ರೀತಿಯ ಅಪೂರ್ಣ ವಿಧಾನದಿಂದಾಗಿ 2011 ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಜನಗಣತಿಯಲ್ಲಿ ಎದುರಾಗಿದ್ದ ತಾಂತ್ರಿಕ ಅಡಚಣೆಗಳೇ ಮತ್ತೆ ಮರುಕಳಿಸುವ ಆತಂಕವಿದೆ. 2011 ರಲ್ಲಿ ಈ ಮುಕ್ತ ದಾಖಲಾತಿ ವಿಧಾನದಿಂದಾಗಿ ಬರೋಬ್ಬರಿ 46 ಲಕ್ಷಕ್ಕೂ ಹೆಚ್ಚು ಜಾತಿ ಹಾಗೂ ಉಪಜಾತಿಗಳ ಹೆಸರುಗಳು ಸೃಷ್ಟಿಯಾಗಿ, ಅಂತಿಮವಾಗಿ ಆ ಬೃಹತ್ ದತ್ತಾಂಶವು ಯಾವುದೇ ಕಾರ್ಯನೀತಿ ರೂಪಿಸಲು ಸಾಧ್ಯವಾಗದೆ ನಿರುಪಯೋಗಿಯಾಗಿ ಪರಿಣಮಿಸಿತ್ತು. ಪ್ರಸ್ತುತ ರೂಪಿಸಿರುವ ಪ್ರಕ್ರಿಯೆಯೂ ಅದೇ ಹಾದಿಯಲ್ಲಿ ಸಾಗುತ್ತಿದ್ದು, ಇಡೀ ಜನಗಣತಿಯ ಉದ್ದೇಶವನ್ನೇ ಹಾಳುಗೆಡವುತ್ತದೆ ಎಂದು ನಾಯಕರು ಪತ್ರದಲ್ಲಿ ಎಚ್ಚರಿಸಿದ್ದಾರೆ. ಭಾರತದ ವಿಭಿನ್ನ ಪ್ರದೇಶಗಳಲ್ಲಿ ಒಂದೇ ಜಾತಿಯನ್ನು ವಿವಿಧ ಹೆಸರುಗಳಿಂದ, ಉಪಜಾತಿಗಳಿಂದ ಹಾಗೂ ಸ್ಥಳೀಯ ಭಾಷಾ ವೈವಿಧ್ಯಗಳಿಂದ ಕರೆಯಲಾಗುತ್ತದೆ. ಗಣತಿದಾರರು ಪ್ರತಿಯೊಬ್ಬರು ಹೇಳುವ ಹೆಸರನ್ನು ಯಥಾವತ್ತಾಗಿ ದಾಖಲಿಸುತ್ತಾ ಹೋದರೆ, ಒಂದೇ ಸಮುದಾಯದ ದತ್ತಾಂಶವು ಸಾವಿರಾರು ವಿಭಿನ್ನ ಹೆಸರುಗಳಾಗಿ ತುಂಡಾಗುತ್ತದೆ. ಇದರಿಂದಾಗಿ ದೇಶದಲ್ಲಿ ಲಕ್ಷಾಂತರ ಹೊಸ ಜಾತಿಗಳು ಸೃಷ್ಟಿಯಾದಂತಾಗಿ, ನೈಜ ಜಾತಿ ಗಣತಿಯ ಸಂಪೂರ್ಣ ದತ್ತಾಂಶವೇ ನಿಷ್ಪ್ರಯೋಜಕಗೊಳ್ಳುತ್ತದೆ. ಯಾವುದೇ ಒಂದು ಸಮುದಾಯದ ನಿಖರ ಜನಸಂಖ್ಯೆ ಮತ್ತು ಅವರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳು ಸರಿಯಾಗಿ ದಾಖಲಾಗದಿದ್ದರೆ, ಆ ಸಮುದಾಯದ ನೈಜ ಪರಿಸ್ಥಿತಿಯನ್ನು ಅಳೆಯುವುದು ಅಸಾಧ್ಯವಾಗುತ್ತದೆ. ಇದು ಹಿಂದುಳಿದ, ಅತ್ಯಂತ ಹಿಂದುಳಿದ ಮತ್ತು ಶೋಷಿತ ಸಮುದಾಯಗಳಿಗೆ ಕಲ್ಯಾಣ ಯೋಜನೆಗಳನ್ನು ತಲುಪಿಸುವಲ್ಲಿ ಬಹುದೊಡ್ಡ ಹಿನ್ನಡೆ ಉಂಟುಮಾಡುತ್ತದೆ. ಶಿಕ್ಷಣ, ಉದ್ಯೋಗ, ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ನಿರ್ಣಾಯಕ ನಿರ್ಧಾರಗಳ ಮೇಲೆಯೂ ಇದು ಅತ್ಯಂತ ದುಷ್ಪರಿಣಾಮ ಬೀರಲಿದೆ. ಅಳವಡಿಸಿಕೊಳ್ಳಬೇಕು. ಸರ್ಕಾರದ ಬಳಿ ಈಗಾಗಲೇ ಲಭ್ಯವಿರುವ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ (ಎಸ್ಇಬಿಸಿ) ಪಟ್ಟಿ ಹಾಗೂ ‘ಆಂಥ್ರೋಪಾಲಜಿಕಲ್ ಸರ್ವೇ ಆಫ್ ಇಂಡಿಯಾ’ (ಭಾರತೀಯ ಮಾನವಶಾಸ್ತ್ರೀಯ ಸಮೀಕ್ಷೆ) ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಪೂರ್ವಭಾವಿಯಾಗಿ ಜಾತಿಗಳ ಸಮಗ್ರ ಪಟ್ಟಿಯನ್ನು ತಯಾರಿಸಬೇಕು. ಎಸ್‌ಸಿ ಮತ್ತು ಎಸ್‌ಟಿ ವರ್ಗಗಳಿಗೆ ನೀಡುವಂತೆಯೇ ಈ ಜಾತಿಗಳಿಗೂ ‘ಡ್ರಾಪ್-ಡೌನ್’ ಮೆನುವನ್ನು ಗಣತಿ ಫಾರ್ಮ್‌ಗಳಲ್ಲಿ ಒದಗಿಸಿದರೆ ದತ್ತಾಂಶ ಸಂಗ್ರಹಣೆಯಲ್ಲಿ ಗೊಂದಲಗಳು ಉಂಟಾಗುವುದಿಲ್ಲ. ಈ ಸಮಸ್ಯೆಗೆ ಅತ್ಯಂತ ಸರಳ ಹಾಗೂ ವೈಜ್ಞಾನಿಕ ಪರಿಹಾರ ಈಗಾಗಲೇ ಲಭ್ಯವಿದೆ ಎಂದು ಕಾಂಗ್ರೆಸ್ ನಾಯಕರು ಪ್ರಧಾನಿಯವರ ಗಮನಕ್ಕೆ ತಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬಿಹಾರ ಮತ್ತು ತೆಲಂಗಾಣ ರಾಜ್ಯಗಳು ಅತ್ಯಂತ ಯಶಸ್ವಿಯಾಗಿ ನಡೆಸಿದ ಜಾತಿ ಗಣತಿಯ ಮಾದರಿಯನ್ನು ಕೇಂದ್ರ ಸರ್ಕಾರವೂ ಇದಕ್ಕಿಂತಲೂ ಮುಖ್ಯವಾಗಿ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಾಲಿ ಪ್ರಶ್ನಾವಳಿಯಲ್ಲಿ ಎಲ್ಲೂ ‘ಒಬಿಸಿ’ (ಇತರ ಹಿಂದುಳಿದ ವರ್ಗಗಳು) ಎಂಬ ನಿರ್ದಿಷ್ಟ ಪದವನ್ನೇ ಸೇರಿಸಲಾಗಿಲ್ಲ. ಇದರಿಂದಾಗಿ ಭಾರತದಲ್ಲಿರುವ ಒಟ್ಟು ಒಬಿಸಿ ಜನಸಂಖ್ಯೆಯ ನೈಜ ಚಿತ್ರಣ ಹಾಗೂ ಅವರ ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಜನಗಣತಿಯ ನಂತರವೂ ಬಹಿರಂಗಗೊಳ್ಳುವುದಿಲ್ಲ.

- ಕಾಳಗಿಯಲ್ಲಿ ಕ್ರಾಪ್ ಕಟಿಂಗ್‌ನಲ್ಲಿ ಲೋಪ ದೋಷ: ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಹುಲಸಗುಡ್ ಗ್ರಾಮದಲ್ಲಿ ರೈತರ ಹಾಗೂ ರೈತನ ಮುಖಂಡರು ಗೆರಾವ್–ಪ್ರತಿಭಟನೆ. ಕ್ರಾಪ್ ಕಟಿಂಗ್‌ನಲ್ಲಿ ಲೋಪ: ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಹಾರ್ಟಿಕಲ್ಚರ್ ಅಧಿಕಾರಿಗಳು, ಬೆಳೆ ವಿಮಾ ಕಂಪನಿಯ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳ ವಿರುದ್ಧ ಹುಲಸಗುಡ್ ಗ್ರಾಮದ ರೈತರು ಹಾಗೂ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸುಮಾರು ನಾಲ್ಕೈದು ಗಂಟೆಗಳ ಕಾಲ ಗೆರಾವ್ ಹಾಕಿ ಪ್ರತಿಭಟನೆ ನಡೆಸಿದರು. ರೈತರ ಬೆಳೆಗಳಿಗೆ ಸಂಬಂಧಿಸಿದಂತೆ ಸರಿಯಾದ ಕ್ರಾಪ್ ಕಟಿಂಗ್ ಮಾಡದೆ ಇರುವುದರಿಂದ ಬೆಳೆ ವಿಮೆ ಹಾಗೂ ಪರಿಹಾರ ಪಡೆಯುವಲ್ಲಿ ರೈತರಿಗೆ ಅನ್ಯಾಯವಾಗುವ ಆತಂಕ ಎದುರಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ರೈತರ ಸಮಸ್ಯೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಹೋದ ವರ್ಷ ಅತಿವೃಷ್ಟಿಯಾಗಿ ಹಾಳಾಗಿರ್ತಕ್ಕಂತ ಬೆಳೆ ಇನ್ಸೂರೆನ್ಸ್ ಸರಿಯಾಗಿ ಬರದೇ ರೈತ ಸಂಕಷ್ಟದಲ್ಲಿದ್ದಾನೆ. ಈ ವರ್ಷ ಮಳೆ ಇಲ್ಲದೆ ಬೆಳೆದೆ ಬೆಳೆ ಇಲ್ಲದೆ ರೈತ ಕಷ್ಟದಲ್ಲಿದ್ದಾನೆ ಬರದ ಛಾಯ ಮೂಡಿದೆ. ಹೀಗಿರುವಾಗ ಮತ್ತೆ ಇನ್ಸೂರೆನ್ಸ್ ಕಂಪನಿ ದವರು ಅದೇ ರಾಗ ಅದೇ ಹಾಡು ಹಾಡುತ್ತಿದ್ದಾರೆ. ಸ್ಥಳದಲ್ಲಿದ್ದ ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ತಾಲೂಕು ತಹಸೀಲ್ದಾರ್ ಆಗಮಿಸಿ ರೈತರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ, ಸಮಸ್ಯೆಯ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕಿದರು. ಸರಿಯಾದ ರೀತಿಯಲ್ಲಿ ಕ್ರಾಪ್ ಕಟಿಂಗ್ ಮಾಡದಿರುವ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ತಹಸೀಲ್ದಾರ್ ಅವರ ಭರವಸೆ ಹಾಗೂ ಅಧಿಕಾರಿಗಳಿಂದ ಸಮಸ್ಯೆ ಪರಿಶೀಲಿಸುವ ಭರವಸೆ ದೊರೆತ ಹಿನ್ನೆಲೆಯಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ತಿಳಿಗೊಳಿಸಿದರು. ರೈತರ ಬೆಳೆ ವಿಮೆ ಮತ್ತು ಬೆಳೆ ಪರಿಹಾರದಲ್ಲಿ ಯಾವುದೇ ರೀತಿಯ ತಾರತಮ್ಯವಾಗಬಾರದು. ಸರಿಯಾದ ಕ್ರಾಪ್ ಕಟಿಂಗ್ ನಡೆಸಿ ಅರ್ಹ ಪ್ರತಿಯೊಬ್ಬ ರೈತನಿಗೂ ನ್ಯಾಯ ಒದಗಿಸಬೇಕು ಎಂದು ಹುಲಸಗುಡ್ ಗ್ರಾಮದ ರೈತರು ಹಾಗೂ ಸುಂಟಾಣ್ಣ ಗ್ರಾಮದ ರೈತರು, ರೈತ ಸೇನೆ ಮುಖಂಡರು ಆಗ್ರಹಿಸಿದ್ದಾರೆ. “ರೈತರ ಬೆವರಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದು ರೈತ ನಾಯಕ ವೀರಣ್ಣ ಗಂಗಾಣಿ ಎಚ್ಚರಿಕೆ ನೀಡಿದ್ದಾರೆ. ತಾಲೂಕ ದಂಡಾಧಿಕಾರಿಗಳಾದ ಪೃಥ್ವಿರಾಜ್ ಪಾಟೀಲ್ ರವರು ಎರಡು ಮೂರು ದಿವಸಗಳಲ್ಲಿ ಮುಖಂಡರನ್ನು ಕರೆದು ಸಭೆ ಮಾಡಿ ನಂತರ ಖುದ್ದಾಗಿ ನಾವೇ ಬಂದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹೊಲಗಳಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿ ಇಒ ಬಸಲಿಂಗಪ್ಪ ಡಿಗ್ಗಿ, ಆರ್ಟಿಕಲ್ಚರ್ ಅಧಿಕಾರಿ ನಸ್ಸೀರ್ ಹೊಸಳ್ಳಿ, ಇನ್ಸೂರೆನ್ಸ್ ಕಂಪನಿ ಅಧಿಕಾರಿ ಯುವರಾಜ್, ರೈತರದ ಸಂತೋಷ್ ನಾಯ್ಕೋಡಿ,ಶಿವಶರಣಪ್ಪ ನಿಗದಳಿ, ವಿಠಲ ಸನದಿ, ಪಾಂಡುರಂಗ ರುಮ್ಮನಗೂಡ. ಸೈದಪ್ಪ ಕೊಡಡೂರ, ಸಜೀದಾಪಟೇಲ್ ಬಿರಾದಾರ್, ಸಿದಪ್ಪ ಕಂದಗುಳ, ಶಿವಪ್ಪ ಸನದಿ, ನಾಮದೇವ ರಾಠೋಡ್, ಉದಯ ಸನದಿ, ನಾಗೇಶ್ ಸನದಿ, ವಿಠ್ಠಲ್ ರೂಮನಗುಡ, ಸಂತೋಷ ಮಠಪತಿ, ಪೀರಪ್ಪ ಯಾದವ, ನಾಗಪ್ಪ ಜಡಗಿ, ಅನೇಕ ರೈತರು ಉಪಸ್ಥಿತರಿದ್ದರು1
- ಅಫಜಲಪುರದಲ್ಲಿ : ನೂತನವಾಗಿ ಆಕಾಶ ಆಸ್ಪತ್ರೆಯನ್ನು ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಉದ್ಘಾಟಿಸಿದರು.! ಅಫಜಲಪುರದಲ್ಲಿ : ನೂತನವಾಗಿ ಆಕಾಶ ಆಸ್ಪತ್ರೆಯನ್ನು ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಉದ್ಘಾಟಿಸಿದರು.!1
- ಹುಮನಾಬಾದ ಪಟ್ಟಣದಲ್ಲಿ ಈದ್ ಮಿಲಾದ್ ಸಡಗರ ಸಂಭ್ರಮದಿಂದ ಆಚರಣೆ ನಸೀಮುದ್ದಿನ್ ಪಟೇಲ್ ಸೇರಿ ಮುಸ್ಲಿಂ ಮುಖಂಡರು ಭಾಗಿ1
- ಅಫಜಲಪುರ: ಹೆದ್ದಾರಿಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು: ಬಸ್ ನಿಲ್ದಾಣದ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ. ಅಫಜಲಪುರ: ಹೆದ್ದಾರಿಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು: ಬಸ್ ನಿಲ್ದಾಣದ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ.1
- ಚಿಂಚೋಳಿ ತಾಲೂಕಿನ ಕೆಲವೆಡೆ ಉತ್ತಮ ಮಳೆ : ಮಿರಿಯಾಣದಲ್ಲಿ ಧಾರಾಕಾರ ಮಳೆ – ಜನರಲ್ಲಿ ಸಂತಸ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇಂದು ಉತ್ತಮ ಮಳೆಯಾಗಿದೆ. ಮಳೆಯ ಪರಿಣಾಮ ರೈತರಲ್ಲಿ ಸಂತಸ ಮೂಡಿದ್ದು, ಬಿತ್ತನೆ ಹಾಗೂ ಬೆಳೆಗಳ ಬೆಳವಣಿಗೆಗೆ ಅನುಕೂಲವಾಗಿದೆ. ಕೆಲವು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ಹರಿದಿದ್ದು, ವಾತಾವರಣ ತಂಪಾಗಿದೆ. ಮುಂದಿನ ದಿನಗಳಲ್ಲಿಯೂ ಉತ್ತಮ ಮಳೆಯ ನಿರೀಕ್ಷೆ ಇದೆ.2
- ಎಐಸಿಸಿ ಅಧ್ಯಕ್ಷ ಖರ್ಗೆಗೆ ಅವಮಾನ ಖಂಡಿಸಿ ನಗರದಲ್ಲಿ ಪ್ರಗತಿಪರ ನಾಗರಿಕರ ವೇದಿಕೆಯಿಂದ ಖಂಡನಾ ಸಮಾವೇಶ ಬೀದರ್: ಎಐಸಿಸಿ ಅಧ್ಯಕ್ಷ ಖರ್ಗೆಗೆ ಅವಮಾನ ಖಂಡಿಸಿ ನಗರದಲ್ಲಿ ಪ್ರಗತಿಪರ ನಾಗರಿಕರ ವೇದಿಕೆಯಿಂದ ಖಂಡನಾ ಸಮಾವೇಶ1
- "೨೦೨೭ರ ಒಳಗಡೆ ಪರಿಶಿಷ್ಟ ಪಂಗಡದ ಮಾನ್ಯತೆ ಸಿಗದಿದ್ದರೆ ಹೊಸ ಹೋರಾಟ"- ಉಮೇಶ ಕೆ. ಮುದ್ನಾಳ್ ಕಲ್ಯಾಣ ವಾರ್ತೆ -ಯಾದಗಿರಿ ನಿಜಶರಣ ಅಂಬಿಗರ ಚೌಡಯ್ಯನವರ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕ್ಕೆ ಶ್ರಾವಣದ ನಿಮಿತ್ತ ಪೂಜಾ ಅಭಿಯಾನ ಕಾರ್ಯಕ್ರಮ ಜರಗಿತು. ಬಹು ಸಂಖ್ಯಾತರಾಗಿದ್ದು ರಾಜ್ಯದಲ್ಲಿ ಹಿಂದುಳಿದಿರುವ ಕೋಲಿ ಸಮಾಜವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ೨೦೨೭ರ ಒಳಗಡೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದರು. ೧೨ನೇ ಮಾಸದಲ್ಲಿ ಶ್ರೇಷ್ಠವಾದ ಮಾಸ ಶ್ರಾವಣ ಮಾಸದ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕೆ ವಿಶೇಷ ಪೂಜೆ ಕಾರ್ಯಕ್ರಮವು ಮಂಗಳವಾರ ತಾಲೂಕಿನ ಹೆಡಗಿಮದ್ರಿ ಗ್ರಾಮದಲ್ಲಿ ಹಮ್ಮಿಕೊಂಡು ಜಾಗೃತಿ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಡೇರಿಸಲು ಒತ್ತಾಯಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು. ದೇಶದಲ್ಲಿಯೇ ಕೋಲಿ ಸಮಾಜ ೧೬ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ೯ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳಲ್ಲಿದ್ದರೂ ಸಹ ಕರ್ನಾಟಕದಲ್ಲಿ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮರೆಪ್ಪ ಶಿವಪ್ಪ ಪೂಜಾರಿ, ಪವನ ಶಾಣಪ್ಪ,ಬಸವರಾಜ ಪೂಜಾರಿ,ಮಲ್ಲಪ್ಪ,ತಿರುಪತಿ, ದಸ್ತಗೀರ್,ಚಂದಪ್ಪ,ದೇವಪ್ಪ, ಯಲ್ಲಪ್ಪ, ಸಿದ್ದಪ್ಪ,ವಿರೂಪಾಕ್ಷ, ಬಸಪ್ಪ,ಹನುಮಾನ್, ರವಿ, ನಿಂಗಪ್ಪ, ಸಿದ್ದಪ್ಪ,ಶೇಕಪ್ಪ, ರವಿ ರಾಮು,ಮೈಲಾರಿ, ಮರೆಪ್ಪ, ಶಾಣಪ್ಪ,ಸಾಬೂ, ರೇಣುಕಮ್ಮ, ಶಾಣಮ್ಮ,ಮಾರೆಮ್ಮ, ಸುಸಲಮ್ಮ,ಸಿದ್ದಮ್ಮ,ಹಂಪಮ್ಮ, ಹನಮವ್ವ,ಕಮಲಮ್ಮ, ಶಾಂತಮ್ಮ,ಮಹಾದೇವಿ ಮುಂತಾದವರು ಉಪಸ್ಥಿತರಿದ್ದರು. *ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ, ಸೇರ್ಪಡೆಗಾಗಿ ದಿ.ವಿಠ್ಠಲ್ ಹೇರೂರ ಅವರು ಸಾಕಷ್ಟು ಹೋರಾಟ ಮಾಡಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷದಿಂದ,ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ೨೦೨೭ರ ಒಳಗೆ ವಿಠ್ಠಲ್ ಹೇರೂರ ಅವರ ಕನಸು, ನನಸಾಗಬೇಕೆಂಬುದು ಕೋಲಿ ಸಮಾಜದ ಆಶಯವಾಗಿದೆ*-" *ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ*1
- ಒಬ್ಬ ವ್ಯಕ್ತಿಯ ದಾರಿಗೆ ಯಾವತ್ತಿಗೂ ಹೂವಾಗಬೇಕು ವಿನಹ ಮುಳ್ಳಾಗಬಾರದು: ಶ್ರೀ ಷ. ಬ್ರ. ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು. ಒಬ್ಬ ವ್ಯಕ್ತಿಯ ದಾರಿಗೆ ಯಾವತ್ತಿಗೂ ಹೂವಾಗಬೇಕು ವಿನಹ ಮುಳ್ಳಾಗಬಾರದು: ಶ್ರೀ ಷ. ಬ್ರ. ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು.1