ಹಿರಿಯ ವಾರ್ತಾಧಿಕಾರಿ ಎಂ.ಜುಂಜಣ್ಣ ಅವರಿಗೆ ಶಿಡ್ಲಘಟ್ಟ ತಾಲ್ಲೂಕು ಪತ್ರಕರ್ತರ ಸಂಘದಿಂದ ಗೌರವ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸತತ ಹತ್ತು ವರ್ಷಗಳ ಕಾಲ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ, ಇದೀಗ ಹಿರಿಯ ಸಹಾಯಕ ನಿರ್ದೇಶಕರಾಗಿ ಮುಂಬಡ್ತಿ ಪಡೆದು ಚಿತ್ರದುರ್ಗಕ್ಕೆ ವರ್ಗಾವಣೆಗೊಂಡಿರುವ ಎಂ. ಜುಂಜಣ್ಣ ಅವರನ್ನು ಶಿಡ್ಲಘಟ್ಟ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ರವಿಕುಮಾರ್ ಮಾತನಾಡಿ ಪತ್ರಕರ್ತರು, ಜುಂಜಣ್ಣ ಅವರು ಜಿಲ್ಲೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸುವ ಮೂಲಕ ಮಾಧ್ಯಮ ಲೋಕದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಸರ್ಕಾರದ ಯೋಜನೆಗಳ ಪ್ರಚಾರ ಮತ್ತು ಪತ್ರಿಕಾ ಗೋಷ್ಠಿಗಳ ಆಯೋಜನೆಯಲ್ಲಿ ಪತ್ರಕರ್ತರೊಂದಿಗೆ ಸಮನ್ವಯ ಕಾಯ್ದುಕೊಂಡು ಮಾದರಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ ಎಂದು ಅವರ ಸೇವೆಯನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿ ಬಡ್ತಿ ಪಡೆದ ಜುಂಜಣ್ಣ ಅವರಿಗೆ ಸಂಘದ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿ, ಅವರ ಮುಂದಿನ ವೃತ್ತಿ ಬದುಕು ಯಶಸ್ವಿಯಾಗಲಿ ಎಂದು ಶುಭ ಹಾರೈಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ, ಖಜಂಚಿ ಮುದ್ದುಕೃಷ್ಣ, ಶಿಡ್ಲಘಟ್ಟ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎ. ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್. ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಡಿ.ಜಿ. ಮಲ್ಲಿಕಾರ್ಜುನ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಛಾಯಾ ರಮೇಶ್, ಕೆ.ವಿ. ಮುನೇಗೌಡ ಹಾಗೂ ಸಾದಲಿ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು. ವರದಿ ನಂದಿ ರಾಜೇಶ್ ಶಿಡ್ಲಘಟ್ಟ

- Post by Venu Gopal1
- ನಟಿ ಪ್ರೇಮ್ ರಕ್ಷಿತಾ ಅವರು ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಅವರ ಕುಟುಂಬಕ್ಕೆ 💐💐🎂🎂💐💐👍❤️1
- Post by KRUTHI NEWS KANNADA1
- ಶುದ್ದ ಕುಡಿಯುವ ನೀರಿನ ಘಟಕಗಳ ಹಾಗೂ ಆಶ್ರಯ ಯೋಜನೆ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ಬಾಗೇಪಲ್ಲಿ:- ಇಂದು ಬಾಗೆಪಲ್ಲಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಎಸ್. ಎನ್. ಸುಬ್ಬಾರೆಡ್ಡಿ ಶಾಸಕರು ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರ ರವರ ಅಧ್ಯಕ್ಷತೆಯಲ್ಲಿ ಡಾ|| ನವೀನ್ ಭಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ. ಪಂ ರವರ ಉಪಸ್ಥಿತಿಯಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ, ಶುದ್ದ ಕುಡಿಯುವ ನೀರಿನ ಘಟಕಗಳ ಬಗ್ಗೆ ಮತ್ತು ಆಶ್ರಯ ಯೋಜನೆ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯದರ್ಶಿ ಜಿ. ಪಂ,ಜಿಲ್ಲಾ ಕುಡಿಯುವ ನೀರು & ನೖರ್ಮಲ್ಯ ಇಲಾಖೆಯ ಇಂಜಿನಿಯರ್ ಬಾಗೆಪಲ್ಲಿ ಗುಡಿಬಂಡೆ,ಹಾಗೂ ಚೇಳೂರು ತಾಲ್ಲೂಕಿನ ತಹಶಿಲ್ದಾರು,ಕಾರ್ಯನಿರ್ವಾಹಕ ಅಧಿಕಾರಿಗಳು,ಸಹಾಯಕ ನಿರ್ದೇಶಕರು ,ಮೂರು ತಾಲ್ಲೂಕಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು,ಸಿಬ್ಬಂದಿಗಳು ಹಾಜರಿದ್ದರು1
- ಬೆಂಗಳೂರಿನಲ್ಲಿ ಮಧ್ಯರಾತ್ರಿ ಸಂಚಾರದ ಮಧ್ಯೆಯೇ ಪುಂಡಾಟ ಮಿತಿಮೀರಿದ ಘಟನೆ ವೈರಲ್ ಆಗಿದೆ. ಬೆಂಗಳೂರು–ನೆಲಮಂಗಲ ಮಾರ್ಗದಲ್ಲಿ ಚಲಿಸುತ್ತಿದ್ದ ಕಾರಿನ ರೂಫ್ ಟಾಪ್‌ನ್ನು ತೆರೆಯಿಸಿ, ಯುವಕನೊಬ್ಬ ಮೇಲಕ್ಕೆ ನಿಂತುಕೊಂಡೇ ಮದ್ಯ ಸೇವಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಇತರ ವಾಹನಗಳು ವೇಗವಾಗಿ ಸಂಚರಿಸುತ್ತಿದ್ದ ರಸ್ತೆಯಲ್ಲೇ ಈ ರೀತಿಯ ಬೇಜವಾಬ್ದಾರಿತನ ಸಾರ್ವಜನಿಕರ ಜೀವಕ್ಕೂ ಅಪಾಯ ತಂದೊಡ್ಡಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆದ ತಕ್ಷಣ ಸಂಚಾರಿ ಪೊಲೀಸರು ಎಚ್ಚೆತ್ತುಕೊಂಡಿದ್ದು, ಕಾರಿನ ಮಾಲೀಕ ಹಾಗೂ ಸಂಬಂಧಪಟ್ಟ ಯುವಕರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ರಾತ್ರಿ ರಸ್ತೆಗಳನ್ನು ಖಾಸಗಿ ಪಾರ್ಟಿ ಸ್ಥಳವನ್ನಾಗಿ ಮಾಡುತ್ತಿರುವ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬರುತ್ತಿದೆ.1
- Madrase Hajira niswan bismilla negar near nisar negar kolar1
- Post by Ayub Pasha1
- *ಚಿಂತಾಮಣಿ:-ಏಪ್ರಿಲ್ 1 ರಿಂದ ತೆರಿಗೆ ಪಾವತಿಸುವ ನಾಗರಿಕರಿಗೆ ಶೇಕಡಾ.5 ರಷ್ಟು ರಿಯಾಯಿತಿಯನ್ನು ಘೋಷಿಸಿ ಸರ್ಕಾರ ಆದೇಶ* ಚಿಂತಾಮಣಿ: ಏಪ್ರಿಲ್ 1 ರಿಂದ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಲಿದೆ. ಆರಂಭದ ಮಾಹೆಯಲ್ಲಿ ಆಸ್ತಿ ತೆರಿಗೆ ಪಾವತಿಸುವ ನಾಗರಿಕರಿಗೆ ಶೇ.5 ರಷ್ಟು ರಿಯಾಯಿತಿಯನ್ನು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ನಗರಸಭೆ ಆಯುಕ್ತ ಜಿ.ಎನ್.ಚಲಪತಿ ತಿಳಿಸಿದರು. ನಾಗರಿಕರು ಸುಲಭವಾಗಿ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ನಗರಸಭೆಯಲ್ಲಿ ಹಾಗೂ ವಿವಿಧ ಭಾಗಗಳಲ್ಲಿ ತೆರಿಗೆ ವಸೂಲಿ ಕೇಂದ್ರಗಳನ್ನು ತೆರೆಯಲಾಗುವುದು. ನಗರಸಭೆ ಕಚೇರಿಯಲ್ಲೇ ಬ್ಯಾಂಕ್ ಕೌಂಟರ್ ತೆರೆಯಲಾಗಿದೆ. ನಾಗರಿಕರು ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲದೆ ಶೀಘ್ರವಾಗಿ ಚಲನ್ ಪಡೆದು ತೆರಿಗೆ ಪಾವತಿಸಬಹುದು ಎಂದರು. ವಾಣಿಜ್ಯ ಮಳಿಗೆಗಳ ತೆರಿಗೆ ಮೌಲ್ಯಮಾಪನವನ್ನು ನಗರಸಭೆಯ ಅಧಿಕಾರಿಗಳು ಕ್ರಾಸ್ ವೆರಿಫಿಕೇಶನ್ ಮಾಡಲಾಗುವುದು. ತೆರಿಗೆಯಲ್ಲಿ ನಿಗಧಿಪಡಿಸುವಲ್ಲಿ ವಂಚನೆ, ಮೋಸ ಕಂಡುಬಂದಲ್ಲಿ ಕಾನೂನಿನಂತೆ ಕ್ರಮಕೈಗೊಂಡು ದುಪ್ಪಟ್ಟು ದಂಡ ವಿಧಿಸಲಾಗುವುದು. ವಿಶೇಷವಾಗಿ ವಾಣಿಜ್ಯ ಮಳಿಗೆಗಳ ತೆರಿಗೆಯನ್ನು ಕಾನೂನಿನಂತೆ ಮೌಲ್ಯತಮಾಪನ ಮಾಡಿ ಪಾವತಿಸಬವೇಕು ಎಂದು ಮನವಿ ಮಾಡಿದರು. ಕುಡಿಯುವ ನೀರು ಮತ್ತು ಬೀದಿ ದೀಪಗಳ ವ್ಯವಸ್ಥೆ ಬೇಸಿಗೆಯ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ನೀಗಿಸಲು ಈಗಾಗಲೇ 20 ಹೊಸ ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ. ಶೀಘ್ರದಲ್ಲೇ ಪಂಪ್ ಮತ್ತು ಮೋಟಾರು ಗಳನ್ನು ಅಳವಡಿಸಲಾಗುವುದು. ಸಮರ್ಪಕವಾಗಿ ನೀರನ್ನು ಒದಗಿಸಲು ಸಾಧ್ಯವಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು,ಪೋಲು ಮಾಡಬಾರದು ಎಂದು ಮನವಿ ಮಾಡಿದರು. ನಗರದ ದೊಡ್ಡಪೇಟೆ ರಸ್ತೆಯನ್ನು ಅಗಲೀಕರಣಗೊಳಿಸಲು ಮಾರ್ಕ್ ಮಾಡಲಾಗಿದೆ. ರಸ್ತೆಯ ಮದ್ಯದಿಂದ ಎರಡು ಕಡೆ 6 ಮೀಟರ್ ಇರುತ್ತದೆ. 2–3 ದಿನಗಳಲ್ಲಿ ರಸ್ತೆಯ ನಿವಾಸಿಗಳ ಸಭೆಯನ್ನು ಕರೆಯಲಾಗುವುದು. ರೈಲ್ವೆ ನಿಲ್ದಾಣ ಮತ್ತು 3–4 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಆ ಭಾಗದ ನಾಗರಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಆಢಳಿತಾಧಿಕಾರಿಗಳ ಆದೇಶದಂತೆ ವಿವಿಧ ಅನುದಾನದಿಂದ ಒಂದು ಸಾವಿರ ದೀಪಗಳನ್ನು ಖರೀದಿಸಿ, ನಗರದಾದ್ಯಂತ ಹೊಸ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ.ನಗರದ ಸರ್ವತೋಮುಖ ಅಭಿವೃದ್ಧಿಗೆ ನಾಗರಿಕರು ಸಹಕರಿಸಬೇಕೆಂದು ಪೌರಾಯುಕ್ತರಾದ ಜಿ.ಎನ್.ಚಲಪತಿ ರವರು ಮನವಿ ಮಾಡಿದರು. ವರದಿ:-ಸೀನ. ಟಿ ಚಿಂತಾಮಣಿ4