Shuru
Apke Nagar Ki App…
ಫೆ.19 ಶಿವಾಜಿ ಜಯಂತಿ ಅಂಗವಾಗಿ ಬೈಕ್ ರ್ಯಾಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದ ಅಂಗವಾಗಿ ಬೈಕ್ ರ್ಯಾಲಿಯನ್ನು ಫೆಬ್ರುವರಿ 19 ಗುರುವಾರ ಬೆಳಗ್ಗೆ 10 ಗಂಟೆಗೆ ಚಂದ್ರಶೇಖರ್ ಅಜಾದ್ ಸರ್ಕಲ್ ಇಂದ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ ಎಂದು ಹಿಂದೂ ಸೇವಾ ಟ್ರಸ್ಟ್ ಸಂಚಾಲಕ ಪರಶುರಾಮ ಬಿಸಿಲದಿನ್ನಿ ತಿಳಿಸಿದ್ದಾರೆ. ಬೈಕ್ ರ್ಯಾಲಿಯಲ್ಲಿ ಮಹಿಳೆಯರು ಹಿರಿಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.
Aaryan Ganiger
ಫೆ.19 ಶಿವಾಜಿ ಜಯಂತಿ ಅಂಗವಾಗಿ ಬೈಕ್ ರ್ಯಾಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದ ಅಂಗವಾಗಿ ಬೈಕ್ ರ್ಯಾಲಿಯನ್ನು ಫೆಬ್ರುವರಿ 19 ಗುರುವಾರ ಬೆಳಗ್ಗೆ 10 ಗಂಟೆಗೆ ಚಂದ್ರಶೇಖರ್ ಅಜಾದ್ ಸರ್ಕಲ್ ಇಂದ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ ಎಂದು ಹಿಂದೂ ಸೇವಾ ಟ್ರಸ್ಟ್ ಸಂಚಾಲಕ ಪರಶುರಾಮ ಬಿಸಿಲದಿನ್ನಿ ತಿಳಿಸಿದ್ದಾರೆ. ಬೈಕ್ ರ್ಯಾಲಿಯಲ್ಲಿ ಮಹಿಳೆಯರು ಹಿರಿಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.
More news from ಕರ್ನಾಟಕ and nearby areas
- ಬಾಗಲಕೋಟ ಜಿಲ್ಲೆಯ ಇಳಕಲ್‌ದ ಕೆಎಚ್‌ಡಿಸಿ ಕಾಲೋನಿ, ವಿದ್ಯಾಗಿರಿ ಕಾಲೋನಿಯಲ್ಲಿ ರ‍್ನಾಲ್ಕು ಮನೆಗಳ ಬೀಗ ಹೊಡೆದು ಕಳ್ಳತನ ಮಾಡಲು ಪ್ರಯತ್ನಪಟ್ಟಿದ್ದಾರೆ ಕಳ್ಳತನಗಳು ವಿಫಲಗೊಂಡಿವೆ. ಮೂರು ಮನೆಯಲ್ಲಿ ಏನು ಸಿಗದೇ ನಿರಾಸೆಗೊಂಡಿದ್ದ ಕಳ್ಳರು ಮತ್ತೊಂದು ಮನೆಗೆ ಕಳ್ಳತನ ಮಾಡಲು ಹೋದಾಗ ಬೀಗ ಹೊಡೆಯುವ ಸಮಯದಲ್ಲಿ ಮುಂದಿನ ಮನೆಯೊಬ್ಬರು ಎಚ್ಚರಗೊಂಡು ಹೋದ ನೋಡಲು ಹೋದಾಗ ನಾಲ್ಕು ಜನರ ಗುಂಪೋದನ್ನು ಕಂಡಿದ್ದ ಮಹಿಳೆ ಬಾಯಿ ಮಾಡಿದ ತಕ್ಷಣವೇ ಆ ಮಹಿಳೆಯ ಮನೆಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಕಳ್ಳರು ಎಸೆದಿದ್ದರಿಂದ ಬಾಗಿಲು ಮತ್ತು ಕುರ್ಚಿಗಳನ್ನು ಮುರಿದಿರುವ ಘಟನೆ ಫೆ.೧೭ ಮಂಗಳವಾರ ನಸುಕಿನ ಜಾವ ೨ ಗಂಟೆಗೆ ಸಂದರ್ಭ ನಡೆದಿದೆ. ಸುದ್ದಿ ತಿಳಿದಿ ಶಹರ್ ಪೋಲಿಸ್ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲಿಸಿ ತನಿಖೆಯನ್ನು ನಡೆಸಿದ್ದಾರೆ. ಈ ಸುದ್ದಿ ತಿಳಿದ ಸ್ಥಳೀಯ ನಿವಾಸಿಗಳು ಕಳ್ಳರ ಹಾವಳಿಗೆ ಬೆಚ್ಚಿ ಬಿದ್ದಿದ್ದಾರೆ.2
- ಗುಳೇದಗುಡ್ಡ : ಕೋಟೆಕಲ್ಲನ ಶ್ರೀ ಹೊಳೆಹುಚ್ಚೇಶ್ವರ ಸಂಸ್ಥಾನಮಠ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದವರಿಂದ ಫೆ. 18ರಿಂದ 20ರವರೆಗೆ ನಿತ್ಯ ಸಂಜೆ 7 ಗಂಟೆಗೆ ಮೂರುದಿನ ಶಿವಸಂಚಾರ ನಾಟಕ ಪ್ರದರ್ಶನ ಸಮೀಪದ ಕೋಟೆಕಲ್ಲ ಗ್ರಾಮದ ಶ್ರೀ ಹೊಳೆಹುಚ್ಚೇಶ್ವರಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು. ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷ ಸಾಣೆಹಳ್ಳಿಯ ಕಲಾತಂಡದಿಂದ ಶಿವಸಂಚಾರ ನಾಟಕ ಪ್ರದರ್ಶನ ಕೋಟೆಕಲ್ಲ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಫೆ. 18ರಂದು ಜಂಗಮದೆಡೆಗೆ, ಫೆ.19ರಂದು ಕಳ್ಳರ ಸಂತೆ, ಫೆ.20ರಂದು ಶಿವಯೋಗಿ ಸಿದ್ಧರಾಮೇಶ್ವರ ನಾಟಕವನ್ನು ಶ್ರೀ ಶಿವಕುಮಾರ ಕಲಾಸಂಘದವರು ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಂಗಪ್ಪ ಹಡಪದ, ಲಕ್ಷ್ಮಣ ಹಾಲನ್ನವರ, ಸಂತೋಷ ತಿಪ್ಪಾ ಇದ್ದರು.1
- ಬಾಗಲಕೋಟೆ:ನಗರದ ವಿದ್ಯಾಗಿರಿ ಸಾಯಿ ಮಂದಿರದಲ್ಲಿರುವ ಶ್ರೀ ವರದಾನೇಶ್ವರಿ ಸಾಂಸ್ಕೃತಿಕ ವೇದಿಕೆಯ ಮೇಲೆ ಇಂದು ಸಂಜೆ ಜರುಗಿದ ಜಂಗಮದೆಡೆಗೆ ನಾಟಕ ಪ್ರೇಕ್ಷಕರ ಗಮನ ಸೆಳೆಯಿತು. ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯ #ಶಿವಸಂಚಾರ ತಂಡದಿಂದ ಪ್ರದರ್ಶಿಸಲಾದ ಈ ನಾಟಕವು ಸಮಾಜಮುಖಿ ಸಂದೇಶವನ್ನು ಒಳಗೊಂಡು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದಿತು. ಕಲಾವಿದರ ಅಭಿನಯ, ವೇದಿಕೆ ವಿನ್ಯಾಸ ಹಾಗೂ ಸಂಗೀತ ಸಂಯೋಜನೆ ವಿಶೇಷವಾಗಿ ಮನಸೆಳೆಯುವಂತಿತ್ತು. ನಾಟಕ ವೀಕ್ಷಿಸಲು ನಗರದ ಕಲಾಪ್ರೇಮಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಸಂಘಟಕರು ಹಾಗೂ ತಂಡದ ಸದಸ್ಯರಿಗೆ ಪ್ರೇಕ್ಷಕರು ಅಭಿನಂದನೆ ಸಲ್ಲಿಸಿದರು.1
- ಗ್ಯಾರಂಟಿ ಉತ್ಸವದಲ್ಲಿ ಅವ್ಯವಸ್ಥೆ ಅರ್ಧದಲ್ಲೇ ಎದ್ದ ಮಹಿಳೆಯರು –ಕಾರ್ಯಕ್ರಮ ಬಿಟ್ಟು ಹೋಗಬೇಡಿ ಸಚಿವ ತಂಗಡಗಿ ಮನವಿ #ಕೊಪ್ಪಳ #Koppal #ಗ್ಯಾರಂಟಿ_ಉತ್ಸವ #ಯುವಜಾಗೃತಿನ್ಯೂಸ್1
- Post by Rajib Paul choudhury1
- ಜಮೀನಿನಲ್ಲಿ ಮನೆ ಕಟ್ಟಲು ಪರವಾನಗಿ ನೀಡದ ಪಿಡಿಯೊ ಬೇಸತ್ತ ರೈತನಿಂದ ಆತ್ಮಹತ್ಯೆ ಯತ್ನ ಕೆ. ಬಸವರಾಜ್ ಆತ್ಮಹತ್ಯೆಗೆ ಯತ್ನಿಸಿದ ರೈತ ಕಡಬಗೆರೆ ಗ್ರಾಪಂನಲ್ಲಿ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡಬಗೆರೆ ಗ್ರಾಪಂ1
- ರಾಮದುರ್ಗ : ಸುರೇಬಾನ ನಾಡಕಚೇರಿ ಮುಂಭಾಗದಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ತಿಂದು ಉಗುಳಲು ಬಕೆಟ್ ಇಡುತ್ತಿರುವ ದೃಶ್ಯ ಕಂಡು ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರತಿ ದಿನ ಸಾವಿರಾರು ಜನರು ವಿವಿಧ ಸರ್ಕಾರಿ ಕೆಲಸಗಳಿಗಾಗಿ ನಾಡಕಚೇರಿಗೆ ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕಾದ ಜವಾಬ್ದಾರಿ ಅಧಿಕಾರಿಗಳದ್ದಾಗಿದ್ದರೂ, ಆವರಣದಲ್ಲಿ ಅಸ್ವಚ್ಛತೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಇನ್ನೂ ಆತಂಕಕಾರಿ ವಿಷಯವೆಂದರೆ, ನಾಡಕಚೇರಿ ಆವರಣದಲ್ಲೇ ಪೂರ್ವ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ದಿನನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ಉಗುಳುವಿಕೆ ಮಕ್ಕಳ ಆರೋಗ್ಯಕ್ಕೂ ಹಾನಿಕಾರಕವಾಗುವ ಸಾಧ್ಯತೆ ಇದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಮತ್ತು ಸಾರ್ವಜನಿಕರು ಅಧಿಕಾರಿಗಳ ನಿರ್ಲಕ್ಷ್ಯವೇ ಈ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ. ತಕ್ಷಣವೇ ಸ್ವಚ್ಛತಾ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಿಕೆ ನಿಷೇಧಿಸಲು ಕಠಿಣ ಕ್ರಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.3
- ಧಾರ್ಮಿಕ ಶ್ರದ್ಧಾಕೇಂದ್ರ ಸುಕ್ಷೇತ್ರ ಮದ್ವೀರಶೈವ ಶಿವಯೋಗ ಮಂದಿರದ 116 ನೇ ಕಾರಣಿಕ ಯುಗಪುರುಷ ಹಾನಗಲ್ ಕುಮಾರ ಶ್ರೀಗಳ 65 ಅಡಿ ಎತ್ತರದ ಮಾಹಾರಥೋತ್ಸವ ಸೋಮವಾರ ಸಂಜೆ 6 ಗಂಟೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದೊಂದಿಗೆ ಜರುಗಿತು. ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ (೬೫ಅಡಿ) ಮಾಹಾರಥೋತ್ಸವಕ್ಕೆ ಸಾಂಪ್ರದಾಯಕವಾಗಿ ಪೂಜೆ ಪುನಸ್ಕಾರ ನೆರೆವೇರಿಸಿದ ಸಂಸ್ಥೆಯ ಅಧ್ಯಕ್ಷ, ಮೂರು ಸಾವಿರಮಠದ ಶ್ರೀ ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಶಿರಬಡಗಿ ಗ್ರಾಮದ ಭಕ್ತಾಧಿಗಳು ತಂದ ಹಗ್ಗದಿಂದ ಭಕ್ತಗಣ ರಥ ಎಳೆಯಲಾಯಿತು. ಮಾಹಾರಥೋತ್ಸವಕ್ಕೆ ಭಕ್ತರು ಹೂವು ಸಮರ್ಪಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಅಪಾರ ಭಕ್ತ ಸಮೂಹ ಶಿವನ ಹಾಗೂ ಶಿವಯೋಗಿಗಳ ಸ್ಮರಣೆ ಮೂಲಕ ರಥ ಎಳೆದರು. ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮೂರು ಸಾವಿರಮಠದ ಶ್ರೀ ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮಿಗಳ ಉಪಾಧ್ಯಕ್ಷ ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳ ನೇತೃತ್ವದಲ್ಲಿ ಪೂಜೆ ಕೈಂಕರ್ಯಗಳು ಜರುಗಿದವು. ಮಾಹಾರಥೋತ್ಸವದಲ್ಲಿ ನಾಡಿನ ಮಹಾಸ್ವಾಮಿಗಳಾದ ಹೊಳೆಹುಚ್ಚೇಶ್ವರ ಶ್ರೀ, ಫಕೀರ ದಿಂಗಾಲೇಶ್ವರ ಸ್ವಾಮಿಜಿ ನೂರಾರು ಮಠಾಧೀಶರು, ಮಹಾಸ್ವಾಮಿಗಳು, ವಟುಸಾಧಕರು ಹಾಜರಿದ್ದರು. ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಂ.ಕೆ.,ಪಟ್ಟಣಶೆಟ್ಟಿ ಧರ್ಮದರ್ಶಿ ಎಂ.ಬಿ.ಹಂಗರಗಿ, ಶರಣಪ್ಪಗೌಡ ಪಾಟೀಲ, ಕುಮಾರಗೌಡ ಜನಾಲಿ,ಮಹಾಂತೇಶ ಮಮದಾಪೂರ, ಶಾಂತಗೌಡ ಪಾಟೀಲ, ಬಸವರಾಜ ಪಾಟೀಲ, ಸಿದ್ದನಗೌಡ ಪಾಟೀಲ, ಆರ್.ಬಿ.ಪಾಟೀಲ, ಮುಕ್ಕಣಗೌಡ ಜನಾಲಿ, ನಾಗರಾಜ ಕಾಚೆಟ್ಟಿ, ಡಾ.ಆರ್.ಸಿ.ಭಂಡಾರಿ, ಪಂಪಣ್ಣ ಕಾಚೆಟ್ಟಿ, ಸಿಪಿಐ. ಕರೆಪ್ಪ ಬನ್ನೆ, ಪಿ.ಎಸ್.ಐ ಹನಮಂತ ನರಳೆ, ಜಿಲ್ಲೆಯ ವಿವಿಧ ಭಾಗಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ತಾಲೂಕಿನ ಮಂಗಳೂರು ಗ್ರಾಮದ ಭಜನಾ ಮಂಡಳಿಯವರು ನಂದಿಕೋಲು ಮೆರವಣಿಗೆಯೊಂದಿಗೆ ಮಹಾರಥೋತ್ಸವದಲ್ಲಿ ಗಮನಾರ್ಹವಾಗಿತ್ತು.1