ಶಿಕ್ಷಕರ ಅಮಾನತು ಹಿಂಪಡೆಯದಿದ್ದರೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಕೆ:ಬಸವರಾಜ್ ಮೇಲಿನಮನಿ ಹುಣಸಗಿ: ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಹುಣಸಗಿ ತಾಲೂಕಿನ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಮೇಲಿನಮನಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಾದಗಿರಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸುಳ್ಳು ಆರೋಪಗಳ ಆಧಾರದ ಮೇಲೆ ಶಿಕ್ಷಕರ ವಿರುದ್ಧ ಅಮಾನತು ಕ್ರಮ ಕೈಗೊಂಡಿದ್ದಾರೆ. ಶಿಕ್ಷಕರ ವಿರುದ್ಧದ ಆರೋಪಗಳು ಮತ್ತು ಅಮಾನತು ಆದೇಶವನ್ನು ಕಾನೂನುಬದ್ಧವಾಗಿ ಪರಿಶೀಲಿಸಬೇಕಿದ್ದು, ನ್ಯಾಯಸಮ್ಮತ ವಿಚಾರಣೆಯಿಲ್ಲದೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಶಿಸ್ತು, ವ್ಯಕ್ತಿತ್ವ ನಿರ್ಮಾಣ, ರಾಷ್ಟ್ರಭಕ್ತಿ ಹಾಗೂ ಸಮಾಜ ಸೇವೆಯ ಆಶಯಗಳನ್ನು ಪ್ರತಿಪಾದಿಸುವ ಸಂಘಟನೆಯಾಗಿದೆ. ಸನಾತನ ಪರಂಪರೆ, ವೇದ–ಉಪನಿಷತ್ತುಗಳು, ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆಯಂತಹ ಗ್ರಂಥಗಳಲ್ಲಿನ ಆಶಯಗಳಿಂದ ಪ್ರೇರಣೆ ಪಡೆದಿರುವ ಸಂಸ್ಥೆಯಾಗಿ ಆರ್‌ಎಸ್‌ಎಸ್ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ ಎಂದಿದ್ದಾರೆ. ಪ್ರಾಕೃತಿಕ ವಿಕೋಪಗಳು ಹಾಗೂ ವಿವಿಧ ಸಾಮಾಜಿಕ ಸಂದರ್ಭಗಳಲ್ಲಿ ಸಂಘಟನೆಯ ಕಾರ್ಯಕರ್ತರು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಉದಾಹರಣೆಗಳಿವೆ. ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರಭಕ್ತಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವುದು ಸಂಘಟನೆಯ ಪ್ರಮುಖ ಆಶಯವಾಗಿದ್ದು, ಆ. 31ರೊಳಗೆ ಇಬ್ಬರು ಶಿಕ್ಷಕರ ಅಮಾನತು ಹಿಂಪಡೆಯಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

- ಕರ್ನಾಟಕದಲ್ಲಿ ಗಣಪತಿಗೆ ಮೆರವಣಿಗೆಗೆ ಡಿಜೆ ಅನುಮತಿ ಇಲ್ಲಾ ಎಂದ ಗೃಹ ಮಂತ್ರಿ ಪಿಯಾಂಕ :ಖರ್ಗೆ ವಿರುದ್ಧ ಬಿ ಜೆ ಪಿ ಮುಖಂಡರು ಗಣಪತಿಗೆ ಯಾಕೆ ಡಿಜಿ ಇಲ್ಲಾ ಗೃಹ ಮಂತ್ರಿಯ ರೆ ಮುಸಾಲ್ಮಾನರಿಗೆ ನಾಲಕ್ಕು ಐದು ಸಲಾ ಮೈಕ್ ಹಚ್ಚಿ ನಮಾಜ್ ಮಾಡುತ್ತಾರೆ ನಮಗ ಏಕೆ ಇಲ್ಲ ಹೇಳಿ ಗೃಹ ಮಂತ್ರಿ ಯರೆ ನಮಗೂ ಡಿಜಿ ಪರ್ಮಿಷನ್ ಕೊಡಬೇಕು ಇಲ್ಲಾಂದ್ರೆ ನಾವು ಬಿಡುವುದಿಲ್ಲ ಬಿಜೆಪಿ ಮುಖಂಡ ರಾಜ ಹೇಳಿಕೆ1
- ಬರಗಾಲ ಘೋಷಣೆ, ಬೆಳೆ ಪರಿಹಾರ ಹಾಗೂ ಸಾಲಮನ್ನಾಕ್ಕೆ ಪೀರು ಕೇರೂರ ಮನವಿ ಸಿಂದಗಿ : ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿಬರಗಾಲ ಘೋಷಣೆ, ಬೆಳೆ ಪರಿಹಾರ ಹಾಗೂ ಸಾಲಮನ್ನಾಕ್ಕೆ ಪೀರು ಕೇರೂರ ಮನವಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಬರಗಾಲ ಘೋಷಣೆ ಮಾಡಿ, ರೈತರ ನೆರವಿಗೆ ಧಾವಿಸಬೇಕು ಎಂದು ರೈತ ಹೋರಾಟಗಾರ ಪೀರು ಕೇರೂರ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಪರಿಹಾರ ನೀಡಬೇಕು ಹಾಗೂ ರೈತರ ಸಾಲಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು. ಅಲ್ಲದೆ, ಕೇಂದ್ರ ಸರ್ಕಾರವೂ ರೈತರ ನೆರವಿಗೆ ಬಂದು ಅಗತ್ಯ ಬೆಳೆ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವಿನ ರಾಜಕೀಯ ಹಗ್ಗಜಗ್ಗಾಟದಲ್ಲಿ ರೈತರ ಸಮಸ್ಯೆಗಳನ್ನು ಮರೆತು ಕುಳಿತಿವೆ ಎಂದು ಪೀರು ಕೇರೂರ ಆರೋಪಿಸಿದರು. ರೈತರ ಸಂಕಷ್ಟಕ್ಕೆ ಸರ್ಕಾರಗಳು ಕೂಡಲೇ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪೀರು ಕೇರೂರ ಎಚ್ಚರಿಕೆ ನೀಡಿದರು.1
- ಸಿರವಾರ: ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಸಿರವಾರದಲ್ಲಿ ಪ್ರತಿಭಟನೆ. ಸಿರವಾರ: ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಸಿರವಾರದಲ್ಲಿ ಪ್ರತಿಭಟನೆ. ಅಕ್ರಮ ನೀರಾವರಿ ತಡೆಗಟ್ಟುವಲ್ಲಿ ಆಡಳಿತ ಯಂತ್ರ ಕುಸಿದಿದೆ: ಜೆ.ಶರಣಪ್ಪ ಗೌಡ. ಸಿರವಾರ: ಟಿಎಲ್ಬಿಸಿ ಎಡದಂಡೆ ನಾಲೆಯ ಕೆಳಭಾಗಕ್ಕೆ ಸಲಹಾ ಸಮಿತಿಯ ಸಭೆಯ ನಿರ್ಣಯದಂತೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. ನೀರು ನಿರ್ವಹಣೆ ಮಾಡದ ನೀರಾವರಿ ಇಲಾಖೆಯ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ರೈತರು ಮಂಗಳವಾರ ಪಟ್ಟಣದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಮೇಲ್ಬಾಗದಲ್ಲಿ ಅನಧಿಕೃತ ನೀರಾವರಿ ತಡೆಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಅಕ್ರಮ ನೀರು ಕಬಳಿಕೆ ಮಾಡುವವರ ಮೇಲೆ ಕಾನೂನು ಕ್ರಮ ಆಗುತ್ತಿಲ್ಲ. ಅಧಿಕಾರಿಗಳು ಅನಧಿಕೃತ ದಂಧೆ ತಡೆಗಟ್ಟಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ವಾಡಿಕೆಗಿಂತ ಮಳೆಯಾಗದ ಹಿನ್ನೆಲೆಯಲ್ಲಿ ಬರಗಾಲ ಉಂಟಾಗಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ರೈತರ ಹರಸಾಹಸ ಪಡುವಂತಾಗಿದೆ ಎಂದರು. ರಾಯಚೂರು, ಮಾನ್ವಿ ಮತ್ತು ಸಿರವಾರ ತಾಲೂಕಿನ ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹೋರಾಟದಲ್ಲಿ ಮಾಜಿ ಶಾಸಕರುಗಳಾದ ರಾಜಾ ವೆಂಕಟಪ್ಪ ನಾಯಕ, ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ, ರೈತ ಸಂಘದ ಮುಖಂಡ ಚಾಮರಸ ಮಾಲೀ ಪಾಟೀಲ್, ಹೋರಾಟಗಾರರಾದ ಶಂಕರಗೌಡ ಹರವಿ, ಎನ್. ಉದಯಕುಮಾರ್ ಸಾಹುಕಾರ, ಜೆ.ದೇವರಾಜ ಗೌಡ, ಅಮರೇಶ ಚಾಗಭಾವಿ, ನಾಗರಾಜ ಗೌಡ, ಸವಾರೆಪ್ಪ, ಬಡ್ಡ ಹನುಮಂತ, ರಾಜಪ್ಪ ಹೊನ್ನಟಗಿ, ಮಲ್ಲಪ್ಪ ದೊಡ್ಮನೆ, ದಾನಪ್ಪ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ರೈತರು ಪಾಲ್ಗೊಂಡಿದ್ದರು.2
- ಇಳಕಲ್ ನಗರದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಪೊಲೀಸರಿಂದ ಪಥಸಂಚಲನ ಇಳಕಲ್ಲ : ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವತಿಯಿಂದ ಮಂಗಳವಾರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು. ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಪಾಟೀಲ ಹಾಗೂ ಕ್ರೈಂ ಪಿಎಸ್‌ಐ ಸಿ. ಬಿ. ಕಿರಶ್ಯಾಳ ಅವರ ನೇತೃತ್ವದಲ್ಲಿ ಪಥಸಂಚಲನ ಜರುಗಿತು. ಪೊಲೀಸ್ ಠಾಣೆಯಿಂದ ಆರಂಭಗೊAಡ ಪಥಸಂಚಲನವು ಕಂಠಿ ವೃತ್ತ, ದ್ವಾರಕಾ ಲಾಡ್ಜ್, ಗ್ರಾಮ ಚಾವಡಿ, ಗಾಂಧಿ ಚೌಕ್, ಬಜಾರ್ ಬಸವಣ್ಣನ ಗುಡಿ, ಕೊಪ್ಪರದಪೇಟೆ ಹಾಗೂ ಪಶು ಆಸ್ಪತ್ರೆ ಮಾರ್ಗವಾಗಿ ಸಂಚರಿಸಿ ಪೊಲೀಸ್ ಬಯಲಿನಲ್ಲಿ ಮುಕ್ತಾಯಗೊಂಡಿತು. ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಸಾರ್ವಜನಿಕರಲ್ಲಿ ಸುರಕ್ಷತಾ ಭಾವ ಮೂಡಿಸಲು ಈ ಪಥಸಂಚಲನ ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.2
- "೨೦೨೭ರ ಒಳಗಡೆ ಪರಿಶಿಷ್ಟ ಪಂಗಡದ ಮಾನ್ಯತೆ ಸಿಗದಿದ್ದರೆ ಹೊಸ ಹೋರಾಟ"- ಉಮೇಶ ಕೆ. ಮುದ್ನಾಳ್ ಕಲ್ಯಾಣ ವಾರ್ತೆ -ಯಾದಗಿರಿ ನಿಜಶರಣ ಅಂಬಿಗರ ಚೌಡಯ್ಯನವರ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕ್ಕೆ ಶ್ರಾವಣದ ನಿಮಿತ್ತ ಪೂಜಾ ಅಭಿಯಾನ ಕಾರ್ಯಕ್ರಮ ಜರಗಿತು. ಬಹು ಸಂಖ್ಯಾತರಾಗಿದ್ದು ರಾಜ್ಯದಲ್ಲಿ ಹಿಂದುಳಿದಿರುವ ಕೋಲಿ ಸಮಾಜವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ೨೦೨೭ರ ಒಳಗಡೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದರು. ೧೨ನೇ ಮಾಸದಲ್ಲಿ ಶ್ರೇಷ್ಠವಾದ ಮಾಸ ಶ್ರಾವಣ ಮಾಸದ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕೆ ವಿಶೇಷ ಪೂಜೆ ಕಾರ್ಯಕ್ರಮವು ಮಂಗಳವಾರ ತಾಲೂಕಿನ ಹೆಡಗಿಮದ್ರಿ ಗ್ರಾಮದಲ್ಲಿ ಹಮ್ಮಿಕೊಂಡು ಜಾಗೃತಿ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಡೇರಿಸಲು ಒತ್ತಾಯಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು. ದೇಶದಲ್ಲಿಯೇ ಕೋಲಿ ಸಮಾಜ ೧೬ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ೯ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳಲ್ಲಿದ್ದರೂ ಸಹ ಕರ್ನಾಟಕದಲ್ಲಿ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮರೆಪ್ಪ ಶಿವಪ್ಪ ಪೂಜಾರಿ, ಪವನ ಶಾಣಪ್ಪ,ಬಸವರಾಜ ಪೂಜಾರಿ,ಮಲ್ಲಪ್ಪ,ತಿರುಪತಿ, ದಸ್ತಗೀರ್,ಚಂದಪ್ಪ,ದೇವಪ್ಪ, ಯಲ್ಲಪ್ಪ, ಸಿದ್ದಪ್ಪ,ವಿರೂಪಾಕ್ಷ, ಬಸಪ್ಪ,ಹನುಮಾನ್, ರವಿ, ನಿಂಗಪ್ಪ, ಸಿದ್ದಪ್ಪ,ಶೇಕಪ್ಪ, ರವಿ ರಾಮು,ಮೈಲಾರಿ, ಮರೆಪ್ಪ, ಶಾಣಪ್ಪ,ಸಾಬೂ, ರೇಣುಕಮ್ಮ, ಶಾಣಮ್ಮ,ಮಾರೆಮ್ಮ, ಸುಸಲಮ್ಮ,ಸಿದ್ದಮ್ಮ,ಹಂಪಮ್ಮ, ಹನಮವ್ವ,ಕಮಲಮ್ಮ, ಶಾಂತಮ್ಮ,ಮಹಾದೇವಿ ಮುಂತಾದವರು ಉಪಸ್ಥಿತರಿದ್ದರು. *ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ, ಸೇರ್ಪಡೆಗಾಗಿ ದಿ.ವಿಠ್ಠಲ್ ಹೇರೂರ ಅವರು ಸಾಕಷ್ಟು ಹೋರಾಟ ಮಾಡಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷದಿಂದ,ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ೨೦೨೭ರ ಒಳಗೆ ವಿಠ್ಠಲ್ ಹೇರೂರ ಅವರ ಕನಸು, ನನಸಾಗಬೇಕೆಂಬುದು ಕೋಲಿ ಸಮಾಜದ ಆಶಯವಾಗಿದೆ*-" *ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ*1
- ಇಳಕಲ್ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2111ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ ಇಳಕಲ್ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2111ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 2111ನೇ ಮಧ್ಯವರ್ಜನ ಶಿಬಿರ ನಗರದ ಅನುಭವ ಮಂಟಪದಲ್ಲಿ ನಡೆಯಿತು. ಈ ಮಧ್ಯವರ್ಜನ ಶಿಬಿರವನ್ನು ನಗರಸಭೆಯ ಅಧ್ಯಕ್ಷರಾದ ಸುಧಾರಣಿ ಸಂಗಮ್, ಸದಸ್ಯರಾದ ರೇಷ್ಮಾ ಮಾರನಬಸರಿ, ಸವಿತಾ ಚಲವಾದಿ, ಯಲ್ಲಪ್ಪ ರಾಜಾಪೂರ,ಹನಮಂತ ತುಂಬದ, ಮಾಹಾಂತೇಶ ಹನಮನಾಳ ಹಾಗೂ ಧರ್ಮಸ್ಥಳ ಸಂಘದ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.3
- ಅಫಜಲಪುರ: ಹೆದ್ದಾರಿಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು: ಬಸ್ ನಿಲ್ದಾಣದ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ. ಅಫಜಲಪುರ: ಹೆದ್ದಾರಿಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು: ಬಸ್ ನಿಲ್ದಾಣದ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ.1
- ಸ್ವ ಕ್ಷೇತ್ರದಲ್ಲೇ ಸಚಿವ ಡಾ. ಅಜಯ್ ಸಿಂಗ್ ವಿರುದ್ಧ ಧಿಕ್ಕಾರದ ಕೂಗು ಜೇವರ್ಗಿ: ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಚಿವ ಡಾ. ಅಜಯ್ ಸಿಂಗ್ ಅವರ ಸ್ವಕ್ಷೇತ್ರ ಜೇವರ್ಗಿಯಲ್ಲೇ ಕೆಲ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಘಟನೆಗಳ ಕಾರ್ಯಕರ್ತರು ಸಚಿವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ವಕ್ಷೇತ್ರದಲ್ಲೇ ಸಚಿವರ ವಿರುದ್ಧ ಧಿಕ್ಕಾರದ ಕೂಗು ಕೇಳಿಬಂದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತಮ್ಮ ಬೇಡಿಕೆಗಳನ್ನು ಸರ್ಕಾರ ಹಾಗೂ ಸಚಿವರು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘಟನೆಗಳ ಮುಖಂಡರು ಆಗ್ರಹಿಸಿದರು. #ಜೇವರ್ಗಿ #ಅಜಯ್_ಸಿಂಗ್ #ಧಿಕ್ಕಾರದ_ಕೂಗು #ಆಕ್ರೋಶ #ಸಂಘಟನೆಗಳು1