ಐ.ಸಿ.ಎಸ್.ಸಿ ಫಲಿತಾಂಶ ಪ್ರಕಟ- ಪ್ರಜ್ಞಾ ಶಾಲೆಗೆ ಶೇ.100 ಫಲಿತಾಂಶ ಕಡೂರು: ಪ್ರಜ್ಞಾ ಸೆಂಟ್ರಲ್ ಸ್ಕೂಲ್ ಐ.ಸಿ.ಎಸ್.ಸಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶೇ100 ಫಲಿತಾಂಶ ದಾಖಲಿಸಿದೆ. ಒಟ್ಟು 72 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 31 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ, 41 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿನಿ ಅಮೃತ ಎಲ್.ಎನ್ 98% ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಕನ್ನಡ ಮತ್ತು ಫಿಸಿಕಲ್ ಅನಾಟಮಿ ವಿಷಯದಲ್ಲಿ 100 ಅಂಕ ಪಡೆದಿದ್ದಾರೆ.ರೋನಿತ್ ಡಿ.ರಘು(94.40%ದುಷ್ಯಂತ್ ನಾಯಕ್(93.80) ಸೂರ್ಯತೇಜ(93.80)ದಕ್ಷತಾ ವಿ.ಅಭಿಜ್ಞಾ(93.40)ದಿಶಾ ಡಿ ಹೊಳ್ಳ(93.40)ಬಿ.ವಿ.ರುಚಿತಾ (92.40) ನಂತರದ ಸ್ಥಾನಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿನಿಯರಾದ ಎನ್.ಎಸ್.ಅಮೃತ ಹಾಗೂ ಆಧ್ಯ ಎನ್.ಪ್ರಸನ್ನ ಕನ್ನಡ ವಿಷಯದಲ್ಲಿ 100 ಅಂಕ ಪಡೆದಿದ್ದಾರೆ ಎಂಬುದು ವಿಶೇಷ. ವಿದ್ಯಾರ್ಥಿಗಳ ಸಾಧನೆಯನ್ನು ದೀಕ್ಷಾ ಎಜುಕೇಷನ್ ಟ್ರಸ್ಟ್ ನ ರಾಜಣ್ಣ, ಡಿ.ಪ್ರಶಾಂತ್, ಡಾ.ಬಿ.ಎನ್.ಶಿವಕುಮಾರ್, ನವೀನ್ ಡಿ.ಆಲ್ಮೆಡಾ, ಹಾಗೂ ಶಿಕ್ಷಣ ತಜ್ಞ ಎನ್.ಪಿ.ಮಂಜುನಾಥ ಪ್ರಸನ್ನ ಅಭಿನಂದಿಸಿದ್ದಾರೆ.
ಐ.ಸಿ.ಎಸ್.ಸಿ ಫಲಿತಾಂಶ ಪ್ರಕಟ- ಪ್ರಜ್ಞಾ ಶಾಲೆಗೆ ಶೇ.100 ಫಲಿತಾಂಶ ಕಡೂರು: ಪ್ರಜ್ಞಾ ಸೆಂಟ್ರಲ್ ಸ್ಕೂಲ್ ಐ.ಸಿ.ಎಸ್.ಸಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶೇ100 ಫಲಿತಾಂಶ
ದಾಖಲಿಸಿದೆ. ಒಟ್ಟು 72 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 31 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ, 41 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿನಿ ಅಮೃತ ಎಲ್.ಎನ್ 98% ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ
ಪಡೆದಿದ್ದು, ಕನ್ನಡ ಮತ್ತು ಫಿಸಿಕಲ್ ಅನಾಟಮಿ ವಿಷಯದಲ್ಲಿ 100 ಅಂಕ ಪಡೆದಿದ್ದಾರೆ.ರೋನಿತ್ ಡಿ.ರಘು(94.40%ದುಷ್ಯಂತ್ ನಾಯಕ್(93.80) ಸೂರ್ಯತೇಜ(93.80)ದಕ್ಷತಾ ವಿ.ಅಭಿಜ್ಞಾ(93.40)ದಿಶಾ ಡಿ ಹೊಳ್ಳ(93.40)ಬಿ.ವಿ.ರುಚಿತಾ (92.40) ನಂತರದ ಸ್ಥಾನಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿನಿಯರಾದ ಎನ್.ಎಸ್.ಅಮೃತ ಹಾಗೂ ಆಧ್ಯ ಎನ್.ಪ್ರಸನ್ನ ಕನ್ನಡ
ವಿಷಯದಲ್ಲಿ 100 ಅಂಕ ಪಡೆದಿದ್ದಾರೆ ಎಂಬುದು ವಿಶೇಷ. ವಿದ್ಯಾರ್ಥಿಗಳ ಸಾಧನೆಯನ್ನು ದೀಕ್ಷಾ ಎಜುಕೇಷನ್ ಟ್ರಸ್ಟ್ ನ ರಾಜಣ್ಣ, ಡಿ.ಪ್ರಶಾಂತ್, ಡಾ.ಬಿ.ಎನ್.ಶಿವಕುಮಾರ್, ನವೀನ್ ಡಿ.ಆಲ್ಮೆಡಾ, ಹಾಗೂ ಶಿಕ್ಷಣ ತಜ್ಞ ಎನ್.ಪಿ.ಮಂಜುನಾಥ ಪ್ರಸನ್ನ ಅಭಿನಂದಿಸಿದ್ದಾರೆ.
- ಕಡೂರು: ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಸಮರ್ಥ ನಾಯಕತ್ವದಲ್ಲಿ ಜೆಡಿಎಸ್ ಪಕ್ಷ ಸಧೃಢ ಪ್ರಾದೇಶಿಕ ಪಕ್ಷವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು. ಕಡೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದೇವರಾಜ ಅರಸರು,ಯಡಿಯೂರಪ್ಪ,ಬಂಗಾರಪ್ಪ ಮುಂತಾದವರು ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದರೂ ರಾಜ್ಯದಲ್ಲಿ ಗಟ್ಟಿಯಾಗಿ ನಿಂತದ್ದು ಜನತಾದಳ ಪಕ್ಷ. ಎಚ್.ಡಿ.ದೇವೇಗೌಡರ ದಿಟ್ಟ ಹೋರಾಟದಿಂದ ರಾಜ್ಯದಲ್ಲಿ ಜನತಾದಳ ಪ್ರಾದೇಶಿಕ ಪಕ್ಷವಾಗಿ 25 ವರ್ಷಗಳು ತುಂಬಿವೆ.ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದಲ್ಲಿ ಜನರ ಜೊತೆಯೇ ಸದಾ ಇರುವ ಜನತಾದಳ ಪಕ್ಷದ ಸಂಘಟನೆಗಾಗಿ" ಜನರೊಂದಿಗೆ ಜನತಾದಳ" ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು, ಏಪ್ರಿಲ್ 19 ರಂದು ಕಡೂರು ಎಪಿಎಂಸಿ ಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಕಡೂರಿಗೆ ಆಗಮಿಸುತ್ತಿದ್ದಾರೆ. ಜನತಾದಳದ ಜೀವಾಳವಾಗಿರುವ ಕಾರ್ಯಕರ್ತರ ಸಮಾವೇಶ ಮತ್ತು ಪಕ್ಷದ ಸದಸ್ಯತ್ವ ಅಭಿಯಾನದ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ.ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಇದು ಮಹತ್ವದ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಎಚ್.ಡಿ.ಕುಮಾರಸ್ವಾಮಿಯವರೂ ಸಹ ಆಗಮಿಸಲಿದ್ದಾರೆ ಎಂದರು. ಈ ಕಾರ್ಯಕ್ರಮದ ಕುರಿತು ಕೆಲ ಗೊಂದಲಗಳು ಇದ್ದವಾದರೂ ಈಗ ಅವೆಲ್ಲವೂ ಬಗೆಹರಿದಿವೆ. ಜೆಡಿಎಸ್ ನಾಯಕರಾದ ವೈ.ಎಸ್.ವಿ.ದತ್ತ ಅವರೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ಮೊದಲೇ ಈ ಕಾರ್ಯಕ್ರಮ ಏರ್ಪಾಡಾಗುತ್ತಾದರೂ ದತ್ತ ಅವರ ಅಪೇಕ್ಷೆಯಂತೆ ಮುಂದೂಡಲಾಗಿತ್ತು. ಈಗ ದೇವೇಗೌಡರು, ಕುಮಾರಸ್ವಾಮಿಯವರ ಆದೇಶದಂತೆ ಈ ಕಾರ್ಯಕ್ರಮ ಏರ್ಪಾಡಾಗಿದೆ.10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಮಾವೇಶಗೊಳ್ಳಲಿದ್ದಾರೆ. ವೈ.ಎಸ್.ವಿ.ದತ್ತ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲ ಎಂದರು. ಜಿಲ್ಲಾ ಘಟಕದ ಅಧ್ಯಕ್ಷರ ಸ್ಥಾನ ಕಾಲಿಯಿದೆ. ಈ ಕಾರಣದಿಂದ ತಾಲ್ಕೂಕು ಘಟಕಗಳ ಪದಾಧಿಕಾರಿಗಳ ನೇಮಕಾತಿ ವಿಳಂಬವಾಗಿದೆ.ಎಷ್ಟೋ ಜನ ಕಾರ್ಯಕರ್ತರಾಗಿದ್ದವರೂ ಇನ್ನೂ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದಿಲ್ಲ. ಹಾಗಾಗಿ ಪಕ್ಷದ ಸದಸ್ಯತ್ವದ ನೊಂದಣಿಯೂ ನಡೆಯಲಿದೆ. ಶೀಘ್ರದಲ್ಲೆ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು. ಮುಂದಿನ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಅಥವಾ ಬಿಜೆಪಿ ಯವರಿರುತ್ತಾರೆಯೇ ಎಂಬ ಪ್ರಶ್ನೆ ಈಗ ಅಪ್ರಸ್ತುತ. ಅದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಎರಡೂ ಪಕ್ಷಗಳ ಒಮ್ಮತದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ. ಪಕ್ಷ ಸಂಘಟನೆಯ ವಿಚಾರದಲ್ಲಿಯೂ ಗೊಂದಲವಿಲ್ಲ. ಜೆಡಿಎಸ್ ಪಕ್ಷದ ಸಂಘಟನೆ ನಿರಂತರವಾಗಿ ನಡೆಯುತ್ತಿದೆ. ಎನ್.ಡಿ.ಎ ಭಾಗವಾಗಿ ಜೆಡಿಎಸ್ ಪಕ್ಷ ರಾಜ್ಯದ ಅಭಿವೃದ್ಧಿಗಾಗಿ ಸದಾ ಯೋಚಿಸುವ ಪ್ರಬಲ ಪ್ರಾದೇಶಿಕ ಪಕ್ಷವಾಗಿದೆ.ಕಡೂರಿನಲ್ಲಿ ಬಿಜೆಪಿ- ಜೆಡಿಎಸ್ ಎರಡೂ ಪಕ್ಷಗಳು ಒಟ್ಟಾಗಿಯೇ ಕಾಂಗ್ರೆಸ್ ವಿರುದ್ಧ ಹೋರಾಡುತ್ತದೆ ಎಂದರು. ಜೆಡಿಎಸ್ ಯುವ ಮುಖಂಡ ಚೇತನ್ ಕೆಂಪರಾಜು, ರಘು ಎರೇಹಳ್ಳಿ, ಹಳೇಹಟ್ಟಿ ಆನಂದನಾಯ್ಕ ಮತ್ತಿತರರು ಇದ್ದರು.3
- ಸೊರಬ ಪಟ್ಟಣದ ಪುರದೈವ ಶ್ರೀಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಹಳೇ ರಥ ಶಿಥಿಲವಾದ ಹಿನ್ನೆಲೆ ನೂತನ ರಥ ನಿರ್ಮಾಣ ಮಾಡಲಾಗಿದ್ದು, ಶ್ರೀ ದೇವರಿಗೆ ರಥ ಸಮರ್ಪಣೆಯಾದ ತರುವಾಯ ಮೊದಲ ರಥೋತ್ಸವ ಇದಾಗಿದ್ದು, ಭಕ್ತರು ಪಾಲ್ಗೊಂಡು ದೇವರ ಆಶೀರ್ವಾದ ಬೇಡಿದರು. ರಥೋತ್ಸವ ಅಂಗವಾಗಿ ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ, ಅಭಿಷೇಕ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಘನಪಾಠಿ ನಾರಾಯಣ ಭಟ್ ಮರಾಠೆ ಅವರು ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು. ಭಕ್ತರು ಕಳಸಕ್ಕೆ ಬಾಳೆಹಣ್ಣು, ಉತ್ತುತ್ತಿ, ಕಾಳು ಮೆಣಸು ಬೀರುವ ಮೂಲ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದೇವಸ್ಥಾನದ ಮುಂಭಾಗ ಕೊಂಚ ದೂರ ಮಾತ್ರ ರಥ ಎಳೆಯಲಾಯಿತು. ಹಳೇಸೊರಬ ಗ್ರಾಮಸ್ಥರು ಚಪ್ಪರ ಕಟ್ಟುವ ಹಾಗೂ ಹಿರೇಶಕುನ ಮತ್ತು ಸೊಪ್ಪಿನಕೇರಿ ಗ್ರಾಮಸ್ಥರು ತೇರು ಕಟ್ಟುವ ಶಾಸ್ತ್ರವನ್ನು ನೆರವೇರಿಸಿದರು. ರಥೋತ್ಸವ ಅಂಗವಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಯಿತು. ವರದಿ: ಸಂದೀಪ ಯು ಎಲ್ ಸೊರಬ3
- Post by Suresh Belagere1
- ಚಿತ್ರದುರ್ಗದ ಅಂಬೇಡ್ಕರ್ ವೃತ್ತದಲ್ಲಿ ಭಗವಾನ್ ಬುದ್ದನ ಜಯಂತಿ ಹಿನ್ನೆಲೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮೆರವಣಿಗೆ ಹಮ್ಮಿಕೊಂಡಿದ್ದು ಅಪರ ಜಿಲ್ಲಾಧಿಕಾರಿ ಬಿ ಟಿ ಕುಮಾರಸ್ವಾಮಿ ಅವರು ಆಗಮಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಭಗವಾನ್ ಬುದ್ದನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.1
- Post by Karibasava Balal1
- #Yediyurappa50Years #BSYediyurappa #YediyurappaCelebration #BJPKarnataka #BJPChitradurga #KumaraswamyStatement #PoliticalNewsKarnataka #ChitradurgaNews #BJPStrength #KarnatakaPolitics #ಯಡಿಯೂರಪ್ಪ50ವರ್ಷ #ಯಡಿಯೂರಪ್ಪಅಭಿಮಾನೋತ್ಸವ #ಬಿಜೆಪಿಶಕ್ತಿಪ್ರದರ್ಶನ #ಚಿತ್ರದುರ್ಗಸುದ್ದಿ #ಬಿಜೆಪಿಕಾರ್ಯಕ್ರಮ #ಕುಮಾರಸ್ವಾಮಿಸ್ಪಷ್ಟನೆ #ಕರ್ನಾಟಕರಾಜಕೀಯ #ಬಿಜೆಪಿಬಲವರ್ಧನ #BreakingNews #BigStatement #PoliticalUpdate #BJPWave #PowerShow #May9Event #Election2028 #LocalElection #TrendingNow #ViralNews1
- PART-2 KARNATAKA RASHTRA SAMITHI PAKSHA LEADERS STAND FOR JUSTICE RELATED NEGLIGENCE OF STAFF & DOCTORS INSUFFICIENCY CAUSE DEATHS OF CHILDREN'S AT CHALUVEMBA HOSPITAL MYSORE1
- ನಾಯಕನಹಟ್ಟಿ ಪಟ್ಟಣದಲ್ಲಿ ಸಿಹಿ ಹಂಚಿ ಕಾರ್ಮಿಕರ ದಿನ ಸಂಭ್ರಮಚಾರಣೆ. ಚಳ್ಳಕೆರೆ:ನಾಯಕನಹಟ್ಟಿ: ಶುಕ್ರವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಕರ್ನಾಟಕ ಸೇಟ್ ಕನ್ ಸ್ಟ್ರಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ವತಿಯಿಂದ ಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ್ ಮಾತನಾಡಿದ ಅವರು ನಾಯಕನಹಟ್ಟಿ ಹೋಬಳಿಯ ಕಟ್ಟಡ ಹಾಗೂ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಕೂಡಿ ಸರ್ಕಾರದ ಆದೇಶದಂತೆ ಮೇ 1ರಂದು ಪ್ರತಿ ವರ್ಷ ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆಯನ್ನು ಸಿಹಿ ಹಂಚಿ ಸಂಭ್ರಮದಿಂದ ಆಚರಿಸುತ್ತೇವೆ. ರಾಜ್ಯ ಸರ್ಕಾರ ಕಾರ್ಮಿಕರ ನೆರವಿಗೆ ಮುಂದಾಗಬೇಕು ಕಾರ್ಮಿಕರಿಗೆ ಮೂಲಭೂತ ಸೌಲಭ್ಯ ನೀಡಬೇಕು ಎಂದರು. ಈ ಸಮಯದಲ್ಲಿ ಹೋಬಳಿ ಘಟಕ ಅಧ್ಯಕ್ಷ ಚನ್ನಬಸಯ್ಯನಹಟ್ಟಿ ಬಿ. ತಿಪ್ಪೇಸ್ವಾಮಿ ಮಾತನಾಡಿದರು ಪ್ರತಿ ವರ್ಷ ಮೇ ಒಂದರಂದು ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆ ಆಚರಣೆ ಮಾಡುವುದು ಸಂತಸದ ವಿಷಯ ನಮ್ಮ ಕಾರ್ಮಿಕರು ಸಂಘಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಇದೇ ವೇಳೆ ಕರ್ನಾಟಕ ಸೇಟ್ ಕನ್ ಸ್ಪೆಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ಚಿತ್ರದುರ್ಗ ಗೌರವಾಧ್ಯಕ್ಷ ಪ್ರಸನ್ನ, ಉಪಾಧ್ಯಕ್ಷ ಎಂ. ಸಿ. ಮಚ್ಚೇಂದ್ರಪ್ಪ, ಸಹ ಕಾರ್ಯದರ್ಶಿ ಗೋಪಾಲ್, ಖಜಾಂಚಿ ನಾಗರಾಜ್ ಕಾರ್ಯದರ್ಶಿ ಶಫಿವುಲ್ಲಾ, ಪ್ರಧಾನ ಕಾರ್ಯದರ್ಶಿ ಶಿವು ಹಾಗೂ ನಾಯಕನಹಟ್ಟಿ ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ನಾಯಕನಹಟ್ಟಿ ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಎನ್ ಸಿ. ತಿಪ್ಪೇಸ್ವಾಮಿ, ಖಜಾಂಚಿ ರೇಖಲಗೆರೆ ಮಲ್ಲಿಕಾರ್ಜುನ, ಕಾರ್ಯದರ್ಶಿ ಬೋಸಯ್ಯ, ಸಂಘದ ಎಲ್ಲಾ ಪದಾಧಿಕಾರಿಗಳು ಇದ್ದರು.1