logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿವಮೊಗ್ಗ-28 ವರ್ಷದ ಯುವಕ ಸೇರಿ ಇಬ್ಬರಿಗೆ ಜೀವವಾಧಿ ಶಿಕ್ಷೆ: ಅವರು ಮಾಡಿದ್ದದರೂ ಏನು..? ಶಿವಮೊಗ್ಗ: ಜಮೀನು ವಿಚಾರಕ್ಕಾಗಿ ನಡೆದ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಶಿವಮೊಗ್ಗದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಬೆಳಲಕಟ್ಟೆ ಗ್ರಾಮದ ಮಹೇಶಪ್ಪ ಹಾಗೂ ಆರೋಪಿಗಳಾದ ಕುಮಾರ್ (57) ಮತ್ತು ಕಾರ್ತಿಕ್ (28) ನಡುವೆ ಜಮೀನಿನ ವಿಚಾರದಲ್ಲಿ ಹಗೆತನವಿತ್ತು. ಈ ದ್ವೇಷದ ಹಿನ್ನೆಲೆಯಲ್ಲಿ, ಡಿಸೆಂಬರ್ 3, 2023 ರಂದು ಮಹೇಶಪ್ಪ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪಿಗಳು ಮತ್ತೋಡು ಹನಸವಾಡಿ ಸರ್ಕಲ್ ಬಳಿ ಹೊಂಚು ಹಾಕಿದ್ದರು. ಮಹೇಶಪ್ಪ ಸ್ಕೂಟಿಯಲ್ಲಿ ಬರುತ್ತಿದ್ದಾಗ ತಡೆದು, ಅವರ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದರು ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಸತ್ಯನಾರಾಯಣ ವೈ. ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್​​ ಶೀಟ್​ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಬಿ.ಎಸ್. ಮಮತಾ ಅವರು ವಾದ ಮಂಡಿಸಿದ್ದರು ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದಿದ್ದು, ಆರೋಪಿಗಳ ಮೇಲಿನ ಸಾಕ್ಷ್ಯಾಧಾರಗಳು ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಅಭಯ್ ಧನಪಾಲ್ ಚೌಗಲ ಅವರು ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು 57,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

on 17 March
user_ಆರ್.ವಿ.ಕೃಷ್ಣ
ಆರ್.ವಿ.ಕೃಷ್ಣ
Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
on 17 March
7146ceda-71a5-4d35-a19e-d6ccfd6783c5

ಶಿವಮೊಗ್ಗ-28 ವರ್ಷದ ಯುವಕ ಸೇರಿ ಇಬ್ಬರಿಗೆ ಜೀವವಾಧಿ ಶಿಕ್ಷೆ: ಅವರು ಮಾಡಿದ್ದದರೂ ಏನು..? ಶಿವಮೊಗ್ಗ: ಜಮೀನು ವಿಚಾರಕ್ಕಾಗಿ ನಡೆದ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಶಿವಮೊಗ್ಗದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಬೆಳಲಕಟ್ಟೆ ಗ್ರಾಮದ ಮಹೇಶಪ್ಪ ಹಾಗೂ ಆರೋಪಿಗಳಾದ ಕುಮಾರ್ (57) ಮತ್ತು ಕಾರ್ತಿಕ್ (28) ನಡುವೆ ಜಮೀನಿನ ವಿಚಾರದಲ್ಲಿ ಹಗೆತನವಿತ್ತು. ಈ ದ್ವೇಷದ ಹಿನ್ನೆಲೆಯಲ್ಲಿ, ಡಿಸೆಂಬರ್ 3, 2023 ರಂದು ಮಹೇಶಪ್ಪ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪಿಗಳು ಮತ್ತೋಡು ಹನಸವಾಡಿ ಸರ್ಕಲ್ ಬಳಿ ಹೊಂಚು ಹಾಕಿದ್ದರು. ಮಹೇಶಪ್ಪ ಸ್ಕೂಟಿಯಲ್ಲಿ ಬರುತ್ತಿದ್ದಾಗ ತಡೆದು, ಅವರ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದರು ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಸತ್ಯನಾರಾಯಣ ವೈ. ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್​​ ಶೀಟ್​ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಬಿ.ಎಸ್. ಮಮತಾ ಅವರು ವಾದ ಮಂಡಿಸಿದ್ದರು ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದಿದ್ದು, ಆರೋಪಿಗಳ ಮೇಲಿನ ಸಾಕ್ಷ್ಯಾಧಾರಗಳು ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಅಭಯ್ ಧನಪಾಲ್ ಚೌಗಲ ಅವರು ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು 57,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

More news from ಕರ್ನಾಟಕ and nearby areas
  • ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ಕ್ಷೇತ್ರದ ಕ್ರೈಸ್ತಭಾಂಧವರಿಂದ ಇಂದು ನಗರದ ಡಾ:ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರನ್ ಫಾರ್ ಜೀಸಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರು ರೈಟ್ ರೆವೆರೆಂಡ್ ಡಾ: ಜೋಸೆಫ್ ಅರಮಚ್ಚಾದತ್ ರವರು ವಿದ್ಯುಕ್ತ ವಾಗಿ ಚಾಲನೆ ನೀಡಿ ಮಾತನಾಡಿ, ಯೇಸು ಕ್ರಿಸ್ತನ ಮಾನವ ಕುಲಕ್ಕೆ ಮಾಡಿದ ತ್ಯಾಗದ ಬಲಿದಾನವನ್ನು ಸ್ಮರಿಸಿದರು. ರನ್ ಫಾರ್ ಜೀಸಸ್ ಮೆರವಣಿಗೆ ಯಲ್ಲಿ ಯೇಸುಕ್ರಿಸ್ತನ ತ್ಯಾಗ, ಬಲಿದಾನ ಜೀವನ ಚರಿತ್ರೆಯನ್ನು ನಾಟಕದ ಮೂಲಕ ಪ್ರದರ್ಶಿಸ ಲಾಯಿತು. ಕಾರ್ಯಕ್ರಮಕ್ಕೂ ಸಂವಿಧಾನ ಶಿಲ್ಪಿ ಡಾ: ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.ಮೆರವಣಿಗೆ ಯಲ್ಲಿ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್ ನೇತೃತ್ವದಲ್ಲಿ ನಡೆಯಿತು. ನಗರಸಭಾ ಸದಸ್ಯ ಜಾರ್ಜ್, ವಿಲ್ಸನ್ ಬಾಬು, ಸೂಡ ಸದಸ್ಯ ಫ್ರಾನ್ಸಿಸ್, ಆಶ್ರಯ ಸಮಿತಿ ಸದಸ್ಯ ವೆಂಕಟೇಶ್ ಇಮಾನು ವೇಲ್, ಎಂ.ಜಿ ರಾಮಚಂದ್ರ, ಮೋಸಸ್ ರೋಷಯ್ಯ, ಪಾಸ್ಟರ್ ಗಳಾದ ರೇಮಂಡ್, ಅಂತೋಣಿ ಪ್ರಕಾಶ್ ಸೇರಿದಂತೆ ಸಾವಿರಾರು ಕ್ರೈಸ್ತ ಭಕ್ತರು ಭಾಗವಹಿಸಿದ್ದರು. ಮೆರವಣಿಗೆ ಹಾಲಪ್ಪ ಸರ್ಕಲ್, ಮಾಧವ ಚಾರ್ ಸರ್ಕಲ್, ರಂಗಪ್ಪ ಸರ್ಕಲ್, ಮೂಲಕ ಕನಕ ಮಂಟಪ ಮೈದಾನದಲ್ಲಿ ಮುಕ್ತಾಯ ಗೊಂಡಿತು. ಮಧ್ಯಪ್ರಾಕ್ಷದ ಯುದ್ಧಗಳು ನಿಲ್ಲುವಂತೆ ಎಲ್ಲಾ ವೃತಗಳಲ್ಲಿ ಸಮಾಧಾನಕ್ಕಾಗಿ ಪಾಸ್ಟರ್ ಗಳಿಂದ ಪ್ರಾರ್ಥಿಸಲಾಯಿತು.
    1
    ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ಕ್ಷೇತ್ರದ ಕ್ರೈಸ್ತಭಾಂಧವರಿಂದ ಇಂದು ನಗರದ ಡಾ:ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರನ್ ಫಾರ್ ಜೀಸಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರು ರೈಟ್ ರೆವೆರೆಂಡ್ ಡಾ: ಜೋಸೆಫ್ ಅರಮಚ್ಚಾದತ್ ರವರು ವಿದ್ಯುಕ್ತ ವಾಗಿ ಚಾಲನೆ ನೀಡಿ ಮಾತನಾಡಿ, ಯೇಸು ಕ್ರಿಸ್ತನ ಮಾನವ ಕುಲಕ್ಕೆ ಮಾಡಿದ ತ್ಯಾಗದ ಬಲಿದಾನವನ್ನು ಸ್ಮರಿಸಿದರು. 
ರನ್ ಫಾರ್ ಜೀಸಸ್ ಮೆರವಣಿಗೆ ಯಲ್ಲಿ ಯೇಸುಕ್ರಿಸ್ತನ ತ್ಯಾಗ, ಬಲಿದಾನ ಜೀವನ ಚರಿತ್ರೆಯನ್ನು ನಾಟಕದ ಮೂಲಕ ಪ್ರದರ್ಶಿಸ ಲಾಯಿತು.
ಕಾರ್ಯಕ್ರಮಕ್ಕೂ ಸಂವಿಧಾನ ಶಿಲ್ಪಿ ಡಾ: ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.ಮೆರವಣಿಗೆ ಯಲ್ಲಿ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್ ನೇತೃತ್ವದಲ್ಲಿ ನಡೆಯಿತು. ನಗರಸಭಾ ಸದಸ್ಯ ಜಾರ್ಜ್, ವಿಲ್ಸನ್ ಬಾಬು, ಸೂಡ ಸದಸ್ಯ ಫ್ರಾನ್ಸಿಸ್, ಆಶ್ರಯ ಸಮಿತಿ ಸದಸ್ಯ ವೆಂಕಟೇಶ್ ಇಮಾನು ವೇಲ್, ಎಂ.ಜಿ ರಾಮಚಂದ್ರ, ಮೋಸಸ್ ರೋಷಯ್ಯ, ಪಾಸ್ಟರ್ ಗಳಾದ ರೇಮಂಡ್, ಅಂತೋಣಿ ಪ್ರಕಾಶ್ ಸೇರಿದಂತೆ ಸಾವಿರಾರು ಕ್ರೈಸ್ತ ಭಕ್ತರು ಭಾಗವಹಿಸಿದ್ದರು. ಮೆರವಣಿಗೆ ಹಾಲಪ್ಪ ಸರ್ಕಲ್, ಮಾಧವ ಚಾರ್ ಸರ್ಕಲ್, ರಂಗಪ್ಪ ಸರ್ಕಲ್, ಮೂಲಕ ಕನಕ ಮಂಟಪ ಮೈದಾನದಲ್ಲಿ ಮುಕ್ತಾಯ ಗೊಂಡಿತು.
ಮಧ್ಯಪ್ರಾಕ್ಷದ ಯುದ್ಧಗಳು ನಿಲ್ಲುವಂತೆ ಎಲ್ಲಾ ವೃತಗಳಲ್ಲಿ ಸಮಾಧಾನಕ್ಕಾಗಿ ಪಾಸ್ಟರ್ ಗಳಿಂದ ಪ್ರಾರ್ಥಿಸಲಾಯಿತು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    5 hrs ago
  • ಕಡೂರು:ಮದುವೆ ವಯಸ್ಸಿಗೆ ಬಂದಿದ್ದರೂ ಕೂಡ ಮದುವೆಯಾಗುತ್ತಿಲ್ಲ ಎಂದು ಮಾನಸಿಕವಾಗಿ ಜಿಗುಪ್ಸೆಗೊಂಡ ಕುರಿಗಾಹಿ ಯುವಕನೋರ್ವ ಮದ್ಯ ಸೇವಿಸಿ ತೆಂಗಿನ ಮರಕ್ಕೆ ಗುರುವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಾಲ್ಲೂಕಿನ ಬಾಸೂರು ಸಮೀಪದ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ಕುರಿಗಾಹಿ ಯುವಕ ಕುಮಾರ(26) ನೇಣಿಗೆ ಶರಣಾದವ. ತಾಲ್ಲೂಕಿನ ಬಾಸೂರು ಸಮೀಪದ ಬೋರಗಾನಹಳ್ಳಿ ಗ್ರಾಮದ ಪರಮೇಶ್ವರಪ್ಪ ಎಂಬುವವರ  ತೋಟದಲ್ಲಿ ಕುರಿಗಳ ಮಂದೆಯನ್ನು ಬಿಟ್ಟುಕೊಂಡಿದ್ದನ್ನು. ಇತ್ತೀಚೆಗೆ ರಾಮನವಮಿ ಪ್ರಯುಕ್ತ ಹಬ್ಬಕ್ಕೆಂದು ಊರಿಗೆ ತೆರಳಿದ್ದು ಮನೆಯಲ್ಲಿ ಮದುವೆ ಮಾಡಿಕೊಡುವಂತೆ ಪೋಷಕರಿಗೆ ಒತ್ತಾಯಿಸಿದ್ದನು ಎನ್ನಲಾಗಿದೆ. ಮನೆಯ ಇಬ್ಬರು ಸಹೋದರರಿಗೆ ಮದುವೆಯಾದ ಬಳಿಕ ನಿನಗೆ ಮದುವೆ ಮಾಡಲಾಗುತ್ತದೆ. ಅಲ್ಲಿಯ ತನಕ ಕುರಿ ಮೇಯಿಸಿಕೊಂಡು ಇರುವಂತೆ ತಿಳಿಹೇಳಿದ್ದಾರೆ.  ಮದುವೆ ವಿಚಾರದಲ್ಲಿ ಮಾನಸಿಕವಾಗಿ ‌ಜಿಗುಪ್ಸೆಗೊಂಡು ಮಗನು ನೇಣಿಗೆ ಶರಣಾಗಿರುವುದಾಗಿ ಮೃತನ ತಂದೆ ಬೋಜರಾಜ ದೂರು ನೀಡಿದ್ದು, ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    1
    ಕಡೂರು:ಮದುವೆ ವಯಸ್ಸಿಗೆ ಬಂದಿದ್ದರೂ ಕೂಡ ಮದುವೆಯಾಗುತ್ತಿಲ್ಲ ಎಂದು ಮಾನಸಿಕವಾಗಿ ಜಿಗುಪ್ಸೆಗೊಂಡ ಕುರಿಗಾಹಿ ಯುವಕನೋರ್ವ ಮದ್ಯ ಸೇವಿಸಿ ತೆಂಗಿನ ಮರಕ್ಕೆ ಗುರುವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಾಲ್ಲೂಕಿನ ಬಾಸೂರು ಸಮೀಪದ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ಕುರಿಗಾಹಿ ಯುವಕ ಕುಮಾರ(26) ನೇಣಿಗೆ ಶರಣಾದವ. ತಾಲ್ಲೂಕಿನ ಬಾಸೂರು ಸಮೀಪದ ಬೋರಗಾನಹಳ್ಳಿ ಗ್ರಾಮದ ಪರಮೇಶ್ವರಪ್ಪ ಎಂಬುವವರ  ತೋಟದಲ್ಲಿ ಕುರಿಗಳ ಮಂದೆಯನ್ನು ಬಿಟ್ಟುಕೊಂಡಿದ್ದನ್ನು. ಇತ್ತೀಚೆಗೆ ರಾಮನವಮಿ ಪ್ರಯುಕ್ತ ಹಬ್ಬಕ್ಕೆಂದು ಊರಿಗೆ ತೆರಳಿದ್ದು ಮನೆಯಲ್ಲಿ ಮದುವೆ ಮಾಡಿಕೊಡುವಂತೆ ಪೋಷಕರಿಗೆ ಒತ್ತಾಯಿಸಿದ್ದನು ಎನ್ನಲಾಗಿದೆ. ಮನೆಯ ಇಬ್ಬರು ಸಹೋದರರಿಗೆ ಮದುವೆಯಾದ ಬಳಿಕ ನಿನಗೆ ಮದುವೆ ಮಾಡಲಾಗುತ್ತದೆ. ಅಲ್ಲಿಯ ತನಕ ಕುರಿ ಮೇಯಿಸಿಕೊಂಡು ಇರುವಂತೆ ತಿಳಿಹೇಳಿದ್ದಾರೆ.  ಮದುವೆ ವಿಚಾರದಲ್ಲಿ ಮಾನಸಿಕವಾಗಿ ‌ಜಿಗುಪ್ಸೆಗೊಂಡು ಮಗನು ನೇಣಿಗೆ ಶರಣಾಗಿರುವುದಾಗಿ ಮೃತನ ತಂದೆ ಬೋಜರಾಜ ದೂರು ನೀಡಿದ್ದು, ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    user_Kadur News
    Kadur News
    ಪತ್ರಕರ್ತ Kadur, Chikkamagaluru•
    16 hrs ago
  • ಬೀದಿನಾಯಿಗಳಿಗೆ ಆಹಾರ ಇಡಲು ವ್ಯವಸ್ಥೆ.... ಚಳ್ಳಕೆರೆ: ಬೀದಿ ನಾಯಿಗಳ ಕಲ್ಯಾಣ ಮತ್ತು ನಿರ್ವಹಣೆ ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಸ್ಟ್ರೀಟ್ ಡಾಗ್ಸ್‌ಗೆ ಆಹಾರ ನೀಡಲು ಚಳ್ಳಕೆರೆ ನಗರದದಲ್ಲಿ 20 ಸ್ಥಳಗಳನ್ನು ‘ಫೀಡಿಂಗ್ ಸ್ಪಾಟ್’ಗಳ ಗುರುತಿಸಲಾಗಿದ್ದು ಈಗಾಗಲೆ 9 ಸ್ಥಳಗಳಲ್ಲಿ ಬೀದಿನಾಯಿಗಳಿಗೆ ಆಹಾರ ಇಡಲು ವ್ಯವಸ್ಥೆ ಮಾಡಲಗಿದೆ ಎಂದು ಪೌರಯುಕ್ತೆ ಡಾ.ನಾಗವೇಣಿ (ಕೆ.ಎ.ಎಸ್)ತಿಳಿಸಿದ್ದಾರೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಾನವ ಮತ್ತು ಸಮುದಾಯ ಪ್ರಾಣಿಗಳ ನಡುವೆ ಸಹ ಕಾಳ ದ ಗೆ ವೃದ್ಧಿಸಲು ಮತ್ತು ಸಂಘರ್ಷ ಕಡಿಮೆಗೊಳಿಸಲು ಬೀದಿ/ಸಮುದಾಯ ನಾಯಿಗಳಿಗೆ ಆಹಾರ ನೀಡುವ ಕಾರ್ಯವು ಮಹತ್ತರವಾಗಿದೆ. ಈ ರೀತಿ ವ್ಯವಸ್ಥಿತವಾಗಿ ಆಹಾರ ಒದಗಿಸುವುದರಿಂದ ಶ್ವಾನಗಳ ಹಸಿವು ನೀಗಿಸುವ ಮೂಲಕ ಅವುಗಳ ಕ್ರೂರಸ್ವಭಾವ ಮತ್ತು ಕಚ್ಚುವ ಪ್ರವೃತ್ತಿಯನ್ನು ಕಡಿಮೆಗೊಳಿಸಬಹುದಾಗಿದೆ. ಜತೆಗೆ ಬೀದಿನಾಯಿಗಳ ಸಂತಾನಹರಣ ಶಸ್ತಚಿಕಿತ್ಸೆಗೆ ಹಾಗೂ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ನಿರ್ವಹಿಸಲು ಇದು ಸಹಕಾರಿಯಾಗಿರುತ್ತದೆ ಎಂದು ತಿಳಿಸಿದ್ದಾರೆ . ಫೀಡಿಂಗ್ ಸ್ಪಾಟ್‌ಗಳನ್ನು ಗುರುತಿಸಿರುವ ರಾಗಗಳಲ್ಲಿ ಸೂಚನಾ ಫಲಕ ಅಳವಡಿಸಿ ನಾಗರಿಕರಿಗೆ ಮಾಹಿತಿ ಒದಗಿಸಲಾಗಿದೆ . ಯೋಜನೆ ಕೇವಲ ಪ್ರಾಣಿಗಳ ಕಲ್ಯಾಣಕ್ಕೆ ಮಾತ್ರವಲ್ಲ, ನಗರದಲ್ಲಿ ಮಾನವ-ಪ್ರಾಣಿ ಸಹಬಾಳ್ವೆಯತ್ತ ಒತ್ತು ನೀಡುತ್ತದೆ. ಬೀದಿ ನಾಯಿಗಳ ಸಮರ್ಥ ನಿರ್ವಹಣೆ ಮತ್ತು ನಿಯಂತ್ರಿತ ಬೆಳವಣಿಗೆ, ರಸ್ತೆ ಅಪಘಾತಗಳು ಮತ್ತು ಜನತೆ ನಡುವಿನ ಸಂಘರ್ಷವನ್ನು ಕಡಿಮೆ ಮಾಡಲು ಸಹಾಯಕ ಮಾಡುತ್ತದೆ. ಜೊತೆಗೆ, ಸಾರ್ವಜನಿಕರಲ್ಲಿ ಪ್ರಾಣಿಗಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಇದು ಪ್ರೇರಣೆಯಾಗಿದೆ. ಜನ ವಸತಿ ಕಡಿಮೆ ಇರುವ ಪ್ರದೇಶಗಳಲ್ಲಿ ನಾಯಿಗಳು ಇರುವಂತಹ ಸ್ಥಳಗಳನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿ ಆಹಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರು ಹಾಗೂ ಪ್ರಾಣಿ ಪ್ರಿಯರು ಆಹಾರವನ್ನು ತಂದು ಇಲ್ಲಿ ಹಾಕುವುದರ ಮೂಲಕ ಬೀದಿ ನಾಯಿಗಳ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ಅವರು ಮಾಹಿತಿ ನೀಡಿದರು..
    1
    ಬೀದಿನಾಯಿಗಳಿಗೆ ಆಹಾರ ಇಡಲು ವ್ಯವಸ್ಥೆ....
ಚಳ್ಳಕೆರೆ: ಬೀದಿ ನಾಯಿಗಳ ಕಲ್ಯಾಣ ಮತ್ತು ನಿರ್ವಹಣೆ ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಸ್ಟ್ರೀಟ್ ಡಾಗ್ಸ್‌ಗೆ ಆಹಾರ ನೀಡಲು ಚಳ್ಳಕೆರೆ ನಗರದದಲ್ಲಿ 20 ಸ್ಥಳಗಳನ್ನು ‘ಫೀಡಿಂಗ್ ಸ್ಪಾಟ್’ಗಳ ಗುರುತಿಸಲಾಗಿದ್ದು ಈಗಾಗಲೆ 9 ಸ್ಥಳಗಳಲ್ಲಿ  ಬೀದಿನಾಯಿಗಳಿಗೆ ಆಹಾರ ಇಡಲು ವ್ಯವಸ್ಥೆ ಮಾಡಲಗಿದೆ ಎಂದು ಪೌರಯುಕ್ತೆ ಡಾ.ನಾಗವೇಣಿ (ಕೆ.ಎ.ಎಸ್)ತಿಳಿಸಿದ್ದಾರೆ
ಮಾಧ್ಯಮದೊಂದಿಗೆ ಮಾತನಾಡಿದ ಅವರು
ಮಾನವ ಮತ್ತು ಸಮುದಾಯ ಪ್ರಾಣಿಗಳ ನಡುವೆ ಸಹ ಕಾಳ ದ ಗೆ ವೃದ್ಧಿಸಲು ಮತ್ತು ಸಂಘರ್ಷ ಕಡಿಮೆಗೊಳಿಸಲು ಬೀದಿ/ಸಮುದಾಯ ನಾಯಿಗಳಿಗೆ ಆಹಾರ ನೀಡುವ ಕಾರ್ಯವು ಮಹತ್ತರವಾಗಿದೆ. ಈ ರೀತಿ ವ್ಯವಸ್ಥಿತವಾಗಿ ಆಹಾರ ಒದಗಿಸುವುದರಿಂದ ಶ್ವಾನಗಳ ಹಸಿವು ನೀಗಿಸುವ ಮೂಲಕ ಅವುಗಳ ಕ್ರೂರಸ್ವಭಾವ ಮತ್ತು ಕಚ್ಚುವ ಪ್ರವೃತ್ತಿಯನ್ನು ಕಡಿಮೆಗೊಳಿಸಬಹುದಾಗಿದೆ. ಜತೆಗೆ ಬೀದಿನಾಯಿಗಳ ಸಂತಾನಹರಣ ಶಸ್ತಚಿಕಿತ್ಸೆಗೆ ಹಾಗೂ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ನಿರ್ವಹಿಸಲು ಇದು ಸಹಕಾರಿಯಾಗಿರುತ್ತದೆ ಎಂದು ತಿಳಿಸಿದ್ದಾರೆ
.
ಫೀಡಿಂಗ್ ಸ್ಪಾಟ್‌ಗಳನ್ನು ಗುರುತಿಸಿರುವ ರಾಗಗಳಲ್ಲಿ ಸೂಚನಾ ಫಲಕ ಅಳವಡಿಸಿ ನಾಗರಿಕರಿಗೆ ಮಾಹಿತಿ ಒದಗಿಸಲಾಗಿದೆ . 
ಯೋಜನೆ ಕೇವಲ ಪ್ರಾಣಿಗಳ ಕಲ್ಯಾಣಕ್ಕೆ ಮಾತ್ರವಲ್ಲ, ನಗರದಲ್ಲಿ ಮಾನವ-ಪ್ರಾಣಿ ಸಹಬಾಳ್ವೆಯತ್ತ ಒತ್ತು ನೀಡುತ್ತದೆ. ಬೀದಿ ನಾಯಿಗಳ ಸಮರ್ಥ ನಿರ್ವಹಣೆ ಮತ್ತು ನಿಯಂತ್ರಿತ ಬೆಳವಣಿಗೆ, ರಸ್ತೆ ಅಪಘಾತಗಳು ಮತ್ತು ಜನತೆ ನಡುವಿನ ಸಂಘರ್ಷವನ್ನು ಕಡಿಮೆ ಮಾಡಲು ಸಹಾಯಕ ಮಾಡುತ್ತದೆ. ಜೊತೆಗೆ, ಸಾರ್ವಜನಿಕರಲ್ಲಿ ಪ್ರಾಣಿಗಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಇದು ಪ್ರೇರಣೆಯಾಗಿದೆ.
ಜನ ವಸತಿ ಕಡಿಮೆ ಇರುವ ಪ್ರದೇಶಗಳಲ್ಲಿ ನಾಯಿಗಳು ಇರುವಂತಹ ಸ್ಥಳಗಳನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿ ಆಹಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರು ಹಾಗೂ ಪ್ರಾಣಿ ಪ್ರಿಯರು ಆಹಾರವನ್ನು ತಂದು ಇಲ್ಲಿ ಹಾಕುವುದರ ಮೂಲಕ ಬೀದಿ ನಾಯಿಗಳ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ಅವರು ಮಾಹಿತಿ ನೀಡಿದರು..
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    9 hrs ago
  • Post by Mayur TV Hangal YouTube c
    1
    Post by Mayur TV   Hangal    YouTube c
    user_Mayur TV   Hangal    YouTube c
    Mayur TV Hangal YouTube c
    Psychologist ಹಾನಗಲ್, ಹಾವೇರಿ, ಕರ್ನಾಟಕ•
    4 hrs ago
  • Post by Santa Dsouza
    2
    Post by Santa Dsouza
    user_Santa Dsouza
    Santa Dsouza
    ಹೊನ್ನಾವರ, ಉತ್ತರ ಕನ್ನಡ, ಕರ್ನಾಟಕ•
    8 hrs ago
  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಏಪ್ರಿಲ್ 5 ರಂದು   ದಕ್ಷಿಣ ಕನ್ನಡ ಮತ್ತು  ಕಾಸರಗೋಡು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಏಪ್ರಿಲ್ 5 ರಂದು ಬೆಂಗಳೂರಿನಿಂದ ಹೊರಟು  ಸಂಜೆ 4 ಗಂಟೆಗೆ  ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಮನ, ನಂತರ ಕಾಸರಗೋಡು ಜಿಲ್ಲೆಗೆ ತೆರಳಲಿದ್ದಾರೆ. ರಾತ್ರಿ 8:40- ಮುಖ್ಯಮಂತ್ರಿಗಳು ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.
    1
    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಏಪ್ರಿಲ್ 5 ರಂದು  
ದಕ್ಷಿಣ ಕನ್ನಡ ಮತ್ತು  ಕಾಸರಗೋಡು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಏಪ್ರಿಲ್ 5 ರಂದು ಬೆಂಗಳೂರಿನಿಂದ ಹೊರಟು  ಸಂಜೆ 4 ಗಂಟೆಗೆ  ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಮನ, ನಂತರ ಕಾಸರಗೋಡು ಜಿಲ್ಲೆಗೆ ತೆರಳಲಿದ್ದಾರೆ. ರಾತ್ರಿ 8:40- ಮುಖ್ಯಮಂತ್ರಿಗಳು ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    2 hrs ago
  • Snake rauf 9916403448
    1
    Snake rauf 9916403448
    user_ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 8095782386
    ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 8095782386
    Animal rescue service ಗದಗ, ಗದಗ, ಕರ್ನಾಟಕ•
    40 min ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.