ಯಾದಗಿರಿ ಜಿಲ್ಲಾಮಟ್ಟದಲ್ಲಿ *ದ್ವಿತೀಯ* *ಪಿ.* *ಯು.* *ಸಿ.* ವಿಜ್ಞಾನ ವಿಭಾಗದಲ್ಲಿ *583* ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದ ಕುಮಾರಿ ಭವಾನಿ ಎಸ್ ಹಿರೇಮಠ್ ಇವರಿಗೆ ಯಾದಗಿರಿ ಜಿಲ್ಲೆಯ *ಜಂಗಮ* *ಸಮಾಜದ* ವತಿಯಿಂದ ಸನ್ಮಾನಿಸಲಾಯಿತು ಪರಮ ಪೂಜ್ಯ ಚನ್ನವೀರ ದೇವರು ಸೊಪ್ಪಿಮಠ್. ವಿದ್ಯಾರ್ಥಿ *ಭವಾನಿ* *ಎಸ್* *ಹಿರೇಮಠ್* ಶಾಲು ಸನ್ಮಾನವನ್ನು ಮಾಡಿ ಶ್ರೀರಕ್ಷೆಯನ್ನು ನೀಡಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕನ್ನಡ 98 ಇಂಗ್ಲಿಷ್ 93 ರಸಾಯನಶಾಸ್ತ್ರ 95 ಭೌತಶಾಸ್ತ್ರ 99 ಗಣಿತಶಾಸ್ತ್ರ 99 ಜೀವಶಾಸ್ತ್ರ 99 ಒಟ್ಟು 583 ಅಂಕಗಳನ್ನು ಪಡೆದು ಸಹ್ಯಾದ್ರಿ ವಿಜ್ಞಾನ ಪದವಿಪೂರ್ವ ಕಾಲೇಜು ಹಾಗೂ ಯಾದಗಿರಿ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ ಈ ನಿಮಿತ್ಯ ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷರಾದ ಚನ್ನವೀರಯ್ಯ ಸ್ವಾಮಿ ಹಾಗೂ ತಾಲೂಕ ವೀರಶೈವ ಸಮಾಜದ ಅಧ್ಯಕ್ಷರಾದ ಮಲ್ಲು ಗುಡಿಮಠ ಮತ್ತು ರುದ್ರಸ್ವಾಮಿ ಮೇಲಿನಮಠ ವಿಶ್ವನಾಥಯ್ಯ ಚತುರಾ ಚಾರ್ಯ ಮಠ್ ಚನ್ನಬಸಯ್ಯ ಸ್ವಾಮಿ. ಬಸಯ್ಯಸ್ವಾಮಿ. ವಿಶ್ವರಾಧ್ಯ ಸ್ವಾಮಿ ಮರಗೋಳ ವೀರಯ್ಯಸ್ವಾಮಿ ಹಾಗೂ ವಿದ್ಯಾರ್ಥಿಯ ಪೋಷಕರು ಉಪಸ್ಥಿತರಿದ್ದರು.
ಯಾದಗಿರಿ ಜಿಲ್ಲಾಮಟ್ಟದಲ್ಲಿ *ದ್ವಿತೀಯ* *ಪಿ.* *ಯು.* *ಸಿ.* ವಿಜ್ಞಾನ ವಿಭಾಗದಲ್ಲಿ *583* ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದ ಕುಮಾರಿ ಭವಾನಿ ಎಸ್ ಹಿರೇಮಠ್ ಇವರಿಗೆ ಯಾದಗಿರಿ ಜಿಲ್ಲೆಯ *ಜಂಗಮ* *ಸಮಾಜದ* ವತಿಯಿಂದ ಸನ್ಮಾನಿಸಲಾಯಿತು ಪರಮ ಪೂಜ್ಯ ಚನ್ನವೀರ ದೇವರು ಸೊಪ್ಪಿಮಠ್. ವಿದ್ಯಾರ್ಥಿ *ಭವಾನಿ* *ಎಸ್* *ಹಿರೇಮಠ್* ಶಾಲು ಸನ್ಮಾನವನ್ನು ಮಾಡಿ ಶ್ರೀರಕ್ಷೆಯನ್ನು ನೀಡಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕನ್ನಡ 98 ಇಂಗ್ಲಿಷ್ 93 ರಸಾಯನಶಾಸ್ತ್ರ 95 ಭೌತಶಾಸ್ತ್ರ 99 ಗಣಿತಶಾಸ್ತ್ರ 99 ಜೀವಶಾಸ್ತ್ರ 99 ಒಟ್ಟು 583 ಅಂಕಗಳನ್ನು ಪಡೆದು ಸಹ್ಯಾದ್ರಿ ವಿಜ್ಞಾನ ಪದವಿಪೂರ್ವ ಕಾಲೇಜು ಹಾಗೂ ಯಾದಗಿರಿ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ ಈ ನಿಮಿತ್ಯ ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷರಾದ ಚನ್ನವೀರಯ್ಯ ಸ್ವಾಮಿ ಹಾಗೂ ತಾಲೂಕ ವೀರಶೈವ ಸಮಾಜದ ಅಧ್ಯಕ್ಷರಾದ ಮಲ್ಲು ಗುಡಿಮಠ ಮತ್ತು ರುದ್ರಸ್ವಾಮಿ ಮೇಲಿನಮಠ ವಿಶ್ವನಾಥಯ್ಯ ಚತುರಾ ಚಾರ್ಯ ಮಠ್ ಚನ್ನಬಸಯ್ಯ ಸ್ವಾಮಿ. ಬಸಯ್ಯಸ್ವಾಮಿ. ವಿಶ್ವರಾಧ್ಯ ಸ್ವಾಮಿ ಮರಗೋಳ ವೀರಯ್ಯಸ್ವಾಮಿ ಹಾಗೂ ವಿದ್ಯಾರ್ಥಿಯ ಪೋಷಕರು ಉಪಸ್ಥಿತರಿದ್ದರು.
- ಎಲ್ಲಿ ಧರ್ಮವಿರುತ್ತೋ ಅಲ್ಲಿ ಜಯವಿರುತ್ತೆ." ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶ್ರೀಶೈಲ ಜಗದ್ಗುರುಗಳು.!1
- ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಇನ್ಸ್‌ಪೆಕ್ಟರ್ ಕಣ್ಣೀರು1
- Post by Kalyan karanataka news channel1
- ಹೆರಿಗೆಯ ನಂತರ ರಕ್ತಸ್ರಾವ ಆಂಬುಲೆನ್ಸ್ ಸಿಗದೆ ತೊಂದರೆ ದೇವಲ ಗಾಣಗಾಪೂರ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಆರೋಪ #afzalpur #devalganagapur #priyakkharge #mlaafzalpur #arunkumarmypatil #dho #thoafzalpur #health department1
- ವಿಜಯಪುರ: ಸಿಎಂ ಗಾದಿಗೆ ಹೈಕಮಾಂಡ್‌ನಲ್ಲಿ ಟೆಂಡರ್ ನಡೆದಿದೆ: ಶಾಸಕ ಯತ್ನಾಳ್ ಸ್ಫೋಟಕ ಹೇಳಿಕೆ! ವಿಜಯಪುರದಲ್ಲಿ ಸೋಮವಾರ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ರಾಜ್ಯ ಸರ್ಕಾರದ ನಾಯಕತ್ವದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ನಲ್ಲಿ 'ಟೆಂಡರ್ ಬಿಡ್' ನಡೆಯುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. "ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂಬ ಸಚಿವ ರಾಜಣ್ಣ ಅವರ ಮಾತು ನೂರಕ್ಕೆ ನೂರು ಸತ್ಯ" ಎಂದ ಅವರು, ಸಿಎಂ ಈಗ ಮೊದಲಿನಂತಿಲ್ಲ ಎಂದು ಟೀಕಿಸಿದರು. ಇದೇ ವೇಳೆ ರಾಜ್ಯ ಬಿಜೆಪಿ ನಾಯಕತ್ವ ವಿಫಲವಾಗಿದೆ ಎಂದು ಸ್ವಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ ಯತ್ನಾಳ್, ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರು ಕಾಂಗ್ರೆಸ್‌ಗೆ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.1
- YADGIR BREAKING NEWS || ನರಹಂತಕರ ಅಟ್ಟಹಾಸ: ಶಹಾಪುರದಲ್ಲಿ ಅಮಾನವೀಯ ಕೃತ್ಯ, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ! ಶಹಾಪುರ: ಜಿಲ್ಲೆಯಲ್ಲಿ ಮಾನವೀಯತೆ ಮಕಾಡೆ ಮಲಗಿದೆ. ಹೆಣ್ಣುಮಕ್ಕಳ ರಕ್ಷಣೆ ಎಂಬುದು ಕೇವಲ ಮಾತಿಗೆ ಸೀಮಿತವಾಗಿದೆಯೇ ಎನ್ನುವ ಅನುಮಾನ ಮೂಡುವಂತೆ ಶಹಾಪುರ ತಾಲೂಕಿನ ಗ್ರಾಮದಲ್ಲಿ ಪೈಶಾಚಿಕ ಕೃತ್ಯವೊಂದು ಜರುಗಿದೆ. ಹಸುಳೆ ಎಂದು ನೋಡದೆ ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕರು ದಾಳಿ ನಡೆಸಿ, ಇಡೀ ಜಿಲ್ಲೆಯೇ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಘಟನೆಯ ಹಿನ್ನೆಲೆ: ನಡುರಾತ್ರಿಯ ನರಕದರ್ಶನ ರವಿವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಬಾಲಕಿ ಬಹಿರ್ದೆಸೆಗೆ ತೆರಳಿದಾಗ, ಕಾದು ಕುಳಿತಿದ್ದ ಕಾಮುಕರು ಆಕೆಯ ಮೇಲೆ ಎರಗಿದ್ದಾರೆ. ಬಾಲಕಿಯ ಮೈಮೇಲಿದ್ದ ಹೊದಿಕೆಯಿಂದಲೇ (ದುಪ್ಪಟ್ಟಾ) ಆಕೆಯ ಕೈಕಾಲುಗಳನ್ನು ಕಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಅಷ್ಟರಲ್ಲಿ ಯಾವುದೋ ವಾಹನ ಬರುವ ಸದ್ದು ಕೇಳಿ ಹೆದರಿದ ಪಾಪಿಗಳು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಕಾಲುವೆ ಪಕ್ಕದಲ್ಲಿ ಎಸೆದು ಪರಾರಿಯಾಗಿದ್ದಾರೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಗ್ರಾಮಸ್ಥರು ಬಾಲಕಿಯನ್ನು ಕಂಡು ಪೋಷಕರಿಗೆ ವಿಷಯ ಮುಟ್ಟಿಸಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಕಿ ಪಡೆ ಭೇಟಿ - ಚಿಕಿತ್ಸೆ ಮುಂದುವರಿಕೆ ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃತ್ವಿಕ್ ಶಂಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿ, ಘಟನೆಯ ಮಾಹಿತಿ ಪಡೆದಿದ್ದಾರೆ. ಪ್ರಸ್ತುತ ಬಾಲಕಿ ಚೇತರಿಸಿಕೊಳ್ಳುತ್ತಿದ್ದು, ತಂದೆ ನೀಡಿದ ದೂರಿನ ಮೇರೆಗೆ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ‘ಮೌನ’ಕ್ಕೆ ಆಕ್ರೋಶ ಇಂತಹ ಗಂಭೀರ ಘಟನೆ ನಡೆದಿದ್ದರೂ ಇಡೀ ದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕಣ್ಣೆತ್ತಿ ನೋಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇಲಾಖೆಯ ಈ ನಿರ್ಲಕ್ಷ್ಯ ಧೋರಣೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, "ಅಧಿಕಾರಿಗಳು ಏತಕ್ಕಾಗಿ ಇದ್ದಾರೆ?" ಎಂಬ ಪ್ರಶ್ನೆ ಮೂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿಕೆ: "ಬಾಲಕಿ ಪ್ರಸ್ತುತ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ಈಗಾಗಲೇ ಬಾಲಕಿಯ ಹೇಳಿಕೆ ಪಡೆಯಲಾಗಿದ್ದು, ವೈದ್ಯಕೀಯ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದೇವೆ. ತಪ್ಪಿತಸ್ಥರನ್ನು ಪತ್ತೆಹಚ್ಚಲು ತನಿಖೆ ಚುರುಕುಗೊಳಿಸಲಾಗಿದೆ." — ಎಸ್. ಎಂ ಪಾಟೀಲ್, ಪಿಐ ಶಹಾಪುರ ಯುವ ಮುಖಂಡರ ಆಕ್ರೋಶ: "ಜಿಲ್ಲೆಯಲ್ಲಿ ಸ್ತ್ರೀಪೀಡಕರ ಅಟ್ಟಹಾಸ ಮಿತಿಮೀರಿದೆ. ಸರಣಿ ಪ್ರಕರಣಗಳು ನಡೆಯುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಆಗಲೇ ಸಮಾಜಕ್ಕೆ ಎಚ್ಚರಿಕೆ ರವಾನೆಯಾಗಲು ಸಾಧ್ಯ." — ರಾಯಪ್ಪ ಚಲುವಾದಿ, ಯುವ ಮುಖಂಡರು ತನಿಖೆ ಮುಂದುವರಿದಿದೆ... ಕಾಮುಕರ ಬೇಟೆಗೆ ಪೊಲೀಸರು ಬಲೆ ಬೀಸಿದ್ದಾರೆ.1
- ಆರೋಗ್ಯ ಸಚಿವರೇ ನಿಮ್ಮ ಹಾಸ್ಪಿಟಲ್ ಗತಿ ನೋಡಿ ಬಡವರ ಪರವಾಗಿ ಹಾಸ್ಪಿಟಲಲ್ಲಿ ಎಲ್ಲಾ ಮೆಡಿಸಿನ್ ಕಳಿಸ್ತೀನಿ ಅಂತ ಹೇಳುತ್ತಿದ್ದೀರಲ್ಲ ನೋಡಿ ಆ ನರ್ಸಿಬ್ಬಂದಿ ಹೇಳುತ್ತಾಳೆ ಏಳು ದಿವಸ ಟೈಮ್ ಇದೆ ಬಿಟ್ಟು ಬಂದು ಮಾಡಿಸಿಕೊಳ್ಳಿ ಅದರ ಮೆಡಿಸನ್ ಕಾಲಿಯಾಗಿವೆ. ಸರಿ ಏಳು ದಿನದಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಜವಾಬ್ದಾರು ಯಾರು ಸಿಬ್ಬಂದಿಯ ಹೊಣೆಗಾರು.1
- ಮೇಲಧಿಕಾರಿಗಳಿಂದ ಕಿರುಕುಳ ಆರೋಪ: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಇನ್ಸ್‌ಪೆಕ್ಟರ್ ಕಣ್ಣೀರು ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಲಧಿಕಾರಿಗಳ ಕಿರುಕುಳದ ಆರೋಪ ಮತ್ತೆ ಮುನ್ನಲೆಗೆ ಬಂದಿದೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (DCRE) ಪಶ್ಚಿಮ ವಲಯದ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಅವರು ತಮ್ಮ ಮೇಲಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿ ಕಣ್ಣೀರು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಘಟನೆಯ ಹಿನ್ನೆಲೆ: ಇನ್ಸ್‌ಪೆಕ್ಟರ್ ಶ್ರೀನಿವಾಸ್ ಅವರು ತಮಗೆ ಎಸ್‌ಪಿ ಕರಿಬಸವನಗೌಡ ಮತ್ತು ಡಿವೈಎಸ್‌ಪಿ ಮಹೇಶ್ ಗೌಡರ್ ಅವರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ಕೆಲವು ಸಮಯದಿಂದ ತಮ್ಮನ್ನು ಗುರಿಯಾಗಿಸಿಕೊಂಡು ಶಿಸ್ತು ಕ್ರಮದ ಹೆಸರಿನಲ್ಲಿ ಹಿಂಸೆ ನೀಡಲಾಗುತ್ತಿದೆ ಮತ್ತು ಜಾತಿ ಆಧಾರಿತ ತಾರತಮ್ಯ ಎಸಗಲಾಗುತ್ತಿದೆ ಎಂದು ಅವರು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ. ಪ್ರಮುಖ ಆರೋಪಗಳು: ಮಾನಸಿಕ ಹಿಂಸೆ: ಕರ್ತವ್ಯದ ಅವಧಿಯಲ್ಲಿ ಅನಗತ್ಯವಾಗಿ ಒತ್ತಡ ಹೇರುವುದು ಮತ್ತು ಸಣ್ಣಪುಟ್ಟ ಕಾರಣಗಳಿಗೆ ನೋಟಿಸ್ ನೀಡುವುದು. ತಾರತಮ್ಯ: ಕಚೇರಿಯಲ್ಲಿ ಗೌರವಯುತವಾಗಿ ನಡೆಸಿಕೊಳ್ಳದೆ, ಕೆಳಹಂತದ ಸಿಬ್ಬಂದಿಯ ಮುಂದೆ ಅವಮಾನಿಸುವುದು. ದೂರು ಸಲ್ಲಿಕೆ: ಈ ಕಿರುಕುಳ ತಾಳಲಾರದೆ ಶ್ರೀನಿವಾಸ್ ಅವರು ಈಗಾಗಲೇ ಡಿಜಿ ಮತ್ತು ಐಜಿಪಿ ಎಂ.ಎ. ಸಲೀಂ ಹಾಗೂ ಡಿಜಿ ಉಮೇಶ್ ಕುಮಾರ್ ಅವರಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ. ಇಲಾಖೆಯ ಪ್ರತಿಕ್ರಿಯೆ: ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಿರುವ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು, ಘಟನೆಯ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಡಿಸಿಆರ್‌ಇ (DCRE) ವಿಭಾಗದಲ್ಲಿ ಅಧಿಕಾರಿಗಳ ನಡುವಿನ ಶೀತಲ ಸಮರ ಬೀದಿಗೆ ಬರುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತಮ್ಮ ಪ್ರಾಮಾಣಿಕ ಸೇವೆಗೆ ಬೆಲೆ ಇಲ್ಲದಂತಾಗಿದೆ ಎಂದು ಇನ್ಸ್‌ಪೆಕ್ಟರ್ ಶ್ರೀನಿವಾಸ್ ಅವರು ನೋವು ವ್ಯಕ್ತಪಡಿಸಿದ್ದು, ಸರ್ಕಾರ ಮತ್ತು ಇಲಾಖೆ ತಮಗೆ ನ್ಯಾಯ ಒದಗಿಸಬೇಕೆಂದು ವಿನಂತಿಸಿದ್ದಾರೆ.1