Shuru
Apke Nagar Ki App…
ಶಿವಮೊಗ್ಗ-ಜೆಡಿಎಸ್ ಜಿಲ್ಲಾಧ್ಯಕ್ಷೆ ಯಾಗಿ ಗೀತಾ ಸತೀಶ್ 3 ನೇ ಬಾರಿಗೆ ನೇಮಕ ಶಿವಮೊಗ್ಗ: ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಯಾಗಿ ಗೀತಾ ಸತೀಶ್ ಅವರು ಸತತ ಮೂರನೇ ಬಾರಿ ನೇಮಕ ವಾಗಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರ ಸ್ವಾಮಿ ಅವರು ಗೀತಾ ಅವರಿಗೆ ಬೆಂಗಳೂರಿ ನಲ್ಲಿ ನಡೆದ ಸಮಾರಂಭದಲ್ಲಿ ನೇಮಕಾತಿ ಪತ್ರ ನೀಡಿದರು. ತಮ್ಮನ್ನು ಮೂರನೇ ಬಾರಿ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದ ಪಕ್ಷದ ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್, ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಪ್ರಮುಖರಾದ ರಶ್ಮಿ, ಭೋಜೇಗೌಡ ಹಾಗೂ ಕೆ.ಎನ್. ರಾಮಕೃಷ್ಣ ಅವರಿಗೆ ಗೀತಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಆರ್.ವಿ.ಕೃಷ್ಣ
ಶಿವಮೊಗ್ಗ-ಜೆಡಿಎಸ್ ಜಿಲ್ಲಾಧ್ಯಕ್ಷೆ ಯಾಗಿ ಗೀತಾ ಸತೀಶ್ 3 ನೇ ಬಾರಿಗೆ ನೇಮಕ ಶಿವಮೊಗ್ಗ: ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಯಾಗಿ ಗೀತಾ ಸತೀಶ್ ಅವರು ಸತತ ಮೂರನೇ ಬಾರಿ ನೇಮಕ ವಾಗಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರ ಸ್ವಾಮಿ ಅವರು ಗೀತಾ ಅವರಿಗೆ ಬೆಂಗಳೂರಿ ನಲ್ಲಿ ನಡೆದ ಸಮಾರಂಭದಲ್ಲಿ ನೇಮಕಾತಿ ಪತ್ರ ನೀಡಿದರು. ತಮ್ಮನ್ನು ಮೂರನೇ ಬಾರಿ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದ ಪಕ್ಷದ ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್, ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಪ್ರಮುಖರಾದ ರಶ್ಮಿ, ಭೋಜೇಗೌಡ ಹಾಗೂ ಕೆ.ಎನ್. ರಾಮಕೃಷ್ಣ ಅವರಿಗೆ ಗೀತಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
- ಬೊಮ್ಮಣ್ಣ.. ಎನ್. ಈಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ🙏on 13 March
More news from ಕರ್ನಾಟಕ and nearby areas
- ದಾವಣಗೆರೆ ವಚನಾನಂದ ಶ್ರೀಗಳು ಮಠ ತೊಲಗುವಂತೆ ಒತ್ತಾಯ ಪಂಚಮಸಾಲಿ ಸಮಾಜ ಯುವ ಘಟಕ ಅಧ್ಯಕ್ಷರ ಕೊಟ್ರೇಶ್ ಆಗ್ರಹ ರೆಕ್ಮಂಡ್ ಮೇಲೆ ಪೀಠಾಧ್ಯಕ್ಷರಾಗಿದ್ದ ವಚನಾನಂದ ಸ್ವಾಮೀಜಿ ದಿಂಗಾಲೇಶ್ವರ ಸ್ವಾಮೀಜಿ ಶಿಫಾರಸ್ಸಿನಿಂದ ಬಂದಿದ್ದ ಸ್ವಾಮೀಜಿ ತಕ್ಷಣ ಮಠದಿಂದ ಹೊರಗಡೆ ಹೋಗುವಂತೆ ಒತ್ತಾಯ ಸಮಾಜದ ಹಿರಿಯರು ನಿರ್ಧರಿಸಿ ಪದಚ್ಯುತಿಗೊಳಿಸಿದ್ದಾರೆ ಗೌರವದಿಂದ ಮಠ ಖಾಲಿ ಮಾಡಿ ಇಲ್ಲ ನಾವೇ ಖಾಲಿ ಮಾಡಿಸುತ್ತೇವೆ ಎಂದು ಎಚ್ಚರಿಕೆ ಈ ಹಿಂದೆ ಸಿದ್ದಲಿಂಗಸ್ವಾಮೀಜಿ ಪದಚ್ಯುತಿಯಾದ ವೇಳೆ ನೀವೆ ಹೊರಗಡೆ ಹೋಗುವಂತೆ ಹೇಳಿದ್ದೀರಾ ಇದೀಗ ನೀವು ಪದಚ್ಯುತಿಯಾಗಿದ್ದೀರಾ ಗೌರವದಿಂದ ಮಠ ಬಿಟ್ಟು ತೊಲಗಿ ಎಂದು ಆಗ್ರಹ1
- ಚಿತ್ರದುರ್ಗದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ತಡೆಗೋಡೆ ದ್ವಂಸಗೊಂಡ ಘಟನೆ ನಡೆದಿದೆ. ಹೊಳಲ್ಕೆರೆ ರಸ್ತೆಯ ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ತಡೆಗೋಡೆಗೆ ಡಿಕ್ಕಿ ಹೊಡೆದು ಘಟನೆ ನಡೆದಿದ್ದು ವೃತ್ತದ ಸುತ್ತಲೂ ಸ್ಟೀಲ್ ರೀಲ್ ಮಾಡಲಾಗಿತ್ತು ಅಪರಿಚತ ವಾಹನ ಡಿಕ್ಕಿ ಹೊಡದ ಪರಿಣಾಮ ಸ್ಟೀಲ್ ರೀಲ್ ಧ್ವಂಸಗೊಂಡಿದೆ.1
- Post by Suresh Belagere1
- Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User1
- ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ವಿಚಾರಣೆಗೆ ಹಾಜರಾಗದ ಕಾರಣ ಪುನೀತ್ ಕೆರೆಹಳ್ಳಿಯನ್ನು ಬೆಳ್ತಂಗಡಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ನೀಡಿದ ನೋಟಿಸ್ ಗೆ ಹಾಜರಾಗದ ಕಾರಣ ಬೆಳ್ತಂಗಡಿ ನ್ಯಾಯಾಲಯದಿಂದ ಬಂಧನ ವಾರಂಟ್ ಪಡೆದು ಎ.15ರಂದು ಬೆಂಗಳೂರಿಗೆ ತೆರಳಿದ ಬೆಳ್ತಂಗಡಿ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ. ಪುನೀತ್ ಕೆರೆಹಳ್ಳಿಯನ್ನು ಇಂದು ಸಂಜೆಯ ವೇಳೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಬಳಿಕ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.1
- ಮನೆ ಕಳ್ಳತನ ಮಾಡಿದ್ದ ಆರೋಪಿ ಬಂಧನ; ₹1,90,000 ಜಪ್ತಿ ಕೂಡ್ಲಿಗಿ ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಾನಹೊಸಹಳ್ಳಿಯ ಪೊಲೀಸರು ಯಶಸ್ವಿಯಾಗಿದರೆ. ನಜೀರ್ ಶಫಿ ಬಂಧಿತ ಆರೋಪಿ, ಕಾನಹೊಸಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯ ಮಂಗಾಪುರ ಗ್ರಾಮದಲ್ಲಿ ಜನವರಿ ಹಾಗು ಡಿಸೆಂಬರ್ ತಿಂಗಳಲ್ಲಿ ಎರಡು ಪ್ರತ್ಯಕ ಮನೆಗಳ್ಳತಾನವಾದ ಕುರಿತು ಪ್ರಕರಣ ದಾಕಲಾಗಿದ್ದವು, ಪ್ರಕರಣದ ಜಾಡು ಹಿಡಿದ ಕಾನಾಹೊಸಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ₹1,90000 ಹಣವನ್ನು ವಶಕ್ಕೆ ಪಡೆದಿದ್ದಾರೆ. ಮಂಗಪುರದ ಬಸವರಾಜ ಎಂಬುವವರ ಮನೆಯಲ್ಲಿ ಬೀರುವಿನಲ್ಲಿದ್ದ 145000 ಹಾಗೂ ಗುರುಬಸವರಾಜ್ ಎಂಬುವವರ ಮನೆಯಲ್ಲಿ ₹55000 ಹಣವನ್ನು ಯಾರು ಇಲ್ಲದ ವೇಳೆ ಕಳ್ಳತನ ಮಾಡಿರುವ ಬಗ್ಗೆ ಪ್ರಕರಣ ದಾಕಲಾಗಿತ್ತು. ಎಸ್ಪಿ ಜಾಹ್ನವಿ ಎಸ್, ಎಎಸ್ಪಿ ಮಂಜುನಾಥ, ಡಿವೈಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ಡಿ ದುರುಗಪ್ಪ ಮಾರ್ಗದರ್ಶನದಲ್ಲಿ ಪಿಎಸ್ಐ ಸಿದ್ರಾಮ್ ಬಿದರಾಣಿ ನೇತೃತ್ವದಲ್ಲಿ ಸಿಬಂದ್ದಿ ಕೃಷ್ಣಪ್ಪ, ಸುರೇಶ್, ಕೊಟ್ರೇಶ ಅಂಗಡಿ, ಸಿದ್ದಲಿಂಗಪ್ಪ, ವಿನಾಯಕ್, ಸಂದೀಪ್, ರವಿಚಂದ್ರ ಗೌಡ, ಕೃಷ್ಣ ನಾಯಕ್ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ ಹಾಗೂ ಸಿಬಂದ್ದಿ ವರ್ಗಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಜಾಹ್ನವಿ ಅಭಿನಂದಿಸಿದ್ದಾರೆ.1
- ಅರಕಲಗೂಡಿನಲ್ಲಿ ನಡೆದ ಈ ಘಟನೆ ನಿಜಕ್ಕೂ ಆತಂಕಕಾರಿ. ಅದೃಷ್ಟವಶಾತ್ ಟ್ರ್ಯಾಕ್ಟರ್ ನಿಧಾನವಾಗಿ ಚಲಿಸುತ್ತಿದ್ದರಿಂದ ಮತ್ತು ಸಮಯಪ್ರಜ್ಞೆ ಮೆರೆದ ಸಾರ್ವಜನಿಕರಿಂದ ದೊಡ್ಡ ಅನಾಹುತ ತಪ್ಪಿದೆ. ಅರಕಲಗೂಡು : ಪಟ್ಟಣದಿಂದ ರಾಮನಾಥಪುರ ಕಡೆಗೆ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ ವ್ಯಕ್ತಿಯೋರ್ವ ಹಠಾತ್ತನೆ ಮೂರ್ಚೆಹೋದ ಪ್ರಕರಣ ನಡೆದಿದೆ. ಬುಧವಾರ ಮಧ್ಯಾಹ್ನ 12-15ರ ವೇಳೆ ಪಟ್ಟಣದ ಖಾಸಗಿ ಅಂಗಡಿಯೊಂದರಲ್ಲಿ ಪಶು ಆಹಾರದ ಚೀಲಗಳನ್ನು ಟ್ರ್ಯಾಕ್ಟರ್ ನಲ್ಲಿ ತುಂಬಿಸಿಕೊಂಡು ಶಿರಂಗಾಲ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಚಾಲನೆ ಮಾಡುವ ವೇಳೆಯೇ ಮೂರ್ಚೆ ಹೋಗಿದ್ದಾನೆ.ಈ ವೇಳೆ ವಾಹನದ ಚಾಲನೆ ಮುಂದೆ ಸಾಗುತ್ತಿತ್ತು.ಪಟ್ಟಣದ ಚನ್ನಬಸವೇಶ್ವರ ಸಮುದಾಯದ ಸರ್ಕಲ್‌ನಲ್ಲಿ ಗಾಡಿಯನ್ನು ರಾಮನಾಥಪುರ ಮಾರ್ಗಕ್ಕೆ ತಿರುಗಿಸಿದ್ದಾನೆ.ಈ ಭಾಗ ಸ್ವಲ್ಪಮಟ್ಟಿದೆ ದಿಬ್ಬದಿಂದ ಕೂಡಿರುವ ಪರಿಣಾಮ ನಿಧಾನವಾಗಿ ಟ್ರ್ಯಾಕ್ಟರ್ ಚಲಿಸುತ್ತಿದೆ.ಆದರೆ ಚಾಲಕ ಮಾತ್ರ ಸೀಟ್‌ಗೆ ಒರೆಗಿಕೊಂಡು ಪ್ರಜ್ಞಾ ಹೀನ ಸ್ಥಿತಿಯಲ್ಲಿ ತಲೆ ಹೊರಭಾಗಕ್ಕೆ ಭಾಗಿರುವುದು ಕಂಡುಬಂದೆ.ಕೂಡಲೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ನಿಧಾನಗತಿಯಲ್ಲಿ ಚಲಿಸುತ್ತಿದ್ದ ಟ್ರ್ಯಾಕ್ಟರ್‌ನ್ನು ತಡೆದು ಮುಂದೆ ಸಂಭವಿಸಬಹುದಾಗಿದ್ದ ಅಪಘಾತ,ಪ್ರಾಣ ಹಾನಿಯನ್ನು ತಪ್ಪಿಸಿದ್ದಾರೆ. ಒಬ್ಬ ವ್ಯಕ್ತಿ ಚಾಲನೆ ಮಾಡುವಾಗ ಈ ರೀತಿ ಮೂರ್ಛೆ ಹೋಗಲು ಅಥವಾ ಪ್ರಜ್ಞೆ ತಪ್ಪಲು ಹಲವು ಕಾರಣಗಳಿರಬಹುದು: ತೀವ್ರ ಬಿಸಿಲು ಮತ್ತು ನಿರ್ಜಲೀಕರಣ: ಬೇಸಿಗೆಯ ತಾಪಮಾನ ಹೆಚ್ಚಾಗಿರುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗಿ (Dehydration) ತಲೆಸುತ್ತು ಬರಬಹುದು. ರಕ್ತದೊತ್ತಡದ ಏರುಪೇರು: ಲೋ ಬಿಪಿ ಅಥವಾ ಸಕ್ಕರೆ ಅಂಶ ಕಡಿಮೆಯಾಗುವುದು (Hypoglycemia) ಕೂಡ ಹಠಾತ್ ಪ್ರಜ್ಞೆ ತಪ್ಪಲು ಕಾರಣವಾಗುತ್ತದೆ. ಅಪಸ್ಮಾರ (Epilepsy): ವ್ಯಕ್ತಿಗೆ ಮೊದಲೇ ಫಿಟ್ಸ್ ಅಥವಾ ಅಪಸ್ಮಾರದ ಸಮಸ್ಯೆ ಇದ್ದರೆ ಈ ರೀತಿ ಸಂಭವಿಸುವ ಸಾಧ್ಯತೆ ಇರುತ್ತದೆ. ಅತಿಯಾದ ಆಯಾಸ: ಸರಿಯಾದ ವಿಶ್ರಾಂತಿ ಇಲ್ಲದೆ ದೀರ್ಘಕಾಲ ಕೆಲಸ ಮಾಡುವುದು ಸಹ ಮೆದುಳಿನ ಮೇಲೆ ಪರಿಣಾಮ ಬೀರಬಹುದು. #ArkalgudNews #tractorlife #news5kannada #NewsUpdate1
- ಗ್ರಾಮ ಪಂಚಾಯತಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿತ್ರದುರ್ಗದ ಜಿಲ್ಲಾ ಪಂಚಾಯತ್ ಬಳಿ ಪ್ರತಿಭಟನೆ ನಡೆಸಲಾಯಿತು. ಇನ್ನೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘಟನೆ ಸಿಐಟಿಯು ವತಿಯಿಂದ ಪ್ರವಾಸಿ ಮಂದಿರದಿಂದ ಜಿಲ್ಲಾ ಪಂಚಾಯತ್ ಕಚೇರಿ ವರೆಗೆ ಮೆರವಣಿಗೆ ಮೂಲಕ ಬಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.1