logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬಿದರೆಕೆರೆ-ಬೇಡತ್ತೂರು ರೈಲ್ವೆ ನಿಲ್ದಾಣಕ್ಕೆ ಮಿಡಿಗೇಶಿ ಹೆಸರಿಡಲು ಒತ್ತಾಯ ಮಧುಗಿರಿ ತಾಲೂಕಿನಲ್ಲಿ ನಡೆಯುತ್ತಿರುವ ತುಮಕೂರು ರಾಯದುರ್ಗ ರೈಲ್ವೆ ಕಾಮಗಾರಿಯಲ್ಲಿ ಬಿದರೆಕೆರೆ ಬೇಡತ್ತೂರು ಗ್ರಾಮದ ರೈಲ್ವೆ ನಿಲ್ದಾಣಕ್ಕೆ ಮಿಡಿಗೇಶಿ ಹೆಸರಿಡುವಂತೆ, ಬಿಜೆಪಿ ಒಬಿಸಿ ಮೋರ್ಚ ಜಿಲ್ಲಾ ಉಪಾಧ್ಯಕ್ಷ ಮಿಡಿಗೇರ್ ಶ್ರೀ ಕೃಷ್ಣಮೂರ್ತಿ ಇವತ್ತಾಯಿಸಿದ್ದಾರೆ

7 hrs ago
user_Madhugiri news
Madhugiri news
Local News Reporter ಮಧುಗಿರಿ, ತುಮಕೂರು, ಕರ್ನಾಟಕ•
7 hrs ago
f8255360-a4d3-4d06-8f60-a113cb3a0c57

ಬಿದರೆಕೆರೆ-ಬೇಡತ್ತೂರು ರೈಲ್ವೆ ನಿಲ್ದಾಣಕ್ಕೆ ಮಿಡಿಗೇಶಿ ಹೆಸರಿಡಲು ಒತ್ತಾಯ ಮಧುಗಿರಿ ತಾಲೂಕಿನಲ್ಲಿ ನಡೆಯುತ್ತಿರುವ ತುಮಕೂರು ರಾಯದುರ್ಗ ರೈಲ್ವೆ ಕಾಮಗಾರಿಯಲ್ಲಿ ಬಿದರೆಕೆರೆ ಬೇಡತ್ತೂರು ಗ್ರಾಮದ ರೈಲ್ವೆ ನಿಲ್ದಾಣಕ್ಕೆ ಮಿಡಿಗೇಶಿ ಹೆಸರಿಡುವಂತೆ, ಬಿಜೆಪಿ ಒಬಿಸಿ ಮೋರ್ಚ ಜಿಲ್ಲಾ ಉಪಾಧ್ಯಕ್ಷ ಮಿಡಿಗೇರ್ ಶ್ರೀ ಕೃಷ್ಣಮೂರ್ತಿ ಇವತ್ತಾಯಿಸಿದ್ದಾರೆ

More news from ಕರ್ನಾಟಕ and nearby areas
  • ಪಾಕಿಸ್ತಾನಿ ಸೈನಿಕರು ಹಾಕಿದ ಬಾಂಬ್ ನಿಂದ ನನ್ನ ಕಾಲು ಹೋಯಿತು ಆದರೂ ಯುದ್ಧ ಗೆದ್ದಿದ್ದೇವೆ 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಕ್ಯಾಪ್ಟನ್ ನವೀನ್ ನಾಗಪ್ಪ ಯುದ್ಧದ ಸಮಯದಲ್ಲಿ ಬಿದ್ದಂತಹ ಬಾಂಬ ನಿಂದ ತಮ್ಮ ಕಾಲನ್ನೇ ಕಳೆದುಕೊಂಡಿದ್ದಾರೆ ಕಾರ್ಗಿಲ್ ಯುದ್ಧದ ಸಮಯದಲ್ಲಿ ನಾವು ಹೇಗೆಲ್ಲಾ ಹೋರಾಟ ಮಾಡಿದೆವು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಹೇಳಿದ್ರು ಕಾರ್ಗಿಲ್ನಂತಹ ಈ ಮಚ್ಚಾದಿತಾ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರು ಹಾಗೂ ಭಾರತೀಯ ಸೈನಿಕರ ಹೋರಾಟ ಹೇಗಿತ್ತು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು
    1
    ಪಾಕಿಸ್ತಾನಿ ಸೈನಿಕರು ಹಾಕಿದ ಬಾಂಬ್ ನಿಂದ ನನ್ನ ಕಾಲು ಹೋಯಿತು ಆದರೂ ಯುದ್ಧ ಗೆದ್ದಿದ್ದೇವೆ 
1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಕ್ಯಾಪ್ಟನ್ ನವೀನ್ ನಾಗಪ್ಪ ಯುದ್ಧದ ಸಮಯದಲ್ಲಿ ಬಿದ್ದಂತಹ ಬಾಂಬ ನಿಂದ ತಮ್ಮ ಕಾಲನ್ನೇ ಕಳೆದುಕೊಂಡಿದ್ದಾರೆ ಕಾರ್ಗಿಲ್ ಯುದ್ಧದ ಸಮಯದಲ್ಲಿ ನಾವು ಹೇಗೆಲ್ಲಾ ಹೋರಾಟ ಮಾಡಿದೆವು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಹೇಳಿದ್ರು ಕಾರ್ಗಿಲ್ನಂತಹ ಈ ಮಚ್ಚಾದಿತಾ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರು ಹಾಗೂ ಭಾರತೀಯ ಸೈನಿಕರ  ಹೋರಾಟ ಹೇಗಿತ್ತು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು
    user_ಪ್ರಸನ್ನ ದೊಡ್ಡಗುಣಿ
    ಪ್ರಸನ್ನ ದೊಡ್ಡಗುಣಿ
    ಗುಬ್ಬಿ, ತುಮಕೂರು, ಕರ್ನಾಟಕ•
    5 hrs ago
  • *ಗಣಕೀಕರಿಸುವಲ್ಲಿ ಶೇ 100%  ಪ್ರಗತಿ ಸಾಧನೆ-ರಾಜ್ಯದಲ್ಲೇ ಚಿಕ್ಕಬಳ್ಳಾಪುರಕ್ಕೆ ಮೊದಲ ಸ್ಥಾನ-ಮತದಾರರ ನೋಂದಣಾಧಿಕಾರಿ ಅತೀಕ್‍ ಭಾಷ* ಭಾಗ್ಯನಗರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ತಾಲ್ಲೂಕಿನ 267 ಮತಗಟ್ಟೆಗಳಿಂದ ಒಟ್ಟು 204413 ಶೇ 100% ನಮೂನೆಗಳನ್ನು ವಿತರಣೆ ಮಾಡಲಾಗಿದೆ. ಹಾಗೂ ತಾಲ್ಲೂಕಿನ 267 ಮತಗಟ್ಟೆಗಳಿಂದ ಒಟ್ಟು 185861 ಶೇ. 90.92 ಗಣತಿ ನಮೂನೆಗಳನ್ನು ಗಣಕೀಕರಿಸಲಾಗಿರುತ್ತದೆ ಮತ್ತು  18552 ಮತದಾರರನ್ನು ASDDO ಮತದಾರರನ್ನಾಗಿ ಗುರುತಿಸಲಾಗಿರುತ್ತದೆ. 198165  ಶೇ 96.94 ಗಣತಿ ನಮೂನೆಗಳನ್ನು ಗಣಕೀಕರಿಸುವ ಮೂಲಕ ಜಿಲ್ಲೆಯಲ್ಲೇ ದ್ವಿತೀಯ ಸ್ಥಾನವನ್ನು ಬಾಗೇಪಲ್ಲಿ ಕ್ಷೇತ್ರ ಪಡೆದುಕೊಂಡು ಪ್ರಗತಿ ಸಾಧಿಸಿದೆ ಎಂದು ಮತದಾರರ ನೋಂದಣಾಧಿಕಾರಿ ಅತೀಕ್‍ ಭಾಷ ತಿಳಿಸಿದ್ದಾರೆ. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜೂನ್ 16 ರವರೆಗೆ 2,04,413 ಮತದಾರಿದ್ದು.ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ SIR ಸಂಬಂಧ ಭಾರತ ಚುನಾವಣಾ ಆಯೋಗದ ದಿನಾಂಕ: 14/05/2026 ರ ವೇಳಾಪಟ್ಟಿಯಂತೆ ದಿನಾಂಕ: 30/06/2026 ರಿಂದ 29/07/2026ರವರೆಗೆ ಬಿ.ಎಲ್.ಓ ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿ, ಸ್ವೀಕರಿಸುವ ಕಾರ್ಯ ತಾಲ್ಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಸಕ್ರಿಯವಾಗಿ ನಡೆಯುತ್ತಿದೆ. ತಾಲ್ಲೂಕಿನಲ್ಲಿ ದಿನಾಂಕ 16/06/2026 ರವರೆಗೆ ಒಟ್ಟು 204413 ಮತದಾರರಿದ್ದು, ಈ ಪೈಕಿ 198165 (ಶೇ.96.94%) ಮತದಾರರನ್ನು ಮ್ಯಾಪಿಂಗ್ ಮಾಡಲಾಗಿರುತ್ತದೆ.ತಾಲ್ಲೂಕಿನಲ್ಲಿ ದಿನಾಂಕ: 30/07/2026 ರ ಸಂಜೆ 6.00 ಗಂಟೆಗೆ ಎಲ್ಲಾ ಮತಗಟ್ಟೆಗಳಿಂದ ಒಟ್ಟು 204413 (ಶೇ.100%) ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯ ಮುಗಿದಿದ್ದು,ತಾಲ್ಲೂಕಿನ 267 ಮತಗಟ್ಟೆಗಳಿಂದ ಒಟ್ಟು 185861 ಶೇ. 90.92 ಗಣತಿ ನಮೂನೆಗಳನ್ನು ಗಣಕೀಕರಿಸಲಾಗಿರುತ್ತದೆ ಮತ್ತು 18552 ಮತದಾರರನ್ನು ASDDO ಮತದಾರರನ್ನಾಗಿ ಗುರುತಿಸಲಾಗಿರುತ್ತದೆ. 198165  ಶೇ 96.94 ಗಣತಿ ನಮೂನೆಗಳನ್ನು ಗಣಕೀಕರಿಸುವ ಮೂಲಕ ಜಿಲ್ಲೆಯಲ್ಲೇ ದ್ವಿತೀಯ ಸ್ಥಾನವನ್ನು ಬಾಗೇಪಲ್ಲಿ ಕ್ಷೇತ್ರ ಪಡೆದುಕೊಂಡು ಪ್ರಗತಿ ಸಾಧಿಸಿದೆ ಎಂದರು. ಈ ಸಂಧರ್ಭದಲ್ಲಿ ತಹಶೀಲ್ದಾರ್ ಮನಿಷಾ ಎನ್ ಪತ್ರಿ, ಚೇಳೂರು ತಹಶೀಲ್ದಾರ್ ಬಿ.ಕೆ.ಶ್ವೇತಾ, ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಚಂದ್ರ,ಚುನಾವಣಾ ಶಾಖೆಯ ಅಧಿಕಾರಿಗಳಾದ ಮೂರ್ತಿ,ರಾಘವೇಂದ್ರ,ಕಾಂಗ್ರೆಸ್ ಪಕ್ಷದ ಬಿ ಎಲ್ ಎ2 ಮದ್ದಿಲೇಟಿರೆಡ್ಡಿ,ಕ್ರಿಕೆಟ್ ಮೂರ್ತಿ,ಅಶೋಕ್,ಮಿಲ್ಕ್ ವೀರ,ಪಾತಪಾಳ್ಯ ಚಂದ್ರಣ್ಣ,ನಿಜಾಮ್ ಉದ್ದಿನ್ ಬಾಬು,ಮನ್ಸೂರ್,ದಿವಾಕರ್,ಸಿಪಿ.ಐ.ಎಂ ಪಕ್ಷದ ಬಿ ಎಲ್ ಎ2 ಎಂ. ಎನ್.ರಘುರಾಮರೆಡ್ಡಿ,ಅಶ್ವಥಪ್ಪ, ಜಿ ಕೃಷ್ಣಪ್ಪ, ಇಮ್ರಾನ್, ಬಿಜೆಪಿ ಪಕ್ಷದ ಬಿ ಎಲ್ ಎ2 ಬಿ. ಎಸ್.ಲೋಕೇಶ್,ರವಿಕುಮಾರ್,ಲೋಕೇಶ್,ವನಜಾ, ಗಂಗುಳಮ್ಮ, ಮಂಜುಳಾ,ರೂಪ,ಸೇರಿದಂತೆ ಮತ್ತಿತರರು ಇದ್ದರು.
    3
    *ಗಣಕೀಕರಿಸುವಲ್ಲಿ ಶೇ 100%  ಪ್ರಗತಿ ಸಾಧನೆ-ರಾಜ್ಯದಲ್ಲೇ ಚಿಕ್ಕಬಳ್ಳಾಪುರಕ್ಕೆ ಮೊದಲ ಸ್ಥಾನ-ಮತದಾರರ ನೋಂದಣಾಧಿಕಾರಿ ಅತೀಕ್‍ ಭಾಷ*




ಭಾಗ್ಯನಗರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ತಾಲ್ಲೂಕಿನ 267 ಮತಗಟ್ಟೆಗಳಿಂದ ಒಟ್ಟು 204413 ಶೇ 100% ನಮೂನೆಗಳನ್ನು ವಿತರಣೆ ಮಾಡಲಾಗಿದೆ. ಹಾಗೂ ತಾಲ್ಲೂಕಿನ 267 ಮತಗಟ್ಟೆಗಳಿಂದ ಒಟ್ಟು 185861 ಶೇ. 90.92 ಗಣತಿ ನಮೂನೆಗಳನ್ನು ಗಣಕೀಕರಿಸಲಾಗಿರುತ್ತದೆ ಮತ್ತು  18552 ಮತದಾರರನ್ನು ASDDO ಮತದಾರರನ್ನಾಗಿ ಗುರುತಿಸಲಾಗಿರುತ್ತದೆ. 198165  ಶೇ 96.94 ಗಣತಿ ನಮೂನೆಗಳನ್ನು ಗಣಕೀಕರಿಸುವ ಮೂಲಕ ಜಿಲ್ಲೆಯಲ್ಲೇ ದ್ವಿತೀಯ ಸ್ಥಾನವನ್ನು ಬಾಗೇಪಲ್ಲಿ ಕ್ಷೇತ್ರ ಪಡೆದುಕೊಂಡು ಪ್ರಗತಿ ಸಾಧಿಸಿದೆ ಎಂದು ಮತದಾರರ ನೋಂದಣಾಧಿಕಾರಿ ಅತೀಕ್‍ ಭಾಷ ತಿಳಿಸಿದ್ದಾರೆ.


ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜೂನ್ 16 ರವರೆಗೆ 2,04,413 ಮತದಾರಿದ್ದು.ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ SIR ಸಂಬಂಧ ಭಾರತ ಚುನಾವಣಾ ಆಯೋಗದ ದಿನಾಂಕ: 14/05/2026 ರ ವೇಳಾಪಟ್ಟಿಯಂತೆ ದಿನಾಂಕ: 30/06/2026 ರಿಂದ 29/07/2026ರವರೆಗೆ ಬಿ.ಎಲ್.ಓ ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿ, ಸ್ವೀಕರಿಸುವ ಕಾರ್ಯ ತಾಲ್ಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಸಕ್ರಿಯವಾಗಿ ನಡೆಯುತ್ತಿದೆ.


ತಾಲ್ಲೂಕಿನಲ್ಲಿ ದಿನಾಂಕ 16/06/2026 ರವರೆಗೆ ಒಟ್ಟು 204413 ಮತದಾರರಿದ್ದು, ಈ ಪೈಕಿ 198165 (ಶೇ.96.94%) ಮತದಾರರನ್ನು ಮ್ಯಾಪಿಂಗ್ ಮಾಡಲಾಗಿರುತ್ತದೆ.ತಾಲ್ಲೂಕಿನಲ್ಲಿ ದಿನಾಂಕ: 30/07/2026 ರ ಸಂಜೆ 6.00 ಗಂಟೆಗೆ ಎಲ್ಲಾ ಮತಗಟ್ಟೆಗಳಿಂದ ಒಟ್ಟು 204413 (ಶೇ.100%) ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯ ಮುಗಿದಿದ್ದು,ತಾಲ್ಲೂಕಿನ 267 ಮತಗಟ್ಟೆಗಳಿಂದ ಒಟ್ಟು 185861 ಶೇ. 90.92 ಗಣತಿ ನಮೂನೆಗಳನ್ನು ಗಣಕೀಕರಿಸಲಾಗಿರುತ್ತದೆ ಮತ್ತು 18552 ಮತದಾರರನ್ನು ASDDO ಮತದಾರರನ್ನಾಗಿ ಗುರುತಿಸಲಾಗಿರುತ್ತದೆ. 198165  ಶೇ 96.94 ಗಣತಿ ನಮೂನೆಗಳನ್ನು ಗಣಕೀಕರಿಸುವ ಮೂಲಕ ಜಿಲ್ಲೆಯಲ್ಲೇ ದ್ವಿತೀಯ ಸ್ಥಾನವನ್ನು ಬಾಗೇಪಲ್ಲಿ ಕ್ಷೇತ್ರ ಪಡೆದುಕೊಂಡು ಪ್ರಗತಿ ಸಾಧಿಸಿದೆ ಎಂದರು.


ಈ ಸಂಧರ್ಭದಲ್ಲಿ ತಹಶೀಲ್ದಾರ್ ಮನಿಷಾ ಎನ್ ಪತ್ರಿ, ಚೇಳೂರು ತಹಶೀಲ್ದಾರ್ ಬಿ.ಕೆ.ಶ್ವೇತಾ, ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಚಂದ್ರ,ಚುನಾವಣಾ ಶಾಖೆಯ ಅಧಿಕಾರಿಗಳಾದ ಮೂರ್ತಿ,ರಾಘವೇಂದ್ರ,ಕಾಂಗ್ರೆಸ್ ಪಕ್ಷದ ಬಿ ಎಲ್ ಎ2 ಮದ್ದಿಲೇಟಿರೆಡ್ಡಿ,ಕ್ರಿಕೆಟ್ ಮೂರ್ತಿ,ಅಶೋಕ್,ಮಿಲ್ಕ್ ವೀರ,ಪಾತಪಾಳ್ಯ ಚಂದ್ರಣ್ಣ,ನಿಜಾಮ್ ಉದ್ದಿನ್ ಬಾಬು,ಮನ್ಸೂರ್,ದಿವಾಕರ್,ಸಿಪಿ.ಐ.ಎಂ ಪಕ್ಷದ ಬಿ ಎಲ್ ಎ2 ಎಂ. ಎನ್.ರಘುರಾಮರೆಡ್ಡಿ,ಅಶ್ವಥಪ್ಪ, ಜಿ ಕೃಷ್ಣಪ್ಪ, ಇಮ್ರಾನ್, ಬಿಜೆಪಿ ಪಕ್ಷದ ಬಿ ಎಲ್ ಎ2 ಬಿ. ಎಸ್.ಲೋಕೇಶ್,ರವಿಕುಮಾರ್,ಲೋಕೇಶ್,ವನಜಾ, ಗಂಗುಳಮ್ಮ, ಮಂಜುಳಾ,ರೂಪ,ಸೇರಿದಂತೆ ಮತ್ತಿತರರು ಇದ್ದರು.
    user_Govindappa K
    Govindappa K
    Local News Reporter ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಕರ್ನಾಟಕ•
    2 hrs ago
  • ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ನಡೆಯುತ್ತಿರುವ ಅಹೋರಾತ್ರಿ ಧರಣೀಯ ಎರಡನೇ ದಿನದ ರಾತ್ರಿಲ್ಲೂ ಕೂಡ ಅರಿತರು ಜಗ್ಗದೆ ಧರಣಿ ಮುಂದುವರಿಸುತ್ತಿರುವುದು
    1
    ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ನಡೆಯುತ್ತಿರುವ ಅಹೋರಾತ್ರಿ ಧರಣೀಯ ಎರಡನೇ ದಿನದ ರಾತ್ರಿಲ್ಲೂ ಕೂಡ ಅರಿತರು ಜಗ್ಗದೆ ಧರಣಿ ಮುಂದುವರಿಸುತ್ತಿರುವುದು
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    23 hrs ago
  • ಆಗಸ್ಟ್ 2ರಂದು ತುಮಕೂರು ಜಿಲ್ಲೆ ವ್ಯಾಪ್ತಿಯ ಸಿವಿಲ್ ಕಾನ್ಸ್ಟೇಬಲ್ ಪರೀಕ್ಷೆ ನಡೆಯಲಿದ್ದು ಈ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕದಲ್ಲಿ ತೇರ್ಗಡೆಯಾದ 50 ಕಾನ್ಸ್ಟೇಬಲ್ ಹುದ್ದೆಗಳು ನೇಮಕಾತಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ತಿಳಿಸಿದ್ದಾರೆ
    1
    ಆಗಸ್ಟ್ 2ರಂದು ತುಮಕೂರು ಜಿಲ್ಲೆ ವ್ಯಾಪ್ತಿಯ ಸಿವಿಲ್ ಕಾನ್ಸ್ಟೇಬಲ್ ಪರೀಕ್ಷೆ ನಡೆಯಲಿದ್ದು ಈ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕದಲ್ಲಿ ತೇರ್ಗಡೆಯಾದ 50 ಕಾನ್ಸ್ಟೇಬಲ್ ಹುದ್ದೆಗಳು ನೇಮಕಾತಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ತಿಳಿಸಿದ್ದಾರೆ
    user_Gopala N
    Gopala N
    Local News Reporter ಕುಣಿಗಲ್, ತುಮಕೂರು, ಕರ್ನಾಟಕ•
    12 hrs ago
  • ಕಾವೇರಿ ನೀರಿನ ವಿಚಾರದಲ್ಲಿ ಸಿಎಂ ಡಿಕೆ ಹೇಳಿಕೆ ಕುರಿತು ಏಕವಚನದಲ್ಲೇ ಮಹಿಳೆ ಟಾಕ್ | Veega News Kannada ಕಾವೇರಿ ನೀರಿನ ವಿಚಾರದಲ್ಲಿ ಸಿಎಂ ಡಿಕೆ ಹೇಳಿಕೆ ಕುರಿತು ಏಕವಚನದಲ್ಲೇ ಮಹಿಳೆ ಟಾಕ್ | Veega News Kannada
    1
    ಕಾವೇರಿ ನೀರಿನ ವಿಚಾರದಲ್ಲಿ ಸಿಎಂ ಡಿಕೆ ಹೇಳಿಕೆ ಕುರಿತು ಏಕವಚನದಲ್ಲೇ ಮಹಿಳೆ ಟಾಕ್ | Veega News Kannada 

ಕಾವೇರಿ ನೀರಿನ ವಿಚಾರದಲ್ಲಿ ಸಿಎಂ ಡಿಕೆ ಹೇಳಿಕೆ ಕುರಿತು ಏಕವಚನದಲ್ಲೇ ಮಹಿಳೆ ಟಾಕ್ | Veega News Kannada
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    56 min ago
  • ಶ್ರೀ ಮಹಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ವ್ಯಸನ ಮುಕ್ತ ದಿನಾಚರಣೆಯನ್ನು ಪಟ್ಟಣದ ಗಣಪತಿ ಆಸ್ಥಾನ ಮಂಟಪದಲ್ಲಿ ಆಚರಿಸಲಾಯಿತು ತುರುವೇಕೆರೆ: ಶ್ರೀ ಶ್ರೀ ಶ್ರೀ ಡಾ // ಮಹಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ವ್ಯಸನ ಮುಕ್ತ ದಿನಾಚರಣೆ ವೈಭವದಿಂದ ಆಚರಣೆ ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಶ್ರೀ ಮಹಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ವ್ಯಸನ ಮುಕ್ತ ದಿನಾಚರಣೆಯನ್ನು ಪಟ್ಟಣದ ಗಣಪತಿ ಆಸ್ಥಾನ ಮಂಟಪದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಟಣದ ಖ್ಯಾತ ಹಿರಿಯ ವೈದ್ಯ ಡಾ. ಎ. ನಾಗರಾಜ್ ಅವರು ಮಾತನಾಡಿ, ಮಕ್ಕಳು ಹಾಗೂ ಯುವಕರಲ್ಲಿ ಮಾದಕ ವ್ಯಸನದ ಬೆಳವಣಿಗೆ, ಅದರ ಆರೋಗ್ಯದ ಮೇಲಾಗುವ ಪರಿಣಾಮಗಳು ಮತ್ತು ಕುಟುಂಬ ಹಾಗೂ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಮಕ್ಕಳು ಮಾದಕ ವ್ಯಸನದ ಬಲೆಗೆ ಬೀಳುವ ಮೊದಲೇ ತಡೆಯುವುದು ಹೇಗೆ, ಪೋಷಕರು ಮತ್ತು ಶಿಕ್ಷಕರ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನು ವಿವರಿಸಿದರು. ಉಪನ್ಯಾಸಕ ವಿಜಯಕುಮಾರ್ ಅವರು ಮಾದಕ ವ್ಯಸನದಿಂದ ಯುವ ಸಮೂಹಕ್ಕೆ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಗೆಳೆಯನಂತೆ ತಿಳಿಸಿಕೊಟ್ಟರು. ವ್ಯಸನದಿಂದ ವಿದ್ಯಾರ್ಥಿಗಳ ಭವಿಷ್ಯ ಹೇಗೆ ಹಾಳಾಗುತ್ತದೆ, ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮ, ಮತ್ತು ವ್ಯಸನದಿಂದ ದೂರವಿರಲು ಯುವಕರು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಸರಳವಾಗಿ ಮನವರಿಕೆ ಮಾಡಿಕೊಟ್ಟರು. ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಆಡಳಿತ, ಆರೋಗ್ಯ, ಶಿಕ್ಷಣ ಮತ್ತು ಪೊಲೀಸ್ ಇಲಾಖೆಗಳ ಸಮನ್ವಯದ ಅಗತ್ಯವನ್ನು ಕಾರ್ಯಕ್ರಮದಲ್ಲಿ ಒತ್ತಿ ಹೇಳಲಾಯಿತು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ವ್ಯಸನ ಮುಕ್ತಿಯ ಸಂದೇಶಕ್ಕೆ ಬೆಂಬಲ ಸೂಚಿಸಿದರು. ಈ ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಇ ಓ ಅನಂತರಾಜು, ಗ್ರೇಡ್( 2) ತಹಶೀಲ್ದಾರ್ ಸುನಿಲ್, ಬಿಇಒ ಸೋಮಶೇಖರ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಪಾಪಣ್ಣ, ಸಮಾಜ ಕಲ್ಯಾಣ ಇಲಾಖೆಯ ವರ್ಷಿಣಿ, ತಾಲೋಕು ಚುನಾವಣಾ ಶಾಖೆಯ ಶಿರಸ್ತೆದಾರ್ ರಂಗಸ್ವಾಮಿ, ಆರ್ ಆರ್ ಟಿ ಶಾಖೆಯ ಶ್ರೀನಿವಾಸ್, ವತ್ಸಲ, ಬಿ ಆರ್ ಸಿ ಸುರೇಶ್,ಉಪನ್ಯಾಸಕ ಡಾ, ಚಂದ್ರಯ್ಯ,ಆರೋಗ್ಯ ಇಲಾಖೆಯ ಸದಾಶಿವಯ್ಯ ಆಶಾ ಕಾರ್ಯಕರ್ತೆಯರು ಶಾಲಾ-ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕರು ಭಾಗವಹಿಸಿದ್ದರು.
    4
    ಶ್ರೀ ಮಹಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ವ್ಯಸನ ಮುಕ್ತ  ದಿನಾಚರಣೆಯನ್ನು  ಪಟ್ಟಣದ ಗಣಪತಿ ಆಸ್ಥಾನ ಮಂಟಪದಲ್ಲಿ ಆಚರಿಸಲಾಯಿತು
ತುರುವೇಕೆರೆ: ಶ್ರೀ ಶ್ರೀ ಶ್ರೀ ಡಾ // ಮಹಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ವ್ಯಸನ ಮುಕ್ತ ದಿನಾಚರಣೆ ವೈಭವದಿಂದ ಆಚರಣೆ
ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಶ್ರೀ ಮಹಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ವ್ಯಸನ ಮುಕ್ತ  ದಿನಾಚರಣೆಯನ್ನು  ಪಟ್ಟಣದ ಗಣಪತಿ ಆಸ್ಥಾನ ಮಂಟಪದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣದ ಖ್ಯಾತ ಹಿರಿಯ ವೈದ್ಯ ಡಾ. ಎ. ನಾಗರಾಜ್ ಅವರು ಮಾತನಾಡಿ, ಮಕ್ಕಳು ಹಾಗೂ ಯುವಕರಲ್ಲಿ ಮಾದಕ ವ್ಯಸನದ ಬೆಳವಣಿಗೆ, ಅದರ ಆರೋಗ್ಯದ ಮೇಲಾಗುವ ಪರಿಣಾಮಗಳು ಮತ್ತು ಕುಟುಂಬ ಹಾಗೂ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಮಕ್ಕಳು ಮಾದಕ ವ್ಯಸನದ ಬಲೆಗೆ ಬೀಳುವ ಮೊದಲೇ ತಡೆಯುವುದು ಹೇಗೆ, ಪೋಷಕರು ಮತ್ತು ಶಿಕ್ಷಕರ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನು ವಿವರಿಸಿದರು.
ಉಪನ್ಯಾಸಕ ವಿಜಯಕುಮಾರ್ ಅವರು ಮಾದಕ ವ್ಯಸನದಿಂದ ಯುವ ಸಮೂಹಕ್ಕೆ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಗೆಳೆಯನಂತೆ ತಿಳಿಸಿಕೊಟ್ಟರು. ವ್ಯಸನದಿಂದ ವಿದ್ಯಾರ್ಥಿಗಳ ಭವಿಷ್ಯ ಹೇಗೆ ಹಾಳಾಗುತ್ತದೆ, ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮ, ಮತ್ತು ವ್ಯಸನದಿಂದ ದೂರವಿರಲು ಯುವಕರು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಸರಳವಾಗಿ ಮನವರಿಕೆ ಮಾಡಿಕೊಟ್ಟರು.
ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಆಡಳಿತ, ಆರೋಗ್ಯ, ಶಿಕ್ಷಣ ಮತ್ತು ಪೊಲೀಸ್ ಇಲಾಖೆಗಳ ಸಮನ್ವಯದ ಅಗತ್ಯವನ್ನು ಕಾರ್ಯಕ್ರಮದಲ್ಲಿ ಒತ್ತಿ ಹೇಳಲಾಯಿತು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ವ್ಯಸನ ಮುಕ್ತಿಯ ಸಂದೇಶಕ್ಕೆ ಬೆಂಬಲ ಸೂಚಿಸಿದರು.
ಈ ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಇ ಓ ಅನಂತರಾಜು, ಗ್ರೇಡ್( 2) ತಹಶೀಲ್ದಾರ್ ಸುನಿಲ್, ಬಿಇಒ ಸೋಮಶೇಖರ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಪಾಪಣ್ಣ, ಸಮಾಜ ಕಲ್ಯಾಣ ಇಲಾಖೆಯ ವರ್ಷಿಣಿ, ತಾಲೋಕು ಚುನಾವಣಾ ಶಾಖೆಯ ಶಿರಸ್ತೆದಾರ್ ರಂಗಸ್ವಾಮಿ, ಆರ್ ಆರ್ ಟಿ ಶಾಖೆಯ ಶ್ರೀನಿವಾಸ್, ವತ್ಸಲ, ಬಿ ಆರ್ ಸಿ ಸುರೇಶ್,ಉಪನ್ಯಾಸಕ ಡಾ, ಚಂದ್ರಯ್ಯ,ಆರೋಗ್ಯ ಇಲಾಖೆಯ ಸದಾಶಿವಯ್ಯ ಆಶಾ ಕಾರ್ಯಕರ್ತೆಯರು ಶಾಲಾ-ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕರು ಭಾಗವಹಿಸಿದ್ದರು.
    user_Manohara
    Manohara
    Local News Reporter ತುರುವೇಕೆರೆ, ತುಮಕೂರು, ಕರ್ನಾಟಕ•
    6 hrs ago
  • ಕ್ಷೇತ್ರ ಪುನರ್‌ವಿಂಗಡಣೆ ಬೆಂಬಲಿಸುವವರು ದ್ರೋಹಿಗಳು : ರಾಹುಲ್ ಗಾಂಧಿ ವಾಗ್ದಾಳಿ ನೀವು ಒದಗಿಸಿದ ಸುದ್ದಿಯ ಆಧಾರದಲ್ಲಿ, ವರದಿಯನ್ನು ಮತ್ತಷ್ಟು ಸ್ಪಷ್ಟವಾಗಿ, ವೃತ್ತಿಪರ ಪತ್ರಿಕೋದ್ಯಮದ ಶೈಲಿಯಲ್ಲಿ ಪುನರ್ ರಚಿಸಿ ನೀಡಲಾಗಿದೆ: --- ಚೆಂಗಲ್ಪಟ್ಟು (ತಮಿಳುನಾಡು): "ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕ್ಷೇತ್ರ ಪುನರ್‌ವಿಂಗಡಣೆಯನ್ನು ಯಾವುದೇ ತಮಿಳರು ಬೆಂಬಲಿಸಬಾರದು. ಇದನ್ನು ಬೆಂಬಲಿಸುವ ಪ್ರತಿಯೊಬ್ಬರೂ ತಮಿಳುನಾಡಿಗೆ ಮಾಡುವ ದ್ರೋಹಿಗಳು ('ಎಟಾಪರ್‌ಗಳು')" ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ಧುರೀಣ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಮಲ್ಲಪುರಂನಲ್ಲಿ ಆಯೋಜಿಸಲಾಗಿದ್ದ ತಮಿಳುನಾಡು ಕಾಂಗ್ರೆಸ್ ಜಿಲ್ಲಾ ನಾಯಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. "ಬಿಜೆಪಿ ಜಾರಿಗೆ ತರಲು ಹೊರಟಿರುವ ಕ್ಷೇತ್ರ ಪುನರ್‌ವಿಂಗಡಣೆ ಯೋಜನೆಯು ತಮಿಳುನಾಡಿನ ಮೇಲೆ ಗಂಭೀರವಾದ ದುಷ್ಪರಿಣಾಮ ಬೀರಲಿದೆ. ಇದು ತಮಿಳುನಾಡಿನ ಜನರಿಗಿರುವ ರಾಜಕೀಯ ಅಧಿಕಾರ ಹಾಗೂ ಪ್ರಾತಿನಿಧ್ಯವನ್ನು ಕಸಿದುಕೊಳ್ಳುವ ಸ್ಪಷ್ಟ ಸಂಚು ಆಗಿದೆ ಎಂದರು. ಸಂಸತ್ತಿನಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಸೋಲಿಸಲು ದೇಶದ ಪ್ರತಿಯೊಂದು ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳು ಒಂದಾಗಬೇಕು ಎಂದು ಅವರು ಕರೆ ನೀಡಿದರು. "ಇದು ಕೇವಲ ರಾಜಕೀಯ ವಿಷಯವಲ್ಲ, ತಮಿಳುನಾಡಿನ ಜನರ ಭವಿಷ್ಯ ಮತ್ತು ಹಕ್ಕುಗಳಿಗೆ ಸಂಬಂಧಿಸಿದ ಪ್ರಶ್ನೆ. ಹೀಗಾಗಿ ಯಾವುದೇ ತಮಿಳರು ಇದನ್ನು ಒಪ್ಪಬಾರದು," ಎಂದು ನುಡಿದರು ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಇದಕ್ಕೂ ಮುನ್ನ, ಬೆಳಿಗ್ಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರಿಗೆ ತಮಿಳುನಾಡು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಅಲ್ಲಿಂದ ನೇರವಾಗಿ ಮಾಮಲ್ಲಪುರಂ ತರಬೇತಿ ಶಿಬಿರಕ್ಕೆ ತೆರಳಿದ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
    1
    ಕ್ಷೇತ್ರ ಪುನರ್‌ವಿಂಗಡಣೆ ಬೆಂಬಲಿಸುವವರು ದ್ರೋಹಿಗಳು : ರಾಹುಲ್ ಗಾಂಧಿ ವಾಗ್ದಾಳಿ
ನೀವು ಒದಗಿಸಿದ ಸುದ್ದಿಯ ಆಧಾರದಲ್ಲಿ, ವರದಿಯನ್ನು ಮತ್ತಷ್ಟು ಸ್ಪಷ್ಟವಾಗಿ, ವೃತ್ತಿಪರ ಪತ್ರಿಕೋದ್ಯಮದ ಶೈಲಿಯಲ್ಲಿ ಪುನರ್ ರಚಿಸಿ ನೀಡಲಾಗಿದೆ:
---
ಚೆಂಗಲ್ಪಟ್ಟು (ತಮಿಳುನಾಡು): "ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕ್ಷೇತ್ರ ಪುನರ್‌ವಿಂಗಡಣೆಯನ್ನು ಯಾವುದೇ ತಮಿಳರು ಬೆಂಬಲಿಸಬಾರದು. ಇದನ್ನು ಬೆಂಬಲಿಸುವ ಪ್ರತಿಯೊಬ್ಬರೂ ತಮಿಳುನಾಡಿಗೆ ಮಾಡುವ ದ್ರೋಹಿಗಳು ('ಎಟಾಪರ್‌ಗಳು')" ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ಧುರೀಣ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾಮಲ್ಲಪುರಂನಲ್ಲಿ ಆಯೋಜಿಸಲಾಗಿದ್ದ ತಮಿಳುನಾಡು ಕಾಂಗ್ರೆಸ್ ಜಿಲ್ಲಾ ನಾಯಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
"ಬಿಜೆಪಿ ಜಾರಿಗೆ ತರಲು ಹೊರಟಿರುವ ಕ್ಷೇತ್ರ ಪುನರ್‌ವಿಂಗಡಣೆ ಯೋಜನೆಯು ತಮಿಳುನಾಡಿನ ಮೇಲೆ ಗಂಭೀರವಾದ ದುಷ್ಪರಿಣಾಮ ಬೀರಲಿದೆ. ಇದು ತಮಿಳುನಾಡಿನ ಜನರಿಗಿರುವ ರಾಜಕೀಯ ಅಧಿಕಾರ ಹಾಗೂ ಪ್ರಾತಿನಿಧ್ಯವನ್ನು ಕಸಿದುಕೊಳ್ಳುವ ಸ್ಪಷ್ಟ ಸಂಚು ಆಗಿದೆ ಎಂದರು.
ಸಂಸತ್ತಿನಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಸೋಲಿಸಲು ದೇಶದ ಪ್ರತಿಯೊಂದು ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳು ಒಂದಾಗಬೇಕು ಎಂದು ಅವರು ಕರೆ ನೀಡಿದರು.
"ಇದು ಕೇವಲ ರಾಜಕೀಯ ವಿಷಯವಲ್ಲ, ತಮಿಳುನಾಡಿನ ಜನರ ಭವಿಷ್ಯ ಮತ್ತು ಹಕ್ಕುಗಳಿಗೆ ಸಂಬಂಧಿಸಿದ ಪ್ರಶ್ನೆ. ಹೀಗಾಗಿ ಯಾವುದೇ ತಮಿಳರು ಇದನ್ನು ಒಪ್ಪಬಾರದು," ಎಂದು ನುಡಿದರು
ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ
ಇದಕ್ಕೂ ಮುನ್ನ, ಬೆಳಿಗ್ಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರಿಗೆ ತಮಿಳುನಾಡು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಅಲ್ಲಿಂದ ನೇರವಾಗಿ ಮಾಮಲ್ಲಪುರಂ ತರಬೇತಿ ಶಿಬಿರಕ್ಕೆ ತೆರಳಿದ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    1 hr ago
  • ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಮಗ ಗಿಮಿಕ್ ರಾಜಕಾರಣಿಗಳು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಮಗ ವಿಜೇಂದ್ರ ಕಾವೇರಿ ಹೋರಾಟದಲ್ಲಿ ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆ ಇದುವರೆಗೂ ಸರ್ಕಾರ ನೀರನ್ನು ಬಿಡುತ್ತೇವೆ ಎಂದು ಎಲ್ಲೂ ಹೇಳಿಕೆಯನ್ನು ನೀಡಿಲ್ಲ ಸರ್ವ ಪಕ್ಷಗಳು ಸಭೆ ಕರೆದು ಅದರಂತೆ ತೀರ್ಮಾನ ಮಾಡುತ್ತೇವೆ ಎಂದು ಹೇಳುವಾಗ ಕಾವೇರಿ ನದಿ ಪಾತ್ರದಲ್ಲಿ ಹೋರಾಡುವುದು ಪ್ರತಿಭಟನೆಯನ್ನು ಮಾಡಿಸುತ್ತಿರುವುದು ನೋಡಿದರೆ ಇವರೆಂಥ ಗಿಮಿಕ್ ರಾಜಕಾರಣಿಗಳು ಎಂದು ತಿಳಿಯುತ್ತದೆ ಎಂದು ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮಾಡಿದ್ದಾರೆ.
    1
    ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಮಗ ಗಿಮಿಕ್ ರಾಜಕಾರಣಿಗಳು 
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಮಗ ವಿಜೇಂದ್ರ ಕಾವೇರಿ ಹೋರಾಟದಲ್ಲಿ ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆ  ಇದುವರೆಗೂ ಸರ್ಕಾರ ನೀರನ್ನು ಬಿಡುತ್ತೇವೆ ಎಂದು ಎಲ್ಲೂ ಹೇಳಿಕೆಯನ್ನು ನೀಡಿಲ್ಲ ಸರ್ವ ಪಕ್ಷಗಳು  ಸಭೆ ಕರೆದು ಅದರಂತೆ  ತೀರ್ಮಾನ ಮಾಡುತ್ತೇವೆ ಎಂದು ಹೇಳುವಾಗ ಕಾವೇರಿ ನದಿ ಪಾತ್ರದಲ್ಲಿ ಹೋರಾಡುವುದು ಪ್ರತಿಭಟನೆಯನ್ನು ಮಾಡಿಸುತ್ತಿರುವುದು ನೋಡಿದರೆ ಇವರೆಂಥ ಗಿಮಿಕ್ ರಾಜಕಾರಣಿಗಳು ಎಂದು ತಿಳಿಯುತ್ತದೆ ಎಂದು ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮಾಡಿದ್ದಾರೆ.
    user_ಪ್ರಸನ್ನ ದೊಡ್ಡಗುಣಿ
    ಪ್ರಸನ್ನ ದೊಡ್ಡಗುಣಿ
    ಗುಬ್ಬಿ, ತುಮಕೂರು, ಕರ್ನಾಟಕ•
    6 hrs ago
  • ಕನ್ನಡ ಸಂಘದ ಸಂಸ್ಥಾಪಕ ದಿವಂಗತ 'ಸೀಮೆಎಣ್ಣೆ ಕೃಷ್ಣಯ್ಯ' 9ನೇ ವರ್ಷದ ನುಡಿನಮನ: ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಮಾತು ​ಕನ್ನಡ ಸಂಘದ ಸಂಸ್ಥಾಪಕ ದಿವಂಗತ 'ಸೀಮೆಎಣ್ಣೆ ಕೃಷ್ಣಯ್ಯ' 9ನೇ ವರ್ಷದ ನುಡಿನಮನ: ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಮಾತು ------------------- ​ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಕನ್ನಡ ಪರ ಚಟುವಟಿಕೆಗಳಿಗೆ ಬಲ ತುಂಬಲು ವೇದಿಕೆ ನಿರ್ಮಿಸಿ, ಶಾಶ್ವತ ಕಾರ್ಯಕ್ರಮಗಳನ್ನು ನೀಡಿದ ಕನ್ನಡ ಸಂಘದ ಸಂಸ್ಥಾಪಕ ಹಾಗೂ ಅಧ್ಯಕ್ಷ ದಿವಂಗತ 'ಸೀಮೆಎಣ್ಣೆ ಕೃಷ್ಣಯ್ಯ' ಅವರ ಸೇವೆ ಅತ್ಯಂತ ಸ್ಮರಣೀಯ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಬಣ್ಣಿಸಿದರು. ​ಪಟ್ಟಣದ ಕನ್ನಡ ಸಂಘದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ದಿವಂಗತ ಸೀಮೆಎಣ್ಣೆ ಕೃಷ್ಣಯ್ಯ ಅವರ 9 ನೇ ವರ್ಷದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ​"ತಾಲೂಕಿನಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ಕೃಷ್ಣಯ್ಯನವರು ಮತ್ತು ಅವರ ತಂಡದ ಕೊಡುಗೆ ಹಿರಿದಾದುದು. ಈ ಕ್ಷೇತ್ರದಲ್ಲಿ ಎಷ್ಟು ದಿನಗಳ ಕಾಲ ಕನ್ನಡ ಕಾರ್ಯಕ್ರಮಗಳು ನಡೆಯುತ್ತವೆಯೋ ಅಲ್ಲಿಯವರೆಗೂ ಕೃಷ್ಣಯ್ಯನವರ ಹೆಸರು ಅಮರವಾಗಿರಲಿದೆ," ಎಂದರು. ​ಬಡತನ ಮೆಟ್ಟಿ ಬೆಳೆದ ಧೀಮಂತ: "ನಾವು ಸಣ್ಣ ಹುಡುಗರಿದ್ದಾಗಿನಿಂದಲೂ ಕೃಷ್ಣಯ್ಯನವರ ಹೆಸರು ಮತ್ತು ಕಾರ್ಯಕ್ರಮಗಳನ್ನು ಕೇಳುತ್ತಾ ಬೆಳೆದಿದ್ದೇವೆ. ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದ ಅವರು, ಬಡತನದಲ್ಲೇ ಬೆಳೆದು ತಮ್ಮ ಸ್ವಪ್ರಯತ್ನದಿಂದ ಉನ್ನತ ಶಿಕ್ಷಣ ಪಡೆದು ಪದವೀಧರರಾದರು. ನಂತರ ಉತ್ತಮ ಕೆಲಸದಲ್ಲಿದ್ದರೂ, ಕನ್ನಡ ನೆಲ-ಜಲ ಮತ್ತು ಸಮಾಜ ಸೇವೆಯತ್ತ ತೀವ್ರ ಒಲವು ಹೊಂದಿದ್ದರು. ವಿ.ಎನ್. ಪಾಟೀಲ್, ರಾಮಕೃಷ್ಣ ಹೆಗಡೆ ಅವರಂತಹ ಹಿರಿಯ ರಾಜಕಾರಣಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು," ಎಂದು ಕೃಷ್ಣಯ್ಯನವರ ವ್ಯಕ್ತಿತ್ವವನ್ನು ನೆನಪಿಸಿಕೊಂಡರು. ​ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
    1
    ಕನ್ನಡ ಸಂಘದ ಸಂಸ್ಥಾಪಕ ದಿವಂಗತ 'ಸೀಮೆಎಣ್ಣೆ ಕೃಷ್ಣಯ್ಯ' 9ನೇ ವರ್ಷದ ನುಡಿನಮನ: ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಮಾತು
​ಕನ್ನಡ ಸಂಘದ ಸಂಸ್ಥಾಪಕ ದಿವಂಗತ 'ಸೀಮೆಎಣ್ಣೆ ಕೃಷ್ಣಯ್ಯ' 9ನೇ ವರ್ಷದ ನುಡಿನಮನ: ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಮಾತು
-------------------
​ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಕನ್ನಡ ಪರ ಚಟುವಟಿಕೆಗಳಿಗೆ ಬಲ ತುಂಬಲು ವೇದಿಕೆ ನಿರ್ಮಿಸಿ, ಶಾಶ್ವತ ಕಾರ್ಯಕ್ರಮಗಳನ್ನು ನೀಡಿದ ಕನ್ನಡ ಸಂಘದ ಸಂಸ್ಥಾಪಕ ಹಾಗೂ ಅಧ್ಯಕ್ಷ ದಿವಂಗತ 'ಸೀಮೆಎಣ್ಣೆ ಕೃಷ್ಣಯ್ಯ' ಅವರ ಸೇವೆ ಅತ್ಯಂತ ಸ್ಮರಣೀಯ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಬಣ್ಣಿಸಿದರು.
​ಪಟ್ಟಣದ ಕನ್ನಡ ಸಂಘದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ದಿವಂಗತ ಸೀಮೆಎಣ್ಣೆ ಕೃಷ್ಣಯ್ಯ ಅವರ 9 ನೇ ವರ್ಷದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
​"ತಾಲೂಕಿನಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ಕೃಷ್ಣಯ್ಯನವರು ಮತ್ತು ಅವರ ತಂಡದ ಕೊಡುಗೆ ಹಿರಿದಾದುದು. ಈ ಕ್ಷೇತ್ರದಲ್ಲಿ ಎಷ್ಟು ದಿನಗಳ ಕಾಲ ಕನ್ನಡ ಕಾರ್ಯಕ್ರಮಗಳು ನಡೆಯುತ್ತವೆಯೋ ಅಲ್ಲಿಯವರೆಗೂ ಕೃಷ್ಣಯ್ಯನವರ ಹೆಸರು ಅಮರವಾಗಿರಲಿದೆ," ಎಂದರು.
​ಬಡತನ ಮೆಟ್ಟಿ ಬೆಳೆದ ಧೀಮಂತ:
"ನಾವು ಸಣ್ಣ ಹುಡುಗರಿದ್ದಾಗಿನಿಂದಲೂ ಕೃಷ್ಣಯ್ಯನವರ ಹೆಸರು ಮತ್ತು ಕಾರ್ಯಕ್ರಮಗಳನ್ನು ಕೇಳುತ್ತಾ ಬೆಳೆದಿದ್ದೇವೆ. ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದ ಅವರು, ಬಡತನದಲ್ಲೇ ಬೆಳೆದು ತಮ್ಮ ಸ್ವಪ್ರಯತ್ನದಿಂದ ಉನ್ನತ ಶಿಕ್ಷಣ ಪಡೆದು ಪದವೀಧರರಾದರು. ನಂತರ ಉತ್ತಮ ಕೆಲಸದಲ್ಲಿದ್ದರೂ, ಕನ್ನಡ ನೆಲ-ಜಲ ಮತ್ತು ಸಮಾಜ ಸೇವೆಯತ್ತ ತೀವ್ರ ಒಲವು ಹೊಂದಿದ್ದರು. ವಿ.ಎನ್. ಪಾಟೀಲ್, ರಾಮಕೃಷ್ಣ ಹೆಗಡೆ ಅವರಂತಹ ಹಿರಿಯ ರಾಜಕಾರಣಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು," ಎಂದು ಕೃಷ್ಣಯ್ಯನವರ ವ್ಯಕ್ತಿತ್ವವನ್ನು ನೆನಪಿಸಿಕೊಂಡರು.
​ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.