ಆಸ್ಪತ್ರೆಗಳಲ್ಲಿ ಔಷಧ ಕೊರತೆ ಸರಿಪಡಿಸಿ: ವಿಧಾನಸಭೆಯಲ್ಲಿ ಶಾಸಕ ಪ್ರಭು ಚವ್ಹಾಣ ಆಗ್ರಹ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಉಂಟಾಗುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಔರಾದ(ಬಿ) ಕ್ಷೇತ್ರದ ಶಾಸಕ ಶ್ರೀ ಪ್ರಭು ಬಿ. ಚವ್ಹಾಣ ಅವರು ಸರ್ಕಾರದ ಗಮನ ಸೆಳೆದರು. ಔರಾದ(ಬಿ) ವಿಧಾನಸಭಾ ಕ್ಷೇತ್ರವು ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿಭಾಗದಲ್ಲಿರುವ ಗಡಿ ಕ್ಷೇತ್ರವಾಗಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧದ ಕೊರತೆ ಹೆಚ್ಚಾಗಿದೆ. ಬೇರೆ ಭಾಗಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಮಸ್ಯೆ ಬಹಳಷ್ಟಿದ್ದು, ಇದರಿಂದ ಬಡ ರೋಗಿಗಳು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಮಸ್ಯೆಯ ಗಂಭೀರತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೂಚಿಸುವ ಔಷಧ ಹೊರಗಿನಿಂದ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಬಡ ರೋಗಿಗಳ ಮೇಲೆ ಆರ್ಥಿಕ ಭಾರ ಬೀಳುತ್ತಿದೆ. ಆದ್ದರಿಂದ ತಕ್ಷಣವೇ ಅಗತ್ಯ ಔಷಧಿಗಳ ಸಮರ್ಪಕ ಪೂರೈಕೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರಾದ ದಿನೇಶ ಗುಂಡೂರಾವ ಅವರು, ಕೆಎಸ್ಎಂಎಸ್ಸಿಎಲ್ ಮೂಲಕ ಔಷಧ ಪೂರೈಕೆ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ತರಲಾಗಿದೆ. ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಸುವ ಕಾರ್ಯ ನಡೆಯುತ್ತಿದ್ದು, ಟೆಂಡರ್ ಆಗಿದೆ. ಖರೀದಿ ಆದೇಶಗಳಾಗಿವೆ. ಮುಂದಿನ ದಿನಗಳಲ್ಲಿ ಔಷಧ ಕೊರತೆ ಉಂಟಾಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. *ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ಪ್ರಸ್ತಾಪ:* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ಪ್ರೋತ್ಸಾಹಧನ ವಿತರಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕರು ಚುಕ್ಕೆ ಗುರುತಿಲ್ಲದ ಪ್ರಶ್ನೆಯ ಮೂಲಕ ಸರ್ಕಾರದ ಗಮನ ಸೆಳೆದರು.

- ಅಫಜಲಪೂರ : ತಾಲೂಕಿನಲ್ಲಿ ಈ ಬಾರಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿ ಹೊರಬಂದಿದ್ದು, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಸರ್ಕಾರಿ ಕಾಲೇಜುಗಳಲ್ಲಿಯೇ ಅತ್ಯುತ್ತಮ ಫಲಿತಾಂಶವನ್ನು ಈ ಕಾಲೇಜು ದಾಖಲಿಸಿದ್ದು, ಭಾಗಣ್ಣ ಎಂಬ ವಿದ್ಯಾರ್ಥಿ ಶೇ. 97.16 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಕೀರ್ತಿಯನ್ನು ತಂದಿದ್ದಾನೆ. ವಾಣಿಜ್ಯ ವಿಭಾಗದಲ್ಲಿ ಶೇ 85% ಫಲಿತಾಂಶ ಹಾಗೂ ವಿಜ್ಞಾನ ವಿಭಾಗದಲ್ಲಿಯೂ ಉತ್ತಮ ಸಾಧನೆ ಕಂಡುಬಂದಿದ್ದು, ಕುಮಾರಿ ಅಂಕಿತಾ ಅವರು ಶೇ. 82.33 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ಶಿಕ್ಷಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಶ್ರಮ ಪ್ರಮುಖ ಕಾರಣವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಗುರುಲಿಂಗಯ್ಯ ಸಾಲಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.1
- Supar luxury || Yadgir Gurmatkal kodangal parigi mannaguda chevella minabada mehendipatnam hyderabad Yadgir Departure time Timming 11:20Am Hyderabad Arrival time 4:೦೦pm Rs 390 Plotfrom Hyderabad 6:00 am Yadgir 10:40 am1
- Post by Nava karnataka News channel1
- Post by ABU NEWS CHANNEL ಸಂಪಾದಕರು1
- KL Rahul mant 💗😎🥰1
- ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜಾಲಹಳ್ಳಿ ಪ್ರವಾಸಿ ಮಂದಿರದಲ್ಲಿ 14-04-2026 ರಂದು ಕಮಲದಿನ್ನಿ ಗ್ರಾಮದ ದಲಿತ ಹೋರಾಟಗಾರರಾದ ಸಾಬಣ್ಣ ಕಮಲದಿನ್ನಿ ಅವರಿಗೆ ಗ್ರಾಮಸ್ಥರಿಂದ ಗೌರವ ಸನ್ಮಾನ ನೆರವೇರಿತು.ಬಾಬು ಜಗಜೀವನ್ ರಾಮ್ ಜಯಂತಿ ಅಂಗವಾಗಿ ದೇವದುರ್ಗ ತಾಲೂಕು ಆಡಳಿತ ವತಿಯಿಂದ ಸಮಾಜಸೇವಾ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ, ಕಮಲದಿನ್ನಿ ಹಾಗೂ ಜಾಲಹಳ್ಳಿ ಗ್ರಾಮದ ಮುಖಂಡರು ಸೇರಿ ಶಾಲು ಹೊದಿಸಿ, ಹಾರ ಹಾಕಿ, ಡಾ. ಅಂಬೇಡ್ಕರ್ ಅವರ ಭಾವಚಿತ್ರ ನೀಡಿ ಸನ್ಮಾನಿಸಿದರು.ಈ ಕಾರ್ಯಕ್ರಮವನ್ನು ಗ್ರಾಮದ ಹಿರಿಯರಾದ ಅಮರೇಗೌಡ ಕಮಲದಿನ್ನಿ ಹಾಗೂ ಶರಣಗೌಡ ಕಮಲದಿನ್ನಿ ಆಯೋಜಿಸಿದ್ದರು.1
- ವಿಜಯಪುರ: ನಾನು ಸಾಯುವ ಒಳಗೆ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ವಿಜಯಪುರದಲ್ಲಿ ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಅವರು, ರಾಜ್ಯಕ್ಕೆ ದಲಿತ ಮುಖ್ಯಮಂತ್ರಿ ಆಗಬೇಕು ಎಂದು ಮೊಟ್ಟಮೊದಲು ಹೇಳಿದ್ದು ನಾನೇ ಎಂದು ಹೇಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ತಾವು ಈ ಹೇಳಿಕೆ ನೀಡಿದ್ದಾಗ ಕಾಂಗ್ರೆಸ್ ನಲ್ಲಿದ್ದ ದಲಿತರು ಈಗ ಎಚ್ಚೆತ್ತುಕೊಂಡು ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. ಅಂದು ಕೇಳಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗುತ್ತಿದ್ದರು, ಆಗ ಪಕ್ಷ ಬೇರೆಯಾದರೂ ತಮ್ಮ ಸಮಾಜದವರು ಮುಖ್ಯಮಂತ್ರಿಯಾಗಿದ್ದಕ್ಕೆ ತಮಗೆಲ್ಲರಿಗೂ ಖುಷಿಯಾಗುತ್ತಿತ್ತು ಎಂದು ಅವರು ತಿಳಿಸಿದರು.1
- YADGIR BREAKING NEWS || ಪೊಲೀಸರ ದೌರ್ಜನ್ಯದಿಂದ ಯುವಕನ ಕಾಲು ಮುರಿತ - ಎಫ್.ಐ.ಆರ್ ಮತ್ತು ಎಂ.ಎಲ್.ಸಿ ದಾಖಲಿಸಲು ಹಿಂದೇಟು. ಹುಣಸಗಿ ತಾಲೂಕಿನ ಜುಮಾಲಪುರ, ಗ್ರಾಮದಲ್ಲಿ ಪೋಲಿಸ್ ರಿಂದ ಅಮಾನವೀಯ ಘಟನೆ. ಕೊಡೇಕಲ್ ಪೊಲೀಸ್ ಠಾಣೆಯ ಪೊಲೀಸರ ದಬ್ಬಾಳಿಕೆಯಿಂದ ಯುವಕನೊಬ್ಬನ ಕಾಲು ಮುರಿದಿರುವ ಆರೋಪ ಗಾಯಾಳು ಬಸವರಾಜ ರಾಜನಕೋಳೂರು ಎಂಬುವವರನ್ನು ಜುಮಾಲಪುರದಲ್ಲಿ ಕುರಿ ಕಾಯಲು ಹೋಗಿದ್ದ ಬಸವರಾಜ ಕವಲ್ದಾರ ಅಲ್ಲೇ ಆಡುತಿದ್ದ (ಪಂಜೆ ಆಡುವ ಸ್ಥಳದಲ್ಲಿ) ಕೊಡೇಕಲ್ ಠಾಣೆಯ ಪೊಲೀಸರಾದ ವಿನಾಯಕ ಮತ್ತು ಮುತ್ತು ಎಂಬುವವರು ವಿನಾಕಾರಣ ಓಡಿಸಿಕೊಂಡು ಹೋಗಿ, ಅಮಾನವೀಯವಾಗಿ ನೆಲಕ್ಕೆ ಕೆಡವಿದ್ದಾರೆ. ಈ ದಾಳಿಯಿಂದ ಬಸವರಾಜ ಅವರ ಕಾಲು ಒದ್ದು ಮುರಿದಿದ್ದಾರೆ ಎಂದು ಕುಟುಂಬಸ್ಥರು ಆರೋಪ ಈ ಅನ್ಯಾಯದ ಬಗ್ಗೆ ದೂರು ನೀಡಲು ಹೋದರೆ, ಕೊಡೇಕಲ್ ಠಾಣೆಯ ಪೊಲೀಸರು ತಮ್ಮ ತಪ್ಪು ಮುಚ್ಚಿಕೊಳ್ಳಲು ಯಾವುದೇ ರೀತಿಯಲ್ಲಿ ಎಫ್.ಐ.ಆರ್ (FIR) ದಾಖಲಿಸಲು ನಿರಾಕರಿಸುತ್ತಿದ್ದಾರೆ.ಎಂದು ಗ್ರಾಮದ ಮುಖಂಡರು ಗಳು ಪೋಲಿಸ್ ಇಲಾಖೆ ಮೇಲೆ ಆರೋಪ ಕೇವಲ ಎಫ್.ಐ.ಆರ್ ಮಾತ್ರವಲ್ಲದೆ, ಗಾಯಾಳುವಿನ ಮೆಡಿಕೊ-ಲೀಗಲ್ ಕೇಸ್ (MLC) ದಾಖಲಿಸಿಕೊಳ್ಳಲೂ ಬಂದಿಲ್ಲ ರಕ್ಷಣೆ ನೀಡಬೇಕಾದ ಪೊಲೀಸರೇ ಈ ರೀತಿ ದೌರ್ಜನ್ಯ ಎಸಗಿರುವುದು ಹಾಗೂ ಕಾನೂನು ಪ್ರಕ್ರಿಯೆಯನ್ನು ಹತ್ತಿಕ್ಕುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಮೇಲಧಿಕಾರಿಗಳು (ಎಸ್.ಪಿ) ಮಧ್ಯಪ್ರವೇಶಿಸಿ, ತಪ್ಪಿತಸ್ಥ ಪೊಲೀಸರಾದ ವಿನಾಯಕ ಮತ್ತು ಮುತ್ತು ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಗಾಯಾಳುವಿಗೆ ಸೂಕ್ತ ಚಿಕಿತ್ಸೆ ಮತ್ತು ನ್ಯಾಯ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ1