ಪೋತ್ನಾಳನಲ್ಲಿ ರೈತಸಂಘದಿಂದ ರಸ್ತೆತಡೆ : ಸರ್ಕಾರದ ವಿರುದ್ಧ ಭಾರಿ ಆಕ್ರೋಶ ಮಾನ್ವಿ, : ಭೀಕರ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಮತ್ತು ಜೋಳ ಖರೀದಿ ಕೇಂದ್ರದಿಂದ ಬಾಕಿ ಹಣ ಪಾವತಿ ವಿಳಂಬದಿಂದ ಆಕ್ರೋಶಗೊಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನೂರಾರು ಸಂಖ್ಯೆಯ ರೈತರೂಂದಿಗೆ ತಾಲೂಕಿನ ಪೋತ್ನಾಳ್ ಬಳಿ ರಾಜ್ಯ ಹೆದ್ದಾರಿ ತಡೆದು ಭಾರಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಹಾಗೂ ಮಾಜಿಸಚಿವ, ಶಾಸಕರ ನಿರ್ಲಕ್ಷ್ಯತನ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಖಾಲಿ ಕೂಡ ಹಿಡಿದು ನೂರಾರು ಸಂಖ್ಯೆಯಲ್ಲಿ ರೈತರು ಸುಮಾರು ಎರಡೂವರೆ ಗಂಟೆ ನಡೆಸಿದ ರಸ್ತೆ ತಡೆ ಚಳುವಳಿಗೆ ರಸ್ತೆಯ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಬಿಸಿಲಿನಲ್ಲಿ ತತ್ತರಿಸುವಂತೆ ಮಾಡಿತು. 2025-26 ಸಾಲಿನಲ್ಲಿ ಜೋಳ ಖರೀದಿ ಕೇಂದ್ರಕ್ಕೆ ನೀಡಿದ ಜೋಳದ ಬಾಬತ್ತು ಬಾಕಿ ಹಣ ಬಿಡುಗಡೆ ಮಾಡಬೇಕು. ಹಿರೇಹಳ್ಳಕ್ಕೆ ಕುಡಿಯುವ ನೀರು ಒದಗಿಸಬೇಕು ಮತ್ತು ಬರ ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕೆನ್ನುವ ಮೂರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.ಜೋಳ ಖರೀದಿ ಮಾಡಿ 5-6 ತಿಂಗಳು ಕಳೆದರೂ ಇದುವರೆಗೂ ಹಣ ಪಾವತಿಸಿಲ್ಲ. ಮುಂಗಾರು ಮುಗಿದು ಹಿಂಗಾರು ಆರಂಭವಾಗಿದ್ದು ಮಳೆ ಇಲ್ಲದೆ ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ.ಮಕ್ಕಳ ಶಾಲಾ ಕಾಲೇಜು ಶುಲ್ಕ ಕಟ್ಟಲು, ಬ್ಯಾಂಕ್ ಸಾಲ ತೀರಿಸಲು, ಬಿತ್ತನೆ ಬೀಜ ಗೊಬ್ಬರ ಖರೀದಿಸಲು ಮತ್ತು ಕುಟುಂಬದ ಆಸ್ಪತ್ರೆ ವೆಚ್ಚ. ಭರಿಸಲು ಸಾಧ್ಯವಾಗದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಕುರಿತು ಹಲವು ಬಾರಿ ಅಧಿಕಾರಿಗಳಿಗೆ, ಸಚಿವರಿಗೆ, ಶಾಸಕರಿಗೆ ಮನವಿ ನೀಡಿ, ರಸ್ತೆ ತಡೆ ಮಾಡಿ ಗಮನ ಸೆಳೆದರು ಯಾರೂ ಸ್ಪಂದಿಸಿಲ್ಲ ಎಂದು ರೈತ ಮುಖಂಡರು ಮಾಜಿ ಸಚಿವ ಎನ್ ಎಸ್ ಬೋಸರಾಜು ಮತ್ತು ಶಾಸಕ ಹಂಪಯ್ಯನಾಯಕ ಸಾಹುಕಾರ ಅವರ ವಿರುದ್ದ ಕೆಂಡಾಮಂಡಲವಾಗಿ ತರಾಟೆಗೆ ತೆಗೆದುಕೊಂಡರು.ತಮ್ಮ ಬೇಡಿಕೆಗಳನ್ನು ಶೀಘ್ರ ಪರಿಹರಿಸದಿದ್ದರೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಗಂಭೀರ ಹೋರಾಟವನ್ನು ಎದುರಿಸಬೇಕಾಗುತ್ತದೆ. ರೈತರನ್ನು ಈ ಸರ್ಕಾರ ಕೊಲೆ ಮಾಡುತ್ತಿದೆ. ಕುಟುಂಬಗಳ ಪರಿಸ್ಥಿತಿ ಗಂಭೀರವಾಗಿದ್ದರೂ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ತೀವ್ರ ಬಿಸಿಲಿನ ತಾಪಮಾನದ ಮಧ್ಯೆಯೂ ರೈತರು ಹೋರಾಟವನ್ನು ನಡೆಸಿದರು. ಈ ಹೋರಾಟ ಜಿಲ್ಲೆಯಲ್ಲಿ ರೈತರ ಪರಿಸ್ಥಿತಿ ಮತ್ತು ಅವರ ಸಂಕಷ್ಟಕ್ಕೆ ನಿದರ್ಶನವಾಗಿದ್ದು ಸರ್ಕಾರ ಕೂಡಲೇ ಪರಿಹಾರ ಒದಗಿಸದಿದ್ದರೆ ಜಿಲ್ಲೆಯಾದ್ಯಂತ ಈ ಹೋರಾಟದ ನಡೆಯುವುದಕ್ಕೆ ದಿಕ್ಸೂಚಿಯಂತಿತ್ತು. ಈ ಪ್ರತಿಭಟನೆಯಲ್ಲಿ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಿಗಿ, ಜಿಲ್ಲಾಧ್ಯಕ್ಷ ಕೆ.ವೈ.ಬಸವರಾಜನಾಯಕ ಕೊಟ್ನೆಕಲ್, ಸಿಐಟಿಯು ಅಧ್ಯಕ್ಷ ಹೆಚ್.ಶರ್ಫುದ್ದೀನ್ ಪೋತ್ನಾಳ, ಕೆ.ಎಸ್.ಕುಮಾರಸ್ವಾಮಿ, ರಾಜ್ಯ ಜೆಡಿಎಸ್ ಪಕ್ಷದ ಯುವ ಉಪಾಧ್ಯಕ್ಷ ರಾಜಾರಾಮಚಂದ್ರನಾಯಕ, ರಾಜಶೇಖರಗೌಡ, ರಾಮನಗೌಡ, ಪಾರ್ಶನಾಥಗೌಡ, ನಾಗನಗೌಡ, ಅಮರೇಗೌಡ ಖರಾಬದಿನ್ನಿ, ದುರುಗಪ್ಪ ತಡಕಲ್, ಹೊಳೆಯಪ್ಪ ಊಟಕನೂರು, ಬಸವರಾಜ ಬಾಗಲವಾಡ, ಬಸವರಾಜ್ ತಡಕಲ್, ಯಲ್ಲಪ್ಪ ಊಟಕನೂರು, ಮೌನೇಶನಾಯಕ ಮ್ಯಾಕಲ್, ಮಲ್ಲಪ್ಪ ತಡಕಲ್, ಶೇಕಪ್ಪ ತಡಕಲ್, ಶಿವು ನುಗುಡೋಣಿ ಹೊಸೂರು, ಲಚ್ಚಪ್ಪಗೌಡ ತಡಕಲ್, ಕೆ.ಸಾಜಿದ್ ಪಾಷ, ಬಸವರಾಜಸ್ವಾಮಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಪೋತ್ನಾಳನಲ್ಲಿ ರೈತಸಂಘದಿಂದ ರಸ್ತೆತಡೆ : ಸರ್ಕಾರದ ವಿರುದ್ಧ ಭಾರಿ ಆಕ್ರೋಶ ಮಾನ್ವಿ, : ಭೀಕರ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಮತ್ತು ಜೋಳ ಖರೀದಿ ಕೇಂದ್ರದಿಂದ ಬಾಕಿ ಹಣ ಪಾವತಿ ವಿಳಂಬದಿಂದ ಆಕ್ರೋಶಗೊಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನೂರಾರು ಸಂಖ್ಯೆಯ ರೈತರೂಂದಿಗೆ ತಾಲೂಕಿನ ಪೋತ್ನಾಳ್ ಬಳಿ ರಾಜ್ಯ ಹೆದ್ದಾರಿ ತಡೆದು ಭಾರಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಹಾಗೂ ಮಾಜಿಸಚಿವ, ಶಾಸಕರ ನಿರ್ಲಕ್ಷ್ಯತನ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಖಾಲಿ ಕೂಡ ಹಿಡಿದು ನೂರಾರು ಸಂಖ್ಯೆಯಲ್ಲಿ ರೈತರು ಸುಮಾರು ಎರಡೂವರೆ ಗಂಟೆ ನಡೆಸಿದ ರಸ್ತೆ ತಡೆ ಚಳುವಳಿಗೆ ರಸ್ತೆಯ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಬಿಸಿಲಿನಲ್ಲಿ ತತ್ತರಿಸುವಂತೆ ಮಾಡಿತು. 2025-26 ಸಾಲಿನಲ್ಲಿ ಜೋಳ ಖರೀದಿ ಕೇಂದ್ರಕ್ಕೆ ನೀಡಿದ ಜೋಳದ ಬಾಬತ್ತು ಬಾಕಿ ಹಣ ಬಿಡುಗಡೆ ಮಾಡಬೇಕು. ಹಿರೇಹಳ್ಳಕ್ಕೆ ಕುಡಿಯುವ ನೀರು ಒದಗಿಸಬೇಕು ಮತ್ತು ಬರ ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕೆನ್ನುವ ಮೂರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.ಜೋಳ ಖರೀದಿ ಮಾಡಿ 5-6 ತಿಂಗಳು ಕಳೆದರೂ ಇದುವರೆಗೂ ಹಣ ಪಾವತಿಸಿಲ್ಲ. ಮುಂಗಾರು ಮುಗಿದು ಹಿಂಗಾರು ಆರಂಭವಾಗಿದ್ದು ಮಳೆ ಇಲ್ಲದೆ ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ.ಮಕ್ಕಳ ಶಾಲಾ ಕಾಲೇಜು ಶುಲ್ಕ ಕಟ್ಟಲು, ಬ್ಯಾಂಕ್ ಸಾಲ ತೀರಿಸಲು, ಬಿತ್ತನೆ ಬೀಜ ಗೊಬ್ಬರ ಖರೀದಿಸಲು ಮತ್ತು ಕುಟುಂಬದ ಆಸ್ಪತ್ರೆ ವೆಚ್ಚ. ಭರಿಸಲು ಸಾಧ್ಯವಾಗದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ
ಕುರಿತು ಹಲವು ಬಾರಿ ಅಧಿಕಾರಿಗಳಿಗೆ, ಸಚಿವರಿಗೆ, ಶಾಸಕರಿಗೆ ಮನವಿ ನೀಡಿ, ರಸ್ತೆ ತಡೆ ಮಾಡಿ ಗಮನ ಸೆಳೆದರು ಯಾರೂ ಸ್ಪಂದಿಸಿಲ್ಲ ಎಂದು ರೈತ ಮುಖಂಡರು ಮಾಜಿ ಸಚಿವ ಎನ್ ಎಸ್ ಬೋಸರಾಜು ಮತ್ತು ಶಾಸಕ ಹಂಪಯ್ಯನಾಯಕ ಸಾಹುಕಾರ ಅವರ ವಿರುದ್ದ ಕೆಂಡಾಮಂಡಲವಾಗಿ ತರಾಟೆಗೆ ತೆಗೆದುಕೊಂಡರು.ತಮ್ಮ ಬೇಡಿಕೆಗಳನ್ನು ಶೀಘ್ರ ಪರಿಹರಿಸದಿದ್ದರೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಗಂಭೀರ ಹೋರಾಟವನ್ನು ಎದುರಿಸಬೇಕಾಗುತ್ತದೆ. ರೈತರನ್ನು ಈ ಸರ್ಕಾರ ಕೊಲೆ ಮಾಡುತ್ತಿದೆ. ಕುಟುಂಬಗಳ ಪರಿಸ್ಥಿತಿ ಗಂಭೀರವಾಗಿದ್ದರೂ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ತೀವ್ರ ಬಿಸಿಲಿನ ತಾಪಮಾನದ ಮಧ್ಯೆಯೂ ರೈತರು ಹೋರಾಟವನ್ನು ನಡೆಸಿದರು. ಈ ಹೋರಾಟ ಜಿಲ್ಲೆಯಲ್ಲಿ ರೈತರ ಪರಿಸ್ಥಿತಿ ಮತ್ತು ಅವರ ಸಂಕಷ್ಟಕ್ಕೆ ನಿದರ್ಶನವಾಗಿದ್ದು ಸರ್ಕಾರ ಕೂಡಲೇ ಪರಿಹಾರ ಒದಗಿಸದಿದ್ದರೆ ಜಿಲ್ಲೆಯಾದ್ಯಂತ ಈ ಹೋರಾಟದ ನಡೆಯುವುದಕ್ಕೆ ದಿಕ್ಸೂಚಿಯಂತಿತ್ತು. ಈ ಪ್ರತಿಭಟನೆಯಲ್ಲಿ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಿಗಿ, ಜಿಲ್ಲಾಧ್ಯಕ್ಷ ಕೆ.ವೈ.ಬಸವರಾಜನಾಯಕ ಕೊಟ್ನೆಕಲ್, ಸಿಐಟಿಯು ಅಧ್ಯಕ್ಷ ಹೆಚ್.ಶರ್ಫುದ್ದೀನ್ ಪೋತ್ನಾಳ, ಕೆ.ಎಸ್.ಕುಮಾರಸ್ವಾಮಿ, ರಾಜ್ಯ ಜೆಡಿಎಸ್ ಪಕ್ಷದ ಯುವ ಉಪಾಧ್ಯಕ್ಷ ರಾಜಾರಾಮಚಂದ್ರನಾಯಕ, ರಾಜಶೇಖರಗೌಡ, ರಾಮನಗೌಡ, ಪಾರ್ಶನಾಥಗೌಡ, ನಾಗನಗೌಡ, ಅಮರೇಗೌಡ ಖರಾಬದಿನ್ನಿ, ದುರುಗಪ್ಪ ತಡಕಲ್, ಹೊಳೆಯಪ್ಪ ಊಟಕನೂರು, ಬಸವರಾಜ ಬಾಗಲವಾಡ, ಬಸವರಾಜ್ ತಡಕಲ್, ಯಲ್ಲಪ್ಪ ಊಟಕನೂರು, ಮೌನೇಶನಾಯಕ ಮ್ಯಾಕಲ್, ಮಲ್ಲಪ್ಪ ತಡಕಲ್, ಶೇಕಪ್ಪ ತಡಕಲ್, ಶಿವು ನುಗುಡೋಣಿ ಹೊಸೂರು, ಲಚ್ಚಪ್ಪಗೌಡ ತಡಕಲ್, ಕೆ.ಸಾಜಿದ್ ಪಾಷ, ಬಸವರಾಜಸ್ವಾಮಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
- ಮೇಣದ ಬತ್ತಿ ಹಚ್ಚಿ ಮೆರವಣಿಗೆ ಮೂಲಕ ಪ್ರೇಮ್ ಸುಂದರ್ ಗೆ ನಮನ ಸಲ್ಲಿಕೆ. ಮೇಣದ ಬತ್ತಿ ಹಚ್ಚಿ ಮೆರವಣಿಗೆ ಮೂಲಕ ಪ್ರೇಮ್ ಸುಂದರ್ ಗೆ ನಮನ ಸಲ್ಲಿಕೆ. ಸಿರವಾರ: ಗಣೇಶ ಮೂರ್ತಿ ತರುವ ವೇಳೆ ವಿದ್ಯುತ್ ಅವಘಡ ಸಂಭವಿಸಿ ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ಮೃತಪಟ್ಟಿದ್ದ ಸಿರವಾರ ಪಟ್ಟಣದ ಯುವಕ ಪ್ರೇಮ್ ಸುಂದರ್ ಅವರ ಸ್ಮರಣಾರ್ಥದ ಪ್ರಯುಕ್ತ ಸಿರವಾರ ಪಟ್ಟಣದಲ್ಲಿ ಮಂಗಳವಾರ ಸಂಜೆ ಮೇಣದ ಬತ್ತಿ ಹಚ್ಚಿ ಮೆರವಣಿಗೆ ಮಾಡುವ ಮೂಲಕ ಅಗಲಿದ ಚೇತನಕ್ಕೆ ನಮನ ಸಲ್ಲಿಸಲಾಯಿತು. ಪಟ್ಟಣದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ವಾಲ್ಮೀಕಿ ವೃತ್ತದ ವರೆಗೆ ನಡೆಯಿತು. ಪ್ರೇಮ್ ಸುಂದರ ಅವರ ಸರಳತೆ, ನಡೆ, ನುಡಿ ಮತ್ತು ವ್ಯಕ್ತಿತ್ವವನ್ನು ಸ್ಮರಿಸಿದರು. ಪ್ರೇಮ್ ಸುಂದರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಈ ವೇಳೆ ಪಟ್ಟಣದ ಗಣ್ಯರು, ಕುಟುಂಬಸ್ಥರು, ಸ್ನೇಹಿತರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.1
- ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಗಣ್ಯರು ಚಾಲನೆ ನೀಡಿದರು. ವಾರ್ಡಿನ ಮುಖಂಡರಾದ ಅಯ್ಯಪ್ಪ ವಕೀಲರು ಎಕ್ಸ್ಪರ್ಟ್ ಸ್ಕೂಲಿನ ಮುಖ್ಯಸ್ಥರಾದ ನಾಗರೆಡ್ಡಿ ಅವರು ಮಾತನಾಡಿ ವಾರ್ಡಿನ ಯುವಕರು ಗಣೇಶ್ ಮಂಡಳಿಗೆ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಯಾಗಿ ಗಣೇಶೋತ್ಸವವನ್ನು ಆಚರಣೆ ಮಾಡುತ್ತ ಬಂದಿದ್ದಾರೆ ಇಂತಹ ಯುವಕ ಮಂಡಳಿ ಸದಸ್ಯರಿಗೆ ವಾರ್ಡಿನ ಪ್ರತಿಯೊಬ್ಬರು ಸರ್ಕಾರದೊಂದಿಗೆ ಒಗ್ಗಟ್ಟಿನಿಂದ ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಗಣೇಶೋತ್ಸವವನ್ನು ಆಚರಣೆ ಮಾಡಲು ಸರ್ಕಾರಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಪತ್ರಕರ್ತ ಸಿದ್ದನಗೌಡ ಪಾಟೀಲ್ ಮಾತನಾಡಿದರು. ಗಣೇಶ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಹಾಗು ಕ್ರೀಡೆಗಳಲ್ಲಿ ಭಾಗವಹಿಸಿ ಜಯಗಳಿಸಿದ ಮಹಿಳೆಯರಿಗೆ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ಸಂಜೆ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ವೇದಿಕೆ ಮೇಲೆ ಸಂಗನಗೌಡ ಆರ್ ಎಸ್ ಗೌಡ ಪ್ರಭುಸ್ವಾಮಿ ಕುಪ್ಪಣ್ಣ ಸೇರಿದಂತೆ ಗಣೇಶ್ ಮಂಡಳಿಯ ಸದಸ್ಯರು ವಾರ್ಡಿನ ಗುರುಹಿರಿಯರು ಮಹಿಳೆಯರು ಮಕ್ಕಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಬಸವರಾಜ್ ಹಿರೇಮಠ ನಡೆಸಿಕೊಟ್ಟರು.4
- ದಕ್ಷಿಣ ಭಾರತದಲ್ಲೇ ಅತ್ಯಂತ ಅಭೂತಪೂರ್ವವಾದ ಮಹಾಶಿಲಾ ತಾಣವೆಂದರೆ ರಾಜನಕೊಲ್ಲೂರು. ಇಲ್ಲಿ ಅನೇಕ ಬಗೆಯ ಮರಳುಗಲ್ಲಿನ ಮಹಾಶಿಲೆಗಳು ಇವೆ. ಕರ್ನಾಟಕದ ಅತ್ಯಂತ ಸುಪ್ರಸಿದ್ದ ತಾಣಗಳು ದಕ್ಷಿಣ ಭಾರತದಲ್ಲೇ ಅತ್ಯಂತ ಅಭೂತಪೂರ್ವವಾದ ಮಹಾಶಿಲಾ ತಾಣವೆಂದರೆ ರಾಜನಕೊಲ್ಲೂರು. ಇಲ್ಲಿ ಅನೇಕ ಬಗೆಯ ಮರಳುಗಲ್ಲಿನ ಮಹಾಶಿಲೆಗಳು ಇವೆ. ಡೋಲ್ಡನ್‌ಗಳೆಂಬ ಜಾವಡಿಗೆ ಆಧಾರವಾಗಿ ನಿಂತ ಬದಿಯ ಚಪ್ಪಡಿಗಳುಳ್ಳ ಆಯತಾಕಾರದ ರಚನೆಗಳನ್ನು ಡೋಲೈನ್ ಗಳೆಂದು ಕರೆಯುತ್ತಾರೆ. ಇಲ್ಲಿ ಕಾಣುವ ವಿವಿಧ ಬಗೆಗಳನ್ನು ಗಮನಿಸಿ, ಕೆಲವಕ್ಕೆ ಮೂರು ಅಥವಾ ನಾಲ್ಕು ಬದಿಗಳಿವೆ. ಹಾಗೂ ಸಣ್ಣ ಕಿಟಕಿ-ರಂಧ್ರವು ಅದರಲ್ಲಿ ಇರಬಹುದು ಅಥವಾ ಇಲ್ಲದಿರಬಹುದು. ಡೋಲೈನ್‌ಗಳ ಮಧ್ಯೆ ಇರುವ ಭಾಗಶಃ ಹೂತಿರುವ, ಡಬ್ಬಿ ಆಕಾರದ ರಚನೆಗಳನ್ನು ಸಿಸ್ಟ್‌ಗಳೆಂದು ಕರೆಯುತ್ತಾರೆ. ಸಿಸ್ಟ್ ತನ್ನೊಳಗೇ ಕುಸಿದು ಬೀಳದಂತೆ ತಡೆಗಟ್ಟುವ ರೀತಿಯಲ್ಲಿ, ರಾಜನಕೊಲ್ಲೂರಿನ ಎಲ್ಲ ಸಿಸ್ಟ್‌ಗಳಲ್ಲೂ ಅದರ ಬದಿಯ ಉದ್ದನೆಯ ಚಪ್ಪಡಿಗಳು, ಸ್ವಲ್ಪ ಚಿಕ್ಕ ಚಪ್ಪಡಿಗಳಿಗಿಂತ ಮುಂದಕ್ಕೆ ಚಾಚಿವೆ.1
- ಸೈದಾಪುರ ಎಪಿಎಂಸಿಯಲ್ಲಿ ಮೂಲಸೌಕರ್ಯಗಳು ಒದಗಿಸಿ-ಉಮೇಶ್ ಮುದ್ನಾಳ ಆಗ್ರಹ ಸೈದಾಪೂರ ದನಗಳ, ಕುರಿ, ಆಡಳು, ಕೋಳಿ ಸಂತೆ ಪ್ರಾರಂಭ ಮಾಡಿ, ಆ ಸ್ಥಳದಲ್ಲಿ ಕುಡಿಯುವ ನೀರು ಮತ್ತು ರೈತರಿಗೆ ಮೂಲಭೂತ ಸೌಕರ್ಯಗಳು ಒದಗಿಸಲು ಉಮೇಶ ಮುದ್ನಾಳ ಆಗ್ರಹ, ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು. ಸೈದಾಪೂರ : ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಪ್ರತಿ ಗುರುವಾರ ನಡೆಯುತ್ತಿರುವ ಸಂತೆಯಲ್ಲಿ ದನ, ಆಡು, ಕುರಿ, ಕೋಳಿ ಮಾರಾಟಕ್ಕೆ ಪ್ರಾರಂಭ ಮಾಡಿ, ಸಂತೆ ಸ್ಥಳದಲ್ಲಿ ಕುಡಿಯುವ ನೀರು & ಮೂಲಭೂತ ಸೌಕರ್ಯ ಒದಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ.ಕೆ.ಮುದ್ನಾಳ 1 ವಾರದ ಗಡುವು ನೀಡಿ ಜಿಲ್ಲಾಡಳಿತಕ್ಕೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಿಗ್ಗೆ ಸಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ. ಮುದ್ನಾಳ ಅವರು ಉಪ ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದರು. ಸ್ಥಳದಲ್ಲಿ ರೈತರೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲೇ ಅತಿದೊಡ್ಡ ಜಾನುವಾರು ಸಂತೆಗಳಾದ ಶುಕ್ರವಾರ-ಶಹಾಪೂರ, ಮಂಗಳವಾರ-ಯಾದಗಿರಿ, ಸೋಮವಾರ-ಗುರುಮಠಕಲ್, ಗುರುವಾರ-ಸೈದಾಪೂರದಲ್ಲಿ ಪ್ರಾರಂಭ ಮಾಡಬೇಕೆಂದು ಒತ್ತಾಯಿಸಿದರು. ಸಂತೆ ಆವರಣದಲ್ಲಿ ದನ-ಕರುಗಳ, ಕುರಿ, ಆಡು, ಕೋಳಿ ಮಾರಾಟಕ್ಕೆ ಬಂದ ರೈತರಿಗೆ ಸೂಕ್ತ ಸ್ಥಳಾವಕಾಶವಿಲ್ಲದೇ ಜಾಲಿ ಕಂಟಿಗಳು ಬೆಳೆದು, ವಿಷ-ಜಂತುಗಳು ಸೇರಿಕೊಂಡಿವೆ. ಚರಂಡಿಯಲ್ಲಿ ತುಂಬಿ ನಿಂತು ಗಬ್ಬೆದ್ದು ನಾರುತ್ತಿದೆ. ಕುಡುಕರ ಹಾವಳಿ, ಅಕ್ರಮ ಚಟುವಟಿಕೆ ನಡೆಯುತ್ತಿದ್ದು, ಎಲ್ಲೆಡೆ ಅಸ್ವಚ್ಛತೆ ಆವರಿಸಿದ್ದು, ದುರ್ವಾಸನೆ ಬೀರುತ್ತಿದೆ. ಕೆಲವೆಡೆ ಭಿಕ್ಷುಕರು ಹಾಗೂ ಪುಂಡ-ಪೊಕರಿಗಳ ತಂಗುದಾಣವಾಗಿ ಮಾರ್ಪಟ್ಟಿರುವುದು ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸಂತೆಗೆ ಆಗಮಿಸುವ ರೈತರು ಹಾಗೂ ವ್ಯಾಪಾರಿಗಳು ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಬಿರುಬಿಸಿಲಿನ ನಡುವೆಯೂ ಜನ-ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಂಡು ಜನ-ಜಾನುವಾರುಗಳಿಗೆ ರೋಗ-ರುಜಿನ ಹರಡದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು. ಸಂತೆ ಪ್ರಾರಂಭವಾದ ನಂತರ ಸಂತೆ ಒಳಗಡೆ ನಡೆಯುತ್ತಿರುವ ಪ್ರತಿ ವಾರ ಪಶುವೈದ್ಯರನ್ನು ಕಡ್ಡಾಯವಾಗಿ ನಿಯೋಜಿಸಿ, ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಬೇಕು. ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಜಾನುವಾರುಗಳನ್ನು ಕಟ್ಟಲು ಸಾಲುಸಾಲಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ನೆರಳಿಗಾಗಿ ಮರಗಳನ್ನು ನೆಡುವುದು ಅಥವಾ ಶೆಡ್ ನಿರ್ಮಿಸುವುದು ಅಗತ್ಯವಾಗಿದೆ. ಅಲ್ಲದೆ ಮಾರುಕಟ್ಟೆ ಆವರಣದಲ್ಲಿ ಉದ್ಯಾನ ನಿರ್ಮಿಸಿ ಪರಿಸರವನ್ನು ಸುಂದರ ಹಾಗೂ ಸ್ವಚ್ಛವಾಗಿಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳು ಹಾಗೂ ಸಂಬAಧಪಟ್ಟ ಎಪಿಎಂಸಿ ಅಧಿಕಾರಿಗಳು ಕೂಡಲೇ ಸಂತೆ ಆವರಣಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ರೈತರು ಮತ್ತು ಜಾನುವಾರುಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕು ಎಂದು ಉಮೇಶ್ ಕೆ. ಮುದ್ನಾಳ ಆಗ್ರಹಿಸಿದರು. ಪ್ರತಿ ಗುರುವಾರ ಸಾವಿರಾರು ರೈತರು ಆಗಮಿಸುವ ಈ ಸಂತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಅತ್ಯಗತ್ಯವಾಗಿದೆ. ಸಂಬAಧಪಟ್ಟ ಅಧಿಕಾರಿಗಳು ಶೀಘ್ರವೇ ಅಗತ್ಯ ಕ್ರಮ ಕೈಗೊಂಡು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಆವರಣದಲ್ಲಿ ಖಾಸಗಿ ಅಂಗಡಿ ಮಾಲೀಕರು ಎ.ಪಿ.ಎಂ.ಸಿ ಶೆಡ್ ನಲ್ಲಿ ಅಕ್ರಮವಾಗಿ ದಾಸ್ತಾನಿಗಾಗಿ ಬಳಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಒಂದು ನಿರ್ಲಕ್ಷ್ಯ ವಹಿಸಿದರೆ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಬಾಗದಲ್ಲಿರುವ ಯಾದಗಿರಿ – ರಾಯಚೂರು ಕರಿಬೆಟ್ಟ ಸರ್ಕಲನ ಮುಖ್ಯ ರಸ್ತೆ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.3
- ರೈತರ ಹೋರಾಟ ಬರಗಾಲ ಹೋರಾಟ ನಮ್ಮ ಯಾದಗಿರಿ ಜಿಲ್ಲಾ ಬರಗಾಲ ಘೋಷಣೆ ಮಾಡು ಅಂತ ಹೋರಾಟ ನಡೆದಿದೆ ಮುಖಂಡ ಅಮಿನ್ ರೆಡ್ಡಿ ಅಳಿಗೆ ರೈತರ ಹೋರಾಟ ಬರಗಾಲ ಹೋರಾಟ ನಮ್ಮ ಯಾದಗಿರಿ ಜಿಲ್ಲಾ ಬರಗಾಲ ಘೋಷಣೆ ಮಾಡು ಅಂತ ಹೋರಾಟ ನಡೆದಿದೆ ಮುಖಂಡ ಅಮಿನ್ ರೆಡ್ಡಿ ಅಳಿಗೆ1
- ಬಳ್ಳಾರಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಂಜೆ ತರಗತಿ! ಗಣೇಶೋತ್ಸವದಂದು ಊಟ–ಪ್ರಸಾದ ವಿತರಣೆ ಬಳ್ಳಾರಿ ಸಮೀಪದ ಸಂಗನಕಲ್ಲು ಗ್ರಾಮದ ಅಂಬೇಡ್ಕರ್ ನಗರದಲ್ಲಿ ವಿಶ್ವಚೇತನ ಸಮೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗಾಗಿ ಉಚಿತ ಸಂಜೆ ತರಗತಿ ಹಾಗೂ ಊಟ/ತಿಂಡಿ ವ್ಯವಸ್ಥೆ ಮಾಡಲಾಯಿತು. ಗಣೇಶ ಚತುರ್ಥಿ ಅಂಗವಾಗಿ ಟ್ಯೂಷನ್ ಕೇಂದ್ರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ಶಾಂತಿ ಮಂತ್ರ ಪಠಣ ನಡೆಸಲಾಯಿತು. ಬಳಿಕ ಮಕ್ಕಳಿಗೆ ಸಿಹಿ ಪ್ರಸಾದ ವಿತರಿಸಲಾಯಿತು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಸೇವಾ ಕಾರ್ಯ ನಡೆಯುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಟಿ.ನಾಗರಾಜ್ ತಿಳಿಸಿದ್ದಾರೆ. 📍 ಸಂಗನಕಲ್ಲು, ಬಳ್ಳಾರಿ 📅 15-09-2026 ASN NEWS24 ಕನ್ನಡ — ಸುತ್ತಮುತ್ತ ನಡೆಯುವ ಸುದ್ದಿ, ಸಾರ್ವಜನಿಕ ಸಮಸ್ಯೆಗಳು ಮತ್ತು ಜನರ ಧ್ವನಿ. #Ballari #Bellary #Karnataka #KannadaNews #BreakingNews #Education #GovernmentSchool #GovernmentSchoolStudents #FreeEducation #FreeTuition #GaneshChaturthi #GaneshFestival #Ganeshotsav #SocialService #StudentSupport #Sanganakallu #BallariNews #KarnatakaNews #ASNNews24 #ASNNews24Kannada #ಕರ್ನಾಟಕ #ಬಳ್ಳಾರಿ #ಕನ್ನಡಸುದ್ದಿ #ಗಣೇಶೋತ್ಸವ1
- *ಭಕ್ತರ ಇಷ್ಟಾರ್ಥ ಈಡೇರಿಸುವ ದ್ಯಾಮವ್ವನ ಮಗನಾಗಿ ಮೂಡಿಬಂದ ಗೌರಿ-ಗಣೇಶ - ತೆಗ್ಗಿನ ಓಣಿಯಲ್ಲಿ ಭಕ್ತಿ ಸಾಗರ!* ಕುಷ್ಟಗಿ:* ಪಟ್ಟಣದಲ್ಲಿ ಈ ಬಾರಿಯ ಗಣೇಶೋತ್ಸವದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ತೆಗ್ಗಿನ ಓಣಿಯ ಸರ್ವ ಧರ್ಮಗಳ ಗೆಳೆಯರ ಬಳಗದ ವಿಶೇಷ ಗಣೇಶ ಮೂರ್ತಿ. ಪ್ರತಿ ವರ್ಷ ಒಂದೊಂದು ವಿಭಿನ್ನ ಪರಿಕಲ್ಪನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವ ಈ ಬಳಗವು, ಈ ಬಾರಿ ಅತ್ಯಾಧುನಿಕ *ಎಐ ತಂತ್ರಜ್ಞಾನದ* ನೆರವಿನೊಂದಿಗೆ ಅತ್ಯಂತ ಅರ್ಥಗರ್ಭಿತವಾದ ಮೂರ್ತಿಯನ್ನು ಪ್ರತಿಷ್ಠಾಪಿಸಿ ಇಡೀ ಕುಷ್ಟಗಿಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. *ಪುರಾಣದೊಂದಿಗೆ ಗ್ರಾಮ ದೇವತೆಯ ಸಮಾಗಮ: ಲೋಕ ಕಲ್ಯಾಣಕ್ಕಾಗಿ ಪಾರ್ವತಿಯು ತನ್ನ ಹಣೆಯ ಬೆವರಿನ ಮಣ್ಣಿನಿಂದ ವರಪುತ್ರ ಗಣೇಶನನ್ನು ಸೃಷ್ಟಿಸಿದ ಪೌರಾಣಿಕ ಕಥೆಯನ್ನೇ ಇಲ್ಲಿ ಮರುಸೃಷ್ಟಿ ಮಾಡಲಾಗಿದೆ. ಕುಷ್ಟಗಿಯ ಜನರ ಪಾಲಿಗೆ ಗ್ರಾಮ ದೇವತೆ ಶ್ರೀ ದ್ಯಾಮಾಂಬಿಕಾ ದೇವಿಯೇ ಸಾಕ್ಷಾತ್ ಪಾರ್ವತಿ. ಆ ದ್ಯಾಮವ್ವನೇ ತನ್ನ ಮಗನಾದ ಗಣೇಶನನ್ನು ಭೂಮಿಗೆ ಕಳುಹಿಸಿದ್ದಾಳೆ ಎಂಬ ಭಾವದಲ್ಲಿ ಈ ಅಲಂಕಾರ ಮೂಡಿಬಂದಿದೆ. ಹಿನ್ನೆಲೆಯಲ್ಲಿ ಕೈಲಾಸವಾಸಿ ಶಿವ, ತಾಯಿ ಪಾರ್ವತಿ (ದ್ಯಾಮವ್ವ) ಮತ್ತು ಮುಂದೆ ಪುಟ್ಟ ಬಾಲ ಗಣೇಶ ಕುಳಿತಿರುವ ದೃಶ್ಯವು ನೋಡುಗರಿಗೆ ದೈವತ್ವದ ಅನುಭೂತಿಯನ್ನು ನೀಡುತ್ತಿದೆ. ಕೇವಲ ಮಣ್ಣಿನ ಮೂರ್ತಿಯಲ್ಲ, ಇದೊಂದು ಜೀವಂತ ಪುರಾಣ ದರ್ಶನವೇ ಸರಿ. ಈ ಅರ್ಥಪೂರ್ಣ ಅಲಂಕಾರವು ಮಾಜಿ ಪುರಸಭೆ ಅಧ್ಯಕ್ಷ *ಮಹಾಂತೇಶ್ ಕಲಬಾವಿ* ಸೇರಿದಂತೆ ತೆಗ್ಗಿನ ಓಣಿಯ ಯುವ ಬಳಗದ ಅವಿರತ ಪರಿಶ್ರಮದ ಫಲವಾಗಿದೆ. ವಿಶೇಷವೆಂದರೆ ಹಿಂದೂ-ಮುಸ್ಲಿಂ ಯುವಕರು ಜಾತಿ ಬೇಧ ಮರೆತು ಒಂದಾಗಿ ಈ ಗಣೇಶನನ್ನು ಪ್ರತಿಷ್ಠಾಪಿಸಿರುವುದು ನಿಜವಾದ ಸರ್ವ ಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ. ತೆಗ್ಗಿನ ಓಣಿಯ ಯುವಕರ ಈ ಸೃಜನಶೀಲತೆ, ಧಾರ್ಮಿಕ ಚಿಂತನೆ ಮತ್ತು ತಂತ್ರಜ್ಞಾನದ ಬಳಕೆಯು ಇತರ ಮಂಡಳಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.2
- ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ4