logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸಂಕಷ್ಟದಲ್ಲಿರುವ ರೈತ ಸಮೂಹದ ನೆರವಿಗೆ ಧಾವಿಸಬೇಕಿರುವುದು ಧರ್ಮ: ಮಾನೆ ಶ್ರೀನಿವಾಸ ಮಳೆಯ ಅಭಾವದಿಂದ ರೈತ ಸಂಕಷ್ಟದಲ್ಲಿದ್ದಾನೆ. ಹಸಿರು ಕಂಡರೂ ಬೆಳೆ ಸಿಗದಂಥ ಚಿಂತಾಜನಕ ಸ್ಥಿತಿ ಇದೆ. ಶೀಘ್ರದಲ್ಲಿ ಬರಗಾಲ ಘೋಷಣೆಯಾಗಲಿದೆ ಎಂದು ಶಾಸಕರು, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾದ ಮಾನೆ ಶ್ರೀನಿವಾಸ ಹೇಳಿದರು. ಇಂದು ಹರವಿ ಗ್ರಾಮದಲ್ಲಿ 65 ಲಕ್ಷ ವೆಚ್ಚದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಇನ್ನೂ 6 ಕಡೆಗಳಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ನಿರ್ಮಿಸಲಾಗುತ್ತಿದೆ ಎಂದ ಅವರು ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ನಾನಾ ಕಾರಣಗಳಿಂದ ಪರಿಹಾರ ನೀಡುವಂಥ ಸ್ಥಿತಿ ಬಂದರೆ ಆರ್ಥಿಕ ಸಂಕಷ್ಟ ನೆಲೆಯೂರಲಿದೆ. ಹಾಗಾಗಿ ಸಿ.ಆರ್.ಎಫ್. ಅಡಿ ರಸ್ತೆಗಳಿಗೆ ಹೆಚ್ಚು ಅನುದಾನ ದೊರಕಿಸುವಂತೆ ಸಂಸದರಲ್ಲಿ ಮನವಿ ಮಾಡಿದರು. ಸಂಸದರಾದ ಬಸವರಾಜ ಬೊಮ್ಮಾಯಿ ಇದ್ದರು...

22 hrs ago
user_ಸಂತೋಷ S H
ಸಂತೋಷ S H
Local News Reporter ಹಾನಗಲ್, ಹಾವೇರಿ, ಕರ್ನಾಟಕ•
22 hrs ago
bad85fc7-d48b-426b-a07e-d36a1fa78e64
235a2816-3efd-40ae-98f7-1e63b534ef23

ಸಂಕಷ್ಟದಲ್ಲಿರುವ ರೈತ ಸಮೂಹದ ನೆರವಿಗೆ ಧಾವಿಸಬೇಕಿರುವುದು ಧರ್ಮ: ಮಾನೆ ಶ್ರೀನಿವಾಸ ಮಳೆಯ ಅಭಾವದಿಂದ ರೈತ ಸಂಕಷ್ಟದಲ್ಲಿದ್ದಾನೆ. ಹಸಿರು ಕಂಡರೂ ಬೆಳೆ ಸಿಗದಂಥ ಚಿಂತಾಜನಕ ಸ್ಥಿತಿ ಇದೆ. ಶೀಘ್ರದಲ್ಲಿ ಬರಗಾಲ ಘೋಷಣೆಯಾಗಲಿದೆ ಎಂದು ಶಾಸಕರು, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾದ ಮಾನೆ ಶ್ರೀನಿವಾಸ ಹೇಳಿದರು. ಇಂದು ಹರವಿ ಗ್ರಾಮದಲ್ಲಿ 65 ಲಕ್ಷ ವೆಚ್ಚದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಇನ್ನೂ 6 ಕಡೆಗಳಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ನಿರ್ಮಿಸಲಾಗುತ್ತಿದೆ ಎಂದ ಅವರು ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ನಾನಾ ಕಾರಣಗಳಿಂದ ಪರಿಹಾರ ನೀಡುವಂಥ ಸ್ಥಿತಿ ಬಂದರೆ ಆರ್ಥಿಕ ಸಂಕಷ್ಟ ನೆಲೆಯೂರಲಿದೆ. ಹಾಗಾಗಿ ಸಿ.ಆರ್.ಎಫ್. ಅಡಿ ರಸ್ತೆಗಳಿಗೆ ಹೆಚ್ಚು ಅನುದಾನ ದೊರಕಿಸುವಂತೆ ಸಂಸದರಲ್ಲಿ ಮನವಿ ಮಾಡಿದರು. ಸಂಸದರಾದ ಬಸವರಾಜ ಬೊಮ್ಮಾಯಿ ಇದ್ದರು...

More news from ಕರ್ನಾಟಕ and nearby areas
  • ಕುಂದಗೋಳ ತಾಲೂಕು ಶಿರೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ತಹಶೀಲ್ದಾರ್ ವಾಹನ ತಡೆದು ಗ್ರಾಮಸ್ಥರ ಆಕ್ರೋಶ! ಕುಂದಗೋಳ ತಾಲೂಕು ಶಿರೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ತಹಶೀಲ್ದಾರ್ ವಾಹನ ತಡೆದು ಗ್ರಾಮಸ್ಥರ ಆಕ್ರೋಶ! ಹಲವು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಶಿರೂರು ಗ್ರಾಮದ ನವಗ್ರಾಮದ ನಿವಾಸಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಶಿರೂರು ಮಾರ್ಗವಾಗಿ ತೆರಳುತ್ತಿದ್ದ ಕುಂದಗೋಳ ತಹಶೀಲ್ದಾರ್ ರಾಜು ಮಾವರ್ಕರ್ ಅವರ ವಾಹನವನ್ನು ಮಹಿಳೆಯರು ಸೇರಿದಂತೆ ಗ್ರಾಮಸ್ಥರು ತಡೆದು, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು. ಸ್ಥಳೀಯ ಆಡಳಿತ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು , ಅಧಿಕಾರಿಗಳನ್ನು ಪ್ರಶ್ನಿಸಿದರೆ ಉಡಾಫೆಯ ಉತ್ತರ ನೀಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಅಹವಾಲು ಆಲಿಸಿದ ತಹಶೀಲ್ದಾರ್, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದರು. ಬಳಿಕ ಸಮಸ್ಯಾತ್ಮಕ ಶೀಘ್ರ ಬಗೆಹರಿಯದಿದ್ದರೆ ಜಿಲ್ಲಾ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
    1
    ಕುಂದಗೋಳ  ತಾಲೂಕು ಶಿರೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ
 ತಹಶೀಲ್ದಾರ್ ವಾಹನ ತಡೆದು ಗ್ರಾಮಸ್ಥರ ಆಕ್ರೋಶ!
ಕುಂದಗೋಳ  ತಾಲೂಕು ಶಿರೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ
ತಹಶೀಲ್ದಾರ್ ವಾಹನ ತಡೆದು ಗ್ರಾಮಸ್ಥರ ಆಕ್ರೋಶ!
ಹಲವು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಶಿರೂರು ಗ್ರಾಮದ ನವಗ್ರಾಮದ ನಿವಾಸಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಶಿರೂರು ಮಾರ್ಗವಾಗಿ ತೆರಳುತ್ತಿದ್ದ ಕುಂದಗೋಳ ತಹಶೀಲ್ದಾರ್ ರಾಜು ಮಾವರ್ಕರ್ ಅವರ ವಾಹನವನ್ನು
ಮಹಿಳೆಯರು ಸೇರಿದಂತೆ ಗ್ರಾಮಸ್ಥರು ತಡೆದು, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.
ಸ್ಥಳೀಯ ಆಡಳಿತ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು
, ಅಧಿಕಾರಿಗಳನ್ನು ಪ್ರಶ್ನಿಸಿದರೆ ಉಡಾಫೆಯ ಉತ್ತರ ನೀಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಅಹವಾಲು ಆಲಿಸಿದ
ತಹಶೀಲ್ದಾರ್, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ 
ನಡೆಸಿದರು. ಬಳಿಕ ಸಮಸ್ಯಾತ್ಮಕ 
ಶೀಘ್ರ ಬಗೆಹರಿಯದಿದ್ದರೆ ಜಿಲ್ಲಾ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ
ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
    user_NEWS 83 KARNATAKA
    NEWS 83 KARNATAKA
    ಲಕ್ಷ್ಮೇಶ್ವರ, ಗದಗ, ಕರ್ನಾಟಕ•
    20 hrs ago
  • ಶಿವಮೊಗ್ಗ-ಪ್ರಧಾನಮಂತ್ರಿ ಮೋದಿಜಿಯವರ ಜನ್ಮದಿನ: ಬಿಜೆಪಿ ವತಿಯಿಂದ ಭಜನೆ ಕಾರ್ಯಕ್ರಮ ಶಿವಮೊಗ್ಗ: ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಜನ್ಮದಿನದ ಪ್ರಯುಕ್ತ ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲಗಳ ವತಿಯಿಂದ ಬಿಜೆಪಿ ಕಾರ್ಯಾಲಯದಲ್ಲಿ ‘ಆಶೀರ್ವಾದದ ದೀಪ’ ಬೆಳಗಿಸುವ ಹಾಗೂ ದೀಪಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಗರ ಮಂಡಲ ಅಧ್ಯಕ್ಷ ಧರ್ಮಪ್ರಸಾದ್ ಜಿ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಹೆಚ್. ತೀರ್ಥಯ್ಯ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರಿಗೆ ದೀರ್ಘಾ ಯುಷ್ಯ, ಉತ್ತಮ ಆರೋಗ್ಯ ಹಾಗೂ ದೇಶ ಸೇವೆಗೆ ಇನ್ನಷ್ಟು ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಲಾಯಿತು. ಕಾರ್ಯಕ್ರಮಕ್ಕೆ ವಿವಿಧ ಭಜನಾ ತಂಡಗಳ ಸದಸ್ಯರು ಭಜನೆ ಹಾಗೂ ಭಕ್ತಿಗೀತೆಗಳನ್ನು ಹಾಡುವ ಮೂಲಕ ವಿಶೇಷ ಮೆರುಗು ನೀಡಿದರು.
    1
    ಶಿವಮೊಗ್ಗ-ಪ್ರಧಾನಮಂತ್ರಿ ಮೋದಿಜಿಯವರ ಜನ್ಮದಿನ: ಬಿಜೆಪಿ ವತಿಯಿಂದ ಭಜನೆ ಕಾರ್ಯಕ್ರಮ 
ಶಿವಮೊಗ್ಗ: ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಜನ್ಮದಿನದ ಪ್ರಯುಕ್ತ ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲಗಳ ವತಿಯಿಂದ ಬಿಜೆಪಿ ಕಾರ್ಯಾಲಯದಲ್ಲಿ ‘ಆಶೀರ್ವಾದದ ದೀಪ’ ಬೆಳಗಿಸುವ ಹಾಗೂ ದೀಪಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಗರ ಮಂಡಲ ಅಧ್ಯಕ್ಷ ಧರ್ಮಪ್ರಸಾದ್ ಜಿ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ  ಕೆ.ಹೆಚ್. ತೀರ್ಥಯ್ಯ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರಿಗೆ ದೀರ್ಘಾ ಯುಷ್ಯ, ಉತ್ತಮ ಆರೋಗ್ಯ ಹಾಗೂ ದೇಶ ಸೇವೆಗೆ ಇನ್ನಷ್ಟು ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಲಾಯಿತು.
ಕಾರ್ಯಕ್ರಮಕ್ಕೆ ವಿವಿಧ ಭಜನಾ ತಂಡಗಳ ಸದಸ್ಯರು ಭಜನೆ ಹಾಗೂ ಭಕ್ತಿಗೀತೆಗಳನ್ನು ಹಾಡುವ ಮೂಲಕ ವಿಶೇಷ ಮೆರುಗು ನೀಡಿದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    16 min ago
  • ನರೇಂದ್ರ ಮೋದಿಜೀರವರ 25 ವರ್ಷಗಳ ಸೇವೆ, ಸಮರ್ಪಣೆ, ಅವಿರತ ಪರಿಶ್ರಮ, ಬದ್ಧತೆ, ಇಂದು ಸಂಕಲ್ಪ ದಿನ ಸರಿಸಾಟಿಯಿಲ್ಲದ ವಿಶ್ವನಾಯಕ, ಭಾರತದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀರವರ ಒಂದಿನ ಅಂದು ಸಂಜೆ ಆರು ಗಂಟೆಯಿಂದ ಏಳು ಗಂಟೆಯವರೆಗೆ -ದೇಶದ ಎಲ್ಲಾಕಡೆ, ಎಲ್ಲಾ ಮನೆಗಳಲ್ಲೂ ಒಂದು ಅಕ್ಷರೆಯ ಗೌರವದ ದೀಪ ಬೆಳಗಲಿದೆ. ಅದು ನೆಚ್ಚಿನ ನಾಯಕನಿಗೆ ಅಭಿಮಾನದ, ಅತೀರ್ವಾದದ ದೀಪ! ಇದು ಏನೋ ಒಂದು ಆಚರಣೆಯಲ್ಲ, ಇದು ಒಬ್ಬ ಪ್ರಧಾನ ಸೇವಕನ 25 ವರ್ಷಗಳ ಸೇವೆ, ಸಮರ್ಪಣೆ, ಅವಿರತ ಪರಿಶ್ರಮ, ಬದ್ಧತೆ, ಸಾಧನೆ ಮತ್ತು ತ್ಯಾಗಕ್ಕೆ 140ಕೋಟಿ ದೇಶವಾಸಿಗಳ ಸಾಮೂಹಿಕ ಅಭಿನಂದನೆ ಭಾರತೀಯ ಜನತಾ ಪಾರ್ಟಿಯ ಸೇವಾ ಸಂಕಲ್ಪ ಅಭಿಯಾನ', ಇದನ್ನು ಜನ ಚಳುವಳಿಯಾಗಿ ರೂಪಿಸಿದೆ. ಆಶೀರ್ವಾದ್ ಕಾ ದಿಯಾ' (ಆಶೀರ್ವಾದದ ದೀಪ) ಎಂಬ ಕಾರ್ಯಕ್ರಮದಡಿ ಪ್ರತಿಮನೆಯಲ್ಲೂ ಸಂಜೆ ದೇವರದೀವದ ಜೊತೆಗೆ, ನೆಚ್ಚಿನ ನಾಯಕನ ಹೆಸರಿನಲ್ಲಿ ಅವರಿಗೆ ಒಳತನ್ನು ಬಯಸಿ ಒಂದು ದೀಪ ಪತ್ರ ನರೇಂದ್ರ ಮೋದಿಜೀರವರಿಗೆ ನಮ್ಮ ಹೃದಯ ಪೂರ್ವಕ ಹಾರೈಕೆಯನ್ನು ಸಲ್ಲಿಸೋಣ. ಗುಜರಾತ್‌ನ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಆ ಯುವನಾಯಕ ಬಹಳ ಜನರಿಗೆ ಪರಿಚಿತರೂ ಅಲ್ಲ! ಅಂದಿನಿಂದ 2014ರ ಮೇ 26 ರವರೆಗೆ ಸತತವಾಗಿ ಗುಜರಾತ್ ಮುಖ್ಯಮಂತ್ರಿಗಳಾಗಿ, ಜನಮೆಚ್ಚುಗೆಯ 'ಅಭಿವೃದ್ಧಿ ಮಾದರಿ' ಯೊಂದಿಗೆ, ಸುರಾಸನ ನೀಡಿ, ಈಗ ಭಾರತದ ಪ್ರಧಾನ ಸೇವಕರಾಗಿ ಸಚಿತ ಮೂರನೇ ಅವಧಿಗೆ ಜನಾದೇಶ ಪಡೆದು, ಇಡೀ ವಿಶ್ವವೇ ಮೆಚ್ಚುವಂತೆ ದೇಶವನ್ನು ಮುನ್ನಡೆಸುತ್ತಿದ್ದಾರೆ. ವತ್ರಗರದ ರೈಲ್ವೆ ನಿಲ್ದಾಣದಲ್ಲಿ ತಂದರೊಂದಿಗೆ ಚಣಾ ಮಾರಿದ ಬಾಲಕ, ಇ೦ದು ವಿಶ್ವದ ಅತ್ಯಂತ ಪ್ರಭಾವಿನಾಯಕರ ಸಾಲಿನಲ್ಲಿ ನಿಂತಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವದ ಶಕ್ತಿ ಮಾತ್ರವಲ್ಲ, ಒಬ್ಬ ನಾಯಕನ ಸಾಧನಾಗಾಥೆ. ಇದುಸಾಮಾನ್ಯ ಕಾರ್ಯಕರ್ತನೊಬ್ಬನಸೇವಾಮನೋಭಾವದಿಂದ ರಾಷ್ಟ್ರದ ಸೇವೆಯವರೆಗೆ, ಜನಸೇವೆಯಿಂದ ದೇಶಸೇವೆಯವರೆಗೆ ಸಾಗಿದ ಅದ್ಭುತ ಯಶೋಗಾಥೆ ಎಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.
    1
    ನರೇಂದ್ರ ಮೋದಿಜೀರವರ 25 ವರ್ಷಗಳ ಸೇವೆ, ಸಮರ್ಪಣೆ, ಅವಿರತ ಪರಿಶ್ರಮ, ಬದ್ಧತೆ, ಇಂದು ಸಂಕಲ್ಪ ದಿನ 
ಸರಿಸಾಟಿಯಿಲ್ಲದ ವಿಶ್ವನಾಯಕ, ಭಾರತದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀರವರ ಒಂದಿನ ಅಂದು ಸಂಜೆ ಆರು ಗಂಟೆಯಿಂದ ಏಳು ಗಂಟೆಯವರೆಗೆ -ದೇಶದ ಎಲ್ಲಾಕಡೆ, ಎಲ್ಲಾ ಮನೆಗಳಲ್ಲೂ ಒಂದು ಅಕ್ಷರೆಯ ಗೌರವದ ದೀಪ ಬೆಳಗಲಿದೆ. ಅದು ನೆಚ್ಚಿನ ನಾಯಕನಿಗೆ ಅಭಿಮಾನದ, ಅತೀರ್ವಾದದ ದೀಪ! ಇದು ಏನೋ ಒಂದು ಆಚರಣೆಯಲ್ಲ, ಇದು ಒಬ್ಬ ಪ್ರಧಾನ ಸೇವಕನ 25 ವರ್ಷಗಳ ಸೇವೆ, ಸಮರ್ಪಣೆ, ಅವಿರತ ಪರಿಶ್ರಮ, ಬದ್ಧತೆ, ಸಾಧನೆ ಮತ್ತು ತ್ಯಾಗಕ್ಕೆ 140ಕೋಟಿ ದೇಶವಾಸಿಗಳ ಸಾಮೂಹಿಕ ಅಭಿನಂದನೆ ಭಾರತೀಯ ಜನತಾ ಪಾರ್ಟಿಯ ಸೇವಾ ಸಂಕಲ್ಪ ಅಭಿಯಾನ', ಇದನ್ನು ಜನ ಚಳುವಳಿಯಾಗಿ ರೂಪಿಸಿದೆ. ಆಶೀರ್ವಾದ್ ಕಾ ದಿಯಾ' (ಆಶೀರ್ವಾದದ ದೀಪ) ಎಂಬ ಕಾರ್ಯಕ್ರಮದಡಿ ಪ್ರತಿಮನೆಯಲ್ಲೂ ಸಂಜೆ ದೇವರದೀವದ ಜೊತೆಗೆ, ನೆಚ್ಚಿನ ನಾಯಕನ ಹೆಸರಿನಲ್ಲಿ ಅವರಿಗೆ ಒಳತನ್ನು ಬಯಸಿ ಒಂದು ದೀಪ ಪತ್ರ  ನರೇಂದ್ರ ಮೋದಿಜೀರವರಿಗೆ ನಮ್ಮ ಹೃದಯ ಪೂರ್ವಕ ಹಾರೈಕೆಯನ್ನು ಸಲ್ಲಿಸೋಣ.
ಗುಜರಾತ್‌ನ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಆ ಯುವನಾಯಕ ಬಹಳ ಜನರಿಗೆ ಪರಿಚಿತರೂ ಅಲ್ಲ! ಅಂದಿನಿಂದ 2014ರ ಮೇ 26 ರವರೆಗೆ ಸತತವಾಗಿ ಗುಜರಾತ್ ಮುಖ್ಯಮಂತ್ರಿಗಳಾಗಿ, ಜನಮೆಚ್ಚುಗೆಯ 'ಅಭಿವೃದ್ಧಿ ಮಾದರಿ' ಯೊಂದಿಗೆ, ಸುರಾಸನ ನೀಡಿ, ಈಗ ಭಾರತದ ಪ್ರಧಾನ ಸೇವಕರಾಗಿ ಸಚಿತ ಮೂರನೇ ಅವಧಿಗೆ ಜನಾದೇಶ ಪಡೆದು, ಇಡೀ ವಿಶ್ವವೇ ಮೆಚ್ಚುವಂತೆ ದೇಶವನ್ನು ಮುನ್ನಡೆಸುತ್ತಿದ್ದಾರೆ. ವತ್ರಗರದ ರೈಲ್ವೆ ನಿಲ್ದಾಣದಲ್ಲಿ ತಂದರೊಂದಿಗೆ ಚಣಾ ಮಾರಿದ ಬಾಲಕ, ಇ೦ದು ವಿಶ್ವದ ಅತ್ಯಂತ ಪ್ರಭಾವಿನಾಯಕರ ಸಾಲಿನಲ್ಲಿ ನಿಂತಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವದ ಶಕ್ತಿ ಮಾತ್ರವಲ್ಲ, ಒಬ್ಬ ನಾಯಕನ ಸಾಧನಾಗಾಥೆ. ಇದುಸಾಮಾನ್ಯ ಕಾರ್ಯಕರ್ತನೊಬ್ಬನಸೇವಾಮನೋಭಾವದಿಂದ ರಾಷ್ಟ್ರದ ಸೇವೆಯವರೆಗೆ, ಜನಸೇವೆಯಿಂದ ದೇಶಸೇವೆಯವರೆಗೆ ಸಾಗಿದ ಅದ್ಭುತ ಯಶೋಗಾಥೆ ಎಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.
    user_SANDEEP U. L
    SANDEEP U. L
    Courier service ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    11 hrs ago
  • 🚨 ಬೆಂಗಳೂರಿನಲ್ಲಿ ಸಿನಿಮೀಯ ಕಿಡ್ನ್ಯಾಪ್ ಯತ್ನ: ಪ್ರೀತಿಸಿ ಮದುವೆಯಾದ ಮಗಳಿಗೆ ಹೆತ್ತವರೇ ವಿಲನ್? ರಸ್ತೆಯಲ್ಲಿ ಸರಣಿ ಅಪಘಾತ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿನಿಮೀಯ ಮಾದರಿಯಲ್ಲಿ ಯುವತಿಯೊಬ್ಬಳನ್ನು ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ. ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯುವ ವೇಳೆ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಮಾಡಲಾಗಿದೆ. ಘಟನೆ ವೇಳೆ ಸಾರ್ವಜನಿಕರು ಸಿನಿಮೀಯ ರೀತಿಯಲ್ಲಿ ಕಾರನ್ನು ಚೇಸ್ ಮಾಡಿ ಕೊನೆಗೆ ಅಡ್ಡಗಟ್ಟಿ ಯುವತಿಯನ್ನು ರಕ್ಷಿಸಿದ್ದಾರೆ. ಪ್ರಕರಣದ ಹಿನ್ನೆಲೆ ಏನು? ಪೊಲೀಸ್ ಮೂಲಗಳ ಪ್ರಕಾರ, ರಾಜಸ್ಥಾನ ಮೂಲದ ಯುವತಿಯೊಬ್ಬಳು ಯುವಕನನ್ನು ಪ್ರೀತಿಸಿ ಕುಟುಂಬದ ವಿರೋಧದ ನಡುವೆಯೂ ಮದುವೆಯಾಗಿದ್ದಳು. ರಾಜಸ್ಥಾನದಲ್ಲಿ ಅಪಾಯವಿದೆ ಎಂಬ ಕಾರಣಕ್ಕೆ ನವದಂಪತಿ ಬೆಂಗಳೂರಿಗೆ ಬಂದು ಅಗ್ರಹಾರ ದಾಸರಹಳ್ಳಿಯಲ್ಲಿ ಕಳೆದ 15 ದಿನಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಮಗಳು ಬೆಂಗಳೂರಿನಲ್ಲಿ ಇರುವ ವಿಚಾರ ತಿಳಿದ ಬಳಿಕ ಆಕೆಯ ಪೋಷಕರು ಎನ್ನಲಾದವರು ರಾತ್ರಿ ಸುಮಾರು 8 ಗಂಟೆ ವೇಳೆಗೆ Hyundai Venue ಕಾರಿನಲ್ಲಿ ಅಗ್ರಹಾರ ದಾಸರಹಳ್ಳಿಗೆ ಬಂದಿದ್ದಾರೆ. ಮನೆಯೊಳಗೆ ನುಗ್ಗಿದ ಮೂವರು ಯುವಕರು ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ತೆರಳಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಯುವತಿ ಪ್ರಾಣಭಯದಿಂದ ಜೋರಾಗಿ ಕಿರುಚಿಕೊಂಡಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಕಾರನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಕಾರು ಚಾಲಕ ವಾಹನ ನಿಲ್ಲಿಸದೇ ವೇಗವಾಗಿ ಮುನ್ನುಗ್ಗಿದ್ದು, ರಸ್ತೆಯಲ್ಲಿ ಅಡ್ಡಬಂದ ಬೈಕ್‌ಗಳು ಹಾಗೂ ಕಾರುಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ⚠️ ಮಗು ಸೇರಿದಂತೆ ಸಾರ್ವಜನಿಕರಿಗೆ ಗಾಯ ಪರಾರಿಯಾಗುವ ಧಾವಂತದಲ್ಲಿ ಕಾರು ಸಾರ್ವಜನಿಕರಿಗೂ ಡಿಕ್ಕಿ ಹೊಡೆದಿದ್ದು, ಒಂದು ಮಗುವಿನ ಕಾಲಿನ ಮೇಲೂ ಕಾರು ಹರಿದಿದೆ ಎನ್ನಲಾಗಿದೆ. ಘಟನೆಯಲ್ಲಿ ಹಲವು ಸಾರ್ವಜನಿಕರು ಗಾಯಗೊಂಡಿದ್ದಾರೆ. 🏍️ 2–3 ಕಿ.ಮೀ ಸಿನಿಮೀಯ ಚೇಸ್! ಕಾರು ನಿಲ್ಲಿಸದೇ ಸಾಗುತ್ತಿದ್ದಂತೆ ಸಾರ್ವಜನಿಕರು ಬೈಕ್‌ಗಳಲ್ಲಿ ಕಾರನ್ನು ಬೆನ್ನಟ್ಟಿದ್ದಾರೆ. ಅಗ್ರಹಾರ ದಾಸರಹಳ್ಳಿಯಿಂದ ಗೋವಿಂದರಾಜನಗರ, ವಿಜಯನಗರ ಮಾರ್ಗವಾಗಿ ಹೊಸಹಳ್ಳಿಯವರೆಗೆ ಸುಮಾರು 2–3 ಕಿ.ಮೀ. ದೂರ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ್ದಾರೆ. ಕೊನೆಗೆ ಹೊಸಹಳ್ಳಿ ಬಳಿ ಟ್ರಾಫಿಕ್‌ನಲ್ಲಿ ಕಾರು ಸಿಲುಕಿಕೊಂಡಿದ್ದು, ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿ ಯುವತಿಯನ್ನು ರಕ್ಷಿಸಿದ್ದಾರೆ. ಬಳಿಕ ಅಪಹರಣಕ್ಕೆ ಯತ್ನಿಸಿದ ಮೂವರು ಆರೋಪಿಗಳಿಗೆ ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಮಾಗಡಿ ರಸ್ತೆ ಹಾಗೂ ವಿಜಯನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅಪಹರಣಕ್ಕೆ ಬಳಸಿದ್ದ ಕಾರನ್ನು ಕೂಡ ಪೊಲೀಸರು ಸೀಜ್ ಮಾಡಿದ್ದಾರೆ. ಯುವತಿ ಹಾಗೂ ವಶದಲ್ಲಿರುವ ಆರೋಪಿಗಳನ್ನು ವಿಜಯನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಗಾಯಗೊಂಡ ಸಾರ್ವಜನಿಕರು ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 📌 ಯುವತಿಯನ್ನು ಅಪಹರಿಸಲು ಯತ್ನಿಸಿದವರು ನಿಜವಾಗಿಯೂ ಆಕೆಯ ಹೆತ್ತವರೇ? ಪ್ರಕರಣದ ತನಿಖೆಯಿಂದ ಸತ್ಯ ಹೊರಬರಬೇಕಿದೆ.
    1
    🚨 ಬೆಂಗಳೂರಿನಲ್ಲಿ ಸಿನಿಮೀಯ ಕಿಡ್ನ್ಯಾಪ್ ಯತ್ನ: ಪ್ರೀತಿಸಿ ಮದುವೆಯಾದ ಮಗಳಿಗೆ ಹೆತ್ತವರೇ ವಿಲನ್? ರಸ್ತೆಯಲ್ಲಿ ಸರಣಿ ಅಪಘಾತ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿನಿಮೀಯ ಮಾದರಿಯಲ್ಲಿ ಯುವತಿಯೊಬ್ಬಳನ್ನು ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ. ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯುವ ವೇಳೆ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಮಾಡಲಾಗಿದೆ. ಘಟನೆ ವೇಳೆ ಸಾರ್ವಜನಿಕರು ಸಿನಿಮೀಯ ರೀತಿಯಲ್ಲಿ ಕಾರನ್ನು ಚೇಸ್ ಮಾಡಿ ಕೊನೆಗೆ ಅಡ್ಡಗಟ್ಟಿ ಯುವತಿಯನ್ನು ರಕ್ಷಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
ಪೊಲೀಸ್ ಮೂಲಗಳ ಪ್ರಕಾರ, ರಾಜಸ್ಥಾನ ಮೂಲದ ಯುವತಿಯೊಬ್ಬಳು ಯುವಕನನ್ನು ಪ್ರೀತಿಸಿ ಕುಟುಂಬದ ವಿರೋಧದ ನಡುವೆಯೂ ಮದುವೆಯಾಗಿದ್ದಳು. ರಾಜಸ್ಥಾನದಲ್ಲಿ ಅಪಾಯವಿದೆ ಎಂಬ ಕಾರಣಕ್ಕೆ ನವದಂಪತಿ ಬೆಂಗಳೂರಿಗೆ ಬಂದು ಅಗ್ರಹಾರ ದಾಸರಹಳ್ಳಿಯಲ್ಲಿ ಕಳೆದ 15 ದಿನಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಮಗಳು ಬೆಂಗಳೂರಿನಲ್ಲಿ ಇರುವ ವಿಚಾರ ತಿಳಿದ ಬಳಿಕ ಆಕೆಯ ಪೋಷಕರು ಎನ್ನಲಾದವರು ರಾತ್ರಿ ಸುಮಾರು 8 ಗಂಟೆ ವೇಳೆಗೆ Hyundai Venue ಕಾರಿನಲ್ಲಿ ಅಗ್ರಹಾರ ದಾಸರಹಳ್ಳಿಗೆ ಬಂದಿದ್ದಾರೆ. ಮನೆಯೊಳಗೆ ನುಗ್ಗಿದ ಮೂವರು ಯುವಕರು ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ತೆರಳಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಯುವತಿ ಪ್ರಾಣಭಯದಿಂದ ಜೋರಾಗಿ ಕಿರುಚಿಕೊಂಡಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಕಾರನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಕಾರು ಚಾಲಕ ವಾಹನ ನಿಲ್ಲಿಸದೇ ವೇಗವಾಗಿ ಮುನ್ನುಗ್ಗಿದ್ದು, ರಸ್ತೆಯಲ್ಲಿ ಅಡ್ಡಬಂದ ಬೈಕ್‌ಗಳು ಹಾಗೂ ಕಾರುಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ.
⚠️ ಮಗು ಸೇರಿದಂತೆ ಸಾರ್ವಜನಿಕರಿಗೆ ಗಾಯ
ಪರಾರಿಯಾಗುವ ಧಾವಂತದಲ್ಲಿ ಕಾರು ಸಾರ್ವಜನಿಕರಿಗೂ ಡಿಕ್ಕಿ ಹೊಡೆದಿದ್ದು, ಒಂದು ಮಗುವಿನ ಕಾಲಿನ ಮೇಲೂ ಕಾರು ಹರಿದಿದೆ ಎನ್ನಲಾಗಿದೆ. ಘಟನೆಯಲ್ಲಿ ಹಲವು ಸಾರ್ವಜನಿಕರು ಗಾಯಗೊಂಡಿದ್ದಾರೆ.
🏍️ 2–3 ಕಿ.ಮೀ ಸಿನಿಮೀಯ ಚೇಸ್!
ಕಾರು ನಿಲ್ಲಿಸದೇ ಸಾಗುತ್ತಿದ್ದಂತೆ ಸಾರ್ವಜನಿಕರು ಬೈಕ್‌ಗಳಲ್ಲಿ ಕಾರನ್ನು ಬೆನ್ನಟ್ಟಿದ್ದಾರೆ. ಅಗ್ರಹಾರ ದಾಸರಹಳ್ಳಿಯಿಂದ ಗೋವಿಂದರಾಜನಗರ, ವಿಜಯನಗರ ಮಾರ್ಗವಾಗಿ ಹೊಸಹಳ್ಳಿಯವರೆಗೆ ಸುಮಾರು 2–3 ಕಿ.ಮೀ. ದೂರ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ್ದಾರೆ.
ಕೊನೆಗೆ ಹೊಸಹಳ್ಳಿ ಬಳಿ ಟ್ರಾಫಿಕ್‌ನಲ್ಲಿ ಕಾರು ಸಿಲುಕಿಕೊಂಡಿದ್ದು, ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿ ಯುವತಿಯನ್ನು ರಕ್ಷಿಸಿದ್ದಾರೆ. ಬಳಿಕ ಅಪಹರಣಕ್ಕೆ ಯತ್ನಿಸಿದ ಮೂವರು ಆರೋಪಿಗಳಿಗೆ ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಮಾಗಡಿ ರಸ್ತೆ ಹಾಗೂ ವಿಜಯನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅಪಹರಣಕ್ಕೆ ಬಳಸಿದ್ದ ಕಾರನ್ನು ಕೂಡ ಪೊಲೀಸರು ಸೀಜ್ ಮಾಡಿದ್ದಾರೆ.
ಯುವತಿ ಹಾಗೂ ವಶದಲ್ಲಿರುವ ಆರೋಪಿಗಳನ್ನು ವಿಜಯನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಗಾಯಗೊಂಡ ಸಾರ್ವಜನಿಕರು ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
📌 ಯುವತಿಯನ್ನು ಅಪಹರಿಸಲು ಯತ್ನಿಸಿದವರು ನಿಜವಾಗಿಯೂ ಆಕೆಯ ಹೆತ್ತವರೇ? ಪ್ರಕರಣದ ತನಿಖೆಯಿಂದ ಸತ್ಯ ಹೊರಬರಬೇಕಿದೆ.
    user_ನಿರ್ದಿಷ್ಟ ಸುದ್ಧಿ
    ನಿರ್ದಿಷ್ಟ ಸುದ್ಧಿ
    ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    17 hrs ago
  • ಶಿವಮೊಗ್ಗದ ಪ್ರತಿಭೆ ಪವನ್ ರಾಮ್: ರಂಗಭೂಮಿಯಿಂದ ಬೆಳ್ಳಿತೆರೆಗೆ.. ಆಟೋ ಚಾಲಕನ ಮಗನಿಂದ ಬೆಳ್ಳಿತೆರೆಗೆ… ಪವನ್ ರಾಮ್ ಅವರ ಕನಸಿನ ಪಯಣ | ಭಾಗ–1 | ಪೂರ್ಣ ವಿಡಿಯೋ ಯೂಟ್ಯೂಬ್‌ನಲ್ಲಿ ಲಭ್ಯ
    1
    ಶಿವಮೊಗ್ಗದ ಪ್ರತಿಭೆ ಪವನ್ ರಾಮ್: ರಂಗಭೂಮಿಯಿಂದ ಬೆಳ್ಳಿತೆರೆಗೆ..
ಆಟೋ ಚಾಲಕನ ಮಗನಿಂದ ಬೆಳ್ಳಿತೆರೆಗೆ… ಪವನ್ ರಾಮ್ ಅವರ ಕನಸಿನ ಪಯಣ | ಭಾಗ–1 | ಪೂರ್ಣ ವಿಡಿಯೋ ಯೂಟ್ಯೂಬ್‌ನಲ್ಲಿ ಲಭ್ಯ
    user_ಸಿಹಿಮೋಗ್ಗೆ ಸುದ್ಧಿ ಕನ್ನಡ
    ಸಿಹಿಮೋಗ್ಗೆ ಸುದ್ಧಿ ಕನ್ನಡ
    Video Creator ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    19 hrs ago
  • ಖಾನಾಪುರ್ ತಾಲೂಕಿನ ಕಕ್ಕೇರಿ ಗ್ರಾಮದ ಸಿದ್ಧಾರೂಢ ಗಜಾನನನೋತ್ಸವ ಮಂಡಲದವರು ಸಾರ್ವಜನಿಕ ಗಣೇಶನ ಮೂರ್ತಿಯನ್ನು ಮೆರವಣಿಗೆ ಮೂಲಕ ಪ್ರತಿಷ್ಠಾಪಿಸಲು ತೆಗೆದುಕೊಂಡು ಹೋಗುವ ದೃಶ್ಯ.
    1
    ಖಾನಾಪುರ್ ತಾಲೂಕಿನ ಕಕ್ಕೇರಿ ಗ್ರಾಮದ ಸಿದ್ಧಾರೂಢ ಗಜಾನನನೋತ್ಸವ ಮಂಡಲದವರು ಸಾರ್ವಜನಿಕ ಗಣೇಶನ ಮೂರ್ತಿಯನ್ನು ಮೆರವಣಿಗೆ ಮೂಲಕ ಪ್ರತಿಷ್ಠಾಪಿಸಲು ತೆಗೆದುಕೊಂಡು ಹೋಗುವ ದೃಶ್ಯ.
    user_Kishor  mithari Khanapur
    Kishor mithari Khanapur
    Press advisory ಖಾನಾಪುರ, ಬೆಳಗಾವಿ, ಕರ್ನಾಟಕ•
    22 hrs ago
  • ಎಸ್ ಆರ್ ಕೆ ನಗರದ ಸರಕಾರಿ ಬಾಲಕಿಯರ ವಸತಿ ನಿಲಯ ವಿದ್ಯಾರ್ಥಿನಿಯರಿಗೆ ಬಸ್ ನಿಲ್ಲಿಸುವಂತೆ ಪ್ರತಿಭಟನೆ. ರಾಣಿಬೆನ್ನೂರು: ನಗರದ SRK ನಗರದ ಬಳಿ ಬರುವ ಬಾಲಕಿಯರ ವಸತಿ ನಿಲಯ ವಿದ್ಯಾರ್ಥಿನಿಯರಿಗೆ ಬಸ್ ನಿಲ್ಲಿಸುವಂತೆ ಹಾಗೂ ಬಸ್ ಚಾಲಕ, ಕಂಡಕ್ಟರ್ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ, ಕೆಟ್ಟಪದಗಳನ್ನು ಮಾತಾಡುವ ಸಿಂಬಂದಿಗಳ ಮೇಲೆ ಕ್ರಮಕೈಗೊಳ್ಳವಂತೆ ಘಟಕದ ವ್ಯವಸ್ಥಕರ ಮೂಲಕ ಮನವಿ ಪತ್ರ ಸಲ್ಲಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು.
    1
    ಎಸ್ ಆರ್ ಕೆ ನಗರದ ಸರಕಾರಿ ಬಾಲಕಿಯರ ವಸತಿ ನಿಲಯ ವಿದ್ಯಾರ್ಥಿನಿಯರಿಗೆ ಬಸ್ ನಿಲ್ಲಿಸುವಂತೆ ಪ್ರತಿಭಟನೆ.
ರಾಣಿಬೆನ್ನೂರು: ನಗರದ SRK ನಗರದ ಬಳಿ ಬರುವ ಬಾಲಕಿಯರ ವಸತಿ ನಿಲಯ ವಿದ್ಯಾರ್ಥಿನಿಯರಿಗೆ ಬಸ್ ನಿಲ್ಲಿಸುವಂತೆ ಹಾಗೂ ಬಸ್  ಚಾಲಕ, ಕಂಡಕ್ಟರ್ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ,  ಕೆಟ್ಟಪದಗಳನ್ನು ಮಾತಾಡುವ ಸಿಂಬಂದಿಗಳ ಮೇಲೆ ಕ್ರಮಕೈಗೊಳ್ಳವಂತೆ  ಘಟಕದ ವ್ಯವಸ್ಥಕರ ಮೂಲಕ  ಮನವಿ ಪತ್ರ ಸಲ್ಲಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    6 hrs ago
  • ಭದ್ರಾ ಡ್ಯಾಂನಿಂದ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ಇಂದಿನಿಂದ 15 ದಿನಗಳ ಕಾಲ ನೀರು ಬಿಡುಗಡೆ: ರೈತರ ಹೋರಾಟದ ಬೆನ್ನಲ್ಲೇ ಸರ್ಕಾರದ ಮಹತ್ವದ ನಿರ್ಧಾರ ಶಿವಮೊಗ್ಗ, ಭದ್ರಾವತಿ, ದಾವಣಗೆರೆ, ಶಾಂತಿಸಾಗರ ಹಾಗೂ ಮಲೆಬೆನ್ನೂರು ಭಾಗಗಳಲ್ಲಿ ನೀರಿಗಾಗಿ ರೈತರು ಮತ್ತು ಸಾರ್ವಜನಿಕರು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು. ಈ ಕುರಿತು ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಜಲಸಂಪನ್ಮೂಲ ಸಚಿವರು ಮತ್ತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಮಧು ಬಂಗಾರಪ್ಪ ಹಾಗೂ ಉನ್ನತಾಧಿಕಾರಿಗಳು ಸುದೀರ್ಘ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ. ಆದೇಶದ ಪ್ರಮುಖ ಮುಖ್ಯಾಂಶಗಳು: ಸಮಯಾವಧಿ: ಸೆಪ್ಟೆಂಬರ್ 17ರ ಮಧ್ಯರಾತ್ರಿ 12.00 ಗಂಟೆಯಿಂದ ಅಕ್ಟೋಬರ್ 02, 2026ರವರೆಗೆ ಒಟ್ಟು 15 ದಿನಗಳ ಕಾಲ ನೀರು ಹರಿಸಲಾಗುತ್ತದೆ. ಉದ್ದೇಶ: ಜನರ ಹಾಗೂ ಜಾನುವಾರುಗಳ ಕುಡಿಯುವ ನೀರು, ಅಂತರ್ಜಲ ವೃದ್ಧಿ ಮತ್ತು ಕೆರೆಗಳನ್ನು ತುಂಬಿಸಲು ಆದ್ಯತೆ ನೀಡಲಾಗಿದೆ. ಬೆಳೆಗಳಿಗೆ ಬಳಸುವಂತಿಲ್ಲ: ಈ ನೀರನ್ನು ಕೇವಲ ಕುಡಿಯುವ ಹಾಗೂ ಅಗತ್ಯ ಬಳಕೆಗೆ ಮಾತ್ರ ಮೀಸಲಿಡಲಾಗಿದ್ದು, ಬೆಳೆಗಳಿಗೆ ಅಥವಾ ನೀರಾವರಿಗೆ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಕ್ರಮ ತಡೆ: ಅನಧಿಕೃತವಾಗಿ ನೀರು ಎತ್ತುವುದು, ಈಜಾಡುವುದು, ದನಕರಗಳನ್ನು ತೊಳೆಯುವುದು ಹಾಗೂ ಬಟ್ಟೆ ಒಳೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮುನ್ನೆಚ್ಚರಿಕೆ: ಡಿಸೆಂಬರ್ 2026ರವರೆಗೆ ಕುಡಿಯುವ ನೀರಿಗೆ ಕೊರತೆಯಾಗದಂತೆ ಸದ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ನೀರಾವರಿ ಇಲಾಖೆಯ ನಿಯಮಾವಳಿಗಳಿಗೆ ರೈತರು ಮತ್ತು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕೆಂದು ಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಕೋರಿದ್ದಾರೆ.
    1
    ಭದ್ರಾ ಡ್ಯಾಂನಿಂದ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ಇಂದಿನಿಂದ 15 ದಿನಗಳ ಕಾಲ ನೀರು ಬಿಡುಗಡೆ: ರೈತರ ಹೋರಾಟದ ಬೆನ್ನಲ್ಲೇ ಸರ್ಕಾರದ ಮಹತ್ವದ ನಿರ್ಧಾರ


ಶಿವಮೊಗ್ಗ, ಭದ್ರಾವತಿ, ದಾವಣಗೆರೆ, ಶಾಂತಿಸಾಗರ ಹಾಗೂ ಮಲೆಬೆನ್ನೂರು ಭಾಗಗಳಲ್ಲಿ ನೀರಿಗಾಗಿ ರೈತರು ಮತ್ತು ಸಾರ್ವಜನಿಕರು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು. ಈ ಕುರಿತು ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಜಲಸಂಪನ್ಮೂಲ ಸಚಿವರು ಮತ್ತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಮಧು ಬಂಗಾರಪ್ಪ ಹಾಗೂ ಉನ್ನತಾಧಿಕಾರಿಗಳು ಸುದೀರ್ಘ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ.
ಆದೇಶದ ಪ್ರಮುಖ ಮುಖ್ಯಾಂಶಗಳು:
ಸಮಯಾವಧಿ: ಸೆಪ್ಟೆಂಬರ್ 17ರ ಮಧ್ಯರಾತ್ರಿ 12.00 ಗಂಟೆಯಿಂದ ಅಕ್ಟೋಬರ್ 02, 2026ರವರೆಗೆ ಒಟ್ಟು 15 ದಿನಗಳ ಕಾಲ ನೀರು ಹರಿಸಲಾಗುತ್ತದೆ.
ಉದ್ದೇಶ: ಜನರ ಹಾಗೂ ಜಾನುವಾರುಗಳ ಕುಡಿಯುವ ನೀರು, ಅಂತರ್ಜಲ ವೃದ್ಧಿ ಮತ್ತು ಕೆರೆಗಳನ್ನು ತುಂಬಿಸಲು ಆದ್ಯತೆ ನೀಡಲಾಗಿದೆ.
ಬೆಳೆಗಳಿಗೆ ಬಳಸುವಂತಿಲ್ಲ: ಈ ನೀರನ್ನು ಕೇವಲ ಕುಡಿಯುವ ಹಾಗೂ ಅಗತ್ಯ ಬಳಕೆಗೆ ಮಾತ್ರ ಮೀಸಲಿಡಲಾಗಿದ್ದು, ಬೆಳೆಗಳಿಗೆ ಅಥವಾ ನೀರಾವರಿಗೆ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಅಕ್ರಮ ತಡೆ: ಅನಧಿಕೃತವಾಗಿ ನೀರು ಎತ್ತುವುದು, ಈಜಾಡುವುದು, ದನಕರಗಳನ್ನು ತೊಳೆಯುವುದು ಹಾಗೂ ಬಟ್ಟೆ ಒಳೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಮುನ್ನೆಚ್ಚರಿಕೆ: ಡಿಸೆಂಬರ್ 2026ರವರೆಗೆ ಕುಡಿಯುವ ನೀರಿಗೆ ಕೊರತೆಯಾಗದಂತೆ ಸದ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ನೀರಾವರಿ ಇಲಾಖೆಯ ನಿಯಮಾವಳಿಗಳಿಗೆ ರೈತರು ಮತ್ತು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕೆಂದು ಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಕೋರಿದ್ದಾರೆ.
    user_ಪ್ರವೀಣ್ ಅಧ್ಯಕ್ಷ NAYAKA
    ಪ್ರವೀಣ್ ಅಧ್ಯಕ್ಷ NAYAKA
    Local News Reporter Bhadravati, Shivamogga•
    2 hrs ago
  • ದಾವಣಗೆರೆ : ರಾಜ್ಯ ರಾಜಕಾರಣಕ್ಕೆ ಮರಳುವ ಸುಳಿವು ನೀಡಿದ ಜಿ.ಎಂ. ಸಿದ್ದೇಶ್ವರ ದಾವಣಗೆರೆ: ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮುಂದಿನ ರಾಜಕೀಯ ನಡೆ ಹಾಗೂ ರಾಜ್ಯ ರಾಜಕಾರಣದಲ್ಲಿನ ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ದಾವಣಗೆರೆ ಜಿಲ್ಲೆಯ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದ ಸಂಘಟನೆಯ ವಿಚಾರಗಳ ಬಗ್ಗೆಯೂ ಅವರು ಮಾತನಾಡಿದರು.ಇದೇ ವೇಳೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ತಮ್ಮ ನಡುವಿನ ರಾಜಕೀಯ ಸಂಬಂಧ, ದಾವಣಗೆರೆ ಜಿಲ್ಲೆಯ ರಾಜಕೀಯ ಬೆಳವಣಿಗೆಗಳು ಸೇರಿದಂತೆ ಹಲವು ವಿಚಾರಗಳು ಸುದ್ದಿಗೋಷ್ಠಿಯಲ್ಲಿ ಚರ್ಚೆಗೆ ಬಂದವು. ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಈ ಹೇಳಿಕೆಗಳು ರಾಜ್ಯ ರಾಜಕಾರಣಕ್ಕೆ ಅವರು ಮರಳುವ ಸಾಧ್ಯತೆಗಳ ಕುರಿತು ಚರ್ಚೆಗೆ ಕಾರಣವಾಗಿವೆ.
    1
    ದಾವಣಗೆರೆ : ರಾಜ್ಯ ರಾಜಕಾರಣಕ್ಕೆ ಮರಳುವ ಸುಳಿವು ನೀಡಿದ ಜಿ.ಎಂ. ಸಿದ್ದೇಶ್ವರ
ದಾವಣಗೆರೆ: ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮುಂದಿನ ರಾಜಕೀಯ ನಡೆ ಹಾಗೂ ರಾಜ್ಯ ರಾಜಕಾರಣದಲ್ಲಿನ ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ದಾವಣಗೆರೆ ಜಿಲ್ಲೆಯ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದ ಸಂಘಟನೆಯ ವಿಚಾರಗಳ ಬಗ್ಗೆಯೂ ಅವರು ಮಾತನಾಡಿದರು.ಇದೇ ವೇಳೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ತಮ್ಮ ನಡುವಿನ ರಾಜಕೀಯ ಸಂಬಂಧ, ದಾವಣಗೆರೆ ಜಿಲ್ಲೆಯ ರಾಜಕೀಯ ಬೆಳವಣಿಗೆಗಳು ಸೇರಿದಂತೆ ಹಲವು ವಿಚಾರಗಳು ಸುದ್ದಿಗೋಷ್ಠಿಯಲ್ಲಿ ಚರ್ಚೆಗೆ ಬಂದವು.
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಈ ಹೇಳಿಕೆಗಳು ರಾಜ್ಯ ರಾಜಕಾರಣಕ್ಕೆ ಅವರು ಮರಳುವ ಸಾಧ್ಯತೆಗಳ ಕುರಿತು ಚರ್ಚೆಗೆ ಕಾರಣವಾಗಿವೆ.
    user_Nandheesh kumar ac
    Nandheesh kumar ac
    ಭದ್ರಾವತಿ, ಶಿವಮೊಗ್ಗ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.