logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ನಾಗರಹೊಳೆಯಲ್ಲಿ ಚಿಕಿತ್ಸೆ ಫಲಿಸದೆ ಸಾಕಾನೆ ಜೂನಿಯ‌ರ್ ಅಭಿ ಸಾವು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದ ಸಾಕಾನೆ ಜೂನಿಯರ್ ಅಭಿ(21) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಕೂಂಬಿಂಗ್‌ನಲ್ಲಿ ಚಾಣಾಕ್ಷನಾಗಿದ್ದ ಅಭಿಯನ್ನು ಕಾಡಾನೆ ಸೆರೆ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿತ್ತು. 8 ತಿಂಗಳ ಹಿಂದೆ ಮೇಯಲು ಬಿಟ್ಟಿದ್ದ ವೇಳೆ ಕಾಡಿನಲ್ಲಿ ಗುಂಡಿಗೆ ಕಾಲು ಹಾಕಿ ಮಂಡಿ ನೋವು ಮಾಡಿಕೊಂಡಿತ್ತು. ಅಂದಿನಿಂದ ಸಾಕಾನೆ ಶಿಬಿರದಲ್ಲಿ ಪಶುವೈದ್ಯ ಡಾ.ರಮೇಶ್ ಚಿಕಿತ್ಸೆ ನೀಡುತ್ತಿದ್ದರು. ಸ್ವಲ್ಪಮಟ್ಟಿಗೆ ಚೇತರಿಸಿಕೊಂಡು ಕುಂಟುತ್ತಲೇ ಶಿಬಿರದಲ್ಲಿ ಅತ್ತಿಂದಿತ್ತ ಓಡಾಡಿಕೊಂಡಿದ್ದ ಅಭಿಗೆ ಕೆಲ ದಿನಗಳಿಂದ ನಡೆಯಲಾಗದೆ ಮಲಗಿದ್ದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನ್ನಪ್ಪಿದೆ.

10 hrs ago
user_Ashwini
Ashwini
ಮೈಸೂರು, ಮೈಸೂರು, ಕರ್ನಾಟಕ•
10 hrs ago
3f7b11c4-eb9d-4ffa-ba25-a5038aa66791

ನಾಗರಹೊಳೆಯಲ್ಲಿ ಚಿಕಿತ್ಸೆ ಫಲಿಸದೆ ಸಾಕಾನೆ ಜೂನಿಯ‌ರ್ ಅಭಿ ಸಾವು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದ ಸಾಕಾನೆ ಜೂನಿಯರ್ ಅಭಿ(21) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಕೂಂಬಿಂಗ್‌ನಲ್ಲಿ ಚಾಣಾಕ್ಷನಾಗಿದ್ದ ಅಭಿಯನ್ನು ಕಾಡಾನೆ ಸೆರೆ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿತ್ತು. 8 ತಿಂಗಳ ಹಿಂದೆ ಮೇಯಲು ಬಿಟ್ಟಿದ್ದ ವೇಳೆ ಕಾಡಿನಲ್ಲಿ ಗುಂಡಿಗೆ ಕಾಲು ಹಾಕಿ ಮಂಡಿ ನೋವು ಮಾಡಿಕೊಂಡಿತ್ತು. ಅಂದಿನಿಂದ ಸಾಕಾನೆ ಶಿಬಿರದಲ್ಲಿ ಪಶುವೈದ್ಯ ಡಾ.ರಮೇಶ್ ಚಿಕಿತ್ಸೆ ನೀಡುತ್ತಿದ್ದರು. ಸ್ವಲ್ಪಮಟ್ಟಿಗೆ ಚೇತರಿಸಿಕೊಂಡು ಕುಂಟುತ್ತಲೇ ಶಿಬಿರದಲ್ಲಿ ಅತ್ತಿಂದಿತ್ತ ಓಡಾಡಿಕೊಂಡಿದ್ದ ಅಭಿಗೆ ಕೆಲ ದಿನಗಳಿಂದ ನಡೆಯಲಾಗದೆ ಮಲಗಿದ್ದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನ್ನಪ್ಪಿದೆ.

More news from ಕರ್ನಾಟಕ and nearby areas
  • ಇಸ್ರೇಲ್–ಇರಾನ್ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದ್ದು, ಮೈಸೂರಿನ ಹೋಟೆಲ್ ಉದ್ಯಮಕ್ಕೆ ಆತಂಕ ಉಂಟಾಗಿದೆ. ಈಗಾಗಲೇ ಕಳೆದ ಮೂರು ವಾರಗಳಲ್ಲಿ ಅನಿಲದ ಬೆಲೆ ಏರಿಕೆಯಾಗಿದೆ ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಸುಮಾರು 1500 ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, 25 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಈ ಉದ್ಯಮದ ಮೇಲೆ ಅವಲಂಬಿತರಿದ್ದಾರೆ. ಅನಿಲ ಪೂರೈಕೆ ಸಮಸ್ಯೆ ಮುಂದುವರಿದರೆ ಹಲವಾರು ಹೋಟೆಲ್‌ಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಗಮನಹರಿಸಬೇಕು ಎಂದು ಸಂಘ ಮನವಿ ಮಾಡಿದೆ.
    1
    ಇಸ್ರೇಲ್–ಇರಾನ್ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದ್ದು, ಮೈಸೂರಿನ ಹೋಟೆಲ್ ಉದ್ಯಮಕ್ಕೆ ಆತಂಕ ಉಂಟಾಗಿದೆ. ಈಗಾಗಲೇ ಕಳೆದ ಮೂರು ವಾರಗಳಲ್ಲಿ ಅನಿಲದ ಬೆಲೆ ಏರಿಕೆಯಾಗಿದೆ ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಸುಮಾರು 1500 ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, 25 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಈ ಉದ್ಯಮದ ಮೇಲೆ ಅವಲಂಬಿತರಿದ್ದಾರೆ. ಅನಿಲ ಪೂರೈಕೆ ಸಮಸ್ಯೆ ಮುಂದುವರಿದರೆ ಹಲವಾರು ಹೋಟೆಲ್‌ಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಗಮನಹರಿಸಬೇಕು ಎಂದು ಸಂಘ ಮನವಿ ಮಾಡಿದೆ.
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    1 hr ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    2 hrs ago
  • ಹನೂರು: ಪಟ್ಟಣದ ಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ಪ್ರಥಮ ಬಾರಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಅತ್ಯಂತ ಭಕ್ತಿ ಭಾವದೊಂದಿಗೆ ವಿಜೃಂಭಣೆಯಿಂದ ಜರುಗಿತು. ಮಂಗಳವಾರ ಮಧ್ಯಾಹ್ನ ಜರುಗಿದ ರಥೋತ್ಸವದಲ್ಲಿ ದೇವರನ್ನು ತೇರಿನಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ಸುತ್ತ ಒಂದು ಸುತ್ತು ಪ್ರದಕ್ಷಿಣಿ ಹಾಕಲಾಯಿತು. ರಥೋತ್ಸವ ಜರುಗುತ್ತಿದ್ದಂತೆ ಗರುಡ ಎರಡು ಬಾರಿ ಹಾರಾಡಿದ್ದು ವಿಶೇಷವಾಗಿತ್ತು. ನೆರೆದಿದ್ದ ಸಾವಿರಾರು ಭಕ್ತರು ಜಯ ಘೋಷ ಕೂಗಿದರು. ನೆರೆದಿದ್ದ ಭಕ್ತರು ಹಣ್ಣು ಜವನ ಎಸೆದು ಹರಕೆ ತೀರಿಸಿದರು.
    1
    ಹನೂರು: 
ಪಟ್ಟಣದ ಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ಪ್ರಥಮ ಬಾರಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಅತ್ಯಂತ ಭಕ್ತಿ ಭಾವದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಮಂಗಳವಾರ ಮಧ್ಯಾಹ್ನ  ಜರುಗಿದ ರಥೋತ್ಸವದಲ್ಲಿ ದೇವರನ್ನು ತೇರಿನಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ಸುತ್ತ ಒಂದು ಸುತ್ತು ಪ್ರದಕ್ಷಿಣಿ ಹಾಕಲಾಯಿತು. ರಥೋತ್ಸವ ಜರುಗುತ್ತಿದ್ದಂತೆ ಗರುಡ ಎರಡು ಬಾರಿ ಹಾರಾಡಿದ್ದು ವಿಶೇಷವಾಗಿತ್ತು.  ನೆರೆದಿದ್ದ ಸಾವಿರಾರು ಭಕ್ತರು ಜಯ ಘೋಷ ಕೂಗಿದರು. ನೆರೆದಿದ್ದ ಭಕ್ತರು ಹಣ್ಣು ಜವನ ಎಸೆದು ಹರಕೆ ತೀರಿಸಿದರು.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    2 hrs ago
  • ಹಿರಿಯ ನಾಗರಿಕರು ಮೈದಾನದಲ್ಲಿ ವ್ಯಾಯಾಮ ಮಾಡುವ ಸಲುವಾಗಿ ಇದ್ದ ಜಾಗದಲ್ಲಿ ವ್ಯಕ್ತಿಯೊಬ್ಬ ಸಾಕುನಾಯಿ ಕರೆತಂದು ಮಲಮೂತ್ರ ವಿಸರ್ಜನೆ ಮಾಡಿಸುತ್ತಿದ್ದ ಕಾರಣ ಹಿರಿಯ ನಾಗರಿಕರೊಬ್ಬರು ತಗಾದೆ ತೆಗೆದಾಗ, ನಾಯಿ ಮಾಲೀಕ ವಿಡಿಯೋ ಮಾಡಲು ಮೊಬೈಲ್ ಫೋನ್ ತೆಗೆದಿದ್ದಾನೆ, ಆಗ ಹಿರಿಯ ವ್ಯಕ್ತ ವಿಡಿಯೋ ಮಾಡಬೇಡ ಎಂದು ಫೋನ್ ತಳ್ಳಿದ್ದಾರೆ,ಕೋಪಗೊಂಡ ವ್ಯಕ್ತಿ ಹಿರಿಯರ ಮೇಲೆ ಹಲ್ಲೆ ಮಾಡಿದ್ದಾರೆ, ವಿಕೋಪಕ್ಕೆ ತಿರುಗಿದ ಜಗಳದಿಂದ ಅಲ್ಲಿದ ಹಿರಿಯ ನಾಗರಿಕರು ವ್ಯಕ್ತಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ..
    1
    ಹಿರಿಯ ನಾಗರಿಕರು ಮೈದಾನದಲ್ಲಿ ವ್ಯಾಯಾಮ ಮಾಡುವ ಸಲುವಾಗಿ ಇದ್ದ ಜಾಗದಲ್ಲಿ ವ್ಯಕ್ತಿಯೊಬ್ಬ ಸಾಕುನಾಯಿ ಕರೆತಂದು ಮಲಮೂತ್ರ ವಿಸರ್ಜನೆ ಮಾಡಿಸುತ್ತಿದ್ದ ಕಾರಣ ಹಿರಿಯ ನಾಗರಿಕರೊಬ್ಬರು ತಗಾದೆ ತೆಗೆದಾಗ, ನಾಯಿ ಮಾಲೀಕ ವಿಡಿಯೋ ಮಾಡಲು ಮೊಬೈಲ್ ಫೋನ್ ತೆಗೆದಿದ್ದಾನೆ, ಆಗ ಹಿರಿಯ ವ್ಯಕ್ತ ವಿಡಿಯೋ ಮಾಡಬೇಡ ಎಂದು ಫೋನ್ ತಳ್ಳಿದ್ದಾರೆ,ಕೋಪಗೊಂಡ ವ್ಯಕ್ತಿ ಹಿರಿಯರ ಮೇಲೆ ಹಲ್ಲೆ ಮಾಡಿದ್ದಾರೆ, ವಿಕೋಪಕ್ಕೆ ತಿರುಗಿದ ಜಗಳದಿಂದ ಅಲ್ಲಿದ ಹಿರಿಯ ನಾಗರಿಕರು ವ್ಯಕ್ತಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ..
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    13 hrs ago
  • ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪೊಮೈ ಶಿಕ್ಷಣ ಸಂಸ್ಥೆ ವತಿಯಿಂದ, ಪೊಮೈ ಕಾಲೇಜಿನಲ್ಲಿ ಆರದಿರಲಿ ಬದುಕು ಆರಾಧನಾ ತಂಡದ ನಿರ್ದೇಶಕಿ ಶ್ರೀಮತಿ ಪದ್ಮಶ್ರೀ ಭಟ್‌ ನಿದ್ದೋಡಿ ಅವರನ್ನು ಜನ ಮೆಚ್ಚಿದ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು... ದಿನಾಂಕ 09/03/2026 ರಂದು ಮಧ್ಯಾಹ್ನ ಪೊಮೈ ಕಾಲೇಜಿನಲ್ಲಿ ಪ್ರಶಸ್ತಿ ಪತ್ರ ನೀಡಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಮೂಲಕ ಪದ್ಮಶ್ರೀ ಭಟ್ ಅವರು ಕಳೆದ 8 ವರ್ಷಗಳಿಂದ ಪ್ರತಿ ತಿಂಗಳು ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುತ್ತಾ ಬಂದಿದ್ದಾರೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ನಿರ್ದೇಶಕಿಯೂ ಆಗಿರುವ ಅವರು ನೂರಾರು ಬಹುಮುಖ ಪ್ರತಿಭೆಯ ಮಕ್ಕಳನ್ನು ಸಮಾಜಕ್ಕೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ವಾಯ್ಸ್ ಆಫ್‌ ಆರಾಧನಾ ಸಂಸ್ಥೆಯ ಮೂಲಕ ರಾಜ್ಯದ ಹಲವು ಕಡೆಗಳಲ್ಲಿ ರಾಜ್ಯಮಟ್ಟದ ಮಕ್ಕಳ ಮೇಳ ನಡೆಸಿದ್ದಾರೆ. ಮೂಲತಃ ಪತ್ರಕರ್ತೆಯಾದ ಪದ್ಮಶ್ರೀ ಭಟ್ ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ✍️ವರದಿ: ಸುರೇಂದ್ರ ಶಿವಮೊಗ್ಗ.....
    2
    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪೊಮೈ ಶಿಕ್ಷಣ ಸಂಸ್ಥೆ ವತಿಯಿಂದ, ಪೊಮೈ ಕಾಲೇಜಿನಲ್ಲಿ  ಆರದಿರಲಿ ಬದುಕು ಆರಾಧನಾ ತಂಡದ ನಿರ್ದೇಶಕಿ ಶ್ರೀಮತಿ ಪದ್ಮಶ್ರೀ ಭಟ್‌ ನಿದ್ದೋಡಿ ಅವರನ್ನು  ಜನ ಮೆಚ್ಚಿದ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು...
ದಿನಾಂಕ 09/03/2026 ರಂದು ಮಧ್ಯಾಹ್ನ ಪೊಮೈ ಕಾಲೇಜಿನಲ್ಲಿ ಪ್ರಶಸ್ತಿ ಪತ್ರ ನೀಡಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಮೂಲಕ ಪದ್ಮಶ್ರೀ ಭಟ್ ಅವರು ಕಳೆದ 8 ವರ್ಷಗಳಿಂದ ಪ್ರತಿ ತಿಂಗಳು ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುತ್ತಾ ಬಂದಿದ್ದಾರೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ನಿರ್ದೇಶಕಿಯೂ ಆಗಿರುವ ಅವರು ನೂರಾರು ಬಹುಮುಖ ಪ್ರತಿಭೆಯ ಮಕ್ಕಳನ್ನು ಸಮಾಜಕ್ಕೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ವಾಯ್ಸ್ ಆಫ್‌ ಆರಾಧನಾ ಸಂಸ್ಥೆಯ ಮೂಲಕ ರಾಜ್ಯದ ಹಲವು ಕಡೆಗಳಲ್ಲಿ ರಾಜ್ಯಮಟ್ಟದ ಮಕ್ಕಳ ಮೇಳ ನಡೆಸಿದ್ದಾರೆ. ಮೂಲತಃ ಪತ್ರಕರ್ತೆಯಾದ ಪದ್ಮಶ್ರೀ ಭಟ್ ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು.
✍️ವರದಿ: ಸುರೇಂದ್ರ ಶಿವಮೊಗ್ಗ.....
    user_Surendra Shimoga
    Surendra Shimoga
    Shuru News Publisher ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    15 hrs ago
  • ಭಾಲ್ಕಿ :-ನಾಗಮೋಹನದಾಸ ವರದಿ ಧಿಕ್ಕರಿಸಿ, ಭಾಲ್ಕಿ ಪಟ್ಟಣದಲ್ಲಿ ಬೃಹತ ಪ್ರತಿಭಟನೆ ರ‍್ಯಾಲಿ.
    1
    ಭಾಲ್ಕಿ :-ನಾಗಮೋಹನದಾಸ ವರದಿ ಧಿಕ್ಕರಿಸಿ, ಭಾಲ್ಕಿ ಪಟ್ಟಣದಲ್ಲಿ ಬೃಹತ  ಪ್ರತಿಭಟನೆ ರ‍್ಯಾಲಿ.
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
    ಈಶ್ವರ್ ಬೆಳಕು ನ್ಯೂಸ್ ಕನ್ನಡ User
    Bengaluru East, Bengaluru Urban•
    1 hr ago
  • ಬೆಂಗಳೂರಿನ ಹೆಣ್ಣೂರು ಗಾರ್ಡನ್ಸ್‌ನ ಪ್ರಕೃತಿ ಲೇಔಟ್‌ನಲ್ಲಿ ನಡೆದ ಆತಂಕಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬಿದ್ದಿದ್ದರೆ, ಮತ್ತೊಂದು ಗುಂಪು ಕಿತ್ತಾಟದಲ್ಲಿ ತೊಡಗಿದೆ. ಅಷ್ಟರಲ್ಲಿ ಬುಲೆಟ್ ಸವಾರನೊಬ್ಬ ಚಲಿಸುತ್ತಿದ್ದ ಬೈಕ್‌ಗೆ ಕಾಲಿನಿಂದ ಒದ್ದು ಪುಂಡಾಟಿಕೆ ಮೆರೆದಿದ್ದಾನೆ. ಒಂದೇ ಸ್ಕೂಟಿಯಲ್ಲಿ ಮೂವರು ಸವಾರಿ ಮಾಡುವ ಮೂಲಕ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸಾರ್ವಜನಿಕರ ಸುರಕ್ಷತೆಗೆ ಸವಾಲು ಹಾಕುವಂತಿರುವ ಈ ರೌಡಿಸಂ ಮತ್ತು ಅಶಿಸ್ತಿನ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
    1
    ಬೆಂಗಳೂರಿನ ಹೆಣ್ಣೂರು ಗಾರ್ಡನ್ಸ್‌ನ ಪ್ರಕೃತಿ ಲೇಔಟ್‌ನಲ್ಲಿ ನಡೆದ ಆತಂಕಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬಿದ್ದಿದ್ದರೆ, ಮತ್ತೊಂದು ಗುಂಪು ಕಿತ್ತಾಟದಲ್ಲಿ ತೊಡಗಿದೆ. ಅಷ್ಟರಲ್ಲಿ ಬುಲೆಟ್ ಸವಾರನೊಬ್ಬ ಚಲಿಸುತ್ತಿದ್ದ ಬೈಕ್‌ಗೆ ಕಾಲಿನಿಂದ ಒದ್ದು ಪುಂಡಾಟಿಕೆ ಮೆರೆದಿದ್ದಾನೆ. ಒಂದೇ ಸ್ಕೂಟಿಯಲ್ಲಿ ಮೂವರು ಸವಾರಿ ಮಾಡುವ ಮೂಲಕ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸಾರ್ವಜನಿಕರ ಸುರಕ್ಷತೆಗೆ ಸವಾಲು ಹಾಕುವಂತಿರುವ ಈ ರೌಡಿಸಂ ಮತ್ತು ಅಶಿಸ್ತಿನ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
    user_Mohan
    Mohan
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    22 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.