logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ ದೊಡ್ಡಣ್ಣ ಅವರು ತಾವು ಬದುಕಿರುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನಿಧನದ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವಿನ್ನೂ ಸಂಪೂರ್ಣ ಆರೋಗ್ಯವಾಗಿದ್ದೇನೆ ಎಂದು ವಿಡಿಯೋ ಮೂಲಕ ಸ್ಪಷ್ಟಪಡಿಸಿರುವ ಅವರು, ಇಂತಹ ನೀಚ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದಿಲ್ಲ ಹಾಗೂ ಅವರಿಗೆ ತಕ್ಕ ಶಿಕ್ಷೆ ಕೊಡಿಸುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೆಳ್ಳಂಬೆಳಗ್ಗೆ ಹರಿದಾಡಿದ ಈ ಸುಳ್ಳು ಸುದ್ದಿಯಿಂದ ಕಂಗಾಲಾಗಿದ್ದ ಅಭಿಮಾನಿಗಳು ಮತ್ತು ಆಪ್ತರಿಗೆ ವಿಡಿಯೋ ಸಂದೇಶದ ಮೂಲಕ ಅವರು ಸ್ಪಷ್ಟನೆ ನೀಡಿದರು. ವಿಡಿಯೋದಲ್ಲಿ ದೊಡ್ಡಣ್ಣ ಅವರು, "ಇಂದು ಬೆಳಿಗ್ಗೆ ನಾನು ನಿದ್ರೆಯಿಂದ ಏಳುವ ಮೊದಲೇ ಯಾರೋ ಅವಿವೇಕಿಗಳು ನಾನು ತೀರಿಹೋಗಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಆದರೆ ಅದು ನೂರಕ್ಕೆ ನೂರರಷ್ಟು ಸುಳ್ಳು. ನಾನು ಪ್ರಸ್ತುತ ಆರೋಗ್ಯವಾಗಿದ್ದೇನೆ ಮತ್ತು ನೆಮ್ಮದಿಯಾಗಿದ್ದೇನೆ. ಬೆಳಿಗ್ಗೆಯಿಂದ ನನ್ನ ಮಕ್ಕಳು, ಮೊಮ್ಮಕ್ಕಳು ಹಾಗೂ ಆಪ್ತರಿಂದ ಆತಂಕದ ಕರೆಗಳು ಬರುತ್ತಿವೆ. ಜನರ ಆಶೀರ್ವಾದ ಇರುವವರೆಗೆ ನಾನು ನೂರು ವರ್ಷ ಚೆನ್ನಾಗಿರುತ್ತೇನೆಂಬ ನಂಬಿಕೆ ನನಗಿದೆ" ಎಂದು ಹೇಳಿಕೊಂಡಿದ್ದಾರೆ. ಬದುಕಿರುವ ವ್ಯಕ್ತಿಯ ಬಗ್ಗೆ ಇಂತಹ ಸೂಕ್ಷ್ಮ ಮತ್ತು ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ದೊಡ್ಡಣ್ಣ ತಿಳಿಸಿದ್ದಾರೆ. "ಈ ರೀತಿ ವಿಕೃತ ಆನಂದ ಪಡೆಯುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಕಾನೂನುಬದ್ಧವಾಗಿ ತಕ್ಕ ಶಾಸ್ತಿ ನೀಡಿಯೇ ತೀರುತ್ತೇನೆ" ಎಂದು ಆಕ್ರೋಶದಿಂದ ಅವರು ಸವಾಲು ಹಾಕಿದ್ದಾರೆ.

5 days ago
user_Lavanya
Lavanya
Local News Reporter ಪಾವಗಡ, ತುಮಕೂರು, ಕರ್ನಾಟಕ•
5 days ago

ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ ದೊಡ್ಡಣ್ಣ ಅವರು ತಾವು ಬದುಕಿರುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನಿಧನದ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವಿನ್ನೂ ಸಂಪೂರ್ಣ ಆರೋಗ್ಯವಾಗಿದ್ದೇನೆ ಎಂದು ವಿಡಿಯೋ ಮೂಲಕ ಸ್ಪಷ್ಟಪಡಿಸಿರುವ ಅವರು, ಇಂತಹ ನೀಚ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದಿಲ್ಲ ಹಾಗೂ ಅವರಿಗೆ ತಕ್ಕ ಶಿಕ್ಷೆ ಕೊಡಿಸುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೆಳ್ಳಂಬೆಳಗ್ಗೆ ಹರಿದಾಡಿದ ಈ ಸುಳ್ಳು ಸುದ್ದಿಯಿಂದ ಕಂಗಾಲಾಗಿದ್ದ ಅಭಿಮಾನಿಗಳು ಮತ್ತು ಆಪ್ತರಿಗೆ ವಿಡಿಯೋ ಸಂದೇಶದ ಮೂಲಕ ಅವರು ಸ್ಪಷ್ಟನೆ ನೀಡಿದರು. ವಿಡಿಯೋದಲ್ಲಿ ದೊಡ್ಡಣ್ಣ ಅವರು, "ಇಂದು ಬೆಳಿಗ್ಗೆ ನಾನು ನಿದ್ರೆಯಿಂದ ಏಳುವ ಮೊದಲೇ ಯಾರೋ ಅವಿವೇಕಿಗಳು ನಾನು ತೀರಿಹೋಗಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಆದರೆ ಅದು ನೂರಕ್ಕೆ ನೂರರಷ್ಟು ಸುಳ್ಳು. ನಾನು ಪ್ರಸ್ತುತ ಆರೋಗ್ಯವಾಗಿದ್ದೇನೆ ಮತ್ತು ನೆಮ್ಮದಿಯಾಗಿದ್ದೇನೆ. ಬೆಳಿಗ್ಗೆಯಿಂದ ನನ್ನ ಮಕ್ಕಳು, ಮೊಮ್ಮಕ್ಕಳು ಹಾಗೂ ಆಪ್ತರಿಂದ ಆತಂಕದ ಕರೆಗಳು ಬರುತ್ತಿವೆ. ಜನರ ಆಶೀರ್ವಾದ ಇರುವವರೆಗೆ ನಾನು ನೂರು ವರ್ಷ ಚೆನ್ನಾಗಿರುತ್ತೇನೆಂಬ ನಂಬಿಕೆ ನನಗಿದೆ" ಎಂದು ಹೇಳಿಕೊಂಡಿದ್ದಾರೆ. ಬದುಕಿರುವ ವ್ಯಕ್ತಿಯ ಬಗ್ಗೆ ಇಂತಹ ಸೂಕ್ಷ್ಮ ಮತ್ತು ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ದೊಡ್ಡಣ್ಣ ತಿಳಿಸಿದ್ದಾರೆ. "ಈ ರೀತಿ ವಿಕೃತ ಆನಂದ ಪಡೆಯುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಕಾನೂನುಬದ್ಧವಾಗಿ ತಕ್ಕ ಶಾಸ್ತಿ ನೀಡಿಯೇ ತೀರುತ್ತೇನೆ" ಎಂದು ಆಕ್ರೋಶದಿಂದ ಅವರು ಸವಾಲು ಹಾಕಿದ್ದಾರೆ.

More news from ಕರ್ನಾಟಕ and nearby areas
  • ಹೊಸದುರ್ಗ ತಾಲ್ಲೂಕಿನ ಜೋಡಿ ಶ್ರೀರಂಗಾಪುರ ಭೋವಿಹಟ್ಟಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಕರಿಯಮ್ಮ ಮತ್ತು ಕೃಷ್ಣಮೂರ್ತಿ ಎಂಬ ಅಣ್ಣ-ತಂಗಿ ಮೇಲೆ ಹಲ್ಲೆ ನಡೆದಿದೆ. ಘಟನೆಯ ನಂತರ, ಗಾಯಗೊಂಡ ಇಬ್ಬರೂ ಪ್ರಸ್ತುತ ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಆರೋಪದ ಪ್ರಕಾರ, ಕರಿಯಮ್ಮ ಅವರ ಮನೆಯ ಬಳಿ ಎರಡು ಗುಂಪುಗಳ ನಡುವೆ ಗಲಾಟೆ ನಡೆಯುತ್ತಿತ್ತು. ಈ ಬಗ್ಗೆ ಯಾಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಕೇಳಲು ಹೋದಾಗ, ವೀರಣ್ಣ, ಮಣಿಕಂಠ, ಮಂಜು ಮತ್ತು ಸತೀಶ್ ಎಂಬ ನಾಲ್ವರು ಅವರ ಮೇಲೆ ರೊಚ್ಚಿಗೆದ್ದು ಹಲ್ಲೆ ನಡೆಸಿದ್ದಾರೆ. ಹಲ್ಲೆಕೋರರು ಕರಿಯಮ್ಮ ಅವರ ಮನೆಯ ಬಾಗಿಲಿಗೆ ಕಲ್ಲುಗಳಿಂದ ಹೊಡೆದು ಹಾನಿ ಮಾಡಿದ್ದಲ್ಲದೆ, ಮನೆಯ ಹೆಂಚುಗಳನ್ನೂ ಸಹ ಹಾನಿಗೊಳಿಸಿದ್ದಾರೆ.
    1
    ಹೊಸದುರ್ಗ ತಾಲ್ಲೂಕಿನ ಜೋಡಿ ಶ್ರೀರಂಗಾಪುರ ಭೋವಿಹಟ್ಟಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಕರಿಯಮ್ಮ ಮತ್ತು ಕೃಷ್ಣಮೂರ್ತಿ ಎಂಬ ಅಣ್ಣ-ತಂಗಿ ಮೇಲೆ ಹಲ್ಲೆ ನಡೆದಿದೆ. ಘಟನೆಯ ನಂತರ, ಗಾಯಗೊಂಡ ಇಬ್ಬರೂ ಪ್ರಸ್ತುತ ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಾಳುಗಳ ಆರೋಪದ ಪ್ರಕಾರ, ಕರಿಯಮ್ಮ ಅವರ ಮನೆಯ ಬಳಿ ಎರಡು ಗುಂಪುಗಳ ನಡುವೆ ಗಲಾಟೆ ನಡೆಯುತ್ತಿತ್ತು. ಈ ಬಗ್ಗೆ ಯಾಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಕೇಳಲು ಹೋದಾಗ, ವೀರಣ್ಣ, ಮಣಿಕಂಠ, ಮಂಜು ಮತ್ತು ಸತೀಶ್ ಎಂಬ ನಾಲ್ವರು ಅವರ ಮೇಲೆ ರೊಚ್ಚಿಗೆದ್ದು ಹಲ್ಲೆ ನಡೆಸಿದ್ದಾರೆ. ಹಲ್ಲೆಕೋರರು ಕರಿಯಮ್ಮ ಅವರ ಮನೆಯ ಬಾಗಿಲಿಗೆ ಕಲ್ಲುಗಳಿಂದ ಹೊಡೆದು ಹಾನಿ ಮಾಡಿದ್ದಲ್ಲದೆ, ಮನೆಯ ಹೆಂಚುಗಳನ್ನೂ ಸಹ ಹಾನಿಗೊಳಿಸಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    18 hrs ago
  • ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಶಬರಿಮಲೆ ದರ್ಶನಕ್ಕೆ ತೆರಳುತ್ತಿದ್ದಾರೆ.
    1
    ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಶಬರಿಮಲೆ ದರ್ಶನಕ್ಕೆ ತೆರಳುತ್ತಿದ್ದಾರೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ರಾಜ್ಯ ಪೊಲೀಸ್ ಗೃಹಮಂಡಳಿಯಿಂದ ನಿರ್ಮಿಸಲಾಗುತ್ತಿರುವ ಪೊಲೀಸ್ ಸಿಬ್ಬಂದಿಗಳ ವಸತಿ ಗೃಹಗಳ ಕಾಮಗಾರಿ ತೀರಾ ಕಳಪೆಯಾಗಿದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ಕಣಕೂರು ಚಂದ್ರಶೇಖರ್ ಮತ್ತು ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಕೃಷ್ಣ ಮಾದಿಗ ಗಂಭೀರ ಆರೋಪ ಮಾಡಿದ್ದಾರೆ. ಕಾಮಗಾರಿಯನ್ನು ಪರಿಶೀಲಿಸಿದ ಕಣಕೂರು ಚಂದ್ರಶೇಖರ್ ಅವರು, ಕಟ್ಟಡದ ಎಸ್ಟಿಮೇಟ್ ಕೇಳಿದರೆ ಎಸ್.ಪಿ. ಕಚೇರಿಯಲ್ಲಿದೆ ಎಂದು ಸಬೂಬು ಹೇಳಲಾಗುತ್ತಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇಡಬಹುದಾಗಿದ್ದ ದಾಖಲೆಗಳನ್ನು ಎಸ್.ಪಿ. ಕಚೇರಿಯಲ್ಲೇಕೆ ರಕ್ಷಣೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಸೈಟ್ ಎಂಜಿನಿಯರ್ ಬಳಿ ಯಾವುದೇ ದಾಖಲಾತಿಗಳಿಲ್ಲ, ಇಲ್ಲಿ ಕೇಳುವವರಿಲ್ಲ ಹೇಳುವವರಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚರಂಡಿ ತೆಗೆದ ಮಣ್ಣನ್ನು ತಂದು ತುಂಬಿಸಲಾಗಿದೆ ಮತ್ತು ಕಲ್ಲಿನಿಂದ ಕಟ್ಟಬೇಕಾದ ಅಡಿಪಾಯವನ್ನು ಸಿಮೆಂಟ್ ಇಟ್ಟಿಗೆಗಳಿಂದ ಕಟ್ಟಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಮ್ಮ ಅಧಿಕಾರಿಗಳು ವಾಸಿಸುವ ಸ್ಥಳ ಸುರಕ್ಷಿತವಾಗಿರಬೇಕು ಎಂಬುದು ನಮ್ಮ ಕರ್ತವ್ಯ ಎಂದು ಅವರು ಒತ್ತಿಹೇಳಿದರು. ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಕೃಷ್ಣ ಮಾದಿಗ ಮಾತನಾಡಿ, ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡವರು ಯಾವುದೇ ಎಸ್ಟಿಮೇಟ್ ನೋಡಲು ಅವಕಾಶ ನೀಡುತ್ತಿಲ್ಲ, ಇದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ ಎಂದರು. ಕಟ್ಟಡಕ್ಕೆ ತುಂಬಿರುವ ಮಣ್ಣು ಸಹ ಕಳಪೆಯಾಗಿದ್ದು, ಅದರಲ್ಲಿ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಬಟ್ಟೆಗಳ ತುಂಡುಗಳಿವೆ. ಇದರಿಂದ ಕಟ್ಟಡ ಯಾವುದೇ ಕಾರಣಕ್ಕೂ ಬಾಳಿಕೆ ಬರುವುದಿಲ್ಲ. ಇದರಲ್ಲಿ ಕೆಲವು ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವ ಅನುಮಾನಗಳೂ ಇವೆ ಎಂದು ಅವರು ದೂರಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲಿಸುವವರೆಗೂ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಗಿದ್ದು, ಸರ್ಕಾರದ ಅನುಮೋದನೆಯಂತೆ ಕಾಮಗಾರಿ ನಡೆಯಬೇಕು ಎಂದು ಆಗ್ರಹಿಸಲಾಗಿದೆ. ಅಧಿಕಾರಿಗಳು ಪರಿಶೀಲಿಸಿ ಕಾಮಗಾರಿ ಕಳಪೆಯಾಗಿದ್ದರೆ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಇದೇ ರೀತಿ ಅಕ್ರಮಗಳು ಮುಂದುವರಿದರೆ, ಮುಂದಿನ ದಿನಗಳಲ್ಲಿ ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಜೊತೆಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
    4
    ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ರಾಜ್ಯ ಪೊಲೀಸ್ ಗೃಹಮಂಡಳಿಯಿಂದ ನಿರ್ಮಿಸಲಾಗುತ್ತಿರುವ ಪೊಲೀಸ್ ಸಿಬ್ಬಂದಿಗಳ ವಸತಿ ಗೃಹಗಳ ಕಾಮಗಾರಿ ತೀರಾ ಕಳಪೆಯಾಗಿದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ಕಣಕೂರು ಚಂದ್ರಶೇಖರ್ ಮತ್ತು ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಕೃಷ್ಣ ಮಾದಿಗ ಗಂಭೀರ ಆರೋಪ ಮಾಡಿದ್ದಾರೆ.

ಕಾಮಗಾರಿಯನ್ನು ಪರಿಶೀಲಿಸಿದ ಕಣಕೂರು ಚಂದ್ರಶೇಖರ್ ಅವರು, ಕಟ್ಟಡದ ಎಸ್ಟಿಮೇಟ್ ಕೇಳಿದರೆ ಎಸ್.ಪಿ. ಕಚೇರಿಯಲ್ಲಿದೆ ಎಂದು ಸಬೂಬು ಹೇಳಲಾಗುತ್ತಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇಡಬಹುದಾಗಿದ್ದ ದಾಖಲೆಗಳನ್ನು ಎಸ್.ಪಿ. ಕಚೇರಿಯಲ್ಲೇಕೆ ರಕ್ಷಣೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಸೈಟ್ ಎಂಜಿನಿಯರ್ ಬಳಿ ಯಾವುದೇ ದಾಖಲಾತಿಗಳಿಲ್ಲ, ಇಲ್ಲಿ ಕೇಳುವವರಿಲ್ಲ ಹೇಳುವವರಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚರಂಡಿ ತೆಗೆದ ಮಣ್ಣನ್ನು ತಂದು ತುಂಬಿಸಲಾಗಿದೆ ಮತ್ತು ಕಲ್ಲಿನಿಂದ ಕಟ್ಟಬೇಕಾದ ಅಡಿಪಾಯವನ್ನು ಸಿಮೆಂಟ್ ಇಟ್ಟಿಗೆಗಳಿಂದ ಕಟ್ಟಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಮ್ಮ ಅಧಿಕಾರಿಗಳು ವಾಸಿಸುವ ಸ್ಥಳ ಸುರಕ್ಷಿತವಾಗಿರಬೇಕು ಎಂಬುದು ನಮ್ಮ ಕರ್ತವ್ಯ ಎಂದು ಅವರು ಒತ್ತಿಹೇಳಿದರು. ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಕೃಷ್ಣ ಮಾದಿಗ ಮಾತನಾಡಿ, ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡವರು ಯಾವುದೇ ಎಸ್ಟಿಮೇಟ್ ನೋಡಲು ಅವಕಾಶ ನೀಡುತ್ತಿಲ್ಲ, ಇದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ ಎಂದರು. ಕಟ್ಟಡಕ್ಕೆ ತುಂಬಿರುವ ಮಣ್ಣು ಸಹ ಕಳಪೆಯಾಗಿದ್ದು, ಅದರಲ್ಲಿ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಬಟ್ಟೆಗಳ ತುಂಡುಗಳಿವೆ. ಇದರಿಂದ ಕಟ್ಟಡ ಯಾವುದೇ ಕಾರಣಕ್ಕೂ ಬಾಳಿಕೆ ಬರುವುದಿಲ್ಲ. ಇದರಲ್ಲಿ ಕೆಲವು ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವ ಅನುಮಾನಗಳೂ ಇವೆ ಎಂದು ಅವರು ದೂರಿದ್ದಾರೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲಿಸುವವರೆಗೂ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಗಿದ್ದು, ಸರ್ಕಾರದ ಅನುಮೋದನೆಯಂತೆ ಕಾಮಗಾರಿ ನಡೆಯಬೇಕು ಎಂದು ಆಗ್ರಹಿಸಲಾಗಿದೆ. ಅಧಿಕಾರಿಗಳು ಪರಿಶೀಲಿಸಿ ಕಾಮಗಾರಿ ಕಳಪೆಯಾಗಿದ್ದರೆ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಇದೇ ರೀತಿ ಅಕ್ರಮಗಳು ಮುಂದುವರಿದರೆ, ಮುಂದಿನ ದಿನಗಳಲ್ಲಿ ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಜೊತೆಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
    user_Manohara
    Manohara
    Local News Reporter ತುರುವೇಕೆರೆ, ತುಮಕೂರು, ಕರ್ನಾಟಕ•
    15 hrs ago
  • ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗಳ ಮಲ್ಲಾಪುರ ಗ್ರಾಮದಲ್ಲಿ ಯಾವುದೇ ಕಂಪನಿಯ ನೆಟ್‌ವರ್ಕ್ ಸೌಲಭ್ಯ ಲಭ್ಯವಿಲ್ಲದೆ ಇರುವುದರಿಂದ ಸಮಸ್ತ ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯಿಂದ ಗ್ರಾಮದ ಮುಖಂಡರು, ಯುವಕರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ಶೀಘ್ರವಾಗಿ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಇದರೊಂದಿಗೆ, ಶಾಸಕರು ಈ ವಿಷಯದ ಬಗ್ಗೆ ಕೂಡಲೇ ಸ್ಪಂದಿಸಬೇಕೆಂದೂ ಅವರು ಕೋರಿದ್ದಾರೆ. ಈ ಮನವಿ ಸಲ್ಲಿಸುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ. ವೀರೇಂದ್ರ ಪಾಟೀಲ್ ಮತ್ತು ಡಿ. ನಾಗರಾಜ್, ಮಾಜಿ ಉಪಾಧ್ಯಕ್ಷ ಎಮ್. ಗಾಳೆಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಖಜಾಂಚಿ ಹೆಚ್. ಜಿತೇಂದ್ರ, ಹಾಗೂ ಮಾಳಿಗೆ ಸಿದ್ದಪ್ಪ, ಟೈಲರ್ ವೀರೇಶ, ಬಳಿಗೇರ ಬಸವರಾಜ, ತಳವಾರ್ ಮಹೇಶ, ಕೆಂಚಜ್ಜರ ವೀರೇಶ, ಹೆಚ್. ಯುವರಾಜ್, ಹೆಚ್. ಪ್ರವೀಣ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.
    4
    ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗಳ ಮಲ್ಲಾಪುರ ಗ್ರಾಮದಲ್ಲಿ ಯಾವುದೇ ಕಂಪನಿಯ ನೆಟ್‌ವರ್ಕ್ ಸೌಲಭ್ಯ ಲಭ್ಯವಿಲ್ಲದೆ ಇರುವುದರಿಂದ ಸಮಸ್ತ ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯಿಂದ ಗ್ರಾಮದ ಮುಖಂಡರು, ಯುವಕರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ.

ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ಶೀಘ್ರವಾಗಿ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಇದರೊಂದಿಗೆ, ಶಾಸಕರು ಈ ವಿಷಯದ ಬಗ್ಗೆ ಕೂಡಲೇ ಸ್ಪಂದಿಸಬೇಕೆಂದೂ ಅವರು ಕೋರಿದ್ದಾರೆ.

ಈ ಮನವಿ ಸಲ್ಲಿಸುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ. ವೀರೇಂದ್ರ ಪಾಟೀಲ್ ಮತ್ತು ಡಿ. ನಾಗರಾಜ್, ಮಾಜಿ ಉಪಾಧ್ಯಕ್ಷ ಎಮ್. ಗಾಳೆಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಖಜಾಂಚಿ ಹೆಚ್. ಜಿತೇಂದ್ರ, ಹಾಗೂ ಮಾಳಿಗೆ ಸಿದ್ದಪ್ಪ, ಟೈಲರ್ ವೀರೇಶ, ಬಳಿಗೇರ ಬಸವರಾಜ, ತಳವಾರ್ ಮಹೇಶ, ಕೆಂಚಜ್ಜರ ವೀರೇಶ, ಹೆಚ್. ಯುವರಾಜ್, ಹೆಚ್. ಪ್ರವೀಣ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
    ವರದಿಗಾರ ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    4 hrs ago
  • ಬೆಂಗಳೂರಿನಲ್ಲಿ ಅಬೀಬಾ ಟೆಂಟ್ ಹೌಸ್ ಬಾಡಿಗೆ ಆಧಾರದ ಮೇಲೆ ಸೇವೆಗಳನ್ನು ಒದಗಿಸುತ್ತಿದೆ. ಸೇವೆಗಳನ್ನು ಪಡೆಯಲು ಆಸಕ್ತಿ ಇರುವವರು 7760976887 ಅಥವಾ 9900619376 ಸಂಖ್ಯೆಗಳಿಗೆ ಸಂಪರ್ಕಿಸಬಹುದು.
    1
    ಬೆಂಗಳೂರಿನಲ್ಲಿ ಅಬೀಬಾ ಟೆಂಟ್ ಹೌಸ್ ಬಾಡಿಗೆ ಆಧಾರದ ಮೇಲೆ ಸೇವೆಗಳನ್ನು ಒದಗಿಸುತ್ತಿದೆ. ಸೇವೆಗಳನ್ನು ಪಡೆಯಲು ಆಸಕ್ತಿ ಇರುವವರು 7760976887 ಅಥವಾ 9900619376 ಸಂಖ್ಯೆಗಳಿಗೆ ಸಂಪರ್ಕಿಸಬಹುದು.
    user_Sahir sarakar
    Sahir sarakar
    Bengaluru South, Bengaluru Urban•
    20 hrs ago
  • ಕೋಲಾರ ನಗರದ ವಾರ್ಡ್ ಸಂಖ್ಯೆ 9, ಒಂದು ಕಾಲದಲ್ಲಿ ನಾಯಕರು ರೂಪುಗೊಳ್ಳುತ್ತಿದ್ದ ಪ್ರಾಚೀನ ಮತ್ತು ಪ್ರಮುಖ ಪ್ರದೇಶವಾಗಿತ್ತು. ಆದರೆ, ಇಂತಹ ಐತಿಹಾಸಿಕ ಮಹತ್ವವನ್ನು ಹೊಂದಿರುವ ಈ ಪ್ರದೇಶವು ಇಂದು ಅತ್ಯಂತ ಕಳಪೆ ಹಾಗೂ ದುರ್ಬಲ ಸ್ಥಿತಿಯಲ್ಲಿದೆ, ಅದರ ದುಃಸ್ಥಿತಿಯು ಗಮನ ಸೆಳೆಯುವಂತಾಗಿದೆ.
    1
    ಕೋಲಾರ ನಗರದ ವಾರ್ಡ್ ಸಂಖ್ಯೆ 9, ಒಂದು ಕಾಲದಲ್ಲಿ ನಾಯಕರು ರೂಪುಗೊಳ್ಳುತ್ತಿದ್ದ ಪ್ರಾಚೀನ ಮತ್ತು ಪ್ರಮುಖ ಪ್ರದೇಶವಾಗಿತ್ತು. ಆದರೆ, ಇಂತಹ ಐತಿಹಾಸಿಕ ಮಹತ್ವವನ್ನು ಹೊಂದಿರುವ ಈ ಪ್ರದೇಶವು ಇಂದು ಅತ್ಯಂತ ಕಳಪೆ ಹಾಗೂ ದುರ್ಬಲ ಸ್ಥಿತಿಯಲ್ಲಿದೆ, ಅದರ ದುಃಸ್ಥಿತಿಯು ಗಮನ ಸೆಳೆಯುವಂತಾಗಿದೆ.
    user_True news kolar Ayub Pasha
    True news kolar Ayub Pasha
    Advertising agency ಕೋಲಾರ, ಕೋಲಾರ, ಕರ್ನಾಟಕ•
    3 hrs ago
  • ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಶಿಮುಲ್ ಜಿಲ್ಲಾ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಅವರು ಗ್ರಾಮದ ದೇವತಾ ಧಾರ್ಮಿಕ ಕಾರ್ಯಗಳಲ್ಲಿ ಸರ್ವರ ಸಹಭಾಗಿತ್ವ ಇರಬೇಕು ಎಂದು ಕರೆ ನೀಡಿದರು. ಈ ಕಾರ್ಯಕ್ರಮವನ್ನು ನಗರಂಗೆರೆ ಗ್ರಾಮ ಪಂಚಾಯತಿ ಹಿತರಕ್ಷಣಾ ವೇದಿಕೆ ಮತ್ತು ಮೂರ್ತಿ ಡೆವಲಪರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಗ್ರಾಮದಲ್ಲಿ ಶಿಥಿಲವಾಗಿರುವ ಶ್ರೀ ದುರ್ಗಾಂಭಿಕ ದೇವಸ್ಥಾನದ ನಿರ್ಮಾಣ ಕಾರ್ಯಕ್ಕಾಗಿ ಐದು ಲಕ್ಷ ರೂಪಾಯಿ ಧನ ಸಹಾಯ ಮಾಡುವುದಾಗಿ ಸಂಜೀವಮೂರ್ತಿ ಈ ಸಂದರ್ಭದಲ್ಲಿ ಘೋಷಿಸಿದರು. ಶಾಸಕರು ನೀಡಿರುವ ಅನುದಾನವನ್ನು ಬಳಸಿಕೊಂಡು, ಸುಂದರವಾದ ದೇವಾಲಯ ನಿರ್ಮಾಣಕ್ಕೆ ಗ್ರಾಮದ ಎಲ್ಲರ ಹೊಂದಾಣಿಕೆ ಮತ್ತು ಸಹಕಾರ ಇರಬೇಕು ಎಂದು ಅವರು ಒತ್ತಿ ಹೇಳಿದರು. ಒಂದು ಸಂಘಟನೆಯಿಂದ ಜನಪರ ಕೆಲಸಗಳು ನಡೆಯಬೇಕು ಎಂಬ ಆಶಯದೊಂದಿಗೆ, ಹಿತರಕ್ಷಣಾ ವೇದಿಕೆಯಿಂದ ಹಲವು ಉಪಕ್ರಮಗಳನ್ನು ಘೋಷಿಸಲಾಯಿತು. ಇದರಲ್ಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು, ಕಾರು ಮತ್ತು ಬೈಕ್ ಸವಾರರಿಗೆ ಚಾಲನಾ ಪರವಾನಗಿಗಳನ್ನು ಕೊಡಿಸುವುದು ಸೇರಿವೆ. ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆಧಾರವಾಗುವ ಸುಕನ್ಯಾ ಯೋಜನೆಗೆ, ಪ್ರತಿ ಕುಟುಂಬದ ಹೆಣ್ಣು ಮಗುವಿಗೆ ಮೊದಲ ಕಂತಾಗಿ 1825 ರೂಪಾಯಿ ಸಹಕಾರ ನೀಡಲಾಗುವುದು ಎಂದು ತಿಳಿಸಲಾಯಿತು. ಒಟ್ಟು 157 ವಾಹನ ಸವಾರರಿಗೆ ಚಾಲನಾ ಪರವಾನಗಿ ಕೊಡಿಸಲಾಗುವುದು ಎಂದೂ ಸಹ ಹೇಳಲಾಯಿತು. ಈ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬಿ.ಸಿ. ಸಂಜೀವಮೂರ್ತಿ ಅವರು ಸಮುದಾಯಕ್ಕೆ ಮನವಿ ಮಾಡಿದರು.
    1
    ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಶಿಮುಲ್ ಜಿಲ್ಲಾ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಅವರು ಗ್ರಾಮದ ದೇವತಾ ಧಾರ್ಮಿಕ ಕಾರ್ಯಗಳಲ್ಲಿ ಸರ್ವರ ಸಹಭಾಗಿತ್ವ ಇರಬೇಕು ಎಂದು ಕರೆ ನೀಡಿದರು. ಈ ಕಾರ್ಯಕ್ರಮವನ್ನು ನಗರಂಗೆರೆ ಗ್ರಾಮ ಪಂಚಾಯತಿ ಹಿತರಕ್ಷಣಾ ವೇದಿಕೆ ಮತ್ತು ಮೂರ್ತಿ ಡೆವಲಪರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಗ್ರಾಮದಲ್ಲಿ ಶಿಥಿಲವಾಗಿರುವ ಶ್ರೀ ದುರ್ಗಾಂಭಿಕ ದೇವಸ್ಥಾನದ ನಿರ್ಮಾಣ ಕಾರ್ಯಕ್ಕಾಗಿ ಐದು ಲಕ್ಷ ರೂಪಾಯಿ ಧನ ಸಹಾಯ ಮಾಡುವುದಾಗಿ ಸಂಜೀವಮೂರ್ತಿ ಈ ಸಂದರ್ಭದಲ್ಲಿ ಘೋಷಿಸಿದರು. ಶಾಸಕರು ನೀಡಿರುವ ಅನುದಾನವನ್ನು ಬಳಸಿಕೊಂಡು, ಸುಂದರವಾದ ದೇವಾಲಯ ನಿರ್ಮಾಣಕ್ಕೆ ಗ್ರಾಮದ ಎಲ್ಲರ ಹೊಂದಾಣಿಕೆ ಮತ್ತು ಸಹಕಾರ ಇರಬೇಕು ಎಂದು ಅವರು ಒತ್ತಿ ಹೇಳಿದರು.

ಒಂದು ಸಂಘಟನೆಯಿಂದ ಜನಪರ ಕೆಲಸಗಳು ನಡೆಯಬೇಕು ಎಂಬ ಆಶಯದೊಂದಿಗೆ, ಹಿತರಕ್ಷಣಾ ವೇದಿಕೆಯಿಂದ ಹಲವು ಉಪಕ್ರಮಗಳನ್ನು ಘೋಷಿಸಲಾಯಿತು. ಇದರಲ್ಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು, ಕಾರು ಮತ್ತು ಬೈಕ್ ಸವಾರರಿಗೆ ಚಾಲನಾ ಪರವಾನಗಿಗಳನ್ನು ಕೊಡಿಸುವುದು ಸೇರಿವೆ. ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆಧಾರವಾಗುವ ಸುಕನ್ಯಾ ಯೋಜನೆಗೆ, ಪ್ರತಿ ಕುಟುಂಬದ ಹೆಣ್ಣು ಮಗುವಿಗೆ ಮೊದಲ ಕಂತಾಗಿ 1825 ರೂಪಾಯಿ ಸಹಕಾರ ನೀಡಲಾಗುವುದು ಎಂದು ತಿಳಿಸಲಾಯಿತು. ಒಟ್ಟು 157 ವಾಹನ ಸವಾರರಿಗೆ ಚಾಲನಾ ಪರವಾನಗಿ ಕೊಡಿಸಲಾಗುವುದು ಎಂದೂ ಸಹ ಹೇಳಲಾಯಿತು.

ಈ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬಿ.ಸಿ. ಸಂಜೀವಮೂರ್ತಿ ಅವರು ಸಮುದಾಯಕ್ಕೆ ಮನವಿ ಮಾಡಿದರು.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    23 hrs ago
  • ಕ್ರಿಯೇಟರ್ ಸೋನು ತೀವ್ರ ದುಃಖ ವ್ಯಕ್ತಪಡಿಸಿದ್ದು, ತಮ್ಮ ಜೀವನದಲ್ಲಿ ಹಿಂದೆಂದೂ ಇಷ್ಟು ಅತ್ತಿರಲಿಲ್ಲ ಎಂದು ಹೇಳಿದ್ದಾರೆ. ಅವರ ಈ ದುಃಖಕ್ಕೆ ನಿಖರ ಕಾರಣವೇನು ಎಂಬುದು ಮಾತ್ರ ತಿಳಿದುಬಂದಿಲ್ಲ.
    1
    ಕ್ರಿಯೇಟರ್ ಸೋನು ತೀವ್ರ ದುಃಖ ವ್ಯಕ್ತಪಡಿಸಿದ್ದು, ತಮ್ಮ ಜೀವನದಲ್ಲಿ ಹಿಂದೆಂದೂ ಇಷ್ಟು ಅತ್ತಿರಲಿಲ್ಲ ಎಂದು ಹೇಳಿದ್ದಾರೆ. ಅವರ ಈ ದುಃಖಕ್ಕೆ ನಿಖರ ಕಾರಣವೇನು ಎಂಬುದು ಮಾತ್ರ ತಿಳಿದುಬಂದಿಲ್ಲ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    4 hrs ago
  • Post by Chand Pasha
    1
    Post by Chand Pasha
    user_Chand Pasha
    Chand Pasha
    ಕೋಲಾರ, ಕೋಲಾರ, ಕರ್ನಾಟಕ•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.