ಮಂಡ್ಯ ನಗರದಲ್ಲಿ ಗಣೇಶನ ಮೂರ್ತಿ ಅನಾವರಣದ ವೇಳೆ ಆಕಸ್ಮಿಕವಾಗಿ ಶಾಸಕ ರವಿಕುಮಾರ್ ಗಣಿಗ ಹಣೆಗೆ ಏಟು ಮಂಡ್ಯ ನಗರದ ಮರಿಗೌಡ ಬಡಾವಣೆಯಲ್ಲಿ ಗಣೇಶೋತ್ಸವದ ಮೂರ್ತಿ ಅನಾವರಣಗೊಳಿಸುವಾಗ ನಡೆದ ಆಕಸ್ಮಿಕ ಘಟನೆಯಲ್ಲಿ ಶಾಸಕ ರವಿಕುಮಾರ್ ಗೌಡ ಗಣಿಗ ಅವರ ಹಣೆಗೆ ಪೆಟ್ಟಾಗಿದೆ. ಮಂಡ್ಯ ನಗರದಲ್ಲಿ ಗಣೇಶನ ಮೂರ್ತಿ ಅನಾವರಣದ ವೇಳೆ ಆಕಸ್ಮಿಕವಾಗಿ ಶಾಸಕ ರವಿಕುಮಾರ್ ಗಣಿಗ ಹಣೆಗೆ ಏಟು ಮಂಡ್ಯ ನಗರದ ಮರಿಗೌಡ ಬಡಾವಣೆಯಲ್ಲಿ ಗಣೇಶೋತ್ಸವದ ಮೂರ್ತಿ ಅನಾವರಣಗೊಳಿಸುವಾಗ ನಡೆದ ಆಕಸ್ಮಿಕ ಘಟನೆಯಲ್ಲಿ ಶಾಸಕ ರವಿಕುಮಾರ್ ಗೌಡ ಗಣಿಗ ಅವರ ಹಣೆಗೆ ಪೆಟ್ಟಾಗಿದೆ. ಪರದೆ ಎಳೆಯುವಾಗ ಮೊಳೆಯಿದ್ದ ರಿಪೀಸ್ ಪಟ್ಟಿ ಬಿದ್ದು ಗಾಯಗೊಂಡ ಶಾಸಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಹೊಲಿಗೆ ಹಾಕಿ ಚಿಕಿತ್ಸೆ ನೀಡಲಾಗಿದೆ. ಸಣ್ಣ ಗಾಯವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಅವರು, ಭಾನುವಾರದ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬೆಂಗಳೂರಿನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೈಲೈಟ್ಸ್: ಮಂಡ್ಯದ ಮರಿಗೌಡ ಬಡಾವಣೆಯಲ್ಲಿ ಗಣೇಶೋತ್ಸವ ಕಾರ್ಯಕ್ರಮದ ವೇಳೆ ಆಕಸ್ಮಿಕ ಘಟನೆ ಗಣೇಶ ಮೂರ್ತಿ ಅನಾವರಣಗೊಳಿಸುವಾಗ ಪರದೆಯ ರಿಪೀಸ್ ಪಟ್ಟಿ ಬಿದ್ದು ಶಾಸಕರ ಹಣೆಗೆ ಗಾಯ ಸಿಟಿ ಸ್ಕ್ಯಾನ್ ಹಾಗೂ ಹೊಲಿಗೆ ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಬೆಂಗಳೂರಿನ ನಿವಾಸಕ್ಕೆ ತೆರಳಿದ ರವಿಕುಮಾರ್ ಗಣಿಗ ಮಂಡ್ಯ: ಗಣೇಶೋತ್ಸವದ ಹಿನ್ನಲೆಯಲ್ಲಿ ಹೊಸದಾಗಿ ತಂದಿದ್ದ ಗಣೇಶನ ಮೂರ್ತಿಯನ್ನು ರಿವೀಲ್ ಮಾಡುವ ವೇಳೆ ಶಾಸಕ ಪಿ.ರವಿಕುಮಾರ್ ಗೌಡ ಗಣಿಗ ಅವರ ಹಣೆಗೆ ಪೆಟ್ಟಾಗಿರುವ ಘಟನೆ ನಗರದ ಮರಿಗೌಡ ಬಡಾವಣೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ನಗರದ ಮರೀಗೌಡ ಬಡಾವಣೆ 4ನೇ ಕ್ರಾಸ್‌ನಲ್ಲಿ ವಿವೇಕಾನಂದ ಗೆಳೆಯರ ಬಳಗದಿಂದ ಗಣೇಶೋತ್ಸವ ಸಂಘಟಿಸಲಾಗಿತ್ತು. ಹಬ್ಬದ ದಿನದಂದು ಪ್ರತಿಷ್ಠಾಪನೆ ಮಾಡುವ ಸಲುವಾಗಿ ಬೃಹತ್ ಗಾತ್ರದ ಗಣೇಶನ ಮೂರ್ತಿಯನ್ನು ಕ್ರೇನ್ ಮೂಲಕ ತರಲಾಗಿತ್ತು. ವೇಳೆ ಪರದೆಯಿಂದ ಮುಚ್ಚಿದ್ದ ಗಣೇಶನ ಮೂರ್ತಿಯನ್ನು ರಿವೀಲ್ ಮಾಡುವ ಕಾರ್ಯಕ್ರಮವನ್ನು ಬಳಗದ ಸದಸ್ಯರು ಶನಿವಾರ ರಾತ್ರಿ ಹಮ್ಮಿಕೊಂಡು, ಶಾಸಕರನ್ನು ಆಹ್ವಾನಿಸಿದ್ದರು. ಪರದೆ ಸರಿಸುವಾಗ ಹಣೆಗೆ ಬಡಿದ ಪಟ್ಟಿ ಅದರಂತೆ ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ಅವರು ಬೃಹತ್ ಪರದೆಯನ್ನು ಸರಿಸಿ ಗಣೇಶಮೂರ್ತಿ ಅನಾವರಣ ಮಾಡುವಾಗ ರಿಪೀಸ್ ಪಟ್ಟಿ ಬಿದ್ದು ಹಣೆಗೆ ಪೆಟ್ಟಾಗಿದೆ. ಪರದೆ ಜಾರಬಾರದೆಂದು ರಿಪೀಸ್ ಪಟ್ಟಿ ಹೊಡೆದು ಸ್ಕ್ರೀನ್ ಆಳವಡಿಸಲಾಗಿತ್ತು. ಪರದೆಗೆ ಆರು ಇಂಚಿನ ಮೊಳೆ ಸಹ ಹೊಡೆಯಲಾಗಿತ್ತು. ಶಾಸಕರು ಸ್ವಲ್ಪ ಬಲವಾಗಿ ಪರದೆ ಎಳೆದ ಪರಿಣಾಮ ಮೇಲಿಂದ ರಿಪೀಸ್ ಪಟ್ಟಿ ಜಾರಿ ಶಾಸಕರ ಹಣೆ ಮೇಲೆ ಬಿದ್ದಿದೆ. ಈ ಸಂದರ್ಭದಲ್ಲಿ ರಿಪೀಸ್ ಪಟ್ಟಿಯಲ್ಲಿದ್ದ ಮೊಳೆ ಹಣೆಗೆ ತಾಕಿದ ಪರಿಣಾಮ ಶಾಸಕರ ಹಣೆಗೆ ಪೆಟ್ಟು ಬಿದ್ದು, ರಕ್ತ ಚಿಮ್ಮಿದೆ. ಜತೆಗೆ ಅವರ ರಕ್ತದೊತ್ತಡವೂ(ಬಿಪಿ) ಏರುಪೇರಾಗಿದೆ. ತಕ್ಷಣವೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಸಿಸಿ ಚಿಕಿತ್ಸೆ ಕೊಡಲಾಯಿತು. ಆಸ್ಪತ್ರೆಯಲ್ಲಿ ಶಾಸಕ ರವಿಕುಮಾರ್ ಗಣಿಗ ಅವರಿಗೆ ಸಿಟಿ ಸ್ಕ್ಯಾನ್ ಮಾಡಿ, ಬಿಪಿ, ಶುಗರ್ ಇನ್ನಿತರೆ ಪ್ರಾಥಮಿಕ ತಪಾಸಣೆಗಳನ್ನು ಸುಮಾರು ಒಂದು ಗಂಟೆಗಳ ಕಾಲ ನಡೆಸಿ, ಪೆಟ್ಟಾಗಿರುವ ಜಾಗಕ್ಕೆ ಸಣ್ಣ ಪ್ರಮಾಣದ ಹೊಲಿಗೆ ಹಾಕಿದ ನಂತರ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದರು. ಶಾಸಕ ಗಣಿಗ ಸ್ಪಷ್ಟನೆ ಈ ಬಗ್ಗೆ ವಿಜಯ ಕರ್ನಾಟಕದ ಜೊತೆ ಮಾತನಾಡಿರುವ ಶಾಸಕ ರವಿಕುಮಾರ್ ಗಣಿಗ, ``ಆಕಸ್ಮಿಕ ಘಟನೆಯಲ್ಲಿ ಸಣ್ಣ ಪ್ರಮಾಣದ ಗಾಯವಾಗಿದೆ. ವೈದ್ಯರು ನಾಲ್ಕೈದು ದಿನ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ನಾನು ಆರೋಗ್ಯವಾಗಿದ್ದೇನೆ.ಅಭಿಮಾನಿಗಳು ಮತ್ತು ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ. ಗಾಯಗೊಂಡ ಹಿನ್ನೆಲೆಯಲ್ಲಿ ಶಾಸಕರು ಭಾನುವಾರ ನಿಗದಿಯಾಗಿದ್ದ ತಮ್ಮ ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬೆಂಗಳೂರಿನ ತಮ್ಮ ನಿವಾಸಕ್ಕೆ ವಿಶ್ರಾಂತಿ ಪಡೆಯುವ ಸಲುವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ತೆರಳಿದರು. ವಿಷಯ ತಿಳಿಯುತ್ತಿದ್ದಂತೆ ಬೆಂಬಲಿಗರು, ಕಾರ್ಯಕರ್ತರು, ಹಿತೈಷಿಗಳು ಆಸ್ಪತ್ರೆ ಮುಂದೆ ಜಮಾಯಿಸಿದ್ದರು.

- ರೈತರಿಗೆ ಸಮರ್ಪಕ ವಿದ್ಯುತ್ ನೀಡಬೇಕೆಂದು ಹಿಡಕಲ್ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ಕುಡಚಿ ಮಾಜಿ ಶಾಸಕ ಪಿ. ರಾಜೀವ್1
- ಗೋಕಾಕದಲ್ಲಿ ಗಣೇಶ ಹಬ್ಬ ಶಾಂತಿಯುತ ಸಾಗಲು, ಪೊಲೀಸರಿಂದ ಖಡಕ್ ರೂಟ ಮಾರ್ಚ.. ಗೋಕಾಕ ನಗರದಲ್ಲಿ ಗಣೇಶ ಹಬ್ಬ ಶಾಂತಿಯುತ ಸಾಗಲು ಪೊಲೀಸ ಇಲಾಖೆಯಿಂದ ನಗರದಲ್ಲಿ ಪೊಲೀಸ್ ಅಧಿಕಾರಿಗಳು ಶಿಬ್ಬಂದಿಗಳೊಂದಿಗೆ ಮುಖ್ಯ ಬಿದಿಗಳಲ್ಲಿ ಸುತ್ತಾಡಿ ರೂಟ್ ಮಾರ್ಚ್ ಮಾಡುವದರ ಮೂಲಕ ಶಾಂತಿ ಕದಡದಂತೆ ಸಾಯಿಲ್ ಸೂಚಿಸಿದರು.1
- ಮುಧೋಳ ನಗರದಲ್ಲಿ ಗಣೇಶೋತ್ಸವ ಸಂಭ್ರಮದಲ್ಲಿ ಮಿಂದೆದ್ದ ಅಸಂಖ್ಯ ಭಕ್ತಗಣ ಮುಧೋಳ : ಗಣೇಶೋತ್ಸವ ಹಿನ್ನೆಲೆ ನಗರದಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಅಸಂಖ್ಯ ಭಕ್ತಗಣದ ಮಧ್ಯೆ ಅದ್ದೂರಿಯಾಗಿ ಜರುಗಿತು. ನಗರದ ಶಿವಾಜಿ ವೃತ್ತ, ಗಾಂಧಿ ವೃತ್ತ, ಜೈ ಭಾರತ ಸರ್ಕಲ್, ಜನತಾ ಪ್ಲಾಟ್ ಸೇರಿದಂತೆ ಹಲವಾರು ಭಾಗದಲ್ಲಿ ಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿಗಳ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಪಂಢರಪುರದ ದಿಂಡೆ ರೂಪಕ, ಮಹಾರಾಷ್ಟ್ರದ ಡೋಲ್ ತಾಷ್, ಡಿಜೆ, ಡಾಲ್ಬಿ ಸದ್ದಿಗೆ ಸಾವಿರಾರು ಯುವಕರು ಹೆಜ್ಜೆ ಹಾಕಿದರು. ಮಹಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜೈ ಭಾರತ ವೃತ್ತದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಜನರು ನೆರದಿದ್ದರು. ಭಕ್ತಿಭಾವದಿಂದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು.4
- ಗಣಪತಿ ಮೂರ್ತಿ ಹೊತ್ತು ನಡೆದ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್! ಭಾವೈಕ್ಯತೆಗೆ ಮಾದರಿ ನಡೆ ಗಣಪತಿ ಮೂರ್ತಿ ಹೊತ್ತು ನಡೆದ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್! ಭಾವೈಕ್ಯತೆಗೆ ಮಾದರಿ ನಡೆ1
- ಮಳೆ ಕೊರತೆ ನೆಪದಲ್ಲಿ ಕಾಂಗ್ರೆಸ್ ಸರ್ಕಾರ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿ ಅನ್ನದಾತರಿಗೆ ದ್ರೋಹ ಮಳೆ ಕೊರತೆ ನೆಪದಲ್ಲಿ ಕಾಂಗ್ರೆಸ್ ಸರ್ಕಾರ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿ ಅನ್ನದಾತರಿಗೆ ದ್ರೋಹ ಬಗೆಯುತ್ತಿದೆ. ಭೀಕರ ಬರ ಹಾಗೂ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡದ ಪರಿಣಾಮ ಬೆಳೆದ ಬೆಳೆಗಳು ಜಮೀನಿನಲ್ಲಿಯೇ ಒಣಗಿ ಹೋಗಿವೆ. ರಿಯಲ್ ಎಸ್ಟೇಟ್ ಸಿಎಂ ಡಿಕೆ ಶಿವಕುಮಾರ್ ಅವರೇ, ಸಮರ್ಪಕ ವಿದ್ಯುತ್, ಪರಿಹಾರವಿಲ್ಲದೆ ನಾಡಿನ ಅನ್ನದಾತರು ಕಂಗಾಲಾಗಿದ್ದಾರೆ, ಕೂಡಲೇ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಿ ಹಾಗೇ ಬರ ಪರಿಹಾರ ವಿತರಿಸಲು ಕ್ರಮ ವಹಿಸಿ.1
- ಖಾನಾಪುರ್ ತಾಲೂಕಿನ ಕಕ್ಕೇರಿ ಗ್ರಾಮದ ಸಿದ್ಧಾರೂಢ ಗಜಾನನನೋತ್ಸವ ಮಂಡಲದವರು ಸಾರ್ವಜನಿಕ ಗಣೇಶನ ಮೂರ್ತಿಯನ್ನು ಮೆರವಣಿಗೆ ಮೂಲಕ ಪ್ರತಿಷ್ಠಾಪಿಸಲು ತೆಗೆದುಕೊಂಡು ಹೋಗುವ ದೃಶ್ಯ.1
- ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಮಹಾಪೂಜೆ ಮತ್ತು ಮಹಾಪ್ರಸಾದ. ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಮಹಾಪೂಜೆ ಮತ್ತು ಮಹಾಪ್ರಸಾದ. ಗೋಕಾಕ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮುಂಜಾನೆ 10 ಗಂಟೆಗೆ ಪಿಎಸ್ಐ ಕೆ, ವಾಲಿಕಾರ ದಂಪತಿಗಳು ಗಣೇಶನಿಗೆ ಪೂಜೆ ಸಲ್ಲಿಸಿ ಸರ್ವರಿಗೂ ಶ್ರೇಯಸ್ಸು ಬಯಸಿ ಗಣೇಶ ಸರ್ವ ಸಿಬ್ಬಂದಿಗಳಿಗೆ ಹಬ್ಬದ ಶುಭಾಶಯ ತಿಳಿಸಿದರು. ಠಾಣೆಯಲ್ಲಿ ನಡೆದ ಗಣೇಶ ಮತ್ತು ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಸರ್ವ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಪ್ರತಿವರ್ಷದಂತೆ ಈ ವರ್ಷವೂ ಠಾಣೆಯ ಹಿಂಭಾಗದ ಆವರಣದಲ್ಲಿ ಸಾರ್ವಜನಿಕರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಇವತ್ತಿನ ಮಹಾಪ್ರಸಾದದ ಗ್ರಾಮೀಣ ಬಾಗದ ವಿವಿಧ ಹಳ್ಳಿಗಳಿಂದ ಜನರು ಆಗಮಿಸಿ ಮಹಾಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗೋಕಾಕ ತಾಲೂಕ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಇವತ್ತಿನ ಗಣೇಶನ ಮಹಾಪ್ರಸಾದವನ್ನು ಸವಿದು ದೇವರ ಕೃಪೆಗೆ ಪಾತ್ರರಾದರು.1
- ಖಾನಾಪೂರ ತಾಲೂಕಿನ ಪಂಚಾಯತಿಗೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹೀರೆಮುನ್ನೋಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಗ್ರಾಮ ಪಂಚಾಯಿತಿಯಲ್ಲಿ ಇದ್ದ ಊರಿನ ಎಲ್ಲ ದಾಖಲೆಗಳು ಸುಟ್ಟು ಕರಕಲ ! .1