ಶಿವಮೊಗ್ಗ-ಬಸ್ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗನ್ನೇ ಕದ್ದ ಕಳ್ಳರು! ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ದಲ್ಲಿ ಬಸ್ ಹತ್ತುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗನ್ನೇ ಕಳ್ಳರು ಕಸಿದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಘಟನೆಯಲ್ಲಿ ವ್ಯಾನಿಟಿ ಬ್ಯಾಗಿನಲ್ಲಿದ್ದ 2.86 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಗಾಂಧಿ ಬಜಾರ್ ನಿವಾಸಿ ಜಯಲಕ್ಷ್ಮಿ (53) ಅವರು ತಮ್ಮ ಮಗನೊಂದಿಗೆ ಸಾಗರದಲ್ಲಿ ರುವ ಸಂಬಂಧಿಕರ ಮದುವೆಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಸಾಗರಕ್ಕೆ ತೆರಳುವ ಬಸ್ ಬಂದಾಗ ಹತ್ತಲು ಹೋದ ವೇಳೆ ಜನದಟ್ಟಣೆ ಇತ್ತು. ಈ ಸಂದರ್ಭ ಅವರು ತಮ್ಮ ಎಡತೋಳಿಗೆ ಹಾಕಿಕೊಂಡಿದ್ದ ವ್ಯಾನಿಟಿ ಬ್ಯಾಗ್ ಅನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವ್ಯಾನಿಟಿ ಬ್ಯಾಗ್‌ನಲ್ಲಿ ಸುಮಾರು 1,55,000 ಬೆಲೆಯ 50 ಗ್ರಾಂ ತೂಕದ ಹವಳದ ಸರ ₹78,000 ಬೆಲೆಯ 20 ಗ್ರಾಂನ ಮಣಿಸರ ಮತ್ತು ಡಾಲರ್, 22,800 ಮೌಲ್ಯದ 6 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು ಚಿನ್ನದ ಕಿವಿ ಓಲೆ, ಕೈ ಗಡಿಯಾರ ಹಾಗೂ 1,000 ನಗದು ಇತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಟ್ಟೂರು ಗ್ರಾಮದಲ್ಲಿ 30 ವರ್ಷಗಳ ಬಳಿಕ ಸಾಂಪ್ರದಾಯಿಕ ಕೆರೆ ಬೇಟೆ ನಡೆಸಲಾಯಿತು. ಗ್ರಾಮದ ಯುವಕರು ದುಗ್ಗಮ್ಮ ಜಾತ್ರೆಗಾಗಿ ಧನ ಸಂಗ್ರಹಿಸಲು ನೂರಾರು ಜನರ ಭಾಗವಹಿಸುವಿಕೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದರು. ಹಿಂದೆ ಜಗಳದಿಂದ ಸ್ಥಗಿತಗೊಂಡಿದ್ದ ಈ ಬೇಟೆ ಈ ಬಾರಿ ಶಾಂತಿಯುತವಾಗಿ ನಡೆಯಿತು.1
- ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡುವ ಸುಲಭ ವಿಧಾನ ಇಲ್ಲಿದೆ. ಈ ದಿಢೀರ್ ಉಪ್ಪಿನಕಾಯಿಯನ್ನು ಮಾಡಿದ ತಕ್ಷಣವೇ ಅಥವಾ ಒಂದೆರಡು ಗಂಟೆಗಳ ನಂತರ ಅನ್ನ, ದೋಸೆ ಮತ್ತು ಚಪಾತಿ ಜೊತೆ ಸವಿಯಬಹುದು. ಮನೆಯಲ್ಲಿ ಕೇವಲ 2 ಮಾವಿನಕಾಯಿಗಳಿದ್ದರೆ, ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು.1
- ವಿಧವಶರಾದ ಸಚಿವ ಡಿ.ಸುಧಾಕರ್ ಅವರ ಅಂತ್ಯಕ್ರಿಯೆ ನಡೆಯುವ ಸ್ಥಳ ಯಾವುದು ಗೊತ್ತೆ? ಸಚಿವ ಡಿ. ಸುಧಾಕರ್ ಅವರ ಅಂತ್ಯ ಸಂಸ್ಕಾರ ಸ್ಥಳ ಬದಲು - ಪಾವಗಡ ರಸ್ತೆಯ ಮುಕ್ತಿಧಾಮದಲ್ಲಿ ಅಂತಿಮ ವಿಧಿವಿಧಾನ..!! ಚಿತ್ರದುರ್ಗ: ಮೊದಲಿಗೆ ಸುಧಾಕರ್ ಅವರ ಸೆಟಲ್ ಕೋರ್ಟ್‌ನಲ್ಲಿ ಅಂತ್ಯ ಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ ಬಳಿಕ ಸ್ಥಳ ಬದಲಾವಣೆ ಮಾಡಲಾಗಿದ್ದು, ಪಾವಗಡ ರಸ್ತೆಯ ಮುಕ್ತಿಧಾಮದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲು ತೀರ್ಮಾನಿಸಲಾಗಿದೆ. ಮುಕ್ತಿಧಾಮದಲ್ಲಿ ಈಗಾಗಲೇ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು, ಜೈನ ಸಂಪ್ರದಾಯದಂತೆ ವಿಧಿವಿಧಾನಗಳು ನಡೆಯಲಿವೆ. ಸುಧಾಕರ್ ಅವರ ಪುತ್ರ ಸುಹಾಸ್ ಅಗ್ನಿ ಸ್ಪರ್ಶ ನೆರವೇರಿಸಲಿದ್ದು, ಸಾವಿರಾರು ಅಭಿಮಾನಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಡಿ ಸುಧಾಕರ್ ಪಂಚಭೂತಗಳಲ್ಲಿ ಲೀನರಾಗಲಿದ್ದಾರೆ.1
- ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ, ಮೊಬೈಲ್‌ನಲ್ಲಿದ್ದ ನಾದಿನಿ ಫೋಟೋ ಕುರಿತು ಪ್ರಶ್ನಿಸಿದ್ದಕ್ಕೆ ಪತಿಯೊಬ್ಬ ತನ್ನ ಪತ್ನಿ ಸೇರಿದಂತೆ ನಾಲ್ವರ ಮೇಲೆ ಆಸಿಡ್ ಎರಚಿದ್ದಾನೆ. ಈ ಭೀಕರ ದಾಳಿಯಲ್ಲಿ ಒಂದು ಹಸುಗೂಸು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದು, ಮಹಿಳಾ ಸಂಘಟನೆಗಳು ಕಠಿಣ ಕ್ರಮಕ್ಕೆ ಆಗ್ರಹಿಸಿವೆ.1
- ಚಿತ್ರದುರ್ಗದಲ್ಲಿ ಬೆಳೆ ವಿಮೆ ಹಣ ನೀಡದ ಸರ್ಕಾರದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ನ್ಯಾಯಕ್ಕಾಗಿ ಆಗ್ರಹಿಸಿದರು. ಶೇಂಗಾ ಮತ್ತು ಈರುಳ್ಳಿ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ಇದು ದೊಡ್ಡ ಹೊಡೆತವಾಗಿದೆ.1
- *ಶಿಗ್ಗಾವಿ ತಾಲೂಕಿನಲ್ಲಿ ವರುಣನ ಆಗಮನ, ಬಿಸಿಲಿನಿಂದ ಬೇಸತ್ತ ಜನತೆಗೆ ತಂಪೆರೆದ ಮಳೆರಾಯ* ಶಿಗ್ಗಾವಿ ತಾಲೂಕಿನಲ್ಲಿ ಕೆಲ ಕಡೆಗಳಲ್ಲಿ ಮಳೆಯಾಗಿ ಬೇಸಿಗೆಯಿಂದ ಬೇಸತ್ತ ಜನರಿಗೆ ವರುಣದೇವ ತಂಪೆರೆದಿದ್ದಾನೆ. ಶಿಗ್ಗಾವಿ ತಾಲೂಕಿನ ಹಿರೇಬೆಂಡಿಗೇರಿ, ಹಿರೇಮಣಕಟ್ಟಿ, ಮುಗಳಿ ಸೇರಿದಂತೆ ಕೆಲ ಗ್ರಾಮಗಳಿಗೆ ಮಳೆರಾಯನ ಆಗಮನವಾಗಿ ತಂಪು ಎರೆದಿದ್ದಾನೆ..3
- ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಮೇ 10ರಂದು ತಾಯಿ ದಿನವನ್ನು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಸೇರಿದಂತೆ ಹಿರಿಯ ಸಾಹಿತಿಗಳು, ಪತ್ರಕರ್ತರು ಮತ್ತು ಸಾರ್ವಜನಿಕರು ತಮ್ಮ ತಾಯಂದಿರನ್ನು ಗೌರವಿಸಿ, ಸಿಹಿ ಹಂಚಿ ವಂದಿಸಿದರು. ಈ ದಿನ ತಾಯಿಯ ಆದರ್ಶ ಗುಣಗಳನ್ನು ಸ್ಮರಿಸಿ, ಪೋಷಕರನ್ನು ಪೂಜಿಸುವುದರ ಮಹತ್ವವನ್ನು ಸಾರಲಾಯಿತು.4
- ಹೊಸನಗರ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ, ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ನಿಮ್ಮ ಮನೆ ಮತ್ತು ಕುಟುಂಬದ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.3