ಗಣೇಶೋತ್ಸವ ಸಂಭ್ರಮ ದೇಶಾದ್ಯಂತ ಜೋರಾಗಿರುವ ಹೊತ್ತಲ್ಲೇ, ತಮಿಳುನಾಡಿನ ಬಿರಿಯಾನಿ ಅದು ನಮ್ಮ್ ದೇಶ ಅಂದ್ರೆ... 😡 ಅಂಗಡಿಯೊಂದರ ಜಾಹೀರಾತು ವಿವಾದಕ್ಕೆ ಕಾರಣವಾಗಿದೆ. ಅಂಗಡಿ ಮುಂದೆ ಹಾಕಿದ್ದ ಬ್ಯಾನರ್‌ನಲ್ಲಿ ಮೊದಕ ಹಿಡಿಯುವ ಗಣಪನ ಕೈಯಲ್ಲಿ ಬಿರಿಯಾನಿ ಅಡುಗೆ ಮಾಡ್ತಿರುವಂತೆ ತೋರಿಸಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ತಿರುನೆಲ್ವೇಲಿ ಅಂಗಡಿ ಮುಂದೆ ಹಾಕಿದ್ದ ಜಾಹೀರಾತಿನಲ್ಲಿ 'ಅರೇಬಿಕ್ ಸ್ಟೈಲ್ 65 ಬಿರಿಯಾನಿ - ರೂ.99' ಅಂತ ಬರೆಯಲಾಗಿತ್ತು. ಜೊತೆಗೆ ಗಣೇಶ ಬಿರಿಯಾನಿ ಅಡುಗೆ ಮಾಡ್ತಿರುವ ಚಿತ್ರವನ್ನೂ ಹಾಕಲಾಗಿತ್ತು. ಇದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಅಂತ ಆರೋಪಿಸಿ ದೂರು ನೀಡಲಾಗಿದೆ. ದೂರು ಬೆನ್ನಲ್ಲೇ ಅಂಗಡಿ ಮಾಲೀಕ ಅರೆಸ್ಟ್ ದೂರು ಬಂದ ಬೆನ್ನಲ್ಲೇ ಪೊಲೀಸರು 30 ವರ್ಷದ ಅಂಗಡಿ ಮಾಲೀಕ ಜಯಂತ್‌ನನ್ನು ಭಾನುವಾರ ಅರೆಸ್ಟ್ ಮಾಡಿದ್ದಾರೆ. ಗಣೇಶನ ಚಿತ್ರ ಅವಮಾನಕರವಾಗಿದೆ ಎಂದು 42 ವರ್ಷದ ಸೆಲ್ವರಾಜ್ ದೂರು ನೀಡಿದ್ದರು. ಇದೀಗ ಬ್ಯಾನರ್ ಯಾರು ಮಾಡಿಸಿದ್ದು, ಯಾವಾಗ ಹಾಕಲಾಗಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಣೇಶೋತ್ಸವದ ನಡುವೆಯೇ ವಿವಾದ ಭಾದ್ರಪದ ಶುಕ್ಲ ಪಕ್ಷದ ಚತುರ್ಥಿ ದಿನ ಗಣೇಶ ಚತುರ್ಥಿ ಆಚರಿಸಲಾಗುತ್ತೆ. ದೇಶಾದ್ಯಂತ ಭಕ್ತರು ಮನೆ ಹಾಗೂ ಸಾರ್ವಜನಿಕ ಮಂಟಪಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ, ಪ್ರಾರ್ಥನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹಬ್ಬ ಆಚರಿಸ್ತಾರೆ. ಇಂತಹ ಸಂದರ್ಭದಲ್ಲಿ ಬಿರಿಯಾನಿ ಜಾಹೀರಾತಿನಲ್ಲಿ ಗಣೇಶನ ಚಿತ್ರ ಬಳಸಿರೋದು ವಿವಾದಕ್ಕೆ ಕಾರಣವಾಗಿದ್ದು, ಘಟನೆ ಇದೀಗ ಸ್ಥಳೀಯವಾಗಿ ಭಾರೀ ಚರ್ಚೆಯಾಗ್ತಿದೆ.
ಗಣೇಶೋತ್ಸವ ಸಂಭ್ರಮ ದೇಶಾದ್ಯಂತ ಜೋರಾಗಿರುವ ಹೊತ್ತಲ್ಲೇ, ತಮಿಳುನಾಡಿನ ಬಿರಿಯಾನಿ ಅದು ನಮ್ಮ್ ದೇಶ ಅಂದ್ರೆ... 😡 ಅಂಗಡಿಯೊಂದರ ಜಾಹೀರಾತು ವಿವಾದಕ್ಕೆ ಕಾರಣವಾಗಿದೆ. ಅಂಗಡಿ ಮುಂದೆ ಹಾಕಿದ್ದ ಬ್ಯಾನರ್‌ನಲ್ಲಿ ಮೊದಕ ಹಿಡಿಯುವ ಗಣಪನ ಕೈಯಲ್ಲಿ ಬಿರಿಯಾನಿ ಅಡುಗೆ ಮಾಡ್ತಿರುವಂತೆ ತೋರಿಸಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ತಿರುನೆಲ್ವೇಲಿ ಅಂಗಡಿ ಮುಂದೆ ಹಾಕಿದ್ದ ಜಾಹೀರಾತಿನಲ್ಲಿ 'ಅರೇಬಿಕ್ ಸ್ಟೈಲ್ 65 ಬಿರಿಯಾನಿ - ರೂ.99' ಅಂತ ಬರೆಯಲಾಗಿತ್ತು. ಜೊತೆಗೆ ಗಣೇಶ ಬಿರಿಯಾನಿ ಅಡುಗೆ ಮಾಡ್ತಿರುವ ಚಿತ್ರವನ್ನೂ ಹಾಕಲಾಗಿತ್ತು. ಇದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಅಂತ ಆರೋಪಿಸಿ ದೂರು ನೀಡಲಾಗಿದೆ. ದೂರು ಬೆನ್ನಲ್ಲೇ ಅಂಗಡಿ ಮಾಲೀಕ ಅರೆಸ್ಟ್ ದೂರು ಬಂದ ಬೆನ್ನಲ್ಲೇ ಪೊಲೀಸರು 30 ವರ್ಷದ ಅಂಗಡಿ ಮಾಲೀಕ ಜಯಂತ್‌ನನ್ನು ಭಾನುವಾರ ಅರೆಸ್ಟ್ ಮಾಡಿದ್ದಾರೆ. ಗಣೇಶನ ಚಿತ್ರ ಅವಮಾನಕರವಾಗಿದೆ ಎಂದು 42 ವರ್ಷದ ಸೆಲ್ವರಾಜ್ ದೂರು ನೀಡಿದ್ದರು. ಇದೀಗ ಬ್ಯಾನರ್ ಯಾರು ಮಾಡಿಸಿದ್ದು, ಯಾವಾಗ ಹಾಕಲಾಗಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಣೇಶೋತ್ಸವದ ನಡುವೆಯೇ ವಿವಾದ ಭಾದ್ರಪದ ಶುಕ್ಲ ಪಕ್ಷದ ಚತುರ್ಥಿ ದಿನ ಗಣೇಶ ಚತುರ್ಥಿ ಆಚರಿಸಲಾಗುತ್ತೆ. ದೇಶಾದ್ಯಂತ ಭಕ್ತರು ಮನೆ ಹಾಗೂ ಸಾರ್ವಜನಿಕ ಮಂಟಪಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ, ಪ್ರಾರ್ಥನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹಬ್ಬ ಆಚರಿಸ್ತಾರೆ. ಇಂತಹ ಸಂದರ್ಭದಲ್ಲಿ ಬಿರಿಯಾನಿ ಜಾಹೀರಾತಿನಲ್ಲಿ ಗಣೇಶನ ಚಿತ್ರ ಬಳಸಿರೋದು ವಿವಾದಕ್ಕೆ ಕಾರಣವಾಗಿದ್ದು, ಘಟನೆ ಇದೀಗ ಸ್ಥಳೀಯವಾಗಿ ಭಾರೀ ಚರ್ಚೆಯಾಗ್ತಿದೆ.
- ಕಾಳಗಿಯಲ್ಲಿ ಬರಗಾಲ ಘೋಷಣೆಗೆ ಆಗ್ರಹಿಸಿ ಬಿಜೆಪಿ,ಯಿಂದ ಪ್ರತಿಭಟನೆ ಕಾಳಗಿ : ಪಟ್ಟಣದಲ್ಲಿ ಕಾಳಗಿ ಹಾಗೂ ಚಿಂಚೋಳಿ ತಾಲೂಕುಗಳನ್ನು ಬರಗಾಲ ಘೋಷಣೆ ಮಾಡುವಂತೆ ಶಾಸಕ ಡಾ ಅವಿನಾಶ್ ಜಾಧವ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಗೂ ರೈತರು ಬೃಹತ್ ಪ್ರತಿಭಟನೆ ಮಾಡಿದರು. ಕಾಳಗಿ ಹಾಗೂ ಚಿಂಚೋಳಿ ತಾಲೂಕಿನಲ್ಲಿ ಮಳೆ ಇಲ್ಲದೆ ರೈತರ ಬಿತ್ತಿದ ಬೆಳೆಗಳು ಒಣಗಿ ಹೋಗಿ ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಆದರೂ ಕಾಂಗ್ರೆಸ್ ಸರ್ಕಾರ ಮಾತ್ರ ಚಿಂಚೋಳಿ- ಕಾಳಗಿ ತಾಲೂಕಿನ ರೈತರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.1
- ಕಲಬುರಗಿ: ಬಿಜೆಪಿ ಅವರು ವಂದೇ ಮಾತರಂ ನೋಡದೆ ಪೂರ್ತಿ ಹಾಡಿದ್ರೆ ರಾಜಿನಾಮೆ ನೀಡ್ತೆನೆ- ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ-B.Y ವಿಜಯೇಂದ್ರ , R. ಅಶೋಕ್ ವಂದೇ ಮಾತರಂ ನೋಡದೆ ಪೂರ್ತಿ ಹಾಡಿದ್ರೆ ನಾನು ರಾಜೀನಾಮೆ ನೀಡ್ತೆನೆ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗೆ ಸವಾಲು ಹಾಕಿದ್ದಾರೆ. ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಿಯಾಂಕ್ ಮಾತನಾಡಿ ವಂದೇ ಮಾತರಂ ಎರಡು ಚರಣ ಹಾಡಲು ಸರ್ಕಾರ ನಿರ್ಣಯ ಮಾಡಿತು, ಸರ್ಕಾರದ ನಿರ್ಧಾರ ಖಂಡಿಸಿ ಬಿಜೆಪಿ ಹೋರಾಟಕ್ಕೆ ಸಿದ್ದತೆ ನಡೆಸುತ್ತಿದೆ. ಬಿಜೆಪಿಯವರಿಗೆ ಹೋರಾಟ ಮಾಡಲು ಯಾವ ವಿಷಯ ಇಲ್ಲ ಹಾಗಾಗಿ ವಂದೇ ಮಾತರಂ ಗೀತೆಯ ಬಗ್ಗೆ ಹೋರಾಟ ಮಾಡಲು ಹೊರಟಿದ್ದಾರೆ. ವಿಜಯೇಂದ್ರ ಹಾಗೂ ಅಶೋಕ್ ಅವರು ಯಾವುದೇ ಪೇಪರ್, ಟೆಲಿ ಪ್ರಾಂಪ್ಟರ್ ಬಳಸಿಕೊಳ್ಳದೆ ನಾಲ್ಕು ಚರಣ ತಕ್ಷಣ ಹಾಡಿ ತೋರಿಸಲಿ. ಹಾಡಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದುರು ಇನ್ನು ಬಿಜೆಪಿ ಶಾಸಕರಿಗೂ ಕೂಡ ವಿಧಾನ ಸಭೆಯಲ್ಲಿ ಪ್ರತ್ಯೇಕವಾಗಿ ವಂದೇ ಮಾತರಂ ಹಾಡಲು ಅನುವು ಮಾಡಿಕೊಂಡುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇನೆ. ಅವೆರಲ್ಲರೂ ಕೂಡ ಕಂಠ ಪಾಠ ಮಾಡಿ ಹಾಡಲಿ ಎಂದ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು1
- ಚಿಂಚೋಳಿ & ಕಾಳಗಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು ಚಿಂಚೋಳಿ : ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ಚಿಂಚೋಳಿ ಮಂಡಲ ವತಿಯಿಂದ ಕಾಳಗಿ ಪಟ್ಟಣದ ಮುಖ್ಯ ಬಜಾರ್ ಇಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಚಿಂಚೋಳಿ- ಕಲಬುರಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯನ್ನು ಉದ್ದೇಶಿಸಿ ಶಾಸಕರಾದ ಡಾಕ್ಟರ್ ಅವಿನಾಶ್ ಜಾದವ್ ಅವರು ಮಾತನಾಡಿ ಮಳೆ ಕೈಕೊಟ್ಟು ಬೆಳೆಗಳು ಒಣಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ.ಕಾಳಗಿ ಹಾಗೂ ಚಿಂಚೋಳಿ ತಾಲೂಕುಗಳನ್ನು ತಕ್ಷಣ ಬರಪೀಡಿತ ತಾಲೂಕುಗಳೆಂದು ಘೋಷಿಸಿ ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಮಳೆಯ ಅಭಾವದಿಂದ ಜಮೀನುಗಳಲ್ಲಿ ಬೆಳೆಗಳು ಒಣಗುತ್ತಿದ್ದು, ರೈತರು ಹಾಕಿರುವ ಬಂಡವಾಳವೇ ಮರಳದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಶರಣಪ್ಪ ತಳವಾರ.ಮಂಡಲ ಅಧ್ಯಕ್ಷ ಕುಮಾರ ಚೇಂಗಟ್ಟಿ. ಪ್ರಶಾಂತ ಕದಮ್.ರೇವಣಸಿದ್ಧ ಬಡಾ.ರಾಜಶೇಖರ್ ಗುಡ್ಡದಾ.ಸದ್ದಾಮ್ ವಜೀರಗಾವ.ಜಗದೀಶ ಪಾಟೀಲ.ಮಲ್ಲಿನಾಥ್ ಪಾಟೀಲ.ಭೀಮರಾಯ ಮಲಘಣ. ಶಿವರಾಜ ಪಾಟೀಲ. ಜಗನಾಥ ತೇಲಿ.ಶಶಿಕಲಾ ಟೆಂಗಳಿ.ಮಲ್ಲು ಮರಗುತ್ತಿ.ಗೋಪಾಲರಾವ ಕಟೀಮನಿ.ಸೇರಿದಂತೆ ಅನೇಕರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.4
- ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟಿ ಹಾಗೂ ದೇವರಹಿಪ್ಪರಗಿ ತಾಲೂಕನ್ನು ಒಳಗೊಂಡು ಇಡೀ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಮಾಡಲು ತೀವ್ರವಾದ ಹೋರಾಟವನ್ನು ನಡೆಸಲು ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ನಡಹಳ್ಳಿ ಅವರ ನೇತೃತ್ವದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ರೈತ ಮುಖಂಡರ ಪೂರ್ವಭಾವಿ ಸಭೆ ನಡೆಯಿತು. ತಾಳಿಕೋಟಿ ವರದಿ ತಾಳಿಕೋಟೆಯಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹೋರಾಟದ ಕುರಿತು ಪೂರ್ವಭಾವಿ ಸಭೆ. ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ ಎಸ್ ಪಾಟೀಲ ನಡಹಳ್ಳಿ, ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ಸೋಮನಗೌಡ ಪಾಟೀಲ ಅವರು ಮಾತನಾಡಿ ಸರ್ಕಾರದ ನಿರ್ಲಕ್ಷ ಕುರಿತು ಖಂಡಿಸಿ ಸಪ್ಟಂಬರ್ 17 ರಿಂದ ಮೂರು ದಿನಗಳ ಕಾಲ ತಾಳಿಕೋಟಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಧರಣೀ ಸತ್ಯಾಗ್ರಹ ನಡೆಸಿ ಸಪ್ಟೆಂಬರ್ 21ರಂದು ತಾಳಿಕೋಟಿ ಪಟ್ಟಣ ಸಂಪೂರ್ಣ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿ ಸದರಿ ಹೋರಾಟಕ್ಕೆ ಎಲ್ಲ ಗ್ರಾಮಗಳ ರೈತರು ಸಹಕಾರ ನೀಡಬೇಕೆಂದು ಕೇಳಿಕೊಂಡರು. ಪೂರ್ವಭಾವಿ ಸಭೆಯಲ್ಲಿ ಮುಖಂಡರಾದ ಮುನ್ನಾದಣಿ ನಾಡಗೌಡ, ಬಸನಗೌಡ ಮಾಡಗಿ, ಮಡುಸೌಕಾರ ಬಿರಾದಾರ, ಸಿದ್ದು ಬುಳ್ಳಾ, ಬಸನಗೌಡ ವಣಿಕ್ಯಾಳ ಕಾರ್ಯಕ್ರಮದ ಯಶಸ್ವಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಭಾಗವಹಿಸಿದ ವಿವಿಧ ಗ್ರಾಮಗಳ ರೈತರ ಪ್ರತಿನಿಧಿಗಳು, ತಾಳಿಕೋಟಿ ಪಟ್ಟಣದ ಗಣ್ಯ ವರ್ತಕರು, ವಿವಿಧ ಪಕ್ಷಗಳ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ಧರಣಿಯ ಯಶಸ್ವಿಗೆ ಎಲ್ಲಾ ರೀತಿಯಿಂದಲೂ ಸಹಕರಿಸು ದಾಗಿ ತಿಳಿಸಿದರು.1
- ಲೋಕಕಲ್ಯಾಣಕ್ಕಾಗಿ 41 ದಿನಗಳ ಮೌನ ಅನುಷ್ಠಾನ ಶ್ರೀ ಈರಯ್ಯ ಸ್ವಾಮಿಗಳ ಧಾರ್ಮಿಕ ಸಂಕಲ್ಪ.! ಲೋಕಕಲ್ಯಾಣಕ್ಕಾಗಿ 41 ದಿನಗಳ ಮೌನ ಅನುಷ್ಠಾನ ಶ್ರೀ ಈರಯ್ಯ ಸ್ವಾಮಿಗಳ ಧಾರ್ಮಿಕ ಸಂಕಲ್ಪ.!1
- #ಭಾರತೀಯ ಜನತಾ ಪಕ್ಷ #ಅಫಜಲಪುರ ಮಂಡಲ ವತಿಯಿಂದ ಗೊಬ್ಬುರ (ಬಿ) ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ.1
- ಕಲಬುರಗಿ:ನಾನು ಕೇವಲ ನಾಲ್ಕು ಸೆಲ್ ನ ಗೃಹ ಮಂತ್ರಿ ಅಲ್ಲ-ಹೆಚ್ ಡಿಕೆ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀರುಗೇಟು ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದು ಬಿಡದಿ ವಿಚಾರ ಡೈವಟ್೯ ಮಾಡೋಕೆ ಜೈಲು ರೈಡ್ ಮಾಡಿಲ್ಲ ನಾನು ಕೇವಲ ನಾಲ್ಕು ಸೆಲ್ ನ ಗೃಹ ಮಂತ್ರಿ ಅಲ್ಲ ಎಂದು ಹೆಚ್ ಡಿಕೆ ಹೇಳಿಕೆಗೆ ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀರುಗೇಟು ನೀಡಿದ್ದಾರೆ. ರಾಜ್ಯದ ಹಲವು ಜೈಲುಗಳ ಮೇಲೆ ರೇಡ್ ಮಾಡಿದ್ದೆವೆ. ಅದನ್ನ ನಾವು ಮಾಡಬಾರದ? ಪ್ರಜ್ವಲ್ ನಿರಂತರವಾಗಿ ಪೋನ್ ನಲ್ಲಿ ಮಾತನಾಡಿದ್ದು ಯಾರಿಗೆ? ಇಷ್ಟೆಲ್ಲಾ ಮಾತನಾಡೋರು ಯಾಕೆ ಮಾಹಿತಿ ನೀಡಿಲ್ಲ. ಕುಟುಂಬದವರ ಜೊತೆ ತಾನೇ ಆತ ಮಾತನಾಡಿದ್ದು. ಹಾಸನದಲ್ಲಿ ಏನಾಗಿತ್ತು ಅದರ ಬಗ್ಗೆ ಒಂದು ಭಾರಿಯಾದ್ರು ಮಾತನಾಡಿದ್ದಾರಾ..? ಮೊದಲು ಆ ಕುಟುಂಬಗಳಿಗೆ ಕ್ಷೆಮೆ ಕೇಳಬೇಕು. ಆ ನೊಂದ ಹೆಣ್ಮಕ್ಕಳ ಕ್ಷೇಮೆ ಕೇಳಲಿ. ವಿಜಯದಶಮಿಯಿಂದ ಯುದ್ದ ಸ್ಟಾಟ್೯ ಎಂದ ಹೆಚ್ ಡಿಕೆ ಹೇಳಿಕೆ ವಿಚಾರ. ಮಾತನಾಡಿದ ಅವರು ಅಲ್ಲೋಲ ಕಲ್ಲೋಲ ಆಗೋದು ಮುಂದಕ್ಕೆ ಹೋಯ್ತಾ ಅಂತ ವ್ಯಂಗ್ಯವಾಡಿದ ಪ್ರಿಯಾಂಕ್. ನಮ್ಮ ಕುಟುಂಬವನ್ನ ಮುಗಿಸೋಕೆ ಪ್ಲ್ಯಾನ್ ಮಾಡಿದ್ದಾರೆ ಎನ್ನೋ ಹೆಚ್ ಡಿಕೆ ಹೇಳಿಕೆ ಯಾರು ಪ್ರಯತ್ನ ಮಾಡ್ತಿದ್ದಾರೆ. ನಾವ್ಯಕೆ ಅದನ್ನ ಮಾಡೋಣ ಟಿ.ನರಸಿಪುರ ಇನ್ಸಪೆಕ್ಟರ್ ವಿರದ್ದು ಹಳೇ ಕೇಸ್ ವಿಚಾರ.ಅವರ ಮೇಲೆ ಇಲಾಖೆ ವಿಚಾರಣೆ ಆಗಿರಬೇಕು. ಅದಕ್ಕೂ ಇದಕ್ಕೂ ಏನ್ ಸಂಬಂಧ. ಗಣೇಶ ವಿಚಾರವಾಗಿ ಅವರ ಇಲಾಖೆಯ ಎಸ್ ಓಪಿ ಹೇಳಬಾರದಾ..? ಅವರ ಮೇಲೆ ಆರೋಪ ಇದ್ರೆ ದೂರು ಕೊಡಲಿ. ನಾವೇ ತನೀಖೆ ಮಾಡ್ತೆವೆ. ಅದು ಬಿಟ್ಟು ಆ ಮಾಜಿ ಸಂಸದರು ಏನಾದ್ರು ಮಾಡಿದ್ರೆ ನಡಿಯುತ್ತಾ..? ನಮ್ಮ ಸಂಭ್ರಮ ಬೇರೆಯವರಿಗೆ ಆತಂಕ ಆಗಬಾರದು. ಎಲ್ಲರೂ ವಿಜೃಂಭ್ರಣೆಯಿಂದ ಹಬ್ಬ ಮಾಡಿ. ಇವರಿಗೆ ಬೆಂಕಿ ಹಚ್ಚೋದೆ ಕೆಲಸ ಎಂದು ಕಿಡಿಕಾರಿದರು ಉಮರ ಖಾಲಿದ್ ಅವರನ್ನ ರಾಷ್ಟ್ರೀಯವಾದಿ ಅಂತ ಹರಿಪ್ರಸಾದ್ ಬಿಂಬಿಸೋ ವಿಚಾರಯು ಮಾತನಾಡಿದ ಅವರು ಉಮರ್ ಖಲಿದ್ ಎಷ್ಟು ದಿನದಿಂದ ಜೈಲಿನಲ್ಲಿದ್ದಾನೆ. ಯಾಕೆ ಕೇಂದ್ರ ಸರ್ಕಾರ ಟ್ರಯಲ್ ಮಾಡ್ತಿಲ್ಲ, ಟ್ರಯಲ್ ಮಾಡಿ ಕೋಟ್೯ ಘೋಷಣೆ ಮಾಡಲಿ. ಅವಾಗ ಎಲ್ಲರೂ ಆತ ಅಪರಾಧಿ ಅಂತ ಒಪ್ಪಕೊಳ್ಳುತ್ತಾರೆ. ಬಿಜೆಪಿ ಹೇಳಿದ್ರೆ ನಾವು ಒಪ್ಕೊಳ್ಳಬೇಕಾ.? ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು1
- ಚಿಂಚೋಳಿ : ವಂದೇಮಾತರಂ ಗಾಯನದ ಮೂಲಕ ದೇಶಭಕ್ತಿ ಸಾರಿದ ಗ್ರಾಮಸ್ಥರು ಗಣೇಶ ಚತುರ್ಥಿ ಅಂಗವಾಗಿ ಮಿರಿಯಾಣದಲ್ಲಿ ಗ್ರಾಮದೇವತೆ ಯುವಕ ಸಂಘದ ವತಿಯಿಂದ ವಂದೇಮಾತರಂ ಗೀತೆಯ ರಚನೆಯ 150ನೇ ವರ್ಷದ ಸ್ಮರಣಾರ್ಥ ವಿಶೇಷ ಕಾರ್ಯಕ್ರಮ ನಡೆಯಿತು. ಪಾಪನಾಶ ವಿದ್ಯಾಮಂದಿರ ಶಾಲೆಯ ವಿದ್ಯಾರ್ಥಿಗಳು, ಯುವಕರು ಹಾಗೂ ಗ್ರಾಮಸ್ಥರು ಸಾಮೂಹಿಕವಾಗಿ ವಂದೇಮಾತರಂ ಗಾಯನ ಮಾಡುವ ಮೂಲಕ ದೇಶಭಕ್ತಿಯ ಸಂದೇಶ ಸಾರಿದರು. ಕಾಶಿನಾಥ ಮಡಿವಾಳ ವಿಶೇಷ ಉಪನ್ಯಾಸಕರು ಮಾತನಾಡಿ ವಂದೇಮಾತರಂ ದೇಶಭಕ್ತಿಯ ಜಾಗೃತಿ ಮೂಡಿಸಿದ ರಾಷ್ಟ್ರೀಯ ಚೇತನೆಯ ಸಂಕೇತವಾಗಿದೆ. ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಆನಂದಮಠ ಕಾದಂಬರಿಯಲ್ಲಿ ಈ ಗೀತೆಯ ಉಲ್ಲೇಖವಿದ್ದು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶಭಕ್ತರಿಗೆ ಸ್ಫೂರ್ತಿ ನೀಡಿದೆ ಎಂದು ಹೇಳಿದರು. ವಂದೇಮಾತರಂ ಮಾತೃಭೂಮಿಗೆ ಸಲ್ಲಿಸುವ ಗೌರವದ ಸಂಕೇತವಾಗಿದ್ದು, ದೇಶಪ್ರೇಮ, ಸ್ವಾಭಿಮಾನ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶ ಸಾರುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಯುವಜನರಲ್ಲಿ ದೇಶದ ಇತಿಹಾಸ ಹಾಗೂ ಸ್ವಾತಂತ್ರ್ಯ ಹೋರಾಟದ ಅರಿವು ಮೂಡಿಸಬೇಕು ಎಂದರು. ವಿಶ್ವಹಿಂದು ಪರಿಷದ್ ಜಿಲ್ಲಾ ಕಾರ್ಯದರ್ಶಿ ರೇವಣಸಿದ್ಧ ಮೊಘ ಮಾತನಾಡಿ, ಯುವಪೀಳಿಗೆ ದೇಶದ ಇತಿಹಾಸ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ರಾಷ್ಟ್ರಭಕ್ತಿಯ ಮೌಲ್ಯಗಳನ್ನು ಅರಿಯಬೇಕು. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಸಾಮೂಹಿಕ ಗಾಯನ ದೇಶಭಕ್ತಿಯ ಭಾವನೆಗೆ ಮತ್ತಷ್ಟು ಬಲ ನೀಡಿದೆ ಎಂದರು. ಗಣೇಶೋತ್ಸವವು ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಯುವಜನರಲ್ಲಿ ದೇಶಭಕ್ತಿ, ಸಂಸ್ಕೃತಿ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ವೇದಿಕೆಯಾಗಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ್ ಕಲ್ಲೂರ್, ಅರವಿಂದ್ ಚಂದಿಮನಿ, ನರೇಶ್ ಗೌಡ, ರತ್ನಾಕರ್ ರೆಡ್ಡಿ, ರವಿ ಗೌಡ, ಮಹೇಶ್ ಪೂಜಾರಿ, ಸತೀಶ್ ಶರ್ಮ,ಆಂಜನೇಯಲು ಗೌಡ, ಮಹೇಶ್ ಯಾದವ್, ಶಿವು ಯಂಪಳ್ಳಿ, ಸಾಯಿ ಗಣೇಶ, ಸೋಮನಾಥ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು, ಯುವಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.3
- ಕಾಗಿನೆಲೆ ಶ್ರೀ ಕನಕ ಗಿರುಪೀಠ ಹೊಸಕೋಟೆಯ ಶ್ರೀ ಈಶ್ವರನಂದಪುರಿ ಸ್ವಾಮಿಜಿಗಳು ಗಣೇಶ ವಿಗ್ರಹಕ್ಕೆ ಆರತಿ ಮಾಡಿದರು. ಲಿಂಗಸುಗೂರು : ಕಾಗಿನೆಲೆ ಶ್ರೀ ಕನಕ ಗಿರುಪೀಠ ಹೊಸಕೋಟೆಯ ಪರಮ ಪೂಜ್ಯ ಶ್ರೀ ಈಶ್ವರನಂದಪುರಿ ಸ್ವಾಮಿಜಿಗಳು ಗಣೇಶ ಚತುರ್ಥಿ ದಿನದ ಹಂಗವಾಗಿ ವಿಘ್ನವಿನಾಶಕ ಶ್ರೀ ವಿನಾಯಕನ ವಿಗ್ರಹಕ್ಕೆ ಸಾಂಪ್ರದಾಯಕ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದರು.1