ಮಕ್ಕಳಿಗೆ ಗುರು ನಿಜವಾದ ದಿಕ್ಸೂಚಿ ಎಂದು: ಪ್ರೊ. ಗಂಗಾಧರ ದೇವರಮನೆ ಅಭಿಪ್ರಾಯ. ತುರುವೇಕೆರೆ, ಜು. 31: ಪಟ್ಟಣದ ಗ್ಲೋಬಲ್ ಎಂಬಸ್ಸಿ ಪ್ರೀ-ಪ್ರೈಮರಿ ಶಾಲೆಯಲ್ಲಿ ಗುರುಪೂರ್ಣಿಮೆ ಅಂಗವಾಗಿ ವೇದವ್ಯಾಸ ಮಹರ್ಷಿ ಹಾಗೂ ಶಿಷ್ಯರ ವೇಷಭೂಷಣದೊಂದಿಗೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ. ಗಂಗಾಧರ ದೇವರಮನೆ, ಗುರುಪೂರ್ಣಿಮೆ ವೇದವ್ಯಾಸ ಮಹರ್ಷಿಯನ್ನು ಸ್ಮರಿಸುವ ಪವಿತ್ರ ದಿನವಾಗಿದೆ. ಮಹಾಭಾರತ ಹಾಗೂ 18 ಪುರಾಣಗಳನ್ನು ರಚಿಸಿದ ವೇದವ್ಯಾಸರು ಅಪಾರ ಜ್ಞಾನ, ತಪಸ್ಸು, ದೂರದೃಷ್ಟಿ ಮತ್ತು ಸಂಯಮದ ಪ್ರತೀಕವಾಗಿದ್ದು, ಭಾರತೀಯ ಸಂಸ್ಕೃತಿಯ ಶಾಶ್ವತ ದಾರಿದೀಪರಾಗಿದ್ದಾರೆ ಎಂದು ಹೇಳಿ ಸಮಾಜದಲ್ಲಿ ಅನೇಕ ಶಿಕ್ಷಕರನ್ನು ಕಾಣಬಹುದು. ಆದರೆ ಎಲ್ಲರೂ ಗುರು ಸ್ಥಾನವನ್ನು ಪಡೆಯುವುದಿಲ್ಲ. ನಿಜವಾದ ಗುರು ದಿಕ್ಸೂಚಿಯಂತೆ ಸರಿಯಾದ ದಾರಿಯನ್ನು ತೋರಿಸುವ ಮಾರ್ಗದರ್ಶಿಯಾಗಿರುತ್ತಾನೆ ಎಂದು ಅವರು ತಿಳಿಸಿದರು. ಮಹಾತ್ಮ ಗಾಂಧೀಜಿಯವರು ಗೋಪಾಲ ಕೃಷ್ಣ ಗೋಖಲೆ ಅವರನ್ನು, ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ಹಾಗೂ ಏಕಲವ್ಯನು ದ್ರೋಣಾಚಾರ್ಯರನ್ನು ಅನುಸರಿಸಿದಂತೆ, ಡಾ. ಬಿ.ಆರ್. ಅಂಬೇಡ್ಕರ್, ಆಲ್ಬರ್ಟ್ ಐನ್ಸ್ಟೀನ್, ನೆಲ್ಸನ್ ಮಂಡೇಲಾ, ಬಿಲ್ ಗೇಟ್ಸ್, ಮಾರಿಯಾ ಮಾಂಟೆಸ್ಸರಿ, ರವೀಂದ್ರನಾಥ ಠಾಗೋರ್ ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಸೇರಿದಂತೆ ಜಗತ್ತಿನ ಅನೇಕ ಮಹನೀಯರು ತಮ್ಮ ಗುರುಗಳ ಮಾರ್ಗದರ್ಶನದಿಂದಲೇ ಉನ್ನತ ಸಾಧನೆ ಮಾಡಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರೀ-ಕೆಜಿ ಮಕ್ಕಳು ವಿವಿಧ ವೇಷಭೂಷಣಗಳಲ್ಲಿ ಆಗಮಿಸಿ ಎಲ್ಲರ ಗಮನ ಸೆಳೆದರು. ವೇದವ್ಯಾಸ ಮಹರ್ಷಿ ಹಾಗೂ ಶಿಷ್ಯರ ವೇಷಧಾರಿಗಳಾಗಿ ಗುರು-ಶಿಷ್ಯ ಪರಂಪರೆಯನ್ನು ಬಿಂಬಿಸುವ ಕಿರುನಾಟಕ (ಸ್ಕಿಟ್) ಪ್ರದರ್ಶಿಸಿ ಗುರುಗಳಿಗೆ ಗೌರವ ಸಲ್ಲಿಸಿದರು ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಸಹ ಉತ್ಸಾಹದಿಂದ ಪಾಲ್ಗೊಂಡು ಮಕ್ಕಳಿಗೆ ವಿವಿಧ ವೇಷಭೂಷಣಗಳನ್ನು ಸಿದ್ಧಪಡಿಸಿ ಸಂಭ್ರಮವನ್ನು ಹೆಚ್ಚಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮುಖ್ಯ ಶಿಕ್ಷಕಿ ಶರಿತ ದೇವರಮನೆ ಅವರ ನೇತೃತ್ವದಲ್ಲಿ ಶಿಕ್ಷಕಿಯರಾದ ರಾಣಿ, ಹೇಮಾ, ಸುನೀತಾ, ಮಹಾಲಕ್ಷ್ಮಿ, ಮಂಜುಳಾ, ಪ್ರಿಯಾ ಹಾಗೂ ಸೌಮ್ಯ ಸೇರಿದಂತೆ ಇತರರು ಇದ್ದರು.
ಮಕ್ಕಳಿಗೆ ಗುರು ನಿಜವಾದ ದಿಕ್ಸೂಚಿ ಎಂದು: ಪ್ರೊ. ಗಂಗಾಧರ ದೇವರಮನೆ ಅಭಿಪ್ರಾಯ. ತುರುವೇಕೆರೆ, ಜು. 31: ಪಟ್ಟಣದ ಗ್ಲೋಬಲ್ ಎಂಬಸ್ಸಿ ಪ್ರೀ-ಪ್ರೈಮರಿ ಶಾಲೆಯಲ್ಲಿ ಗುರುಪೂರ್ಣಿಮೆ ಅಂಗವಾಗಿ ವೇದವ್ಯಾಸ ಮಹರ್ಷಿ ಹಾಗೂ ಶಿಷ್ಯರ ವೇಷಭೂಷಣದೊಂದಿಗೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ. ಗಂಗಾಧರ ದೇವರಮನೆ, ಗುರುಪೂರ್ಣಿಮೆ ವೇದವ್ಯಾಸ ಮಹರ್ಷಿಯನ್ನು ಸ್ಮರಿಸುವ ಪವಿತ್ರ ದಿನವಾಗಿದೆ. ಮಹಾಭಾರತ ಹಾಗೂ 18 ಪುರಾಣಗಳನ್ನು ರಚಿಸಿದ ವೇದವ್ಯಾಸರು ಅಪಾರ ಜ್ಞಾನ, ತಪಸ್ಸು, ದೂರದೃಷ್ಟಿ ಮತ್ತು ಸಂಯಮದ ಪ್ರತೀಕವಾಗಿದ್ದು, ಭಾರತೀಯ ಸಂಸ್ಕೃತಿಯ ಶಾಶ್ವತ ದಾರಿದೀಪರಾಗಿದ್ದಾರೆ ಎಂದು ಹೇಳಿ ಸಮಾಜದಲ್ಲಿ ಅನೇಕ ಶಿಕ್ಷಕರನ್ನು
ಕಾಣಬಹುದು. ಆದರೆ ಎಲ್ಲರೂ ಗುರು ಸ್ಥಾನವನ್ನು ಪಡೆಯುವುದಿಲ್ಲ. ನಿಜವಾದ ಗುರು ದಿಕ್ಸೂಚಿಯಂತೆ ಸರಿಯಾದ ದಾರಿಯನ್ನು ತೋರಿಸುವ ಮಾರ್ಗದರ್ಶಿಯಾಗಿರುತ್ತಾನೆ ಎಂದು ಅವರು ತಿಳಿಸಿದರು. ಮಹಾತ್ಮ ಗಾಂಧೀಜಿಯವರು ಗೋಪಾಲ ಕೃಷ್ಣ ಗೋಖಲೆ ಅವರನ್ನು, ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ಹಾಗೂ ಏಕಲವ್ಯನು ದ್ರೋಣಾಚಾರ್ಯರನ್ನು ಅನುಸರಿಸಿದಂತೆ, ಡಾ. ಬಿ.ಆರ್. ಅಂಬೇಡ್ಕರ್, ಆಲ್ಬರ್ಟ್ ಐನ್ಸ್ಟೀನ್, ನೆಲ್ಸನ್ ಮಂಡೇಲಾ, ಬಿಲ್ ಗೇಟ್ಸ್, ಮಾರಿಯಾ ಮಾಂಟೆಸ್ಸರಿ, ರವೀಂದ್ರನಾಥ ಠಾಗೋರ್ ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಸೇರಿದಂತೆ ಜಗತ್ತಿನ ಅನೇಕ ಮಹನೀಯರು ತಮ್ಮ ಗುರುಗಳ ಮಾರ್ಗದರ್ಶನದಿಂದಲೇ ಉನ್ನತ ಸಾಧನೆ ಮಾಡಿದ್ದಾರೆ ಎಂದು ಹೇಳಿದರು. ಈ
ಸಂದರ್ಭದಲ್ಲಿ ಪ್ರೀ-ಕೆಜಿ ಮಕ್ಕಳು ವಿವಿಧ ವೇಷಭೂಷಣಗಳಲ್ಲಿ ಆಗಮಿಸಿ ಎಲ್ಲರ ಗಮನ ಸೆಳೆದರು. ವೇದವ್ಯಾಸ ಮಹರ್ಷಿ ಹಾಗೂ ಶಿಷ್ಯರ ವೇಷಧಾರಿಗಳಾಗಿ ಗುರು-ಶಿಷ್ಯ ಪರಂಪರೆಯನ್ನು ಬಿಂಬಿಸುವ ಕಿರುನಾಟಕ (ಸ್ಕಿಟ್) ಪ್ರದರ್ಶಿಸಿ ಗುರುಗಳಿಗೆ ಗೌರವ ಸಲ್ಲಿಸಿದರು ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಸಹ ಉತ್ಸಾಹದಿಂದ ಪಾಲ್ಗೊಂಡು ಮಕ್ಕಳಿಗೆ ವಿವಿಧ ವೇಷಭೂಷಣಗಳನ್ನು ಸಿದ್ಧಪಡಿಸಿ ಸಂಭ್ರಮವನ್ನು ಹೆಚ್ಚಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮುಖ್ಯ ಶಿಕ್ಷಕಿ ಶರಿತ ದೇವರಮನೆ ಅವರ ನೇತೃತ್ವದಲ್ಲಿ ಶಿಕ್ಷಕಿಯರಾದ ರಾಣಿ, ಹೇಮಾ, ಸುನೀತಾ, ಮಹಾಲಕ್ಷ್ಮಿ, ಮಂಜುಳಾ, ಪ್ರಿಯಾ ಹಾಗೂ ಸೌಮ್ಯ ಸೇರಿದಂತೆ ಇತರರು ಇದ್ದರು.
- ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ನಡೆಯುತ್ತಿರುವ ಅಹೋರಾತ್ರಿ ಧರಣೀಯ ಎರಡನೇ ದಿನದ ರಾತ್ರಿಲ್ಲೂ ಕೂಡ ಅರಿತರು ಜಗ್ಗದೆ ಧರಣಿ ಮುಂದುವರಿಸುತ್ತಿರುವುದು1
- ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹೇಗೆ ಬರಬೇಕು ಎಂದು ಪೊಲೀಸ್ ವರಿಷ್ಠ ಅಧಿಕಾರಿ ಮಾಹಿತಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ದಿನಾಂಕ 02-08-2026 ರಂದು ನೆಡೆಯಲಿರುವ ಲಿಖಿತ ಪರೀಕ್ಷೆಗೆ ಹಾಜರಾಗುವ ಅಬ್ಯರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಹಾಜರಾಗುವ ಸಮಯದಲ್ಲಿ ಯಾವ ರೀತಿ ಬರಬೇಕೆಂಬುದರ ಬಗ್ಗೆ ಸೂಚನೆಒಳಗೂಂಡಂತೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ಪರೀಕ್ಷಾರ್ಥಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ.1
- ನೆನ್ನೆ ನಡೆದ ತಾಲೂಕ್ ಪಂಚಾಯತ್ ಸಭಾಂಗಣ ಶಾಸಕರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ1
- ಕನ್ನಡ ಚಿತ್ರರಂಗ ಕೆಟ್ಟು ಕೆರ ಹಿಡಿದಿದೆ, ನಟಿ ರಾಗಿಣಿ ವರ್ತನೆಗೆ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಆಕ್ರೋಶ ಮಂಡ್ಯ-ಮಂಡ್ಯದಲ್ಲಿ ಕಾವೇರಿ ವಿಚಾರವಾಗಿ ನಟಿ ರಾಗಿಣಿ ವರ್ತನೆಗೆ ವಿರೋಧವ್ಯಕ್ತ ಪಡಿಸಿದ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಹೇಳಿದ್ದಿಷ್ಟು1
- Post by ರಾಮಲಿಂಗೇಗೌಡ ಎನ್1
- All About,Greatfull and Thankful for Our #CEO #KarnatakaStateBoardOfAuqaf #Bengaluru for his Performance of Duty Regards *ಭಾರತ ನಲ್ಲಿ ವೈರಲ್*1
- ಮೈಸೂರು: ಸಂಗೀತವೇ ಉಸಿರಾಗಿದ್ದ ಗಾನಗಾನಕೋಗಿಲೆ, ಪದ್ಮಭೂಷಣ ಡಾ. ಎಸ್. ಜಾನಕಿ ಅಮ್ಮನವರಿಗೆ ಮೈಸೂರಿನ ಕಲಾಭಿಮಾನಿಗಳು ಕಣ್ಣೀರಿನ ನುಡಿನಮನ ಸಲ್ಲಿಸಿದರು. ಮೈಸೂರಿನ ರಾಮಕೃಷ್ಣ ನಗರದ ಗಂಧರ್ವ ಸಂಗೀತ ಅಕಾಡೆಮಿಯಲ್ಲಿ "ಶ್ರದ್ಧಾಂಜಲಿ ಮತ್ತು ಗೀತಾ ಗಾಯನ" ಕಾರ್ಯಕ್ರಮವನ್ನು ಭಾವನಾತ್ಮಕವಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಎಸ್. ಜಾನಕಿ ಅಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ನಂತರ ಸಭಿಕರೆಲ್ಲರೂ ಕೆಲ ಕ್ಷಣ ಮೌನಾಚರಣೆ ಮಾಡಿ ತಮ್ಮ ಪ್ರೀತಿಯ ಅಮ್ಮನ ಆತ್ಮಕ್ಕೆ ಶಾಂತಿ ಕೋರಿದರು. ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಆರ್.ಮಹೇಂದ್ರ ಮಾತನಾಡಿ, ಸಂಗೀತಕ್ಕೆ ಯಾವುದೇ ಧರ್ಮ ಜಾತಿ ಬೇಕಾಗಿಲ್ಲ. ಜಾನಕಿ ಅಮ್ಮನವರನ್ನು ನಾವು ದೈಹಿಕವಾಗಿ ಕಳೆದುಕೊಂಡಿದ್ದೇವೆ. ಆದರೆ, ಮಾನಸಿಕವಾಗಿ ಅವರು ಇಂದಿಗೂ ನಮ್ಮೊಟ್ಟಿಗೆ ಇದ್ದಾರೆ. ಸಂಗೀತಗಾರರಿಗೆ ಸರಸ್ವತಿಯೇ ಆದ ಅವರು, ಕೊನೆಯ ಕ್ಷಣಗಳಲ್ಲಿ ಮೈಸೂರನ್ನೇ ಆಯ್ಕೆ ಮಾಡಿಕೊಂಡು ಇಲ್ಲೇ ನೆಲೆಸಿದ್ದರು. ಇದು ನಮ್ಮ ಪುಣ್ಯ ಎಂದು ಹೇಳಿದರು. ಜಾನಕಿ ಅಮ್ಮನವರ ವ್ಯಕ್ತಿತ್ವವನ್ನು ನೆನೆದ ಆರ್.ಮಹೇಂದ್ರ ಅವರು, ಅವರು ಹಾಡುವ ಶೈಲಿ, ವಾಯ್ಸ್ ಮಾಡ್ಯುಲೇಷನ್ ಇಂದಿಗೂ ಗಾಯಕರಿಗೆ ಮಾದರಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯಸ್ಸಿನ ಪಾತ್ರಗಳಿಗೂ ಅವರು ತಮ್ಮ ಕಂಠ ನೀಡಿದ್ದಾರೆ. 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆ ಅವರದ್ದು ಎಂದು ಸ್ಮರಿಸಿದರು. ನಾನು ಕೂಡ ಅವರೊಂದಿಗೆ ಎರಡು ವೇದಿಕೆಯಲ್ಲಿ ಹಾಡುವ ಅವಕಾಶ ಪಡೆದಿದ್ದೆ. ಅದು ಮರೆಯಲಾಗದ ಕ್ಷಣ. ಮೊದಲ ಬಾರಿ ಅವರನ್ನು ಭೇಟಿಯಾದಾಗ ತಮ್ಮ ಮಕ್ಕಳಂತೆ ನೋಡಿಕೊಂಡು, ಕೈ ತುತ್ತು ತಿನಿಸಿದರು. ಅಷ್ಟೊಂದು ಆತ್ಮೀಯತೆ. ನಾನು ಸಂಗೀತ ಕಲಿಯುತ್ತಿದ್ದಾಗ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನನಗೆ ಚಿನ್ನದ ಪದಕವನ್ನು ಅವರ ಕೈಯಿಂದಲೇ ಪಡೆದಿದ್ದೆ. ಅಂತಹ ಸರಳ, ಸಾರ್ಥಕ ಜೀವನ ನಡೆಸಿದ ಮಹಾನ್ ಕಲಾವಿದೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟರು. ನುಡಿನಮನದ ನಂತರ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಹಿರಿಯ ಗಾಯಕರು ಜಾನಕಿ ಅಮ್ಮನವರು ಹಾಡಿರುವ ಸುಪ್ರಸಿದ್ಧ ಗೀತೆಗಳನ್ನು ಹಾಡಿ ಗೀತಾ ಗಾಯನದ ಮೂಲಕ ನಮನ ಸಲ್ಲಿಸಿದರು. ಅವರ ಕಂಠದ ಪ್ರತಿಧ್ವನಿ ಸಭಾಂಗಣದಲ್ಲಿ ಮೊಳಗಿದಾಗ ಹಲವರ ಕಣ್ಣುಗಳು ತೇವಗೊಂಡವು. ಸ್ವರ ಮೌನವಾದರೂ, ಆ ಸ್ವರದ ಶಕ್ತಿ ಇಂದಿಗೂ ಕೋಟಿ ಹೃದಯಗಳಲ್ಲಿ ಜೀವಂತವಾಗಿದೆ ಎಂಬುದನ್ನು ಈ ಶ್ರದ್ಧಾಂಜಲಿ ಮತ್ತೊಮ್ಮೆ ಸಾಬೀತುಪಡಿಸಿತು. ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ನಿವೃತ್ತ ಎಇಇ ಸುರೇಶ್, ಗಾಯಕರಾದ ಲಕ್ಷ್ಮಣ್, ಮೀನಾಕುಮಾರಿ, ಬಸವರಾಜು, ಚೇತನ್, ಡಾ.ಜಗದೀಶ್, ಸಂಜಯ್, ದಿನೇಶ್, ಡಾ. ರತ್ನ ಹಾಲಪ್ಪಗೌಡ, ರಾಜೇಶ್ವರಿ, ಮಹೇಶ್, ಮಂಜುನಾಥ್ ಎಂ, ಪವಿತ್ರ, ಎಂ. ನಟರಾಜ್, ಸೇರಿದಂತೆ ಅನೇಕ ಸಂಗೀತ ಪ್ರಿಯರು ಮತ್ತು ಮಕ್ಕಳು ಭಾಗವಹಿಸಿದ್ದರು.3
- ಕನ್ನಡ ಸಂಘದ ಸಂಸ್ಥಾಪಕ ದಿವಂಗತ 'ಸೀಮೆಎಣ್ಣೆ ಕೃಷ್ಣಯ್ಯ' 9ನೇ ವರ್ಷದ ನುಡಿನಮನ: ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಮಾತು ಕನ್ನಡ ಸಂಘದ ಸಂಸ್ಥಾಪಕ ದಿವಂಗತ 'ಸೀಮೆಎಣ್ಣೆ ಕೃಷ್ಣಯ್ಯ' 9ನೇ ವರ್ಷದ ನುಡಿನಮನ: ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಮಾತು ------------------- ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಕನ್ನಡ ಪರ ಚಟುವಟಿಕೆಗಳಿಗೆ ಬಲ ತುಂಬಲು ವೇದಿಕೆ ನಿರ್ಮಿಸಿ, ಶಾಶ್ವತ ಕಾರ್ಯಕ್ರಮಗಳನ್ನು ನೀಡಿದ ಕನ್ನಡ ಸಂಘದ ಸಂಸ್ಥಾಪಕ ಹಾಗೂ ಅಧ್ಯಕ್ಷ ದಿವಂಗತ 'ಸೀಮೆಎಣ್ಣೆ ಕೃಷ್ಣಯ್ಯ' ಅವರ ಸೇವೆ ಅತ್ಯಂತ ಸ್ಮರಣೀಯ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಬಣ್ಣಿಸಿದರು. ಪಟ್ಟಣದ ಕನ್ನಡ ಸಂಘದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ದಿವಂಗತ ಸೀಮೆಎಣ್ಣೆ ಕೃಷ್ಣಯ್ಯ ಅವರ 9 ನೇ ವರ್ಷದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. "ತಾಲೂಕಿನಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ಕೃಷ್ಣಯ್ಯನವರು ಮತ್ತು ಅವರ ತಂಡದ ಕೊಡುಗೆ ಹಿರಿದಾದುದು. ಈ ಕ್ಷೇತ್ರದಲ್ಲಿ ಎಷ್ಟು ದಿನಗಳ ಕಾಲ ಕನ್ನಡ ಕಾರ್ಯಕ್ರಮಗಳು ನಡೆಯುತ್ತವೆಯೋ ಅಲ್ಲಿಯವರೆಗೂ ಕೃಷ್ಣಯ್ಯನವರ ಹೆಸರು ಅಮರವಾಗಿರಲಿದೆ," ಎಂದರು. ಬಡತನ ಮೆಟ್ಟಿ ಬೆಳೆದ ಧೀಮಂತ: "ನಾವು ಸಣ್ಣ ಹುಡುಗರಿದ್ದಾಗಿನಿಂದಲೂ ಕೃಷ್ಣಯ್ಯನವರ ಹೆಸರು ಮತ್ತು ಕಾರ್ಯಕ್ರಮಗಳನ್ನು ಕೇಳುತ್ತಾ ಬೆಳೆದಿದ್ದೇವೆ. ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದ ಅವರು, ಬಡತನದಲ್ಲೇ ಬೆಳೆದು ತಮ್ಮ ಸ್ವಪ್ರಯತ್ನದಿಂದ ಉನ್ನತ ಶಿಕ್ಷಣ ಪಡೆದು ಪದವೀಧರರಾದರು. ನಂತರ ಉತ್ತಮ ಕೆಲಸದಲ್ಲಿದ್ದರೂ, ಕನ್ನಡ ನೆಲ-ಜಲ ಮತ್ತು ಸಮಾಜ ಸೇವೆಯತ್ತ ತೀವ್ರ ಒಲವು ಹೊಂದಿದ್ದರು. ವಿ.ಎನ್. ಪಾಟೀಲ್, ರಾಮಕೃಷ್ಣ ಹೆಗಡೆ ಅವರಂತಹ ಹಿರಿಯ ರಾಜಕಾರಣಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು," ಎಂದು ಕೃಷ್ಣಯ್ಯನವರ ವ್ಯಕ್ತಿತ್ವವನ್ನು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.1