Shuru
Apke Nagar Ki App…
ಚಿಕ್ಕೋಡಿ ತಾಲೂಕಾ ಆಡಳಿತ ವತಿಯಿಂದ ಶ್ರೀ ಜಗಜ್ಯೋತಿ ಬಸವಣ್ಣನವರ ಭಾವ ಚಿತ್ರ ಪೂಜೆ. ಚಿಕ್ಕೋಡಿ : ಕಾಯಕವೇ ಕೈಲಾಸ ಎಂದು ಸಾರಿದ ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭ ಸಂದರ್ಭದಲ್ಲಿ, ಇಂದು ಚಿಕ್ಕೋಡಿ ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ತಾಲೂಕಾ ಆಡಳಿತ ವತಿಯಿಂದ ಶ್ರೀ ಜಗಜ್ಯೋತಿ ಬಸವಣ್ಣನವರ ಭಾವ ಚಿತ್ರ ಪೂಜೆ ಸಲೀಸಿ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸುಭಾಸ ಸಂಪಗಾವಿ ಚಿಕ್ಕೋಡಿ ಉಪವಿಭಾಗಾಧಿಕಾರಿ , ರಾಜೇಶ ಬುರ್ಲಿ ತಹಸೀಲ್ದಾರ ಚಿಕ್ಕೋಡಿ, ಪ್ರವೀಣ್ ಗಂದ, ಐಶ್ವರ್ಯ ದಿವಟೆ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಇದ್ದರೂ.
ನದೀಮ ಎನ್. ನಾಯಕವಾಡಿ
ಚಿಕ್ಕೋಡಿ ತಾಲೂಕಾ ಆಡಳಿತ ವತಿಯಿಂದ ಶ್ರೀ ಜಗಜ್ಯೋತಿ ಬಸವಣ್ಣನವರ ಭಾವ ಚಿತ್ರ ಪೂಜೆ. ಚಿಕ್ಕೋಡಿ : ಕಾಯಕವೇ ಕೈಲಾಸ ಎಂದು ಸಾರಿದ ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭ ಸಂದರ್ಭದಲ್ಲಿ, ಇಂದು ಚಿಕ್ಕೋಡಿ ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ತಾಲೂಕಾ ಆಡಳಿತ ವತಿಯಿಂದ ಶ್ರೀ ಜಗಜ್ಯೋತಿ ಬಸವಣ್ಣನವರ ಭಾವ ಚಿತ್ರ ಪೂಜೆ ಸಲೀಸಿ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸುಭಾಸ ಸಂಪಗಾವಿ ಚಿಕ್ಕೋಡಿ ಉಪವಿಭಾಗಾಧಿಕಾರಿ , ರಾಜೇಶ ಬುರ್ಲಿ ತಹಸೀಲ್ದಾರ ಚಿಕ್ಕೋಡಿ, ಪ್ರವೀಣ್ ಗಂದ, ಐಶ್ವರ್ಯ ದಿವಟೆ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಇದ್ದರೂ.
More news from ಕರ್ನಾಟಕ and nearby areas
- ಚಿಕ್ಕೋಡಿ : ಬಿರುಗಾಳಿಯಿಂದ ರಸ್ತೆ ಮೇಲೆ ಬಿದ್ದ ಮರ ಮತ್ತು ಲೈಟ್ ಕಂಬ ಕುಸಿತ,ಚಿಕ್ಕೋಡಿ ಟು ಜೋಡಕುರಳಿ ರಸ್ತೆ ಬಂದ, ಸ್ಥಳಕೆ ಭೇಟೆ ನೀಡಿದ ಹೆಸ್ಕಾಂ ಸಿಬ್ಬಂದಿ2
- ದುರಂತ: ಕಾವೇರಿ ನದಿಯಲ್ಲಿ ಈಜಲು ಹೋದ ಆರು ಮಂದಿ ಜಲಸಮಾಧಿ ಮೈಸೂರು: ಜಿಲ್ಲೆಯ ಕೆ.ಆರ್. ನಗರದ ಪ್ರಸಿದ್ಧ ಅರ್ಕೇಶ್ವರ ದೇಗುಲದ ಬಳಿ ಹರಿಯುವ ಕಾವೇರಿ ನದಿಯಲ್ಲಿ ಈಜಲು ಹೋದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಅತ್ಯಂತ ಘೋರ ಘಟನೆ ನಡೆದಿದೆ. 1
- *ರಾಯಬಾಗದಲ್ಲಿ ಬಸವ ಜಯಂತಿಯ ಹಳ್ಳಿ ಸೊಬಗು: ಶಿಕ್ಷಣ ಪ್ರೇಮಿ ಪಾಟೀಲ ಪರಿವಾರದ ಜನಸೇವೆಗೆ ಸಾಕ್ಷಿಯಾದ ಶೋಭಾಯಾತ್ರೆ* ಕಾಯಕವೇ ಕೈಲಾಸ ಎಂದು ಸಾರಿದ ಜಗಜ್ಯೋತಿ ಬಸವಣ್ಣನವರ ಜಯಂತಿಯ ನಿಮಿತ್ತ ಇಂದು ರಾಯಬಾಗ ಪಟ್ಟಣ ಭಕ್ತಿ ಮತ್ತು ಸಂಭ್ರಮದ ಕಡಲಲ್ಲಿ ತೇಲಿತು. ಪಟ್ಟಣದಾದ್ಯಂತ ಹಮ್ಮಿಕೊಳ್ಳಲಾಗಿದ್ದ ಭವ್ಯ ಶೋಭಾಯಾತ್ರೆಯು ಹಳ್ಳಿಯ ಸೊಬಗನ್ನು ಮರುಸೃಷ್ಟಿಸಿ ನೋಡುಗರ ಕಣ್ಮನ ಸೆಳೆಯಿತು. ಹಿಂದೂ ಧರ್ಮದಲ್ಲಿ ಬಸವಣ್ಣ ಅಥವಾ ನಂದಿ ಎಂದು ಪೂಜಿಸಲ್ಪಡುವ ಸುಮಾರು 170ಕ್ಕೂ ಹೆಚ್ಚು ಎತ್ತುಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿತ್ತು. ಸಾಲು ಸಾಲಾಗಿ ಸಾಗುತ್ತಿದ್ದ ಈ ಎತ್ತುಗಳ ಗಾಂಭೀರ್ಯವು ಗ್ರಾಮೀಣ ಸೊಬಗನ್ನು ಎತ್ತಿ ತೋರಿಸುವಂತಿತ್ತು. ಮೆರವಣಿಗೆಯ ಮುಂಚೂಣಿಯಲ್ಲಿ ಕಂಗೊಳಿಸುತ್ತಿದ್ದ ಬಸವಣ್ಣನವರ ಬೃಹತ್ ಪುತ್ಥಳಿಯು ಭಕ್ತರ ಪಾಲಿಗೆ ದರ್ಶನ ಭಾಗ್ಯವನ್ನೇ ನೀಡಿತು. ರಾಯಬಾಗದ ಇತಿಹಾಸದಲ್ಲಿ ವಸಂತರಾವ್ ಪಾಟೀಲ್ ಅವರ ಕುಟುಂಬದ ಹೆಸರು ಅಚ್ಚಳಿಯದಂತದ್ದು. ಅಜ್ಜನ ಕಾಲದಿಂದಲೂ ಬಡವರಿಗೆ ಅಕ್ಷರ ದಾಸೋಹ ಮಾಡುತ್ತಾ ಬಂದಿರುವ ಈ ಕುಟುಂಬ, ಸಾವಿರಾರು ಜನ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಲು ಕಾರಣವಾಗಿದೆ. ಇಂದಿಗೂ ಶಿಕ್ಷಣ ಪ್ರೇಮಿಯಾಗಿ ಬಡ ಮಕ್ಕಳ ಪಾಲಿನ ಆಶಾಕಿರಣವಾಗಿರುವ ವಸಂತರಾವ್ ಪಾಟೀಲ್ ಅವರ ಸರಳತೆ ಎಲ್ಲರಿಗೂ ಮಾದರಿ. ಈ ಮೆರವಣಿಗೆಯ ವಿಶೇಷ ಆಕರ್ಷಣೆಯೆಂದರೆ, ಹಿರಿಯರು ಮತ್ತು ಯುವಕರ ಹೃದಯದಲ್ಲಿ ಸ್ಥಾನ ಪಡೆದಿರುವ ಯುವ ನಾಯಕ ಪ್ರಣಯ್ ಅಣ್ಣ ಪಾಟೀಲ್ ಅವರ ಮೇಲಿನ ಅಭಿಮಾನ. ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಅವರ ಭಾವಚಿತ್ರವನ್ನು ಎತ್ತುಗಳ ಮೇಲೆ ಕಲಾತ್ಮಕವಾಗಿ ಬಿಡಿಸಿದ್ದು, ಜನರ ವಿಶೇಷ ಗಮನ ಸೆಳೆಯಿತು. "ಶಿಕ್ಷಣದ ಮೂಲಕ ಬದುಕು ಕಟ್ಟಿಕೊಟ್ಟ ಹಿರಿಯರು ಒಂದೆಡೆಯಾದರೆ, ಸಮಾಜ ಸೇವೆಯ ಮೂಲಕ ಯುವ ಶಕ್ತಿಯನ್ನು ಸಂಘಟಿಸುತ್ತಿರುವ ಪ್ರಣಯ್ ಅಣ್ಣ ಪಾಟೀಲ್ ಅವರ ನಾಯಕತ್ವ ರಾಯಬಾಗಕ್ಕೆ ಹೆಮ್ಮೆ."1
- ಬೆವನೂರ ಗ್ರಾಮದಲ್ಲಿ ರವಿವಾರ ಗಾಳಿ ಮಳೆಗೆ ನೆಲಕ್ಕುರುಳಿದ 50 ಕ್ಕೂ ಅಧಿಕ ಲೈಟ್ ಕಂಬಗಳು . ಅಥಣಿ :ಬೆವನೂರ ಗ್ರಾಮದಲ್ಲಿ ರವಿವಾರ ಗಾಳಿ ಮಳೆಗೆ 50 ಕ್ಕೂ ಅಧಿಕ ಲೈಟ್ ಕಂಬಗಳು ನೆಲಕ್ಕುರುಳಿವೆ. ಅಕಸ್ಮಾತ್ ಅಷ್ಟೇ ಅಲ್ಲ ಸುದೈವ ವಶಾತ ಜೀವಹಾನಿ ಸಂಭವಿಸಿಲ್ಲ.1
- ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದ ಸಮೀಪವಿರುವ ರಸ್ತೆ ವಿಭಜಕವು (road divider) ತಾತ್ಕಾಲಿಕ ಕಸದ ರಾಶಿಯಾಗಿ ಮಾರ್ಪಟ್ಟಿದೆ. ಸಾರ್ವಜನಿಕರು ಮತ್ತು ಪ್ರಯಾಣಿಕರು ಅಲ್ಲಿ ಕಸವನ್ನು ಎಸೆಯುತ್ತಿರುವುದರಿಂದ ಆ ಪ್ರದೇಶವು ಗಲೀಜಾಗಿ ಕಾಣಿಸುತ್ತಿದೆ.1
- Post by Uday Chougale1
- ಮುಧೋಳ: ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಮುಧೋಳ ನಗರ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ಸಂಜೆ ಹಠಾತ್ ಗಾಳಿ ಸಮೇತ ಸುರಿದ ಆಲಿಕಲ್ಲು ಮಳೆ ಜನತೆಗೆ ತಂಪೆರೆಯುವ ಜೊತೆಗೆ ರೈತರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಮಧ್ಯಾಹ್ನದವರೆಗೆ ಸುಡುವ ಬಿಸಿಲಿನಿಂದ ಕೂಡಿದ್ದ ವಾತಾವರಣವು ಸಂಜೆ ಹೊತ್ತಿಗೆ ಏಕಾಏಕಿ ಬದಲಾಗಿ, ಗುಡುಗು ಸಿಡಿಲಿನ ಆರ್ಭಟದೊಂದಿಗೆ ಭಾರಿ ಮಳೆ ಸುರಿಯಿತು. ಮಳೆಯ ಜೊತೆಗೆ ಗೋಲಿ ಗಾತ್ರದ ಆಲಿಕಲ್ಲುಗಳು ಬಿಳಿಯ ಹಾಸಿನಂತೆ ರಸ್ತೆ ಹಾಗೂ ತೋಟಗಳಲ್ಲಿ ಬಿದ್ದಿರುವುದು ಕಂಡುಬಂತು. ಆಲಿಕಲ್ಲು ಮಳೆಯ ಹೊಡೆತಕ್ಕೆ ಈ ಭಾಗದ ಪ್ರಮುಖ ಬೆಳೆಗಳಾದ ಕಬ್ಬು, ದ್ರಾಕ್ಷಿ ಮತ್ತು ಬಾಳೆ ತೋಟಗಳಿಗೆ ಹಾನಿಯಾದ ವರದಿಯಾಗಿದೆ. ವಿಶೇಷವಾಗಿ ಕಟಾವಿಗೆ ಬಂದಿರುವ ಬೆಳೆಗಳು ನೆಲಕಚ್ಚುವ ಭೀತಿ ಎದುರಾಗಿದ್ದು, ಅನ್ನದಾತರು ಆತಂಕಕ್ಕೀಡಾಗಿದ್ದಾರೆ. ನಗರದ ತಗ್ಗು ಪ್ರದೇಶಗಳ ರಸ್ತೆಗಳಲ್ಲಿ ನೀರು ನುಗ್ಗಿ1
- ಭಾಲ್ಕಿಯಲ್ಲಿ ಬೃಹತ್ ಆರೋಗ್ಯ ಶಿಬಿರ: 180 ಜನರಿಗೆ ತಪಾಸಣೆ, 101 ಯುವಕರಿಂದ ರಕ್ತದಾನ ಆರೋಗ್ಯವೇ ಭಾಗ್ಯ: ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಮಾನವೀಯತೆಯ ಮೆರಗು; 101 ಯುನಿಟ್ ರಕ್ತ ಸಂಗ್ರಹ #JB_News_Kannada1