ಚಿಕ್ಕನಾಯಕನಹಳ್ಳಿ ತಾಲೂಕಿನ ತರಬೇನಹಳ್ಳಿ ಗ್ರಾಮದ ಭೋವಿ ಕಾಲೋನಿ ಶಾಲೆಯ ಶಿಕ್ಷಕರಾದ ಶ್ರೀ ರಾಜಪ್ಪನವರು ಇಂದು ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ್ದು, ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜಪ್ಪನವರು 20 ವರ್ಷಗಳ ಕಾಲ ಇದೇ ಶಾಲೆಯಲ್ಲಿ ಸತತವಾಗಿ ಕಾರ್ಯನಿರ್ವಹಿಸಿ, ಶಾಲೆಯ ಪರಿಸರ, ಎಸ್‌ಡಿಎಂಸಿ ಹಾಗೂ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಉನ್ನತೀಕರಣಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಪೋಷಕರು ಮತ್ತು ಗ್ರಾಮದ ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು, ಶಾಲೆಯ ಅಭಿವೃದ್ಧಿಗೆ ಬೇಕಾದ ಸಹಾಯ ಸಹಕಾರಗಳನ್ನು ಸಂದರ್ಭ ಬಂದಾಗ ಪಡೆದುಕೊಂಡು, ಶಾಲೆಯನ್ನು ಉತ್ತಮ ಶಾಲೆಯನ್ನಾಗಿ ರೂಪಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಶಾಲು ಮತ್ತು ಹಾರಗಳೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ರಾಜಪ್ಪನವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಲು ಅವರ ಅನೇಕ ಶಿಕ್ಷಕ ಮಿತ್ರರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ತಾಲೂಕಿನ ಅತ್ಯಂತ ಕ್ರಿಯಾಶೀಲ ಮತ್ತು ಶೈಕ್ಷಣಿಕ ಗುಣಮಟ್ಟದ ರೂವಾರಿಯಾದ ಬಿಇಓ ಕಾಂತರಾಜು ಸರ್, ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘದ ಅನೇಕ ಪದಾಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ರಾಜಪ್ಪನವರಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಂಗವಾಗಿ ಮಕ್ಕಳು ಮನರಂಜನ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು ಹಾಗೂ ಕಾರ್ಯಕ್ರಮದ ನಂತರ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಒಬ್ಬ ಶಿಕ್ಷಕರು ಕರ್ತವ್ಯ ನಿಷ್ಠೆಯಿಂದ, ಮಕ್ಕಳ ಸ್ನೇಹಿಯಾಗಿ ಮತ್ತು ಪೋಷಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರೆ ಆ ಇಡೀ ಪ್ರದೇಶದ ನಾಗರಿಕರು ಅವರ ಸೇವೆಯನ್ನು ತುಂಬು ಹೃದಯದಿಂದ ಗೌರವಿಸುತ್ತಾರೆ ಎಂಬುದಕ್ಕೆ ಇಂದು ನಿವೃತ್ತಿಯಾದ ಶ್ರೀ ರಾಜಪ್ಪ ಸರ್ ಉತ್ತಮ ಉದಾಹರಣೆಯಾಗಿದ್ದಾರೆ. ಅವರ ಸೇವಾ ಅವಧಿಯಲ್ಲಿ, ಶಾಲೆಯ ಎಲ್ಲ ಮಕ್ಕಳು ಬಡತನದ ಹಿನ್ನೆಲೆಯುಳ್ಳವರಾಗಿದ್ದು, ಕೃಷಿ ಮತ್ತು ಕಾರ್ಮಿಕರ ಕುಟುಂಬಗಳಿಂದ ಬಂದವರಾಗಿದ್ದರು. ಪ್ರತಿ ವರ್ಷವೂ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್, ಬೆಲ್ಟ್, ಶೂಸ್, ತಟ್ಟೆ, ಲೋಟ ಮುಂತಾದ ಅಗತ್ಯ ವಸ್ತುಗಳಿಗಾಗಿ ಶ್ರೀ ರಾಜಪ್ಪನವರು ಮನವಿ ಮಾಡಿಕೊಂಡ ಸಂದರ್ಭಗಳಲ್ಲಿ, ನಾವು ತುಂಬು ಹೃದಯದಿಂದ ಸಹಕರಿಸಿದ್ದನ್ನು ರಾಜಪ್ಪನವರು ಇಂದು ನೆನಪಿಸಿಕೊಂಡಿದ್ದು, ಅವರ ಬಗ್ಗೆ ಮತ್ತಷ್ಟು ಗೌರವವನ್ನು ಹೆಚ್ಚಿಸಿತು. ಶ್ರೀ ರಾಜಪ್ಪನವರು ಮತ್ತು ಸಹ ಶಿಕ್ಷಕರು ಪೋಷಕರೊಂದಿಗೆ ಸೇರಿಕೊಂಡು ಶಾಲೆಯನ್ನೂ ಅದರ ಪರಿಸರವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿ, ಶಾಲೆಗೆ ಭೇಟಿ ನೀಡಿದ ಎಲ್ಲರೂ ಖುಷಿ ಪಡುವಂತೆ ಮಾಡಿದ್ದು, ಇದು ನಮ್ಮ ತಾಲೂಕಿನ ಇತರೆ ಎಲ್ಲ ಶಾಲೆಗಳಿಗೆ ಮಾದರಿಯಾಗಬೇಕಾಗಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ತರಬೇನಹಳ್ಳಿ ಗ್ರಾಮದ ಭೋವಿ ಕಾಲೋನಿ ಶಾಲೆಯ ಶಿಕ್ಷಕರಾದ ಶ್ರೀ ರಾಜಪ್ಪನವರು ಇಂದು ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ್ದು, ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜಪ್ಪನವರು 20 ವರ್ಷಗಳ ಕಾಲ ಇದೇ ಶಾಲೆಯಲ್ಲಿ ಸತತವಾಗಿ ಕಾರ್ಯನಿರ್ವಹಿಸಿ, ಶಾಲೆಯ ಪರಿಸರ, ಎಸ್‌ಡಿಎಂಸಿ ಹಾಗೂ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಉನ್ನತೀಕರಣಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಪೋಷಕರು ಮತ್ತು ಗ್ರಾಮದ ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು, ಶಾಲೆಯ ಅಭಿವೃದ್ಧಿಗೆ ಬೇಕಾದ ಸಹಾಯ ಸಹಕಾರಗಳನ್ನು ಸಂದರ್ಭ
ಬಂದಾಗ ಪಡೆದುಕೊಂಡು, ಶಾಲೆಯನ್ನು ಉತ್ತಮ ಶಾಲೆಯನ್ನಾಗಿ ರೂಪಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಶಾಲು ಮತ್ತು ಹಾರಗಳೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ರಾಜಪ್ಪನವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಲು ಅವರ ಅನೇಕ ಶಿಕ್ಷಕ ಮಿತ್ರರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ತಾಲೂಕಿನ ಅತ್ಯಂತ ಕ್ರಿಯಾಶೀಲ ಮತ್ತು ಶೈಕ್ಷಣಿಕ ಗುಣಮಟ್ಟದ ರೂವಾರಿಯಾದ ಬಿಇಓ ಕಾಂತರಾಜು ಸರ್, ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘದ ಅನೇಕ ಪದಾಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ರಾಜಪ್ಪನವರಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಂಗವಾಗಿ ಮಕ್ಕಳು ಮನರಂಜನ
ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು ಹಾಗೂ ಕಾರ್ಯಕ್ರಮದ ನಂತರ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಒಬ್ಬ ಶಿಕ್ಷಕರು ಕರ್ತವ್ಯ ನಿಷ್ಠೆಯಿಂದ, ಮಕ್ಕಳ ಸ್ನೇಹಿಯಾಗಿ ಮತ್ತು ಪೋಷಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರೆ ಆ ಇಡೀ ಪ್ರದೇಶದ ನಾಗರಿಕರು ಅವರ ಸೇವೆಯನ್ನು ತುಂಬು ಹೃದಯದಿಂದ ಗೌರವಿಸುತ್ತಾರೆ ಎಂಬುದಕ್ಕೆ ಇಂದು ನಿವೃತ್ತಿಯಾದ ಶ್ರೀ ರಾಜಪ್ಪ ಸರ್ ಉತ್ತಮ ಉದಾಹರಣೆಯಾಗಿದ್ದಾರೆ. ಅವರ ಸೇವಾ ಅವಧಿಯಲ್ಲಿ, ಶಾಲೆಯ ಎಲ್ಲ ಮಕ್ಕಳು ಬಡತನದ ಹಿನ್ನೆಲೆಯುಳ್ಳವರಾಗಿದ್ದು, ಕೃಷಿ ಮತ್ತು ಕಾರ್ಮಿಕರ ಕುಟುಂಬಗಳಿಂದ ಬಂದವರಾಗಿದ್ದರು. ಪ್ರತಿ ವರ್ಷವೂ ನೋಟ್ ಪುಸ್ತಕ, ಪೆನ್ನು,
ಪೆನ್ಸಿಲ್, ಬೆಲ್ಟ್, ಶೂಸ್, ತಟ್ಟೆ, ಲೋಟ ಮುಂತಾದ ಅಗತ್ಯ ವಸ್ತುಗಳಿಗಾಗಿ ಶ್ರೀ ರಾಜಪ್ಪನವರು ಮನವಿ ಮಾಡಿಕೊಂಡ ಸಂದರ್ಭಗಳಲ್ಲಿ, ನಾವು ತುಂಬು ಹೃದಯದಿಂದ ಸಹಕರಿಸಿದ್ದನ್ನು ರಾಜಪ್ಪನವರು ಇಂದು ನೆನಪಿಸಿಕೊಂಡಿದ್ದು, ಅವರ ಬಗ್ಗೆ ಮತ್ತಷ್ಟು ಗೌರವವನ್ನು ಹೆಚ್ಚಿಸಿತು. ಶ್ರೀ ರಾಜಪ್ಪನವರು ಮತ್ತು ಸಹ ಶಿಕ್ಷಕರು ಪೋಷಕರೊಂದಿಗೆ ಸೇರಿಕೊಂಡು ಶಾಲೆಯನ್ನೂ ಅದರ ಪರಿಸರವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿ, ಶಾಲೆಗೆ ಭೇಟಿ ನೀಡಿದ ಎಲ್ಲರೂ ಖುಷಿ ಪಡುವಂತೆ ಮಾಡಿದ್ದು, ಇದು ನಮ್ಮ ತಾಲೂಕಿನ ಇತರೆ ಎಲ್ಲ ಶಾಲೆಗಳಿಗೆ ಮಾದರಿಯಾಗಬೇಕಾಗಿದೆ.
- ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಳನಾಡು ಸಮೀಪವಿರುವ ಶ್ರೀ ಗುರು ಗೋ ಸೇವಾ ಪರಿವಾರದಲ್ಲಿ ಭಾನುವಾರ, ಮೇ 31, 2026 ರಂದು ಉಚಿತ ಪಂಚಗವ್ಯ ಪ್ರಾಶನ ಮತ್ತು ಅಗ್ನಿಹೋತ್ರ ಪ್ರತ್ಯಕ್ಷತೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತ ಬಂಧುಗಳು ಬೆಳಿಗ್ಗೆ 6:00 ಗಂಟೆಗೆ ಸರಿಯಾಗಿ ಆಗಮಿಸಬೇಕೆಂದು ತಿಳಿಸಲಾಗಿದೆ. ಅಗ್ನಿಹೋತ್ರ ಪ್ರತ್ಯಕ್ಷತೆಯು ಬೆಳಿಗ್ಗೆ 6:00 ಗಂಟೆಗೆ ಪ್ರಾರಂಭವಾಗಲಿದ್ದು, ಪಂಚಗವ್ಯ ಪ್ರಾಶನವು ಬೆಳಗ್ಗೆ 6:30ಕ್ಕೆ ನೆರವೇರಲಿದೆ. ಶ್ರೀ ಗುರು ಗೋ ಸೇವಾ ಪರಿವಾರ ಗೋ ಮಂದಿರ, ಯಳನಾಡು ಇಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವಿಶೇಷ ಸೂಚನೆಯ ಪ್ರಕಾರ, ಅಂದು ಅಧಿಕಮಾಸದ ಹುಣ್ಣಿಮೆ ಇರುವುದರಿಂದ ಗೋಪೂಜೆ ಮತ್ತು ಗೋವುಗಳಿಗೆ ಗೋಗ್ರಾಸವನ್ನು ನೀಡಲು ಕೂಡ ಅವಕಾಶವಿರುತ್ತದೆ. ಈ ಮೂಲಕ ಆಸಕ್ತರು ಈ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.1
- ಚಿತ್ರದುರ್ಗ ಜಿಲ್ಲಾ ಯಾದವ ಗೊಲ್ಲ ಸಂಘದ ಪದಾಧಿಕಾರಿಗಳ ಆಯ್ಕೆಗೆ ನಡೆದ ತೀವ್ರ ಕುತೂಹಲಕಾರಿ ಚುನಾವಣೆಯಲ್ಲಿ ಸಿ. ಮಹಲಿಂಗಪ್ಪ ನೇತೃತ್ವದ ಸಿಂಡಿಕೇಟ್ ಭರ್ಜರಿ ವಿಜಯ ಸಾಧಿಸಿದೆ. ಈ ಚುನಾವಣೆಯಲ್ಲಿ ಸಿಂಡಿಕೇಟ್ ಎಲ್ಲಾ ನಾಲ್ಕೂ ಪ್ರಮುಖ ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಅಭೂತಪೂರ್ವ ಜಯಗಳಿಸಿದ್ದು, ಇದರೊಂದಿಗೆ 'ಮೀಸೆ' ಮಹಲಿಂಗಪ್ಪ ಅವರು ಮತ್ತೊಮ್ಮೆ ಸಂಘದ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಸಂಘದ ಒಟ್ಟು 15 ನಿರ್ದೇಶಕರು ಈ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಮತದಾನ ಪ್ರಕ್ರಿಯೆಯಲ್ಲಿ ಮಹಲಿಂಗಪ್ಪ ಅವರ ಪ್ಯಾನಲ್ ಸ್ಪಷ್ಟ ಮೇಲುಗೈ ಸಾಧಿಸಿತು. ಅಧ್ಯಕ್ಷ ಸ್ಥಾನದಲ್ಲಿ ಹಾಲಿ ಅಧ್ಯಕ್ಷ ಸಿ. ಮಹಲಿಂಗಪ್ಪ ಅವರು 8 ಮತಗಳನ್ನು ಪಡೆದು ಪ್ರತಿಸ್ಪರ್ಧಿ ವೀರೇಶ್ (7 ಮತ) ಅವರನ್ನು ಪರಾಭವಗೊಳಿಸಿದರು. ಉಪಾಧ್ಯಕ್ಷ ಸ್ಥಾನದಲ್ಲಿ ಬಿ.ಆರ್. ರಾಮಲಿಂಗಯಾದವ್ 8 ಮತಗಳನ್ನು ಗಳಿಸಿ ಎ. ಚಿತ್ತಪ್ಪ (7 ಮತ) ಅವರನ್ನು ಸೋಲಿಸಿ ಆಯ್ಕೆಯಾದರು. ಕಾರ್ಯದರ್ಶಿ ಸ್ಥಾನಕ್ಕೆ ಎನ್. ಕಿರಣ್ ಕುಮಾರ್ ಯಾದವ್ 8 ಮತಗಳ ಬೆಂಬಲದೊಂದಿಗೆ ಎದುರಾಳಿ ಅಶೋಕ (7 ಮತ) ಅವರ ವಿರುದ್ಧ ಗೆಲುವು ಕಂಡರು. ಖಜಾಂಚಿ ಸ್ಥಾನದಲ್ಲಿ ಬೂದಿಹಳ್ಳಿ ರಾಜಣ್ಣ ಅವರು 8 ಮತಗಳನ್ನು ಪಡೆದು ಆಕಾರ್ಶ್ (7 ಮತ) ಅವರ ಸವಾಲನ್ನು ಮೆಟ್ಟಿ ನಿಂತು ನಿಯುಕ್ತರಾದರು. ಪ್ರತಿಯೊಂದು ಸ್ಥಾನದಲ್ಲೂ ತಲಾ 8 ಮತಗಳನ್ನು ಪಡೆಯುವ ಮೂಲಕ ಮಹಲಿಂಗಪ್ಪ ಸಿಂಡಿಕೇಟ್ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದು, ಪ್ರತಿಸ್ಪರ್ಧಿಗಳು ಕೇವಲ ಒಂದು ಮತದ ಅಂತರದಿಂದ ಪರಾಭವಗೊಂಡಿರುವುದು ಚುನಾವಣೆಯ ತೀವ್ರ ಪೈಪೋಟಿಗೆ ಸಾಕ್ಷಿಯಾಗಿದೆ. ಗೆಲುವಿನ ಬೆನ್ನಲ್ಲೇ ನೂತನ ಪದಾಧಿಕಾರಿಗಳ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಈ ಸಂಭ್ರಮಾಚರಣೆಯಲ್ಲಿ ರಾಜಶೇಖರ್, ಚಿಕ್ಜೆನಹಳ್ಳಿ ಶ್ರೀನಿವಾಸ್, ಗೋವಿಂದಪ್ಪ, ಅಜ್ಜಪ್ಪ, ನರಸಿಂಹಪ್ಪ, ತಮ್ನಣ್ಣ, ಅರುಣ್, ಫಾಲ್ಗುಣಿಶ್, ಈರಣ್ಣ, ನವೀನ ಸೇರಿದಂತೆ ಅನೇಕ ಅಭಿಮಾನಿಗಳು ಪಾಲ್ಗೊಂಡಿದ್ದರು.1
- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಬೆನ್ನಲ್ಲೇ ಕೋಟೆನಾಡು ಚಿತ್ರದುರ್ಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯಲ್ಲಿ ಒಟ್ಟು ಐದು ಮಂದಿ ಶಾಸಕರು ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಶಾಸಕರಾದ ಟಿ. ರಘುಮೂರ್ತಿ, ಎನ್.ವೈ. ಗೋಪಾಲಕೃಷ್ಣ, ಬಿ.ಜಿ. ಗೋವಿಂದಪ್ಪ, ಕೆ.ಸಿ. ವೀರೇಂದ್ರ ಮತ್ತು ಎಂಎಲ್‌ಸಿ ಡಿ.ಟಿ. ಶ್ರೀನಿವಾಸ್ ಅವರ ನಡುವೆ ಮಂತ್ರಿಗಿರಿಗಾಗಿ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಟ್ಟಿದೆ.1
- ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ರಾಮಗಿರಿ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದ ಬಳಿ ರೈತ ಮುಖಂಡರು ಮತ್ತು ರೈತರು ನಾಳೆಯಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ. ಹೊಳಲ್ಕೆರೆ ತಾಲೂಕನ್ನು ಸಂಪೂರ್ಣವಾಗಿ ಡ್ರಿಪ್ ನೀರಾವರಿಗೆ ಒಳಪಡಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.1
- ಭದ್ರಾವತಿ ಕ್ಷೇತ್ರದ ಕೆಆರ್‌ಡಿಎಲ್ ಅಧ್ಯಕ್ಷರು ಹಾಗೂ ಹಿರಿಯ ಕಾಂಗ್ರೆಸ್ ಶಾಸಕರಾದ ಬಿ.ಕೆ. ಸಂಗಮೇಶ್ ಅವರು ತಮಗೆ ಹಾಲಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡುವಂತೆ ಪ್ರಬಲವಾಗಿ ಮನವಿ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ತಾವೇ ಅತ್ಯಂತ ಹಿರಿಯ ಶಾಸಕರಾಗಿದ್ದು, ಸರ್ಕಾರದ ಮೊದಲ ಅವಧಿಯಲ್ಲಿ ತಮಗೆ ಮಂತ್ರಿ ಸ್ಥಾನ ನೀಡಬೇಕಿತ್ತಾದರೂ, ಅದನ್ನು ನೀಡಿರಲಿಲ್ಲ ಎಂದು ಅವರು ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಅಸಮಾಧಾನ ವ್ಯಕ್ತಪಡಿಸಿದರು. ಈಗಾಗಲೇ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವುದಾಗಿ ಹೇಳಿದ ಸಂಗಮೇಶ್, ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಂಡು ಬಂದಿರುವುದಾಗಿ ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಅವರು ಹಾಲಿ ಸಚಿವರಾಗಿರುವ ಮಧು ಬಂಗಾರಪ್ಪನವರನ್ನು ಹೆಸರಿಸುತ್ತಾ, ಅವರು ಜೆಡಿಎಸ್ ಪಕ್ಷದಿಂದ ಬಂದವರು ಹಾಗೂ ಕೇವಲ ಎರಡು ಬಾರಿ ಮಾತ್ರ ಶಾಸಕರಾಗಿದ್ದಾರೆ ಎಂದರು. ಅಲ್ಲದೆ, ಬೇಲೂರು ಗೋಪಾಲಕೃಷ್ಣ ಅವರು ಮೂರು ಬಾರಿ ಶಾಸಕರಾಗಿದ್ದರೂ, ತಾನು ನಾಲ್ಕು ಬಾರಿ ಶಾಸಕನಾಗಿರುವ ಕಾರಣ ತಮಗೆ ಮಂತ್ರಿ ಸ್ಥಾನ ಸಿಗಬೇಕು ಎಂದು ವಾದಿಸಿದರು. ಹೈಕಮಾಂಡ್ ಮತ್ತು ರಾಜ್ಯ ನಾಯಕರು ತಮಗೆ ಸೂಕ್ತ ಸ್ಥಾನಮಾನ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ಬಿ.ಕೆ. ಸಂಗಮೇಶ್ ಅವರು ಇದೇ ವೇಳೆ ವ್ಯಕ್ತಪಡಿಸಿದರು. ಭದ್ರಾವತಿ ತಾಲೂಕು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ತಾವೇ ಸೀನಿಯರ್ ಆಗಿದ್ದು, ತಮಗೆ ಮಂತ್ರಿ ಸ್ಥಾನ ನೀಡಬೇಕು ಎಂಬ ತಮ್ಮ ಮನವಿಯನ್ನು ಅವರು ಮತ್ತೊಮ್ಮೆ ದೃಢಪಡಿಸಿದರು.2
- ಗೋವುಗಳ ವಾಸ್ತವಿಕ ಸ್ಥಿತಿಯನ್ನು ಗಮನಿಸಿದ ನಂತರವೇ ಮಾತನಾಡಬೇಕೆಂದು ಸಾರ್ವಜನಿಕರು ಪುನೀತ್ ಕೆರೆಹಳ್ಳಿ ಅವರ ಸಹಾಯಕನಿಗೆ ತೀವ್ರ ತಿರುಗೇಟು ನೀಡಿದ್ದಾರೆ.1
- ಬಿಗ್‌ಬಾಸ್ ಖ್ಯಾತಿಯ ಜಾನವಿ ಇಂದು ಬೆಳಿಗ್ಗೆ (ಮೇ 30, 2026) ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕೆ ಸೇರ್ಪಡೆಯಾದ ತಕ್ಷಣ, ಅವರು ಮಾಜಿ ಪ್ರಧಾನ ಮಂತ್ರಿ ಶ್ರೀ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದರು.1
- ಶಾಸಕ ಸಿ.ಬಿ. ಸುರೇಶ್ ಬಾಬು ಅವರು ಹುಳಿಯಾರು ಪದವೀಧರ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಹುಳಿಯಾರಿನ ಬಿ.ಎಂ.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪದವಿ ಪೂರೈಸಿದ ವಿದ್ಯಾರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕಳೆದ 14 ವರ್ಷಗಳಿಂದ ಸಿಇಟಿ ಮತ್ತು ನೀಟ್ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಮತ್ತಷ್ಟು ಹೆಜ್ಜೆ ಮುಂದೆ ಹೋಗಿ, ಬಿ.ಎ., ಬಿಕಾಂ ಸೇರಿದಂತೆ ವಿವಿಧ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಗತಿಗಳನ್ನು ಆಯೋಜಿಸಲಾಗುತ್ತಿದೆ ಎಂದು ಶಾಸಕರು ವಿವರಿಸಿದರು. ಈ ಉಚಿತ ತರಬೇತಿಯಡಿಯಲ್ಲಿ ಎಫ್‌ಡಿಎ, ಎಸ್‌ಡಿಎ, ಬ್ಯಾಂಕಿಂಗ್ ಮತ್ತು ಪೊಲೀಸ್ ನೇಮಕಾತಿ ಪರೀಕ್ಷೆಗಳಿಗೆ ಆದ್ಯತೆ ನೀಡಲಾಗುವುದು. ಈ ಎಲ್ಲಾ ತರಬೇತಿಗಳನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲು ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ದಾವಣಗೆರೆಯ ಇನ್‌ಸೈಟ್ ಅಕಾಡೆಮಿಯವರೊಂದಿಗೆ ಮಾತುಕತೆ ನಡೆಸಲಾಗಿದೆ. "ಪ್ರತಿಯೊಂದು ಮನೆಯ ಮಗುವು ವಿದ್ಯಾವಂತರಾಗಿ, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಪೋಷಕರು ಕಷ್ಟಪಟ್ಟು ಓದಿಸಿದ ಮಕ್ಕಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಹೊಣೆಗಾರಿಕೆ ನಮ್ಮ ಮೇಲಿದೆ" ಎಂದು ಶಾಸಕರು ನುಡಿದರು. ಇದರ ಜೊತೆಗೆ, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಮೂಡುವಂತೆ ಸಲಹೆ ನೀಡಿದ ಅವರು, ಕೇವಲ ವಿದ್ಯೆಯಷ್ಟೇ ಅಲ್ಲದೆ, ಬೇರೆಯವರಿಗೆ ಸಹಾಯ ಮಾಡುವ ಮನೋಭಾವವನ್ನೂ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. "ಸಾಂಸ್ಕೃತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ಮಾತ್ರ ದೇಶದ ಉನ್ನತಿಗೆ ಸಹಕಾರಿಯಾಗುತ್ತದೆ" ಎಂದು ಕರೆ ನೀಡಿದರು.1