logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದ್ದು, ಅವರ ಸರ್ಕಾರದ ನೂತನ ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿ 14 ಸಂಭಾವ್ಯ ಶಾಸಕರ ಹೆಸರುಗಳು ಮುಂಚೂಣಿಗೆ ಬಂದಿವೆ. ಎರಡನೇ ದೊಡ್ಡ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ ಹಾಗೂ ಪೇಡಾ ನಗರಿ ಧಾರವಾಡ ಜಿಲ್ಲೆಯಲ್ಲಿ ವಿನಯ್ ಕುಲಕರ್ಣಿ ಅವರ ಶಾಸಕತ್ವ ರದ್ದಾದ ನಂತರ ಸದ್ಯ ಒಟ್ಟು 5 ಶಾಸಕರಿದ್ದಾರೆ – ಮೂವರು ವಿಧಾನಸಭೆಗೆ ಮತ್ತು ಇಬ್ಬರು ವಿಧಾನ ಪರಿಷತ್‌ಗೆ. ಈ ಐದು ಶಾಸಕರು ತಮ್ಮದೇ ಆದ ವರ್ಚಸ್ಸು ಹೊಂದಿದ್ದು, ಡಿ.ಕೆ. ಶಿವಕುಮಾರ್ ಅವರ ಸರ್ಕಾರದಲ್ಲಿ ಯಾರಿಗೆ ಮಂತ್ರಿ ಭಾಗ್ಯ ಒಲಿಯಲಿದೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮನೆಮಾಡಿದೆ. ಕಲಘಟಗಿ ಕ್ಷೇತ್ರದ ಶಾಸಕ ಸಂತೋಷ ಲಾಡ್ ಅವರು ಈಗಾಗಲೇ ಎರಡು ಬಾರಿ ಶಾಸಕರಾಗಿ ಹಾಗೂ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ದೀರ್ಘ ಅನುಭವ ಹೊಂದಿರುವ ಲಾಡ್ ಅವರು ಅಂಕಿ-ಸಂಖ್ಯೆ ಸಮೇತ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಪ್ರಖರ ವಾಗ್ಮಿ ಎನಿಸಿದ್ದಾರೆ. ತಮ್ಮ 'ಸಂತೋಷ್ ಲಾಡ್ ಫೌಂಡೇಶನ್' ಮೂಲಕ ಬಡವರು, ರೈತರು, ಅಂಗವಿಕಲರು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸರ್ಕಾರಿ ಪರವಾಗಿ ದೇಶ-ವಿದೇಶಗಳಲ್ಲಿ ಸಂರಕ್ಷಣಾತ್ಮಕ ಕೆಲಸ ನಿರ್ವಹಿಸಿದ ಹೆಗ್ಗಳಿಕೆ ಇವರಿಗಿದೆ. ಸಿದ್ದರಾಮಯ್ಯ ಅವರ ಆಪ್ತರಾಗಿರುವ ಸಂತೋಷ ಲಾಡ್ ಅವರಿಗೆ ಮತ್ತೊಂದು ಬಾರಿ ಸಚಿವ ಸ್ಥಾನ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ನವಲಗುಂದ ಕ್ಷೇತ್ರದ ಶಾಸಕ ಎನ್. ಎಚ್. ಕೊನರಡ್ಡಿ ಅವರು ಸಹ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದಲ್ಲಿ ತಳಮಟ್ಟದಿಂದ ಗಟ್ಟಿ ಹಿಡಿತ ಸಾಧಿಸಿದ್ದಾರೆ. ಹಂಗಾಮಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಇವರು ಈ ಬಾರಿ ಸಚಿವ ಸ್ಥಾನಕ್ಕಾಗಿ ಪ್ರಬಲ ಪೈಪೋಟಿ ನಡೆಸಿದ್ದು, 'ಪಕ್ಷ ಅವಕಾಶ ನೀಡಿದರೆ ಸಚಿವನಾಗಿ ಸಮರ್ಥವಾಗಿ ಕೆಲಸ ಮಾಡುವೆ' ಎಂದು ಹೇಳಿದ್ದಾರೆ. ಕೃಷಿ ರಸ್ತೆಗಳನ್ನು ಸುಸಜ್ಜಿತಗೊಳಿಸುವ ಮೂಲಕ ಗ್ರಾಮೀಣ ಭಾಗದಲ್ಲಿ 'ಚಕ್ಕಡಿ ದಾರಿ ಹರಿಕಾರ' ಎಂದೇ ಪ್ರಸಿದ್ಧಿ ಪಡೆದಿರುವ ಕೋನರೆಡ್ಡಿ ಅವರ ಸಾಧನೆ ಹಾಗೂ ಹಕ್ಕು ಮಂಡನೆಯನ್ನು ಸಚಿವ ಸ್ಥಾನದ ರೇಸ್‌ನಲ್ಲಿ ಅಲ್ಲಗಳೆಯುವಂತಿಲ್ಲ. ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಯಯ್ಯ ಅವರು ಸತತವಾಗಿ 3 ಬಾರಿ ಶಾಸಕರಾಗಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಹಿರಿಯ ನಾಯಕರು. ಸದ್ಯ ಕೊಳಚೆ ನಿರ್ಮೂಲನಾ ಮಂಡಳಿಯ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸುತ್ತಿರುವ ಇವರು ಸಹ ಈ ಬಾರಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಬಡವರು, ದೀನದಲಿತರು ಹಾಗೂ ಹಿಂದುಳಿದ ವರ್ಗದವರಿಗೆ ಅನೇಕ ಮಹತ್ವದ ಜನಪರ ಕೆಲಸಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿನ ಅವರ ನಿಷ್ಠೆ ಮತ್ತು ಹಿರಿತನವನ್ನು ಪರಿಗಣಿಸಿ, ಈ ಬಾರಿ ಸಚಿವ ಸ್ಥಾನ ನೀಡಿದರೆ ಹುಬ್ಬಳ್ಳಿ ಭಾಗದ ಅಭಿವೃದ್ಧಿಗೆ ಬಹಳ ಅನುಕೂಲವಾಗುತ್ತದೆ ಎಂಬ ಬಲವಾದ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ವಿಧಾನ ಪರಿಷತ್ ಸದಸ್ಯ ಸಲೀಂ ಅಹಮ್ಮದ್ ಅವರು ಈ ಹಿಂದೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಅನುಭವ ಹೊಂದಿದ್ದು, ಪಕ್ಷದಲ್ಲಿ ನಾನಾ ಜವಾಬ್ದಾರಿಯುತ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಸದ್ಯ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಪರಿಷತ್ ಮುಖ್ಯ ಸಚೇತರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯದ ಎಲ್ಲಾ ಹಿರಿಯ ಮುಖಂಡರ ಜೊತೆ ನೇರ ಸಂಪರ್ಕ ಹೊಂದಿರುವ ಸಲೀಂ ಅಹಮ್ಮದ್ ಅವರಿಗೂ ಈ ಬಾರಿ ಸಚಿವ ಸ್ಥಾನ ದೊರೆಯುವ ಮುಖ್ಯಾಂಶಗಳು ಎದ್ದು ಕಾಣುತ್ತಿವೆ. ಇವರು ಗ್ರಾಮ ಪಂಚಾಯತ್ ಮಟ್ಟದಲ್ಲಿ ಗುಣಮಟ್ಟದ ರಸ್ತೆ, ಅಂಗನವಾಡಿ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹೆಚ್ಚು ಶ್ರಮ ವಹಿಸಿದ್ದಾರೆ. ಇವರಿಗೆ ಅಲ್ಪಸಂಖ್ಯಾತರ ಕೋಟಾದಡಿ ಸಚಿವ ಸ್ಥಾನ ಸಿಕ್ಕರೆ ಅಚ್ಚರಿಪಡಬೇಕಾಗಿಲ್ಲ ಎಂದು ಅಲ್ಪಸಂಖ್ಯಾತ ವಲಯದಲ್ಲಿ ಒತ್ತಾಯ ಕೇಳಿಬರುತ್ತಿದೆ. ಇನ್ನೊಬ್ಬ ವಿಧಾನ ಪರಿಷತ್ ಸದಸ್ಯ ಎಫ್. ಎಚ್. ಜಕ್ಕಪ್ಪನವರ ಅವರು ಸಹ ಜಿಲ್ಲೆಯಲ್ಲಿ ತಮ್ಮ ಶಾಸಕರ ನಿಧಿಯ ಅನುದಾನದಡಿ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರಿಗೆ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಹುಟ್ಟು ಸಂಘಟನಾ ಹೋರಾಟಗಾರರಾಗಿರುವ ಇವರಿಗೆ ಸಂಪುಟದಲ್ಲಿ ಸ್ಥಾನ ನೀಡಿ ಸಚಿವ ಹುದ್ದೆ ಕೊಟ್ಟರೆ, ಸಂಘಟನಾ ಶಕ್ತಿಗೆ ಮತ್ತಷ್ಟು ಬಲ ಬರುತ್ತದೆ ಮತ್ತು ಜಿಲ್ಲೆಯ ಪ್ರಗತಿಗೆ ಬಹಳ ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ, ಧಾರವಾಡ ಜಿಲ್ಲೆಯಲ್ಲಿ ಕೇವಲ ಒಂದು ಸ್ಥಾನವನ್ನು ಬಿಟ್ಟರೆ, ಸದ್ಯ ಅರ್ಧ ಡಜನ್‌ಗೂ ಹೆಚ್ಚು ಪ್ರಭಾವಿ ನಾಯಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಜಿಲ್ಲೆಯ ಪ್ರಾದೇಶಿಕ ಸಮತೋಲನ, ಸಾಮಾಜಿಕ ನ್ಯಾಯ ಹಾಗೂ ಹಿರಿತನದ ಆಧಾರದ ಮೇಲೆ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನೂತನ ಸರ್ಕಾರ ಯಾರಿಗೆ ಮಣೆ ಹಾಕುತ್ತದೆ ಮತ್ತು ಯಾರ ಹೆಗಲಿಗೆ ಸಚಿವ ಸ್ಥಾನದ ಜವಾಬ್ದಾರಿ ಸಿಗಲಿದೆ ಎಂಬುದನ್ನು ಸದ್ಯದಲ್ಲೇ ಕಾದು ನೋಡಬೇಕಿದೆ.

3 hrs ago
user_Girish Ghatage
Girish Ghatage
Local News Reporter ಧಾರವಾಡ, ಧಾರವಾಡ, ಕರ್ನಾಟಕ•
3 hrs ago
9595446f-65be-4338-a575-ccb03a0ec9b7

More news from ಕರ್ನಾಟಕ and nearby areas
  • ಧಾರ್ವಾಡ್ ನಗರದ ರವೀಂದ್ರ ನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೀವ್ರ ವಿಳಂಬವಾಗಿದೆ. ಈ ಕುರಿತು 2015ರಿಂದ ವರದಿಗಳನ್ನು ಸಲ್ಲಿಸಲಾಗಿದ್ದರೂ, ಇಲ್ಲಿಯವರೆಗೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಈ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ. ರವೀಂದ್ರ ನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ವಿಚಾರದಲ್ಲಿನ ಈ ಸಮಸ್ಯೆಯನ್ನು ಎತ್ತಿ ಹಿಡಿಯಲು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.
    1
    ಧಾರ್ವಾಡ್ ನಗರದ ರವೀಂದ್ರ ನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೀವ್ರ ವಿಳಂಬವಾಗಿದೆ. ಈ ಕುರಿತು 2015ರಿಂದ ವರದಿಗಳನ್ನು ಸಲ್ಲಿಸಲಾಗಿದ್ದರೂ, ಇಲ್ಲಿಯವರೆಗೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಈ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ. ರವೀಂದ್ರ ನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ವಿಚಾರದಲ್ಲಿನ ಈ ಸಮಸ್ಯೆಯನ್ನು ಎತ್ತಿ ಹಿಡಿಯಲು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.
    user_Kushal Hiremath
    Kushal Hiremath
    ಧಾರವಾಡ, ಧಾರವಾಡ, ಕರ್ನಾಟಕ•
    8 hrs ago
  • ಧಾರವಾಡದಲ್ಲಿ ತಡಸಿನಕೊಪ್ಪ ಬಳಿ ಇತ್ತೀಚೆಗೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಗಾಯಗೊಂಡ ವಿಠಲ ವಾಲೀಕಾರನ ಆರೋಗ್ಯ ವಿಚಾರಿಸಲು ಎಸ್‌ಡಿಎಂ ಆಸ್ಪತ್ರೆಗೆ ಬಂದಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಥಳಕ್ಕೆ ಆಗಮಿಸದ ಕಾರಣ ತೀವ್ರವಾಗಿ ಗರಂ ಆಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಸಚಿವರು ಆಸ್ಪತ್ರೆಗೆ ಬರುವ ಬಗ್ಗೆ ಮಾಹಿತಿ ಇದ್ದರೂ ಆಯುಕ್ತರು ಗೈರುಹಾಜರಾಗಿದ್ದರು. ಈ ಘಟನೆಯಿಂದ ಕೋಪಗೊಂಡ ಜೋಶಿ, ಗುಂಡಿನ ದಾಳಿ ಪ್ರಕರಣದಲ್ಲಿ ಪೊಲೀಸರೇ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಗುಂಡಿನ ದಾಳಿ ನಡೆದು ನಾಲ್ಕು ದಿನಗಳಾದರೂ ಮುಖ್ಯ ಆರೋಪಿಯನ್ನು ಬಂಧಿಸಲು ಸಾಧ್ಯವಾಗದಿರುವುದು ವಿಚಿತ್ರ ಎಂದ ಅವರು, ಅಲ್ಲಿ ಉಪಸ್ಥಿತರಿದ್ದ ಡಿಸಿಪಿ ಶ್ರುತಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು, "ನಿಮ್ಮ ಕಮಿಷನರ್ ಎಲ್ಲಿ? ಇಲ್ಲಿಗೆ ಬರುವುದು ಅವರ ಕೆಲಸ ಅಲ್ಲವೇ?" ಎಂದು ಪ್ರಶ್ನಿಸಿದರು.
    1
    ಧಾರವಾಡದಲ್ಲಿ ತಡಸಿನಕೊಪ್ಪ ಬಳಿ ಇತ್ತೀಚೆಗೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಗಾಯಗೊಂಡ ವಿಠಲ ವಾಲೀಕಾರನ ಆರೋಗ್ಯ ವಿಚಾರಿಸಲು ಎಸ್‌ಡಿಎಂ ಆಸ್ಪತ್ರೆಗೆ ಬಂದಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಥಳಕ್ಕೆ ಆಗಮಿಸದ ಕಾರಣ ತೀವ್ರವಾಗಿ ಗರಂ ಆಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಸಚಿವರು ಆಸ್ಪತ್ರೆಗೆ ಬರುವ ಬಗ್ಗೆ ಮಾಹಿತಿ ಇದ್ದರೂ ಆಯುಕ್ತರು ಗೈರುಹಾಜರಾಗಿದ್ದರು.

ಈ ಘಟನೆಯಿಂದ ಕೋಪಗೊಂಡ ಜೋಶಿ, ಗುಂಡಿನ ದಾಳಿ ಪ್ರಕರಣದಲ್ಲಿ ಪೊಲೀಸರೇ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಗುಂಡಿನ ದಾಳಿ ನಡೆದು ನಾಲ್ಕು ದಿನಗಳಾದರೂ ಮುಖ್ಯ ಆರೋಪಿಯನ್ನು ಬಂಧಿಸಲು ಸಾಧ್ಯವಾಗದಿರುವುದು ವಿಚಿತ್ರ ಎಂದ ಅವರು, ಅಲ್ಲಿ ಉಪಸ್ಥಿತರಿದ್ದ ಡಿಸಿಪಿ ಶ್ರುತಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು, "ನಿಮ್ಮ ಕಮಿಷನರ್ ಎಲ್ಲಿ? ಇಲ್ಲಿಗೆ ಬರುವುದು ಅವರ ಕೆಲಸ ಅಲ್ಲವೇ?" ಎಂದು ಪ್ರಶ್ನಿಸಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    1 day ago
  • ಕಲಘಟಗಿಯಲ್ಲಿ ಬೆಳೆ ವಿಮೆಯಲ್ಲಿನ ತಾರತಮ್ಯದ ತನಿಖೆಗೆ ಆಗ್ರಹಿಸಿ ಭಾರತೀಯ ಕಿಸಾನ ಸಂಘ ನಡೆಸುತ್ತಿರುವ 11ನೇ ದಿನದ ಧರಣಿ ಸತ್ಯಾಗ್ರಹಕ್ಕೆ ದೇವರಕೊಂಡ ಗ್ರಾಮದ ಬಾಲಯೋಗಿ ಮಾಣಿಕ್ ವೃಷಭೇಂದ್ರ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ನಡೆಯುತ್ತಿರುವ ಈ ಪ್ರತಿಭಟನೆಗೆ ಆಶೀರ್ವಚನ ನೀಡಿದ ಸ್ವಾಮೀಜಿ, ರೈತರ ಮನಸ್ಸಿಗೆ ನೋವುಂಟು ಮಾಡಿದರೆ ಪಾಪ ಕರ್ಮಗಳು ಹೆಚ್ಚಾಗುತ್ತವೆ ಎಂದು ಎಚ್ಚರಿಕೆ ನೀಡಿದರು. ಸ್ವಾಮೀಜಿ ತಮ್ಮ ಭಾಷಣದಲ್ಲಿ, ಧರ್ಮದ ಹಾದಿಯಲ್ಲಿ ಸಾಗಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು. ಕೆಲವು ಅಧಿಕಾರಿಗಳು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಅವರಿಗೆ ವಿಮೆ ಹಣ ಬಂದಿದ್ದರೂ ಕೇಳುವವರಿಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಏಜೆಂಟರ ಮೂಲಕ ಹಣ ಜಮೆ ಮಾಡಿಸಿಕೊಂಡು ಶೇಕಡ 50ರಷ್ಟು ಕಮಿಷನ್ ಪಡೆಯುತ್ತಿರುವುದು ದೇಶದ ಅನ್ನದಾತನಿಗೆ ಬಗೆಯುತ್ತಿರುವ ದ್ರೋಹ ಎಂದು ಬಣ್ಣಿಸಿದ ಅವರು, ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿದರು. ಈ ಧರಣಿ ಸತ್ಯಾಗ್ರಹಕ್ಕೆ ಪಟ್ಟಣದ ಹನ್ನೆರಡು ಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಬಸನಗೌಡ್ರ, ತಾಲ್ಲೂಕು ಅಧ್ಯಕ್ಷ ಸಿದ್ದಪ್ಪ ಬೆಟಗೇರಿ, ಸಂಗ್ರಾಮ ಸೇನೆ ತಾಲ್ಲೂಕು ಅಧ್ಯಕ್ಷ ಸಾತಪ್ಪ ಕುಂಕೂರ, ಚಂದ್ರಗೌಡ ಪಾಟೀಲ, ಶಂಕರಗೌಡ ಪಾಟೀಲ, ಶಶಿಧರ ಹುಲಿಕಟ್ಟಿ, ಪರಶುರಾಮ ಹುಲಿಹೊಂಡ ಹಾಗೂ ಬಸವರಾಜ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
    1
    ಕಲಘಟಗಿಯಲ್ಲಿ ಬೆಳೆ ವಿಮೆಯಲ್ಲಿನ ತಾರತಮ್ಯದ ತನಿಖೆಗೆ ಆಗ್ರಹಿಸಿ ಭಾರತೀಯ ಕಿಸಾನ ಸಂಘ ನಡೆಸುತ್ತಿರುವ 11ನೇ ದಿನದ ಧರಣಿ ಸತ್ಯಾಗ್ರಹಕ್ಕೆ ದೇವರಕೊಂಡ ಗ್ರಾಮದ ಬಾಲಯೋಗಿ ಮಾಣಿಕ್ ವೃಷಭೇಂದ್ರ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ನಡೆಯುತ್ತಿರುವ ಈ ಪ್ರತಿಭಟನೆಗೆ ಆಶೀರ್ವಚನ ನೀಡಿದ ಸ್ವಾಮೀಜಿ, ರೈತರ ಮನಸ್ಸಿಗೆ ನೋವುಂಟು ಮಾಡಿದರೆ ಪಾಪ ಕರ್ಮಗಳು ಹೆಚ್ಚಾಗುತ್ತವೆ ಎಂದು ಎಚ್ಚರಿಕೆ ನೀಡಿದರು.

ಸ್ವಾಮೀಜಿ ತಮ್ಮ ಭಾಷಣದಲ್ಲಿ, ಧರ್ಮದ ಹಾದಿಯಲ್ಲಿ ಸಾಗಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು. ಕೆಲವು ಅಧಿಕಾರಿಗಳು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಅವರಿಗೆ ವಿಮೆ ಹಣ ಬಂದಿದ್ದರೂ ಕೇಳುವವರಿಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಏಜೆಂಟರ ಮೂಲಕ ಹಣ ಜಮೆ ಮಾಡಿಸಿಕೊಂಡು ಶೇಕಡ 50ರಷ್ಟು ಕಮಿಷನ್ ಪಡೆಯುತ್ತಿರುವುದು ದೇಶದ ಅನ್ನದಾತನಿಗೆ ಬಗೆಯುತ್ತಿರುವ ದ್ರೋಹ ಎಂದು ಬಣ್ಣಿಸಿದ ಅವರು, ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿದರು.

ಈ ಧರಣಿ ಸತ್ಯಾಗ್ರಹಕ್ಕೆ ಪಟ್ಟಣದ ಹನ್ನೆರಡು ಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಬಸನಗೌಡ್ರ, ತಾಲ್ಲೂಕು ಅಧ್ಯಕ್ಷ ಸಿದ್ದಪ್ಪ ಬೆಟಗೇರಿ, ಸಂಗ್ರಾಮ ಸೇನೆ ತಾಲ್ಲೂಕು ಅಧ್ಯಕ್ಷ ಸಾತಪ್ಪ ಕುಂಕೂರ, ಚಂದ್ರಗೌಡ ಪಾಟೀಲ, ಶಂಕರಗೌಡ ಪಾಟೀಲ, ಶಶಿಧರ ಹುಲಿಕಟ್ಟಿ, ಪರಶುರಾಮ ಹುಲಿಹೊಂಡ ಹಾಗೂ ಬಸವರಾಜ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
    user_Kallappa m mirji
    Kallappa m mirji
    Farmer ಕಳಘಟಗಿ, ಧಾರವಾಡ, ಕರ್ನಾಟಕ•
    3 hrs ago
  • ತಮ್ಮ ನೆಚ್ಚಿನ ಆರ್‌ಸಿಬಿ (ಬೆಂಗಳೂರು) ತಂಡ ಫೈನಲ್ ತಲುಪಿರುವ ಹಿನ್ನೆಲೆಯಲ್ಲಿ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಅಭಿಮಾನಿಗಳು ಫೈನಲ್ ಪಂದ್ಯವನ್ನು ವೀಕ್ಷಿಸಲು ಹೈದರಾಬಾದ್‌ಗೆ ತೆರಳಿದ್ದಾರೆ. ಇಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಫೈನಲ್ ಪಂದ್ಯವನ್ನು ವೀಕ್ಷಿಸಲು ಈ ಅಭಿಮಾನಿಗಳು ಉತ್ಸುಕತೆಯಿಂದ ಪ್ರಯಾಣಿಸಿದ್ದಾರೆ. ಈ ಅಭಿಮಾನಿಗಳು ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು, ಅದು ಬಹಳಷ್ಟು ಕುತೂಹಲವನ್ನು ಕೆರಳಿಸಿದೆ.
    1
    ತಮ್ಮ ನೆಚ್ಚಿನ ಆರ್‌ಸಿಬಿ (ಬೆಂಗಳೂರು) ತಂಡ ಫೈನಲ್ ತಲುಪಿರುವ ಹಿನ್ನೆಲೆಯಲ್ಲಿ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಅಭಿಮಾನಿಗಳು ಫೈನಲ್ ಪಂದ್ಯವನ್ನು ವೀಕ್ಷಿಸಲು ಹೈದರಾಬಾದ್‌ಗೆ ತೆರಳಿದ್ದಾರೆ. ಇಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಫೈನಲ್ ಪಂದ್ಯವನ್ನು ವೀಕ್ಷಿಸಲು ಈ ಅಭಿಮಾನಿಗಳು ಉತ್ಸುಕತೆಯಿಂದ ಪ್ರಯಾಣಿಸಿದ್ದಾರೆ.

ಈ ಅಭಿಮಾನಿಗಳು ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು, ಅದು ಬಹಳಷ್ಟು ಕುತೂಹಲವನ್ನು ಕೆರಳಿಸಿದೆ.
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    4 hrs ago
  • ಆರ್‌ಸಿಬಿ ತಂಡದ ಫೈನಲ್ ಪಂದ್ಯವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಆರ್‌ಸಿಬಿ ತಂಡವು ಗೆಲ್ಲಲೆಂದು ಎಲ್ಲರೂ ಶುಭ ಹಾರೈಸಿದರು.
    1
    ಆರ್‌ಸಿಬಿ ತಂಡದ ಫೈನಲ್ ಪಂದ್ಯವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಆರ್‌ಸಿಬಿ ತಂಡವು ಗೆಲ್ಲಲೆಂದು ಎಲ್ಲರೂ ಶುಭ ಹಾರೈಸಿದರು.
    user_H M ಹರಕುಣಿ
    H M ಹರಕುಣಿ
    Local News Reporter Haveri, Karnataka•
    2 hrs ago
  • ಗೋಕಾಕ ತಾಲ್ಲೂಕಿನಲ್ಲಿರುವ ದೊಡ್ಡ ಗ್ರಾಮ ಖನಗಾವ, ಸುತ್ತಮುತ್ತಲಿನ ಪುಟ್ಟ ಗ್ರಾಮಗಳಿಗೆ ಕೇಂದ್ರವಾಗಿರುವ ಕಾರಣ ಇದನ್ನು 'ಏಳೂರ ತಗ್ಗು' ಎಂದೂ ಕರೆಯಲಾಗುತ್ತದೆ. ಇಲ್ಲಿನ ಖನ್ನಮ್ಮ ದೇವಿ ದೇವಸ್ಥಾನಕ್ಕೆ ದೂರದ ಊರುಗಳಿಂದಲೂ ಭಕ್ತರು ಆಗಮಿಸುತ್ತಾರೆ. ಖನಗಾವ ಸುತ್ತಮುತ್ತಲಿನ ಗಿಳಿಹೊಸೂರ, ಮಿಡಕನಟ್ಟಿ, ಶಿಲ್ತಿಭಾವಿ, ಕೈತನಾಳ ಮುಂತಾದ ಊರುಗಳನ್ನು ಆವರಿಸಿರುವ ಅರಣ್ಯ ಪ್ರದೇಶವು ಚಿಕ್ಕಪುಟ್ಟ ಪ್ರಾಣಿಗಳು ಮತ್ತು ಗಿಡಮೂಲಿಕೆಗಳಿಗೆ ನೆಲೆಯಾಗಿದೆ. ಈ ಕಾಡಿನಲ್ಲಿ 'ಗುಡ್ಡದ ಹೊನ್ನಾರಿ' ಎಂಬ ವಿಶೇಷ ತರಕಾರಿ ದೊರೆಯುತ್ತದೆ. ಇಂದಿನ ಅನೇಕರಿಗೆ ಇದರ ಬಗ್ಗೆ ತಿಳಿದಿಲ್ಲವಾದರೂ, ಈ ಲೇಖನದ ಲೇಖಕರು ತಮ್ಮ ಬಾಲ್ಯದಲ್ಲಿ ಈ ತರಕಾರಿಯನ್ನು ನೋಡಿ ಅದರ ರುಚಿಯನ್ನು ಮರೆತಿರಲಿಲ್ಲ. ಕಾಲಕಾಲಕ್ಕೆ ಕಾಡಿನಲ್ಲಿ ಇದನ್ನು ಅನ್ವೇಷಿಸಿದರೂ, ಈ ತರಕಾರಿ ಸಿಕ್ಕಿರಲಿಲ್ಲ. ಆದರೆ, ಕಳೆದ ವಾರ ಲೇಖಕರು ಕೈತನಾಳ ಪಕ್ಕದ ಕಾಡಿನ ಬಳಿ ಇರುವ ತಮ್ಮ ಸ್ನೇಹಿತ ಸತೀಶ ಡಬ್ಬನವರ ಅವರ ಹೊಲಕ್ಕೆ ಭೇಟಿ ನೀಡಿದಾಗ, ಈ ಕುರಿತು ವಿಚಾರಿಸಿದರು. ಸತೀಶ ಅವರು 'ಗುಡ್ಡದ ಹೊನ್ನಾರಿ' ಗಿಡಗಳನ್ನು ತೋರಿಸಿ, ಈ ರುಚಿಕರ ತರಕಾರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನೂ ನೀಡಿದರು. ಈ ಮೂಲಕ ಹಲವು ವರ್ಷಗಳ ಹುಡುಕಾಟಕ್ಕೆ ಫಲ ದೊರೆತಿದೆ.
    4
    ಗೋಕಾಕ ತಾಲ್ಲೂಕಿನಲ್ಲಿರುವ ದೊಡ್ಡ ಗ್ರಾಮ ಖನಗಾವ, ಸುತ್ತಮುತ್ತಲಿನ ಪುಟ್ಟ ಗ್ರಾಮಗಳಿಗೆ ಕೇಂದ್ರವಾಗಿರುವ ಕಾರಣ ಇದನ್ನು 'ಏಳೂರ ತಗ್ಗು' ಎಂದೂ ಕರೆಯಲಾಗುತ್ತದೆ. ಇಲ್ಲಿನ ಖನ್ನಮ್ಮ ದೇವಿ ದೇವಸ್ಥಾನಕ್ಕೆ ದೂರದ ಊರುಗಳಿಂದಲೂ ಭಕ್ತರು ಆಗಮಿಸುತ್ತಾರೆ. ಖನಗಾವ ಸುತ್ತಮುತ್ತಲಿನ ಗಿಳಿಹೊಸೂರ, ಮಿಡಕನಟ್ಟಿ, ಶಿಲ್ತಿಭಾವಿ, ಕೈತನಾಳ ಮುಂತಾದ ಊರುಗಳನ್ನು ಆವರಿಸಿರುವ ಅರಣ್ಯ ಪ್ರದೇಶವು ಚಿಕ್ಕಪುಟ್ಟ ಪ್ರಾಣಿಗಳು ಮತ್ತು ಗಿಡಮೂಲಿಕೆಗಳಿಗೆ ನೆಲೆಯಾಗಿದೆ.

ಈ ಕಾಡಿನಲ್ಲಿ 'ಗುಡ್ಡದ ಹೊನ್ನಾರಿ' ಎಂಬ ವಿಶೇಷ ತರಕಾರಿ ದೊರೆಯುತ್ತದೆ. ಇಂದಿನ ಅನೇಕರಿಗೆ ಇದರ ಬಗ್ಗೆ ತಿಳಿದಿಲ್ಲವಾದರೂ, ಈ ಲೇಖನದ ಲೇಖಕರು ತಮ್ಮ ಬಾಲ್ಯದಲ್ಲಿ ಈ ತರಕಾರಿಯನ್ನು ನೋಡಿ ಅದರ ರುಚಿಯನ್ನು ಮರೆತಿರಲಿಲ್ಲ. ಕಾಲಕಾಲಕ್ಕೆ ಕಾಡಿನಲ್ಲಿ ಇದನ್ನು ಅನ್ವೇಷಿಸಿದರೂ, ಈ ತರಕಾರಿ ಸಿಕ್ಕಿರಲಿಲ್ಲ.

ಆದರೆ, ಕಳೆದ ವಾರ ಲೇಖಕರು ಕೈತನಾಳ ಪಕ್ಕದ ಕಾಡಿನ ಬಳಿ ಇರುವ ತಮ್ಮ ಸ್ನೇಹಿತ ಸತೀಶ ಡಬ್ಬನವರ ಅವರ ಹೊಲಕ್ಕೆ ಭೇಟಿ ನೀಡಿದಾಗ, ಈ ಕುರಿತು ವಿಚಾರಿಸಿದರು. ಸತೀಶ ಅವರು 'ಗುಡ್ಡದ ಹೊನ್ನಾರಿ' ಗಿಡಗಳನ್ನು ತೋರಿಸಿ, ಈ ರುಚಿಕರ ತರಕಾರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನೂ ನೀಡಿದರು. ಈ ಮೂಲಕ ಹಲವು ವರ್ಷಗಳ ಹುಡುಕಾಟಕ್ಕೆ ಫಲ ದೊರೆತಿದೆ.
    user_Basavraj Pattansheti
    Basavraj Pattansheti
    Artist ಗೋಕಾಕ, ಬೆಳಗಾವಿ, ಕರ್ನಾಟಕ•
    12 hrs ago
  • ರಾಯಬಾಗದಲ್ಲಿ ಬಸವರಾಜ ಹೆಗಲೆ ಅವರು ತಮ್ಮ ಹಾಸ್ಯಮಯ ಚಟಾಕಿಗಳ ಮೂಲಕ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
    2
    ರಾಯಬಾಗದಲ್ಲಿ ಬಸವರಾಜ ಹೆಗಲೆ ಅವರು ತಮ್ಮ ಹಾಸ್ಯಮಯ ಚಟಾಕಿಗಳ ಮೂಲಕ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
    user_ಅಮರ ವಾಹಿನಿ ಕನ್ನಡ news
    ಅಮರ ವಾಹಿನಿ ಕನ್ನಡ news
    ರಾಯಬಾಗ, ಬೆಳಗಾವಿ, ಕರ್ನಾಟಕ•
    2 hrs ago
  • ಮಾಜಿ ಶಾಸಕಿ ಸೀಮಾ ಮಸೂತಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸಿದ್ದರಾಮಯ್ಯನವರು ಬಿಟ್ಟಿ ಭಾಗ್ಯಗಳನ್ನು ಘೋಷಣೆ ಮಾಡಿ ರಾಜ್ಯವನ್ನು ಅಧೋಗತಿಗೆ ತಲುಪಿಸಿ ರಾಜಿನಾಮೆ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. ಧಾರವಾಡ ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದೆ ಹಾಗೂ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ ಎಂದರು. ಗ್ಯಾರಂಟಿ ಯೋಜನೆಗಳ ಕಡಿತ ಮಾಡಲಾಗುತ್ತಿದೆ ಎಂದು ದೂರಿದ ಅವರು, ಮುಂದೆ ಬರಲಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಈ ಬೆಳವಣಿಗೆಗಳಿಂದ ರೋಸಿಹೋದ ಜನರು ಮುಂಬರುವ ದಿನಗಳಲ್ಲಿ ವಿಧಾನಸೌಧ ನುಗ್ಗಿ ಪ್ರತಿಭಟನೆ (ಹೊಡೆಯುವ) ನಡೆಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸೀಮಾ ಮಸೂತಿ ಎಚ್ಚರಿಕೆ ನೀಡಿದರು.
    1
    ಮಾಜಿ ಶಾಸಕಿ ಸೀಮಾ ಮಸೂತಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸಿದ್ದರಾಮಯ್ಯನವರು ಬಿಟ್ಟಿ ಭಾಗ್ಯಗಳನ್ನು ಘೋಷಣೆ ಮಾಡಿ ರಾಜ್ಯವನ್ನು ಅಧೋಗತಿಗೆ ತಲುಪಿಸಿ ರಾಜಿನಾಮೆ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. ಧಾರವಾಡ ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದೆ ಹಾಗೂ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ ಎಂದರು.

ಗ್ಯಾರಂಟಿ ಯೋಜನೆಗಳ ಕಡಿತ ಮಾಡಲಾಗುತ್ತಿದೆ ಎಂದು ದೂರಿದ ಅವರು, ಮುಂದೆ ಬರಲಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಈ ಬೆಳವಣಿಗೆಗಳಿಂದ ರೋಸಿಹೋದ ಜನರು ಮುಂಬರುವ ದಿನಗಳಲ್ಲಿ ವಿಧಾನಸೌಧ ನುಗ್ಗಿ ಪ್ರತಿಭಟನೆ (ಹೊಡೆಯುವ) ನಡೆಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸೀಮಾ ಮಸೂತಿ ಎಚ್ಚರಿಕೆ ನೀಡಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    1 day ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.