ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಶಕ್ತಿ-ಮಂಜುನಾಥ್. ಕೊರಟಗೆರೆ ;- ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ನಾಯಕತ್ವದ ಗುಣಗಳನ್ನು ಹಾಗೂ ಸಾರ್ವಜನಿಕವಾಗಿ ಮಾತನಾಡುವ ಸಾಮರ್ಥ್ಯವನ್ನು ಬೆಳೆಸುವುದು ಯುವ ಸಂಸತ್ತಿನ ಉದ್ದೇಶ ಪ್ರಜೆಗಳೇ ಪ್ರಜಾಪ್ರಭುತ್ವದ ಶಕ್ತಿ ಮತದಾನ ನಮ್ಮ ಹಕ್ಕು ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಶಕ್ತಿ-ಮಂಜುನಾಥ್. ಕೊರಟಗೆರೆ ;- ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ನಾಯಕತ್ವದ ಗುಣಗಳನ್ನು ಹಾಗೂ ಸಾರ್ವಜನಿಕವಾಗಿ ಮಾತನಾಡುವ ಸಾಮರ್ಥ್ಯವನ್ನು ಬೆಳೆಸುವುದು ಯುವ ಸಂಸತ್ತಿನ ಉದ್ದೇಶ ಪ್ರಜೆಗಳೇ ಪ್ರಜಾಪ್ರಭುತ್ವದ ಶಕ್ತಿ ಮತದಾನ ನಮ್ಮ ಹಕ್ಕು ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದರು. ಅವರು ಕೊರಟಗೆರೆ ಪಟ್ಟಣದ ಬಾಲಕೀಯರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಯುವ ಸಂಸತ್ ಸಭೆಗೆ ಚಾಲನೆ ನೀಡಿ ಮಾತನಾಡಿ ಪ್ರಜಾಪ್ರಭುತ್ವ ತತ್ವದ ಅನುಸರಣೆಯಲ್ಲಿ ದೇಶವು ಮಾದರಿಯಾಗಿದೆ, ಪ್ರಜಾಪ್ರಭತ್ವ ಚಲನೆಶೀಲತೆಯನ್ನು ಮತ್ತಷ್ಟು ವಿಸ್ತರಿಸುವ ಹಾಗೂ ಯುವ ಸಮುದಾಯಕ್ಕೆ ದೇಶದ ಸಂಸದೀಯ ವ್ಯವಸ್ಥೆಯನ್ನು ಪರಿಚಯಿಸುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಯುವ ಸಂಸತ್ತು ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದ ಅವರು ಯುವ ಜನರು ಭವಿಷ್ಯದ ಪ್ರಜೆಗಳಾದ ನೀವು ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಮಹತ್ತರವಾಗಿದೆ ಎಂದು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇರ್ಶಕರಾದ ಯಮುನಾ ಮಾತನಾಡಿ ಪ್ರಜಾಪ್ರಭುತ್ವದ ಮಹತ್ವ, ಸಂವಿಧಾನದ ಆಶಯಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಯುವಜನರಲ್ಲಿ ಅರಿವು ಮೂಡಿಸುವ ಉದ್ದೇಶಮಾಗಿದೆ ಎಂದು ತಿಳಿಸಿದರು, ಪ್ರಧಾನ ಭಾಷಣಕಾರರಾದ ಪ್ರಸನ್ನಕುಮಾರ್ ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಈ ದೃಷ್ಠಿಯಿಂದ ಮಕ್ಕಳಲ್ಲಿ ಚುನಾವಣೆ, ಮತದಾನ ಜಾಗೃತಿ ಮೂಡಿಸುವ ಉದ್ದೇಶ ಹಾಗೂ ಶಾಸಕಾಂಗ ವ್ಯವಸ್ಥೆ ಬಗ್ಗೆ ಅರಿವು ಮೂಡಿಸುವುದು ಸಂಸತ್ ಚಟುವಟೆಕೆಯ ಧ್ಯೇಯವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯ ನರಸಿಂಹರಾಜು. ಬಿ.ಆರ್.ಪಿ. ಅಶ್ವತ್ಥನಾರಾಯಣ, ಸಿದ್ದಲಿಂಗಸ್ವಾಮಿ ಸೇರಿದಂತೆ ಶಾಲೆಯ ಎಲ್ಲಾ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

- ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಚಿರತೆಗಳು: ಆತಂಕದಲ್ಲಿ ರೈತರು MADHUGIRI ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದೊಡ್ಡ ಮಾಲೂರು ಭೂದೇನಹಳ್ಳಿ ವ್ಯಾಪ್ತಿಯಲ್ಲಿ ನಿತ್ಯ ಚಿರತೆಗಳು ಕಂಡುಬರುತ್ತಿದ್ದು ರೈತರು ಆತಂಕಕೊಳಗಾಗಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ತುರ್ತಾಗಿ ಬೋನು ಅಳವಡಿಸಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.1
- ತಮಾಷೆ ಹಾಗೂ ಆರೋಗ್ಯಕರವಾದಂತ ವಿಡಿಯೋ ಇದು ನೋಡಿ #onlinetv24x71
- ಸರಕಾರ ಕೂಡಲೇ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಬಾಕಿ ಹಣ ಬಿಡುಗಡೆ ಮಾಡಬೇಕು ತುಮಕೂರು:ಜಿಲ್ಲೆಯಲ್ಲಿ ತೀವ್ರ ಬರಗಾಲ ಕಾಣಿಸಿಕೊಂಡಿದ್ದು,ಜಿಲ್ಲೆಯ ತಿಪಟೂರು ಹೊರತು ಪಡಿಸಿ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರಕಾರ ಘೋಷಣೆ ಮಾಡಿದ್ದರೂ ಇದುವರೆಗೂ ಬರಪರಿಹಾರ ಕಾಮಗಾರಿಗಳನ್ನು ಕೈಗೆತ್ತಿ ಕೊಂಡಿಲ್ಲ.ಇದರಿAದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಂಡಿದ್ದು, ಕೂಡಲೇ ಜಿಲ್ಲಾಡಳಿತ ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮಳೆಯಿಲ್ಲದ ಕಾರಣ ಜಿಲ್ಲೆಯ ಶೇ70 ರಷ್ಟು ಭೂಮಿಯಲ್ಲಿ ಭಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬಿತ್ತನೆ ಮಾಡಿದ ಶೇ30ರಷ್ಟು ಭೂಮಿಯಲ್ಲಿನ ಫಸಲು ಸಹ ಸಕಾಲಕ್ಕೆ ಮಳೆಯಿಲ್ಲದೆ ಒಣಗಿದ್ದು,ದಿನದಿಂದ ದಿನಕ್ಕೆ ಅಂತರಜಲ ಕುಸಿಯುತ್ತಿದ್ದು,ಮುಂದಿನ 15-20 ದಿನಗಳಲ್ಲಿ ತೀವ್ರ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ತಕ್ಷಣವೇ ಕುಡಿಯುವ ನೀರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೆಯೇ ಜಾನುವಾರುಗಳ ಮೇವಿಗೆ ಗೋಶಾಲೆ ತೆರೆಯುವುದು.ಎಕರೆಗೆ ತಲಾ 50 ಸಾವಿರ ಬೆಳೆ ಪರಿಹಾರ,ಕೃಷಿಕರು ಮತ್ತು ಕೃಷಿ ಕೂಲಿ ಕಾರ್ಮಿಕರು ಗುಳೆ ಹೋಗದಂತೆ ವಿಬಿಜಿ ರಾಮಜಿ ಅಡಿಯಲ್ಲಿ ಕೆಲಸ ನೀಡಿ ಜನರ ನೆರವಿಗೆ ಬರಬೇಕೆಂದು ಆಗ್ರಹಿಸಿದರು. ಈ ಬಾರಿ ಹೇಮಾವತಿ ಜಲಾಶಯದಲ್ಲಿ ಶೇ75ರಷ್ಟು ನೀರಿನ ಸಂಗ್ರಹವಿತ್ತು. ಆಗ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರುಗಳು ಎಚ್ಚೆತ್ತುಕೊಂಡು ನಮ್ಮ ಕೆರೆ, ಕೆಟ್ಟೆಗಳಿಗೆ ನೀರು ಹರಿಸಿಕೊಂಡಿದ್ದರೆ ಅಂತರ ಜಲ ಕುಸಿತ ತಡೆಯಬಹುದಿತ್ತು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ನಿರ್ಲಕ್ಷದ ಫಲವಾಗಿ ನಮ್ಮ ಜಿಲ್ಲೆಗೆ ಬರಬೇಕಾದ ನೀರು ತೆಮಿಳು ನಾಡಿಗೆ ಹರಿಸಿ,ಸರಕಾರ ತನ್ನ ಖರ್ಚಿ ಉಳಿಸಿಕೊಂಡಿದೆ.ನಮ್ಮ ತೋಟ, ತುಡಿಕೆಗಳು ಒಣಗಿ, ರೈತರು ಕಂಗಾಲಾಗಿದ್ದಾರೆ.ಈಗಲಾದರೂ ಜಿಲ್ಲಾಡಳಿತ ಎಲ್ಲಾ ಕೆರೆ, ಕಟ್ಟೆಗಳಿಗೆ ನೀರು ಹರಿಸುವ ಕೆಲಸ ಮಾಡಬೇಕು ಎಂದು ಎ.ಗೋವಿಂದರಾಜು ನುಡಿದರು. ಈಲ್ಲೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಶುರುವಾಗಿದ್ದು, ದಿನದಲ್ಲಿ ಒಂದು ಗಂಟೆ ರೈತರ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ದೊರೆಯುತ್ತಿಲ್ಲ.ನಿರ್ಮಾಣವಾಗಿರುವ 220 ಕೆ.ವಿ.ಉಪಸ್ಥಾವರಗಳು ಕಾರ್ಯಾರಂಭಗೊAಡಿಲ್ಲ.ಬೇಸ್ಕಾA ಅಧಿಕಾರಿಗಳು ಅಸಹಾಯಕರಾಗಿದ್ದಾರೆ.ಹಾಗಾಗಿ ಬೆಸ್ಕಾಂ ಸೂಪರಿಂಡೆAಟ್ ಇಂಜಿನಿಯರ್, ಮುಖ್ಯ ಇಂಜಿನಿಯರ್ ಹಾಗೂ ಕಾರ್ಯಪಾಲಕ ಇಂಜಿನಿಯರ್‌ಗಳು ಸೆಪ್ಟಂಬರ್ 21ರೊಳಗೆ ರೈತರು,ರೈತ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ಸೆಪ್ಟಂಬರ್ 23 ರಿಂದ ಹಂತ ಹಂತವಾಗಿ ಎಲ್ಲಾ ತಾಲೂಕು ಬೆಸ್ಕಾಂ ಕಚೇರಿ ಮತ್ತು ತಹಶೀಲ್ದಾರರ ಕಚೇರಿಯ ಮುಂದೆ ಪಿಕೇಟಿಗ್ ನಡೆಸಲಾಗುವುದು. ಮಧುಗಿರಿ ಉಪವಿಭಾಗಕ್ಕೆ ಸಂಬAಧಿಸಿ ದಂತೆ ಸೆಪ್ಟಂಬರ್ 23 ರಂದು ಮಧುಗಿರಿ ಎ.ಸಿ.ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದರು. ಈಲ್ಲೆಯಲ್ಲಿ ಸರಕಾರದ ಯೋಜನೆಗಳಾದ ಹೇಮಾವತಿ ನಾಲೆ, ಎತ್ತಿನಹೊಳೆ ಯೋಜನೆ, ರೈಲ್ವೆಗೆ ಸೇರಿ ರೈತರ ಸಾಕಷ್ಟು ಫಲವತ್ತಾ ಭೂಮಿಯನ್ನು ವಶಪಡಿಸಿಕೊಂಡು 20-30 ವರ್ಷಗಳು ಕಳೆದರು ವೈಜ್ಞಾನಿಕ ಪರಿಹಾರ ನೀಡಿಲ್ಲ. ನ್ಯಾಯಾಲಯಕ್ಕೆ ಹೋದ ರೈತರಿಗೆ ಕೋರ್ಟ್ ಆದೇಶದಂತೆ ಸುಮಾರು 500 ಕೋಟಿ ರೂಗಳಿಗೆ ಹೆಚ್ಚಿನ ಬಾಕಿ ನೀಡಬೇಕಿದೆ.ಆದರೆ ಇದುವರೆಗೂ ಒಂದು ನೈಯಾಫೈಸೆ ನೀಡಿಲ್ಲ. ಹಲವು ಮೂಲ ಜಮೀನುದಾರರು ಸಾವನ್ನಪ್ಪಿದ್ದಾರೆ.ಸರಕಾರ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು. ಹಾಗೆಯೇ ಕಳೆದ ಸಾಲಿನಲ್ಲಿ ನ್ಯಾಫೇಡ್ ಮೂಲಕ ಖರೀದಿಸಿದ್ದ ರಾಗಿಯ ಬಾಬ್ತು ಸುಮಾರು 400 ಕೋಟಿ ರೂ ಬಾಕಿ ಬರಬೇಕಾಗಿದೆ. ಸರಕಾರ ಕೂಡಲೇ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಎ.ಗೋವಿಂದರಾಜು ಆಗ್ರಹಿಸಿದರು. ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದೆ.ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರದ ಕಾರಣ, ಉತ್ಪಾಧನಾ ವೆಚ್ಚ ಹೆಚ್ಚಾಗಿ,ನಷ್ಟಕ್ಕೆ ಒಳಗಾಗಿ ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾನೆ.ಇದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸಂಸದರು ಒಂದು ಬಾರಿಗೆ ರೈತರ ಸಾಲಮನ್ನಾಕ್ಕೆ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು.ಹಾಗೆಯೇ ಬ್ಯಾಂಕುಗಳು, ಕಿರು ಹಣಕಾಸು ಸಂಸ್ಥೆಗಳು ಬಲವಂತದ ವಸೂಲಿ ಮಾಡದಂತೆ ಸುತ್ತೋಲೆ ಹೊರಡಿಸಬೇಕೆಂದು ಆಗ್ರಹಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಮಾತನಾಡಿ,ಬರದಿಂದ ಬೆಳೆ ನಷ್ಟದಿಂದ ಜನರು ಸಂಕಷ್ಟದಲ್ಲಿದ್ದು,ಸರಕಾರ ಕೇರಳ ಮಾದರಿಯಲ್ಲಿ ಪಡಿತರ ಅಕ್ಕಿಯ ಜೊತೆಗೆ, ಬೇಳೆ, ಬೆಲ್ಲ ಸೇರಿದಂತೆ ದಿನ ಬಳಕೆಯ ವಸ್ತುಗಳನ್ನು ರಿಯಾಯತಿ ದರದಲ್ಲಿ ನೀಡಬೇಕು.ಹಾಗೆಯೇ ಪಶುಸಂಗೋಪನೆಗೆ ಪೂರಕವಾಗಿ ಬೂಸ್ ಮತ್ತು ಹಿಂಡಿಯನ್ನು ಶೇ50ರ ರಿಯಾಯಿತಿ ದರದಲ್ಲಿ ನೀಡಬೇಕು. ಲೀಟರ್ ಹಾಲಿಗೆ 40 ರೂ ನೀಡಬೇಕೆಂದು ಒತ್ತಾಯಿಸಿದರು. ನಂದಿಹಳ್ಳಿ-ಮಲ್ಲಸAದ್ರ-ವಸAತನರಸಾಪುರ ಔಟರ್ ರಿಂಗ್ ರಸ್ತೆಗೆ ರೈತರ ವಿರೋಧದ ನಡುವೆಯೂ ಭೂಸ್ವಾಧೀನಕ್ಕೆ ಅಧಿಕಾರಿಗಳು ಮುಂದಾಗುತ್ತಲೇ ಇದ್ದಾರೆ.ಜನರಿಗೆ ಹೆಚ್ಚು ಉಪಯೋಗವಿಲ್ಲದ ಔಟರ್‌ರಿಂಗ್ ರಸ್ತೆ ಯೋಜನೆಯನ್ನು ಕೈಬಿಡಬೇಕು.ಹಾಗೆಯೇ ಜಿಲ್ಲೆಯ 7-8 ತಾಲೂಕುಗಳಿಗೆ ಮರಣ ಶಾಸನವಾಗಿರುವ ಏಕ್ಸ್ಪ್ರೆಸ್ ಕೇನಾಲ್ ಯೋಜನೆಯನ್ನು ಸರಕಾರ ರದ್ದು ಮಾಡಬೇಕು. ಕುಣಿಗಲ್ ನೆಪದಲ್ಲಿ ಬಿಡದಿಯೇ ಎಐ ಡೇಟಾ ಸೆಂಟರ್‌ಗೆ ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ ಎಂದು ಜಿ.ಸಿ.ಶಂಕರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ವಿವಿಧ ತಾಲೂಕುಗಳ ಅಧ್ಯಕ್ಷರಾದ ಚಿಕ್ಕಬೋರೇಗೌಡ, ಲೋಕೇಶ್, ರಂಗಹನುಮಯ್ಯ, ಷಬ್ಬೀರ್ ಪಾಷ, ಯುವಘಟಕದ ಮಂಜುನಾಥ್, ಜಟ್ಟಿ, ತಿಮ್ಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.1
- ಬ್ರೇಕಿಂಗ್ ನ್ಯೂಸ್ : ಪಾವಗಡ ಪೊಲೀಸರ ಭರ್ಜರಿ ಬೇಟೆ: ಬಲೆಗೆ ಬಿದ್ದ ನಕ್ಸಲ್ ವೆಂಕಟೇಶ್1
- ಹೆದ್ದಾರಿಯಲ್ಲಿ ಭೀಕರ ಅಪಘಾತ. ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ. ದೇವನಹಳ್ಳಿ ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ. ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ. ಬರ್ತಿದ್ದ ರಸ್ತೆಯಿಂದ ಡಿವೈಡರ್ ದಾಟಿ ಮತ್ತೊಂದು ರಸ್ತೆಯಲ್ಲಿ ಬರ್ತಿದ್ದ ಕಾರಿಗೆ ಡಿಕ್ಕಿ. ಡಿಕ್ಕಿಯ ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಒರ್ವ ಸಾವು ಮೂವರಿಗೆ ಗಂಭೀರ ಗಾಯ. ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ಘಟನೆ. ಹೊಸಕೋಟೆ ದಾಬಸ್ ಪೇಟೆ ರಾಷ್ಟ್ರಿಯ ಹೆದ್ದಾರಿ 648 ರಲ್ಲಿ ಘಟನೆ. ಶಿಡ್ಲಘಟ್ಟ ಮೂಲಕ ವೆಂಕಟೇಶಪ್ಪ ( 75 ) ಮೃತ ವ್ಯಕ್ತಿ. ಮುನಿಅಕ್ಕಯಮ್ಮ, ಮಾಲಾ ಮತ್ತು ಪವನ್ ಕುಮಾರ್ ಗೆ ಗಂಭೀರ ಗಾಯ. ಗಾಯಾಳುಗಳಿಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ. ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮ.2
- ಒಂದೇ ಮಳೆಗೆ ಶಿವಾಜಿನಗರದ ಸ್ಥಿತಿ ನೋಡಿ ,ಜಲಾವೃತ್ತವಾದ ರಸ್ತೆಯಲ್ಲೇ ಆ್ಯಂಬುಲೆನ್ಸ್ ಸಂಚಾರ.!1
- ಮಾಜಿ ಸಂಸದ ಪ್ರತಾಪ್ ಸಿಂಹಗೆ ಮುಸ್ಲಿಂ ಮುಖಂಡರಿಂದ ಖಡಕ್ ಎಚ್ಚರಿಕೆ ಮಾಜಿ ಸಂಸದ ಪ್ರತಾಪ್ ಸಿಂಹಗೆ ಮುಸ್ಲಿಂ ಮುಖಂಡರಿಂದ ಖಡಕ್ ಎಚ್ಚರಿಕೆ1
- ಬೇಸಿಗೆ ಬಂದರೆ ನಮ್ಮಲ್ಲಿ ಜಾನುವಾರುಗಳಿಗೆ ಹುಲ್ಲು ಸಿಗುವುದೇಲ ಕಷ್ಟ ಹೊರ ರಾಷ್ಟ್ರದಲ್ಲಿ ಇಂತಹ ಆಹಾರ ನೀಡುತ್ತಿದ್ದಾರೆ.1