ಸಾರಿಗೆ ಬಸ್-ಬೈಕ್ ಡಿಕ್ಕಿ: 2 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವಕ ಸಾವು ಸಾರಿಗೆ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರು ನಗರದ ಗಾಂಧಿ ಚೌಕ್‌ನಲ್ಲಿ ನಡೆದಿದೆ. ಮೃತನನ್ನು ನಗರದ ಅಂದ್ರೂನ್ ಕಿಲ್ಲಾ ನಿವಾಸಿ ಮೊಹಮ್ಮದ್ ಯಾಸೀನ್ (28) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ಯಾಸೀನ್ ಅವರಿಗೆ 2 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಅಪಘಾತದಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಖಾಸಗಿ ಕಂಪನಿಯಾದ ಶಿಲ್ಪ ಮೆಡಿಕೇರ್‌ಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿದ್ದ ಸಾರಿಗೆ ಬಸ್ ತಾಂತ್ರಿಕ ದೋಷದಿಂದಾಗಿ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕೆಲವರು ಬಸ್ ಚಾಲಕ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದರಿಂದಲೇ ಅಪಘಾತ ಸಂಭವಿಸಿದೆ ಎಂದೂ ಆರೋಪಿಸಿದ್ದಾರೆ. ಅಪಘಾತದ ರಭಸಕ್ಕೆ ರಕ್ತಸಿಕ್ತ ಸ್ಥಿತಿಯಲ್ಲಿ ರಸ್ತೆಯ ಮಧ್ಯೆ ಬಿದ್ದಿದ್ದ ಯಾಸೀನ್ ಅವರನ್ನು ನೋಡಿದ ಜನರ ಮನ ಕಲಕಿತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದರು. ಕೇವಲ 2 ತಿಂಗಳ ಹಿಂದೆ ವಿವಾಹವಾಗಿದ್ದ ಯಾಸೀನ್ ಅವರ ಸಾವಿನಿಂದ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ರಾಯಚೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸಾರಿಗೆ ಬಸ್-ಬೈಕ್ ಡಿಕ್ಕಿ: 2 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವಕ ಸಾವು ಸಾರಿಗೆ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರು ನಗರದ ಗಾಂಧಿ ಚೌಕ್‌ನಲ್ಲಿ ನಡೆದಿದೆ. ಮೃತನನ್ನು ನಗರದ ಅಂದ್ರೂನ್ ಕಿಲ್ಲಾ ನಿವಾಸಿ ಮೊಹಮ್ಮದ್ ಯಾಸೀನ್ (28) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ಯಾಸೀನ್ ಅವರಿಗೆ 2 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಅಪಘಾತದಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಖಾಸಗಿ ಕಂಪನಿಯಾದ ಶಿಲ್ಪ ಮೆಡಿಕೇರ್‌ಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿದ್ದ ಸಾರಿಗೆ ಬಸ್ ತಾಂತ್ರಿಕ ದೋಷದಿಂದಾಗಿ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕೆಲವರು ಬಸ್ ಚಾಲಕ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದರಿಂದಲೇ ಅಪಘಾತ ಸಂಭವಿಸಿದೆ ಎಂದೂ ಆರೋಪಿಸಿದ್ದಾರೆ. ಅಪಘಾತದ ರಭಸಕ್ಕೆ ರಕ್ತಸಿಕ್ತ ಸ್ಥಿತಿಯಲ್ಲಿ ರಸ್ತೆಯ ಮಧ್ಯೆ ಬಿದ್ದಿದ್ದ ಯಾಸೀನ್ ಅವರನ್ನು ನೋಡಿದ ಜನರ ಮನ ಕಲಕಿತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದರು. ಕೇವಲ 2 ತಿಂಗಳ ಹಿಂದೆ ವಿವಾಹವಾಗಿದ್ದ ಯಾಸೀನ್ ಅವರ ಸಾವಿನಿಂದ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ರಾಯಚೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
- ರಾಯಚೂರು ಜಿಲ್ಲಾ ಸಿರುವರ್ ತಾಲೂಕ್ ಲಕ್ಕಮದಿನ್ನಿ ಗ್ರಾಮದ ಸ್ಥಿತಿ ತಿಳಿಸುವುದೇನೆಂದರೆ ಇಲ್ಲಿ ಸಿಸಿ ರಸ್ತೆ ಇಲ್ಲದೆ ಸುಮಾರು 20 ವರ್ಷಗಳು ಕಳೆದರೂ ಇನ್ನೂ ಸಿಸಿ ರಸ್ತೆ ಆಗಿಲ್ಲ ಸುಮಾರು 40 ವರ್ಷಗಳಿಂದ ಇಲ್ಲಿ ವಾಸಿಸುತ್ತೇವೆ ನಾವು ಇಲ್ಲಿ ಹಾವು ಕಪ್ಪೆ ಮೀನು ಸೊಳ್ಳೆ ಎಲ್ಲಾನು ಇಲ್ಲೇ ಸಿಗುತ್ತೆ ನಮ್ಮ ಎಲ್ಲಾ ಅಧಿಕಾರಿಗಳಿಗೂ ತಿಳಿಸಿದ್ದೇವೆ ಲಿಖಿತ ಮುಖಾಂತರ ಕೂಡ ಕೊಟ್ಟಿದ್ದೇವೆ ಇಲ್ಲಿಯವರೆಗೂ ಯಾವುದೇ ರಾಜಕಾರಣಿ ಯಾವುದೇ ಅಧಿಕಾರಿ ಕ್ರಮ ತಗೊಂಡಿಲ್ಲ ಹಾಗಾಗಿ ನಾವು ನಮ್ಮ ತಾಲೂಕ ಪಂಚಾಯಿತಿ ಮುಂದೆ ಉಗ್ರವಾದ ಹೋರಾಟವನ್ನು ಮಾಡಿಕೊಳ್ಳಲಿ ಎಂದು ನಿರ್ಣಾಮ ಮಾಡಿದ್ದೇವೆ ಈ ಬಂಡ ರಾಜಕಾರಣಿಗಳಿಗೆ ಬಂಡ ಆಫೀಸರಿಸಿ ಗಳಿಗೆ ಇವರೆಲ್ಲ ವೋಟ್ ಬೇಕಿದ್ದಾಗ ಮಾತ್ರ ನಮ್ಮ ಗ್ರಾಮಗಳಿಗೆ ಬರ್ತಾರೆ ತಾವು ವಿಜೇತರಾದ ಮೇಲೆ ನಮ್ಮನ್ನ ಈ ಸ್ಥಿತಿಗೆ ತರುತ್ತಾರೆ1
- ಅಕ್ರಮ ವಿದ್ಯುತ್ ಸಂಪರ್ಕ ನೀಡಿದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆರೋಪ ರಾಯಚೂರು, ಜು.31: ಹಜರತ್ ಸೈಯದ್ ಶಾ ಶಮ್ಸ್ ಆಲಂ ಹುಸೈನಿ ದರ್ಗಾ ಉರ್ಸ್–2026ಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡುವಲ್ಲಿ ಜೆಸ್ಕಾಂ ಅಧಿಕಾರಿಗಳು ಇಲಾಖೆಯ ಮೇಲಾಧಿಕಾರಿಗಳ ಲಿಖಿತ ಆದೇಶಗಳನ್ನು ಉಲ್ಲಂಘಿಸಿ ಅಕ್ರಮವಾಗಿ ನಡೆದುಕೊಂಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಅಂಬಾಜಿ ರಾವು ಗಂಭೀರ ಆರೋಪ ಮಾಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರ್ಗಾದ ಅಧಿಕೃತ ಮುತ್ತವಲಿಯವರ ಅನುಮತಿ ಪತ್ರ (ಎನ್‌ಒಸಿ) ಪಡೆಯದೆ ಯಾವುದೇ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಮುಖ್ಯ ಅಭಿಯಂತರರು ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ಸ್ಪಷ್ಟ ನಿರ್ದೇಶನ ನೀಡಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಧಿಕ್ಕರಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ ಎಂದು ದೂರಿದರು. ಈ ಕುರಿತು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳಿಗೆ ಲಿಖಿತ ದೂರು ಮತ್ತು ಇ-ಮೇಲ್ ಮೂಲಕ ಮಾಹಿತಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದೇ ಸಂಬಂಧಪಟ್ಟ ಅಧಿಕಾರಿಗಳ ಪರ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉರ್ಸ್ ಸಂದರ್ಭದಲ್ಲಿ ಯಾವುದೇ ಇಲಾಖೆಯ ಅನುಮತಿ ಪಡೆಯದೆ ಜೂಲಾಗಳು ಹಾಗೂ ವ್ಯಾಪಾರ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದವು. ಆರಂಭದಲ್ಲಿ ಎಲ್ಲಾ ಅಗತ್ಯ ಅನುಮತಿಗಳು ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಆದರೆ ನಂತರ ವಿವಿಧ ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸಿದಾಗ ಯಾವುದೇ ಅನುಮತಿ ನೀಡಿಲ್ಲ ಹಾಗೂ ಸರ್ಕಾರದ ಖಜಾನೆಗೆ ನಿಗದಿತ ಶುಲ್ಕವೂ ಪಾವತಿಯಾಗಿಲ್ಲ ಎಂಬುದು ಬಹಿರಂಗಗೊಂಡ ಹಿನ್ನೆಲೆಯಲ್ಲಿ ರಾತ್ರಿ ಅಕ್ರಮ ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಯಿತು ಎಂದು ತಿಳಿಸಿದರು. ಭ್ರಷ್ಟಾಚಾರದ ಆರೋಪ ಎದುರಿಸಿದ್ದ ಅಧಿಕಾರಿಗೆ ಮತ್ತೆ ರಾಯಚೂರಿನಲ್ಲೇ ಪದೋನ್ನತಿಯೊಂದಿಗೆ ನೇಮಕ ನೀಡಿರುವುದು ಸಾರ್ವಜನಿಕರ ದುರಾದೃಷ್ಟಕರ ಸಂಗತಿಯಾಗಿದೆ ಎಂದು ಆರೋಪಿಸಿದ ಅವರು, ಇಂತಹ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಪ್ರಕರಣವನ್ನು ಸ್ವತಂತ್ರ ಹಾಗೂ ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ, ಮೇಲಾಧಿಕಾರಿಗಳ ಆದೇಶ ಉಲ್ಲಂಘಿಸಿದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಇಲಾಖಾ ಹಾಗೂ ಕಾನೂನು ಕ್ರಮ ಜರುಗಿಸಬೇಕು. ಅನುಮತಿ ಇಲ್ಲದೆ ವ್ಯಾಪಾರ ನಡೆಸಲು ಅವಕಾಶ ನೀಡಿದ ಅಧಿಕಾರಿಗಳ ಪಾತ್ರವನ್ನೂ ತನಿಖೆ ನಡೆಸಿ, ಕರ್ತವ್ಯಲೋಪ ಎಸಗಿದ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಸೂದ್ ಅಲಿ, ಮೊಹಮ್ಮದ್ ಅಲೀಂ ಹಾಗೂ ರಘು ನನ್ನೋರೆ ಉಪಸ್ಥಿತರಿದ್ದರು.1
- ಕೃಷ್ಣಾ ನದಿಗೆ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ! ನದಿ ಪಾತ್ರದ ಜನರಿಗೆ ತುರ್ತು ಎಚ್ಚರಿಕೆ 🌊 ಕೃಷ್ಣಾ ನದಿಯಲ್ಲಿ ಭಾರೀ ಪ್ರವಾಹದ ಆತಂಕ! ಸುರಪುರ ಪೊಲೀಸರು ನೀಡಿದ ಎಚ್ಚರಿಕೆ ⚠️ ನದಿಗೆ ಇಳಿಯಬೇಡಿ! ಕೃಷ್ಣಾ ನದಿಗೆ ಅಪಾರ ನೀರು ಬಿಡುಗಡೆ 🚨 ಲಿಂಗದಹಳ್ಳಿ-ತಿಂಥಣಿ ಸೇರಿ ಹಲವು ಗ್ರಾಮಗಳಿಗೆ ಅಲರ್ಟ್! ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಏರಿಕೆ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1,20,000 ಕ್ಯೂಸೆಕ್‌ಗಿಂತ ಹೆಚ್ಚು ನೀರನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸುರಪುರ ಪೊಲೀಸ್ ಠಾಣೆ ವತಿಯಿಂದ ನದಿ ಪಾತ್ರದ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಲಾಗಿದೆ. ಲಿಂಗದಹಳ್ಳಿ, ಬಂಡೊಳ್ಳಿ, ದಾದಲಾಪುರ, ತಿಂಥಣಿ, ದೇವಾಪುರ, ಮುಷ್ಟಹಳ್ಳಿ, ಶೆಳ್ಳಿ, ಅಡ್ಡೊಡಿ, ಹೆಮ್ಮಡಿ, ಕರ್ನಾಳ, ಬೇವಿನಹಾಳ ಹಾಗೂ ಯಮನೂರು ಸೇರಿದಂತೆ ಹಲವು ಗ್ರಾಮಗಳ ಜನರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ. ನದಿಯಲ್ಲಿ ಈಜುವುದು, ಸ್ನಾನ ಮಾಡುವುದು, ಮೀನುಗಾರಿಕೆ ನಡೆಸುವುದು ಹಾಗೂ ಸೆಲ್ಫಿ ತೆಗೆಯಲು ನದಿ ದಂಡೆಗೆ ತೆರಳುವುದನ್ನು ತಪ್ಪಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಇಂತಹ ತಾಜಾ ಹಾಗೂ ನಿಖರ ಸುದ್ದಿಗಳಿಗಾಗಿ ASN News24 Kannada ಅನ್ನು ಫಾಲೋ ಮಾಡಿ. 🏷️ #KrishnaRiver #FloodAlert #KarnatakaNews #Surpur #Yadgir #NarayanpurDam #BasavaSagara #BreakingNews #KannadaNews #FloodWarning #KrishnaFlood #ASNNews24Kannada #Karnataka #ViralNews #LatestNews1
- ಯಾದಗಿರಿ ಜಿಲ್ಲೆಯ ಸರ್ಕಾರಿ ಹಾಸ್ಪಿಟಲ್ ನಲ್ಲಿ ಹೇಳೋರು ಕೇಳೋರು ಯಾರು ಇಲ್ಲ ಯಾದಗಿರಿ ಜಿಲ್ಲಾ ಹಾಸ್ಪಿಟಲ್ ಅಲ್ಲಿ ಯಾರು ಸರಿಯಾಗಿ ಕೆಲಸ ಮಾಡದೇ ಇರುವಂತಹ ಡಾಕ್ಟರ್ಸ್ ಗಳು ಮತ್ತು ನರ್ಸ್ ಗಳು ಸಮಯಕ್ಕೆ ಸರಿಯಾಗಿ ಬರೋದಿಲ್ಲ ಸಮಯಕ್ಕೆ ಸರಿಯಾಗಿ ಇರುವುದೇ ಇಲ್ಲ ಇಂತಹ ಅಧಿಕಾರಿಗಳಿಗೆ ಡಾ. ಮತ್ತು ನರ್ಸ್ಗಳಿಗೆ ಸಸ್ಪೆಂಡ್ ಮಾಡಬೇಕು ಶರಣಗೌಡ ಕಂದುಕುರ್ ಹೇಳಿದರು1
- ಕಲ್ಯಾಣ ವಾರ್ತೆ - "ನೀರಿನ ಹರಿವು ಹೆಚ್ಚುತ್ತಿರುವದರಿಂದ ನದಿ ತೀರಕ್ಕೆ ತೆರಳದಂತೆ ಸಾರ್ವಜನಿಕರಿಗೆ ಮುದ್ನಾಳ ಮನವಿ" 'ಭೀಮಾನದಿ ತೀರಕ್ಕೆ ಉಮೇಶ್ ಮುದ್ನಾಳ ಭೇಟಿ' ಕಲ್ಯಾಣ ವಾರ್ತೆ -ಯಾದಗಿರಿ ಮಹಾರಾಷ್ಟ್ರದಪಶ್ಚೀಮ ಘಟ್ಟಗಳ ಪ್ರದೇಶದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿರುವ ಪರಿಣಾಮ ಭೀಮಾನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದ್ದು ನದಿ ತೀರಕ್ಕೆ ಶುಕ್ರವಾರ ಸಾಮಾಜಿಕ ಕಾರ್ಯಕರ್ತ ಉಮೇಶ್ ಮುದ್ನಾಳ ಅವರು ಭೇಟಿ ನೀಡಿದರು. ಭೀಮಾನದಿ ಹಾಗೂ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿದೆ.ಜಿಲ್ಲಾಡಳಿತ ನದಿ ತೀರದ ಗ್ರಾಮದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.ಮೀನುಗಾರರು,ಸೇರಿ ಯಾರು ನದಿ ತೀರಕ್ಕೆ ತೆರಳಬಾದರೆಂದು ಮುದ್ನಾಳ ಮನವಿ ಮಾಡಿದ್ದಾರೆ.1
- ಯಾದಗಿರಿ || ನಾರಾಯಣಪುರ ಜಲಾಶಯದಿಂದ 24 ಗೆಟ್ ಓಪನ್ ಕೃಷ್ಣಾ ನದಿಗೆ ನೀರು1
- ರಾಜ್ಯ ಬಿಜೆಪಿ ತಂಡದಿಂದ ಬರ ವೀಕ್ಷಣೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟದ್ದರಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿ ರೈತಾಪಿ ಜನರು ಸಂಕಷ್ಟದಲ್ಲಿ ಇರುವುದರಿಂದ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ದೃಷ್ಟಿಯಿಂದ ರಾಜ್ಯ ಬಿಜೆಪಿ ಪಕ್ಷವು ಮುಖಂಡರ ವಿವಿಧ ತಂಡಗಳನ್ನು ರಚಿಸಿ , ಬರ ವೀಕ್ಷಣೆ ಹಾಗೂ ರೈತರಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ನಿಮಿತ್ಯವಾಗಿ ಗುರುವಾರ ವಿಧಾನ ಪರಿಷತ್ತಿನ ಸದಸ್ಯರಾದ ಎನ್ ರವಿಕುಮಾರ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಎ ಎಸ್ ಪಾಟೀಲ್ ನಡಹಳ್ಳಿ ಅವರು ಪಕ್ಷದ ಮುಖಂಡರೊಂದಿಗೆ ತಾಳಿಕೋಟಿ ತಾಲೂಕಿನ ಮೂಕಿಹಾಳ ಹಾಗೂ ಮಿಣಜಗಿ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿ ಅವರಲ್ಲಿ ಧೈರ್ಯ ತುಂಬಿದರು. ರಾಜ್ಯ ಬಿಜೆಪಿ ತಂಡದಿಂದ ಬರ ವೀಕ್ಷಣೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟದ್ದರಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿ ರೈತಾಪಿ ಜನರು ಸಂಕಷ್ಟದಲ್ಲಿ ಇರುವುದರಿಂದ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ದೃಷ್ಟಿಯಿಂದ ರಾಜ್ಯ ಬಿಜೆಪಿ ಪಕ್ಷವು ಮುಖಂಡರ ವಿವಿಧ ತಂಡಗಳನ್ನು ರಚಿಸಿ , ಬರ ವೀಕ್ಷಣೆ ಹಾಗೂ ರೈತರಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ನಿಮಿತ್ಯವಾಗಿ ಗುರುವಾರ ವಿಧಾನ ಪರಿಷತ್ತಿನ ಸದಸ್ಯರಾದ ಎನ್ ರವಿಕುಮಾರ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಎ ಎಸ್ ಪಾಟೀಲ್ ನಡಹಳ್ಳಿ ಅವರು ಪಕ್ಷದ ಮುಖಂಡರೊಂದಿಗೆ ತಾಳಿಕೋಟಿ ತಾಲೂಕಿನ ಮೂಕಿಹಾಳ ಹಾಗೂ ಮಿಣಜಗಿ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿ ಅವರಲ್ಲಿ ಧೈರ್ಯ ತುಂಬಿದರು. ನಂತರ ಪಕ್ಷದ ಮುಖಂಡರ ತಂಡವು ತಾಳಿಕೋಟಿ ಮಾರ್ಗವಾಗಿ ದೇವರ ಹಿಪ್ಪರಗಿ ಮತಕ್ಷೇತ್ರದ ಗ್ರಾಮಗಳಿಗೆ ತೆರಳುವ ಸಂದರ್ಭದಲ್ಲಿ ತಾಳಿಕೋಟಿ ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಮಯದಲ್ಲಿ ಪಕ್ಷದ ಮುಖಂಡರಾದ ಕಾಶಿನಾಥ್ ಮುರಾಳ, ಎಂ.ಎಸ್.ಸರಶಟ್ಟಿ, ವಾಸುದೇವ ಹೆಬಸೂರ, ಮಾನಸಿಂಗ್ ಕೊಕಟನೂರ, ಶಿವಶಂಕರ ಹಿರೇಮಠ, ಪರಶುರಾಮ ಕಟ್ಟಿಮನಿ, ರಾಘವೇಂದ್ರ ಮಾನೆ ಹಾಗೂ ರೈತರು ಇದ್ದರು.1
- ರಾಯಚೂರು ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ರೈತರು ಪತ್ರಿಕಾ ಭವನದಲ್ಲಿ ಆಗ್ರಹ ರಾಯಚೂರು, ಜು.31: ಮುಂಗಾರು ವೈಫಲ್ಯದಿಂದ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರ ಹಿತದೃಷ್ಟಿಯಿಂದ ರಾಯಚೂರು ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತ ಹೋರಾಟಗಾರ ಹಾಗೂ ಸಂಯುಕ್ತ ಕಿಸಾನ್ ಪಾರ್ಟಿ ರಾಜ್ಯಾಧ್ಯಕ್ಷ ಚಾಮರಾಸ ಮಾಲಿಪಾಟೀಲ್ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ತೀವ್ರ ಹಿನ್ನಡೆಯಾಗಿವೆ. ಜಿಲ್ಲೆಯಲ್ಲಿ ಶೇ.38ರಷ್ಟು ಮಾತ್ರ ಬಿತ್ತನೆ ನಡೆದಿದ್ದು, ಅದರಲ್ಲಿ ಶೇ.19ರಷ್ಟು ಬೆಳೆ ನಷ್ಟವಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಬೆಳೆ ಒಣಗುತ್ತಿರುವುದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮೀಣ ಕೂಲಿ ಕಾರ್ಮಿಕರು ಸಹ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಹತ್ತಿ ಸೇರಿದಂತೆ ಅಲ್ಪಾವಧಿ ಬೆಳೆಗಳು ಒಣಗುತ್ತಿದ್ದು, ಜಲಾಶಯಗಳಲ್ಲೂ ನೀರಿನ ಸಂಗ್ರಹಣೆ ಕುಸಿದಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಅವ್ಯವಹಾರ ನಡೆಯುತ್ತಿದೆಯಾದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಲವು ಬಾರಿ ಹೋರಾಟ ಹಾಗೂ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಜೆಸ್ಕಾಂ ಮುಖ್ಯ ಇಂಜಿನಿಯರ್ ರೈತರ ಸಮಸ್ಯೆಗಳ ಕುರಿತು ಬೇಜವಾಬ್ದಾರಿಯುತ ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ರೈತರ ಮನವಿಗಳಿಗೆ ಯಾವುದೇ ಬೆಲೆ ನೀಡದ ಅಧಿಕಾರಿಗಳ ವರ್ತನೆ ಖಂಡನೀಯವಾಗಿದೆ. ಜನರ ತೆರಿಗೆ ಹಣದಿಂದ ವೇತನ ಪಡೆಯುವ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಭೂಪಾಲ್‌ನಲ್ಲಿ ಅಲ್ಲಾಪ್ರಭು ಸೇರಿದಂತೆ ಆರು ರೈತರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿದ ಅವರು, ನೀಟ್ ಅಕ್ರಮ ಸೇರಿದಂತೆ ದೇಶದ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ಸರ್ಕಾರಗಳು ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಗಾಂಧೀಜಿ ನೀಡಿದ್ದ "ಭಾರತ ಬಿಟ್ಟು ತೊಲಗಿ" ಘೋಷಣೆಯ ಮಾದರಿಯಲ್ಲಿ "ಭ್ರಷ್ಟ ಅಧಿಕಾರಿಗಳೇ, ಬಹುರಾಷ್ಟ್ರೀಯ ಕಂಪನಿಗಳೇ, ಭಾರತ ಬಿಟ್ಟು ತೊಲಗಿ" ಎಂಬ ಘೋಷಣೆಯೊಂದಿಗೆ ಆಗಸ್ಟ್ 10ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂಯುಕ್ತ ಕಿಸಾನ್ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಣ್ಣ ದಿನ್ನಿ, ಮಲ್ಲಯ್ಯ ಚಂದ್ರಬಂಡ, ಬೂದೆಯ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.1