ಚಿಕ್ಕಜಾಜೂರು ಗ್ರಾಮದ ರೈಲ್ವೆ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತು ವಾಹನ ಸವಾರರು ಹೈರಾಣಾಗಿದ್ದಾರೆ. ಚಿಕ್ಕಜಾಜೂರು ಗ್ರಾಮದ ರೈಲ್ವೆ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತು ವಾಹನ ಸವಾರರು ಹೈರಾಣಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಗ್ರಾಮದ ರೈಲ್ವೇ ಅಂಡರ್ ಪಾಸ್ ನಲ್ಲಿ ದೃಶ್ಯ ಬೆಳಕಿಗೆ ಬಂದಿದೆ. ಇನ್ನೂ ಹೊಳಲ್ಕೆರೆ ಬಾಗದಿಂದ ಚಿಕ್ಕಜಾಜೂರಿನಿಂದ ಹತ್ತಾರು ಗ್ರಾಮಗಳಿಗೆ ಸಂಪರ್ಕಿಸುವ ಈ ರೈಲ್ವೇ ಅಂಡರ್ ಪಾಸ್ ನಲ್ಲಿ ಪ್ರತಿ ಬಾರಿಯೂ ಮಳೆ ಬಂದಾಗಲೂ ಕೂಡ ಇದೇ ಪರಿಸ್ಥಿತಿ ಉಂಟಾಗುತ್ತದೆ. ರೈಲ್ವೇ ಅಂಡರ್ ಪಾಸ್ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದು ಮಳೆ ಬಂದಾಗ ಬಾರಿ ಪ್ರಮಾಣದಲ್ಲಿ ಮಳೆ ನೀರು ನಿಂತು ಶಾಲಾ ವಾಹನಗಳು ಕಾರು ಬೈಕ್ ಗಳು ಸ್ಥಳೀಯ ನಿವಾಸಿಗಳು ಸಂಚರಿಸಲು ಸಮಸ್ಯೆ ಉಂಟಾಗುತ್ತಿದ್ದು ಹಲವು ಅಪಘಾತಗಳು ಸಹ ಸಂಬವಿಸಿದ್ದಾಗಿ ಸ್ಥಳೀಯ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಇದೇ ಅಂಡರ್ ಪಾಸ್ ನಲ್ಲಿ ದೊಡ್ಡ ದೊಡ್ಡ ಗುಂಡಿಗಳು ಸಹ ಇದ್ದು ಮಳೆ ನೀರು ನಿಂತು ವಾಹನಗಳು ಸಂಚರಿಸಲು ಸಮಸ್ಯೆ ತಂದೊಡ್ಡಿದ್ದು ಆದಷ್ಟು ಬೇಗ ಸಂಬಂದಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹ ಮಾಡಿದ್ದಾರೆ.
ಚಿಕ್ಕಜಾಜೂರು ಗ್ರಾಮದ ರೈಲ್ವೆ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತು ವಾಹನ ಸವಾರರು ಹೈರಾಣಾಗಿದ್ದಾರೆ. ಚಿಕ್ಕಜಾಜೂರು ಗ್ರಾಮದ ರೈಲ್ವೆ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತು ವಾಹನ ಸವಾರರು ಹೈರಾಣಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಗ್ರಾಮದ ರೈಲ್ವೇ ಅಂಡರ್ ಪಾಸ್ ನಲ್ಲಿ ದೃಶ್ಯ ಬೆಳಕಿಗೆ ಬಂದಿದೆ. ಇನ್ನೂ ಹೊಳಲ್ಕೆರೆ ಬಾಗದಿಂದ ಚಿಕ್ಕಜಾಜೂರಿನಿಂದ ಹತ್ತಾರು ಗ್ರಾಮಗಳಿಗೆ ಸಂಪರ್ಕಿಸುವ ಈ ರೈಲ್ವೇ ಅಂಡರ್ ಪಾಸ್ ನಲ್ಲಿ ಪ್ರತಿ ಬಾರಿಯೂ ಮಳೆ ಬಂದಾಗಲೂ ಕೂಡ ಇದೇ ಪರಿಸ್ಥಿತಿ ಉಂಟಾಗುತ್ತದೆ. ರೈಲ್ವೇ ಅಂಡರ್ ಪಾಸ್ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದು ಮಳೆ ಬಂದಾಗ ಬಾರಿ ಪ್ರಮಾಣದಲ್ಲಿ ಮಳೆ ನೀರು ನಿಂತು ಶಾಲಾ ವಾಹನಗಳು ಕಾರು ಬೈಕ್ ಗಳು ಸ್ಥಳೀಯ ನಿವಾಸಿಗಳು ಸಂಚರಿಸಲು ಸಮಸ್ಯೆ ಉಂಟಾಗುತ್ತಿದ್ದು ಹಲವು ಅಪಘಾತಗಳು ಸಹ ಸಂಬವಿಸಿದ್ದಾಗಿ ಸ್ಥಳೀಯ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಇದೇ ಅಂಡರ್ ಪಾಸ್ ನಲ್ಲಿ ದೊಡ್ಡ ದೊಡ್ಡ ಗುಂಡಿಗಳು ಸಹ ಇದ್ದು ಮಳೆ ನೀರು ನಿಂತು ವಾಹನಗಳು ಸಂಚರಿಸಲು ಸಮಸ್ಯೆ ತಂದೊಡ್ಡಿದ್ದು ಆದಷ್ಟು ಬೇಗ ಸಂಬಂದಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹ ಮಾಡಿದ್ದಾರೆ.
- ಕೋಟೆ ನಾಡು ಚಿತ್ರದುರ್ಗದಲ್ಲಿ ರಾಕಿಂಗ್ ಸ್ಟಾರ್ ಯಶು ಅಭಿಮಾನಿಗಳ ಸಂಭ್ರಮ1
- ಚಿತ್ರದುರ್ಗದಲ್ಲಿ ‘ಸೀರತ್ ಅಭಿಯಾನ’! 🔥 ಪ್ರವಾದಿ ಮುಹಮ್ಮದ್ ﷺ ಸಂದೇಶ ಸಾರಲು ಸಜ್ಜು! #SeeratUnNabi #ಸೀರತ್_ಅಭಿಯಾನ #ಕ್ರಾಂತಿಯಜ್ಯೋತಿ #ಪ್ರವಾದಿಮುಹಮ್ಮದ್ﷺ #Muhammadﷺ #ProphetMuhammad #SeeratCampaign #JamaatEIslamiHind #ಚಿತ್ರದುರ್ಗ #Chitradurga #ChitradurgaNews #KarnatakaNews #KannadaNews #BreakingNews #ViralNews #LocalNews #CTownNews #CtownNews #NewsUpdate #ಸುದ್ದಿ #ಸುದ್ದಿವಾಹಿನಿ1
- ಉತ್ತಮ ಗುಣಮಟ್ಟದ ಆಹಾರ ಸೇವಿಸಿ ಕಿಡ್ನಿ(ಮೂತ್ರಪಿಂಡ)ಖಾಯಿಲೆಯಿಂದ ದೂರವಿರಿ : ಡಾ.ಪ್ರಮೋದ್ ಕುಮಾರ್ ಜಗಳೂರು.25 ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮೂತ್ರಪಿಂಡ ಖಾಯಿಲೆಗೆ ಸಂಬಂಧಿಸಿದ ವೈಧ್ಯ ರೋಗಿಗಳ ಡೈಯಾಲೀಸಿಸ್ ಕೇಂದ್ರಕ್ಕೆ ಇತ್ತಿಚೇಗೆ ಭೇಟಿ ನೀಡಿ ಕಿಡ್ನಿ ವೈಪಲ್ಯ ರೋಗಿಗಳನ್ನು ಉದ್ದೇಶಿಸಿ ಮಾತನಾಡಿದರು. ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲೀಸಿಸ್ ಕೇಂದ್ರ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದು ಸಿಬ್ಬಂದಿಗಳು ಸಹ ರೋಗಿಗಳ ಮಧ್ಯೆ ಉತ್ತಮ ಬಾಂಧವ್ಯ ಹೊಂದಿದ್ದು ರೋಗಿಗಳು ಸಹ ಇವರ ಜೊತೆ ಸಹಕಾರ ನೀಡುವುದರಿಂದ ಯಾವುದೇ ತೊಂದೆರೆಯಿಲ್ಲ ಎಂದರು. ಜಿಲ್ಲೆಯಾದ್ಯಂತ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಲ್ಲಿ ಖಾಸಗಿ ಕಂಪನಿಯಿಂದ ನಡೆಯುತ್ತಿರುವ ಡಯಾಲೀಸ್ ಕೇಂದ್ರಗಳು ನಡೆಯುತ್ತಿವೆ ನಾವು ರೋಗಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದರು. ಕಿಡ್ನಿ ವೈಫ್ಯಲ್ಯಕ್ಜೆ ಮುಖ್ಯ ಲಕ್ಷಣಗಳು :ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ಇರುವಾಗ ಬೆನ್ನು, ಪಾರ್ಶ್ವ ಅಥವಾ ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ಮತ್ತು ಅಲೆ ಅಲೆಯಾದ ನೋವು ಕಾಣಿಸಿಕೊಳ್ಳುವುದು ಮುಖ್ಯ ಲಕ್ಷಣವಾಗಿದೆ ಎಂದರು. ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡದಲ್ಲಿ ಉಪ್ಪು ಮತ್ತು ಖನಿಜಗಳ ಗಟ್ಟಿಯಾದ ನಿಕ್ಷೇಪಗಳಾಗಿವೆ. ಈ ಕಲ್ಲುಗಳು ಸಾಮಾನ್ಯವಾಗಿ ಮೂತ್ರನಾಳವನ್ನು ಚಲಿಸಿದಾಗ ಅಥವಾ ಅಡ್ಡಿಪಡಿಸಿದಾಗ ಅಪಾರ ನೋವನ್ನು ಉಂಟುಮಾಡುತ್ತವೆ. ಮೂತ್ರಪಿಂಡದ ಕಲ್ಲುಗಳು ಗಾತ್ರದಲ್ಲಿ ಭಿನ್ನವಾಗಿರುತ್ತವೆ. ಕೆಲವು ಕಲ್ಲುಗಳು ಕೆಲವು ಮಿಮೀ ಗಾತ್ರದಲ್ಲಿರಬಹುದು, ಇನ್ನು ಕೆಲವು ಇಂಚುಗಳಷ್ಟು ಬೆಳೆಯಬಹುದು. ಕಿಡ್ನಿ ಕಲ್ಲುಗಳು ಸಾಕಷ್ಟು ಸಮಾನವಾಗಿ ಹರಡುತ್ತವೆ ಮತ್ತು ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುತ್ತವೆ. ಕಿಡ್ನಿ ಕಲ್ಲುಗಳನ್ನು ನಾಲ್ಕು ಪ್ರಮುಖ ವಿಧಗಳಾಗಿ ವಿಂಗಡಿಸಬಹುದು- ಕ್ಯಾಲ್ಸಿಯಂ ಕಲ್ಲುಗಳು, ಯೂರಿಕ್ ಆಸಿಡ್ ಕಲ್ಲುಗಳು, ಸ್ಟ್ರುವೈಟ್ ಕಲ್ಲುಗಳು ಮತ್ತು ಸಿಸ್ಟೈನ್ ಕಲ್ಲುಗಳು ಲಕ್ಷಣಗಳು ಎದ್ದು ಕಾಣುತ್ತವೆಂದರು. ಬೆನ್ನು, ಹೊಟ್ಟೆ ಅಥವಾ ಬದಿಯಲ್ಲಿ ನೋವು ಮೂತ್ರಪಿಂಡದ ಕಲ್ಲಿನ ನೋವು - ಇದನ್ನು ಮೂತ್ರಪಿಂಡದ ಕೊಲಿಕ್ ಎಂದೂ ಕರೆಯುತ್ತಾರೆ - ಇದು ಊಹಿಸಬಹುದಾದ ಅತ್ಯಂತ ತೀವ್ರವಾದ ನೋವಿನ ವಿಧಗಳಲ್ಲಿ ಒಂದಾಗಿದೆ ಎಂದರು. ಮೂತ್ರಪಿಂಡದ ಕಲ್ಲಿನ ನೋವು ಹೆಚ್ಚಾಗಿ ಇದ್ದಕ್ಕಿದ್ದಂತೆ ಪ್ರಾರಂಭವಾಗುತ್ತದೆ. ಕಲ್ಲು ಚಲಿಸಿದಂತೆ ನೋವು ಸ್ಥಳ ಮತ್ತು ತೀವ್ರತೆಯನ್ನು ಬದಲಾಯಿಸುತ್ತದೆ. ನೋವು ಆಗಾಗ್ಗೆ ಅಲೆಗಳಲ್ಲಿ ಬಂದು ಹೋಗುತ್ತದೆ, ಮೂತ್ರನಾಳವು ಕಲ್ಲನ್ನು ಹೊರಗೆ ತಳ್ಳಲು ಪ್ರಯತ್ನಿಸುವಾಗ ಸಂಕುಚಿತಗೊಳ್ಳುವುದರಿಂದ ಇದು ಇನ್ನಷ್ಟು ಹದಗೆಡುತ್ತದೆ. ಪ್ರತಿಯೊಂದು ಅಲೆಯು ಕೆಲವು ನಿಮಿಷಗಳ ಕಾಲ ಇರುತ್ತದೆ, ಕಣ್ಮರೆಯಾಗಬಹುದು ಮತ್ತು ನಂತರ ಮತ್ತೆ ಬರಬಹುದು ಎಂದರು.2
- ನಮ್ಮ ಚನ್ನಗಿರಿ ತಾಲ್ಲೂಕು ತುಮಕೊಸ್ ಅಧ್ಯಕ್ಷರು ಸಗಾರಪೇಟೆಯಲ್ಲಿ ನೂತನ ವಾಗಿ ಸೂಪರ್ ಮಾರ್ಕೆಟ್ ಉದ್ಘಾಟನೆ ನೆರವೇರಿಸಿದರು.1
- ಮೊಳಕಾಲ್ಮುರು: ಭಗವಾನ್ ಶ್ರೀ ಜಿಹ್ವೇಶ್ವರ ಜಯಂತಿ ವಿಜೃಂಭಣೆಯಿಂದ ನೆರವೇರಿತು ಇಂದು ನಮ್ಮ ಸಮಾಜದ ಒಳತಿಗಾಗಿ ಆರ್ಥಿಕತೆ ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿ ಹೊಂದಲು , ನಮ್ಮ ಒಗ್ಗಟ್ಟಿನ ಅನಿವಾರ್ಯತೆ ಇದೆ . ಶ್ರೀ ಜೀಹ್ವೇಶ್ವರ ಜಯಂತಿ ನಮ್ಮ ಧಾರ್ಮಿಕ ನೆಲೆ ಹಾಗೂ ಸಮಾಜದಲ್ಲಿ ಅಭಿವೃದ್ಧಿ ಗತಿ ಬಲಪಡಿಸುವ ಹಬ್ಬ.ವಾಗಿದೆ ಎಂದು ಪಟ್ಟಣದ ಸ್ವಕುಳಸಾಳಿ ಸಮಾಜ, ದುರ್ಗಾದೇವಿ ಮಹಿಳಾ ಮಂಡಳಿ, ಜಿಹ್ವೇಶ್ವರ ಯುವಕ ಸಂಘ ಸ್ವಕುಳಸಾಳಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಕೆಳಗಿನ ಈಶ್ವರ ದೇವಸ್ಥಾನ ಮಂಡಳಿ ದುರ್ಗಾದೇವಿ ದೇವಸ್ಥಾನ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವಾನ್ ಜೀಹ್ವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸ್ವಕಳಸಾಳಿ ಸಮಾಜದ ಅಧ್ಯಕ್ಷರಾದ ನರೇಂದ್ರ ಗಾಯಕ್ವಾಡ್ ತಿಳಿಸಿದರು ಮಾತೇಯರಿಂದ ಗಂಗಾಪೂಜೆ, ಭಗವಾನ್ ಜೀಹ್ವೇಶ್ವರ ತೊಟ್ಟಿಲು ಪೂಜೆ, ಹಾಗೂ ಆಶೀರ್ವಾದ ಸ್ವೀಕಾರದ ಮೂಲಕ ದೈವಾನುಗ್ರಹ ಜರುಗಿತು ಭಕ್ತರು ಆಗಮಿಸಿ ಸಾಲು ಸರದಿಯಲ್ಲಿ ನಿಂತು ಭಗವಾನ್ ಜೀಹ್ವೇಶ್ವರ ಮತ್ತು ಪಾಂಡುರಂಗ ಸ್ವಾಮಿಯ ದರ್ಶನ ಪಡೆದರು ತದನಂತರ ಪಟ್ಟಣದ ಪಾಂಡುರಂಗ ದೇವಸ್ಥಾನದಿಂದ ಸ್ವಕುಳ ಸಾಳಿ ಸಮಾಜದ ಆರಾಧ್ಯ ದೈವ ಶ್ರೀ ಜಿಹ್ವೇಶ್ವರ ಜಯಂತಿ ಅಂಗವಾಗಿ ಭಕ್ತಿಪೂರ್ಣ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ಚಾಲನೆ ದೊರಕಿತು. ದೇವರ ಪಲ್ಲಕ್ಕಿ, ನಾದಸ್ವರ, ಡೊಳ್ಳುಕುಣಿತ, ಶ್ರದ್ಧಾವಂತ ಭಕ್ತರು ಮತ್ತು ಮಕ್ಕಳು ಭಾಗವಹಿಸಿದ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಎಲ್ಲೆಡೆ ಭಕ್ತಿಭಾವದ ಮೆರವಣಿಗೆಯಲ್ಲಿ ಯುವಕರ ಉತ್ಸಾಹ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಮಾತೇಯರು ಆರತಿ ಮತ್ತು ಕಳಸದೊಂದಿಗೆ ಆಗಮಿಸಿದ್ದು ವಿಶೇಷ ಗಮನಸೆಳೆದವು. ಮೆರವಣಿಗೆಯ ನಂತರ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನೂರಾರು ಭಕ್ತರಿಗೆ ಭಕ್ತಿಪೂರ್ವಕವಾಗಿ ಭೋಜನ ವಿತರಿಸಲಾಯಿತು. ಅನ್ನದಾಸೋಹದಲ್ಲಿ ಪಾಯಸ ಪಲಾವ್, ಮತ್ತು ಅನ್ನ ಮಜ್ಜಿಗೆ ಸಂಪೂರ್ಣ ಸತ್ಕಾರ ಸಮರ್ಪಕವಾಗಿ ನಡೆಯಿತು ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮಕ್ಕಳು ಮಾತೆಯರು ಪುರುಷರು ಸಮಾಜದ ಬಂದು ಬಾಂಧವರು ಭಾಗವಹಿಸಿದ್ದರು1
- *ಕೂಡ್ಲಿಗಿ : SFI ಸಮಾವೇಶ - ಸಮಘ್ರ ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಪ್ರಯತ್ನಿಸೋಣ - ಗುನ್ನಳ್ಳಿ ರಾಘವೇಂದ್ರ ಕರೆ- *ಕೂಡ್ಲಿಗಿ : SFI ಸಮಾವೇಶ - ಸಮಘ್ರ ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಪ್ರಯತ್ನಿಸೋಣ - ಗುನ್ನಳ್ಳಿ ರಾಘವೇಂದ್ರ ಕರೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಕ್ಷೇತ್ರದ ಸಮಘ್ರ ಶೈಕ್ಷಣಿಕ ಅಭಿವೃದ್ಧಿಗಾಗಿ , ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸೋಣ ಎಂದು ಮುಖಂಡ ಗುನ್ನಳ್ಳಿ ರಾಘವೇಂದ್ರ ಕರೆನೀಡಿದರು. ಅವರು ಆ 27ರಂದು ಪಟ್ಟಣದ ಪಟ್ಟಣದ ಪ್ರವಾಸಿ ಮಂದಿರದಲ್ಲಿ , ಭಾರತ ವಿದ್ಯಾರ್ಥಿ ಪೆಡರೇಷನ್ ವತಿಯಿಂದ ಜರುಗಿದ ತಾಲೂಕು ಸಮಾವೇಶದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಎಸ್ಎಫ್ಐ ರಾಜ್ಯ ಉಪದಾಧ್ಯಕ್ಷರಾದ ಬಸವರಾಜ ಗುಳೆದಾಳ್ ಮುಖಂಡರಾದ ಆನಂದರಾಜ್ , ಜಿಲ್ಲಾ ಮುಖಂಡರಾದ ಸುಷ್ಮಿತ ಪವನಕುಮಾರ್ , ಪತ್ರಕರ್ತರಾರ ಭೀಮಣ್ಣ ಗಜಾಪುರ , ರಾಜ್ಯ ಉಪದಾಧ್ಯಕ್ಷರಾದ ಬಸವರಾಜ ಗುಳೆದಾಳ್ ಆನಂದರಾಜ್ , ಸುಸ್ಮಿತ ಸಮಾಜ ಸೇವಕ ಅಬ್ದುಲ್ ರಹೆಮಾನ್ , ತಾಲೂಕಾಧ್ಯಕ್ಷರಾದ ಟಿ. ಭಾಗ್ಯಮ್ಮ , ಭೀಮಣ್ಣ ಗಜಾಪುರ , ಬಿಟಿಗುದ್ದಿ ಚಂದ್ರು ವೇದಿಕೆಯಲ್ಲಿದ್ದರು. ಜಿಲ್ಲಾ ಕಾರ್ಯದರ್ಶಿ ಶಿವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಆಗಸ್ಟ್ 31 ನೇ ತಾರೀಖಿನವರಗೆ ಬೆಳೆ ವಿಮೆ ಪಾವತಿಗೆ ಅವಕಾಶ. ರೈತರು ಇದರ ಸದುಪಯೋಗಪಡಿಸಿಕೊಳ್ಳಿ. ಚಳ್ಳಕೆರೆ :ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಮುದುವರಿಕೆ ಸಾಲಗಾರಿಗೆ ಅನ್ವಯ.. ಚಳ್ಳಕೆರೆ ತಾಲ್ಲೂಕಿನಲ್ಲಿ ನಾಯಕನಹಟ್ಟಿಯ ಭಾಗದ ಮಳೆಯಾಶ್ರಿತ ರಾಗಿ ಬೆಳೆಗೆ ವಿಮೆ ಪಾವತಿಗೆ ಅವಕಾಶವಿದ್ದು ಕಸಬ ಮತ್ತು ಪರಶುರಾಮಪುರ ,ತಳಕು ವ್ಯಾಪ್ತಿಯ ನೀರಾವರಿ ಸೌಲಭ್ಯ ಹೊಂದಿದ ಭತ್ತ,. ನಾಟಿ ಮಾಡಿದ ರೈತರಿಗೆ ವಿಮೆ ಅನ್ವಯವಾಗುತ್ತದೆ.. ಈಗಾಗಲೆ ಬ್ಯಾಂಕ್ ಗಳಲ್ಲಿ ಸಾಲ ಮಾಡಿದರ ರೈತರ ಆಯಾ ಬ್ಯಾಂಕ್ ಗಳಲ್ಲಿ ಬೆಳೆವಿಮೆಯನ್ನ ಪಾಲಿಸಬಹುದಾಗಿದೆ.ಆಸಕ್ತ ರೈತರು ಇದೆ ತಿಂಗಳು 31 ನೇ ತಾರೀಖಿನವರಗೆ ಬೆಳೆ ವಿಮೆ ಪಾವತಿಗೆ ಅವಕಾಶ ಇದ್ದ ಇದರಸದೂಪಯೋಗ ಪಡಿಸಿಕೊಳ್ಳಿ ಎಂದು ಕೃಷಿ ಸಹಾಯಕ ನಿರ್ದೇಶ ಡಾ.ಎಸ್ ಟಿ.ರಮೇಶ ರೈತರಿಗೆ ತಿಳಿಸಿದ್ದಾರೆ.1
- ಟಿ ನುಲೇನೂರು ಗೇಟ್ ಬಳಿ ಕಾರು ಬೈಕ್ ಬೀಕರ ಅಪಘಾತ ನಡೆದು ಇಬ್ಬರು ಸಾವು ಟಿ ನುಲೇನೂರು ಗೇಟ್ ಬಳಿ ಕಾರು ಬೈಕ್ ಬೀಕರ ಅಪಘಾತ ನಡೆದು ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಹೊಳಲ್ಕೆರೆ ತಾಲ್ಲೂಕಿನ ಟಿ ನುಲೇನೂರು ಗೇಟ್ ನ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆಸಿದ್ದು ಮಲೆನಳ್ಳಿ ಗ್ರಾಮದ ಉಪೇಂದ್ರ ಕುಮಾರ್ ಹಾಗೂ ಗೌತಮ್ ಬಾಬು ಎಂಬ ಇಬ್ಬರು ಮೃತಪಟ್ಟಿದ್ದಾರೆ. ಇನ್ನೂ ಚಿಕ್ಕಮಗಳೂರು ಕಡೆಯಿಂದ ಬರುತ್ತಿದ್ದ ಕಾರು ಹಾಗೂ ಚಿತ್ರದುರ್ಗ ಕಡೆಯಿಂದ ಹೋಗುತ್ತಿದ್ದ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಬವಿಸಿದ್ದು ಬೈಕ್ ನಲ್ಲಿದ್ದ ಇಬ್ಬೆಉ ಮೃತಪಟ್ಟಿದ್ದಾರೆ. ಇನ್ನೂ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.1