logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ನಾಳೆ ಕೊಪ್ಪಳದಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ : ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರಿಂದ ಧ್ವಜಾರೋಹಣ ಕೊಪ್ಪಳ : ಕೊಪ್ಪಳ ಜಿಲ್ಲಾಡಳಿತದ ವತಿಯಿಂದ 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ 2025ರ ಕಾರ್ಯಕ್ರಮವನ್ನು ಸೆಪ್ಟೆಂಬರ್ 17 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಗದಗ ರಸ್ತೆಯ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ತಂಗಡಗಿ ಶಿವರಾಜ ಸಂಗಪ್ಪ ಅವರು ಧ್ವಜಾರೋಹಣ ನೆರವೇರಿಸುವರು. ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ ಮತ್ತು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ ಅವರು ಘನ ಉಪಸ್ಥಿತಿ ವಹಿಸುವರು. ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಗಂಗಾವತಿ ಶಾಸಕರಾದ ಜಿ.ಜನಾರ್ಧನರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ, ಡಾ.ಚಂದ್ರಶೇಖರ ಬಿ.ಪಾಟೀಲ, ಶರಣಗೌಡ ಅನ್ನದಾನಗೌಡ ಪಾಟೀಲ ಬಯ್ಯಾಪೂರ ಹಾಗೂ ಹೇಮಲತಾ ನಾಯಕ, ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆಯ ಅಧ್ಯಕ್ಷರಾದ ಹಸನಸಾಬ್ ನಬೀಬ್ ಸಾಬ್ ದೋಟಿಹಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ್ ಮತ್ತು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಅವರು ಭಾಗವಹಿಸುವರು. ವಿಶೇಷ ಆಹ್ವಾನಿತರಾಗಿ ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ ಮೋಹನ್ ರಾಜ್ ಅವರು ಭಾಗವಹಿಸುವರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಾಹಿಲ್ ಬಾಗ್ಲಾ ಅವರು ಉಪಸ್ಥಿತರಿರುವರು ಎಂದು ಕೊಪ್ಪಳ ಜಿಲ್ಲಾಡಳಿತದ ಪ್ರಕಟಣೆಯು ತಿಳಿಸಿದೆ.

1 hr ago
user_STAR OF KOPPAL
STAR OF KOPPAL
Local News Reporter ಕೊಪ್ಪಳ, ಕೊಪ್ಪಳ, ಕರ್ನಾಟಕ•
1 hr ago
dc05119d-8fc4-4e9a-b7db-da2502db471e

ನಾಳೆ ಕೊಪ್ಪಳದಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ : ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರಿಂದ ಧ್ವಜಾರೋಹಣ ಕೊಪ್ಪಳ : ಕೊಪ್ಪಳ ಜಿಲ್ಲಾಡಳಿತದ ವತಿಯಿಂದ 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ 2025ರ ಕಾರ್ಯಕ್ರಮವನ್ನು ಸೆಪ್ಟೆಂಬರ್ 17 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಗದಗ ರಸ್ತೆಯ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ತಂಗಡಗಿ ಶಿವರಾಜ ಸಂಗಪ್ಪ ಅವರು ಧ್ವಜಾರೋಹಣ ನೆರವೇರಿಸುವರು. ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ ಮತ್ತು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ ಅವರು ಘನ ಉಪಸ್ಥಿತಿ ವಹಿಸುವರು. ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಗಂಗಾವತಿ ಶಾಸಕರಾದ ಜಿ.ಜನಾರ್ಧನರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ, ಡಾ.ಚಂದ್ರಶೇಖರ ಬಿ.ಪಾಟೀಲ, ಶರಣಗೌಡ ಅನ್ನದಾನಗೌಡ ಪಾಟೀಲ ಬಯ್ಯಾಪೂರ ಹಾಗೂ ಹೇಮಲತಾ ನಾಯಕ, ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆಯ ಅಧ್ಯಕ್ಷರಾದ ಹಸನಸಾಬ್ ನಬೀಬ್ ಸಾಬ್ ದೋಟಿಹಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ್ ಮತ್ತು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಅವರು ಭಾಗವಹಿಸುವರು. ವಿಶೇಷ ಆಹ್ವಾನಿತರಾಗಿ ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ ಮೋಹನ್ ರಾಜ್ ಅವರು ಭಾಗವಹಿಸುವರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಾಹಿಲ್ ಬಾಗ್ಲಾ ಅವರು ಉಪಸ್ಥಿತರಿರುವರು ಎಂದು ಕೊಪ್ಪಳ ಜಿಲ್ಲಾಡಳಿತದ ಪ್ರಕಟಣೆಯು ತಿಳಿಸಿದೆ.

More news from ಕರ್ನಾಟಕ and nearby areas
  • 🌾ಗಜೇಂದ್ರಗಡ ನಗರ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ನಿರಂತರ ಶ್ರಮ… ನನ್ನನ್ನು ಕೆಲವರು ವಿರೋಧಿಸಿದ್ದು ನನ್ನ ವ್ಯಕ್ತಿತ್ವವನ್ನಲ್ಲ… ನನ್ನ ಸಾಮರ್ಥ್ಯವನ್ನು. ಅವರಲ್ಲಿ ಕೆಲವರು ನನ್ನಿಂದ ಅಧಿಕಾರದ ಲಾಭ ಪಡೆದವರೇ ಆಗಿದ್ದರು. “ಸ್ವತಂತ್ರವಾಗಿ ಇದ್ದು ಕೆಲಸ ಮಾಡಿ ತೋರಿಸು” ಎಂದು ನನಗೆ ಸವಾಲು. ಹಾಕಿದವರೂ ಇದ್ದಾರೆ. ನನ್ನಿಂದ ಉಚಿತವಾಗಿ ಸೇವೆ ಪಡೆದವರೂ ಇದ್ದಾರೆ. ನಾನು ಸಲ್ಲಿಸಿದ ಮನವಿಗಳನ್ನು “ಕಸದ ಬುಟ್ಟಿಗೆ ಹಾಕುತ್ತಾರೆ” ಎಂದು ವ್ಯಂಗ್ಯವಾಡಿದವರೂ ಇದ್ದಾರೆ. ಆದರೆ ಇಂದು ಅದೇ ಮನವಿಗಳು ಅಭಿವೃದ್ಧಿಯ ದಿಕ್ಕಿನಲ್ಲಿ ಹಾರುವ ಗಾಳಿಪಟಗಳಾಗಿವೆ. 🪁 ನನಗೆ ಸಾಕಷ್ಟು ತೊಂದರೆ, ಅವಮಾನ, ಅಪಮಾನಗಳನ್ನು ಎದುರಿಸಬೇಕಾಯಿತು. ಆದರೂ ಯಾವುದಕ್ಕೂ ಕುಗ್ಗದೆ, ಯಾರ ಮೇಲೂ ಅವಲಂಬಿತನಾಗದೆ, ನಿಷ್ಠೆಯಿಂದ… ಪ್ರಾಮಾಣಿಕವಾಗಿ…24 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದೆ. ಇಂದು ನನ್ನ ಮಾತಿಗಿಂತ ನನ್ನ ಕೆಲಸಗಳೇ ಉತ್ತರ ನೀಡುತ್ತಿವೆ. ಜನರ ಸಮಸ್ಯೆಗಳನ್ನು ಹೇಳುವುದು ಮಾತ್ರ ನನ್ನ ಕೆಲಸವಲ್ಲ; ಪರಿಹಾರ ಸಿಗುವವರೆಗೂ ಹೋರಾಡುವುದು ನನ್ನ ಜವಾಬ್ದಾರಿ. 🔥ನನ್ನನ್ನು ಎಷ್ಟೇ ತುಳಿದರೂ, ನನ್ನ ಶ್ರಮವನ್ನು ತಡೆಯಲು ಸಾಧ್ಯವಾಗಲಿಲ್ಲ. ಮಾತಿಗಿಂತ ಕೆಲಸವೇ ಮುಖ್ಯ — ಅದನ್ನು ನನ್ನ ಕಾರ್ಯಗಳ ಮೂಲಕ ತೋರಿಸುತ್ತಿದ್ದೇನೆ. — @Anil Karne Gajendragad
    1
    🌾ಗಜೇಂದ್ರಗಡ ನಗರ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ನಿರಂತರ ಶ್ರಮ…

ನನ್ನನ್ನು ಕೆಲವರು ವಿರೋಧಿಸಿದ್ದು ನನ್ನ ವ್ಯಕ್ತಿತ್ವವನ್ನಲ್ಲ… ನನ್ನ ಸಾಮರ್ಥ್ಯವನ್ನು.

ಅವರಲ್ಲಿ ಕೆಲವರು ನನ್ನಿಂದ ಅಧಿಕಾರದ ಲಾಭ ಪಡೆದವರೇ ಆಗಿದ್ದರು.

“ಸ್ವತಂತ್ರವಾಗಿ ಇದ್ದು ಕೆಲಸ ಮಾಡಿ ತೋರಿಸು” ಎಂದು ನನಗೆ ಸವಾಲು. ಹಾಕಿದವರೂ ಇದ್ದಾರೆ.

ನನ್ನಿಂದ ಉಚಿತವಾಗಿ ಸೇವೆ ಪಡೆದವರೂ ಇದ್ದಾರೆ.

ನಾನು ಸಲ್ಲಿಸಿದ ಮನವಿಗಳನ್ನು “ಕಸದ ಬುಟ್ಟಿಗೆ ಹಾಕುತ್ತಾರೆ” ಎಂದು ವ್ಯಂಗ್ಯವಾಡಿದವರೂ ಇದ್ದಾರೆ.

ಆದರೆ ಇಂದು ಅದೇ ಮನವಿಗಳು ಅಭಿವೃದ್ಧಿಯ ದಿಕ್ಕಿನಲ್ಲಿ ಹಾರುವ ಗಾಳಿಪಟಗಳಾಗಿವೆ. 🪁

ನನಗೆ ಸಾಕಷ್ಟು ತೊಂದರೆ, ಅವಮಾನ, ಅಪಮಾನಗಳನ್ನು ಎದುರಿಸಬೇಕಾಯಿತು.
ಆದರೂ ಯಾವುದಕ್ಕೂ ಕುಗ್ಗದೆ, ಯಾರ ಮೇಲೂ ಅವಲಂಬಿತನಾಗದೆ,

ನಿಷ್ಠೆಯಿಂದ… ಪ್ರಾಮಾಣಿಕವಾಗಿ…24 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದೆ.

ಇಂದು ನನ್ನ ಮಾತಿಗಿಂತ ನನ್ನ ಕೆಲಸಗಳೇ ಉತ್ತರ ನೀಡುತ್ತಿವೆ.

ಜನರ ಸಮಸ್ಯೆಗಳನ್ನು ಹೇಳುವುದು ಮಾತ್ರ ನನ್ನ ಕೆಲಸವಲ್ಲ;

ಪರಿಹಾರ ಸಿಗುವವರೆಗೂ ಹೋರಾಡುವುದು ನನ್ನ ಜವಾಬ್ದಾರಿ.

🔥ನನ್ನನ್ನು ಎಷ್ಟೇ ತುಳಿದರೂ, ನನ್ನ ಶ್ರಮವನ್ನು ತಡೆಯಲು ಸಾಧ್ಯವಾಗಲಿಲ್ಲ.

ಮಾತಿಗಿಂತ ಕೆಲಸವೇ ಮುಖ್ಯ — ಅದನ್ನು ನನ್ನ ಕಾರ್ಯಗಳ ಮೂಲಕ ತೋರಿಸುತ್ತಿದ್ದೇನೆ.

— @Anil Karne Gajendragad
    user_Praveen Karne Gajendragad
    Praveen Karne Gajendragad
    Farmer ಗಜೇಂದ್ರಗಡ, ಗದಗ, ಕರ್ನಾಟಕ•
    3 hrs ago
  • *ಭಕ್ತರ ಇಷ್ಟಾರ್ಥ ಈಡೇರಿಸುವ ದ್ಯಾಮವ್ವನ ಮಗನಾಗಿ ಮೂಡಿಬಂದ ಗೌರಿ-ಗಣೇಶ - ತೆಗ್ಗಿನ ಓಣಿಯಲ್ಲಿ ಭಕ್ತಿ ಸಾಗರ!* ಕುಷ್ಟಗಿ:* ಪಟ್ಟಣದಲ್ಲಿ ಈ ಬಾರಿಯ ಗಣೇಶೋತ್ಸವದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ತೆಗ್ಗಿನ ಓಣಿಯ ಸರ್ವ ಧರ್ಮಗಳ ಗೆಳೆಯರ ಬಳಗದ ವಿಶೇಷ ಗಣೇಶ ಮೂರ್ತಿ. ಪ್ರತಿ ವರ್ಷ ಒಂದೊಂದು ವಿಭಿನ್ನ ಪರಿಕಲ್ಪನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವ ಈ ಬಳಗವು, ಈ ಬಾರಿ ಅತ್ಯಾಧುನಿಕ *ಎಐ ತಂತ್ರಜ್ಞಾನದ* ನೆರವಿನೊಂದಿಗೆ ಅತ್ಯಂತ ಅರ್ಥಗರ್ಭಿತವಾದ ಮೂರ್ತಿಯನ್ನು ಪ್ರತಿಷ್ಠಾಪಿಸಿ ಇಡೀ ಕುಷ್ಟಗಿಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. *ಪುರಾಣದೊಂದಿಗೆ ಗ್ರಾಮ ದೇವತೆಯ ಸಮಾಗಮ:‌ ಲೋಕ ಕಲ್ಯಾಣಕ್ಕಾಗಿ ಪಾರ್ವತಿಯು ತನ್ನ ಹಣೆಯ ಬೆವರಿನ ಮಣ್ಣಿನಿಂದ ವರಪುತ್ರ ಗಣೇಶನನ್ನು ಸೃಷ್ಟಿಸಿದ ಪೌರಾಣಿಕ ಕಥೆಯನ್ನೇ ಇಲ್ಲಿ ಮರುಸೃಷ್ಟಿ ಮಾಡಲಾಗಿದೆ. ಕುಷ್ಟಗಿಯ ಜನರ ಪಾಲಿಗೆ ಗ್ರಾಮ ದೇವತೆ ಶ್ರೀ ದ್ಯಾಮಾಂಬಿಕಾ ದೇವಿಯೇ ಸಾಕ್ಷಾತ್ ಪಾರ್ವತಿ. ಆ ದ್ಯಾಮವ್ವನೇ ತನ್ನ ಮಗನಾದ ಗಣೇಶನನ್ನು ಭೂಮಿಗೆ ಕಳುಹಿಸಿದ್ದಾಳೆ ಎಂಬ ಭಾವದಲ್ಲಿ ಈ ಅಲಂಕಾರ ಮೂಡಿಬಂದಿದೆ. ಹಿನ್ನೆಲೆಯಲ್ಲಿ ಕೈಲಾಸವಾಸಿ ಶಿವ, ತಾಯಿ ಪಾರ್ವತಿ (ದ್ಯಾಮವ್ವ) ಮತ್ತು ಮುಂದೆ ಪುಟ್ಟ ಬಾಲ ಗಣೇಶ ಕುಳಿತಿರುವ ದೃಶ್ಯವು ನೋಡುಗರಿಗೆ ದೈವತ್ವದ ಅನುಭೂತಿಯನ್ನು ನೀಡುತ್ತಿದೆ. ಕೇವಲ ಮಣ್ಣಿನ ಮೂರ್ತಿಯಲ್ಲ, ಇದೊಂದು ಜೀವಂತ ಪುರಾಣ ದರ್ಶನವೇ ಸರಿ. ಈ ಅರ್ಥಪೂರ್ಣ ಅಲಂಕಾರವು ಮಾಜಿ ಪುರಸಭೆ ಅಧ್ಯಕ್ಷ *ಮಹಾಂತೇಶ್ ಕಲಬಾವಿ* ಸೇರಿದಂತೆ ತೆಗ್ಗಿನ ಓಣಿಯ ಯುವ ಬಳಗದ ಅವಿರತ ಪರಿಶ್ರಮದ ಫಲವಾಗಿದೆ. ವಿಶೇಷವೆಂದರೆ ಹಿಂದೂ-ಮುಸ್ಲಿಂ ಯುವಕರು ಜಾತಿ ಬೇಧ ಮರೆತು ಒಂದಾಗಿ ಈ ಗಣೇಶನನ್ನು ಪ್ರತಿಷ್ಠಾಪಿಸಿರುವುದು ನಿಜವಾದ ಸರ್ವ ಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ. ತೆಗ್ಗಿನ ಓಣಿಯ ಯುವಕರ ಈ ಸೃಜನಶೀಲತೆ, ಧಾರ್ಮಿಕ ಚಿಂತನೆ ಮತ್ತು ತಂತ್ರಜ್ಞಾನದ ಬಳಕೆಯು ಇತರ ಮಂಡಳಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.
    2
    *ಭಕ್ತರ ಇಷ್ಟಾರ್ಥ ಈಡೇರಿಸುವ ದ್ಯಾಮವ್ವನ ಮಗನಾಗಿ ಮೂಡಿಬಂದ ಗೌರಿ-ಗಣೇಶ - ತೆಗ್ಗಿನ ಓಣಿಯಲ್ಲಿ ಭಕ್ತಿ ಸಾಗರ!*
ಕುಷ್ಟಗಿ:* ಪಟ್ಟಣದಲ್ಲಿ ಈ ಬಾರಿಯ ಗಣೇಶೋತ್ಸವದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ತೆಗ್ಗಿನ ಓಣಿಯ ಸರ್ವ ಧರ್ಮಗಳ ಗೆಳೆಯರ ಬಳಗದ ವಿಶೇಷ ಗಣೇಶ ಮೂರ್ತಿ.
ಪ್ರತಿ ವರ್ಷ ಒಂದೊಂದು ವಿಭಿನ್ನ ಪರಿಕಲ್ಪನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವ ಈ ಬಳಗವು, ಈ ಬಾರಿ ಅತ್ಯಾಧುನಿಕ *ಎಐ ತಂತ್ರಜ್ಞಾನದ* ನೆರವಿನೊಂದಿಗೆ ಅತ್ಯಂತ ಅರ್ಥಗರ್ಭಿತವಾದ ಮೂರ್ತಿಯನ್ನು ಪ್ರತಿಷ್ಠಾಪಿಸಿ ಇಡೀ ಕುಷ್ಟಗಿಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
*ಪುರಾಣದೊಂದಿಗೆ ಗ್ರಾಮ ದೇವತೆಯ ಸಮಾಗಮ:‌ ಲೋಕ ಕಲ್ಯಾಣಕ್ಕಾಗಿ ಪಾರ್ವತಿಯು ತನ್ನ ಹಣೆಯ ಬೆವರಿನ ಮಣ್ಣಿನಿಂದ ವರಪುತ್ರ ಗಣೇಶನನ್ನು ಸೃಷ್ಟಿಸಿದ ಪೌರಾಣಿಕ ಕಥೆಯನ್ನೇ ಇಲ್ಲಿ ಮರುಸೃಷ್ಟಿ ಮಾಡಲಾಗಿದೆ. ಕುಷ್ಟಗಿಯ ಜನರ ಪಾಲಿಗೆ ಗ್ರಾಮ ದೇವತೆ ಶ್ರೀ ದ್ಯಾಮಾಂಬಿಕಾ ದೇವಿಯೇ ಸಾಕ್ಷಾತ್ ಪಾರ್ವತಿ. ಆ ದ್ಯಾಮವ್ವನೇ ತನ್ನ ಮಗನಾದ ಗಣೇಶನನ್ನು ಭೂಮಿಗೆ ಕಳುಹಿಸಿದ್ದಾಳೆ ಎಂಬ ಭಾವದಲ್ಲಿ ಈ ಅಲಂಕಾರ ಮೂಡಿಬಂದಿದೆ.
ಹಿನ್ನೆಲೆಯಲ್ಲಿ ಕೈಲಾಸವಾಸಿ ಶಿವ, ತಾಯಿ ಪಾರ್ವತಿ (ದ್ಯಾಮವ್ವ) ಮತ್ತು ಮುಂದೆ ಪುಟ್ಟ ಬಾಲ ಗಣೇಶ ಕುಳಿತಿರುವ ದೃಶ್ಯವು ನೋಡುಗರಿಗೆ ದೈವತ್ವದ ಅನುಭೂತಿಯನ್ನು ನೀಡುತ್ತಿದೆ. ಕೇವಲ ಮಣ್ಣಿನ ಮೂರ್ತಿಯಲ್ಲ, ಇದೊಂದು ಜೀವಂತ ಪುರಾಣ ದರ್ಶನವೇ ಸರಿ.
ಈ ಅರ್ಥಪೂರ್ಣ ಅಲಂಕಾರವು ಮಾಜಿ ಪುರಸಭೆ ಅಧ್ಯಕ್ಷ *ಮಹಾಂತೇಶ್ ಕಲಬಾವಿ* ಸೇರಿದಂತೆ ತೆಗ್ಗಿನ ಓಣಿಯ ಯುವ ಬಳಗದ ಅವಿರತ ಪರಿಶ್ರಮದ ಫಲವಾಗಿದೆ. ವಿಶೇಷವೆಂದರೆ ಹಿಂದೂ-ಮುಸ್ಲಿಂ ಯುವಕರು ಜಾತಿ ಬೇಧ ಮರೆತು ಒಂದಾಗಿ ಈ ಗಣೇಶನನ್ನು ಪ್ರತಿಷ್ಠಾಪಿಸಿರುವುದು ನಿಜವಾದ ಸರ್ವ ಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ.
ತೆಗ್ಗಿನ ಓಣಿಯ ಯುವಕರ ಈ ಸೃಜನಶೀಲತೆ, ಧಾರ್ಮಿಕ ಚಿಂತನೆ ಮತ್ತು ತಂತ್ರಜ್ಞಾನದ ಬಳಕೆಯು ಇತರ ಮಂಡಳಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    16 hrs ago
  • ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ನಿಮಿತ್ಯ ಭರ್ಜರಿ ತಯಾರಿ. ವಿದ್ಯುತ್ ದೀಪಾಲಂಕಾರದ ಜೊತೆಗೆ ಬಣ್ಣ ಬಣ್ಣದ ರಂಗೋಲಿ ಅದ್ದೂರಿ ಸ್ವಾಗತ. ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ನಿಮಿತ್ಯ ಭರ್ಜರಿ ತಯಾರಿ. ವಿದ್ಯುತ್ ದೀಪಾಲಂಕಾರದ ಜೊತೆಗೆ ಬಣ್ಣ ಬಣ್ಣದ ರಂಗೋಲಿ ಅದ್ದೂರಿ ಸ್ವಾಗತ. ಗದಗ : ಪವಿತ್ರ ಶ್ರಾವಣ ಮಾಸದ ನಿಮಿತ್ಯ ತಿಂಗಳ ಪರ್ಯಂತ ಆರಂಭವಾದ ಪುರಾಣ ಪ್ರವಚನ,ಭಜನೆಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆಯುವುದು ಸರ್ವೇ ಸಾಮಾನ್ಯವಾಗಿ ನಡೆಯುತ್ತಿರುವುದು ಕಂಡು ಬರುತ್ತವೆ ಅದರಂತೆ ಶ್ರೀ ಮಾರುತೇಶ್ವರ ಭಜನಾ ಮುಕ್ತಾಯದ ಮಹಾ ಮಂಗಲ ನಿಮಿತ್ಯವಾಗಿ ಭರ್ಜರಿ ತಯಾರಿ ನಡೆಸಿರುವ ದೃಶ್ಯಗಳು ನೋಡುಗರ ಕಣ್ಮಣ ಸೆಳೆಯಿತು. ತಾಲೂಕಿನ ಕದಡಿ ಗ್ರಾಮದ ಶ್ರೀ ಮಾರುತೇಶ್ವರ ಭಜನಾ ಮುಕ್ತಾಯದ ಅಂಗವಾಗಿ ಮಹಾ ಮಂಗಲವು ಬುಧವಾರ ಜರುಗಿವುದರ ಪೂರ್ವದಲ್ಲಿ ಮಂಗಳವಾರ ರಾತ್ರಿ ಸಂಪೂರ್ಣ ಸಪ್ತಾಹ ಕಾರ್ಯಕ್ರಮ ನೆರವೇರಸಲಾಗುವುದು,ಅದರ ಪ್ರಯುಕ್ತ ಗ್ರಾಮದ ಶ್ರೀ ಮಾರುತಿ ಮಂದಿರವನ್ನೊಳಗೊಂಡು ಗ್ರಾಮ ಪಂಚಾಯತ ಮುಂದಿನ ಆವರಣದಲ್ಲಿ ಮಹಿಳೆಯರು ಸೇರಿ ರಂಗೋಲಿ ಬಿಡಿಸುತ್ತಿರುವುದು ಹಾಗೂ ದಾರಿ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಅಳವಡಿಸಿರಿ ಶೃಂಗರಿಸಿರುವುದು ಬಹು ಸುಂದರವಾಗಿ ಕಂಗೊಳಿಸುತ್ತಿರುವುದು. ನೋಡುಗರ ಕಣ್ಮಣಿ ಸೆಳೆಯಿತು. ಸಂಘದ ಸಮಿತ್ರರು ಮಾಸ ಪರ್ಯಂತ ಗ್ರಾಮದಲ್ಲಿ ಭಜನೆ ಮಾಡುತ್ತಾ ಭಕ್ತಿಯ ಪದಗಳನ್ನು ಪಠಿಸುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಗ್ರಾಮದ ಅದಿದೇವ ದೇವತೆಗಳಿಗೆ ಕಾಯಿ ಕರ್ಪುರ ದೀಪಗಳ ಬೆಳಗುತ್ತಾ ಭಕ್ತಿಯ ಗಾನ ಸುಧೆಗಳನ್ನು ಪ್ರತಿ ದಿನ ಬೆಳಗಿನ ಜಾವ ಮೊಳಗಿಸುತ್ತಿರುವುದು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿದ್ದವು.. ಶ್ರಾವಣ ಮಾಸದ ಕೊನೆಯ ದಿವಸ ಭಜನಾ ಮುಕ್ತಾಯದ ಹಿಂದಿನ ದಿನ ಭರ್ಜರಿ ತಯಾರಿ ನಡೆಸಿರುವುದು ಗ್ರಾಮದ ತುಂಬೆಲ್ಲಾ ಹಬ್ಬದ ಸಂಭ್ರಮದ ವಾತಾವರಣ ಆವರಿಸಿತ್ತು...
    2
    ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ನಿಮಿತ್ಯ ಭರ್ಜರಿ ತಯಾರಿ.
ವಿದ್ಯುತ್ ದೀಪಾಲಂಕಾರದ ಜೊತೆಗೆ ಬಣ್ಣ ಬಣ್ಣದ ರಂಗೋಲಿ ಅದ್ದೂರಿ ಸ್ವಾಗತ.
ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ನಿಮಿತ್ಯ ಭರ್ಜರಿ ತಯಾರಿ.
ವಿದ್ಯುತ್ ದೀಪಾಲಂಕಾರದ ಜೊತೆಗೆ ಬಣ್ಣ ಬಣ್ಣದ ರಂಗೋಲಿ ಅದ್ದೂರಿ ಸ್ವಾಗತ.
ಗದಗ : ಪವಿತ್ರ ಶ್ರಾವಣ ಮಾಸದ ನಿಮಿತ್ಯ ತಿಂಗಳ ಪರ್ಯಂತ ಆರಂಭವಾದ ಪುರಾಣ ಪ್ರವಚನ,ಭಜನೆಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆಯುವುದು ಸರ್ವೇ ಸಾಮಾನ್ಯವಾಗಿ ನಡೆಯುತ್ತಿರುವುದು ಕಂಡು ಬರುತ್ತವೆ ಅದರಂತೆ ಶ್ರೀ ಮಾರುತೇಶ್ವರ ಭಜನಾ ಮುಕ್ತಾಯದ ಮಹಾ ಮಂಗಲ ನಿಮಿತ್ಯವಾಗಿ ಭರ್ಜರಿ ತಯಾರಿ ನಡೆಸಿರುವ ದೃಶ್ಯಗಳು ನೋಡುಗರ ಕಣ್ಮಣ ಸೆಳೆಯಿತು.
ತಾಲೂಕಿನ ಕದಡಿ ಗ್ರಾಮದ ಶ್ರೀ ಮಾರುತೇಶ್ವರ ಭಜನಾ  ಮುಕ್ತಾಯದ ಅಂಗವಾಗಿ ಮಹಾ ಮಂಗಲವು ಬುಧವಾರ ಜರುಗಿವುದರ ಪೂರ್ವದಲ್ಲಿ ಮಂಗಳವಾರ ರಾತ್ರಿ ಸಂಪೂರ್ಣ ಸಪ್ತಾಹ ಕಾರ್ಯಕ್ರಮ ನೆರವೇರಸಲಾಗುವುದು,ಅದರ ಪ್ರಯುಕ್ತ ಗ್ರಾಮದ ಶ್ರೀ ಮಾರುತಿ ಮಂದಿರವನ್ನೊಳಗೊಂಡು ಗ್ರಾಮ ಪಂಚಾಯತ ಮುಂದಿನ ಆವರಣದಲ್ಲಿ ಮಹಿಳೆಯರು ಸೇರಿ ರಂಗೋಲಿ ಬಿಡಿಸುತ್ತಿರುವುದು ಹಾಗೂ ದಾರಿ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಅಳವಡಿಸಿರಿ ಶೃಂಗರಿಸಿರುವುದು ಬಹು ಸುಂದರವಾಗಿ ಕಂಗೊಳಿಸುತ್ತಿರುವುದು. ನೋಡುಗರ ಕಣ್ಮಣಿ ಸೆಳೆಯಿತು.
ಸಂಘದ ಸಮಿತ್ರರು ಮಾಸ ಪರ್ಯಂತ ಗ್ರಾಮದಲ್ಲಿ ಭಜನೆ ಮಾಡುತ್ತಾ ಭಕ್ತಿಯ ಪದಗಳನ್ನು ಪಠಿಸುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಗ್ರಾಮದ ಅದಿದೇವ ದೇವತೆಗಳಿಗೆ ಕಾಯಿ ಕರ್ಪುರ ದೀಪಗಳ ಬೆಳಗುತ್ತಾ ಭಕ್ತಿಯ ಗಾನ ಸುಧೆಗಳನ್ನು ಪ್ರತಿ ದಿನ ಬೆಳಗಿನ ಜಾವ ಮೊಳಗಿಸುತ್ತಿರುವುದು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿದ್ದವು..
ಶ್ರಾವಣ ಮಾಸದ ಕೊನೆಯ ದಿವಸ ಭಜನಾ ಮುಕ್ತಾಯದ ಹಿಂದಿನ ದಿನ ಭರ್ಜರಿ ತಯಾರಿ ನಡೆಸಿರುವುದು ಗ್ರಾಮದ ತುಂಬೆಲ್ಲಾ ಹಬ್ಬದ ಸಂಭ್ರಮದ ವಾತಾವರಣ ಆವರಿಸಿತ್ತು...
    user_ಪ್ರಕಾಶ ಗುದ್ನೇಪ್ಪನವರ.
    ಪ್ರಕಾಶ ಗುದ್ನೇಪ್ಪನವರ.
    Local News Reporter ಗದಗ, ಗದಗ, ಕರ್ನಾಟಕ•
    16 hrs ago
  • ಬರದ ಬೇಗುದಿ: ಶೇಂಗಾ ಬೆಳೆ ಉಳಿಸಲು ಟ್ಯಾಂಕರ್ ನೀರಿನ ಮೊರೆ: ಸಾಲ ಮಾಡಿ ನೀರುಣಿಸುತ್ತಿರುವ ರೈತರು ಕೂಡ್ಲಿಗಿ: ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿರುವ ಶೇಂಗಾ ಬೆಳೆ ಒಣಗುವ ಹಂತಕ್ಕೆ ತಲುಪಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಗುಡೇಕೋಟೆ ಗ್ರಾಮದ ರೈತ ಶಾಮ್ ರಾವ್ ಅವರು ಮಳೆಯ ನಿರೀಕ್ಷೆಯಲ್ಲಿದ್ದ ಶೇಂಗಾ ಬೆಳೆಗೆ ಟ್ಯಾಂಕರ್ ಮೂಲಕ ನೀರುಣಿಸುತ್ತಿರುವ ದೃಶ್ಯ ರೈತರ ಸಂಕಷ್ಟಕ್ಕೆ ಕನ್ನಡಿ ಹಿಡಿದಂತಾಗಿದೆ. ಶಾಮ್ ರಾವ್ ಅವರು ತಮ್ಮ ಮೂರುವರೆ ಎಕರೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿದ್ದು, ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ತೇವಾಂಶದ ಕೊರತೆಯಿಂದ ಒಣಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಬೆಳೆ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಟ್ರ್ಯಾಕ್ಟರ್ ಮೂಲಕ ಟ್ಯಾಂಕರ್ ನೀರನ್ನು ಹೊಲಕ್ಕೆ ಸಾಗಿಸಿ ಶೇಂಗಾ ಬೆಳೆಗೆ ನೀರು ಹಾಯಿಸುತ್ತಿದ್ದಾರೆ. ಈಗಾಗಲೇ ಒಂದು ಟ್ಯಾಂಕರ್ ನೀರಿಗೆ ₹500ರಂತೆ 10 ಟ್ಯಾಂಕರ್ ನೀರು ಹಾಕಲಾಗಿದ್ದು, ನೀರಿಗಾಗಿಯೇ ಸುಮಾರು ₹5,000 ವೆಚ್ಚವಾಗಿದೆ. ಮುಂದಿನ ದಿನಗಳಲ್ಲಿಯೂ ಮಳೆ ಬಾರದಿದ್ದರೆ ಇನ್ನಷ್ಟು ನೀರು ಹಾಕಬೇಕಾದ ಅನಿವಾರ್ಯತೆ ರೈತನ ಮುಂದಿದೆ.
    1
    ಬರದ ಬೇಗುದಿ: ಶೇಂಗಾ ಬೆಳೆ ಉಳಿಸಲು ಟ್ಯಾಂಕರ್ ನೀರಿನ ಮೊರೆ: ಸಾಲ ಮಾಡಿ ನೀರುಣಿಸುತ್ತಿರುವ ರೈತರು 
ಕೂಡ್ಲಿಗಿ: ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿರುವ ಶೇಂಗಾ ಬೆಳೆ ಒಣಗುವ ಹಂತಕ್ಕೆ ತಲುಪಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಗುಡೇಕೋಟೆ ಗ್ರಾಮದ ರೈತ ಶಾಮ್ ರಾವ್ ಅವರು ಮಳೆಯ ನಿರೀಕ್ಷೆಯಲ್ಲಿದ್ದ ಶೇಂಗಾ ಬೆಳೆಗೆ ಟ್ಯಾಂಕರ್ ಮೂಲಕ ನೀರುಣಿಸುತ್ತಿರುವ ದೃಶ್ಯ ರೈತರ ಸಂಕಷ್ಟಕ್ಕೆ ಕನ್ನಡಿ ಹಿಡಿದಂತಾಗಿದೆ.
ಶಾಮ್ ರಾವ್ ಅವರು ತಮ್ಮ ಮೂರುವರೆ ಎಕರೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿದ್ದು, ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ತೇವಾಂಶದ ಕೊರತೆಯಿಂದ ಒಣಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಬೆಳೆ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಟ್ರ್ಯಾಕ್ಟರ್ ಮೂಲಕ ಟ್ಯಾಂಕರ್ ನೀರನ್ನು ಹೊಲಕ್ಕೆ ಸಾಗಿಸಿ ಶೇಂಗಾ ಬೆಳೆಗೆ ನೀರು ಹಾಯಿಸುತ್ತಿದ್ದಾರೆ. ಈಗಾಗಲೇ ಒಂದು ಟ್ಯಾಂಕರ್ ನೀರಿಗೆ ₹500ರಂತೆ 10 ಟ್ಯಾಂಕರ್ ನೀರು ಹಾಕಲಾಗಿದ್ದು, ನೀರಿಗಾಗಿಯೇ ಸುಮಾರು ₹5,000 ವೆಚ್ಚವಾಗಿದೆ. ಮುಂದಿನ ದಿನಗಳಲ್ಲಿಯೂ ಮಳೆ ಬಾರದಿದ್ದರೆ ಇನ್ನಷ್ಟು ನೀರು ಹಾಕಬೇಕಾದ ಅನಿವಾರ್ಯತೆ ರೈತನ ಮುಂದಿದೆ.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    17 hrs ago
  • *ಕೂಡ್ಲಿಗಿ : ನಾಗರೀಕ ಹಿತರಕ್ಷಣಾ ವೇದಿಕೆಯಿಂದ , ಅದ್ಧೂರಿ ಊರಗಣಪ ಪ್ರತಿಷ್ಠಾನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಸೆಪ್ಟೆಂಬರ್ 14ರಂದು ಪಟ್ಟಣದ ಮೇನ್ ಬಾಯ್ಸ್ ಶಾಲೆಯ ಆವರಣದಲ್ಲಿ , ಶ್ರೀಗಣೇಶ ಚತುರ್ಥಿ ಪ್ರಯುಕ್ತ ನಾಗರೀಕ ಹಿತರಕ್ಷಣೆ ವೇದಿಕೆ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಮನೆ ಅದ್ಧೂರಿಯಾಗಿ ಜರುಗಿತು. ನಾಗರೀಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ನೇತೃತ್ವದಲ್ಲಿ , ಪ್ರತಿ ವರ್ಷಗಳಂತೆಯೇ ಗಣೇಶ ಮೂರ್ತಿ ದ‍ಾನಿಗಳು. ಹಾಗೂ ಗೌಡ ಮನೆತನದ ಮುಖಂಡರಾದ , ಪಟ್ಟಣದ ಹೆಚ್.ವೀರನಗೌಡ ರವರ ಮನೆಯಿಂದ , ಗಣೇಶನ ಬೃಹತ್ ಗಾತ್ರದ ಗಣೇಶ ಮೂರ್ತಿಯನ್ನು. ಶಾಸ್ತ್ರೋಕ್ತವಾಗಿ ಪೂಜಿಸಿ ವಾಹನದಲ್ಲಿರಿಸಿಕೊಂಡು , ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಬಹು ಅದ್ಧೂರಿಯಾಗಿ ಮೆರವಣಿಗೆ ಸಾಗಿ ವೇದಿಕೆಗೆ ಕರೆತರಲಾಯಿತು. ಪಟ್ಟಣದ ಶ್ರೀಚಂದ್ರಶೇಖರ ಆಜಾದ್ ರಂಗಮಂದಿರದ ವೇದಿಕೆ ಯಲ್ಲಿ , ಪುರೋಹಿತರಾದ ಎಮ್ ಎಮ್ ಉಮೇಶರವರ ನೇತೃತ್ವದಲ್ಲಿ. ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜಿಸಿ ಪ್ರತಿಷ್ಠಾಪಿಸಲಾಯಿತು, ತದನಂತರ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ನಂತರ ವೇದಭ್ರಾಹ್ಮಣ ಆರಾಧಕರಾದ ಬ್ರಹ್ಮಲಿಂಗಾಚಾರಿಗಳ ಪುರೋಹಿತ್ವದಲ್ಲಿ , ಪೂಜಾ ಕೈಂ ಕರ್ಯಗಳಾದಿಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಾಗರೀಕರ ಹಿತರಕ್ಷಣಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು , ಹಿರಿಯನಾಗರೀಕರು , ಹಿರಿಯರು , ಗಣ್ಯರು ಮುಖಂಡರು , ನೂರಾರು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    *ಕೂಡ್ಲಿಗಿ : ನಾಗರೀಕ ಹಿತರಕ್ಷಣಾ ವೇದಿಕೆಯಿಂದ , ಅದ್ಧೂರಿ ಊರಗಣಪ ಪ್ರತಿಷ್ಠಾನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಸೆಪ್ಟೆಂಬರ್ 14ರಂದು  ಪಟ್ಟಣದ ಮೇನ್ ಬಾಯ್ಸ್ ಶಾಲೆಯ ಆವರಣದಲ್ಲಿ , ಶ್ರೀಗಣೇಶ ಚತುರ್ಥಿ ಪ್ರಯುಕ್ತ ನಾಗರೀಕ ಹಿತರಕ್ಷಣೆ ವೇದಿಕೆ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಮನೆ ಅದ್ಧೂರಿಯಾಗಿ ಜರುಗಿತು. ನಾಗರೀಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ನೇತೃತ್ವದಲ್ಲಿ , ಪ್ರತಿ ವರ್ಷಗಳಂತೆಯೇ ಗಣೇಶ ಮೂರ್ತಿ ದ‍ಾನಿಗಳು. ಹಾಗೂ ಗೌಡ ಮನೆತನದ ಮುಖಂಡರಾದ , ಪಟ್ಟಣದ ಹೆಚ್.ವೀರನಗೌಡ ರವರ ಮನೆಯಿಂದ , ಗಣೇಶನ ಬೃಹತ್ ಗಾತ್ರದ ಗಣೇಶ ಮೂರ್ತಿಯನ್ನು. ಶಾಸ್ತ್ರೋಕ್ತವಾಗಿ ಪೂಜಿಸಿ ವಾಹನದಲ್ಲಿರಿಸಿಕೊಂಡು , ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಬಹು ಅದ್ಧೂರಿಯಾಗಿ ಮೆರವಣಿಗೆ ಸಾಗಿ ವೇದಿಕೆಗೆ ಕರೆತರಲಾಯಿತು. ಪಟ್ಟಣದ ಶ್ರೀಚಂದ್ರಶೇಖರ ಆಜಾದ್ ರಂಗಮಂದಿರದ ವೇದಿಕೆ ಯಲ್ಲಿ , ಪುರೋಹಿತರಾದ ಎಮ್ ಎಮ್ ಉಮೇಶರವರ ನೇತೃತ್ವದಲ್ಲಿ. ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜಿಸಿ ಪ್ರತಿಷ್ಠಾಪಿಸಲಾಯಿತು, ತದನಂತರ ಗಣೇಶ  ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ನಂತರ ವೇದಭ್ರಾಹ್ಮಣ ಆರಾಧಕರಾದ ಬ್ರಹ್ಮಲಿಂಗಾಚಾರಿಗಳ ಪುರೋಹಿತ್ವದಲ್ಲಿ , ಪೂಜಾ ಕೈಂ ಕರ್ಯಗಳಾದಿಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಾಗರೀಕರ ಹಿತರಕ್ಷಣಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು , ಹಿರಿಯನಾಗರೀಕರು , ಹಿರಿಯರು , ಗಣ್ಯರು ಮುಖಂಡರು  , ನೂರಾರು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    21 hrs ago
  • ಗಣೇಶ ಚತುರ್ಥಿ ಅಂಗವಾಗಿ ಕಾರಟಗಿಯಲ್ಲಿ ಸ್ಥಳೀಯ ಕಲಾವಿದರಿಂದ ತತ್ವಪದಗಳು
    2
    ಗಣೇಶ ಚತುರ್ಥಿ ಅಂಗವಾಗಿ ಕಾರಟಗಿಯಲ್ಲಿ ಸ್ಥಳೀಯ ಕಲಾವಿದರಿಂದ ತತ್ವಪದಗಳು
    user_ಟಿ.ಉಮೇಶ ಮರ್ಲಾನಹಳ್ಳಿ
    ಟಿ.ಉಮೇಶ ಮರ್ಲಾನಹಳ್ಳಿ
    Local News Reporter ಕಾರಟಗಿ, ಕೊಪ್ಪಳ, ಕರ್ನಾಟಕ•
    7 hrs ago
  • ಅಲಂಪೂರ್ ಪೇಟೆಯಲ್ಲಿ ಗಣೇಶನ ಪ್ರತಿಷ್ಠಾಪನೆ ; ಪ್ರಸಾದಕ್ಕೆ ಚಾಲನೆ ನೀಡಿದ ಮುಖಂಡರು ಇಲಕಲ್ ನಗರದ ಅಲಂಪೂರ ಪೇಟೆಯಲ್ಲಿ ಓಣಿಯ ಗುರುಹಿರಿಯರು ಯುವ ಮಿತ್ರರಿಂದ ಪ್ರತಿಷ್ಠಾಪನೆಗೊಂಡಿರುವ ಗಣೇಶಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರದ ಹಿರಿಯ ಮುಖಂಡರಾದ ವೆಂಕಟೇಶ ಸಾಕಾ, ಮಂಜುನಾಥ ಹೊಸಮನಿ, ನಗರ ಪಿಎಸ್ಐ ನಾಗರಾಜ ಗಡಾದ, ಹನುಮಂತ ತುಂಬದ, ಅಶೋಕ ಪೂಜಾರಿ ಹಾಗೂ ಅನಂಪುರ್ಪೇಟೆಯ ಯುವ ಮಿತ್ರರು ಉಪಸ್ಥಿತರಿದ್ದರು
    4
    ಅಲಂಪೂರ್ ಪೇಟೆಯಲ್ಲಿ ಗಣೇಶನ ಪ್ರತಿಷ್ಠಾಪನೆ ; ಪ್ರಸಾದಕ್ಕೆ ಚಾಲನೆ ನೀಡಿದ ಮುಖಂಡರು
ಇಲಕಲ್ ನಗರದ ಅಲಂಪೂರ ಪೇಟೆಯಲ್ಲಿ
ಓಣಿಯ ಗುರುಹಿರಿಯರು ಯುವ ಮಿತ್ರರಿಂದ ಪ್ರತಿಷ್ಠಾಪನೆಗೊಂಡಿರುವ ಗಣೇಶಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದಕ್ಕೆ ಚಾಲನೆ ನೀಡಿದರು. 
ಈ ಸಂದರ್ಭದಲ್ಲಿ ನಗರದ ಹಿರಿಯ ಮುಖಂಡರಾದ ವೆಂಕಟೇಶ ಸಾಕಾ,  ಮಂಜುನಾಥ ಹೊಸಮನಿ, ನಗರ ಪಿಎಸ್ಐ ನಾಗರಾಜ ಗಡಾದ, ಹನುಮಂತ ತುಂಬದ, ಅಶೋಕ ಪೂಜಾರಿ ಹಾಗೂ ಅನಂಪುರ್ಪೇಟೆಯ ಯುವ ಮಿತ್ರರು ಉಪಸ್ಥಿತರಿದ್ದರು
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    21 hrs ago
  • ಕೂಡ್ಲಿಗಿ : ಶಾಲಾ ಕ್ಷೇಮಾವೃದ್ಧಿಗಾಗಿ ತ್ಯಾಗ ಬಲಿದಾನಕ್ಕೆ ಸಿದ್ಧ- ರಾಘವೇಂದ್ರ , ಶಾಲಾ ಕ್ಷೇಮಾಭಿವೃದ್ಧಿಗೆ ಸದಾ ಬದ್ಧ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ *ಕೂಡ್ಲಿಗಿ : ಶಾಲಾ ಕ್ಷೇಮಾವೃದ್ಧಿಗಾಗಿ ತ್ಯಾಗ ಬಲಿದಾನಕ್ಕೆ ಸಿದ್ಧ- ರಾಘವೇಂದ್ರ , ಶಾಲಾ ಕ್ಷೇಮಾಭಿವೃದ್ಧಿಗೆ ಸದಾ ಬದ್ಧ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಐತಿಹಾಸಿಕ ಸರ್ಕಾರಿ ಮೇನ್ ಬಾಯ್ಸ್ ಸ್ಕೂಲ್ ಕ್ಷೇಮಾಭಿವೃದ್ಧಿಗಾಗಿ ತಾವು ಯಾವುದೇ ಹಂತದ ಕಾನೂನಾತ್ಮಕ ಹೋರಾಟಕ್ಕೆ , ಹಾಗೂ ಎಲ್ಲಾ ರೀತಿಯ ತ್ಯಾಗ ಬಲಿದಾನಕ್ಕೆ ಸಿದ್ಧರಿರುವುದಾಗಿ ಹೋರಾಟಗಾರರು ಘೋಷಿಸಿದ್ದಾರೆ. ಅದೇ ರೀತಿಯಾಗಿ ಸರ್ಕಾರಿ ಶಾಲಾಭಿವೃದ್ಧಿಗಾಗಿ , ತಾವು ಸದಾ ಭದ್ಧರಾಗಿರುವುದಾಗಿ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ನುಡಿದಿದ್ದಾರೆ. ಪತ್ರಕರ್ತರೊಂದಿಗೆ ಹೋರಾಟಗಾರರಾದ ರಾಘವೇಂದ್ರರವರು ಮಾತನಾಡಿದ್ದು , ಮೇನ್ ಬಾಯ್ಸ್ ಸ್ಕೂಲ್ ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣಮಾಗಿದ್ದು. ಕೆಲ ಪಟ್ಟ ಭದ್ರ ಹಿತಾಸಕ್ತಿಗಳ ಕುತಂತ್ರದಿಂದಾಗಿ , ನಿರಂತರವಾಗಿ ಶೋಷಣೆಗೆ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿದೆ. ಆ ಅವ್ಯವಸ್ಥೆಯ ವಿರುದ್ಧ ತಾವು ಮೌನ ಪ್ರತಿಭಟನೆ ಹಮ್ಮಿಕೊಂಡಿರುವುದ‍ಾಗಿ , ಶಾಲಾಕ್ಷೇಮಾಭಿವೃದ್ಧಿ ಹೋರಾಟಗಾರರು. ಎಸ್ಡಿ ಎಮ್ಸಿ ಮೇಲುಸ್ತುವಾರಿ ಸಮಿತಿ ರಾಜ್ಯ ಉಪಾಧ್ಯಕ್ಷರಾದ , ಗುನ್ನಳ್ಳಿ ರಾಘವೇಂದ್ರ ನುಡಿದಿದ್ದಾರೆ. ಅವರು ಶಾಲಾ ಆವರಣದಲ್ಲಿ , ಯಾವುದೇ ಖಾಸಗೀ ಕಾರ್ಯಕ್ರಮ ಜರುಗುವುದನ್ನು ವಿರೋಧಿಸುತ್ತಿದ್ದು. ಮತ್ತು ಶಾಲಾವರಣ ಕೆಲ ಪಟ್ಟಭದ್ರರ ಕಪಿಮುಷ್ಠಿಯಲ್ಲಿ ನಲುಗುತ್ತಿದೆ , ಇದರಿಂದಾಗಿ ಶಾಲಾವಾತಾರಣದಲ್ಲಿ ಶಾಂತಿಗೆ ಭಂಗವಾಗಲಿದೆ. ಇದರ ವಿರುದ್ಧ ತಾವು ಮೌನ ಪ್ರತಿಭಟನೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಶಾಸಕರ ಮನವಿಯ ಮೇರೆಗೆ ಹೋರಾಟವನ್ನು ತಾವು , ತಾತ‍್ಕಾಲಿಕ ಸಮಯ ಮಾತ್ರ ಹಿಂಪಡೆಯುತ್ತಿದ್ದು. ಗಣೇಶೋತ್ಸವ ನಂತರದಲ್ಲಿ ಹೋರಾಟ ಮುಂದುವರೆಯಲಿದ್ದು , ಬೀದಿಗಿಳಿದು ಹೋರಾಟಗಳನ್ನು ನಡೆಸಲಾಗುವುದು. ಶಾಲೆ ಸ್ಥಳಾಂತರಕ್ಕೆ ಯಾವುದೇ ಕಾರಣಕ್ಕೆ ಅವಕಾಶ ಕೊಡೋದಿಲ್ಲ , ಶಾಲಾ ಆವರಣ ಉಳಿವಿಗಾಗಿ ಕ್ಷೇಮಾಭಿವೃದ್ಧಿಗೆ ತ‍ಾವು ಎಂತಹ ತ್ಯಾಗ ಬಲಿದಾನಕ್ಕೂ ಸಿದ್ಧರಿರುವುದ‍ಾಗಿ ಅವರು ಘೋಷಿಸಿದರು. ಶಾಲೆಯ ಉಳಿವಿಗಾಗಿ ಶಾಲಾ ಆವರಣ ಉಳಿವಿಗಾಗಿ , ಶ‍ಾಲೆಯ ಹಳೇ ವಿದ್ಯಾರ್ಥಿಗಳ ಸಂಘಟನೆ ಮಾಡಿ ಜಾಗೃತಿ ಆಂದೊಲನ ಹೋರಾಟಗಳನ್ನಿ ಹಮ್ಮಿಕೊಳ್ಳಲ‍ಾಗುವುದು. ಮತ್ತು ಶಾಲಾ ಕ್ಷೇಮಾಭಿವೃದ್ಧಿಗಾಗಿ , ನ್ಯ‍ಾಯ‍ಲಯದ ಮೊರೆ ಹೋಗಲಾಗುವುದು. ತಾವು ಕ‍ಾನೂನಾತ್ಮಕವಾಗಿ ಹೋರಾಡಲು ಸರ್ವಸಿದ್ಧವಿದ್ದು , ಎಲ್ಲಾ ಹಂತದ ಹೋರಾಟಕ್ಕೆ ಪೂರ್ವ ತಯಾರಿ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಅಭಿವೃದ್ಧಿ ನೆಪದಲ್ಲಿ ಶಾಲಾ ಮೂಲ ಆಕರಕ್ಕೆ ಯಾವುದೇ ದಕ್ಕೆಯಾಗಬಾರದು , ಅದು ಕಾನೂನು ಬಾಹೀರವಾಗಲಿದ್ದು. ಆಭಿವೃದ್ಧಿಯ ಹರಿಕಾರರಾದ ಶ‍ಾಸಕರ ಮನವಿಗೆ ಮಾನ್ಯತೆ ನೀಡಿ , ಅವರ ಅಭಿವೃದ್ಧಿ ಪರನಿಲುವಿನ ಮೇಲೆ ವಿಶ್ವಾಸವಿಟ್ಟು ತಾವು ಮೌನ ಪ್ರತಿಭಟನೆಯನ್ನು ತಾತ್ಕ‍ಾಲಿಕವಾಗಿ ನಿಲ್ಲಿಸಲಾಗುವುದೆಂದು ಅವರು ತಿಳಿಸಿದರು. ಹಿಂದೆ ಶಾಸಕರು ಸಮ್ಮುಖದಲ್ಲಿ ಪ್ರತಿಭಟನೆ ಮಾಡುತ್ತಿರುವವರನ್ನುದ್ಧೇಶಿಸಿ ಮಾತನ‍ಾಡಿದ ಶಾಸಕರು , ಹೋರಾಟಗಾರರಲ್ಲಿರುವ ಶಾಲಾಕಾಳಜಿಯನ್ನು ಪ್ರಶಂಸಿದರು. ಮತ್ತು ಶೀಘ್ರವೇ ಶಾಲೆಯ ಕ್ಷೇಮಾಭಿವೃದ್ಧಿಗೆ ಚಾಲನೆ ನೀಡಲಾಗುವುದು. ಸರ್ಕಾರಿ ಶಾಲ‍ೆಗಳ ಕ್ಷೇಮ‍ಾಭಿವೃದ್ಧಿಗೆ ತಾವು ಸದಾ ಬದ್ಧರಿರುವುದಾಗಿ , ಶಾಸಕರು ಹೋರಾಟಗಾರರಿಗೆ ಮನವರಿಕೆ ಮ‍ಾಡಿಕೊಟ್ಟರು. ಶಾಲೆಯನ್ನು ಐತಿಹಾಸಿಕ ಶಾಲೆಯನ್ನಾಗಿ ಮಾಡುತ್ತೇನೆಂದು ಭರವಸೆ ನೀಡಿದರು , ಸುಸಜ್ಜಿತವಾದಂತಹ ಗುಣ ಮಟ್ಟದ ಶಿಕ್ಷಣ ಒದಗಿಸುವುದಕ್ಕೆ. ಅಗತ್ಯ ಸೌಕರ್ಯಗಳನ್ನು ಒಸಗಿಸುವುದಾಗಿ ನುಡಿದರು. ಶಾಲೆಯ ಮೂಲ ಆಕಾರಕ್ಕೆ ಧಕ್ಕೆ ತರದೇ ಉನ್ನತೀಕರಿಸಲ‍ಾಗುವುದೆಂದು , ಶಾಲಾ ಆವರಣವನ್ನು ಮತ್ತಷ್ಟು ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದೆಂದು ಶಾಸಕರು ಭರವಸೆ ನೀಡಿದ್ದಾರೆನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಹತ್ತಾರು ಪ್ರಮುಖ ಸಂಘಟನೆಗಳ , ಮುಖಂಡರು ಗಣ್ಯರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    ಕೂಡ್ಲಿಗಿ : ಶಾಲಾ ಕ್ಷೇಮಾವೃದ್ಧಿಗಾಗಿ ತ್ಯಾಗ ಬಲಿದಾನಕ್ಕೆ ಸಿದ್ಧ- ರಾಘವೇಂದ್ರ , ಶಾಲಾ ಕ್ಷೇಮಾಭಿವೃದ್ಧಿಗೆ ಸದಾ ಬದ್ಧ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್
*ಕೂಡ್ಲಿಗಿ : ಶಾಲಾ ಕ್ಷೇಮಾವೃದ್ಧಿಗಾಗಿ ತ್ಯಾಗ ಬಲಿದಾನಕ್ಕೆ ಸಿದ್ಧ- ರಾಘವೇಂದ್ರ , ಶಾಲಾ ಕ್ಷೇಮಾಭಿವೃದ್ಧಿಗೆ ಸದಾ ಬದ್ಧ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ  ಐತಿಹಾಸಿಕ ಸರ್ಕಾರಿ ಮೇನ್ ಬಾಯ್ಸ್ ಸ್ಕೂಲ್ ಕ್ಷೇಮಾಭಿವೃದ್ಧಿಗಾಗಿ ತಾವು ಯಾವುದೇ ಹಂತದ ಕಾನೂನಾತ್ಮಕ ಹೋರಾಟಕ್ಕೆ , ಹಾಗೂ ಎಲ್ಲಾ ರೀತಿಯ ತ್ಯಾಗ ಬಲಿದಾನಕ್ಕೆ ಸಿದ್ಧರಿರುವುದಾಗಿ ಹೋರಾಟಗಾರರು ಘೋಷಿಸಿದ್ದಾರೆ. ಅದೇ ರೀತಿಯಾಗಿ ಸರ್ಕಾರಿ ಶಾಲಾಭಿವೃದ್ಧಿಗಾಗಿ , ತಾವು ಸದಾ ಭದ್ಧರಾಗಿರುವುದಾಗಿ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ನುಡಿದಿದ್ದಾರೆ. ಪತ್ರಕರ್ತರೊಂದಿಗೆ ಹೋರಾಟಗಾರರಾದ ರಾಘವೇಂದ್ರರವರು ಮಾತನಾಡಿದ್ದು , ಮೇನ್ ಬಾಯ್ಸ್ ಸ್ಕೂಲ್ ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣಮಾಗಿದ್ದು.  ಕೆಲ ಪಟ್ಟ ಭದ್ರ ಹಿತಾಸಕ್ತಿಗಳ ಕುತಂತ್ರದಿಂದಾಗಿ , ನಿರಂತರವಾಗಿ ಶೋಷಣೆಗೆ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿದೆ. ಆ ಅವ್ಯವಸ್ಥೆಯ ವಿರುದ್ಧ ತಾವು ಮೌನ ಪ್ರತಿಭಟನೆ ಹಮ್ಮಿಕೊಂಡಿರುವುದ‍ಾಗಿ , ಶಾಲಾಕ್ಷೇಮಾಭಿವೃದ್ಧಿ ಹೋರಾಟಗಾರರು. ಎಸ್ಡಿ ಎಮ್ಸಿ ಮೇಲುಸ್ತುವಾರಿ ಸಮಿತಿ ರಾಜ್ಯ ಉಪಾಧ್ಯಕ್ಷರಾದ ,  ಗುನ್ನಳ್ಳಿ ರಾಘವೇಂದ್ರ ನುಡಿದಿದ್ದಾರೆ. ಅವರು ಶಾಲಾ ಆವರಣದಲ್ಲಿ , ಯಾವುದೇ ಖಾಸಗೀ ಕಾರ್ಯಕ್ರಮ ಜರುಗುವುದನ್ನು ವಿರೋಧಿಸುತ್ತಿದ್ದು. ಮತ್ತು ಶಾಲಾವರಣ ಕೆಲ ಪಟ್ಟಭದ್ರರ ಕಪಿಮುಷ್ಠಿಯಲ್ಲಿ ನಲುಗುತ್ತಿದೆ , ಇದರಿಂದಾಗಿ ಶಾಲಾವಾತಾರಣದಲ್ಲಿ ಶಾಂತಿಗೆ ಭಂಗವಾಗಲಿದೆ. ಇದರ ವಿರುದ್ಧ ತಾವು ಮೌನ ಪ್ರತಿಭಟನೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಶಾಸಕರ ಮನವಿಯ ಮೇರೆಗೆ ಹೋರಾಟವನ್ನು ತಾವು , ತಾತ‍್ಕಾಲಿಕ ಸಮಯ ಮಾತ್ರ ಹಿಂಪಡೆಯುತ್ತಿದ್ದು. ಗಣೇಶೋತ್ಸವ ನಂತರದಲ್ಲಿ ಹೋರಾಟ ಮುಂದುವರೆಯಲಿದ್ದು , ಬೀದಿಗಿಳಿದು ಹೋರಾಟಗಳನ್ನು ನಡೆಸಲಾಗುವುದು. ಶಾಲೆ ಸ್ಥಳಾಂತರಕ್ಕೆ ಯಾವುದೇ ಕಾರಣಕ್ಕೆ ಅವಕಾಶ ಕೊಡೋದಿಲ್ಲ  ,  ಶಾಲಾ ಆವರಣ ಉಳಿವಿಗಾಗಿ ಕ್ಷೇಮಾಭಿವೃದ್ಧಿಗೆ ತ‍ಾವು ಎಂತಹ ತ್ಯಾಗ ಬಲಿದಾನಕ್ಕೂ ಸಿದ್ಧರಿರುವುದ‍ಾಗಿ ಅವರು ಘೋಷಿಸಿದರು. ಶಾಲೆಯ ಉಳಿವಿಗಾಗಿ ಶಾಲಾ ಆವರಣ ಉಳಿವಿಗಾಗಿ , ಶ‍ಾಲೆಯ ಹಳೇ ವಿದ್ಯಾರ್ಥಿಗಳ ಸಂಘಟನೆ ಮಾಡಿ ಜಾಗೃತಿ ಆಂದೊಲನ ಹೋರಾಟಗಳನ್ನಿ ಹಮ್ಮಿಕೊಳ್ಳಲ‍ಾಗುವುದು. ಮತ್ತು ಶಾಲಾ ಕ್ಷೇಮಾಭಿವೃದ್ಧಿಗಾಗಿ , ನ್ಯ‍ಾಯ‍ಲಯದ ಮೊರೆ ಹೋಗಲಾಗುವುದು. ತಾವು ಕ‍ಾನೂನಾತ್ಮಕವಾಗಿ ಹೋರಾಡಲು ಸರ್ವಸಿದ್ಧವಿದ್ದು ,  ಎಲ್ಲಾ ಹಂತದ ಹೋರಾಟಕ್ಕೆ ಪೂರ್ವ ತಯಾರಿ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಅಭಿವೃದ್ಧಿ ನೆಪದಲ್ಲಿ ಶಾಲಾ ಮೂಲ ಆಕರಕ್ಕೆ ಯಾವುದೇ ದಕ್ಕೆಯಾಗಬಾರದು ,  ಅದು ಕಾನೂನು ಬಾಹೀರವಾಗಲಿದ್ದು. ಆಭಿವೃದ್ಧಿಯ ಹರಿಕಾರರಾದ ಶ‍ಾಸಕರ ಮನವಿಗೆ ಮಾನ್ಯತೆ ನೀಡಿ , ಅವರ ಅಭಿವೃದ್ಧಿ ಪರನಿಲುವಿನ ಮೇಲೆ ವಿಶ್ವಾಸವಿಟ್ಟು ತಾವು ಮೌನ ಪ್ರತಿಭಟನೆಯನ್ನು  ತಾತ್ಕ‍ಾಲಿಕವಾಗಿ ನಿಲ್ಲಿಸಲಾಗುವುದೆಂದು ಅವರು ತಿಳಿಸಿದರು. ಹಿಂದೆ ಶಾಸಕರು ಸಮ್ಮುಖದಲ್ಲಿ ಪ್ರತಿಭಟನೆ ಮಾಡುತ್ತಿರುವವರನ್ನುದ್ಧೇಶಿಸಿ ಮಾತನ‍ಾಡಿದ ಶಾಸಕರು , ಹೋರಾಟಗಾರರಲ್ಲಿರುವ ಶಾಲಾಕಾಳಜಿಯನ್ನು ಪ್ರಶಂಸಿದರು. ಮತ್ತು ಶೀಘ್ರವೇ ಶಾಲೆಯ ಕ್ಷೇಮಾಭಿವೃದ್ಧಿಗೆ ಚಾಲನೆ ನೀಡಲಾಗುವುದು. ಸರ್ಕಾರಿ ಶಾಲ‍ೆಗಳ ಕ್ಷೇಮ‍ಾಭಿವೃದ್ಧಿಗೆ ತಾವು ಸದಾ ಬದ್ಧರಿರುವುದಾಗಿ , ಶಾಸಕರು ಹೋರಾಟಗಾರರಿಗೆ ಮನವರಿಕೆ ಮ‍ಾಡಿಕೊಟ್ಟರು.  ಶಾಲೆಯನ್ನು ಐತಿಹಾಸಿಕ ಶಾಲೆಯನ್ನಾಗಿ ಮಾಡುತ್ತೇನೆಂದು  ಭರವಸೆ ನೀಡಿದರು ,  ಸುಸಜ್ಜಿತವಾದಂತಹ ಗುಣ ಮಟ್ಟದ ಶಿಕ್ಷಣ ಒದಗಿಸುವುದಕ್ಕೆ.  ಅಗತ್ಯ ಸೌಕರ್ಯಗಳನ್ನು ಒಸಗಿಸುವುದಾಗಿ ನುಡಿದರು. ಶಾಲೆಯ ಮೂಲ ಆಕಾರಕ್ಕೆ ಧಕ್ಕೆ ತರದೇ ಉನ್ನತೀಕರಿಸಲ‍ಾಗುವುದೆಂದು , ಶಾಲಾ ಆವರಣವನ್ನು ಮತ್ತಷ್ಟು ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದೆಂದು ಶಾಸಕರು ಭರವಸೆ ನೀಡಿದ್ದಾರೆನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಹತ್ತಾರು ಪ್ರಮುಖ ಸಂಘಟನೆಗಳ , ಮುಖಂಡರು ಗಣ್ಯರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.