ಶ್ರೀ ವಿಠ್ಠಲ ರಾಧಾ ರಖುಮಾಯಿ ದೇವಸ್ಥಾನದ ವಾರ್ಷಿಕೋತ್ಸವ ಸೊರಬ: ಪಟ್ಟಣದ ಶ್ರೀ ವಿಠ್ಠಲ ರಾಧಾ ರಖುಮಾಯಿ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ನಾಮದೇವ ಸಿಂಫಿ ಸಮಾಜದ ವತಿಯಿಂದ ದೇವಸ್ಥಾನದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ನಂತರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಿಂದ ಸಂತರು, ಭಕ್ತಾದಿಗಳೊಂದಿಗೆ ಜ್ಞಾನೇಶ್ವರ ಸ್ಪಟಿಕೆ ಹರಪನಹಳ್ಳಿ ಇವರ ನೇತೃತ್ವದಲ್ಲಿ ಶ್ರೀ ಜ್ಞಾನೇಶ್ವರಿ ಪಾರಾಯಣ ಪುಸ್ತಕವನ್ನು ಮೆರವಣಿಗೆ ಮೂಲಕ ತರಲಾಯಿತು. ನಾಮದೇವ ಸಿಂಪಿ ಸಮಾಜದ ಮಹಿಳೆಯರಿಂದ ಜ್ಞಾನೇಶ್ವರಿ ಪಾರಾಯಣದ 9 ಮತ್ತು 12ನೇ ಅಧ್ಯಾಯ ಪಠಣ, ಪಂಡರಿ ಸಂಫ್ರದಾಯದ ಕೀರ್ತನೆ ಹಾಗೂ ಸ್ಥಳೀಯ ಮಹಿಳಾ ಮಂಡಳಿಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭದಲ್ಲಿ ಸಮಾಜದ ಗೌರವಾಧ್ಯಕ್ಷ ಮಂಜುನಾಥ ರಾಕುಂಡೆ, ಅಧ್ಯಕ್ಷ ಮಾರುತಿ ಎ ಲಾಠೋರಿ, ಉಪಾಧ್ಯಕ್ಷ ಅನಿಲಕುಮಾರ ಬಾಂಬೋರೆ,ಅರುಣಕುಮಾರ ಪಿಸೆ, ಸಂಘಟನಾ ಕಾರ್ಯದರ್ಶಿ ಕೇಶವ ಪೇಟ್ಕರ್, ಕಾರ್ಯದರ್ಶಿ ಚಂದ್ರಶೇಖರ ರಾಕುಂಡೆ, ಪ್ರಭಾಕರ ಬಾಂಬೋರೆ, ಗುರುನಾಥ ಬೆನ್ನೂರು, ರಮೇಶ್ಬಾಂಬೋರೆ, ಗಿರೀಶ್ಬಾಂಬೋರೆ, ಗುರುನಾಥ ರಾಕುಂಡೆ, ಲಕ್ಷ್ಮೀಕಾಂತ ಉರಣಕರ್, ಗಾಯತ್ರಿ ಮಂಜುನಾಥ ರಾಕುಂಡೆ, ಶ್ರೀಮತಿ ಶ್ರೀಮತಿ ಸುಬ್ರಮಣ್ಯ ಸೇರಿದಂತೆ ಸಮಾಜ ಬಾಂಧವರು, ಭಕ್ತಾದಿಗಳು ಪಾಲ್ಗೊಂಡಿದ್ದರು.
ಶ್ರೀ ವಿಠ್ಠಲ ರಾಧಾ ರಖುಮಾಯಿ ದೇವಸ್ಥಾನದ ವಾರ್ಷಿಕೋತ್ಸವ ಸೊರಬ: ಪಟ್ಟಣದ ಶ್ರೀ ವಿಠ್ಠಲ ರಾಧಾ ರಖುಮಾಯಿ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ನಾಮದೇವ ಸಿಂಫಿ ಸಮಾಜದ ವತಿಯಿಂದ ದೇವಸ್ಥಾನದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ನಂತರ
ಶ್ರೀ ಸೀತಾರಾಮಚಂದ್ರ ದೇವಸ್ಥಾನದಿಂದ ಸಂತರು, ಭಕ್ತಾದಿಗಳೊಂದಿಗೆ ಜ್ಞಾನೇಶ್ವರ ಸ್ಪಟಿಕೆ ಹರಪನಹಳ್ಳಿ ಇವರ ನೇತೃತ್ವದಲ್ಲಿ ಶ್ರೀ ಜ್ಞಾನೇಶ್ವರಿ ಪಾರಾಯಣ ಪುಸ್ತಕವನ್ನು ಮೆರವಣಿಗೆ ಮೂಲಕ ತರಲಾಯಿತು. ನಾಮದೇವ ಸಿಂಪಿ ಸಮಾಜದ ಮಹಿಳೆಯರಿಂದ ಜ್ಞಾನೇಶ್ವರಿ ಪಾರಾಯಣದ 9 ಮತ್ತು 12ನೇ ಅಧ್ಯಾಯ ಪಠಣ,
ಪಂಡರಿ ಸಂಫ್ರದಾಯದ ಕೀರ್ತನೆ ಹಾಗೂ ಸ್ಥಳೀಯ ಮಹಿಳಾ ಮಂಡಳಿಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭದಲ್ಲಿ ಸಮಾಜದ ಗೌರವಾಧ್ಯಕ್ಷ ಮಂಜುನಾಥ ರಾಕುಂಡೆ, ಅಧ್ಯಕ್ಷ ಮಾರುತಿ ಎ ಲಾಠೋರಿ, ಉಪಾಧ್ಯಕ್ಷ ಅನಿಲಕುಮಾರ ಬಾಂಬೋರೆ,ಅರುಣಕುಮಾರ ಪಿಸೆ, ಸಂಘಟನಾ ಕಾರ್ಯದರ್ಶಿ ಕೇಶವ
ಪೇಟ್ಕರ್, ಕಾರ್ಯದರ್ಶಿ ಚಂದ್ರಶೇಖರ ರಾಕುಂಡೆ, ಪ್ರಭಾಕರ ಬಾಂಬೋರೆ, ಗುರುನಾಥ ಬೆನ್ನೂರು, ರಮೇಶ್ಬಾಂಬೋರೆ, ಗಿರೀಶ್ಬಾಂಬೋರೆ, ಗುರುನಾಥ ರಾಕುಂಡೆ, ಲಕ್ಷ್ಮೀಕಾಂತ ಉರಣಕರ್, ಗಾಯತ್ರಿ ಮಂಜುನಾಥ ರಾಕುಂಡೆ, ಶ್ರೀಮತಿ ಶ್ರೀಮತಿ ಸುಬ್ರಮಣ್ಯ ಸೇರಿದಂತೆ ಸಮಾಜ ಬಾಂಧವರು, ಭಕ್ತಾದಿಗಳು ಪಾಲ್ಗೊಂಡಿದ್ದರು.
- ಶಿವಮೊಗ್ಗ: ಭದ್ರಾವತಿ ನಗರದ ನ್ಯೂಟೌನ್ ಮೆಸ್ ರಸ್ತೆಯ ಸುರಕ್ಷಾ ಜೀವನ ಸೇವಾ ಟ್ರಸ್ಟ್ ವತಿಯಿಂದ ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮ ದ 5 ನೇ ವಾರ್ಷಿಕೋತ್ಸವ ಮಾ.4 ರ ನಾಳೆ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಡಾ:ಜ್ಯೋತಿ ಸೋಮಶೇಖರ್ ತಿಳಿಸಿದರು. ಅವರು ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕಳೆದ 5 ವರ್ಷಗಳಿಂದ ಟ್ರಸ್ಟ್ ವತಿಯಿಂದ ವೃದ್ಧಾಶ್ರಮ ಮತ್ತು ಅನಾಥಾಶ್ರಮ ಯಶಸ್ವಿಯಾಗಿ ನಡೆಸಿ ಕೊಂಡು ಬರಲಾಗುತ್ತಿದೆ ಎಂದರು. ಆಶ್ರಮದಲ್ಲಿ ವಯೋವೃದ್ಧರು ಹಾಗು ಅನಾಥರ ಬಗ್ಗೆ ಆಶ್ರಮದಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಟ್ರಸ್ಟ್ ಪದಾಧಿಕಾರಿಗಳು ಹಾಗು ಸೇವಾ ಮನೋಭಾವ ಹೊಂದಿ ರುವ ಕಾರ್ಯಕರ್ತರು ಯಾವುದೇ ಫಲಾಫೇಕ್ಷೆ ಇಲ್ಲದೆ ಕುಟುಂಬ ಸದಸ್ಯರಂತೆ ಒಗ್ಗಟ್ಟಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟ್ರಸ್ಟ್ ಅಗತ್ಯ ವಿರುವ ಸೌಕರ್ಯಗಳನ್ನು ಹೊಂದಿದೆ. ಜನಪ್ರತಿನಿಧಿಗಳು, ದಾನಿಗಳು ಸೇರಿದಂತೆ ಸಮಾಜದ ಪ್ರತಿ ಯೊಬ್ಬರು ಹೆಚ್ಚಿನ ಸಹಕಾರ ನೀಡುವ ಮೂಲಕ ವೃದ್ದರು, ಅನಾಥರ ನೆರವಿಗೆ ಮುಂದಾಗ ಬೇಕೆಂದು ಮನವಿ ಮಾಡಿದರು. ಶಾಸಕ ಬಿ.ಕೆ ಸಂಗಮೇಶ್ವರ್ ವಾರ್ಷಿಕೋತ್ಸವ ಸಮಾರಂಭ ವನ್ನು ಉದ್ಘಾಟಿಸುವರು. ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿ ದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಟ್ರಸ್ಟ್ ಖಜಾಂಚಿ ಸೋಮಶೇಖರ್, ಪ್ರಮುಖರಾದ ಶಾರದ ಕುಮಾರಿ, ಶಕುಂತಲಾ ಪ್ರದೀಪ್, ಜಾಹ್ನವಿ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿದ್ದರು.1
- Post by ALTAF,❤️🙏1
- ದಾವಣಗೆರೆ : ಡಿಕೆಶಿ ಸಿಎಂ ಆಗುವ ವಿಚಾರಕ್ಕೆ ಹಿನ್ನಡೆಯಾಗುತ್ತಿಲ್ಲ ಎಲ್ಲಾ ಒಳ್ಳೇಯದಾಗುತ್ತೆ ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೈಕಮಾಂಡ್ ತೀರ್ಮಾನ ಮಾಡಿದರೆ ಇಂದೇ ಡಿಕೆಶಿ ಸಿಎಂ ಆಗಯತ್ತಾರೆ. ಸೂರ್ಯ ಪಥ ಬದಲಾವಣೆಯಾದಾಗ ನಮ್ಮ ಮಾತುಗಳು ಕೂಡ ಬದಲಾವಣೆಯಾಗುತ್ತವೆ. ಹೈಕಮಾಂಡ್ ತಲೆಯಲ್ಲಿ ಏನ್ ಇದ್ಯೋ ಗೊತ್ತಿಲ್ಲ ಅವರನ್ನೇ ಕೇಳಬೇಕು. ಸಿಎಂ ಬದಲಾವಣೆ ವಿಚಾರವಾಗಿ ನಾವು ಎಲ್ಲರಿಗೂ ಉತ್ತರ ಕೊಡಬೇಕು. ಎಲ್ಲಾ ಕಡೆ ಹೋದಾಗ ಜನರು ಕೂಡ ಕೇಳುತ್ತಾರೆ. ಒಪ್ಪಂದ ಆಗಿದ್ಯೋ ಇಲ್ವೋ ಅನ್ನೋದು ಹೈಕಮಾಂಡ್ ಸ್ಪಷ್ಟಪಡಿಸಲಿ. ಈ ಎಲ್ಲಾ ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಹೈಕಮಾಂಡ್ ಮಾಡಬೇಕಿದೆ. ಸಿಎಂ ಸ್ಥಾನ ಸಿದ್ದರಾಮಯ್ಯನವರು ಅಂತ ಅಲ್ಲ ಪಕ್ಷದಲ್ಲಿ ಯಾರಿಗೇ ಕೊಟ್ಟರು ನಾವು ಬದ್ದ ಎಂದರು. ಮನಃಪೂರ್ವಕವಾಗಿ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದ.ಶಾಸಕ ಬಾಲಕೃಷ್ಣ ರವರು ಹೇಳಿದ್ದು ಸರಿ ಇದೆ.ಕೂಡಲೇ ನಿರ್ಧಾರ ತೆಗೆದುಕೊಳ್ಳದಿದ್ದರೆ ಅಧಿಕಾರಕ್ಕೆ ಬರೋದು ಕಷ್ಟ ಆಗುತ್ತದೆ ಎನ್ನುವ ಹೇಳಿಕೆಗೆ ಸತ್ಯ ಇದೆ 2028 ಕ್ಕೆ ಕಾಂಗ್ರೇಸ್ ಮತ್ತೆ ಅಧಿಕಾರಕ್ಕೆ ಬರಲು ಉತ್ತಮವಾದ ವಾತಾವರಣ ಇದೆ. ಗ್ಯಾರೆಂಟಿ ಯೋಜನೆಗಳಿಂದ ಮತ್ತೆ ಈಗ ಘೋಷಣೆ ಮಾಡಿದ ಗ್ಯಾರೆಂಟಿಗಳು ಜಾರಿಗೆ ಬಂದರೆ ವಿರೋಧ ಪಕ್ಷವೇ ಇರೋದಿಲ್ಲ. ಅ ರೀತಿ ಜನರ ಬೆಂಬಲ ಸಿಗುತ್ತದೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ.ಆದರೆ ನಮ್ಮಲ್ಲಿರುವ ಕುರ್ಚಿ ಕಿತ್ತಾಟದ ಎನ್ನುವ ಅರೋಪವಿದೆ.*ಕಳೆದ ಬಿಜೆಪಿ ಸರ್ಕಾರದಲ್ಲಿ ಖುರ್ಚಿ ಕಿತ್ತಾಟದಿಂದ ಜನರು ಕಾಂಗ್ರೆಸ್ ಕಡೆ ಒಲವು ತೋರಿಸಿದ್ದರು.ಈಗ ನಾವು ಕೂಡ ಅದೇ ದಾರಿಯಲ್ಲಿ ಹೋದರೆ ಅದರ ಎಫೆಕ್ಟ್ ನಮಗೂ ಕೂಡ ತಟ್ಟಬಹುದು ಎನ್ನುವ ರೀತಿ ಬಾಲಕೃಷ್ಣ ಹೇಳಿರಬಹುದು ಎಂದು ವಿವರಿಸಿದರು. ಡಿಕೆಶಿ ಬಣದಿಂದ ಡಿನ್ನರ್ ಪಾರ್ಟಿ ವಿಚಾರ ಮಾತನಾಡಿ, ಇದರಲ್ಲಿ ಯಾವುದೇ ರಾಜಕೀಯ ಮಾಡೋದು ಬೇಡ.ಬಾಲಕೃಷ್ಣ ರವರ ಹುಟ್ಟು ಹಬ್ಬದ ಹಿನ್ನೆಲೆ ಊಟಕ್ಕೆ ಸೇರಿದ್ದೇವು.ಊಟಕ್ಕೆ ಕರೆದಿದ್ದರು ಊಟಕ್ಕೆ ಹೋಗಿದ್ದೇವು. 40 ಜನ ಶಾಸಕರು ಕೂಡ ಒಂದೇ ಕಡೆ ಸೇರಿದ್ದವು. ಈ ಡಿನ್ನರ್ ಪಾರ್ಟಿ ಮುಗಿದ ಮೇಲೆ ದೆಹಲಿಗೆ ಹೋಗುತ್ತಾರೆ ಎನ್ನುವ ಸುದ್ದಿ ಬಂದಿದೆ.ನಾವು ಯಾವುದೇ ಕಾರಣಕ್ಕೂ ದೆಹಲಿಗೆ ಹೋಗೋದಿಲ್ಲ. ಏನಾದರೂ ವೈಯಕ್ತಿಕ ಕೆಲಸಗಳು ಇದ್ದರೆ ದೆಹಲಿಗೆ ಹೋಗುತ್ತಾರೆ ಎಂದು ಶಾಸಕ ಶಿವಗಂಗಾ ಹೇಳಿದರು. ಸಚಿವ ಸ್ಥಾನ ನೀಡಿ ಎಂದು ಹೊಸ ಶಾಸಕರು ಪತ್ರ ಬರೆದಿದ್ದೇವು.ಅದರಲ್ಲಿ ನಾನು ಕೂಡ ಸಹಿ ಹಾಕಿದ್ದೇನೆ ಮಂಡ್ಯದಲ್ಲಿ ರವಿ ಗಣಿಗ ಇದಾರೆ ಅವರು ಅಕ್ಟಿವ್ ಪರ್ಸನ್ ಅವರಿಗಾದ್ರು ಕೊಡ್ಲಿ. ಮೊದಲ ಬಾರಿ ಗೆದ್ದ ಶಾಸಕರು ಇದ್ದೇವೆ ನಮಗೆ ಕೊಟ್ಟರೆ ಒಳ್ಳೇದು. ಹಳೇ ಬೇರು ಹೊಸ ಚಿಗುರು ಎನ್ನುವಂತೆ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯನವರು ಈ ವಿಚಾರದಲ್ಲಿ ಅವರ ಅಭಿಪ್ರಾಯ ಹೇಳಿದ್ದಾರೆ ಕೊಟ್ಟರೆ ಒಳ್ಳೇಯದು ಇಲ್ಲವಾದ್ರೆ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಶಿವಗಂಗಾ ಬಸವರಾಜ್ ಹೇಳಿದರು.1
- ಚಳ್ಳಕೆರೆ ಶ್ರೀಕ್ಷೇತ್ರ ನಾಯಕನಹಟ್ಟಿ ಪಟ್ಟಣದಲ್ಲಿ 5 ಹಾಗೂ 6 ರಂದು ನಡೆಯಲಿರುವ ಶ್ರೀ ಗುರುತಿಪ್ಪೆರುದ್ರಸ್ವಾಮಿ ಜಾತ್ರೆಯಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ತುಂಭ ಎಚ್ಚರಿಕೆ ವಹಿಸಬೇಕು ಎಂದು ಡಿವೈಎಸ್ಪಿ ಎಂ.ಜೆ.ಸತ್ಯ ನಾರಾಯಣರಾವ್ ತಿಳಿಸಿದ್ದಾರೆ . ಚಳ್ಳಕೆರೆ ಉಪವಿಭಾಗ ವ್ಯಾಪ್ತಿಯ ಮೊಳಕಾಲ್ಮೂರು ,ರಾಂಪುರ,ನಾಯಕನಹಟ್ಟಿ, ತಳಕು,ಪರಶುರಾಮಪು, ಪೋಲೀಸ್ ಠಾಣೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.. ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ಪೆರೆಡ್ ನಂತರ ಅವರು ಮಾತನಾಡಿದರು.. ಈಗಾಗಲೇ ಜಾತ್ರೆಗೆ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದು ವಾಹನ ಸಂಚಾರ ಹೆಚ್ಚಾಗುವುದರಿಂದ ವಾಹನ ನಿಲುಗಡೆ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲುವಂತೆ ನೋಡಿಕೊಳ್ಳಬೇಕು. ರಥೋತ್ಸವ ನಡೆಯುತ್ತಿರುವ ವೇಳೆ ವಾಹನಗಳು ಒಳಗೆ ಸಂಚಾರ ಆಗದಂತೆ ನೋಡಿಕೊಳ್ಳಬೇಕು. ಜಾತ್ರೆಯಲ್ಲಿ ಮೊಬೈಲ್ ಒಡವೆ ಇತರೆ ವಸ್ತುಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು, ತೇರು ಹೋಗಿ ಬರುವ ಸ್ಥಳದಲ್ಲಿ ನುಕನುಗ್ಗಲು ಆಗದಂತೆ ತುಂಬಾ ಜಾಗೃತಿ ವಹಿಸಬೇಕು ಎಂದು ಸೂಚನೆ ನೀಡಿದರು. ಈ ಸಮಯದಲ್ಲಿ ತಳಕು ವೃತ್ತ ನಿರೀಕ್ಷಕರಾದ ಹನುಮಂತಪ್ಪ ಶಿರೆಹಳ್ಳಿ, ಮೊಳಕಾಲ್ಮೂರು ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ.ರಾಂಪುರ ಪಿಎಸ್ ಐ ಬಾಹುಬಲಿ ನಾಯಕನಹಟ್ಟಿ ಪಿಎಸ್ಐ ಪಾಂಡುರಂಗಪ್ಪ ಚಳ್ಳಕೆರೆ ಪಿಎಸ್ ಐಗಳಾದ ಶಿವರಾಜ್. ವಿರೇಶ ಸೇರಿದಂತೆ ಎಎಸ್ ಐಗಳು ಹಾಗೂ ಸಿಬ್ಬಂದಿಗಳು ಇದ್ದರು..1
- ಚಳ್ಳಕೆರೆ ನಗರದ ಹೊರಹೊಲಯದ ಹಿರಿಯೂರು ರಸ್ತೆಯ ನಿಸರ್ಗ ಡಾಬಾದ ಬೆಲಿಗ ಆಕಸ್ಮಿಕ ಬೆಂಕಿ ಬಿದ್ದು ನಿಸರ್ಗ ಡಬಾದ 8 ತೆಂಗಿನ ಗರಿಗಳಿಂದ ನಿರ್ಮಾಣ ಮಾಡಲಾಗಿದ್ದ ಶೆಡ್ ಗಳು ಸುಟ್ಟಿದ್ದು ಶೆಡ್ ನಲ್ಲಿ ಇದ್ದಂತಹ ಕುರ್ಚಿ ಹಾಗೂ ಚೇರುಗಳು ಸುಟ್ಟು ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ..1
- ಹಾವೇರಿ ತಾಲೂಕಿನ ನೆಗಳೂರ ಗ್ರಾಮದಲ್ಲಿ ಬುಧವಾರ ಸಂಭ್ರಮ ಸಡಗರದಿಂದ ಹೋಳಿ ಹಬ್ಬ ಆಚರಣೆಗೆ ಚಾಲನೆ ನೀಡಲಾಯಿತು. ಬೆಳಗಿನ ಜಾವ ಗ್ರಾಮದ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಗ್ರಾಮಸ್ಥರು ಕಾಮದಹನ ಮಾಡುವುದರ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ಇನ್ನೂ ಕಾಮದಹನ ಅಗ್ನಿಯ ಕೆಂಡವನ್ನು ಮನೆಗೆ ತಂದು ಕಡಲೆಕಾಳುಗಳನ್ನು ಅದರಲ್ಲಿ ಹುರಿದುಕೊಂಡು ತಿನ್ನುವುದು ಸಂಪ್ರದಾಯವಿದೆ. ಇನ್ನೂ ರೖತಾಪಿ ವರ್ಗದವರು ಕುಸುಬಿ ಗಿಡವನ್ನು ಸುಟ್ಟು ಮನೆಯಲ್ಲಿ ಕಟ್ಟುವರು ಇದರಿಂದ ಮನೆಗೆ ಹಾಗೂ ಪಶುಗಳಿಗೆ ಯಾವದೇ ತರಹದ ದೃಷ್ಟಿ ಹಾಗೂ ಅನಾರೋಗ್ಯದ ಸಮಸ್ಯೆಗಳು ಆಗದು ಎಂಬ ನಂಬಿಕೆಯಿದೆ. ಗ್ರಾಮದ ಕಾಮನಕಟ್ಟೆ ಎಂಬಲ್ಲಿ ಶತಮಾನಗಳಿಂದ ರತಿಮನ್ಮಥರ ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದು. ನಂತರ ಬಂಡಿ ಉತ್ಸವದ ಮೂಲಕ ರತಿಮನ್ಮಥರ ಮೇರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾಮನಕಟ್ಟೆಗೆ ತಲುಪಿ ಕಾಮದಹನ ಮಾಡಲಾಗುತ್ತದೆ. ಕಾಮದಹನ ವೇಳೆ ಕಾಮನ ಭಾವಚಿತ್ರದ ಕಾಗದಕ್ಕೆ ಆಗ್ನಿ ಸ್ಪರ್ಶ ಮಾಡಿದಾಗ ಅದು ಯಾವ ದಿಕ್ಕಿನ ಕಡೆಗೆ ಕಾಗದ ತುಂಡು ಬೀಳುತ್ತೂ ಆಕಡೆಗೆ ಹೆಚ್ಚು ಮಳೆ ಬೆಳೆ ಸಮೃದ್ಧಿ ಯಾಗುವುದು ಎಂಬದು ರೖತಾಪಿವರ್ಗದ ನಂಬುಗೆಯಾಗಿದೆ. ಒಟ್ಟಾರೆಯಾಗಿ ನೆಗಳೂರಿನಲ್ಲಿ ಹೋಳಿ ಹಬ್ಬ ಸಂಭ್ರಮವೂ ಮನೆ ಮನೆಗಳಲ್ಲಿ ತುಂಬಿದೆ. ಇನ್ನೂ ಮನೆಗಳಲ್ಲಿ ಹಬ್ಬದ ನಿಮಿತ್ಯ ಸಿಹಿ ಖಾದ್ಯಗಳ ತಯಾರಿಯಲ್ಲಿ ಮಹಿಳೆಯರು ಮಗ್ನರಾಗಿದ್ದಾರೆ.10
- ಶ್ರೀನಾಯಕನಹಟ್ಟಿ ಜಾತ್ರಾಮಹೋತ್ಸವ ಅಂಗವಾಗಿ ದೇವಸ್ಥಾನ ಹಾಗೂ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳ ಅಲಾಂಕಾರದಿಂದ ಜಗಮಗಿಸುತ್ತಿದ್ದು ಜಾತ್ರೆಗೆ ಬರುವ ಭಕ್ತರನ್ನು ಕೈ ಬೀಸಿ ಕೆರೆಯುವಂತಿದೆ6
- ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ರವರ ಜನ್ಮ ದಿನಾಚರಣೆಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರು, ಮುಖಂಡರು ಹಾಗೂ ಕಾರ್ಯಕರ್ತರೊಡನೆ ಪೌರಕಾರ್ಮಿಕರಿಗೆ ಕೇಕ್ ವಿತರಿಸುವ ಮೂಲಕ ಆಚರಿಸಿ ಸಂಭ್ರಮಿಸಿದರು.1