ಯಳಂದೂರು: ತಾಲೂಕಿನ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ತಾಲೂಕು ಮಟ್ಟದ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕೆಂದು ಶಾಸಕ ಎ.ಆರ್ ಕೃಷ್ಣಮೂರ್ತಿ ಸಲಹೆ ನೀಡಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್ಸಿ ಎಸ್ಟಿ ಹಿತರಕ್ಷಣ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ಜನಾಂಗ ಹೆಚ್ಚು ವಾಸ ಮಾಡುತ್ತಿದ್ದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜನಾಂಗದ ಅಭಿವೃದ್ಧಿಗೆ ಅನೇಕ ಯೋಜನೆಗಳು ಜಾರಿಗೆ ಬೀಳುತ್ತಿದ್ದು ಜನಾಂಗದ ಅಭಿವೃದ್ಧಿ ದೃಷ್ಟಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಎಸ್ಸಿ ಎಸ್ಟಿ ಹಿತರಕ್ಷಣ ಸಭೆ ನಡೆಸುವ ಮೂಲಕ ಜನಾಂಗದ ಸಮಸ್ಯೆ ಜೊತೆಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಭೆ ಕರೆಯಲಾಗುತ್ತಿದೆ ಆದರಿಂದ ಅಧಿಕಾರಿಗಳು ಇಂದಿನ ಸಾಲಿನಲ್ಲಿ ನಡೆದಿರುವ ಸಭೆಯ ಅನು ಪಾಲನಾ ವರದಿಗೆ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಬೇಕೆಂದು ಸಲಹೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ರವರು ಕಳೆದ ಬಾರಿ ನಡೆದ ಎಸ್ಸಿ ಎಸ್ಟಿ ಹಿತರಕ್ಷಣ ಸಮಿತಿ ಸಭೆಯ ಅನುಪಾತ ನ ವರದಿಯನ್ನು ಮಂಡಿಸಿದರು. ನಂತರ ದಲಿತ ಸಂಘಟನೆಯ ಜಿಲ್ಲಾ ಸಂಚಾಲಕರುಗಳಾದ ಕಂದಳ್ಳಿ ನಾರಾಯಣ, ಯೆರಿಯೂರು ರಾಜಣ್ಣ, ಹೊನ್ನೂರು ಎಂ ಸಿದ್ದರಾಜು, ಕೆಸ್ತೂರು ರಾಜು, ಅಲ್ಕೆರೆ ಅಗ್ರಹಾರ ಡಿ ರಂಗಸ್ವಾಮಿ, ಗಣಗನೂರು ಚಂದ್ರು ಹೊನ್ನೂರು ಡಿ ರೇವಣ್ಣ ಮುಂತಾದವರು ಎಸ್ ಸಿ ಎಸ್ ಟಿ ಹಿತರಕ್ಷಣ ಸಮಿತಿಯಲ್ಲಿ ಕಳೆದ ಬಾರಿ ನಡೆದ ಸಭೆಯ ಅನುಪಾಲನ ವರದಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು. ನಂತರ ವಿವಿಧ ಇಲಾಖೆ ಅಧಿಕಾರಿಗಳಿಂದ ಕಳೆದ ಬಾರಿ ನಡೆದಿರುವ ಸಭೆಯ ನಡವಳಿ, ಜನರ ಸಮಸ್ಯೆಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿ ನೀಡಲಾಯಿತು. ನಂತರ ಕ್ಷೇತ್ರದ ಶಾಸಕ ಎಆರ್ ಕೃಷ್ಣಮೂರ್ತಿ ಮಾತನಾಡಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಚೇರಿಯಲ್ಲಿ ಉಳಿದು ಸಾರ್ವಜನಿಕರಿಗೆ ಆಗಬೇಕಾದ ಈ ಸ್ವತ್ತು, ಎಸ್ಸಿ ಎಸ್ಟಿ ಜನಾಂಗದ ಕೆಲಸ ಕಾರ್ಯಗಳನ್ನು ಆದಷ್ಟು ಬೇಗ ಕಾಳಜಿ ವಹಿಸುವಂತೆ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಗಳು ಸೂಚನೆ ನೀಡಬೇಕು, ಎಸ್ ಸಿ ಎಸ್ ಟಿ ಜನಾಂಗವಾಸಿಸುವ ಗ್ರಾಮಗಳ ಅಭಿವೃದ್ಧಿ ಹಾಗೂ ಜನಾಂಗಕ್ಕೆ ರುದ್ರಭೂಮಿ, ವಿದ್ಯುತ್ ಸೌಲಭ್ಯ, ರಸ್ತೆ ನಿರ್ಮಾಣ ಕಾಮಗಾರಿ, ಕುಡಿಯುವ ನೀರಿನ ಸಮಸ್ಯೆ, ಬರ ಪರಿಹಾರ, ಹಾಗೂ ಅಕ್ರಮ ಮಧ್ಯ ಮಾರಾಟದ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದ್ದು ಈ ಎಲ್ಲಾ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಭೆಯಲ್ಲಿ ತಹಸಿಲ್ದಾರ್ ಜಯಪ್ರಕಾಶ್, ತಾಲೂಕ್ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ರಾಜೇಶ್, ಡಿವೈಎಸ್ಪಿ ಸೋಮಣ್ಣಗೌಡ, ಸಿಪಿಐ ಶಿವರಾಜ್ ಬಿ ಮುಧೋಳ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಹೇಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜ್, ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಜೆ ಯೋಗೇಶ್,, ದಲಿತ ಮುಖಂಡರಾದ ಸಿ ರಾಜಣ್ಣ, ಡಿ ರೇವಣ್ಣ, ಚಕ್ರವರ್ತಿ, ಕಂದಳ್ಳಿ ನಾರಾಯಣ್, ರಂಗಸ್ವಾಮಿ, ಕಂದಳ್ಳಿ ಮಹೇಶ್, ಪಟ್ಟಣ ಪಂಚಾಯತಿಯ ಸದಸ್ಯರಾದ ಮಹೇಶ್ ರಂಗನಾಥ್, ಸೇರಿದಂತೆ ದಲಿತ ಮುಖಂಡರು, ನಾಯಕ ಜನಾಂಗದ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.

- NoChamarajanagar, Chamarajanagara👏on 4 December 2023
- *ಭಾರತ ನಲ್ಲಿ ವೈರಲ್*1
- two wheelers avali1
- ಮಾಜಿ ಸಿಂಡಿಕೇಟ್ ಸದಸ್ಯ ಡಾ. ಫಕ್ಕಿರಗೌಡ ಪಾಟೀಲ್ ರಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ. ಶಿಗ್ಗಾವಿ: ಇಂದು ಗುಣಮಟ್ಟದ ಶಿಕ್ಷಣ ಕೊಡುವುದು ಬಹಳಷ್ಟು ಮುಖ್ಯವಾಗಿದೆ. ನಮ್ಮ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುವ ಉದ್ದೇಶದಿಂದ ಕ್ಷೇತ್ರದಲ್ಲಿ ಹಲವಾರು ಶೈಕ್ಷಣಿಕ, ಉದ್ಯೋಗದ ಕ್ರಾಂತಿ ಮಾಡಿದ್ದೇನೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದಲ್ಲಿ ಡಾ. ಎಫ್.ಜಿ ಪಾಟೀಲ್ ಇವರಿಂದ ಏರ್ಪಡಿಸಿದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದ ಶಿಗ್ಗಾವಿ-ಸವಣೂರ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವ ಉದ್ಘಾಟಿಸಿ ಮಾತನಾಡಿ ಅವರು ನಾನು ಶಾಸಕನಾದಾಗ ಕ್ಷೇತ್ರದಲ್ಲಿ ಶಿಕ್ಷಕರ ಕೊರತೆ ಬಹಳಷ್ಟು ಇತ್ತು. ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ 150ಕ್ಕೂ ಹೆಚ್ಚು ಶಿಕ್ಷಕರನ್ನು ಕೊಡಲಾಗಿತ್ತು. ಇಂದಿನ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳನ್ನ ಓದಿದಾಗ ಉದ್ಯೋಗ ಬೇಗ ಪಡೆಯಬಹುದು, ಗ್ರಾಮೀಣ ಭಾಗದೆ ಮಕ್ಕಳಿಗೆ ಯಾವುದೇ ಪ್ರತಿಭೆ ಕಡಿಮೆ ಇಲ್ಲ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶಗಳು ಕಡಿಮೆ ಇದೆ. ಸಾಧಿಸುವ ಛಲದ ಮೇಲೆ ಅವಕಾಶಗಳು ಹುಡುಕಿ ಬರುತ್ತವೆ. ಆಲೋಚನೆಗಳು ಎಲ್ಲರಲ್ಲಿಯೂ ಬರಬೇಕು ಎಂದರು.ಶಾಲೆಗೆ ಸುಣ್ಣ ಬಣ್ಣ ಹಚ್ಚಲು ಸರಕಾರದ ಇಂದು ಹಣವಿಲ್ಲ. ಬಹಳಷ್ಟು ಕಷ್ಟದಲ್ಲಿದ್ದೇವೆ. ನನ್ನ ಕಾರ್ಯ ಪ್ರೇರಣೆಯಾಗಬೇಕು ಎಂಬ ಉದ್ದೇಶದಿಂದ ಡಾ.ಎಫ್.ಜಿ. ಪಾಟೀಲ ಅವರು ತಾವು ಪಟ್ಟ ಕಷ್ಟ ನಮ್ಮ ವಿದ್ಯಾರ್ಥಿಗಳು ಪಡಬಾರದು ಎಂಬ ಉದ್ದೇಶದಿಂದ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅವರ ವ್ಯಕ್ತಿತ್ವದಲ್ಲಿಯೇ ಪ್ರವೃತ್ತಿ ಇದೆ ಎಂದು ಬಣ್ಣಿಸಿದರು. ಮಾಜಿ ಸಂಸದ ಮಂಜುನಾಥ ಕುನ್ನೂರ ಕುನ್ನೂರ ಮಾತನಾಡಿ, ಶಿಕ್ಷಣಕ್ಕೆ ಪ್ರಾಶಸ್ತ್ರ ನೀಡುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆದರಣೀಯ ಕಾರ್ಯವಾಗಿದೆ. ಶಿಕ್ಷಣವೇ ಶಕ್ತಿ, ಶಿಕ್ಷಣವಿಲ್ಲದೇ ಯಾವ ಸಾಧನೆಯೂ ಸಾಧ್ಯವಿಲ್ಲ. ಮಾಡುವ ಪುರಸ್ಕಾರಗಳು ಮತ್ತೊಬ್ಬರಿಗೆ ಪ್ರೇರಣೆಯಾಗಬೇಕು ಎಂದರು. ಮಾಜಿ ಸಿಂಡಿಕೇಟ್ ಸದಸ್ಯ ಡಾ. ಫಕ್ಕಿರಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಿಗ್ಗಾವಿ ಪಟ್ಟಣದಲ್ಲಿ ಡಾ. ಎಫ್.ಜಿ. ಪಾಟೀಲ್ ಇವರಿಂದ ಏರ್ಪಡಿಸಿದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಜುನೇಡ್‌ನನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ಪುರಸ್ಕಾರ ಆಯೋಜನೆ ಮಾಡಲಾಗಿದೆ. ಎಲ್ಲರೂ ಓದಬೇಕು, ಪ್ರಶಸ್ತಿಗಳು ಮತ್ತೊಬ್ಬರಿಗೆ ಪ್ರೇರಣೆಯಾಗುತ್ತವೆ ಎಂಬ ಸಾಮಾನ್ಯ ಉದ್ದೇಶ ಇದರಲ್ಲಿದೆ. ನಮ್ಮ ತಾಲೂಕಿನ ವಿದ್ಯಾರ್ಥಿಗಳ ಸಾಧನೆ ಹೆಚ್ಚಾಗಬೇಕು ಎಂಬ ಉದ್ದೇಶವಿದೆ. ಕಷ್ಟುಪಟ್ಟು ಶಿಕ್ಷಣ ಪಡೆದವು ಆದರೆ ಇಂದಿನ ಮಕ್ಕಳು ಆ ಕಷ್ಟ ಪಡಬಾರದು ಎಂಬ ಉದ್ದೇಶವಿತ್ತು. ಹೀಗಾಗಿ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು. ಡಾ. ಎಸ್.ಎಸ್. ದೇಸಾಯಿ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರ ದೇವಣ್ಣ ಚಾಕಲಬ್ಬಿ, ಮಲ್ಲಪ್ಪ ರಾಮಗೇರಿ, ಬಸನಗೌಡ ಮೇಗಳಮನಿ, ನಿಂಗನಗೌಡ ಪಾಟೀಲ, ಡಾ. ಪ್ರಭುಗೌಡ ಪಾಟೀಲ ಸೇರಿದಂತೆ ಅಭಿಮಾನಿಗಳು, ವಿದ್ಯಾರ್ಥಿಗಳು ಇದ್ದರು. ಮಲ್ಲಿಕಾರ್ಜುನ ಹಡಪದ ಕಾರ್ಯಕ್ರಮ ನಿರ್ವಹಿಸಿದರು.4
- ವಿಜಾಪುರ ಜಿಲ್ಲೆ ಇಂಡಿ ತಾಲೂಕಿನ ಸಾಲೋಟಗಿ ಭಜಂತ್ರಿ ನಿಮ್ಮ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ 93803537101
- ಆ ಭಗವಂತ ಇಟ್ಟಂಗೆ ಇರಬೇಕು ಇದೆ ಜೀವನ 🙏1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1