ದಲಿತ ಸಭೆಯೆ, ಚಹಾ ಸಭೆಯೆ, ಸರ್ಕಾರ ನಿಯಮ ಪಾಲಿಸೋ ಪೋಟೋ ಸಭೆಯೆ:- ವಿಶ್ವ ನಾಟೇಕಾರ್ ದಲಿತ ಸಭೆಯೆ, ಚಹಾ ಸಭೆಯೆ, ಸರ್ಕಾರ ನಿಯಮ ಪಾಲಿಸೋ ಪೋಟೋ ಸಭೆಯೆ:- ವಿಶ್ವ ನಾಟೇಕಾರ್ ಸರ್ಕಾರದ ನಿಯಮಾನುಸಾರ ಪ್ರತಿ ಜಿಲ್ಲೆ ಮತ್ತು ತಾಲೂಕು , ಗ್ರಾಮಗಳಲ್ಲಿ ದಲಿತ ದಮ್ಮನಿತರ ಮೇಲೆ ನಡೆಯುವ ದೌರ್ಜನ್ಯ ದಬ್ಬಾಳಿಕೆ ಸಾಮಾಜಿಕ ಅಸ್ಪೃಶ್ಯತೆ ತಡೆಗಟ್ಟುವ ನಿಟ್ಟಿನಲ್ಲಿ ದಲಿತ ಸಭೆಯನ್ನು ಆಯೋಜಿಸಬೇಕು , ಸಭೆಗೆ ದಲಿತರನ್ನು ಆಹ್ವಾನಿಸಿ ಸಮುದಾಯದ ಕುಂದುಕೊರತೆಗಳ ಆಲಿಸಿ ಪರಿಹರಿಸುವಂತ ಕ್ರಮವಾಗಬೇಕು ದಲಿತ ಸಮುದಾಯಕ್ಕೆ ಧೈರ್ಯ ತುಂಬಬೇಕು ,ರಕ್ಷಣೆ ಮನೋಭಾವನೆಯನ್ನು ಬೆಳಸುವಂತ ಪ್ರಕ್ರೀಯೆ ಆಗಬೇಕಿತ್ತು. ಆದರೆ ಪೋಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆಯುವ ದಲಿತ ಸಭೆಗಳು ಅಧಿಕಾರಿಗಳನ್ನು ಓಲೈಕೆ ಮತ್ತು ಸಮುದಾಯದ ನಾಯಕರನ್ನ ಓಲೈಕೆ ಮಾಡುವಂತಹ ಪರಿಕ್ರಮ ಬೆಳೆದು ಬರುತ್ತಿದೆ, ಒಂದು ಸಭೆಯನ್ನು ಸರ್ಕಾರಕ್ಕೆ ತೋರಿಸುವಂತಹ ಕಾರ್ಯವಾಗಲೆಂದು ಆಟಕ್ಕುಂಟು ಲೆಕ್ಕಕ್ಕಿಲ್ಲ ಸಭೆಯನ್ನು ನಡೆಸಿ ಚಹಾ ಕುಡಿದು ಹೋಗುವಂತಹ ವಾತಾವರಣ ಮೂಡುತ್ತಿದೆ. ಸಭೆಗೆ ದಲಿತ ಸಮುದಾಯದ ಜನರನ್ನು ವ್ಯಾಪಕವಾಗಿ ಆಹ್ವಾನಿಸಿ, ಅವರ ನೈಜ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯುತ ಆಡಳಿತಾತ್ಮಕ ಸಭೆ ವೇದಿಕೆಯಾಗಬೇಕಿದೆ ಪ್ರತಿ ತಿಂಗಳು 2ನೇ ರವಿವಾರದಂದು ಕಡ್ಡಾಯವಾಗಿ ದಲಿತ ಸಭೆಯನ್ನು ತಾಲೂಕು ಗ್ರಾಮಗಳಲ್ಲಿ ಆಯೋಜಿಸಬೇಕು ದಲಿತ ಸಮುದಾಯ ಜನರಿಗೆ ನೆರವು ಒದಗಿಸಿಬೇಕು, ಸಭೆಯ ನಡುವಳಿಗಳು ಸಮಸ್ಯೆಗಳು ನಿರ್ಣಾಯಗಳು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ, ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು ಆದರೆ ಇಂದು ಜಿಲ್ಲೆಯಾದ್ಯಂತ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಲು ಜಾಗೃತಿ ಮೂಡಿಸಿದೆ ಇರುವುದು ಕೆಲವು ಪೊಲೀಸ್ ಠಾಣೆಗಳಲ್ಲಿ ದಲಿತ ಸಭೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳಿವೆ. ಹಳ್ಳಿಗಳಿಗೆ ದಲಿತ ಸಭೆಗಳು ದೂರದ ಮಾತಾಗಿವೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಇಲಾಖೆಗಳು ಕಣ್ಣುಮುಚ್ಚಿ ಕುಳಿತರೆ, ಸಭೆ ನಡೆಸುವ ಉದ್ದೇಶವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ದೌರ್ಜನ್ಯ ಪ್ರಕರಣಗಳಲ್ಲಿ “ಕೌಂಟರ್ ಕೇಸ್” ಸಂಸ್ಕೃತಿ ನಿಲ್ಲಲಿ. ಪರಿಶಿಷ್ಟ ಜಾತಿಯ ವ್ಯಕ್ತಿ ಅಥವಾ ಕುಟುಂಬದ ಮೇಲೆ ದೌರ್ಜನ್ಯ ನಡೆದ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾದ ನಂತರ, ಆರೋಪಿಗಳಿಂದ ಪ್ರತಿಯಾಗಿ “ಕೌಂಟರ್ ಪ್ರಕರಣ” ದಾಖಲಿಸಿ ಮೂಲ ಪ್ರಕರಣವನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪಗಳಿವೆ.ಇಂತಹ ಪ್ರಕರಣಗಳಲ್ಲಿ ಪೊಲೀಸರು ಯಾವುದೇ ಒತ್ತಡ, ಪ್ರಭಾವ ಅಥವಾ ರಾಜಕೀಯ ಹಸ್ತಕ್ಷೇಪಕ್ಕೆ ಒಳಗಾಗದೆ, ಎರಡೂ ಪ್ರಕರಣಗಳನ್ನೂ ಕಾನೂನುಬದ್ಧವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ನಿಜವಾದ ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ದೊರಕುವಂತೆ ವಿಶೇಷ ಕಾಳಜಿ ವಹಿಸಬೇಕು. ದೌರ್ಜನ್ಯಕ್ಕೊಳಗಾದ ಕುಟುಂಬಗಳಿಗೆ ಪರಿಹಾರ ತಲುಪಲಿ ಅಟ್ರಾಸಿಟಿ ಪ್ರಕರಣಗಳಲ್ಲಿ ಸರ್ಕಾರದ ನಿಯಮಾನುಸಾರ ಅರ್ಹ ಸಂತ್ರಸ್ತರಿಗೆ ದೊರೆಯಬೇಕಾದ ಪರಿಹಾರಧನ ಮತ್ತು ಇತರ ಸರ್ಕಾರಿ ನೆರವು ವಿಳಂಬವಾಗದೆ ತಲುಪುವಂತೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕೇಸ್ ದಾಖಲಾದ ನಂತರ ಸಂತ್ರಸ್ತ ಕುಟುಂಬವು ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇರಬಾರದು. ಸಂತ್ರಸ್ತರಿಗೆ ದೊರೆಯಬೇಕಾದ ಪರಿಹಾರ, ಕಾನೂನು ನೆರವು ಮತ್ತು ರಕ್ಷಣೆಯ ಬಗ್ಗೆ ಅಧಿಕಾರಿಗಳೇ ಮಾರ್ಗದರ್ಶನ ನೀಡಬೇಕೆಂದು ಅಂಶಗಳ ಕಡತ ನಾಪತ್ತೆಯಾಗಿದೆಂದು ಕಂಡುಬರುತ್ತದೆ. ದಲಿತ ಸಭೆ ಒಂದು ಕಾರ್ಯಕ್ರಮವಲ್ಲ, ಒಂದು ಹೊಣೆಗಾರಿಕೆ ದಲಿತ ಸಭೆ ಎಂದರೆ ಕೇವಲ ಹಾಜರಾತಿ ಪುಸ್ತಕ ತುಂಬುವ ಕಾರ್ಯಕ್ರಮವಲ್ಲ. ಅದು ದಲಿತರ ನೋವು, ಅನ್ಯಾಯ ಮತ್ತು ಸಮಸ್ಯೆಗಳನ್ನು ಆಡಳಿತದ ಮುಂದೆ ನೇರವಾಗಿ ತಲುಪಿಸುವ ಪ್ರಜಾಸತ್ತಾತ್ಮಕ ವೇದಿಕೆ ಆದ್ದರಿಂದಲೇ ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ದಲಿತ ಸಭೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸಭೆಗಳು ಕಾಗದದ ಮೇಲಿನ ಕಾರ್ಯಕ್ರಮಗಳಾಗದೆ, ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯಪ್ರವೃತ್ತಿಯ ಸಭೆಗಳಾಗಬೇಕು. ಸಮಸ್ಯೆಯ ಸ್ವರೂಪವನ್ನು ದಾಖಲಿಸಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪರಿಹಾರಕ್ಕಾಗಿ ಕಳುಹಿಸಬೇಕು. ಕೈಗೊಂಡ ಕ್ರಮದ ವಿವರವನ್ನು ಮುಂದಿನ ಸಭೆಯಲ್ಲಿ ತಿಳಿಸಬೇಕು. ಸಭೆಯ ನಡವಳಿ, ಸಮಸ್ಯೆಗಳು, ನಿರ್ಣಯಗಳು ಮತ್ತು ಕೈಗೊಂಡ ಕ್ರಮಗಳ ವರದಿಯನ್ನು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸಬೇಕು. ಗ್ರಾಮೀಣ ಪ್ರದೇಶದ ದಲಿತ ಕುಟುಂಬಗಳಿಗೂ ಸಭೆಯ ಮಾಹಿತಿ ತಲುಪಿಸಬೇಕಿದೆ. ವಿಶೇಷವಾಗಿ ಮತ್ತೊಂದು ಗಂಭೀರ ಪ್ರಶ್ನೆ ,ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಸಮಿತಿಯ ಸದಸ್ಯರು ಏನು ಮಾಡುತ್ತಿದ್ದಾರೆ? ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ದಲಿತ ಸಮುದಾಯದ ಜನರು ಅನುಭವಿಸುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆ, ಭೂಮಿ ಮತ್ತು ಮೂಲಭೂತ ಸೌಲಭ್ಯಗಳ ಸಮಸ್ಯೆಗಳ ಬಗ್ಗೆ ಸಮಿತಿ ಸದಸ್ಯರು ಎಷ್ಟು ಬಾರಿ ಜನರನ್ನು ಭೇಟಿಯಾಗಿದ್ದಾರೆ?. ಅವರ ಕುಂದುಕೊರತೆಗಳನ್ನು ಆಲಿಸಿದ್ದಾರೆಯೇ? ಅವರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆಯೇ? ದೌರ್ಜನ್ಯಕ್ಕೊಳಗಾದ ಸಮುದಾಯದ ಪರವಾಗಿ ನಿಂತು, ಅವರ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತಂದು, ಪರಿಹಾರ ದೊರಕಿಸುವ ಜವಾಬ್ದಾರಿಯೂ ಇದೆ ಇದರಲ್ಲಿ ಒಬ್ಬ ಸದಸ್ಯರು ಪರವಾಗಿಲ್ಲ ದನಿಯಾಗಿದ್ದಾರೆ. ದಲಿತ ದೌರ್ಜನ್ಯ ತಡೆ ಸಮಿತಿ ಕೇವಲ ಕಾಗದದ ಮೇಲಿನ ಸಮಿತಿಯಾಗಬಾರದು. ಅದು ದಲಿತರ ನೋವು ನಲಿವುಗಳಿಗೆ ಸ್ಪಂದಿಸುವ, ಅವರ ಹಕ್ಕುಗಳಿಗಾಗಿ ಧ್ವನಿಯಾಗುವ, ಆಡಳಿತವನ್ನು ಹೊಣೆಗಾರರನ್ನಾಗಿಸುವ ಸಕ್ರಿಯ ಸಮಿತಿಯಾಗಲಿ. ಎಲ್ಲಾ ಅಧಿಕಾರಿಗಳಿಗೆ ಪ್ರಶ್ನೆ ಮಾಡುವ ಮುಖೇನ್ ದಲಿತ ಸಮುದಾಯ ಹಿತವನ್ನು ಕಾಪಾಡಿ ಮತ್ತು ಜಿಲ್ಲಾ ಪೋಲಿಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳು 'ದಲಿತ ಸಭೆ 'ಯನ್ನು ಗಂಭೀರವಾಗಿ ಪರಿಗಣಿಸುವಂತಹ ಕಾರ್ಯವಾಗಲಿ.
ದಲಿತ ಸಭೆಯೆ, ಚಹಾ ಸಭೆಯೆ, ಸರ್ಕಾರ ನಿಯಮ ಪಾಲಿಸೋ ಪೋಟೋ ಸಭೆಯೆ:- ವಿಶ್ವ ನಾಟೇಕಾರ್ ದಲಿತ ಸಭೆಯೆ, ಚಹಾ ಸಭೆಯೆ, ಸರ್ಕಾರ ನಿಯಮ ಪಾಲಿಸೋ ಪೋಟೋ ಸಭೆಯೆ:- ವಿಶ್ವ ನಾಟೇಕಾರ್ ಸರ್ಕಾರದ ನಿಯಮಾನುಸಾರ ಪ್ರತಿ ಜಿಲ್ಲೆ ಮತ್ತು ತಾಲೂಕು , ಗ್ರಾಮಗಳಲ್ಲಿ ದಲಿತ ದಮ್ಮನಿತರ ಮೇಲೆ ನಡೆಯುವ ದೌರ್ಜನ್ಯ ದಬ್ಬಾಳಿಕೆ ಸಾಮಾಜಿಕ ಅಸ್ಪೃಶ್ಯತೆ ತಡೆಗಟ್ಟುವ ನಿಟ್ಟಿನಲ್ಲಿ ದಲಿತ ಸಭೆಯನ್ನು ಆಯೋಜಿಸಬೇಕು , ಸಭೆಗೆ ದಲಿತರನ್ನು ಆಹ್ವಾನಿಸಿ ಸಮುದಾಯದ ಕುಂದುಕೊರತೆಗಳ ಆಲಿಸಿ ಪರಿಹರಿಸುವಂತ ಕ್ರಮವಾಗಬೇಕು ದಲಿತ ಸಮುದಾಯಕ್ಕೆ ಧೈರ್ಯ ತುಂಬಬೇಕು ,ರಕ್ಷಣೆ ಮನೋಭಾವನೆಯನ್ನು ಬೆಳಸುವಂತ ಪ್ರಕ್ರೀಯೆ ಆಗಬೇಕಿತ್ತು. ಆದರೆ ಪೋಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆಯುವ ದಲಿತ ಸಭೆಗಳು ಅಧಿಕಾರಿಗಳನ್ನು ಓಲೈಕೆ ಮತ್ತು ಸಮುದಾಯದ ನಾಯಕರನ್ನ ಓಲೈಕೆ ಮಾಡುವಂತಹ ಪರಿಕ್ರಮ ಬೆಳೆದು ಬರುತ್ತಿದೆ, ಒಂದು ಸಭೆಯನ್ನು ಸರ್ಕಾರಕ್ಕೆ ತೋರಿಸುವಂತಹ ಕಾರ್ಯವಾಗಲೆಂದು ಆಟಕ್ಕುಂಟು ಲೆಕ್ಕಕ್ಕಿಲ್ಲ ಸಭೆಯನ್ನು ನಡೆಸಿ ಚಹಾ ಕುಡಿದು ಹೋಗುವಂತಹ ವಾತಾವರಣ ಮೂಡುತ್ತಿದೆ. ಸಭೆಗೆ ದಲಿತ ಸಮುದಾಯದ ಜನರನ್ನು ವ್ಯಾಪಕವಾಗಿ ಆಹ್ವಾನಿಸಿ, ಅವರ ನೈಜ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯುತ ಆಡಳಿತಾತ್ಮಕ ಸಭೆ ವೇದಿಕೆಯಾಗಬೇಕಿದೆ ಪ್ರತಿ ತಿಂಗಳು 2ನೇ ರವಿವಾರದಂದು ಕಡ್ಡಾಯವಾಗಿ ದಲಿತ ಸಭೆಯನ್ನು ತಾಲೂಕು ಗ್ರಾಮಗಳಲ್ಲಿ ಆಯೋಜಿಸಬೇಕು ದಲಿತ ಸಮುದಾಯ ಜನರಿಗೆ ನೆರವು ಒದಗಿಸಿಬೇಕು, ಸಭೆಯ ನಡುವಳಿಗಳು ಸಮಸ್ಯೆಗಳು ನಿರ್ಣಾಯಗಳು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ, ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು ಆದರೆ ಇಂದು ಜಿಲ್ಲೆಯಾದ್ಯಂತ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಲು ಜಾಗೃತಿ ಮೂಡಿಸಿದೆ ಇರುವುದು ಕೆಲವು ಪೊಲೀಸ್ ಠಾಣೆಗಳಲ್ಲಿ ದಲಿತ ಸಭೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳಿವೆ. ಹಳ್ಳಿಗಳಿಗೆ ದಲಿತ ಸಭೆಗಳು ದೂರದ ಮಾತಾಗಿವೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಇಲಾಖೆಗಳು ಕಣ್ಣುಮುಚ್ಚಿ ಕುಳಿತರೆ, ಸಭೆ ನಡೆಸುವ ಉದ್ದೇಶವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ದೌರ್ಜನ್ಯ ಪ್ರಕರಣಗಳಲ್ಲಿ “ಕೌಂಟರ್ ಕೇಸ್” ಸಂಸ್ಕೃತಿ ನಿಲ್ಲಲಿ. ಪರಿಶಿಷ್ಟ ಜಾತಿಯ ವ್ಯಕ್ತಿ ಅಥವಾ ಕುಟುಂಬದ ಮೇಲೆ ದೌರ್ಜನ್ಯ ನಡೆದ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾದ ನಂತರ, ಆರೋಪಿಗಳಿಂದ ಪ್ರತಿಯಾಗಿ “ಕೌಂಟರ್ ಪ್ರಕರಣ” ದಾಖಲಿಸಿ ಮೂಲ ಪ್ರಕರಣವನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪಗಳಿವೆ.ಇಂತಹ ಪ್ರಕರಣಗಳಲ್ಲಿ ಪೊಲೀಸರು ಯಾವುದೇ ಒತ್ತಡ, ಪ್ರಭಾವ ಅಥವಾ ರಾಜಕೀಯ ಹಸ್ತಕ್ಷೇಪಕ್ಕೆ ಒಳಗಾಗದೆ, ಎರಡೂ ಪ್ರಕರಣಗಳನ್ನೂ ಕಾನೂನುಬದ್ಧವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ನಿಜವಾದ ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ದೊರಕುವಂತೆ ವಿಶೇಷ ಕಾಳಜಿ ವಹಿಸಬೇಕು. ದೌರ್ಜನ್ಯಕ್ಕೊಳಗಾದ ಕುಟುಂಬಗಳಿಗೆ ಪರಿಹಾರ ತಲುಪಲಿ
ಅಟ್ರಾಸಿಟಿ ಪ್ರಕರಣಗಳಲ್ಲಿ ಸರ್ಕಾರದ ನಿಯಮಾನುಸಾರ ಅರ್ಹ ಸಂತ್ರಸ್ತರಿಗೆ ದೊರೆಯಬೇಕಾದ ಪರಿಹಾರಧನ ಮತ್ತು ಇತರ ಸರ್ಕಾರಿ ನೆರವು ವಿಳಂಬವಾಗದೆ ತಲುಪುವಂತೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕೇಸ್ ದಾಖಲಾದ ನಂತರ ಸಂತ್ರಸ್ತ ಕುಟುಂಬವು ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇರಬಾರದು. ಸಂತ್ರಸ್ತರಿಗೆ ದೊರೆಯಬೇಕಾದ ಪರಿಹಾರ, ಕಾನೂನು ನೆರವು ಮತ್ತು ರಕ್ಷಣೆಯ ಬಗ್ಗೆ ಅಧಿಕಾರಿಗಳೇ ಮಾರ್ಗದರ್ಶನ ನೀಡಬೇಕೆಂದು ಅಂಶಗಳ ಕಡತ ನಾಪತ್ತೆಯಾಗಿದೆಂದು ಕಂಡುಬರುತ್ತದೆ. ದಲಿತ ಸಭೆ ಒಂದು ಕಾರ್ಯಕ್ರಮವಲ್ಲ, ಒಂದು ಹೊಣೆಗಾರಿಕೆ ದಲಿತ ಸಭೆ ಎಂದರೆ ಕೇವಲ ಹಾಜರಾತಿ ಪುಸ್ತಕ ತುಂಬುವ ಕಾರ್ಯಕ್ರಮವಲ್ಲ. ಅದು ದಲಿತರ ನೋವು, ಅನ್ಯಾಯ ಮತ್ತು ಸಮಸ್ಯೆಗಳನ್ನು ಆಡಳಿತದ ಮುಂದೆ ನೇರವಾಗಿ ತಲುಪಿಸುವ ಪ್ರಜಾಸತ್ತಾತ್ಮಕ ವೇದಿಕೆ ಆದ್ದರಿಂದಲೇ ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ದಲಿತ ಸಭೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸಭೆಗಳು ಕಾಗದದ ಮೇಲಿನ ಕಾರ್ಯಕ್ರಮಗಳಾಗದೆ, ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯಪ್ರವೃತ್ತಿಯ ಸಭೆಗಳಾಗಬೇಕು. ಸಮಸ್ಯೆಯ ಸ್ವರೂಪವನ್ನು ದಾಖಲಿಸಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪರಿಹಾರಕ್ಕಾಗಿ ಕಳುಹಿಸಬೇಕು. ಕೈಗೊಂಡ ಕ್ರಮದ ವಿವರವನ್ನು ಮುಂದಿನ ಸಭೆಯಲ್ಲಿ ತಿಳಿಸಬೇಕು. ಸಭೆಯ ನಡವಳಿ, ಸಮಸ್ಯೆಗಳು, ನಿರ್ಣಯಗಳು ಮತ್ತು ಕೈಗೊಂಡ ಕ್ರಮಗಳ ವರದಿಯನ್ನು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸಬೇಕು. ಗ್ರಾಮೀಣ ಪ್ರದೇಶದ ದಲಿತ ಕುಟುಂಬಗಳಿಗೂ ಸಭೆಯ ಮಾಹಿತಿ ತಲುಪಿಸಬೇಕಿದೆ. ವಿಶೇಷವಾಗಿ ಮತ್ತೊಂದು ಗಂಭೀರ ಪ್ರಶ್ನೆ ,ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಸಮಿತಿಯ ಸದಸ್ಯರು ಏನು ಮಾಡುತ್ತಿದ್ದಾರೆ? ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ದಲಿತ ಸಮುದಾಯದ ಜನರು ಅನುಭವಿಸುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆ, ಭೂಮಿ ಮತ್ತು ಮೂಲಭೂತ ಸೌಲಭ್ಯಗಳ ಸಮಸ್ಯೆಗಳ ಬಗ್ಗೆ ಸಮಿತಿ ಸದಸ್ಯರು ಎಷ್ಟು ಬಾರಿ ಜನರನ್ನು ಭೇಟಿಯಾಗಿದ್ದಾರೆ?. ಅವರ ಕುಂದುಕೊರತೆಗಳನ್ನು ಆಲಿಸಿದ್ದಾರೆಯೇ? ಅವರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆಯೇ? ದೌರ್ಜನ್ಯಕ್ಕೊಳಗಾದ ಸಮುದಾಯದ ಪರವಾಗಿ ನಿಂತು, ಅವರ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತಂದು, ಪರಿಹಾರ ದೊರಕಿಸುವ ಜವಾಬ್ದಾರಿಯೂ ಇದೆ ಇದರಲ್ಲಿ ಒಬ್ಬ ಸದಸ್ಯರು ಪರವಾಗಿಲ್ಲ ದನಿಯಾಗಿದ್ದಾರೆ. ದಲಿತ ದೌರ್ಜನ್ಯ ತಡೆ ಸಮಿತಿ ಕೇವಲ ಕಾಗದದ ಮೇಲಿನ ಸಮಿತಿಯಾಗಬಾರದು. ಅದು ದಲಿತರ ನೋವು ನಲಿವುಗಳಿಗೆ ಸ್ಪಂದಿಸುವ, ಅವರ ಹಕ್ಕುಗಳಿಗಾಗಿ ಧ್ವನಿಯಾಗುವ, ಆಡಳಿತವನ್ನು ಹೊಣೆಗಾರರನ್ನಾಗಿಸುವ ಸಕ್ರಿಯ ಸಮಿತಿಯಾಗಲಿ. ಎಲ್ಲಾ ಅಧಿಕಾರಿಗಳಿಗೆ ಪ್ರಶ್ನೆ ಮಾಡುವ ಮುಖೇನ್ ದಲಿತ ಸಮುದಾಯ ಹಿತವನ್ನು ಕಾಪಾಡಿ ಮತ್ತು ಜಿಲ್ಲಾ ಪೋಲಿಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳು 'ದಲಿತ ಸಭೆ 'ಯನ್ನು ಗಂಭೀರವಾಗಿ ಪರಿಗಣಿಸುವಂತಹ ಕಾರ್ಯವಾಗಲಿ.
- ಬರದ ಬೇಗುದಿ: ಶೇಂಗಾ ಬೆಳೆ ಉಳಿಸಲು ಟ್ಯಾಂಕರ್ ನೀರಿನ ಮೊರೆ: ಸಾಲ ಮಾಡಿ ನೀರುಣಿಸುತ್ತಿರುವ ರೈತರು ಕೂಡ್ಲಿಗಿ: ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿರುವ ಶೇಂಗಾ ಬೆಳೆ ಒಣಗುವ ಹಂತಕ್ಕೆ ತಲುಪಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಗುಡೇಕೋಟೆ ಗ್ರಾಮದ ರೈತ ಶಾಮ್ ರಾವ್ ಅವರು ಮಳೆಯ ನಿರೀಕ್ಷೆಯಲ್ಲಿದ್ದ ಶೇಂಗಾ ಬೆಳೆಗೆ ಟ್ಯಾಂಕರ್ ಮೂಲಕ ನೀರುಣಿಸುತ್ತಿರುವ ದೃಶ್ಯ ರೈತರ ಸಂಕಷ್ಟಕ್ಕೆ ಕನ್ನಡಿ ಹಿಡಿದಂತಾಗಿದೆ. ಶಾಮ್ ರಾವ್ ಅವರು ತಮ್ಮ ಮೂರುವರೆ ಎಕರೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿದ್ದು, ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ತೇವಾಂಶದ ಕೊರತೆಯಿಂದ ಒಣಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಬೆಳೆ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಟ್ರ್ಯಾಕ್ಟರ್ ಮೂಲಕ ಟ್ಯಾಂಕರ್ ನೀರನ್ನು ಹೊಲಕ್ಕೆ ಸಾಗಿಸಿ ಶೇಂಗಾ ಬೆಳೆಗೆ ನೀರು ಹಾಯಿಸುತ್ತಿದ್ದಾರೆ. ಈಗಾಗಲೇ ಒಂದು ಟ್ಯಾಂಕರ್ ನೀರಿಗೆ ₹500ರಂತೆ 10 ಟ್ಯಾಂಕರ್ ನೀರು ಹಾಕಲಾಗಿದ್ದು, ನೀರಿಗಾಗಿಯೇ ಸುಮಾರು ₹5,000 ವೆಚ್ಚವಾಗಿದೆ. ಮುಂದಿನ ದಿನಗಳಲ್ಲಿಯೂ ಮಳೆ ಬಾರದಿದ್ದರೆ ಇನ್ನಷ್ಟು ನೀರು ಹಾಕಬೇಕಾದ ಅನಿವಾರ್ಯತೆ ರೈತನ ಮುಂದಿದೆ.1
- *ಕೂಡ್ಲಿಗಿ : ನಾಗರೀಕ ಹಿತರಕ್ಷಣಾ ವೇದಿಕೆಯಿಂದ , ಅದ್ಧೂರಿ ಊರಗಣಪ ಪ್ರತಿಷ್ಠಾನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಸೆಪ್ಟೆಂಬರ್ 14ರಂದು ಪಟ್ಟಣದ ಮೇನ್ ಬಾಯ್ಸ್ ಶಾಲೆಯ ಆವರಣದಲ್ಲಿ , ಶ್ರೀಗಣೇಶ ಚತುರ್ಥಿ ಪ್ರಯುಕ್ತ ನಾಗರೀಕ ಹಿತರಕ್ಷಣೆ ವೇದಿಕೆ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಮನೆ ಅದ್ಧೂರಿಯಾಗಿ ಜರುಗಿತು. ನಾಗರೀಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ನೇತೃತ್ವದಲ್ಲಿ , ಪ್ರತಿ ವರ್ಷಗಳಂತೆಯೇ ಗಣೇಶ ಮೂರ್ತಿ ದಾನಿಗಳು. ಹಾಗೂ ಗೌಡ ಮನೆತನದ ಮುಖಂಡರಾದ , ಪಟ್ಟಣದ ಹೆಚ್.ವೀರನಗೌಡ ರವರ ಮನೆಯಿಂದ , ಗಣೇಶನ ಬೃಹತ್ ಗಾತ್ರದ ಗಣೇಶ ಮೂರ್ತಿಯನ್ನು. ಶಾಸ್ತ್ರೋಕ್ತವಾಗಿ ಪೂಜಿಸಿ ವಾಹನದಲ್ಲಿರಿಸಿಕೊಂಡು , ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಬಹು ಅದ್ಧೂರಿಯಾಗಿ ಮೆರವಣಿಗೆ ಸಾಗಿ ವೇದಿಕೆಗೆ ಕರೆತರಲಾಯಿತು. ಪಟ್ಟಣದ ಶ್ರೀಚಂದ್ರಶೇಖರ ಆಜಾದ್ ರಂಗಮಂದಿರದ ವೇದಿಕೆ ಯಲ್ಲಿ , ಪುರೋಹಿತರಾದ ಎಮ್ ಎಮ್ ಉಮೇಶರವರ ನೇತೃತ್ವದಲ್ಲಿ. ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜಿಸಿ ಪ್ರತಿಷ್ಠಾಪಿಸಲಾಯಿತು, ತದನಂತರ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ನಂತರ ವೇದಭ್ರಾಹ್ಮಣ ಆರಾಧಕರಾದ ಬ್ರಹ್ಮಲಿಂಗಾಚಾರಿಗಳ ಪುರೋಹಿತ್ವದಲ್ಲಿ , ಪೂಜಾ ಕೈಂ ಕರ್ಯಗಳಾದಿಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಾಗರೀಕರ ಹಿತರಕ್ಷಣಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು , ಹಿರಿಯನಾಗರೀಕರು , ಹಿರಿಯರು , ಗಣ್ಯರು ಮುಖಂಡರು , ನೂರಾರು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಗೌರಸಮುದ್ರ ಮಾರೆಮ್ಮ ಜಾತ್ರೆಯಲ್ಲಿ ಶಾಸಕರು ಎನ್. ವೈ. ಗೋಪಾಲಕೃಷ್ಣ ಭಾಗಿ .ಗೌರಸಮುದ್ರ ಜಾತ್ರೆಯಲ್ಲಿ ಶಾಸಕ ಎನ್. ವೈ. ಗೋಪಾಲಕೃಷ್ಣ ಭಾಗಿ ಮೊಳಕಾಲ್ಮುರು ಸುದ್ದಿ. ಗೌರಸಮುದ್ರ ಗ್ರಾಮದಲ್ಲಿ ನಡೆಯುತ್ತಿರುವ ಗೌರಸಮುದ್ರ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದ್ದು, ಮೊಳಕಾಲ್ಮುರು ಕ್ಷೇತ್ರದ ಶಾಸಕರಾದ ಎನ್. ವೈ. ಗೋಪಾಲಕೃಷ್ಣ ಅವರು ಜಾತ್ರೆಯಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಜಾತ್ರೆಯ ಕಾರ್ಯಕ್ರಮಗಳ ಕುರಿತು ಅಧಿಕಾರಿಗಳು ಹಾಗೂ ಆಯೋಜಕರಿಂದ ಮಾಹಿತಿ ಪಡೆದ ಶಾಸಕರು, ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕುರಿತು ಪರಿಶೀಲಿಸಿದರು. ವಿಶೇಷವಾಗಿ ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ನೆರವು ಹಾಗೂ ಮೆಡಿಕಲ್ ಕಿಟ್‌ಗಳ ಲಭ್ಯತೆ, ಪೊಲೀಸ್ ಭದ್ರತಾ ವ್ಯವಸ್ಥೆ ಮತ್ತು ಜಾತ್ರಾ ಸ್ಥಳದ ಶುಚಿತ್ವದ ಬಗ್ಗೆ ಮಾಹಿತಿ ಪಡೆದುಕೊಂಡರು. ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ಹಾಗೂ ಸ್ವಚ್ಛತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು. ಜಾತ್ರೆಯು ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯಲು ಅಧಿಕಾರಿಗಳು ಮತ್ತು ಆಯೋಜಕರು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಶಾಸಕರು ತಿಳಿಸಿದರು. ಜಾತ್ರೆಯಲ್ಲಿ ತಳಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನಾಗೇಶ್ ರೆಡ್ಡಿ, ಹಿರೇಹಳ್ಳಿ ವಕೀಲರು ಮಲ್ಲೇಶಿ ರಾಂಪುರ ಸಿದ್ದಬಸಪ್ಪ, ಶ್ರೀಕಾಂತ, ಪೊಲೀಸ್ ಇಲಾಖೆ ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ದೇವಿಯ ಧರ್ಶನ ಪಡೆದರು.1
- ಬಳ್ಳಾರಿಯಲ್ಲಿ ಶಾಸಕ ಬಿ.ನಾಗೇಂದ್ರ ಹುಟ್ಟುಹಬ್ಬ ಸಂಭ್ರಮ: ಬಿಮ್ಸ್‌ನಲ್ಲಿ ಅನ್ನದಾನ! ಬಳ್ಳಾರಿಯಲ್ಲಿ ಶಾಸಕ ಬಿ.ನಾಗೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಸಮಾಜಸೇವಕ ಡಿ.ಅಯಾಜ್ ಅಹ್ಮದ್ ನೇತೃತ್ವದಲ್ಲಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಅನ್ನದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕರ ಸಹೋದರ ಬಿ.ವೆಂಕಟೇಶ್ ಪ್ರಸಾದ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಪಾಲಿಕೆ ಮೇಯರ್, ಸದಸ್ಯರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಾಗೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಜವಾಬ್ದಾರಿ ಹಾಗೂ ಉನ್ನತ ಸ್ಥಾನ ದೊರೆಯಲಿ ಎಂದು ಮುಖಂಡರು ಆಶಿಸಿದರು. 📍 ಬಳ್ಳಾರಿ | ASN News24 ಕನ್ನಡ #BNagendra #ಬಿನಾಗೇಂದ್ರ #Ballari #ಬಳ್ಳಾರಿ #BallariNews #ಬಳ್ಳಾರಿನ್ಯೂಸ್ #KarnatakaNews #KannadaNews #Congress #CongressKarnataka #BirthdayCelebration #Annadana #ಅನ್ನದಾನ #BIMS #BallariUpdates #ASNNews24Kannada #KannadaNewsToday #KarnatakaPolitics1
- ಗೌರಸಮುದ್ರ ಮಾರಮ್ಮ ಜಾತ್ರೆ ಕುರಿತು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಂ .ಓಬಣ್ಣ ಏನ್ ಹೇಳಿದ್ರು ಗೊತ್ತೇ.1
- ಗೌರಸಮುದ್ರ ಮಾರಮ್ಮ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು ಐತಿಹಾಸಿಕ ಶ್ರೀ ಗೌರಸಮುದ್ರ ಮಾರಮ್ಮ ದೇವರ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರು ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿದೆ. ಗೌರಸಮುದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಬುಡಕಟ್ಟು ಸಂಸ್ಕೃತಿ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರವಾದ ಈ ದೇವಸ್ಥಾನ ಐತಿಹಾಸಿಕ ಪರಂಪರೆಗೆ ಸಾಕ್ಷಿಯಾಗಿದೆ. ಭಕ್ತರ ಕಠಿಣ ವ್ರತ ಮತ್ತು ಭಕ್ತಿಯ ನಂಬಿಕೆ ಮುಗಿಲು ಮುಟ್ಟಿದೆ ಇಂತಹ ಪವಿತ್ರ ದೇವಸ್ಥಾನಕ್ಕೆ ಇಲ್ಲಿ ಬರುವಂತ ಭಕ್ತಾದಿಗಳಿಗೆ ಜಿಲ್ಲಾಡಳಿತ ಮೂಲಭೂತ ಸೌಕರ್ಯವನ್ನು ಒದಗಿಸಬೇಕೆಂಬುದು ಭಕ್ತಾದಿಗಳ ಒತ್ತಾಸೆಯಾಗಿದೆ. ಸರಿ ಸುಮಾರು ನಾಲ್ಕರಿಂದ ಐದು ಲಕ್ಷ ಬಕ್ತಾದಿಗಳು ಬರುವಂತಹ ಈ ಶ್ರದ್ದಾ ಕೇಂದ್ರಕ್ಕೆ ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯವನ್ನು ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.1
- ಗಣೇಶ ಚತುರ್ಥಿ ಅಂಗವಾಗಿ ಕಾರಟಗಿಯಲ್ಲಿ ಸ್ಥಳೀಯ ಕಲಾವಿದರಿಂದ ತತ್ವಪದಗಳು2
- ಬಳ್ಳಾರಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಂಜೆ ತರಗತಿ! ಗಣೇಶೋತ್ಸವದಂದು ಊಟ–ಪ್ರಸಾದ ವಿತರಣೆ ಬಳ್ಳಾರಿ ಸಮೀಪದ ಸಂಗನಕಲ್ಲು ಗ್ರಾಮದ ಅಂಬೇಡ್ಕರ್ ನಗರದಲ್ಲಿ ವಿಶ್ವಚೇತನ ಸಮೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗಾಗಿ ಉಚಿತ ಸಂಜೆ ತರಗತಿ ಹಾಗೂ ಊಟ/ತಿಂಡಿ ವ್ಯವಸ್ಥೆ ಮಾಡಲಾಯಿತು. ಗಣೇಶ ಚತುರ್ಥಿ ಅಂಗವಾಗಿ ಟ್ಯೂಷನ್ ಕೇಂದ್ರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ಶಾಂತಿ ಮಂತ್ರ ಪಠಣ ನಡೆಸಲಾಯಿತು. ಬಳಿಕ ಮಕ್ಕಳಿಗೆ ಸಿಹಿ ಪ್ರಸಾದ ವಿತರಿಸಲಾಯಿತು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಸೇವಾ ಕಾರ್ಯ ನಡೆಯುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಟಿ.ನಾಗರಾಜ್ ತಿಳಿಸಿದ್ದಾರೆ. 📍 ಸಂಗನಕಲ್ಲು, ಬಳ್ಳಾರಿ 📅 15-09-2026 ASN NEWS24 ಕನ್ನಡ — ಸುತ್ತಮುತ್ತ ನಡೆಯುವ ಸುದ್ದಿ, ಸಾರ್ವಜನಿಕ ಸಮಸ್ಯೆಗಳು ಮತ್ತು ಜನರ ಧ್ವನಿ. #Ballari #Bellary #Karnataka #KannadaNews #BreakingNews #Education #GovernmentSchool #GovernmentSchoolStudents #FreeEducation #FreeTuition #GaneshChaturthi #GaneshFestival #Ganeshotsav #SocialService #StudentSupport #Sanganakallu #BallariNews #KarnatakaNews #ASNNews24 #ASNNews24Kannada #ಕರ್ನಾಟಕ #ಬಳ್ಳಾರಿ #ಕನ್ನಡಸುದ್ದಿ #ಗಣೇಶೋತ್ಸವ1