logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೃಷಿ ಪ್ರಶಸ್ತಿ ಯೋಜನೆಯಡಿ ಬೆಳೆ ಸ್ಪರ್ಧೆಗೆ ರೈತರಿಂದ ಅರ್ಜಿ ಆಹ್ವಾನ ಕೃಷಿ ಪ್ರಶಸ್ತಿ ಯೋಜನೆಯಡಿ ಬೆಳೆ ಸ್ಪರ್ಧೆಗೆ ರೈತರಿಂದ ಅರ್ಜಿ ಆಹ್ವಾನ ಚಾಮರಾಜನಗರ: ಕೃಷಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ 2026-27ನೇ ಸಾಲಿಗೆ ಮುಂಗಾರು ಹಂಗಾಮಿನಲ್ಲಿ ಕೃಷಿ ಪ್ರಶಸ್ತಿ ಯೋಜನೆಯಡಿ ಬೆಳೆ ಸ್ಪರ್ಧೆಗೆ ರೈತರು ಹಾಗೂ ರೈತ ಮಹಿಳೆಯರಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದ ಕೃಷಿ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಲು ರೈತರ ಶ್ರಮ ಮತ್ತು ಸಕ್ರಿಯ ಪಾಲುಗಾರಿಕೆ ಕಾರಣವಾಗಿರುತ್ತದೆ. ಇಂತಹ ರೈತರನ್ನು ಗುರುತಿಸಲು ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟಗಳಲ್ಲಿ ಕೃಷಿ ಪ್ರಶಸ್ತಿ ಬಹುಮಾನಗಳನ್ನು ನೀಡಲಾಗುತ್ತದೆ. ಕೃಷಿ ಪ್ರಶಸ್ತಿ ಯೋಜನೆಯಡಿಯಲ್ಲಿ ಬೆಳೆ ಸ್ಪರ್ಧೆಗೆ ಭಾಗವಹಿಸಲಿಚ್ಚಿಸುವ ರೈತರು ರೈತ ಮಹಿಳೆಯರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕೃಷಿ ಇಲಾಖೆಯ ಕೆ-ಕಿಸಾನ್ ಪೋರ್ಟಲ್ ನಲ್ಲಿ ಕೃಷಿ ಪ್ರಶಸ್ತಿಗೆ ಅರ್ಜಿ ನಮೂನೆಯನ್ನು ಅಳವಡಿಸಲಾಗಿದೆ. ಸಿಟಿಜನ್ ಲಾಗಿನ್ ಅಥವಾ ಆರ್.ಎಸ್.ಕೆ. ಲಾಗಿನ್ ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ, ಸ್ವತಹ ಆಸಕ್ತ ರೈತ, ರೈತ ಮಹಿಳೆಯರು ಪ್ರತ್ಯೇಕವಾಗಿ ಕೆ-ಕಿಸಾನ್ ಪೋರ್ಟಲ್ ನಲ್ಲಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ಎಫ್.ಐ.ಡಿ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಪ್ರಶಸ್ತಿಯಲ್ಲಿ ಬೆಳೆ ಸ್ಪರ್ಧೆಗೆ ಅರ್ಜಿ ಶುಲ್ಕವನ್ನು ರದ್ದುಪಡಿಸಲಾಗಿದೆ. ವಿವಿಧ ಹಂತದ ಬೆಳೆ ಸ್ಪರ್ಧೆ ವಿಜೇತರಿಗೆ ತಾಲೂಕು ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 15 ಸಾವಿರ, ದ್ವಿತೀಯ 10 ಸಾವಿರ, ತೃತೀಯ 5 ಸಾವಿರ ಹಾಗೂ ಜಿಲ್ಲಾಮಟ್ಟದ ಸ್ಪರ್ಧೆಗೆ ಪ್ರಥಮ 30 ಸಾವಿರ, ದ್ವಿತೀಯ 25 ಸಾವಿರ, ತೃತೀಯ 20 ಸಾವಿರ ಮತ್ತು ರಾಜ್ಯಮಟ್ಟದ ಸ್ಪರ್ಧೆಗೆ ಪ್ರಥಮ 50 ಸಾವಿರ, ದ್ವಿತೀಯ 40 ಸಾವಿರ, ತೃತೀಯ 35 ಸಾವಿರ ರೂ. ಬಹುಮಾನ ನಿಗದಿಪಡಿಸಲಾಗಿದೆ. ವಿವಿಧ ಹಂತದ ಬೆಳೆ ಸ್ಪರ್ಧೆಗೆ ನಿಗದಿಪಡಿಸಿದ ಬೆಳೆಗಳಲ್ಲಿ ಮಾತ್ರ ಸ್ಪರ್ಧೆಯನ್ನು ಏರ್ಪಡಿಸಲಾಗುವುದು ಹಾಗೂ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕಿಗೆ ಮಳೆ ಆಶ್ರಿತ ಮುಸುಕಿನ ಜೋಳ, ಕೊಳ್ಳೇಗಾಲ ತಾಲೂಕಿಗೆ ನೀರಾವರಿ ಆಶ್ರಿತ ಭತ್ತ, ಹನೂರು ತಾಲೂಕಿಗೆ ಮಳೆ ಆಶ್ರಿತ ರಾಗಿ, ಯಳಂದೂರು ತಾಲೂಕಿಗೆ ನೀರಾವರಿ ಆಶ್ರಿತ ಭತ್ತ ಬೆಳೆಗಳನ್ನು ತಾಲೂಕುವಾರು ಕೃಷಿ ಪ್ರಶಸ್ತಿಗೆ ನಿಗದಿಪಡಿಸಲಾಗಿದೆ. ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಆಗಸ್ಟ್ 31 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

16 hrs ago
user_Nanjunda Nayak
Nanjunda Nayak
Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
16 hrs ago
90625d35-1291-48f9-8441-65838c717058

ಕೃಷಿ ಪ್ರಶಸ್ತಿ ಯೋಜನೆಯಡಿ ಬೆಳೆ ಸ್ಪರ್ಧೆಗೆ ರೈತರಿಂದ ಅರ್ಜಿ ಆಹ್ವಾನ ಕೃಷಿ ಪ್ರಶಸ್ತಿ ಯೋಜನೆಯಡಿ ಬೆಳೆ ಸ್ಪರ್ಧೆಗೆ ರೈತರಿಂದ ಅರ್ಜಿ ಆಹ್ವಾನ ಚಾಮರಾಜನಗರ: ಕೃಷಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ 2026-27ನೇ ಸಾಲಿಗೆ ಮುಂಗಾರು ಹಂಗಾಮಿನಲ್ಲಿ ಕೃಷಿ ಪ್ರಶಸ್ತಿ ಯೋಜನೆಯಡಿ ಬೆಳೆ ಸ್ಪರ್ಧೆಗೆ ರೈತರು ಹಾಗೂ ರೈತ ಮಹಿಳೆಯರಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದ ಕೃಷಿ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಲು ರೈತರ ಶ್ರಮ ಮತ್ತು ಸಕ್ರಿಯ ಪಾಲುಗಾರಿಕೆ ಕಾರಣವಾಗಿರುತ್ತದೆ. ಇಂತಹ ರೈತರನ್ನು ಗುರುತಿಸಲು ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟಗಳಲ್ಲಿ ಕೃಷಿ ಪ್ರಶಸ್ತಿ ಬಹುಮಾನಗಳನ್ನು ನೀಡಲಾಗುತ್ತದೆ. ಕೃಷಿ ಪ್ರಶಸ್ತಿ ಯೋಜನೆಯಡಿಯಲ್ಲಿ ಬೆಳೆ ಸ್ಪರ್ಧೆಗೆ ಭಾಗವಹಿಸಲಿಚ್ಚಿಸುವ ರೈತರು ರೈತ ಮಹಿಳೆಯರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕೃಷಿ ಇಲಾಖೆಯ ಕೆ-ಕಿಸಾನ್ ಪೋರ್ಟಲ್ ನಲ್ಲಿ ಕೃಷಿ ಪ್ರಶಸ್ತಿಗೆ ಅರ್ಜಿ ನಮೂನೆಯನ್ನು ಅಳವಡಿಸಲಾಗಿದೆ. ಸಿಟಿಜನ್ ಲಾಗಿನ್ ಅಥವಾ ಆರ್.ಎಸ್.ಕೆ. ಲಾಗಿನ್ ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ, ಸ್ವತಹ ಆಸಕ್ತ ರೈತ, ರೈತ ಮಹಿಳೆಯರು ಪ್ರತ್ಯೇಕವಾಗಿ ಕೆ-ಕಿಸಾನ್ ಪೋರ್ಟಲ್ ನಲ್ಲಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ಎಫ್.ಐ.ಡಿ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಪ್ರಶಸ್ತಿಯಲ್ಲಿ ಬೆಳೆ ಸ್ಪರ್ಧೆಗೆ ಅರ್ಜಿ ಶುಲ್ಕವನ್ನು ರದ್ದುಪಡಿಸಲಾಗಿದೆ. ವಿವಿಧ ಹಂತದ ಬೆಳೆ ಸ್ಪರ್ಧೆ ವಿಜೇತರಿಗೆ ತಾಲೂಕು ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 15 ಸಾವಿರ, ದ್ವಿತೀಯ 10 ಸಾವಿರ, ತೃತೀಯ 5 ಸಾವಿರ ಹಾಗೂ ಜಿಲ್ಲಾಮಟ್ಟದ ಸ್ಪರ್ಧೆಗೆ ಪ್ರಥಮ 30 ಸಾವಿರ, ದ್ವಿತೀಯ 25 ಸಾವಿರ, ತೃತೀಯ 20 ಸಾವಿರ ಮತ್ತು ರಾಜ್ಯಮಟ್ಟದ ಸ್ಪರ್ಧೆಗೆ ಪ್ರಥಮ 50 ಸಾವಿರ, ದ್ವಿತೀಯ 40 ಸಾವಿರ, ತೃತೀಯ 35 ಸಾವಿರ ರೂ. ಬಹುಮಾನ ನಿಗದಿಪಡಿಸಲಾಗಿದೆ. ವಿವಿಧ ಹಂತದ ಬೆಳೆ ಸ್ಪರ್ಧೆಗೆ ನಿಗದಿಪಡಿಸಿದ ಬೆಳೆಗಳಲ್ಲಿ ಮಾತ್ರ ಸ್ಪರ್ಧೆಯನ್ನು ಏರ್ಪಡಿಸಲಾಗುವುದು ಹಾಗೂ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕಿಗೆ ಮಳೆ ಆಶ್ರಿತ ಮುಸುಕಿನ ಜೋಳ, ಕೊಳ್ಳೇಗಾಲ ತಾಲೂಕಿಗೆ ನೀರಾವರಿ ಆಶ್ರಿತ ಭತ್ತ, ಹನೂರು ತಾಲೂಕಿಗೆ ಮಳೆ ಆಶ್ರಿತ ರಾಗಿ, ಯಳಂದೂರು ತಾಲೂಕಿಗೆ ನೀರಾವರಿ ಆಶ್ರಿತ ಭತ್ತ ಬೆಳೆಗಳನ್ನು ತಾಲೂಕುವಾರು ಕೃಷಿ ಪ್ರಶಸ್ತಿಗೆ ನಿಗದಿಪಡಿಸಲಾಗಿದೆ. ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಆಗಸ್ಟ್ 31 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More news from ಕರ್ನಾಟಕ and nearby areas
  • ನೊಂದ ಶೋಷಿತ ಸಮುದಾಯಗಳ ಧ್ವನಿಯಾಗಿ ಕೆಲಸ ಮಾಡುವುದೇ ನಮ್ಮ ಸಂಘಟನೆ ಉದ್ದೇಶ : ಡಿ.ಸಿದ್ದಪ್ಪ ನೊಂದ ಶೋಷಿತ ಸಮುದಾಯಗಳ ಧ್ವನಿಯಾಗಿ ಕೆಲಸ ಮಾಡುವುದೇ ನಮ್ಮ ಸಂಘಟನೆ ಉದ್ದೇಶ : ಡಿ.ಸಿದ್ದಪ್ಪ ವರದಿ: ಹೊಮ್ಮನಂಜುಂಡನಾಯಕ ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿ ಪದಾಧಿಕಾರಿ ಸಭೆ ಚಾಮರಾಜನಗರ ಜಿಲ್ಲಾ ನೂತನ ಅಧ್ಯಕ್ಷರಾಗಿ ಸಿ.ಶೇಖರ್ ಮಸಣಾಪುರ ಚಾಮರಾಜನಗರ: ನೊಂದ ಶೋಷಿತ ನಮುದಾಯಗಳ ಧ್ವನಿಯಾಗಿ ಕೆಲಸ ಮಾಡುವುದೇ ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿಯ ಉದ್ದೇಶವಾಗಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಡಿ.ಸಿದ್ಧಪ್ಪ ದೇವಅರಸನಹಳ್ಳಿ ಹೇಳಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿ ಪದಾಧಿಕಾರಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶಪತ್ರ ವಿತರಿಸಿ ಮಾತನಾಡಿದರು. ರಾಜ್ಯಾದ್ಯಂತ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಅರ್ಹರಿಗೆ ಸರ್ಕಾರದ ಸೌಕರ್ಯಗಳನ್ನು ಸರಿಯಾಗಿ ತಲುಪುತ್ತಿಲ್ಲ. ಇದರಿಂದ ಅರ್ಹರಿಗೆ ಅನ್ಯಾಯವಾಗುತ್ತಿದೆ. ಆಗಾಗಿ ನೊಂದ ಶೋಷಿತ ಸಮುದಾಯಗಳ ಪರ ನಿಲ್ಲಬೇಕು. ಅವರಿಗೆ ಸರ್ಕಾರ ಸವಲತ್ತುಗಳನ್ನು ತಲುಪಿಸಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿಯನ್ನು ರಾಜ್ಯದಲ್ಲಿ ಅಸ್ತಿತ್ವಕ್ಕೆ ತರಲಾಗಿದ್ದು, ಗಡಿಜಿಲ್ಲೆಯಲ್ಲಿ ಚಾಮರಾಜನಗರದಲ್ಲಿ ಮೊಟ್ಟಮೊದಲಿಗೆ ಜಿಲ್ಲಾ ಸಮಿತಿ ರಚನೆ ಮಾಡಿ ಪದಾಧಿಕಾರಿಗಳ ನೇಮಕ ಮಾಡಿ ಆದೇಶ ಪತ್ರ ನೀಡಲಾಗಿದ್ದು, ನೂತನ ಪದಾಧಿಕಾರಿಗಳು ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಂಘಟನೆಯನ್ನು ಬಲಪಡಿಸುವಂತೆ ಸಲಹೆ ನೀಡಿದರು. ನೂತನ ಪದಾಧಿಕಾರಿಗಳು : ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿಯ ಚಾಮರಾಜನಗರ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಸಿ. ಶೇಖರ್ ಮಸನಾಪುರ, ಗೌರವಾಧ್ಯಕ್ಷರಾಗಿ ಬಸವಣ್ಣ ಮಸಣಾ ಪುರ, ನಿರ್ದೇಶಕರಾಗಿ ಶಶಿಕುಮಾ‌ರ್ ಬೇಡರಪುರ, ಚಂದಯ್ಯ, ನಾಗರಾಜು ನಂಜುಂಡಸ್ವಾಮಿ, ಜಯಸ್ವಾಮಿ, ರಂಗಸ್ವಾಮಿ ರವಿಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷರಾಗಿ ಜ್ಯೋತಿ ರಾಮಸಮುದ್ರ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಿ ನೇಮಕಾತಿ ಆದೇಶಪತ್ರ ವಿತರಿಸಲಾಯಿತು. ಸಭೆಯಲ್ಲಿ ರಾಜ್ಯಾ ಗೌರವಾಧ್ಯಕ್ಷ ಮಹೇಶ್ ಕೋಚನಹಳ್ಳಿ, ರಾಜ್ಯಾಧ್ಯಕ್ಷ ಡಿ.ಸಿದ್ದಪ್ಪ ದೇವಅರಸನಹಳ್ಳಿ, ರಾಜ್ಯ ಕಾರ್ಯದರ್ಶಿ ಗುರುಸ್ವಾಮಿ ಕೆ.ಎಸ್‌. ಕೆರಹಳ್ಳಿ, ರಾಜ್ಯ ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕರಾದ ದೊಡ್ಡ ಕಾಯಮ್ಮ, ಕಮಲ, ಖಜಾಂಚಿ ಮಾದಯ್ಯ ಸಂಘಟನಾ ಕಾರ್ಯದರ್ಶಿ ಎನ್‌.ಶಿವಕುಮಾರ್, ಸಂಚಾಲಕ ಸಿದ್ದರಾಜು ನಿರ್ದೇಶಕ ಪ್ರಕಾಶ್. ಮರಿಸ್ವಾಮಿ, ಹಾಜರಿದ್ದರು.
    4
    ನೊಂದ ಶೋಷಿತ ಸಮುದಾಯಗಳ ಧ್ವನಿಯಾಗಿ ಕೆಲಸ ಮಾಡುವುದೇ ನಮ್ಮ ಸಂಘಟನೆ ಉದ್ದೇಶ : ಡಿ.ಸಿದ್ದಪ್ಪ
ನೊಂದ ಶೋಷಿತ ಸಮುದಾಯಗಳ ಧ್ವನಿಯಾಗಿ ಕೆಲಸ ಮಾಡುವುದೇ ನಮ್ಮ ಸಂಘಟನೆ ಉದ್ದೇಶ : ಡಿ.ಸಿದ್ದಪ್ಪ
ವರದಿ: ಹೊಮ್ಮನಂಜುಂಡನಾಯಕ
ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿ ಪದಾಧಿಕಾರಿ ಸಭೆ
ಚಾಮರಾಜನಗರ ಜಿಲ್ಲಾ ನೂತನ ಅಧ್ಯಕ್ಷರಾಗಿ ಸಿ.ಶೇಖರ್ ಮಸಣಾಪುರ
ಚಾಮರಾಜನಗರ: ನೊಂದ ಶೋಷಿತ ನಮುದಾಯಗಳ ಧ್ವನಿಯಾಗಿ ಕೆಲಸ ಮಾಡುವುದೇ ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿಯ ಉದ್ದೇಶವಾಗಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಡಿ.ಸಿದ್ಧಪ್ಪ ದೇವಅರಸನಹಳ್ಳಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿ ಪದಾಧಿಕಾರಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶಪತ್ರ ವಿತರಿಸಿ ಮಾತನಾಡಿದರು.
ರಾಜ್ಯಾದ್ಯಂತ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಅರ್ಹರಿಗೆ ಸರ್ಕಾರದ ಸೌಕರ್ಯಗಳನ್ನು ಸರಿಯಾಗಿ ತಲುಪುತ್ತಿಲ್ಲ. ಇದರಿಂದ ಅರ್ಹರಿಗೆ ಅನ್ಯಾಯವಾಗುತ್ತಿದೆ. ಆಗಾಗಿ ನೊಂದ ಶೋಷಿತ ಸಮುದಾಯಗಳ ಪರ ನಿಲ್ಲಬೇಕು. ಅವರಿಗೆ ಸರ್ಕಾರ ಸವಲತ್ತುಗಳನ್ನು ತಲುಪಿಸಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿಯನ್ನು ರಾಜ್ಯದಲ್ಲಿ ಅಸ್ತಿತ್ವಕ್ಕೆ ತರಲಾಗಿದ್ದು, ಗಡಿಜಿಲ್ಲೆಯಲ್ಲಿ ಚಾಮರಾಜನಗರದಲ್ಲಿ ಮೊಟ್ಟಮೊದಲಿಗೆ ಜಿಲ್ಲಾ ಸಮಿತಿ ರಚನೆ ಮಾಡಿ ಪದಾಧಿಕಾರಿಗಳ ನೇಮಕ ಮಾಡಿ ಆದೇಶ ಪತ್ರ ನೀಡಲಾಗಿದ್ದು, ನೂತನ ಪದಾಧಿಕಾರಿಗಳು ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಂಘಟನೆಯನ್ನು ಬಲಪಡಿಸುವಂತೆ ಸಲಹೆ ನೀಡಿದರು.
ನೂತನ ಪದಾಧಿಕಾರಿಗಳು : ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿಯ ಚಾಮರಾಜನಗರ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಸಿ. ಶೇಖರ್ ಮಸನಾಪುರ, ಗೌರವಾಧ್ಯಕ್ಷರಾಗಿ ಬಸವಣ್ಣ ಮಸಣಾ
ಪುರ, ನಿರ್ದೇಶಕರಾಗಿ ಶಶಿಕುಮಾ‌ರ್ ಬೇಡರಪುರ, ಚಂದಯ್ಯ, ನಾಗರಾಜು ನಂಜುಂಡಸ್ವಾಮಿ, ಜಯಸ್ವಾಮಿ, ರಂಗಸ್ವಾಮಿ ರವಿಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷರಾಗಿ ಜ್ಯೋತಿ ರಾಮಸಮುದ್ರ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಿ ನೇಮಕಾತಿ ಆದೇಶಪತ್ರ ವಿತರಿಸಲಾಯಿತು.
ಸಭೆಯಲ್ಲಿ ರಾಜ್ಯಾ ಗೌರವಾಧ್ಯಕ್ಷ ಮಹೇಶ್ ಕೋಚನಹಳ್ಳಿ, ರಾಜ್ಯಾಧ್ಯಕ್ಷ ಡಿ.ಸಿದ್ದಪ್ಪ ದೇವಅರಸನಹಳ್ಳಿ, ರಾಜ್ಯ ಕಾರ್ಯದರ್ಶಿ ಗುರುಸ್ವಾಮಿ ಕೆ.ಎಸ್‌. ಕೆರಹಳ್ಳಿ, ರಾಜ್ಯ ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕರಾದ ದೊಡ್ಡ ಕಾಯಮ್ಮ, ಕಮಲ, ಖಜಾಂಚಿ ಮಾದಯ್ಯ ಸಂಘಟನಾ ಕಾರ್ಯದರ್ಶಿ ಎನ್‌.ಶಿವಕುಮಾರ್, ಸಂಚಾಲಕ ಸಿದ್ದರಾಜು ನಿರ್ದೇಶಕ ಪ್ರಕಾಶ್. ಮರಿಸ್ವಾಮಿ, ಹಾಜರಿದ್ದರು.
    user_Nanjunda Nayak
    Nanjunda Nayak
    Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    18 hrs ago
  • ಟಾಕ್ಸಿಕ್ ಯಶಸ್ಸಿಗೆ ರಕ್ತದಾನ; ಯಶ್ ಅಭಿಮಾನಿಗಳ ವಿಭಿನ್ನ ಶುಭಾಶಯ ಮೈಸೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ವಿಶ್ವದಾದ್ಯಂತ ತೆರೆಕಾಣುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಯಶ್ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಶುಭಕೋರಿದ್ದಾರೆ. ಸಿನಿಮಾ ಯಶಸ್ಸಿಗಾಗಿ ಕೇವಲ ಸಂಭ್ರಮಾಚರಣೆ ನಡೆಸುವುದಕ್ಕೆ ಸೀಮಿತವಾಗದೆ, ರಕ್ತದಾನ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ನಗರದ ಸಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಯಶ್ ಅಭಿಮಾನಿಗಳು ಹಾಗೂ ಕರ್ನಾಟಕ ಹಿತರಕ್ಷಣಾ ವೇದಿಕೆ ವತಿಯಿಂದ ವಿಶೇಷ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ನೂರಾರು ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ರಕ್ತದಾನ ಮಾಡಿದರು. ಯುವಕರು, ಮಹಿಳೆಯರು ಸೇರಿದಂತೆ ವಿವಿಧ ವಯೋಮಾನದ ಅಭಿಮಾನಿಗಳು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯ ಸಂದೇಶ ಸಾರಿದರು. ಸಾಮಾನ್ಯವಾಗಿ ತಮ್ಮ ನೆಚ್ಚಿನ ನಟರ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಅಭಿಮಾನಿಗಳು ಪೋಸ್ಟರ್‌ಗಳಿಗೆ ಹಾಲಿನ ಅಭಿಷೇಕ, ಕಟೌಟ್‌ಗಳಿಗೆ ಹಾರ ಹಾಕುವುದು, ಪಟಾಕಿ ಸಿಡಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಆದರೆ ಮೈಸೂರಿನ ಯಶ್ ಅಭಿಮಾನಿಗಳು ಈ ಬಾರಿ ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯದ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿರುವುದು ವಿಶೇಷವಾಗಿತ್ತು. ರಕ್ತದಾನದ ಮೂಲಕ ಅಗತ್ಯವಿರುವವರಿಗೆ ನೆರವಾಗುವ ಉದ್ದೇಶದಿಂದ ಶಿಬಿರ ನಡೆಸಲಾಗಿದೆ. ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಯಶ್ ಅವರು ಯುವಜನತೆಗೆ ಪ್ರೇರಣೆಯಾಗಿದ್ದು, ಅವರ ‘ಟಾಕ್ಸಿಕ್’ ಚಿತ್ರ ವಿಶ್ವಮಟ್ಟದಲ್ಲಿ ಯಶಸ್ಸು ಸಾಧಿಸಲಿ ಎಂಬ ಆಶಯದಿಂದ ಈ ಮಾನವೀಯ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಅಭಿಮಾನ ಎಂದರೆ ಕೇವಲ ಸಂಭ್ರಮಿಸುವುದಲ್ಲ; ಸಮಾಜಕ್ಕೆ ಉಪಯೋಗವಾಗುವ ಕೆಲಸ ಮಾಡುವುದೂ ಅಭಿಮಾನದ ಒಂದು ರೂಪ ಎಂಬ ಸಂದೇಶವನ್ನು ಶಿಬಿರದ ಮೂಲಕ ಸಾರಲಾಗಿದೆ ಎಂದರು. ಶಿಬಿರದಲ್ಲಿ ಪಾಲ್ಗೊಂಡ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಟನಿಗೆ ವಿಭಿನ್ನ ರೀತಿಯಲ್ಲಿ ಶುಭಾಶಯ ಸಲ್ಲಿಸಿದರು. ಸಿನಿಮಾ ಯಶಸ್ವಿಯಾಗುವುದರ ಜೊತೆಗೆ ರಕ್ತದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವೂ ಇದರಿಂದ ನಡೆಯಿತು. ಯಶ್ ಅವರ ಚಿತ್ರ ಬಿಡುಗಡೆ ಸಂಭ್ರಮವನ್ನು ಸಾಮಾಜಿಕ ಸೇವೆಯೊಂದಿಗೆ ಬೆಸೆದ ಅಭಿಮಾನಿಗಳ ಈ ನಡೆ ಸಾರ್ವಜನಿಕರ ಗಮನ ಸೆಳೆಯಿತು.
    1
    ಟಾಕ್ಸಿಕ್ ಯಶಸ್ಸಿಗೆ ರಕ್ತದಾನ; ಯಶ್ ಅಭಿಮಾನಿಗಳ ವಿಭಿನ್ನ ಶುಭಾಶಯ
ಮೈಸೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ವಿಶ್ವದಾದ್ಯಂತ ತೆರೆಕಾಣುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಯಶ್ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಶುಭಕೋರಿದ್ದಾರೆ. ಸಿನಿಮಾ ಯಶಸ್ಸಿಗಾಗಿ ಕೇವಲ ಸಂಭ್ರಮಾಚರಣೆ ನಡೆಸುವುದಕ್ಕೆ ಸೀಮಿತವಾಗದೆ, ರಕ್ತದಾನ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ನಗರದ ಸಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಯಶ್ ಅಭಿಮಾನಿಗಳು ಹಾಗೂ ಕರ್ನಾಟಕ ಹಿತರಕ್ಷಣಾ ವೇದಿಕೆ ವತಿಯಿಂದ ವಿಶೇಷ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ನೂರಾರು ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ರಕ್ತದಾನ ಮಾಡಿದರು. ಯುವಕರು, ಮಹಿಳೆಯರು ಸೇರಿದಂತೆ ವಿವಿಧ ವಯೋಮಾನದ ಅಭಿಮಾನಿಗಳು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯ ಸಂದೇಶ ಸಾರಿದರು.
ಸಾಮಾನ್ಯವಾಗಿ ತಮ್ಮ ನೆಚ್ಚಿನ ನಟರ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಅಭಿಮಾನಿಗಳು ಪೋಸ್ಟರ್‌ಗಳಿಗೆ ಹಾಲಿನ ಅಭಿಷೇಕ, ಕಟೌಟ್‌ಗಳಿಗೆ ಹಾರ ಹಾಕುವುದು, ಪಟಾಕಿ ಸಿಡಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಆದರೆ ಮೈಸೂರಿನ ಯಶ್ ಅಭಿಮಾನಿಗಳು ಈ ಬಾರಿ ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯದ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿರುವುದು ವಿಶೇಷವಾಗಿತ್ತು. ರಕ್ತದಾನದ ಮೂಲಕ ಅಗತ್ಯವಿರುವವರಿಗೆ ನೆರವಾಗುವ ಉದ್ದೇಶದಿಂದ ಶಿಬಿರ ನಡೆಸಲಾಗಿದೆ.
ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಯಶ್ ಅವರು ಯುವಜನತೆಗೆ ಪ್ರೇರಣೆಯಾಗಿದ್ದು, ಅವರ ‘ಟಾಕ್ಸಿಕ್’ ಚಿತ್ರ ವಿಶ್ವಮಟ್ಟದಲ್ಲಿ ಯಶಸ್ಸು ಸಾಧಿಸಲಿ ಎಂಬ ಆಶಯದಿಂದ ಈ ಮಾನವೀಯ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಅಭಿಮಾನ ಎಂದರೆ ಕೇವಲ ಸಂಭ್ರಮಿಸುವುದಲ್ಲ; ಸಮಾಜಕ್ಕೆ ಉಪಯೋಗವಾಗುವ ಕೆಲಸ ಮಾಡುವುದೂ ಅಭಿಮಾನದ ಒಂದು ರೂಪ ಎಂಬ ಸಂದೇಶವನ್ನು ಶಿಬಿರದ ಮೂಲಕ ಸಾರಲಾಗಿದೆ ಎಂದರು.
ಶಿಬಿರದಲ್ಲಿ ಪಾಲ್ಗೊಂಡ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಟನಿಗೆ ವಿಭಿನ್ನ ರೀತಿಯಲ್ಲಿ ಶುಭಾಶಯ ಸಲ್ಲಿಸಿದರು. ಸಿನಿಮಾ ಯಶಸ್ವಿಯಾಗುವುದರ ಜೊತೆಗೆ ರಕ್ತದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವೂ ಇದರಿಂದ ನಡೆಯಿತು. ಯಶ್ ಅವರ ಚಿತ್ರ ಬಿಡುಗಡೆ ಸಂಭ್ರಮವನ್ನು ಸಾಮಾಜಿಕ ಸೇವೆಯೊಂದಿಗೆ ಬೆಸೆದ ಅಭಿಮಾನಿಗಳ ಈ ನಡೆ ಸಾರ್ವಜನಿಕರ ಗಮನ ಸೆಳೆಯಿತು.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Farmer Nanjangud, Mysuru•
    2 hrs ago
  • ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಬ್ಲಾಕ್ ಚಿಕ್ಕುಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಶಾಸಕ ಎಂ.ಆರ್. ಮಂಜುನಾಥ್: ರೈತ ಸಂಘದಿಂದ ಧನ್ಯವಾದ ಹನೂರು: ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕುಡಿ ಗ್ರಾಮದಲ್ಲಿ ತೀವ್ರವಾಗಿದ್ದ ಕುಡಿಯುವ ನೀರಿನ ಅಭಾವವನ್ನು ಆಲಿಸಿ, ತಕ್ಷಣವೇ ಕೊಳವೆ ಬಾವಿ ಕೊರೆಯಿಸಿ ನೀರು ಪೂರೈಸಲು ಕ್ರಮ ಕೈಗೊಂಡ ಹನೂರು ಕ್ಷೇತ್ರದ ಶಾಸಕರಾದ ಎಂ.ಆರ್. ಮಂಜುನಾಥ್ ಅವರಿಗೆ ಮೂಲ ಸಿದ್ಧಾಂತದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ. ಚಿಕ್ಕುಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದ ಹಿನ್ನೆಲೆಯಲ್ಲಿ, ರೈತ ಸಂಘದ ಮುಖಂಡರು ಶಾಸಕರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು. ಗ್ರಾಮಸ್ಥರ ಹಾಗೂ ರೈತ ಮುಖಂಡರ ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕ ಎಂ.ಆರ್. ಮಂಜುನಾಥ್ ಅವರು, ಗ್ರಾಮದಲ್ಲಿ ಹೊಸ ಕೊಳವೆ ಬಾವಿ ಕೊರೆಯಿಸಲು ಇಂದು ಬೋರ್‌ವೆಲ್ ವಾಹನವನ್ನು ಕಳುಹಿಸಿಕೊಟ್ಟಿದ್ದರು. ಗ್ರಾಮದಲ್ಲಿ ಕೈಗೊಂಡ ಬೋರ್‌ವೆಲ್ ಕೊರೆತದ ಸಂದರ್ಭದಲ್ಲಿ ಸುಮಾರು ಎರಡು ಇಂಚು ಉತ್ತಮ ಪ್ರಮಾಣದ ನೀರು ಬಿದ್ದಿದ್ದು, ಗ್ರಾಮಸ್ಥರಲ್ಲಿ ಮತ್ತು ರೈತರ ಮುಖಂಡರಲ್ಲಿ ಸಂತಸ ಮೂಡಿಸಿದೆ. ಹಲವು ದಿನಗಳಿಂದ ಎದುರಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದ್ದು, ಶಾಸಕರ ಶೀಘ್ರ ಸ್ಪಂದನೆ ಮತ್ತು ಜನಪರ ಕಾಳಜಿಗೆ ರೈತ ಸಂಘದ ತಾಲೂಕು ಹಾಗೂ ಗ್ರಾಮ ಮಟ್ಟದ ಮುಖಂಡರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮೂಲ ಸಿದ್ಧಾಂತದ ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖ ಮುಖಂಡರು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
    1
    ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಬ್ಲಾಕ್ ಚಿಕ್ಕುಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಶಾಸಕ ಎಂ.ಆರ್. ಮಂಜುನಾಥ್: ರೈತ ಸಂಘದಿಂದ ಧನ್ಯವಾದ
ಹನೂರು: ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕುಡಿ ಗ್ರಾಮದಲ್ಲಿ ತೀವ್ರವಾಗಿದ್ದ ಕುಡಿಯುವ ನೀರಿನ ಅಭಾವವನ್ನು ಆಲಿಸಿ, ತಕ್ಷಣವೇ ಕೊಳವೆ ಬಾವಿ ಕೊರೆಯಿಸಿ ನೀರು ಪೂರೈಸಲು ಕ್ರಮ ಕೈಗೊಂಡ ಹನೂರು ಕ್ಷೇತ್ರದ ಶಾಸಕರಾದ ಎಂ.ಆರ್. ಮಂಜುನಾಥ್ ಅವರಿಗೆ ಮೂಲ ಸಿದ್ಧಾಂತದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.
ಚಿಕ್ಕುಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದ ಹಿನ್ನೆಲೆಯಲ್ಲಿ, ರೈತ ಸಂಘದ ಮುಖಂಡರು ಶಾಸಕರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು. ಗ್ರಾಮಸ್ಥರ ಹಾಗೂ ರೈತ ಮುಖಂಡರ ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕ ಎಂ.ಆರ್. ಮಂಜುನಾಥ್ ಅವರು, ಗ್ರಾಮದಲ್ಲಿ ಹೊಸ ಕೊಳವೆ ಬಾವಿ ಕೊರೆಯಿಸಲು ಇಂದು ಬೋರ್‌ವೆಲ್ ವಾಹನವನ್ನು ಕಳುಹಿಸಿಕೊಟ್ಟಿದ್ದರು.
ಗ್ರಾಮದಲ್ಲಿ ಕೈಗೊಂಡ ಬೋರ್‌ವೆಲ್ ಕೊರೆತದ ಸಂದರ್ಭದಲ್ಲಿ ಸುಮಾರು ಎರಡು ಇಂಚು ಉತ್ತಮ ಪ್ರಮಾಣದ ನೀರು ಬಿದ್ದಿದ್ದು, ಗ್ರಾಮಸ್ಥರಲ್ಲಿ ಮತ್ತು ರೈತರ ಮುಖಂಡರಲ್ಲಿ ಸಂತಸ ಮೂಡಿಸಿದೆ. ಹಲವು ದಿನಗಳಿಂದ ಎದುರಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದ್ದು, ಶಾಸಕರ ಶೀಘ್ರ ಸ್ಪಂದನೆ ಮತ್ತು ಜನಪರ ಕಾಳಜಿಗೆ ರೈತ ಸಂಘದ ತಾಲೂಕು ಹಾಗೂ ಗ್ರಾಮ ಮಟ್ಟದ ಮುಖಂಡರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮೂಲ ಸಿದ್ಧಾಂತದ ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖ ಮುಖಂಡರು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
    user_Vijay kumar
    Vijay kumar
    ಕೊಳ್ಳೇಗಾಲ, ಚಾಮರಾಜನಗರ, ಕರ್ನಾಟಕ•
    15 hrs ago
  • ರಾಕಿಂಗ್ ಸ್ಟಾರ್ ಅಭಿನಯದ ಟಾಕ್ಸಿಕ್ ರಿಲೀಸ್...ಅಭಿಮಾನಿಗಳು ಫುಲ್ ಖುಷ್...ಚಿತ್ರಮಂದಿರಗಳು ಹೌಸ್ ಫುಲ್ ವಿಶ್ವದಾದ್ಯಂತ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಿದೆ. ಮೈಸೂರಿನ ಹಲವು ಚಿತ್ರಮಂದಿರಗಳಲ್ಲಿ ಟಾಕ್ಸಿಕ್ ಮೊದಲ ಶೋ ಪ್ರದರ್ಶನವಾಗಲಿದೆ. 6 ಗಂಟೆಗೆ ಮೊದಲ ಶೋ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಡಿ.ಆರ್.ಸಿ ಐನಾಕ್ಸ್ ಸೇರಿ ಹಲವು ಮಲ್ಟಿ ಪ್ಲೆಕ್ಸ್ ನಲ್ಲಿ ಚಿತ್ರ ಬಿಡುಗಡೆಯಾಗಿದೆ. ಸಿನಿಮಾ ಥಿಯೇಟರ್ ನತ್ತ ಬರುತ್ತಿರುವ ಅಭಿಮಾನಿಗಳ ದಂಡು ಹರಿದುಬಂದಿದೆ. ಬೆಳ್ಳಿತೆರೆಮೇಲೆ ಯಶ್ ಕಾಣುತ್ತಿದ್ದಂತೆಯೇ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಮೊದಲ ಶೋಗೆ ಭರ್ಜರಿ ಸ್ವಾಗತ ದೊರೆತಿದೆ.
    1
    ರಾಕಿಂಗ್ ಸ್ಟಾರ್ ಅಭಿನಯದ ಟಾಕ್ಸಿಕ್ ರಿಲೀಸ್...ಅಭಿಮಾನಿಗಳು ಫುಲ್ ಖುಷ್...ಚಿತ್ರಮಂದಿರಗಳು ಹೌಸ್ ಫುಲ್
ವಿಶ್ವದಾದ್ಯಂತ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಿದೆ. ಮೈಸೂರಿನ ಹಲವು ಚಿತ್ರಮಂದಿರಗಳಲ್ಲಿ  ಟಾಕ್ಸಿಕ್ ಮೊದಲ ಶೋ ಪ್ರದರ್ಶನವಾಗಲಿದೆ. 6 ಗಂಟೆಗೆ ಮೊದಲ ಶೋ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ.
ಡಿ.ಆರ್.ಸಿ ಐನಾಕ್ಸ್ ಸೇರಿ ಹಲವು ಮಲ್ಟಿ ಪ್ಲೆಕ್ಸ್ ನಲ್ಲಿ ಚಿತ್ರ ಬಿಡುಗಡೆಯಾಗಿದೆ.
ಸಿನಿಮಾ  ಥಿಯೇಟರ್ ನತ್ತ ಬರುತ್ತಿರುವ ಅಭಿಮಾನಿಗಳ ದಂಡು ಹರಿದುಬಂದಿದೆ. ಬೆಳ್ಳಿತೆರೆಮೇಲೆ ಯಶ್ ಕಾಣುತ್ತಿದ್ದಂತೆಯೇ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಮೊದಲ ಶೋಗೆ ಭರ್ಜರಿ ಸ್ವಾಗತ ದೊರೆತಿದೆ.
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    25 min ago
  • All About,Doesn't we Rights to Questions any public Representatives/political parties organizations members *ಭಾರತ ನಲ್ಲಿ ವೈರಲ್*
    1
    All About,Doesn't we Rights to Questions any public Representatives/political parties organizations members 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    2 hrs ago
  • ಮಳವಳ್ಳಿಯಲ್ಲಿ ಮಾಮರ ಸೌಹಾರ್ದ ಸಹಕಾರ ಸಂಘದ ಪ್ರಥಮ ವರ್ಷದ ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಮೈಸೂರು ಕೊಡಗು ಜಿಲ್ಲಾ ಸಹಕಾರ ಒಕ್ಕೂಟಗಳ ಸಂಯೋಜಕರಾದ ಬಲರಾಮ್ ಚಾಲನೆ ಮಳವಳ್ಳಿ;ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅರ್ಥಿಕ ಸೌಲಭ್ಯಗಳನ್ನು ನೀಡುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ--ಸಂಯೋಜಕ ಬಲರಾಂ ಹೇಳಿಕೆ ಮಳವಳ್ಳಿ:ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅರ್ಥಿಕ ಸೌಲಭ್ಯಗಳನ್ನು ನೀಡುವಲ್ಲಿ ಸಹಕಾರಿ ಸಂಘಗಳ ಪಾತ್ರ ಅಪಾರವಾಗಿದೆ ಎಂದು ಮೈಸೂರು ಕೊಡಗು ಸೌಹರ್ಧ ಸಹಕಾರಿ ಒಕ್ಕೂಟದ ವಿಭಾಗದ ಸಂಯೋಜಕ ಎನ್.ಬಲರಾಂ ಹೇಳಿದರು. ಪಟ್ಟಣದ ಶ್ರೀವೀರಭದ್ರೇಶ್ವರ ದೇವಸ್ಥಾನದ ಅವರಣದಲ್ಲಿ ಮಾಮರ ಸೌಹರ್ಧ ಸಹಕಾರಿ ಸಂಘ ಅಯೋಜಿಸಿದ್ದ ಪ್ರಥಮ ವರ್ಷದ ಸರ್ವ ಸದಸ್ಯರ ಸಭೆಗೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸಹಕಾರಿ ಸಂಘಗಳ ಮೂಲ ಉದ್ದೇಶವೇ ಸದಸ್ಯರಿಗೆ ಮೂಲ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿದೆ ಎಂದರು. ಮಾಮರ ಸೌಹರ್ದ ಸಹಕಾರ ಸಂಘ ಅರಂಭದ ವರ್ಷದಲ್ಲೆ ಉತ್ತಮ ಪ್ರಗತಿಯತ್ತ ಸಾಗಿದೆ,೧ ಕೋಟಿ ವಹಿವಾಟು ನಡೆಸಿರುವುದು,೫೦ ಲಕ್ಷಕ್ಕೂ ಮೂಲ ಬಂಡವಾಳ ಹೊಂದಿರುವುದು ಸೇರಿದಂತೆ ಸಂಘದ ಪಾರದರ್ಶಕ ಅರ್ಥಿಕ ವರದಿ ಭವಿಷ್ಯದಲ್ಲಿ ಉನ್ನತ ಸ್ಥಾನದ ಪಡೆಯಲಿದೆ ಎಂದ ಅವರು ಅಭಿವೃದ್ದಿ ಪಥದತ್ತ ಸಾಗುತ್ತಿರುವ ಸಂಘಕ್ಕೆ ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕು,ಸಂಘದ ಸೌಲಭ್ಯಗಳನ್ನು ಪಡೆಯುವುದಲ್ಲದೇ ಅಕ್ಕಪಕ್ಕದ ಜನರಿಗೂ ಸೌಲಭ್ಯ ಕೊಡಿಸುವತ್ತ ಮುಂದಾಗುವAತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಲೆಕಪರಿಶೋಧಕರಾದ ರಾಜೇಶ್ ಸಂಘದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಕವಿತಾ ಶ್ರೀಕಂಠಸ್ವಾಮಿ ಹಾಗೂ ಕು.ಕುಸುಮ ಸಂಘದ ವಾರ್ಷಿಕ ಲೆಕ್ಕ ಪರಿಶೋಧನ ವರದಿಯನ್ನು ಸಭೆಯಲ್ಲಿ ಮಂಡಿಸಿದರು.ಸAಘದ ಸೌಲಭ್ಯಗಳ ಬಗ್ಗೆ ಸಂಘದ ಅಪಾಧ್ಯಕ್ಷರಾದ ಗುರುಮೂರ್ತಿ ಮಾಹಿತಿ ನೀಡಿದರು.ಸಂಘದ ಸೇವೆಗಳ ಕುರಿತು ನಿರ್ದೇಶಕ ಶಿವಕುಮಾರ್ ಮಾತನಾಡಿದರು.ಮುಖ್ಯ ಕಾರ್ಯನಿರ್ವಹಣಾಧಿಕಶಾರಿ ಪೂರ್ಣಿಮ ಸಂಘ ಬೆಳೆದು ಬಂದ ಹಾದಿಯ ಕುರಿತು ವರದಿ ಮಂಡಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಶಿವಕುಮಾರ್ ಸಂಘದ ಅರಂಭ ಹಾಗೂ ಮುಂಗಡ ವರ್ಷದ ಯೋಜನೆಗಳು ಬಗ್ಗೆ ಸಭೆಯಲ್ಲಿ ಮಂಡಿಸಿದರು. ಬಾಕ್ಸ್ ಸುದ್ದಿ: ಹೋಸ ಯೋಜನೆಗಳ ಅನುಷ್ಠಾನ್ಕಕೆ ಅನುಮೋಧನೆ: ಸಹಕಾರ ಸಂಘದಿAದ ಸೂಪರ್ ಮಾರ್ಕೆಟ್ ಅರಂಭ,ಹಲಗೂರಿನಲ್ಲಿ ಹೊಸ ಉಪ ಶಾಖೆ ತೆರಯುವುದು,ಬಂಕ್ ಉದ್ಯಮ ಸೇರಿದಂತೆ ಸಹಕಾರ ಸಂಘದ ಪ್ರಗತಿಗೆ ಕೈಗೊಳ್ಳಬೇಕಾದ ಹೊಸ ಯೋಜನೆಗಳ ಅನುಷ್ಠಾನ ಹಾಗೂ ಲೆಕ್ಕ ಪರಿಶೋಧಕರ ನಿಯೋಜನೆ.ಹೊಸ ಕಛೇರಿ ತೆರೆಯುವುದು,ಸಾಮಾನ್ಯ ಸೇವಾ ಕೇಂದ್ರದ ಸೇವೆಗಳನ್ನು ಸದಸ್ಯರ ಮನೆಗೆ ನೀಡುವುದು ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಸಭೆಯಲ್ಲಿ ವಿಷಯ ಮಂಡಿಸಿ ಅನುಮೋಧನೆ ಪಡೆಯಲಾಯಿತು. ಇದೇ ಸಂದರ್ಭದಲ್ಲಿ ಸಂಘಕ್ಕೆ ನೂತನ ವೃತ್ತಿ ಪರ ನಿರ್ದೇಶಕರಾಗಿ ಅಯ್ಕಯಾಗಿದ್ದ ಬೆಳಕವಾಡಿ ಚೇತನ್ ಹಾಗೂ ರೇಷ್ಮೆ ಕೃಷಿಕ ಮೂಗನಕೊಪ್ಪಲು ತ್ಯಾಗರಾಜುರವರನ್ನು ಅಭಿನಂಧಿಸಿ ಆಢಳಿತ ಮಂಡಳಿಗೆ ಬರಮಾಡಿಕೊಳ್ಳಲಾಯಿತು. ಸಭೆಯಲ್ಲಿ ಸಂಯೋಜಕ ಬಲರಾಂ,ಲೆಕ್ಕ ಪರಿಶೋಧಕರಾದ ರಾಜೆಶ್.ಪಿ ಹಾಗೂ ಹಿರಿಯ ಸದಸ್ಯರು ಹಾಗೂ ಶಿಕ್ಷಣ ತಜ್ಞೆ ಶಾಂತ ಬಸವರಾಜು,ವೈದ್ಯರಾದ ಗೀರೀಶ್,ಪತ್ರಬರಹಗಾರ ಸದಾಶಿವಮೂರ್ತಿ,ಬಸವೇಶ್ ಮೂರ್ತಿ,ನಿವೃತ್ತ ಉಪ ತಹಶೀಲ್ದಾರ್ ಶಿವಮೂರ್ತಿಯವರನ್ನು ಅಭಿನಂಧಿಸಲಾಯಿತು. ಸಭೆಗೂ ಮುನ್ನ ಶ್ರೀ ವೀರಭದ್ರೇಶ್ವರಸ್ವಾಮಿಗೆ ಸಂಘದವತಿಯಿAದ ವಿಶೇಷ ಪೂಜೆ ಸಲ್ಲಿಸಲಾಯಿತು,ಅರ್ಚಕರಾದ ಮಲ್ಲಯ್ಯನವರು ದೇವರಿಗೆ ಪೂಜೆ ಸಲ್ಲಿಸಿ ಅಗಮಿಸಿದ ಜನರಿಗೆ ಮಹಾಮಂಗಳಾರತಿ ನೀಡಿ ಪ್ರಸಾದ ನೀಡಿದರು. ಸಭೆಯಲ್ಲಿ ಅಢಳಿತ ಮಂಡಳಿಯ ನಿರ್ದೇಶಕರಾದ ಎಸ್ ನಾಗಭೂಷಣಾರಾದ್ಯ,ಎನ್.ಮಂಟ್ಯೆಸ್ವಾಮಿ,ಕವಿತ.ಎಸ್,ಮಾನಸ.ಪಿ,ಗAಗಾಧರ್,ವ್ಯವಸ್ಥಾಪಕಿ ರಮ್ಯ,ಸೇವಾ ಪ್ರತಿನಿಧಿ ಕುಸುಮ,ಸಿಇಓ ಪೂರ್ಣಿಮಾ, ಪಿಗ್ಮಿ ಸಂಗ್ರಾಹಕ ಸುಬ್ರಮಣ್ಯ ಎಂ.ಅರ್ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.
    1
    ಮಳವಳ್ಳಿಯಲ್ಲಿ ಮಾಮರ ಸೌಹಾರ್ದ ಸಹಕಾರ ಸಂಘದ ಪ್ರಥಮ ವರ್ಷದ ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಮೈಸೂರು ಕೊಡಗು ಜಿಲ್ಲಾ ಸಹಕಾರ ಒಕ್ಕೂಟಗಳ ಸಂಯೋಜಕರಾದ ಬಲರಾಮ್ ಚಾಲನೆ
ಮಳವಳ್ಳಿ;ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅರ್ಥಿಕ ಸೌಲಭ್ಯಗಳನ್ನು ನೀಡುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ--ಸಂಯೋಜಕ ಬಲರಾಂ ಹೇಳಿಕೆ
ಮಳವಳ್ಳಿ:ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅರ್ಥಿಕ ಸೌಲಭ್ಯಗಳನ್ನು ನೀಡುವಲ್ಲಿ ಸಹಕಾರಿ ಸಂಘಗಳ ಪಾತ್ರ ಅಪಾರವಾಗಿದೆ ಎಂದು ಮೈಸೂರು ಕೊಡಗು ಸೌಹರ್ಧ ಸಹಕಾರಿ ಒಕ್ಕೂಟದ ವಿಭಾಗದ ಸಂಯೋಜಕ ಎನ್.ಬಲರಾಂ ಹೇಳಿದರು.
ಪಟ್ಟಣದ ಶ್ರೀವೀರಭದ್ರೇಶ್ವರ ದೇವಸ್ಥಾನದ ಅವರಣದಲ್ಲಿ ಮಾಮರ ಸೌಹರ್ಧ ಸಹಕಾರಿ ಸಂಘ ಅಯೋಜಿಸಿದ್ದ ಪ್ರಥಮ ವರ್ಷದ ಸರ್ವ ಸದಸ್ಯರ ಸಭೆಗೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸಹಕಾರಿ ಸಂಘಗಳ ಮೂಲ ಉದ್ದೇಶವೇ ಸದಸ್ಯರಿಗೆ  ಮೂಲ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿದೆ ಎಂದರು.
ಮಾಮರ ಸೌಹರ್ದ ಸಹಕಾರ ಸಂಘ ಅರಂಭದ ವರ್ಷದಲ್ಲೆ ಉತ್ತಮ ಪ್ರಗತಿಯತ್ತ ಸಾಗಿದೆ,೧ ಕೋಟಿ ವಹಿವಾಟು ನಡೆಸಿರುವುದು,೫೦ ಲಕ್ಷಕ್ಕೂ ಮೂಲ ಬಂಡವಾಳ ಹೊಂದಿರುವುದು ಸೇರಿದಂತೆ ಸಂಘದ ಪಾರದರ್ಶಕ ಅರ್ಥಿಕ ವರದಿ ಭವಿಷ್ಯದಲ್ಲಿ ಉನ್ನತ ಸ್ಥಾನದ ಪಡೆಯಲಿದೆ ಎಂದ ಅವರು ಅಭಿವೃದ್ದಿ ಪಥದತ್ತ ಸಾಗುತ್ತಿರುವ ಸಂಘಕ್ಕೆ ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕು,ಸಂಘದ ಸೌಲಭ್ಯಗಳನ್ನು ಪಡೆಯುವುದಲ್ಲದೇ ಅಕ್ಕಪಕ್ಕದ ಜನರಿಗೂ ಸೌಲಭ್ಯ ಕೊಡಿಸುವತ್ತ ಮುಂದಾಗುವAತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಲೆಕಪರಿಶೋಧಕರಾದ ರಾಜೇಶ್ ಸಂಘದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಕವಿತಾ ಶ್ರೀಕಂಠಸ್ವಾಮಿ ಹಾಗೂ ಕು.ಕುಸುಮ ಸಂಘದ ವಾರ್ಷಿಕ ಲೆಕ್ಕ ಪರಿಶೋಧನ ವರದಿಯನ್ನು ಸಭೆಯಲ್ಲಿ ಮಂಡಿಸಿದರು.ಸAಘದ ಸೌಲಭ್ಯಗಳ ಬಗ್ಗೆ ಸಂಘದ ಅಪಾಧ್ಯಕ್ಷರಾದ ಗುರುಮೂರ್ತಿ ಮಾಹಿತಿ ನೀಡಿದರು.ಸಂಘದ ಸೇವೆಗಳ ಕುರಿತು ನಿರ್ದೇಶಕ ಶಿವಕುಮಾರ್ ಮಾತನಾಡಿದರು.ಮುಖ್ಯ ಕಾರ್ಯನಿರ್ವಹಣಾಧಿಕಶಾರಿ ಪೂರ್ಣಿಮ ಸಂಘ ಬೆಳೆದು ಬಂದ ಹಾದಿಯ ಕುರಿತು ವರದಿ ಮಂಡಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಶಿವಕುಮಾರ್ ಸಂಘದ ಅರಂಭ ಹಾಗೂ ಮುಂಗಡ ವರ್ಷದ ಯೋಜನೆಗಳು ಬಗ್ಗೆ ಸಭೆಯಲ್ಲಿ ಮಂಡಿಸಿದರು.
ಬಾಕ್ಸ್ ಸುದ್ದಿ: ಹೋಸ ಯೋಜನೆಗಳ ಅನುಷ್ಠಾನ್ಕಕೆ ಅನುಮೋಧನೆ: ಸಹಕಾರ ಸಂಘದಿAದ ಸೂಪರ್ ಮಾರ್ಕೆಟ್ ಅರಂಭ,ಹಲಗೂರಿನಲ್ಲಿ ಹೊಸ ಉಪ ಶಾಖೆ ತೆರಯುವುದು,ಬಂಕ್ ಉದ್ಯಮ ಸೇರಿದಂತೆ ಸಹಕಾರ ಸಂಘದ ಪ್ರಗತಿಗೆ ಕೈಗೊಳ್ಳಬೇಕಾದ ಹೊಸ ಯೋಜನೆಗಳ ಅನುಷ್ಠಾನ ಹಾಗೂ ಲೆಕ್ಕ ಪರಿಶೋಧಕರ ನಿಯೋಜನೆ.ಹೊಸ ಕಛೇರಿ ತೆರೆಯುವುದು,ಸಾಮಾನ್ಯ ಸೇವಾ ಕೇಂದ್ರದ ಸೇವೆಗಳನ್ನು ಸದಸ್ಯರ ಮನೆಗೆ ನೀಡುವುದು ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಸಭೆಯಲ್ಲಿ ವಿಷಯ ಮಂಡಿಸಿ ಅನುಮೋಧನೆ ಪಡೆಯಲಾಯಿತು.
ಇದೇ ಸಂದರ್ಭದಲ್ಲಿ ಸಂಘಕ್ಕೆ ನೂತನ ವೃತ್ತಿ ಪರ ನಿರ್ದೇಶಕರಾಗಿ ಅಯ್ಕಯಾಗಿದ್ದ ಬೆಳಕವಾಡಿ ಚೇತನ್ ಹಾಗೂ ರೇಷ್ಮೆ ಕೃಷಿಕ ಮೂಗನಕೊಪ್ಪಲು ತ್ಯಾಗರಾಜುರವರನ್ನು ಅಭಿನಂಧಿಸಿ ಆಢಳಿತ ಮಂಡಳಿಗೆ ಬರಮಾಡಿಕೊಳ್ಳಲಾಯಿತು.
ಸಭೆಯಲ್ಲಿ ಸಂಯೋಜಕ ಬಲರಾಂ,ಲೆಕ್ಕ ಪರಿಶೋಧಕರಾದ ರಾಜೆಶ್.ಪಿ ಹಾಗೂ ಹಿರಿಯ ಸದಸ್ಯರು ಹಾಗೂ ಶಿಕ್ಷಣ ತಜ್ಞೆ  ಶಾಂತ ಬಸವರಾಜು,ವೈದ್ಯರಾದ ಗೀರೀಶ್,ಪತ್ರಬರಹಗಾರ ಸದಾಶಿವಮೂರ್ತಿ,ಬಸವೇಶ್ ಮೂರ್ತಿ,ನಿವೃತ್ತ ಉಪ ತಹಶೀಲ್ದಾರ್ ಶಿವಮೂರ್ತಿಯವರನ್ನು ಅಭಿನಂಧಿಸಲಾಯಿತು.
ಸಭೆಗೂ ಮುನ್ನ ಶ್ರೀ ವೀರಭದ್ರೇಶ್ವರಸ್ವಾಮಿಗೆ ಸಂಘದವತಿಯಿAದ ವಿಶೇಷ ಪೂಜೆ ಸಲ್ಲಿಸಲಾಯಿತು,ಅರ್ಚಕರಾದ ಮಲ್ಲಯ್ಯನವರು ದೇವರಿಗೆ ಪೂಜೆ ಸಲ್ಲಿಸಿ ಅಗಮಿಸಿದ ಜನರಿಗೆ ಮಹಾಮಂಗಳಾರತಿ ನೀಡಿ ಪ್ರಸಾದ ನೀಡಿದರು.
ಸಭೆಯಲ್ಲಿ ಅಢಳಿತ ಮಂಡಳಿಯ ನಿರ್ದೇಶಕರಾದ ಎಸ್ ನಾಗಭೂಷಣಾರಾದ್ಯ,ಎನ್.ಮಂಟ್ಯೆಸ್ವಾಮಿ,ಕವಿತ.ಎಸ್,ಮಾನಸ.ಪಿ,ಗAಗಾಧರ್,ವ್ಯವಸ್ಥಾಪಕಿ ರಮ್ಯ,ಸೇವಾ ಪ್ರತಿನಿಧಿ ಕುಸುಮ,ಸಿಇಓ ಪೂರ್ಣಿಮಾ, ಪಿಗ್ಮಿ ಸಂಗ್ರಾಹಕ ಸುಬ್ರಮಣ್ಯ ಎಂ.ಅರ್ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    15 hrs ago
  • ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡುವಂತೆ ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡುವಂತೆ ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರ : ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡಿಕೊಡುವಂತೆ  ಜಿಲ್ಲಾ ಪಡಿತರ ವಿತರಕರ ಸಂಘದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಡಾ. ವಸುಂದರ ಹೆಗ್ಗಡೆ  ಅವರಿಗೆ ಮನವಿ ಸಲ್ಲಿಸಲಾಯಿತು. ಆಗಸ್ಟ್ 2026 ರ ಮಾಹೆಯ ಪಡಿತರ ವಿತರಣೆಯು ಕೇಂದ್ರ ಸರ್ಕಾರದ ಆಗಸ್ಟ್ ಮತ್ತು ಸೆಪ್ಟೆಂಬರ್ ಎರಡು ತಿಂಗಳ ಪಡಿತರ ವಿತರಣೆ ಮಾಡಬೇಕಾಗಿರುತ್ತದೆ. ಪಡಿತರದಾರರ ಹೆಬ್ಬೆಟ್ಟನ್ನು ಎರಡು ಬಾರಿ ಪಡೆದು ಪಡಿತರ ವಿತರಣೆ ಮಾಡಬೇಕಾಗಿರುತ್ತದೆ. ಇದು ಸರ್ಕಾರದ ಆದೇಶವಾಗಿರುತ್ತದೆ. ಆದ ಕಾರಣ ಕಳೆದ ಒಂದು ವಾರದಿಂದ ಸರ್ವ‌ರ್ ಸಮಸ್ಯೆ ಆಗಿರುತ್ತದೆ. ಪ್ರತಿ ಕಾರ್ಡಿಗೂ 15 ರಿಂದ 20 ನಿಮಿಷಗಳು ಬೇಕಾಗಿರುತ್ತದೆ. ಈ ತಿಂಗಳು ಈಗಾಗಲೇ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಶೇ. 70 ರಷ್ಟು ವಿತರಣೆಯಾಗಿರುವುದಿಲ್ಲ. ಇನ್ನೂ ಉಳಿದಿರುವುದು ಕೇವಲ 5 ದಿನಗಳು ಮಾತ್ರ ಇನ್ನೂ ಸರ್ವರ್ ಕೊಡದೇ ಇದ್ದರೆ ಪಡಿತರ ವಿತರಣೆ ಮಾಡುವುದು ಯಾವಾಗ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರು ಕೂಲಿ ಕೆಲಸಕ್ಕೆ ಹೋಗದೆ ನ್ಯಾಯಬೆಲೆ ಅಂಗಡಿ ಮುಂದೆ ನಿಂತರೆ ಇದಕ್ಕೆ ಯಾರು ಜವಾಬ್ದಾರರರು. ಪಡಿತರದಾರರು ಮನಬಂದಂತೆ ಸರ್ವರ್ ಯಾವಾಗ ಬರುತ್ತೆ ನಮಗೆ ಪಡಿತರ ಯಾವಾಗ ಕೊಡುತ್ತೀರ ಕೊಡದೆ ಇದ್ದರೆ ನಾವು ಏನು ಊಟ ಮಾಡುವುದು ಎಂದು ಮನಬಂದಂತೆ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಹಾಗೂ ಅಧಿಕಾರಿಗಳನ್ನು ಕೇಳುತ್ತಿದ್ದಾರೆ ದಯಮಾಡಿ ಈ ಸಮಸ್ಯೆಯನ್ನು ಪರಿಹರಿಸಿ ಗ್ರಾಹಕರಿಗೆ ಪಡಿತರ ವಿತರಣೆ ಅವಕಾಶ ಮಾಡಿಕೊಡುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಡಾ. ವಸುಂದರ ಹೆಗ್ಗಡೆ  ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯ ಉಪಾಧ್ಯಕ್ಷ ದುಂಡಯ್ಯ, ಜಿಲ್ಲಾಧ್ಯಕ್ಷ ಗಿರೀಶ್ ಉಡಿಗಾಲ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಡಿತರ ವಿತರಕರ ಸಂಘದ ಜಿಲ್ಲಾ ಖಜಾಂಚಿ ಚೆಂಗುಮಣಿ,  ಆರ್.ಎಂ.ಸಿದ್ದರಾಜು, ಕಿಟ್ಟಿ,  ಹೆಗ್ಗೋಠಾರ ‌ಮಹದೇವಸ್ವಾಮಿ, ವಿನೋದ್ ಹೊನ್ನಳ್ಳಿ, ನಂದೀಶ್ ಹೊಸಹಳ್ಳಿ ಇತರರು ಹಾಜರಿದ್ದರು.
    3
    ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡುವಂತೆ ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ
ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡುವಂತೆ ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ
ವರದಿ: ಹೊಮ್ಮನಂಜುಂಡನಾಯಕ
ಚಾಮರಾಜನಗರ : ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡಿಕೊಡುವಂತೆ  ಜಿಲ್ಲಾ ಪಡಿತರ ವಿತರಕರ ಸಂಘದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಡಾ.
ವಸುಂದರ ಹೆಗ್ಗಡೆ  ಅವರಿಗೆ ಮನವಿ ಸಲ್ಲಿಸಲಾಯಿತು. 
ಆಗಸ್ಟ್ 2026 ರ ಮಾಹೆಯ ಪಡಿತರ ವಿತರಣೆಯು ಕೇಂದ್ರ ಸರ್ಕಾರದ ಆಗಸ್ಟ್ ಮತ್ತು ಸೆಪ್ಟೆಂಬರ್ ಎರಡು ತಿಂಗಳ ಪಡಿತರ ವಿತರಣೆ ಮಾಡಬೇಕಾಗಿರುತ್ತದೆ. ಪಡಿತರದಾರರ ಹೆಬ್ಬೆಟ್ಟನ್ನು ಎರಡು ಬಾರಿ ಪಡೆದು ಪಡಿತರ ವಿತರಣೆ ಮಾಡಬೇಕಾಗಿರುತ್ತದೆ. ಇದು ಸರ್ಕಾರದ ಆದೇಶವಾಗಿರುತ್ತದೆ. ಆದ ಕಾರಣ ಕಳೆದ ಒಂದು ವಾರದಿಂದ ಸರ್ವ‌ರ್ ಸಮಸ್ಯೆ ಆಗಿರುತ್ತದೆ. ಪ್ರತಿ ಕಾರ್ಡಿಗೂ 15 ರಿಂದ 20 ನಿಮಿಷಗಳು ಬೇಕಾಗಿರುತ್ತದೆ. ಈ ತಿಂಗಳು ಈಗಾಗಲೇ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಶೇ. 70 ರಷ್ಟು ವಿತರಣೆಯಾಗಿರುವುದಿಲ್ಲ. ಇನ್ನೂ ಉಳಿದಿರುವುದು ಕೇವಲ 5 ದಿನಗಳು ಮಾತ್ರ ಇನ್ನೂ ಸರ್ವರ್ ಕೊಡದೇ ಇದ್ದರೆ ಪಡಿತರ ವಿತರಣೆ ಮಾಡುವುದು ಯಾವಾಗ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರು ಕೂಲಿ ಕೆಲಸಕ್ಕೆ ಹೋಗದೆ ನ್ಯಾಯಬೆಲೆ ಅಂಗಡಿ ಮುಂದೆ ನಿಂತರೆ ಇದಕ್ಕೆ ಯಾರು ಜವಾಬ್ದಾರರರು. ಪಡಿತರದಾರರು ಮನಬಂದಂತೆ ಸರ್ವರ್
ಯಾವಾಗ ಬರುತ್ತೆ ನಮಗೆ ಪಡಿತರ ಯಾವಾಗ ಕೊಡುತ್ತೀರ ಕೊಡದೆ ಇದ್ದರೆ ನಾವು ಏನು ಊಟ ಮಾಡುವುದು ಎಂದು ಮನಬಂದಂತೆ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಹಾಗೂ ಅಧಿಕಾರಿಗಳನ್ನು ಕೇಳುತ್ತಿದ್ದಾರೆ ದಯಮಾಡಿ ಈ ಸಮಸ್ಯೆಯನ್ನು ಪರಿಹರಿಸಿ ಗ್ರಾಹಕರಿಗೆ ಪಡಿತರ ವಿತರಣೆ ಅವಕಾಶ ಮಾಡಿಕೊಡುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಡಾ.
ವಸುಂದರ ಹೆಗ್ಗಡೆ  ಅವರಿಗೆ ಸಲ್ಲಿಸಿರುವ ಮನವಿಯಲ್ಲಿ
ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯ ಉಪಾಧ್ಯಕ್ಷ ದುಂಡಯ್ಯ, ಜಿಲ್ಲಾಧ್ಯಕ್ಷ ಗಿರೀಶ್ ಉಡಿಗಾಲ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಡಿತರ ವಿತರಕರ ಸಂಘದ ಜಿಲ್ಲಾ ಖಜಾಂಚಿ ಚೆಂಗುಮಣಿ,  ಆರ್.ಎಂ.ಸಿದ್ದರಾಜು, ಕಿಟ್ಟಿ,  ಹೆಗ್ಗೋಠಾರ ‌ಮಹದೇವಸ್ವಾಮಿ, ವಿನೋದ್ ಹೊನ್ನಳ್ಳಿ, ನಂದೀಶ್ ಹೊಸಹಳ್ಳಿ ಇತರರು ಹಾಜರಿದ್ದರು.
    user_Nanjunda Nayak
    Nanjunda Nayak
    Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    22 hrs ago
  • ಮರಿಯಮಂಗಲ ಶೂಟೌಟ್ ಪ್ರಕರಣ ಸಿಐಡಿಗೆ : ಹನೂರು: ತಾಲೂಕಿನ ಕಾವೇರಿ ವನ್ಯಜೀವಿಧಾಮದ ಮರಿಯಮಂಗಲ ಬೀಟ್‌ನಲ್ಲಿ ಆಗಸ್ಟ್ 15ರಂದು ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಹನೂರು, ರಾಮಾಪುರ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ನಾಲ್ಕು ಎಫ್‌ಐಆರ್‌ಗಳ ತನಿಖೆಯನ್ನೂ ಸಿಐಡಿಗೆ ವರ್ಗಾಯಿಸಲಾಗಿದೆ. ಸಿಐಡಿ ವಿಶೇಷ ಘಟಕವು ಗುಂಡಿನ ದಾಳಿಗೆ ಕಾರಣ, ಘಟನೆಯ ಸಂದರ್ಭ ಹಾಗೂ ಸಂಪೂರ್ಣ ಹಿನ್ನೆಲೆಯ ಕುರಿತು ತನಿಖೆ ನಡೆಸಲಿದೆ. ಘಟನೆಯಲ್ಲಿ ಹನೂರು ತಾಲೂಕಿನ ತೋಮಿಯರ್ಪಾಳ್ಯದ ಕುಮಾರ್, ಆಂಥೋಣಿಸ್ವಾಮಿ ಹಾಗೂ ಪೀಟರ್ ಮೃತಪಟ್ಟಿದ್ದರು. ಅರಣ್ಯ ಪ್ರದೇಶದಲ್ಲಿ ಬೇಟೆಗೆ ತೆರಳಿದ್ದ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಮೃತರ ನಡುವೆ ಸಂಘರ್ಷ ನಡೆದಿದ್ದು, ಈ ವೇಳೆ ಗುಂಡಿನ ದಾಳಿ ನಡೆದಿತ್ತು ಎನ್ನಲಾಗಿದೆ. ಪ್ರಕರಣದ ಕುರಿತು ಹಲವು ಅನುಮಾನಗಳು ಹಾಗೂ ರಾಜಕೀಯ ಚರ್ಚೆಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಸಿಐಡಿ ತನಿಖೆ ನಿರ್ಧಾರ ಮಹತ್ವ ಪಡೆದಿದೆ. ಮರಿಯಮಂಗಲ ಶೂಟೌಟ್ ಪ್ರಕರಣ ಸಿಐಡಿಗೆ : ಹನೂರು: ತಾಲೂಕಿನ ಕಾವೇರಿ ವನ್ಯಜೀವಿಧಾಮದ ಮರಿಯಮಂಗಲ ಬೀಟ್‌ನಲ್ಲಿ ಆಗಸ್ಟ್ 15ರಂದು ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಹನೂರು, ರಾಮಾಪುರ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ನಾಲ್ಕು ಎಫ್‌ಐಆರ್‌ಗಳ ತನಿಖೆಯನ್ನೂ ಸಿಐಡಿಗೆ ವರ್ಗಾಯಿಸಲಾಗಿದೆ. ಸಿಐಡಿ ವಿಶೇಷ ಘಟಕವು ಗುಂಡಿನ ದಾಳಿಗೆ ಕಾರಣ, ಘಟನೆಯ ಸಂದರ್ಭ ಹಾಗೂ ಸಂಪೂರ್ಣ ಹಿನ್ನೆಲೆಯ ಕುರಿತು ತನಿಖೆ ನಡೆಸಲಿದೆ. ಘಟನೆಯಲ್ಲಿ ಹನೂರು ತಾಲೂಕಿನ ತೋಮಿಯರ್ಪಾಳ್ಯದ ಕುಮಾರ್, ಆಂಥೋಣಿಸ್ವಾಮಿ ಹಾಗೂ ಪೀಟರ್ ಮೃತಪಟ್ಟಿದ್ದರು. ಅರಣ್ಯ ಪ್ರದೇಶದಲ್ಲಿ ಬೇಟೆಗೆ ತೆರಳಿದ್ದ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಮೃತರ ನಡುವೆ ಸಂಘರ್ಷ ನಡೆದಿದ್ದು, ಈ ವೇಳೆ ಗುಂಡಿನ ದಾಳಿ ನಡೆದಿತ್ತು ಎನ್ನಲಾಗಿದೆ. ಪ್ರಕರಣದ ಕುರಿತು ಹಲವು ಅನುಮಾನಗಳು ಹಾಗೂ ರಾಜಕೀಯ ಚರ್ಚೆಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಸಿಐಡಿ ತನಿಖೆ ನಿರ್ಧಾರ ಮಹತ್ವ ಪಡೆದಿದೆ.
    1
    ಮರಿಯಮಂಗಲ ಶೂಟೌಟ್ ಪ್ರಕರಣ ಸಿಐಡಿಗೆ

: ಹನೂರು: ತಾಲೂಕಿನ ಕಾವೇರಿ ವನ್ಯಜೀವಿಧಾಮದ ಮರಿಯಮಂಗಲ ಬೀಟ್‌ನಲ್ಲಿ ಆಗಸ್ಟ್ 15ರಂದು ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.

ಹನೂರು, ರಾಮಾಪುರ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ನಾಲ್ಕು ಎಫ್‌ಐಆರ್‌ಗಳ ತನಿಖೆಯನ್ನೂ ಸಿಐಡಿಗೆ ವರ್ಗಾಯಿಸಲಾಗಿದೆ. ಸಿಐಡಿ ವಿಶೇಷ ಘಟಕವು ಗುಂಡಿನ ದಾಳಿಗೆ ಕಾರಣ, ಘಟನೆಯ ಸಂದರ್ಭ ಹಾಗೂ ಸಂಪೂರ್ಣ ಹಿನ್ನೆಲೆಯ ಕುರಿತು ತನಿಖೆ ನಡೆಸಲಿದೆ.

ಘಟನೆಯಲ್ಲಿ ಹನೂರು ತಾಲೂಕಿನ ತೋಮಿಯರ್ಪಾಳ್ಯದ ಕುಮಾರ್, ಆಂಥೋಣಿಸ್ವಾಮಿ ಹಾಗೂ ಪೀಟರ್ ಮೃತಪಟ್ಟಿದ್ದರು. ಅರಣ್ಯ ಪ್ರದೇಶದಲ್ಲಿ ಬೇಟೆಗೆ ತೆರಳಿದ್ದ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಮೃತರ ನಡುವೆ ಸಂಘರ್ಷ ನಡೆದಿದ್ದು, ಈ ವೇಳೆ ಗುಂಡಿನ ದಾಳಿ ನಡೆದಿತ್ತು ಎನ್ನಲಾಗಿದೆ.

ಪ್ರಕರಣದ ಕುರಿತು ಹಲವು ಅನುಮಾನಗಳು ಹಾಗೂ ರಾಜಕೀಯ ಚರ್ಚೆಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಸಿಐಡಿ ತನಿಖೆ ನಿರ್ಧಾರ ಮಹತ್ವ ಪಡೆದಿದೆ.
ಮರಿಯಮಂಗಲ ಶೂಟೌಟ್ ಪ್ರಕರಣ ಸಿಐಡಿಗೆ
: ಹನೂರು: ತಾಲೂಕಿನ ಕಾವೇರಿ ವನ್ಯಜೀವಿಧಾಮದ ಮರಿಯಮಂಗಲ ಬೀಟ್‌ನಲ್ಲಿ ಆಗಸ್ಟ್ 15ರಂದು ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.
ಹನೂರು, ರಾಮಾಪುರ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ನಾಲ್ಕು ಎಫ್‌ಐಆರ್‌ಗಳ ತನಿಖೆಯನ್ನೂ ಸಿಐಡಿಗೆ ವರ್ಗಾಯಿಸಲಾಗಿದೆ. ಸಿಐಡಿ ವಿಶೇಷ ಘಟಕವು ಗುಂಡಿನ ದಾಳಿಗೆ ಕಾರಣ, ಘಟನೆಯ ಸಂದರ್ಭ ಹಾಗೂ ಸಂಪೂರ್ಣ ಹಿನ್ನೆಲೆಯ ಕುರಿತು ತನಿಖೆ ನಡೆಸಲಿದೆ.
ಘಟನೆಯಲ್ಲಿ ಹನೂರು ತಾಲೂಕಿನ ತೋಮಿಯರ್ಪಾಳ್ಯದ ಕುಮಾರ್, ಆಂಥೋಣಿಸ್ವಾಮಿ ಹಾಗೂ ಪೀಟರ್ ಮೃತಪಟ್ಟಿದ್ದರು. ಅರಣ್ಯ ಪ್ರದೇಶದಲ್ಲಿ ಬೇಟೆಗೆ ತೆರಳಿದ್ದ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಮೃತರ ನಡುವೆ ಸಂಘರ್ಷ ನಡೆದಿದ್ದು, ಈ ವೇಳೆ ಗುಂಡಿನ ದಾಳಿ ನಡೆದಿತ್ತು ಎನ್ನಲಾಗಿದೆ.
ಪ್ರಕರಣದ ಕುರಿತು ಹಲವು ಅನುಮಾನಗಳು ಹಾಗೂ ರಾಜಕೀಯ ಚರ್ಚೆಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಸಿಐಡಿ ತನಿಖೆ ನಿರ್ಧಾರ ಮಹತ್ವ ಪಡೆದಿದೆ.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.