logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನದ ಸರ ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನದ ಸರ ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋಚಾಲಕ ಚಳ್ಳಕೆರೆ ಆಟೋ ಚಾಲಕರ ಮಾನವೀಯ ಗುಣಗಳು ಮತ್ತು ಅವರ ಪ್ರಾಮಾಣಿಕತೆಯ ಬಗ್ಗೆ ಆಗಾಗ ಸುದ್ದಿಗಳು ಆಗ್ತಾವೆ,ಅದೇ ರೀತಿ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿಂದು ಇಂತ್ತದೊಂದು ಘಟನೆಯಲ್ಲಿ ಆಟೋಚಾಲಕನ ಪ್ರಾಮಾಣಿಕತೆಗೆ ಜನ ಭೇಷ್ ಎಂದಿದ್ದಾರೆ. ಮಹದೇವಪುರದಿಂದ ಅನ್ಯ ಊರಿಗೆ ತೆರಳಲು ಬಂದಿದ್ದ ದಂಪತಿಗಳು ಅಕಸ್ಮಾತ್‌ ಆಗಿ ಆಟೋದಲ್ಲಿ ಬ್ಯಾಗ್ ಬಿಟ್ಟು ನಾಯಕನಹಟ್ಟಿಯಲ್ಲಿ ಇಳಿದು ಹೋಗಿದ್ದರು,ಚಾಲಕನು ತನ್ನ ಆಟೋವನ್ನು ತೊರೆಕೊಲಮ್ಮನಹಳ್ಳಿಗೆ ಚಲಾಯಿಸಿಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ ಆಟೋದಲ್ಲಿರುವ ಬ್ಯಾಗ್ ನೋಡಿ ವಾಪಾಸ್ ನಾಯಕನಹಟ್ಟಿಗೆ ಬಂದು ವಿಚಾರಿಸಿದ್ದಾನೆ,ನಂತರ ನೇರವಾಗಿ ಬ್ಯಾಗ್ ನಲ್ಲಿದ್ದ ಸುಮಾರು 5 ತೊಲದ 7.50ಲಕ್ಷದ ಬೆಲೆ ಬಾಳುವ ಬಂಗಾರದ ಮಾಂಗಲ್ಯ ಸರವಿದ್ದ ಬ್ಯಾಗ್ ಅನ್ನು ತಾನು ಇಟ್ಟುಕೊಳ್ಳದೇ ನಾಯಕನಹಟ್ಟಿ ಪೊಲೀಸ್ ಠಾಣೆಗೆ ತೆರಳಿ ಪಿಎಸ್ ಐ ಪಾಂಡುರಂಗಪ್ಪ ಅವರ ಮೂಲಕ ಮಾಲೀಕರಾದ ಸರಸ್ವತಿಗೆ ಹಿಂತಿರುಗಿಸುವ ಮೂಲಕ ಮಾದರಿಯಾಗಿದ್ದಾನೆ. ಬೇಡರೆಡ್ಡಿಹಳ್ಳಿ ಗ್ರಾಮದ ಮಲ್ಲಿಕಾರ್ಜುನ್ ಎನ್ನುವ ಆಟೋ ಚಾಲಕ ತನ್ನ ಆಟೋದಲ್ಲಿ ಸಿಕ್ಕಂತಹ ಬೆಲೆಬಾಳುವ ಚಿನ್ನದ ಸರವನ್ನು ಅದರ ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದು ಆಟೋ ಚಾಲಕನ ನಡೆಗೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗಿದೆ.

1 hr ago
user_Suresh Belagere
Suresh Belagere
Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
1 hr ago

ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನದ ಸರ ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನದ ಸರ ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋಚಾಲಕ ಚಳ್ಳಕೆರೆ ಆಟೋ ಚಾಲಕರ ಮಾನವೀಯ ಗುಣಗಳು ಮತ್ತು ಅವರ ಪ್ರಾಮಾಣಿಕತೆಯ ಬಗ್ಗೆ ಆಗಾಗ ಸುದ್ದಿಗಳು ಆಗ್ತಾವೆ,ಅದೇ ರೀತಿ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿಂದು ಇಂತ್ತದೊಂದು ಘಟನೆಯಲ್ಲಿ ಆಟೋಚಾಲಕನ ಪ್ರಾಮಾಣಿಕತೆಗೆ ಜನ ಭೇಷ್ ಎಂದಿದ್ದಾರೆ. ಮಹದೇವಪುರದಿಂದ ಅನ್ಯ ಊರಿಗೆ ತೆರಳಲು ಬಂದಿದ್ದ ದಂಪತಿಗಳು ಅಕಸ್ಮಾತ್‌ ಆಗಿ ಆಟೋದಲ್ಲಿ ಬ್ಯಾಗ್ ಬಿಟ್ಟು ನಾಯಕನಹಟ್ಟಿಯಲ್ಲಿ ಇಳಿದು ಹೋಗಿದ್ದರು,ಚಾಲಕನು ತನ್ನ ಆಟೋವನ್ನು ತೊರೆಕೊಲಮ್ಮನಹಳ್ಳಿಗೆ ಚಲಾಯಿಸಿಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ ಆಟೋದಲ್ಲಿರುವ ಬ್ಯಾಗ್ ನೋಡಿ ವಾಪಾಸ್ ನಾಯಕನಹಟ್ಟಿಗೆ ಬಂದು ವಿಚಾರಿಸಿದ್ದಾನೆ,ನಂತರ ನೇರವಾಗಿ ಬ್ಯಾಗ್ ನಲ್ಲಿದ್ದ ಸುಮಾರು 5 ತೊಲದ 7.50ಲಕ್ಷದ ಬೆಲೆ ಬಾಳುವ ಬಂಗಾರದ ಮಾಂಗಲ್ಯ ಸರವಿದ್ದ ಬ್ಯಾಗ್ ಅನ್ನು ತಾನು ಇಟ್ಟುಕೊಳ್ಳದೇ ನಾಯಕನಹಟ್ಟಿ ಪೊಲೀಸ್ ಠಾಣೆಗೆ ತೆರಳಿ ಪಿಎಸ್ ಐ ಪಾಂಡುರಂಗಪ್ಪ ಅವರ ಮೂಲಕ ಮಾಲೀಕರಾದ ಸರಸ್ವತಿಗೆ ಹಿಂತಿರುಗಿಸುವ ಮೂಲಕ ಮಾದರಿಯಾಗಿದ್ದಾನೆ. ಬೇಡರೆಡ್ಡಿಹಳ್ಳಿ ಗ್ರಾಮದ ಮಲ್ಲಿಕಾರ್ಜುನ್ ಎನ್ನುವ ಆಟೋ ಚಾಲಕ ತನ್ನ ಆಟೋದಲ್ಲಿ ಸಿಕ್ಕಂತಹ ಬೆಲೆಬಾಳುವ ಚಿನ್ನದ ಸರವನ್ನು ಅದರ ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದು ಆಟೋ ಚಾಲಕನ ನಡೆಗೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗಿದೆ.

More news from ಕರ್ನಾಟಕ and nearby areas
  • ಚಿತ್ರದುರ್ಗದ ಅಂಬೇಡ್ಕರ್ ವೃತ್ತದಲ್ಲಿ ಭಗವಾನ್ ಬುದ್ದನ ಜಯಂತಿ ಹಿನ್ನೆಲೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮೆರವಣಿಗೆ ಹಮ್ಮಿಕೊಂಡಿದ್ದು ಅಪರ ಜಿಲ್ಲಾಧಿಕಾರಿ ಬಿ ಟಿ ಕುಮಾರಸ್ವಾಮಿ ಅವರು ಆಗಮಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಭಗವಾನ್ ಬುದ್ದನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
    1
    ಚಿತ್ರದುರ್ಗದ ಅಂಬೇಡ್ಕರ್ ವೃತ್ತದಲ್ಲಿ ಭಗವಾನ್ ಬುದ್ದನ ಜಯಂತಿ ಹಿನ್ನೆಲೆ ಮೆರವಣಿಗೆಗೆ ಚಾಲನೆ ನೀಡಲಾಯಿತು. 
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮೆರವಣಿಗೆ ಹಮ್ಮಿಕೊಂಡಿದ್ದು ಅಪರ ಜಿಲ್ಲಾಧಿಕಾರಿ ಬಿ ಟಿ ಕುಮಾರಸ್ವಾಮಿ ಅವರು ಆಗಮಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಭಗವಾನ್ ಬುದ್ದನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    4 hrs ago
  • Post by Karibasava Balal
    1
    Post by Karibasava Balal
    user_Karibasava Balal
    Karibasava Balal
    City Star ದಾವಣಗೆರೆ, ದಾವಣಗೆರೆ, ಕರ್ನಾಟಕ•
    16 hrs ago
  • ತಾಳುಬೆಟ್ಟ ಸಮೀಪ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ ಹನೂರು ತಾಲೂಕಿನಲ್ಲಿ ತಾಳುಬೆಟ್ಟ ಸಮೀಪ ಇಂದು ಮಧ್ಯಾಹ್ನ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾದ ಪರಿಣಾಮ 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೌದಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತಾದರೂ, ಸಮಯಕ್ಕೆ ಆಂಬುಲೆನ್ಸ್ ಹಾಗೂ ಸಮರ್ಪಕ ವೈದ್ಯಕೀಯ ಸೇವೆ ಲಭ್ಯವಾಗದ ಕಾರಣ ಗಾಯಾಳುಗಳು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಕಳೆದ ಒಂದು ವಾರದಲ್ಲಿ ಹನೂರು ತಾಲೂಕಿನಲ್ಲಿ ನಡೆದ ನಾಲ್ಕನೇ ಅಪಘಾತ ಇದಾಗಿದೆ. ತಾಲೂಕಿನಲ್ಲಿ ಆರೋಗ್ಯ ಸೇವೆಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ. ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಕುರಿತು ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ. “ಮಾದಪ್ಪ, ನಿನ್ನ ಭಕ್ತರನ್ನು ನೀನೇ ಕಾಪಾಡಪ್ಪ” ಎಂದು ಸ್ಥಳೀಯರು ಬೇಡಿಕೊಂಡರು.
    1
    ತಾಳುಬೆಟ್ಟ ಸಮೀಪ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಹನೂರು ತಾಲೂಕಿನಲ್ಲಿ ತಾಳುಬೆಟ್ಟ ಸಮೀಪ ಇಂದು ಮಧ್ಯಾಹ್ನ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾದ ಪರಿಣಾಮ 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೌದಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತಾದರೂ, ಸಮಯಕ್ಕೆ ಆಂಬುಲೆನ್ಸ್ ಹಾಗೂ ಸಮರ್ಪಕ ವೈದ್ಯಕೀಯ ಸೇವೆ ಲಭ್ಯವಾಗದ ಕಾರಣ ಗಾಯಾಳುಗಳು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಕಳೆದ ಒಂದು ವಾರದಲ್ಲಿ ಹನೂರು ತಾಲೂಕಿನಲ್ಲಿ ನಡೆದ ನಾಲ್ಕನೇ ಅಪಘಾತ ಇದಾಗಿದೆ. ತಾಲೂಕಿನಲ್ಲಿ ಆರೋಗ್ಯ ಸೇವೆಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ. ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಕುರಿತು ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ. “ಮಾದಪ್ಪ, ನಿನ್ನ ಭಕ್ತರನ್ನು ನೀನೇ ಕಾಪಾಡಪ್ಪ” ಎಂದು ಸ್ಥಳೀಯರು ಬೇಡಿಕೊಂಡರು.
    user_YSRmedia vijayanagaraupsates
    YSRmedia vijayanagaraupsates
    Mobile Phone Accessory Shop ಹೊಸಪೇಟೆ, ವಿಜಯನಗರ, ಕರ್ನಾಟಕ•
    3 hrs ago
  • ಕನ್ನಡದ ವರನಟ Dr. Rajkumar ಅವರ ಪುಣ್ಯಭೂಮಿ ಕುರಿತಾಗಿ ನಟ Chetan Kumar ನೀಡಿದ್ದಾರೆನ್ನಲಾದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಬಳ್ಳಾರಿಯಲ್ಲಿ ಅಭಿಮಾನಿಗಳು ಮತ್ತು Karnataka Rakshana Vedike ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ G. Parameshwara ಅವರಿಗೆ ಮನವಿ ಸಲ್ಲಿಸಿದ್ದು, ಚೇತನ್ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾಜಕುಮಾರ್ ಅವರ ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಇಂತಹ ಹೇಳಿಕೆಗಳನ್ನು ಖಂಡಿಸಲಾಗಿದೆ.
    1
    ಕನ್ನಡದ ವರನಟ Dr. Rajkumar ಅವರ ಪುಣ್ಯಭೂಮಿ ಕುರಿತಾಗಿ ನಟ Chetan Kumar ನೀಡಿದ್ದಾರೆನ್ನಲಾದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಬಳ್ಳಾರಿಯಲ್ಲಿ ಅಭಿಮಾನಿಗಳು ಮತ್ತು Karnataka Rakshana Vedike ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ G. Parameshwara ಅವರಿಗೆ ಮನವಿ ಸಲ್ಲಿಸಿದ್ದು, ಚೇತನ್ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜಕುಮಾರ್ ಅವರ ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಇಂತಹ ಹೇಳಿಕೆಗಳನ್ನು ಖಂಡಿಸಲಾಗಿದೆ.
    user_ASN News24Kannada
    ASN News24Kannada
    Newsagent Ballari, Karnataka•
    12 hrs ago
  • ಕಡೂರು : ತಾಲ್ಲೂಕಿನ ಸಿಂಗಟಗೆರೆ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಕಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ರುದ್ರಾಭಿಷೇಕ ನಿತ್ಯಹೋಮ, ರಥಾಧಿದೇವತಾ ಹೋಮ, ರಥಸಂಪ್ರೋಕ್ಷಣೆ ನಂತರ ಬಳಿಕ ಶ್ರೀ ಕಲ್ಲೇಶ್ವರ ಸ್ವಾಮಿ ಮತ್ತು ಪಾರ್ವತಿದೇವಿಯ ಉತ್ಸವ ಮೂರ್ತಿಯೊಂದಿಗೆ ಗ್ರಾಮದ ಮೂಲದೇವಾಲಯ ದಿಂದ ಪ್ರಮುಖ ರಾಜಬೀದಿಗಳಲ್ಲಿ ಅದ್ದೂರಿಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಆಂಜನೇಯಸ್ವಾಮಿ ಉತ್ಸವದಲ್ಲಿ ಸಾಗಿತು. ಜಾನಪದ ವೀರಗಾಸೆ ಕಲಾತಂಡಗಳ ಪ್ರದರ್ಶನ ನಡೆಸಲಾಯಿತು. ಬಳಿಕ ರಥದ ಮಂಟಪದ ಬಳಿ ಕರೆತಂದ ಸ್ವಾಮಿಯ ಉತ್ಸವಮೂರ್ತಿಯನ್ನು ಮೂರು ಬಾರಿ ಪ್ರದಕ್ಷಿಣಿ ಹಾಕಿ ಬಳಿಕ ಅಲಂಕೃತ ಗೊಂಡ ರಥದಲ್ಲಿ ಪ್ರತಿಷ್ಟಾಪಿಸಿ ಬಲಿಪ್ರಧಾನ ಪೂಜೆ ನೆರವೇರಿಸಲಾಯಿತು. ನಂತರ ನೆರೆದಿದ್ದ ಭಕ್ತರು ಸ್ವಾಮಿಯ ರಥವನ್ನು ಜಯಘೋಷಗಳೊಂದಿಗೆ ಎಳೆದು ಸಂಭ್ರಮಿಸಿದರು. ರಥದ ಕಳಶಕ್ಕೆ ಬಾಳೆಹಣ್ಣು ಎಸೆದು ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ರಥಕ್ಕೆ ಎಸೆದಿದ್ದ ಮೆಣಸಿನ ಕಾಳನ್ನು ಭಕ್ತರು ಸಂಗ್ರಹಿಸಿದರು. ಜಾತ್ರಾಮಹೋತ್ಸವದ ಧಾರ್ಮಿಕ ಮಹೋತ್ಸವವನ್ನು ಸೀತಾರಾಮಶರ್ಮ ಮತ್ತು ನಾಗೇಶ್ ಶರ್ಮಾ ತಂಡದವರಿಂದ ನೆರವೇರಿಸಲಾಯಿತು. ಸಂಜೆ 4ಗಂಟೆಗೆ ನಡೆದ ರಥೋತ್ಸವದ ಅಂಗವಾಗಿ ಬಿಸಿಲಿನ ತಾಪವನ್ನು ಲೆಕ್ಕಿಸದೆ ಸಾವಿರಾರು ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದರೆ, ದೇವಾಲಯದ ರಥದ ಬೀದಿಗಳಲ್ಲಿ ಸಾಂಪ್ರಾದಾಯಿಕ ಪದ್ದತಿಯಂತೆ ಬರಿಗಾಲಲ್ಲೇ ಭಕ್ತಾದಿಗಳು ಹೆಜ್ಜೆ ಹಾಕಿದ್ದು ಗಮನಸೆಳೆಯಿತು. ಜಾತ್ರಾಮಹೋತ್ಸವದ ಅಂಗವಾಗಿ ವಾಹನಗಳ ಸಂಚಾರದ ದಟ್ಟಣೆ ಹೆಚ್ಚಾಗಿತ್ತು. ಸಿಂಗಟಗೆರೆ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದರು. ರಥದ ಸುತ್ತ ಅಲಂಕೃತ ಎತ್ತಿನಗಾಡಿಗಳ ಓಟ ನಡೆಸಿದರೆ, ಇನ್ನ ಕೆಲ ಭಕ್ತರು ತಣ್ಣೀರುಸ್ನಾನದೊಂದಿಗೆ ರಥದ ಬಳಿ ದಿಂಡು ಉರುಳು ಸೇವೆ ನೆರವೇರಿಸಿ ಹರಕೆಯನ್ನು ಸಮರ್ಪಿಸಿದರು. ಗ್ರಾಮದ ಸ್ನೇಹ ಜೀವಿ ಬಳಗದ ವತಿಯಿಂದ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಹಾಸನ ಕೆಎಂಎಫ್ ಹಾಗೂ ಸ್ಥಳೀಯ ಹಾಲು ಒಕ್ಕೂಟಗಳ ವತಿಯಿಂದ ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಬಿ.ಕೆ. ನಾಗರಾಜಪ್ಪ ಮಾತನಾಡಿ, ದೇವಾಲಯದ ಸಮಿತಿಯ ವತಿಯಿಂದ ವಿಶೇಷವಾದ ಕಲ್ಲಿನ ರಾಜಗೋಪುರ ನಿರ್ಮಾಣ ಕಾರ್ಯವು ಸುಮಾರು 10 ಕೋಟಿ ವೆಚ್ಚದಲ್ಲಿ ಕಾಮಗಾರಿಯು ಪ್ರಗತಿಯಲ್ಲಿದ್ದು. ಈಗಾಗಲೇ ಶೇ.30ರಷ್ಟು ಕಾಮಗಾರಿ ನಡೆಸಲಾಗಿದ್ದು, 2 ವರ್ಷದೊಳಗಾಗಿ ಗೋಪುರವನ್ನು ಲೋಕಾರ್ಪಣೆಗೊಳಿಸುವ ಗುರಿಹೊಂದಲಾಗಿದೆ. ಭಕ್ತರು ಹೆಚ್ಚಿನ ರೀತಿಯಲ್ಲಿ ಸಹಕರಿಸುವಂತೆ ಮನವಿ ಮಾಡಿದರು. ದೇವಾಲಯ ಸಮಿತಿಯ ಕಾರ್ಯದರ್ಶಿ ರಮೇಶ್, ಪದಾಧಿಕಾರಿಗಳಾದ ಕೆ.ಎನ್, ಮೂರ್ತಿ, ದೇವರಾಜ್ ಸಿಂಗಟಗೆರೆ ನಾಗರಾಜ್, ದಕ್ಷಿಣಮೂರ್ತಿ, ಬಿ.ಜೆ.ಕುಮಾರ್, ಕುಮಾರಪ್ಪ, ಎಸ್.ಕೆ. ರಘು, ಎಸ್.ಕೆ. ಲೋಕೇಶಪ್ಪ, ಮಾಜಿ ಶಾಸಕ ಬೆಳ್ಳಿಪ್ರಕಾಶ್, ಬಿದರೆ ಜಗದೀಶ್, ಗಿರೀಶ್ ಉಪ್ಪಾರ್ ಮತ್ತು ಏಳು ಹಳ್ಳಿ ಪಿರ್ಕಾ ಗ್ರಾಮಸ್ಥರು ಇದ್ದರು.
    3
    ಕಡೂರು : ತಾಲ್ಲೂಕಿನ ಸಿಂಗಟಗೆರೆ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಕಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ರುದ್ರಾಭಿಷೇಕ ನಿತ್ಯಹೋಮ, ರಥಾಧಿದೇವತಾ ಹೋಮ, ರಥಸಂಪ್ರೋಕ್ಷಣೆ ನಂತರ ಬಳಿಕ ಶ್ರೀ ಕಲ್ಲೇಶ್ವರ ಸ್ವಾಮಿ ಮತ್ತು ಪಾರ್ವತಿದೇವಿಯ ಉತ್ಸವ ಮೂರ್ತಿಯೊಂದಿಗೆ ಗ್ರಾಮದ ಮೂಲದೇವಾಲಯ ದಿಂದ ಪ್ರಮುಖ ರಾಜಬೀದಿಗಳಲ್ಲಿ ಅದ್ದೂರಿಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಆಂಜನೇಯಸ್ವಾಮಿ ಉತ್ಸವದಲ್ಲಿ ಸಾಗಿತು. ಜಾನಪದ ವೀರಗಾಸೆ ಕಲಾತಂಡಗಳ ಪ್ರದರ್ಶನ ನಡೆಸಲಾಯಿತು. ಬಳಿಕ ರಥದ ಮಂಟಪದ ಬಳಿ ಕರೆತಂದ ಸ್ವಾಮಿಯ ಉತ್ಸವಮೂರ್ತಿಯನ್ನು ಮೂರು ಬಾರಿ ಪ್ರದಕ್ಷಿಣಿ ಹಾಕಿ ಬಳಿಕ ಅಲಂಕೃತ ಗೊಂಡ ರಥದಲ್ಲಿ ಪ್ರತಿಷ್ಟಾಪಿಸಿ ಬಲಿಪ್ರಧಾನ ಪೂಜೆ ನೆರವೇರಿಸಲಾಯಿತು. ನಂತರ ನೆರೆದಿದ್ದ ಭಕ್ತರು ಸ್ವಾಮಿಯ ರಥವನ್ನು ಜಯಘೋಷಗಳೊಂದಿಗೆ ಎಳೆದು ಸಂಭ್ರಮಿಸಿದರು. 
ರಥದ ಕಳಶಕ್ಕೆ ಬಾಳೆಹಣ್ಣು ಎಸೆದು ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ರಥಕ್ಕೆ ಎಸೆದಿದ್ದ ಮೆಣಸಿನ ಕಾಳನ್ನು ಭಕ್ತರು ಸಂಗ್ರಹಿಸಿದರು. ಜಾತ್ರಾಮಹೋತ್ಸವದ ಧಾರ್ಮಿಕ ಮಹೋತ್ಸವವನ್ನು ಸೀತಾರಾಮಶರ್ಮ ಮತ್ತು ನಾಗೇಶ್ ಶರ್ಮಾ ತಂಡದವರಿಂದ ನೆರವೇರಿಸಲಾಯಿತು. ಸಂಜೆ 4ಗಂಟೆಗೆ ನಡೆದ ರಥೋತ್ಸವದ ಅಂಗವಾಗಿ ಬಿಸಿಲಿನ ತಾಪವನ್ನು ಲೆಕ್ಕಿಸದೆ ಸಾವಿರಾರು ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದರೆ, ದೇವಾಲಯದ ರಥದ ಬೀದಿಗಳಲ್ಲಿ ಸಾಂಪ್ರಾದಾಯಿಕ ಪದ್ದತಿಯಂತೆ ಬರಿಗಾಲಲ್ಲೇ ಭಕ್ತಾದಿಗಳು ಹೆಜ್ಜೆ ಹಾಕಿದ್ದು ಗಮನಸೆಳೆಯಿತು. 
ಜಾತ್ರಾಮಹೋತ್ಸವದ ಅಂಗವಾಗಿ ವಾಹನಗಳ ಸಂಚಾರದ ದಟ್ಟಣೆ ಹೆಚ್ಚಾಗಿತ್ತು. ಸಿಂಗಟಗೆರೆ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದರು. ರಥದ ಸುತ್ತ ಅಲಂಕೃತ ಎತ್ತಿನಗಾಡಿಗಳ ಓಟ ನಡೆಸಿದರೆ, ಇನ್ನ ಕೆಲ ಭಕ್ತರು ತಣ್ಣೀರುಸ್ನಾನದೊಂದಿಗೆ ರಥದ ಬಳಿ ದಿಂಡು ಉರುಳು ಸೇವೆ ನೆರವೇರಿಸಿ ಹರಕೆಯನ್ನು ಸಮರ್ಪಿಸಿದರು. ಗ್ರಾಮದ ಸ್ನೇಹ ಜೀವಿ ಬಳಗದ ವತಿಯಿಂದ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಹಾಸನ ಕೆಎಂಎಫ್ ಹಾಗೂ ಸ್ಥಳೀಯ ಹಾಲು ಒಕ್ಕೂಟಗಳ ವತಿಯಿಂದ ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಬಿ.ಕೆ. ನಾಗರಾಜಪ್ಪ ಮಾತನಾಡಿ, ದೇವಾಲಯದ ಸಮಿತಿಯ ವತಿಯಿಂದ ವಿಶೇಷವಾದ ಕಲ್ಲಿನ ರಾಜಗೋಪುರ ನಿರ್ಮಾಣ ಕಾರ್ಯವು ಸುಮಾರು 10 ಕೋಟಿ ವೆಚ್ಚದಲ್ಲಿ ಕಾಮಗಾರಿಯು ಪ್ರಗತಿಯಲ್ಲಿದ್ದು. ಈಗಾಗಲೇ ಶೇ.30ರಷ್ಟು ಕಾಮಗಾರಿ ನಡೆಸಲಾಗಿದ್ದು, 2 ವರ್ಷದೊಳಗಾಗಿ ಗೋಪುರವನ್ನು ಲೋಕಾರ್ಪಣೆಗೊಳಿಸುವ ಗುರಿಹೊಂದಲಾಗಿದೆ. ಭಕ್ತರು ಹೆಚ್ಚಿನ ರೀತಿಯಲ್ಲಿ ಸಹಕರಿಸುವಂತೆ ಮನವಿ ಮಾಡಿದರು. 
ದೇವಾಲಯ ಸಮಿತಿಯ ಕಾರ್ಯದರ್ಶಿ ರಮೇಶ್, ಪದಾಧಿಕಾರಿಗಳಾದ ಕೆ.ಎನ್, ಮೂರ್ತಿ, ದೇವರಾಜ್ ಸಿಂಗಟಗೆರೆ ನಾಗರಾಜ್, ದಕ್ಷಿಣಮೂರ್ತಿ, ಬಿ.ಜೆ.ಕುಮಾರ್, ಕುಮಾರಪ್ಪ, ಎಸ್.ಕೆ. ರಘು, ಎಸ್.ಕೆ. ಲೋಕೇಶಪ್ಪ, ಮಾಜಿ ಶಾಸಕ ಬೆಳ್ಳಿಪ್ರಕಾಶ್, ಬಿದರೆ ಜಗದೀಶ್, ಗಿರೀಶ್ ಉಪ್ಪಾರ್ ಮತ್ತು ಏಳು ಹಳ್ಳಿ ಪಿರ್ಕಾ ಗ್ರಾಮಸ್ಥರು ಇದ್ದರು.
    user_Kadur News
    Kadur News
    ಪತ್ರಕರ್ತ Kadur, Chikkamagaluru•
    2 hrs ago
  • ಕಡೂರು: ಎಚ್‌.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಸಮರ್ಥ ನಾಯಕತ್ವದಲ್ಲಿ ಜೆಡಿಎಸ್ ಪಕ್ಷ ಸಧೃಢ  ಪ್ರಾದೇಶಿಕ ಪಕ್ಷವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು. ಕಡೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ  ದೇವರಾಜ ಅರಸರು,ಯಡಿಯೂರಪ್ಪ,ಬಂಗಾರಪ್ಪ ಮುಂತಾದವರು ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದರೂ ರಾಜ್ಯದಲ್ಲಿ ಗಟ್ಟಿಯಾಗಿ ನಿಂತದ್ದು ಜನತಾದಳ ಪಕ್ಷ. ಎಚ್.ಡಿ‌.ದೇವೇಗೌಡರ ದಿಟ್ಟ ಹೋರಾಟದಿಂದ ರಾಜ್ಯದಲ್ಲಿ ಜನತಾದಳ ಪ್ರಾದೇಶಿಕ ಪಕ್ಷವಾಗಿ 25 ವರ್ಷಗಳು ತುಂಬಿವೆ.ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದಲ್ಲಿ ಜನರ ಜೊತೆಯೇ ಸದಾ ಇರುವ ಜನತಾದಳ ಪಕ್ಷದ ಸಂಘಟನೆಗಾಗಿ" ಜನರೊಂದಿಗೆ ಜನತಾದಳ" ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು, ಏಪ್ರಿಲ್ 19 ರಂದು ಕಡೂರು ಎಪಿಎಂಸಿ ಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಕಡೂರಿಗೆ ಆಗಮಿಸುತ್ತಿದ್ದಾರೆ‌. ಜನತಾದಳದ ಜೀವಾಳವಾಗಿರುವ ಕಾರ್ಯಕರ್ತರ ಸಮಾವೇಶ ಮತ್ತು ಪಕ್ಷದ ಸದಸ್ಯತ್ವ ಅಭಿಯಾನದ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ.ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಇದು ಮಹತ್ವದ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಎಚ್.ಡಿ.ಕುಮಾರಸ್ವಾಮಿಯವರೂ ಸಹ ಆಗಮಿಸಲಿದ್ದಾರೆ ಎಂದರು. ಈ ಕಾರ್ಯಕ್ರಮದ ಕುರಿತು ಕೆಲ ಗೊಂದಲಗಳು ಇದ್ದವಾದರೂ ಈಗ ಅವೆಲ್ಲವೂ ಬಗೆಹರಿದಿವೆ. ಜೆಡಿಎಸ್ ನಾಯಕರಾದ ವೈ.ಎಸ್.ವಿ.ದತ್ತ ಅವರೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ಮೊದಲೇ ಈ ಕಾರ್ಯಕ್ರಮ ಏರ್ಪಾಡಾಗುತ್ತಾದರೂ ದತ್ತ ಅವರ ಅಪೇಕ್ಷೆಯಂತೆ ಮುಂದೂಡಲಾಗಿತ್ತು. ಈಗ ದೇವೇಗೌಡರು, ಕುಮಾರಸ್ವಾಮಿಯವರ ಆದೇಶದಂತೆ ಈ ಕಾರ್ಯಕ್ರಮ ಏರ್ಪಾಡಾಗಿದೆ.10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಮಾವೇಶಗೊಳ್ಳಲಿದ್ದಾರೆ. ವೈ.ಎಸ್.ವಿ.ದತ್ತ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲ ಎಂದರು. ಜಿಲ್ಲಾ ಘಟಕದ ಅಧ್ಯಕ್ಷರ ಸ್ಥಾನ ಕಾಲಿಯಿದೆ. ಈ ಕಾರಣದಿಂದ ತಾಲ್ಕೂಕು ಘಟಕಗಳ ಪದಾಧಿಕಾರಿಗಳ ನೇಮಕಾತಿ ವಿಳಂಬವಾಗಿದೆ‌.ಎಷ್ಟೋ ಜನ ಕಾರ್ಯಕರ್ತರಾಗಿದ್ದವರೂ ಇನ್ನೂ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದಿಲ್ಲ. ಹಾಗಾಗಿ ಪಕ್ಷದ ಸದಸ್ಯತ್ವದ ನೊಂದಣಿಯೂ ನಡೆಯಲಿದೆ. ಶೀಘ್ರದಲ್ಲೆ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು. ಮುಂದಿನ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಅಥವಾ ಬಿಜೆಪಿ ಯವರಿರುತ್ತಾರೆಯೇ ಎಂಬ ಪ್ರಶ್ನೆ ಈಗ ಅಪ್ರಸ್ತುತ. ಅದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಎರಡೂ ಪಕ್ಷಗಳ ಒಮ್ಮತದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ. ಪಕ್ಷ ಸಂಘಟನೆಯ ವಿಚಾರದಲ್ಲಿಯೂ ಗೊಂದಲವಿಲ್ಲ. ಜೆಡಿಎಸ್ ಪಕ್ಷದ ಸಂಘಟನೆ ನಿರಂತರವಾಗಿ ನಡೆಯುತ್ತಿದೆ. ಎನ್.ಡಿ.ಎ ಭಾಗವಾಗಿ ಜೆಡಿಎಸ್ ಪಕ್ಷ ರಾಜ್ಯದ ಅಭಿವೃದ್ಧಿಗಾಗಿ ಸದಾ ಯೋಚಿಸುವ ಪ್ರಬಲ ಪ್ರಾದೇಶಿಕ ಪಕ್ಷವಾಗಿದೆ.ಕಡೂರಿನಲ್ಲಿ ಬಿಜೆಪಿ- ಜೆಡಿಎಸ್ ಎರಡೂ ಪಕ್ಷಗಳು ಒಟ್ಟಾಗಿಯೇ ಕಾಂಗ್ರೆಸ್‌ ವಿರುದ್ಧ ಹೋರಾಡುತ್ತದೆ ಎಂದರು. ಜೆಡಿಎಸ್ ಯುವ ಮುಖಂಡ ಚೇತನ್ ಕೆಂಪರಾಜು, ರಘು ಎರೇಹಳ್ಳಿ, ಹಳೇಹಟ್ಟಿ ಆನಂದನಾಯ್ಕ ಮತ್ತಿತರರು ಇದ್ದರು.
    3
    ಕಡೂರು: ಎಚ್‌.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಸಮರ್ಥ ನಾಯಕತ್ವದಲ್ಲಿ ಜೆಡಿಎಸ್ ಪಕ್ಷ ಸಧೃಢ  ಪ್ರಾದೇಶಿಕ ಪಕ್ಷವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.
ಕಡೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ  ದೇವರಾಜ ಅರಸರು,ಯಡಿಯೂರಪ್ಪ,ಬಂಗಾರಪ್ಪ ಮುಂತಾದವರು ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದರೂ ರಾಜ್ಯದಲ್ಲಿ ಗಟ್ಟಿಯಾಗಿ ನಿಂತದ್ದು ಜನತಾದಳ ಪಕ್ಷ. ಎಚ್.ಡಿ‌.ದೇವೇಗೌಡರ ದಿಟ್ಟ ಹೋರಾಟದಿಂದ ರಾಜ್ಯದಲ್ಲಿ ಜನತಾದಳ ಪ್ರಾದೇಶಿಕ ಪಕ್ಷವಾಗಿ 25 ವರ್ಷಗಳು ತುಂಬಿವೆ.ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದಲ್ಲಿ ಜನರ ಜೊತೆಯೇ ಸದಾ ಇರುವ ಜನತಾದಳ ಪಕ್ಷದ ಸಂಘಟನೆಗಾಗಿ" ಜನರೊಂದಿಗೆ ಜನತಾದಳ" ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು, ಏಪ್ರಿಲ್ 19 ರಂದು ಕಡೂರು ಎಪಿಎಂಸಿ ಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ
ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಕಡೂರಿಗೆ ಆಗಮಿಸುತ್ತಿದ್ದಾರೆ‌. ಜನತಾದಳದ ಜೀವಾಳವಾಗಿರುವ ಕಾರ್ಯಕರ್ತರ ಸಮಾವೇಶ ಮತ್ತು ಪಕ್ಷದ ಸದಸ್ಯತ್ವ ಅಭಿಯಾನದ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ.ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಇದು ಮಹತ್ವದ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಎಚ್.ಡಿ.ಕುಮಾರಸ್ವಾಮಿಯವರೂ ಸಹ ಆಗಮಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದ ಕುರಿತು ಕೆಲ ಗೊಂದಲಗಳು ಇದ್ದವಾದರೂ ಈಗ ಅವೆಲ್ಲವೂ ಬಗೆಹರಿದಿವೆ. ಜೆಡಿಎಸ್ ನಾಯಕರಾದ ವೈ.ಎಸ್.ವಿ.ದತ್ತ ಅವರೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ಮೊದಲೇ ಈ ಕಾರ್ಯಕ್ರಮ ಏರ್ಪಾಡಾಗುತ್ತಾದರೂ ದತ್ತ ಅವರ ಅಪೇಕ್ಷೆಯಂತೆ ಮುಂದೂಡಲಾಗಿತ್ತು. ಈಗ ದೇವೇಗೌಡರು, ಕುಮಾರಸ್ವಾಮಿಯವರ ಆದೇಶದಂತೆ ಈ ಕಾರ್ಯಕ್ರಮ ಏರ್ಪಾಡಾಗಿದೆ.10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಮಾವೇಶಗೊಳ್ಳಲಿದ್ದಾರೆ. ವೈ.ಎಸ್.ವಿ.ದತ್ತ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷರ ಸ್ಥಾನ ಕಾಲಿಯಿದೆ. ಈ ಕಾರಣದಿಂದ ತಾಲ್ಕೂಕು ಘಟಕಗಳ ಪದಾಧಿಕಾರಿಗಳ ನೇಮಕಾತಿ ವಿಳಂಬವಾಗಿದೆ‌.ಎಷ್ಟೋ ಜನ ಕಾರ್ಯಕರ್ತರಾಗಿದ್ದವರೂ ಇನ್ನೂ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದಿಲ್ಲ. ಹಾಗಾಗಿ ಪಕ್ಷದ ಸದಸ್ಯತ್ವದ ನೊಂದಣಿಯೂ ನಡೆಯಲಿದೆ. ಶೀಘ್ರದಲ್ಲೆ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಅಥವಾ ಬಿಜೆಪಿ ಯವರಿರುತ್ತಾರೆಯೇ ಎಂಬ ಪ್ರಶ್ನೆ ಈಗ ಅಪ್ರಸ್ತುತ. ಅದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಎರಡೂ ಪಕ್ಷಗಳ ಒಮ್ಮತದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ. ಪಕ್ಷ ಸಂಘಟನೆಯ ವಿಚಾರದಲ್ಲಿಯೂ ಗೊಂದಲವಿಲ್ಲ. ಜೆಡಿಎಸ್ ಪಕ್ಷದ ಸಂಘಟನೆ ನಿರಂತರವಾಗಿ ನಡೆಯುತ್ತಿದೆ. ಎನ್.ಡಿ.ಎ ಭಾಗವಾಗಿ ಜೆಡಿಎಸ್ ಪಕ್ಷ ರಾಜ್ಯದ ಅಭಿವೃದ್ಧಿಗಾಗಿ ಸದಾ ಯೋಚಿಸುವ ಪ್ರಬಲ ಪ್ರಾದೇಶಿಕ ಪಕ್ಷವಾಗಿದೆ.ಕಡೂರಿನಲ್ಲಿ ಬಿಜೆಪಿ- ಜೆಡಿಎಸ್ ಎರಡೂ ಪಕ್ಷಗಳು ಒಟ್ಟಾಗಿಯೇ ಕಾಂಗ್ರೆಸ್‌ ವಿರುದ್ಧ ಹೋರಾಡುತ್ತದೆ ಎಂದರು.
ಜೆಡಿಎಸ್ ಯುವ ಮುಖಂಡ ಚೇತನ್ ಕೆಂಪರಾಜು, ರಘು ಎರೇಹಳ್ಳಿ, ಹಳೇಹಟ್ಟಿ ಆನಂದನಾಯ್ಕ ಮತ್ತಿತರರು ಇದ್ದರು.
    user_Balaji M.V.
    Balaji M.V.
    Local News Reporter ಕಡೂರು, ಚಿಕ್ಕಮಗಳೂರು, ಕರ್ನಾಟಕ•
    15 hrs ago
  • ಚಿತ್ರದುರ್ಗದ ಸ್ಟೇಡಿಯಂ ಬಳಿ ಬುದ್ದ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ಎದುರಿನ ಬುದ್ಧ ಮೂರ್ತಿ ಬಳಿ ಭಗವಾನ್ ಬುದ್ದ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದು ಕ್ರಿಸ್ತಪೂರ್ವದಲ್ಲೇ ಭಗವಾನ್ ಬುದ್ಧರು ಸಾರಿದ ಶಾಂತಿ ಮತ್ತು ಸಮಾನತೆಯ ತತ್ವಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಯುದ್ಧ ಮತ್ತು ಸಂಘರ್ಷಗಳ ನಡುವೆ ಬದುಕುತ್ತಿರುವ ನಮಗೆ ಬುದ್ಧನ ಸಂದೇಶಗಳು ದಾರಿದೀಪವಾಗಿವೆ ಎಂದು ಹೇಳಿದರು.
    1
    ಚಿತ್ರದುರ್ಗದ ಸ್ಟೇಡಿಯಂ ಬಳಿ ಬುದ್ದ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ಎದುರಿನ ಬುದ್ಧ ಮೂರ್ತಿ ಬಳಿ ಭಗವಾನ್ ಬುದ್ದ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದು ಕ್ರಿಸ್ತಪೂರ್ವದಲ್ಲೇ ಭಗವಾನ್ ಬುದ್ಧರು ಸಾರಿದ ಶಾಂತಿ ಮತ್ತು ಸಮಾನತೆಯ ತತ್ವಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಯುದ್ಧ ಮತ್ತು ಸಂಘರ್ಷಗಳ ನಡುವೆ ಬದುಕುತ್ತಿರುವ ನಮಗೆ ಬುದ್ಧನ ಸಂದೇಶಗಳು ದಾರಿದೀಪವಾಗಿವೆ ಎಂದು ಹೇಳಿದರು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    4 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    5 hrs ago
  • Post by Karibasava Balal
    1
    Post by Karibasava Balal
    user_Karibasava Balal
    Karibasava Balal
    City Star ದಾವಣಗೆರೆ, ದಾವಣಗೆರೆ, ಕರ್ನಾಟಕ•
    16 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.